ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತಮಗೆ ಡಿಸಿಎಂ ಹುದ್ದೆ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಮಾಜಿ ಸಚಿವ ಕೃಷ್ಣ ಬೈರೇಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆ ಸಾಂವಿಧಾನಿಕ ಹುದ್ದೆ ಅಲ್ಲ. ಆದರೆ ಕೆಲವೊಮ್ಮೆ ನಾಯಕರ ಶ್ರಮವನ್ನು ಪರಿಗಣಿಸಿ ಡಿಸಿಎಂ ಹುದ್ದೆ ನೀಡಬೇಕಾಗುತ್ತದೆ. ಏನೇ ಆದ್ರೂ ಸಿಎಂ ಅಂದರೆ ಕ್ಯಾಪ್ಟನ್ ಇದ್ದ ಹಾಗೆ. ಆದರೂ ಕೆಲವೊಮ್ಮೆ ಅನಿವಾರ್ಯವಾಗಿ ಡಿಸಿಎಂ ಹುದ್ದೆಗಳನ್ನು ನೀಡಬೆಕಾಗುತ್ತದೆ. ಪಕ್ಷದ ಹಿರಿಯ ನಾಯಕರ ಮಟ್ಟದಲ್ಲಿ ಏನು ಚರ್ಚೆ ನಡೆಯುತ್ತಿದೆ ಎಂಬುದರ ಬಗ್ಗೆ ಗೊತ್ತಿಲ್ಲ ಎಂದು ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ
Author: Prajatv Kannada
ಕೋಲಾರ: 2023ರ ವಿಧಾನಸಭೆ ಚುನಾವಣೆಗೆ ಉತ್ಸಾಹದಿಂದ ಸ್ಪರ್ಧಿಸಿ ಕ್ಷೇತ್ರದಲ್ಲಿ ಮತದಾನದವರೆಗೂ ಚುರುಕಿನಿಂದ ಓಡಾಡಿ ಗೆಲುವಿನ ಹಾದಿಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ, ಕೊನೆ ಕ್ಷಣದಲ್ಲಿ ಯಾರೂ ಕಣ್ಣಿಗೂ ಕಾಣಿಸಿಕೊಳ್ಳದೇ ನಾಪತ್ತೆಯಾಗಿದ್ದರಿಂದ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಂಗಳವಾರ ಸಂಜೆಯಿಂದಲೇ ಅಭ್ಯರ್ಥಿ ಕಾಣೆ: ಬಿಜೆಪಿ ಪಕ್ಷದಲ್ಲಿ ಮೂವರು ಟಿಕೆಟ್ ಆಕಾಂಕ್ಷಿಗಳಿದ್ದರೂ ಕೊನೆ ಕ್ಷಣದಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿಗೆ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿ ಕಣಕ್ಕಿಳಿಸಿದ್ದು, ಪ್ರಬಲ ಆಕಾಂಕ್ಷಿಗಳಾಗಿದ್ದ ಬಿ.ವಿ.ಮಹೇಶ್ ಹಾಗೂ ವಿ.ಶೇಷು ಶಕ್ತಿಮೀರಿ ಬಿಜೆಪಿ ಪರವಾಗಿ ಮತಪ್ರಚಾರ ಮಾಡಿ ದ್ದರು. ಬುಧವಾರ ಮತದಾನ ಪ್ರಕ್ರಿಯೆಗೂ ಮುನ್ನ ಮಂಗಳವಾರ ಸಂಜೆಯಿಂದಲೇ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಚುನಾವ ಣೆಯಿಂದ ದೂರ ವಾಗಿದ್ದು, ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಎಂ.ನಾರಾಯಣಸ್ವಾಮಿ ಅವರಿಗೆ ಎಲ್ಲಾ ಆಕಾಂಕ್ಷಿಗಳು ಸೇರಿ ಬಿಜೆಪಿ ಟಿಕೆಟ್ ಘೋಷಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಂಡು ಚುನಾವಣಾ ಕಾರ್ಯಗಳನ್ನು ಸುಗಮವಾಗಿ ಪ್ರಚಾರ ನಡೆಸುತ್ತಿದ್ದರು. ಇವರ ಬೆಂಬಲಿಗರಿಗೆ ಒಲವು ಇಲ್ಲದಿದ್ದರೂ, ಕೊನೆ ಚುನಾವಣೆ ಎಂದು ಮತದಾರರು ಹಾಗೂ ಬೆಂಬಲಿಗರಿಂದ ಅನುಕಂಪ ಗಿಟ್ಟಿಸಿಕೊಳ್ಳಲು ಹಲವಾರು ತಂತ್ರ…
ಶಿವಮೊಗ್ಗ : ಶಿವಮೊಗ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಡಿಪ್ಲೊಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್ 4 ವರ್ಷದ ಕೋರ್ಸ್ ಸೇರಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಎಸ್.ಎಸ್.ಎಲ್.ಸಿ ಪಾಸಾಗಿರುವ ಆಸಕ್ತರು ತಮ್ಮ ವಯಸ್ಸು, ವಿದ್ಯಾರ್ಹತೆ ದಾಖಲಾತಿ ಹಾಗೂ ವೈಯುಕ್ತಿಕ ವಿವರಗಳೊಂದಿಗೆ ಮೇ-31 ರೊಳಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ಸಿಎ-38, ನಿಧಿಗೆ, ಕೆ.ಐ.ಡಿ.ಬಿ. ಕೈಗಾರಿಕಾ ಪ್ರದೇಶ, ಶಿವಮೊಗ್ಗ ಇಲ್ಲಿಗೆ ಸಲ್ಲಿಸುವಂತೆ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೇಂದ್ರದ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 9902232839/ 9448307027/ 9880141054/ 9449286543/ 8904492741/ 9945561526 ಗಳನ್ನು ಸಂಪರ್ಕಿಸುವುದು.
ಕನಕಪುರ: ಕರ್ನಾಟಕದಲ್ಲಿ ತಿಪ್ಪರಲಾಗ ಹಾಕಿದ್ರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂಬುದಾಗಿ ಕನಕಪುರ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಹೇಳಿದ್ದಾರೆ. ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಹೆಚ್ಚು ಕಡಿಮೆಯಾದರೇ ನಮ್ಮ ಕೇಂದ್ರ ನಾಯಕರು ಇದ್ದಾರೆ ಎಂದರು. ಸರ್ಕಾರ ರನಚೆಗೆ ಏನು ಕಸರತ್ತು ಮಾಡಬೇಕೋ ಮಾಡುತ್ತೇವೆ. ಅತಿ ದೊಡ್ಡ ಪಕ್ಷಾಗಿ ಬಂದರೆ ಸರ್ಕಾರ ರಚನೆ ಮಾಡುತ್ತೇವೆ ಎಂದರು. ಈ ಬಾರಿ ಆಪರೇಷನ್ ಕಮಲ ನಡೆಯುತ್ತಾ ಎಂಬುದಾಗಿ ಕೇಳಿದಂತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ನಾವು ಚುನಾವಣಾ ತಂತ್ರಗಾರಿಕೆ ಮಾಡಿಯೇ ಮಾಡುತ್ತೇವೆ. ಕೇಂದ್ರ ನಾಯಕರ ಸೂಚನೆಯನ್ನು ಪಾಲನೆ ಮಾಡುತ್ತೇವೆ. ನಾವು ಮಾಡಿದರೆ ಮಾತ್ರವೇ ಆಪರೇಷನ್ ಕಮಲವೆ? ಕಾಂಗ್ರೆಸ್, ಜೆಡಿಎಸ್ ಮಾಡಿದರೆ ಏನು ಎಂದು ಎಂಬುದಾಗಿ ಪ್ರಶ್ನಿಸಿದರು. ನಾನು, ವಿ.ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೇವೆ. ಕನಕಪುರ ಕ್ಷೇತ್ರದಲ್ಲಿ ಪ್ರಚಾರ ಜೋರಾಗಿಯೆ ಆಗಿದೆ. ಕ್ಷೇತ್ರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಪಿಮುಷ್ಠಿಯಲ್ಲಿದೆ. ಮೊದಲಿನಿಂದಲೂ ಕನಕಪುರ ಕ್ಷೇತ್ರದಲ್ಲಿ ಗೂಂಡಾಗಿರಿ ನಡೆಯುತ್ತಿದೆ. ಸಮೀಕ್ಷೆಯೇ ಸುಳ್ಳು ಅಂತ ನಾನು ಹೇಳಲ್ಲ ಎಂದರು. ಸರ್ಕಾರ ರಚನೆಗೆ ಏನು ಕಸರತ್ತು ಮಾಡಬೇಕೋ ಮಾಡುತ್ತೇವೆ. ಮೇ.13ರ ಫಲಿತಾಂಶದ ನಂತ್ರ…
ಮಹಾರಾಷ್ಟ್ರದ (Maharashtra) 16 ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) ತೀರ್ಪು ಇಂದು ಪ್ರಕಟಿಸುವ ಸಾಧ್ಯತೆ ಇದೆ. ಏಕನಾಥ್ ಶಿಂಧೆ (Eknath Shinde) ನೇತೃತ್ವದ ಶಿವಸೇನೆಯ 16 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂಕೋರ್ಟ್‌ನ ತೀರ್ಪಿನ ಮುನ್ನ ಮಾತನಾಡಿರುವ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್, ಯಾವುದೇ ನಿರ್ಧಾರ ಹೊರಬಿದ್ದರೂ ಪ್ರಸ್ತುತ ರಾಜ್ಯ ಸರ್ಕಾರಕ್ಕೆ ಬಹುಮತವಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಮತ್ತು ಸಿಎಂ ಏಕನಾಥ್ ಶಿಂಧೆ ಬಣಗಳ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ವರ್ಷದ ಮಾರ್ಚ್‌ನಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು, ಇದರಲ್ಲಿ ಠಾಕ್ರೆಯವರ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದ 16 ಶಿವಸೇನೆಯ (ಶಿಂಧೆ ಪಕ್ಷದ) ಶಾಸಕರನ್ನು ಅನರ್ಹಗೊಳಿಸುವಂತೆ ಕೋರಲಾಗಿದೆ. ಲಂಡನ್‌ಗೆ ಭೇಟಿ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ನರ್ವೇಕರ್, ನಾನು ಸ್ಪೀಕರ್ ಆದ ನಂತರ ಈ ಸರ್ಕಾರವು ವಿಶ್ವಾಸಮತ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಯಾವುದೇ ನಿರ್ಧಾರ ಹೊರಬರಲಿ, ಸಂಖ್ಯಾಬಲದ ಮೇಲೆ ಈ ಸರ್ಕಾರಕ್ಕೆ ಬಹುಮತವಿದೆ ಎಂದು ನಾರ್ವೇಕರ್ ಹೇಳಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ, ಶಿಂಧೆ ಮತ್ತು 39 ಶಾಸಕರು ಶಿವಸೇನಾ ನಾಯಕತ್ವದ ವಿರುದ್ಧ ಬಂಡಾಯವೆದ್ದರು, ಇದರ ಪರಿಣಾಮವಾಗಿ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ (ಎನ್‌ಸಿಪಿ ಮತ್ತು ಕಾಂಗ್ರೆಸ್ ಅನ್ನು ಸಹ ಒಳಗೊಂಡಿದೆ) ಪಕ್ಷದ ವಿಭಜನೆ ಮತ್ತು ಪತನಕ್ಕೆ ಕಾರಣವಾಯಿತು. ನಂತರ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿಂಧೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರು.
ಉತ್ತರ ಪ್ರದೇಶ(Uttar Pradesh)ದ ಅಮೇಥಿಯಲ್ಲಿ ಸಮಾಜವಾದಿ(Samajwadi) ಪಕ್ಷದ ಶಾಸಕ ರಾಕೇಶ್ ಪ್ರತಾಪ್ ಸಿಂಗ್ ಗೂಂಡಾಗಿರಿ ನಡೆಸುತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ. ಸಮಾಜವಾದಿ ಪಕ್ಷದ ಕಾರ್ಯಕರ್ತರು ಮೊದಲು ಪೊಲೀಸ್ ಠಾಣೆಯ ಮುಂದೆ ಸಾಗುತ್ತಿದ್ದ ಬಿಜೆಪಿಯ ಪುರಸಭೆ ಅಭ್ಯರ್ಥಿ ರಶ್ಮಿ ಸಿಂಗ್ ಅವರ ಪತಿ ದೀಪಕ್ ಸಿಂಗ್ ಅವರ ವಾಹನವನ್ನು ಸುತ್ತುವರೆದರು. ಇದಾದ ಬಳಿಕ ಎಸ್‌ಪಿ ಶಾಸಕರು ಬಿಜೆಪಿ ಅಭ್ಯರ್ಥಿಯ ಪತಿಯನ್ನು ತೀವ್ರವಾಗಿ ಥಳಿಸಿದ್ದಾರೆ. ಅಮೇಥಿಯಲ್ಲಿ ಎಸ್‌ಪಿ ಶಾಸಕ ರಾಕೇಶ್ ಪ್ರತಾಪ್ ಸಿಂಗ್ ಅವರ ಬಹಿರಂಗ ಗೂಂಡಾಗಿರಿಯ ವಿಡಿಯೋ ಇದೀಗ ಮುನ್ನೆಲೆಗೆ ಬಂದಿದೆ. ದೀಪಕ್ ಸಿಂಗ್ ಅವರನ್ನು ರಕ್ಷಿಸಲು ಪೊಲೀಸರು ಅವರನ್ನು ಠಾಣೆಯೊಳಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಎಸ್‌ಪಿ ಶಾಸಕರು ಅಲ್ಲಿಯೂ ಶಾಂತವಾಗಿರದೆ ದೀಪಕ್ ಸಿಂಗ್ ಜತೆ ಜಗಳವಾಡಿದ್ದಾರೆ, ಈಗಾಗಲೇ ಪೊಲೀಸ್ ಠಾಣೆಯೊಳಗೆ ಹಾಜರಿದ್ದ ಎಸ್‌ಪಿ ಶಾಸಕ ರಾಕೇಶ್ ಪ್ರತಾಪ್ ಸಿಂಗ್, ದೀಪಕ್ ಸಿಂಗ್‌ಗೆ ತೀವ್ರವಾಗಿ ಥಳಿಸಿದ್ದಾರೆ. ಇದೀಗ ಸಮಸ್ಯೆ ಬಗೆಹರಿದಿದ್ದು, ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೊದಲು ದೀಪಕ್ ಸಿಂಗ್ ಬೆಂಬಲಿಗರು ನಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ರಾಕೇಶ್ ಸಿಂಗ್ ಕೂಡ ದೂರಿದ್ದಾರೆ.
ಇಲ್ಲೊಬ್ಬ ವ್ಯಕ್ತಿ ಬ್ರೇಕಪ್ ಆದ ನಂತರ ಮಾಜಿ ಗರ್ಲ್ ಫ್ರೆಂಡ್ ಬಳಿಯಿಂದ ಖರ್ಚಾದ ಹಣವನ್ನು (Money) ವಾಪಾಸ್ ಕೇಳಿದ್ದಾನೆ. ಆಸ್ಟ್ರೇಲಿಯದ ಅಡಿಲೇಡ್‌ನಲ್ಲಿ ವಾಸಿಸುವ ಆಯ್ಲೆ ತನ್ನ ಸಂಗಾತಿ ಅಲೆಕ್ಸ್‌ನೊಂದಿಗೆ ಸಂಬಂಧ ಹೊಂದಿದ್ದಳು. ಇತ್ತೀಚಿಗಷ್ಟೇ ಆತನಿಂದ ದೂರವಾಗಿದ್ದಳು. ಸ್ಪಲ್ಪ ದಿನಗಳ ನಂತರ ಆಕೆಗೆ ಮಾಜಿ ಬಾಯ್‌ಫ್ರೆಂಡ್ ಆಕೆಗೆ ಖರ್ಚು ಮಾಡಿದ ಹಣದ ಲಿಸ್ಟ್‌ನ್ನು ಕಳುಹಿಸಿಕೊಟ್ಟಿದ್ದಾನೆ. ಮಾತ್ರವಲ್ಲ ಅದರಲ್ಲಿ ಅರ್ಧ ಹಣವನ್ನು ಪಾವತಿಸುವಂತೆ ಹೇಳಿದ್ದಾನೆ. ಇದನ್ನು ಉಲ್ಲೇಖಿಸಿ ಆಯ್ಲೆ ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾಳೆ. ಮಾತ್ರವಲ್ಲ ತಮ್ಮ ಸಂಬಂಧದ ಸಮಯದಲ್ಲಿ ತನಗಾಗಿ ಖರ್ಚು ಮಾಡಿದ ಎಲ್ಲಾ ಖರ್ಚುಗಳನ್ನು ಒಳಗೊಂಡಿರುವ ದೀರ್ಘ ಪಟ್ಟಿಯ ಫೋಟೋವನ್ನು ಅಪ್ಲೋಡ್ ಮಾಡಿದ್ದಾಳೆ. ಈ ಪಟ್ಟಿಯಲ್ಲಿ ಇಂಧನ, ಆಹಾರ, ನೀರು ಮತ್ತು ಸಿನಿಮಾ ಟಿಕೆಟ್‌ಗಳ ವೆಚ್ಚವೂ ಸೇರಿದೆ. ಈಗ, ಅಲೆಕ್ಸ್ ತನ್ನ ಮಾಜಿ ಗೆಳತಿ ಒಟ್ಟಿಗೆ ಇಲ್ಲದ ಕಾರಣ ಅರ್ಧದಷ್ಟು ಖರ್ಚನ್ನು ಆಕೆ ಪಾವತಿಸಲು ಬಯಸುತ್ತಾನೆ.
ಸುಬ್ರಹ್ಮಣ್ಯ: ಬಿಜೆಪಿ ಬಹುಮತ ಬರುವ ವಿಶ್ವಾಸ ಇದೆ. ಸಮೀಕ್ಷೆ ಮೇಲೆ ನಂಬಿಕೆ ಇಲ್ಲ. ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 26, ಬಿಜೆಪಿಗೆ 1 ಸ್ಥಾನ ಎಂದು ಸಮೀಕ್ಷೆ ಹೇಳಿತ್ತು. ಆದರೆ ಫಲಿತಾಂಶ ಬಂದ ಬಳಿಕ ಬಿಜೆಪಿ 25, ಕಾಂಗ್ರೆಸ್ 1 ಸ್ಥಾನ ಪಡೆದಿತ್ತು. ಈ ಸಮೀಕ್ಷೆಗಳ ಬಗ್ಗೆ ನಂಬಿಕೆ ಇಲ್ಲ. ಜನತ ಭಾವನೆ ಬಗ್ಗೆ ನಂಬಿಕೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಮಾಧ್ಯಮದವರ ಜೊತೆ ಮಾತನಾಡಿ, ಬಿಜೆಪಿ ಬಹುಮತ ಪಡೆದು ಸರಕಾರ ನಡೆಸಲಿದೆ ಎಂದರು. ಬಿಜೆಪಿ ಸರಕಾರ ಬಂದ ಮೇಲೆ ನಿಮಗೆ ಯಾವ ಸ್ಥಾನ ಸಿಗಬಹುದು ಎಂಬ ಪ್ರಶ್ನೆಗೆ ಇದರ ಬಗ್ಗೆ ಬಿಜೆಪಿ ಕೇಂದ್ರ ನಾಯಕರ ನಿರ್ಧಾರ ಎಂದ ಅವರು ಕ್ಷೇತ್ರದಲ್ಲಿ ಆಶ್ಲೇಷ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರ ಮಗ ಕಾಂತೇಶ್ ಮತ್ತು ಸೊಸೆ ಆದಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉರುಳು ಸೇವೆ ನೆರವೇರಿಸಿದರು.
ಕಲಬುರಗಿ: ಕಲಬುರ್ಗಿಯಲ್ಲಿ ಹಳೆ ವೈಷಮ್ಯದ ಹಿನ್ನಲೆಯಲ್ಲಿ ಹಾಡಹಗಲೇ ಸಾರಿಗೆ ಬಸ್ ಚಾಲಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವಂತ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ಕಲಬುರ್ಗಿಯ ಸಿಟಿ ಬಸ್ ನಿಲ್ದಾಣದಲ್ಲಿ ಡಿವೋ ನಂ.3ರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಂತ ನಾಗಯ್ಯಸ್ವಾಮಿ(45) ಎಂಬುವರನ್ನು ಬಸ್ಸಿನಲ್ಲಿಯೇ ಮೂವರು ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳ ದಾಳಿಯಲ್ಲಿ ಚಾಲಕ ನಾಗಯ್ಯಸ್ವಾಮಿ(45) ಸ್ಥಳದಲ್ಲಿಯೇ ತೀವ್ರ ರಕ್ತಸ್ತ್ರಾವದಿಂದ ಸಾವನ್ನಪ್ಪಿದ್ದಾರೆ. ನೂರಾರು ಜನರ ಮುಂದೆಯೇ ಮಾರಕಾಸ್ತ್ರಗಳಿಂದ ಚಾಲಕನನ್ನು ಕೊಚ್ಚಿ ಕೊಲೆ ಮಾಡಿದ್ದನ್ನು ಕಂಡು ಬೆಚ್ಚಿ ಬೀಳುವಂತೆ ಆಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಬ್ರಹ್ಮಪುರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಂದಹಾಗೇ ಚಾಲಕ ನಾಗಯ್ಯಸ್ವಾಮಿಯನ್ನು ಹಳೆ ವೈಷಮ್ಯದಿಂದ ಕೊಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಉಡುಪಿ: ಕಾರ್ಕಳದ ಮತಗಟ್ಟೆಯೊಂದರಲ್ಲಿ ನಕಲಿ ಮತದಾನದ ಪ್ರಕರಣ ನಡೆದಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಸದ್ಯ ನಕಲಿ ಮತದಾನ ಮಾಡಿರುವ ಬಾಲಕನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದಾರೆ. ಕಳಿಸುವ ಮುನ್ನ ಬಾಲಕನ ಕೈಯಲ್ಲಿ ಬಾಂಡ್ ಬರೆಸಲಾಗಿದ್ದು ಅಪ್ರಾಪ್ತ ಬಾಲಕನ ಪೋಷಕರಿಗೂ ಪೊಲೀಸರಿಂದ ನೋಟೀಸ್ ಹೋಗಿದೆ. ನಿನ್ನೆ ಸಂಜೆ ಸುಹಾಸ್ ಶೆಟ್ಟಿ ಹೆಸರಲ್ಲಿ ಅಪ್ರಾಪ್ತ ಬಾಲಕ ನಕಲಿ ಮತದಾನ ಮಾಡಿದ್ದ. ಇದನ್ನು ಕಂಡ ಕಾಂಗ್ರೆಸ್ ಕಾರ್ಯಕರ್ತರು ಬಾಲಕನನ್ನ ಹಿಡಿದು ಮತಗಟ್ಟೆ ಅಧಿಕಾರಿಗಳಿಗೆ ಒಪ್ಪಿಸಿದ್ದರು. ಅದಲ್ಲದೇ ಚುನಾವಣಾಧಿಕಾರಿಗಳ ಮೌನಕ್ಕೆ ಕಾಂಗ್ರೆಸ್ ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಪ್ರಕರಣ ಮುಚ್ಚಿ ಹಾಕುವ ಅನುಮಾನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಕೂಡ ಮಾಡಿದ್ದರು. ಪೊಲೀಸರಿಗೆ ದೂರು ಕೊಟ್ಟು ತನಿಖೆಗೆ ಆಗ್ರಹಿಸಿದ ನಂತರ ಅವರು ಪ್ರತಿಭಟನೆಯನ್ನು ಹಿಂಪಡೆದಿದ್ದರು.