Author: Prajatv Kannada

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಪೊಲೀಸರು ಸಲ್ಲು ಬಾಯ್ ಗೆ ಭಾರಿ ಭಿಗಿ ಭದ್ರತೆ ಒದಗಿಸಿದ್ದು ಅವರ ಮನೆ ಮುಂದೆ ಯಾರು ನಿಲ್ಲದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಇದೀಗಿ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ವಿದ್ಯಾರ್ಥಿಯೊಬ್ಬನಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಸಲ್ಮಾನ್ ಖಾನ್ ಗೆ ಬೆದರಿಕೆಯ ಇ-ಮೇಲ್  ರವಾನಿಸಿದ್ದ ಹಿನ್ನೆಲೆಯಲ್ಲಿ ಬ್ರಿಟನ್ ನಲ್ಲಿರುವ ಭಾರತದ ವಿದ್ಯಾರ್ಥಿಗೆ ಮುಂಬೈ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಬ್ರಿಟನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಈ ಸ್ಟೂಡೆಂಟ್ ಹರಿಯಾಣದವನು ಎಂದು ಹೇಳಲಾಗುತ್ತಿದೆ. ಜೈಲಿನಲ್ಲಿರುವ ಪಾತಕಿ ಗೋಲ್ಡಿ ಬ್ರಾರ್ ಹೆಸರಿನಲ್ಲಿ ಈತ ಬೆದರಿಕೆ ಒಡ್ಡಿದ್ದ ಎನ್ನಲಾಗುತ್ತಿದೆ. ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಬಿಗಿ ಭದ್ರತೆ 0ನೀಡಿದ್ದಾರೆ. ಮನೆ ಸುತ್ತಮುತ್ತ…

Read More

2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ನಟ, ನಟಿಯರು ಮತದಾನ ಮಾಡಿದ್ದಾರೆ. ಅದರಂತೆ ನಟ ರಕ್ಷಿತ್ ಶೆಟ್ಟಿ ಕೂಡ ಉಡುಪಿಯಲ್ಲಿ ಮತದಾದನ ಮಾಡಿದ್ದು ಇಂದು ರಾತ್ರಿ ಅಮೆರಿಕಾದ ವಿಮಾನ ಏರಲಿದ್ದಾರೆ. ಮತದಾನ ಮಾಡುವುದಕ್ಕಾಗಿಯೇ ಕಾಯುತ್ತಿದ್ದ ಸಿಂಪಲ್ ಸ್ಟಾರ್, ಮತದಾನದ ಕರ್ತವ್ಯ ಮುಗಿಸಿ ಇಂದು ಯುಎಸ್.ಎಗೆ ಪಯಣ ಬೆಳೆಸುತ್ತಿದ್ದಾರೆ. ಈ ಮಾಹಿತಿಯನ್ನು ಸ್ವತಃ ರಕ್ಷಿತ್ ಶೆಟ್ಟಿ ಅವರೇ ಹಂಚಿಕೊಂಡಿದ್ದಾರೆ. 777 ಚಾರ್ಲಿ ಸಿನಿಮಾದ ಬಳಿಕ ರಕ್ಷಿತ್ ಶೆಟ್ಟಿ ನಟನೆಯ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಇದಕ್ಕೀಗ ಉತ್ತರ ಸಿಕ್ಕಿದ್ದು ಸದ್ಯ ರಕ್ಷಿತ್ ರಿಚರ್ಡ್ ಆಂಟೋನಿ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್ ಮಾಡಲು ಅವರು ಅಮೆರಿಕಾಗೆ ತೆರಳಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಬರೆಯಲು ತೊಡಗಿಕೊಂಡಿರುವ ರಕ್ಷಿತ್, ಅದರ ಅಂತಿಮ ಹಂತದ ಸ್ಕ್ರಿಪ್ಟ್ ಗಾಗಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಾರಂತೆ. ಅಮೆರಿಕಾಗೆ ಹೋಗಲು ತಮ್ಮದೇ ಆದ ಕಾರಣವನ್ನು ನೀಡಿದ್ದಾರೆ ರಕ್ಷಿತ್. ಅಲ್ಲಿ ಹಗಲು ಇದ್ದರೆ, ಇಲ್ಲಿ ರಾತ್ರಿ ಇರುತ್ತದೆ. ಇಲ್ಲಿ ರಾತ್ರಿಯಾದರೆ ಅಲ್ಲಿ ಹಗಲು.…

Read More

ಇದೀಗ ಮಕ್ಕಳಿಗೆ ಬೇಸಿಗೆ ರಜೆಯ ಕಾಲ. ಮಕ್ಕಳು ಯಾವಾಗಲೂ ಮನೆಯಲ್ಲೇ ಇರುವಾಗ ರುಚಿರುಚಿಯಾದ ಅಡುಗೆಗಳಿಗೆ ಅಥವಾ ತಿನಿಸುಗಳಿಗಾಗಿ ಹಠ ಮಾಡುತ್ತಲೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಹೊಸ ಹೊಸ ಅಡುಗೆಗಳನ್ನು ಮಾಡಿ ಮಕ್ಕಳನ್ನು ತೃಪ್ತಿಪಡಿಸುವುದು ಪೋಷಕರಿಗಂತೂ ಒಂದು ರೀತಿಯ ಸವಾಲು. ನಾವಿಂದು ತಳಿಸುತ್ತಿರುವ ರೆಸಿಪಿಯನ್ನು ಮಕ್ಕಳು ಇಷ್ಟಪಟ್ಟುತಂತಾರೆ. ಹಾಗಾದ್ರೆ ಇಂದಿನ ರೆಸಿಪಿ ಕಾರ್ನ್ ಚೀಸ್ ಸ್ಯಾಂಡ್‌ವಿಚ್ (Corn Cheese Sandwich) ಆಗಿದೆ, ಇದನ್ನು ಕೇವಲ ಮಕ್ಕಳೇ ಏಕೆ? ಮನೆಯ ಎಲ್ಲಾ ಸದಸ್ಯರಿಗೂ ಮಾಡಿ ಉಣ ಬಡಿಸಿ. ಎಲ್ಲರೂ ಇದನ್ನು ಖಂಡಿತಾ ಇಷ್ಟಪಡುತ್ತಾರೆ. ಹಾಗಿದ್ದರೆ ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡೋದು ಹೇಗೆಂದು ನೋಡೋಣ. ಬೇಕಾಗುವ ಪದಾರ್ಥಗಳು: ಬ್ರೆಡ್ ಸ್ಲೈಸ್ – 6 ಪುದೀನಾ ಚಟ್ನಿ – ಅಗತ್ಯಕ್ಕೆ ತಕ್ಕಂತೆ ಬೆಣ್ಣೆ – ಅಗತ್ಯಕ್ಕೆ ತಕ್ಕಂತೆ ಸ್ಲೈಸ್ ಚೀಸ್ – 6 ಬೇಯಿಸಿದ ಸ್ವೀಟ್ ಕಾರ್ನ್ – ಮುಕ್ಕಾಲು ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ – ಕಾಲು ಕಪ್ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್ – 2-3 ಟೀಸ್ಪೂನ್ ಟೊಮೆಟೊ ಕೆಚಪ್…

Read More

ಬೆಂಗಳೂರು: ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಮಲಿಂಗಾರೆಡ್ಡಿ (Ramalin gareddy)  ಹೇಳಿದ್ದಾರೆ. ಈ ಸಂಬಂಧ ವಿಲ್ಸನ್ ಗಾರ್ಡನ್ ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪರ ಒಲವು ವ್ಯಕ್ತವಾಗುತ್ತಿದ್ದು, ರಾಜ್ಯದಲ್ಲಿ 125 ಸ್ಥಾನ ಬರುವ ನಿರೀಕ್ಷೆ ಇದೆ. ಕಳೆದ ಬಾರಿ ಬೆಂಗಳೂರಿನಲ್ಲಿ 15 ಸ್ಥಾನ ಬಂದಿತ್ತು. ಈ ಸಲ ಅದಕ್ಕಿಂತ ಹೆಚ್ಚು ಸ್ಥಾನ ಬರುತ್ತದೆ” ಎಂದರು. ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಿಂದ ಏನೂ ಆಗಲ್ಲ. ಮೋದಿ ಅವರು ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳದಲ್ಲೂ ರೋಡ್ ಶೋ ನಡೆಸಿದ್ದರು. ಅಲ್ಲಿ ಗೆದ್ದರಾ? ಒಡಿಶಾ, ಬಿಹಾರ, ದಕ್ಷಿಣದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳದಲ್ಲಿ ರೋಡ್ ಶೋ ಮಾಡಿದರು. ಸಹಜವಾಗಿ ರಾಜಕೀಯ ಪಕ್ಷಗಳು ರೋಡ್ ಶೋ ಮಾಡಬೇಕು ಅಲ್ವಾ ಅದಕ್ಕೆ ಮಾಡಿದ್ದಾರೆ. ರೋಡ್ ಶೋ ವೇಳೆ ಮೋದಿ ಅವರ ಅಭಿಮಾನಿಗಳು ಇರಬಹುದು. ಬಿಜೆಪಿ ಪಕ್ಷದ ಅಭಿಮಾನಿಗಳು ಇರಬಹುದು. ಆದರೆ, ಉಳಿದ ಜನರನ್ನು ಕರೆತರಲಾಗಿತ್ತು. ಕೇಂದ್ರ ಬಿಜೆಪಿ ಸರ್ಕಾರ ಡೀಸೆಲ್‌, ಪೆಟ್ರೋಲ್…

Read More

ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ  ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್(Nirmala Sitharaman) ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯು ಮೂರ್ಖತನಕ್ಕೆ ನಿದರ್ಶನವಾಗಿದೆ. ಬಜರಂಗದಳ ನಿಷೇಧ ಮಾಡುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ನ ಯುವ ಘಟಕವಾದ ಬಜರಂಗದಳದ ಮೇಲೆ ನಿಷೇಧ ಹೇರುವ ಭರವಸೆ ನೀಡಿರುವುದು ಮೂರ್ಖತನಕ್ಕೆ ನಿದರ್ಶನವಾಗಿದೆ. ನಾವು ಯಾವಾಗಲೂ ಬಜರಂಗ ಬಲಿಯನ್ನು ಗೌರವಿಸುತ್ತೇವೆ ಮತ್ತು ಹನುಮಾನ್ ಚಾಲೀಸಾವನ್ನು ಓದುತ್ತೇವೆ. ಆದರೆ, ಕಾಂಗ್ರೆಸ್ಸಿಗೆ ಇದು ಚುನಾವಣಾ ವಿಷಯವಾಗಿದೆ. ಕರ್ನಾಟಕವು ಹನುಮಂತನ ಜನ್ಮಸ್ಥಳವಾಗಿದೆ. ಕಾಂಗ್ರೆಸ್ ನಾಯಕರು ಅಲ್ಲಿ, ಇಲ್ಲಿ ಹೇಳಿಕೆ ನೀಡುತ್ತಿಲ್ಲ, ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವುದಾಗಿ ಹೇಳುತ್ತಿದೆ. ಇದು ಮೂರ್ಖತನಕ್ಕೆ ನಿದರ್ಶನವಾಗಿದೆ ಎಂದು ಹೇಳಿದ್ದಾರೆ.

Read More

ಬೆಂಗಳೂರು: ಜೆಡಿಎಸ್‌ನೊಂದಿಗೆ ಮೈತ್ರಿ ಪ್ರಶ್ನೆಯೇ ಇಲ್ಲ, ನಾವು 146 ಸ್ಥಾನ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(KPCC President DK Sivakumar) ಹೇಳಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕದ ಮತದಾರರು ಪ್ರಜ್ಞಾವಂತರು. ಅವರು ಡಬಲ್ ಇಂಜಿನ್ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಜ್ಯದ ಜನತೆ ಕಾಂಗ್ರೆಸ್ ಬಗ್ಗೆ ಆಶಾವಾದಿಯಾಗಿದ್ದಾರೆ. ಈ ಬಾರಿ ಕಾಂಗ್ರೆಸ್‌ಗೆ ಸಂಖ್ಯಾಬಲ ಇರುವುದರಿಂದ ಸರ್ಕಾರ ರಚಿಸಲು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಇತರೆ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಇಲ್ಲ” ಎಂದು ತಿಳಿಸಿದರು. 2018ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಬಿಜೆಪಿಯನ್ನು ದೂರವಿಟ್ಟು ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಜೆಡಿಎಸ್​ನೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದೆವು. ಆದರೆ, ಕೆಲವು ಶಾಸಕರು ಬಂಡಾಯ ಎದ್ದು ಮೈತ್ರಿ ಪಕ್ಷ ತೊರೆಯುವ ಮೂಲಕ ಸರ್ಕಾರವನ್ನು ಪತನಗೊಳಿಸಿದ್ದರು. ಆದರೆ ಈ ಬಾರಿ ಹಾಗಾಗುವುದಿಲ್ಲ. ಕಾಂಗ್ರೆಸ್ ಹಲವು ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸಿದೆ. ಬಿಜೆಪಿ ಸರ್ಕಾರದ ಬೆಲೆ…

Read More

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಜೂನ್‌ ತಿಂಗಳ22 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದು, ಬೈಡನ್ ಜೊತೆ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಅಧ್ಯಕ್ಷ ಬೈಡನ್​ ಮತ್ತು ಪ್ರಥಮ ಮಹಿಳೆ ಡಾ.ಜಿಲ್ ಬೈಡನ್ ಅವರು ನರೇಂದ್ರ ಮೋದಿ ಅವರಿಗೆ ಆತಿಥ್ಯ ನೀಡಲಿದ್ದಾರೆ. ಈ ಭೇಟಿಯು ಅಮೆರಿಕ ಮತ್ತು ಭಾರತದ ನಡುವಿನ ಆಳವಾದ ಮತ್ತು ನಿಕಟ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಅಮೆರಿಕನ್ನರು ಮತ್ತು ಭಾರತೀಯರ ಸ್ನೇಹ ಬಂಧಗಳನ್ನೂ ಮತ್ತಷ್ಟು ದೃಢಪಡಿಸಲಿದೆ” ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ. “ಚೀನಾದ ಆಕ್ರಮಣಕಾರಿ ನಡವಳಿಕೆಯ ನಡುವೆ ಮುಕ್ತ, ಸಮೃದ್ಧ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್‌ಗೆ ಎರಡು ದೇಶಗಳ ಹಂಚಿಕೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಹವಾಮಾನ ಬದಲಾವಣೆಯಿಂದ ಉಂಟಾಗುವ ಸಾಮಾನ್ಯ ಸವಾಲುಗಳನ್ನು ಎದುರಿಸುವ ಬಗೆ, ಉದ್ಯೋಗವಕಾಶಗಳು, ಆರೋಗ್ಯ ಭದ್ರತೆ, ರಕ್ಷಣೆ, ಇಂಧನ ಮತ್ತು ಬಾಹ್ಯಾಕಾಶ ಸೇರಿದಂತೆ ದ್ವಿಪಕ್ಷೀಯ ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆ ಕುರಿತು…

Read More

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಬಂಧನ ವಿರೋಧಿಸಿ ಪಂಜಾಬ್‍ನಲ್ಲಿ (Punjab) ಪ್ರತಿಭಟನೆ ನಡೆಸುತ್ತಿರುವ 1000 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ 945 ಮಂದಿ ಕಾನೂನು ಉಲ್ಲಂಘಿಸಿದ್ದಾರೆ. ಉಳಿದವರು ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಜಿ ಪ್ರಧಾನಿಯನ್ನು ಪಾಕಿಸ್ತಾನದ ಪ್ಯಾರಾ ಮಿಲಿಟರಿ ಪಡೆ ಬಂಧಿಸಿತ್ತು. ನಂತರ ಉಂಟಾದ ಹಿಂಸಾಚಾರದಲ್ಲಿ 130 ಅಧಿಕಾರಿಗಳು ಗಾಯಗೊಂಡಿದ್ದರು. ಪ್ರಕರಣವೊಂದರ ವಿಚಾರಣೆಗಾಗಿ ಇಸ್ಲಾಮಾಬಾದ್‍ನ ಹೈಕೋರ್ಟ್ (Islamabad High Court) ತೆರಳುತ್ತಿದ್ದ ವೇಳೆಯೇ ಇಮ್ರಾನ್‍ಖಾನ್ ಅವರನ್ನು ಬಂಧಿಸಲಾಗಿತ್ತು. ಇಮ್ರಾನ್ ಖಾನ್ ಬಂಧನವನ್ನು ವಿರೋಧಿಸಿ ಬಳಿಕ ಅವರ ಬೆಂಬಲಿಗರು ಲಾಹೋರ್‌ನಲ್ಲಿರುವ ಸೇನಾ ಕಮಾಂಡರ್‌ಗಳ ನಿವಾಸದ ಆವರಣವನ್ನು ಪ್ರವೇಶಿಸಿ ದಾಂಧಲೆ ನಡೆಸಿದ್ದರು. ಪೇಶಾವರದಲ್ಲಿ ರೇಡಿಯೋ ಕಟ್ಟಡಕ್ಕೂ ಬೆಂಕಿ ಹಚ್ಚಲಾಗಿತ್ತು. ಇಸ್ಲಾಮಾಬಾದ್‍ನಾದ್ಯಂತ ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಸೆಕ್ಷನ್ 144 ಜಾರಿಯಲ್ಲಿದ್ದು, ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Read More

ಮಹಿಳೆಯೊಬ್ಬಳು ತನ್ನ ಮದುವೆಯ ಫೋಟೋಗಳನ್ನು ಸೆರೆಹಿಡಿದಿದ್ದ, ಫೋಟೋಗ್ರಾಫರ್ ಗೆ ಸುಮಾರು ನಾಲ್ಕು ವರ್ಷಗಳ ನಂತರ ವಾಟ್ಸ್ಆಪ್ ಮೆಸೆಜ್ ಮಾಡಿ ಸಂಪರ್ಕಿಸಿದಳು. ಮತ್ತು ತನ್ನ ವಿಚ್ಛೇದನದ ಬಗ್ಗೆ ಹೇಳಿ ಫೋಟೋಗಳಿಗೆ ತೆಗೆದುಕೊಂಡ ಹಣವನ್ನು ಮರುಪಾವತಿ ಮಾಡುವಂತೆ ಕೇಳಿದ್ದಾಳೆ. ಛಾಯಾಗ್ರಾಹಕ ಮತ್ತು ಈಕೆಯ ವಾಟ್ಸಾಪ್ ಸಂಭಾಷನೆಯ ಸ್ಕಿನ್ ಶಾಟ್​​ಗಳನ್ನು ಛಾಯಾಗ್ರಾಹರ ಲ್ಯಾನ್ಸ್ ರೋಮಿಯೀ ತನ್ನ ಟ್ವಿಟರ್ ಖಾತೆಯನ್ನು ಹಂಚಿಕೊಂದ್ದು, ಇದು ಈಗ ವೈರಲ್ ಆಗಿದೆ. ಹೌದು ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ತನ್ನ ಮದುವೆಯ ಫೋಟೋಗಳನ್ನು ತೆಗೆದ ಛಾಯಾಗ್ರಾಹಕ, ತನಗೆ ಹಣವನ್ನು ವಾಪಸ್ ನೀಡಬೇಕು ಎಂದು ಕೇಳಿದ್ದಾರೆ. ‘ನಾನು ಈಗ ವಿಚ್ಛೇದನವನ್ನು ಪಡೆದಿದ್ದೇನೆ. ಮತ್ತು ನನ್ನ ಮದುವೆಯ ದಿನದ ಫೋಟೋಗಳು ಇನ್ನು ಮುಂದೆ ನನಗೆ ಮತ್ತು ನನ್ನ ಮಾಜಿ ಪತಿಗೆ ಅಗತ್ಯವಿಲ್ಲ” ಎಂದು ಮಹಿಳೆ ಜೋಹಾನ್ಸ್ ಬರ್ಗ್ ಮೂಲದ ಫೋಟೋಗ್ರಾಫರ್ ಲ್ಯಾನ್ಸ್ ರೋಮಿಯೋಗೆ ಹೇಳಿದ್ದಾರೆ. ಆರಂಭದಲ್ಲಿ ಮಹಿಳೆ ಸುಮ್ಮನೆ ಹೇಳುತ್ತಿದ್ದಾರೆ ಎಂದು ಭಾವಿಸಿದ ರೋಮಿಯೋ, ತಮಾಷೆ ಮಾಡುತ್ತಿದ್ದೀರಾ ಎಂದು ಮಹಿಳೆಗೆ ಕೇಳಿದ್ದಾರೆ. ಇಲ್ಲ ನಾನು…

Read More

ನವದೆಹಲಿ : ಮಾದಕ ದ್ರವ್ಯಗಳನ್ನು ಸೇವಿಸಿ, ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿ ಮತ್ತು ತನ್ನ ಕಾಮತೃಷೆ ತೀರಿಸಿಕೊಳ್ಳಲು ಹಲವಾರು ಕಿಲೋಮೀಟರ್‌ಗಳಷ್ಟು ದೂರ ಹೋಗಿ ಅತ್ಯಾಚಾರ ಮಾಡುತ್ತಿದ್ದ ಕಾಮಪಿಶಾಚಿಗೆ ಇತ್ತೀಚೆಗೆ ಕೊನೆಗೂ ಶಿಕ್ಷೆಯಾಗಿದೆ. ದೆಹಲಿ ಕೋರ್ಟ್‌ ಇತ್ತೀಚೆಗೆ ಶಿಕ್ಷೆ ನೀಡಿದೆ. ಬಂಧನಕ್ಕೂ ಮುನ್ನ ದೆಹಲಿಯ ಕರಾಲಾದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ರವೀಂದರ್ ಕುಮಾರ್ 2008 ಮತ್ತು 2015 ರ ನಡುವೆ ಸುಮಾರು 30 ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಆ ಮಕ್ಕಳ ಹೆತ್ತವರು ಬಹುತೇಕ ಕಾರ್ಮಿಕರಾಗಿದ್ದು, ಅವರು ಮಲಗಲು ಹೋದಾಗ ಕತ್ತಲೆಯಲ್ಲಿ ಹಣ ಅಥವಾ ಸಿಹಿ ತಿಂಡಿಯೊಂದಿಗೆ ಮಕ್ಕಳನ್ನು ಆಕರ್ಷಿಸುತ್ತಿದ್ದ. ಹಾಗೆ, ಪ್ರತ್ಯೇಕ ಸ್ಥಳದಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ಅತ್ಯಾಚಾರ ಮಾಡ್ತಿದ್ದ ಮತ್ತು ಸಿಕ್ಕಿಬೀಳುವ ಭಯದಿಂದ ಹೆಚ್ಚಿನವರನ್ನು ಕೊಲ್ಲುತ್ತಿದ್ದ ಎಂದು ವರದಿಯಾಗಿದೆ. ಸದ್ಯ, ಒಂದು ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಎರಡು ವಾರಗಳಲ್ಲಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. 2015ರಲ್ಲಿ 6 ವರ್ಷದ ಬಾಲಕನ ಕೊಲೆ ಪ್ರಕರಣದಲ್ಲಿ ಕುಮಾರ್‌ನನ್ನು ಬಂಧಿಸಲಾಗಿತ್ತು. ಆತನ ವಿಚಾರಣೆಯ…

Read More