ಬೆಂಗಳೂರು; ನಗರ ಸೇರಿದಂತೆ ದಕ್ಷಿಣ ಒಳನಾಡಿನ ವ್ಯಾಪ್ತಿಯಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದ ಭಾಗದಲ್ಲಿ ಗುಡುಗು-ಮಿಂಚು ಸಹಿತ ಮಳೆಯ ಸಾಧ್ಯತೆ ಇದೆ. ಮುಂದಿನ ಮೂರು ದಿನ ರಾಜ್ಯದಲ್ಲಿ ಮಳೆಯಾಗಲಿದೆ. ಹವಾಮಾನ ಇಲಾಖೆ ಕಡಲ ತೀರಗಳಲ್ಲಿ ಅಲರ್ಟ್ ಘೋಷಣೆ ಮಾಡಿದೆ. ಇನ್ನೂ ಯಾದಗಿರಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಶಹಾಪುರದಲ್ಲಿ ವರುಣನ ಅರ್ಭಟ ಹಿನ್ನೆಲೆ ರಸ್ತೆಗಳು ತುಂಬಿ ಹರಿದಿದ್ದು, ವಾಹನ ಸವಾರರು ಪರದಾಡಿದ್ರು. ಬರದ ಆತಂಕದಿಂದ ಕಂಗಾಲಾಗಿದ್ದ ಉಡುಪಿ ನಗರದ ಜನರು ರಿಲಾಕ್ಸ್ ಆಗಿದ್ದಾರೆ. ಉಡುಪಿ ನಗರದ ಜೀವನದಿ ಸ್ವರ್ಣಾ ಮೈದುಂಬಿ ಹರಿಯುತ್ತಿದ್ದಾಳೆ. ಬಜೆ ಅಣೆಕಟ್ಟಿಗೆ ಸ್ವರ್ಣ ಒಳಹರಿವು ಆರಂಭ ಸದ್ಯ ಮೂರು ಮೀಟರ್ ನೀರು ಸಂಗ್ರಹವಾಗಿದ್ದು, ಇಂದಿನಿಂದ ನಗರಸಭಾ ವ್ಯಾಪ್ತಿಯ 35 ವಾರ್ಡ್‌ಗಳಿಗೆ ನಿರಂತರ ನೀರು ಸಿಗಲಿದೆ.
Author: Prajatv Kannada
ಹಾವೇರಿ ;– ಮಸೀದಿ ಜಾಗದಲ್ಲಿ ದೇವಾಲಯ ನಿರ್ಮಾಣ ಶತಸಿದ್ಧ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಹಾವೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲೆಲ್ಲಿ ಹಿಂದೂ ದೇಗುಲ ಒಡೆದು ಮಸೀದಿ ಕಟ್ಟಿದ್ದಾರೋ ಅಲ್ಲಿ ಮುಂದೊಂದು ದಿನ ದೇವಾಲಯ ನಿರ್ಮಿಸುತ್ತೇವೆ. 5 ವರ್ಷ ಆಗಬಹುದು, 50 ವರ್ಷವಾಗಬಹದು, ಅದನ್ನು ಮಾಡಿಯೇ ತೀರುತ್ತೇವೆ ಎಂದರು. ಕಾಂಗ್ರೆಸ್‌ನವರಿಗೆ ಮುಸ್ಲಿಮರನ್ನು ಸಂತೃಪ್ತಿಪಡಿಸುವುದೆ ಕೆಲಸ. ಮುಸ್ಲಿಮರು ಇಲ್ಲದಿದ್ದರೆ ದೇಶದಲ್ಲಿ ಕಾಂಗ್ರೆಸ್ ಸರ್ವನಾಶ ಆಗುತ್ತಿತ್ತು. ಅವರು ಇರುವುದರಿಂದ ಇನ್ನೂ ಜೀವಿಸುತ್ತಿದೆ. ಅದಕ್ಕಾಗಿ ಸುಮ್ಮನೆ ಇದನ್ನು ಸೃಷ್ಟಿಸಿದ್ದಾರೆ ಎಂದರು. ಕಾಂಗ್ರೆಸ್‌ನವರಿಗೆ ಆರ್ಟಿಕಲ್ 370 ರದ್ದುಗೊಳ್ಳಬಾರದಿತ್ತು. ರದ್ದಾಗಿ ಅದು ಅವರಿಗೆ ನಿರಾಶೆಯಾಗಿದೆ. ಅಯೋಧ್ಯೆ ರೀತಿಯಲ್ಲಿಯೇ ಕಾಶಿ ವಿಶ್ವನಾಥ ದೇವಾಲಯದ ಬಗ್ಗೆ ಕೂಡಾ ತೀರ್ಪು ಬರಲಿದೆ. ಇದರ ಜತೆಗೆ ದೇಶದಲ್ಲಿ ಎಲ್ಲೆಲ್ಲಿ ಹಿಂದೂ ದೇವಾಲಯ ನಾಶ ಮಾಡಿ ಮಸೀದಿ ಕಟ್ಟಿದ್ದಾರೋ ಆ ಮಸೀದಿ ಕೆಡವಿ ಮತ್ತೆ ಹಿಂದೂ ದೇವಾಲಯ ನಿರ್ಮಾಣವಾಗಲಿವೆ. ಭಾರತೀಯ ಸಂಸ್ಕೃತಿ ಮರು ನಿರ್ಮಿಸಲು ಬಿಜೆಪಿ ಸಿದ್ಧವಾಗಿದೆ ಎಂದು…
ರಬಕವಿ-ಬನವಟ್ಟಿ;- ಮತಾಂತರ, ಗೋಹತ್ಯೆ ಕಾಯ್ದೆ ಹಿಂಪಡೆದು ಹಿಂದೂಗಳಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯ ಸರ್ಕಾರ ಯೋಜನೆ ಗ್ಯಾರಂಟಿಗಳ ಮಧ್ಯೆ ಗೋವುಗಳ ಬದುಕಿನ ಗ್ಯಾರಂಟಿ ಉಳಿಸಬೇಕಿತ್ತು. ಬದಲಾಗಿ ಮತಾಂತರ ಹಾಗು ಗೋ ಹತ್ಯೆ ಕಾಯ್ದೆ ರದ್ದುಗೋಳಿಸುವ ಮೂಲಕ ಬಹುಸಂಖ್ಯಾತ ಹಿಂದೂಗಳಿಗೆ ಅವಮಾನ ಮಾಡಿದೆ. ಹಿಂದಿನಿಂದಲೂ ಕಾಂಗ್ರೆಸ್ ಹಿಂದೂಗಳ ವಿರುದ್ಧವೇ ಕಾಯ್ದೆ ತರುವ ಮೂಲಕ ಮೂಲ ಸಿದ್ಧಾಂತಗಳಿಗೆ ನಿರಂತರವಾಗ ಕೊಡಲಿ ಏಟು ನೀಡುತ್ತಿದೆ. ಈಗಲೂ ಅದೇ ಚಾಳಿ ಮುಂದುವರಿಸಿದ್ದು, ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲವೆಂದು ಹೇಳಿದರು. ದೇಶಕ್ಕಾಗಿ ಉಗ್ರ ಕಾಳಾಪಾನಿ ಶಿಕ್ಷೆ ಹಾಗೂ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸಾವರ್ಕರ್, ಭಗತ್‌ಸಿಂಗ್‌ರ ಪಠ್ಯ ತೆಗೆಯಲು ಅವರೇನು ಭಯೋತ್ಪಾದಕರಾ? ಎಂದು ಆಕ್ರೋಶ ವ್ಯಕ್ತಪಡಿಸಿದ ಸೂಲಿಬೆಲೆ, ಹಿಂದೂ ಧರ್ಮವನ್ನು ಅವಮಾನಗೊಳಿಸುವುದನ್ನು ನಿಲ್ಲಿಸಬೇಕಿದೆ ಎಂದು ಎಚ್ಚರಿಸಿದರು. ಧಾರ್ಮಿಕ ಅಸಹಿಷ್ಣುತೆ ಹೆಚ್ಚಿಸುವತ್ತ ಗೋ ಹತ್ಯೆ ನಡೆಸುತ್ತ, ಖಚಿತವಲ್ಲದ ಉಚಿತ ಯೋಜನೆಗಳ ಮಧ್ಯದಲ್ಲಿ ಜನರ ಬಾಯಿ ಮುಚ್ಚಿಸುವ ಕುತಂತ್ರ ಸರ್ಕಾರದಿಂದ…
ಬೆಂಗಳೂರು ;– ಬಿಬಿಎಂಪಿ ಚುನಾವಣೆ ಜೊತೆಗೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯನ್ನೂ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಕೈಗೆ ಅಧಿಕಾರ ನೀಡಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿ ಬಿಬಿಎಂಪಿ ಚುನಾವಣೆ ಮಾಡುತ್ತೇವೆ. ಜತೆಗೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯನ್ನೂ ಮಾಡುತ್ತೇವೆ. ಕೋರ್ಟ್ ನಿರ್ದೇಶನ ಪಾಲಿಸುವ ಜತೆಗೆ ನಾವು ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕು. ಎಲ್ಲದಕ್ಕೂ ರೀತಿ-ನೀತಿ ಎಂಬುದು ಇರುತ್ತದೆ. ಆದರೆ ಬಿಬಿಎಂಪಿ ಚುನಾವಣೆ ಮಾಡುವುದು ಖಚಿತ ಎಂದು ಹೇಳಿದರು. ಕೇವಲ ಬಿಬಿಎಂಪಿ ಚುನಾವಣೆ ಮಾತ್ರವಲ್ಲ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯನ್ನೂ ಸಹ ಹಿಂದಿನ ಸರ್ಕಾರ ತಡೆ ಹಿಡಿದಿತ್ತು. ನಾವು ಕೊಟ್ಟ ಮಾತಿನಂತೆ ಈ ಎರಡೂ ಚುನಾವಣೆಯನ್ನೂ ಮಾಡುತ್ತೇವೆ ಎಂದರು.. ನಿಗಮ-ಮಂಡಳಿ ನೇಮಕಕ್ಕೂ ಕ್ರಮ ಕೈಗೊಳ್ಳುತ್ತೇವೆ. ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು. ಕಾರ್ಯಕರ್ತರು ಇದ್ದರೆ ಮಾತ್ರ ಪಕ್ಷ ಇರುತ್ತದೆ. ಶಾಸಕರು ಹಾಗೂ ಅಧ್ಯಕ್ಷರಿಗೆ ಹೆಸರುಗಳನ್ನು ಶಿಫಾರಸು ಮಾಡಲು…
ಸೂರ್ಯೋದಯ: 05.56 AM, ಸೂರ್ಯಾಸ್ತ : 06.49 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಆಷಾಢ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ ಋತು, ತಿಥಿ: ಇವತ್ತು ಪೂರ್ಣ ಸಪ್ತಮಿ ನಕ್ಷತ್ರ: ಇವತ್ತು ಪುಬ್ಬಾ 10:11 AM ತನಕ ನಂತರ ಉತ್ತರ ಫಾಲ್ಗುಣಿ ಯೋಗ: ಇವತ್ತು ಸಿದ್ಧಿ 05:27 AM ತನಕ ನಂತರ ವ್ಯತೀಪಾತ ಕರಣ: ಇವತ್ತು ಗರಜ 11:23 AM ತನಕ ನಂತರ ವಣಿಜ 12:25 AM ತನಕ ನಂತರ ವಿಷ್ಟಿ ರಾಹು ಕಾಲ:.04:30 ನಿಂದ 06:00 ವರೆಗೂ ಯಮಗಂಡ: 12:00 ನಿಂದ 01:30 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: 03.01 AM to 04.49 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:52 ನಿಂದ ಮ.12:44 ವರೆಗೂ ಮೇಷ ರಾಶಿ: ಈ ರಾಶಿಯವರಿಗೆ ಈ ಬಾರಿ ಬಂಪರ್ ಕೊಡುಗೆ,ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೆ ಸಿಹಿಸುದ್ದಿ, ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಶಸ್ವಿ…
ಬೆಂಗಳೂರು ;- ಸ್ಮಾರ್ಟ್ ಸಿಟಿ’ ಯೋಜನೆ ಮತ್ತೊಂದು ವರ್ಷ ವಿಳಂಬವಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು ಜೂನ್ 23ರೊಳಗೆ ಎಲ್ಲ ಕಾಮಗಾರಿಗಳು ಮುಗಿಯುತ್ತವೆ ಎಂದು ಸಮಜಾಯಿಷಿ ನೀಡುತ್ತಿದ್ದರು. ಆದರೆ, ಆ ಗಡುವು ಮುಗಿಯಲು ಒಂದೆರಡು ದಿನ ಬಾಕಿ ಇದ್ದರೂ ಏಳು ಕಾಮಗಾರಿಗಳು ನಡೆಯುತ್ತಲೇ ಇವೆ. ಇನ್ನೂ ಒಂದು ವರ್ಷ ಕಾಲಾವಕಾಶ ಸಿಕ್ಕಿರುವುದರಿಂದ ಕಾಮಗಾರಿಗಳು ಕ್ಷಿಪ್ರಗತಿ ಪಡೆದುಕೊಳ್ಳುವ ಸಾಧ್ಯತೆ ಕ್ಷೀಣಿಸಿದೆ. ಸುಮಾರು ₹300 ಕೋಟಿ ಮೊತ್ತದ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲೇ ಇವೆ. ಬೆಂಗಳೂರನ್ನು ‘ಸ್ಮಾರ್ಟ್ ಸಿಟಿ ಯೋಜನೆಗೆ’ ಸಾಕಷ್ಟು ಹೋರಾಟ ಮಾಡಿ ಸೇರಿಸಲಾಗಿತ್ತು. ನಗರದಲ್ಲಿ ಐಕಾನ್ ಕಾಮಗಾರಿಗಳು ನಡೆಯುವ ನಿರೀಕ್ಷೆ ಇತ್ತು. ಆದರೆ, ಟೆಂಡರ್‌ಶ್ಯೂರ್‌ಗೆ ಅರ್ಧಕ್ಕಿಂತ ಹೆಚ್ಚಿನ ಹಣ ವ್ಯಯ ಮಾಡಲಾಗಿದೆ. 32 ರಸ್ತೆಗಳಲ್ಲಿ ಇನ್ನೂ 5 ರಸ್ತೆಗಳ ಕಾಮಗಾರಿ ಮುಗಿದಿಲ್ಲ. ಇನ್ನು ಕೆ.ಆರ್. ಮಾರುಕಟ್ಟೆಯ ಆರ್ಥಿಕ ಕೇಂದ್ರದ ಮರು ಅಭಿವೃದ್ಧಿ ಕಾರ್ಯ ವರ್ಷಗಳಿಂದ ನಡೆಯುತ್ತಲೇ ಇದೆ. ಸ್ಥಳದಲ್ಲಿನ ಅವ್ಯವಸ್ಥೆ ಅಲ್ಲಿನ ಕಾಮಗಾರಿಯ ಆಮೆಗತಿಯ ಕೈಗನ್ನಡಿಯಾಗಿದೆ. ಇದು ಇನ್ನೂ ಆರಂಭಿಕ ಹಂತದಲ್ಲೇ ಇದೆ. ಗಾಂಧಿಬಜಾರ್‌ನಲ್ಲಿ…
ಬೆಂಗಳೂರು ;- ಕಾಂಗ್ರೆಸ್ ಎರಡು ದೋಣಿ ಪಾರ್ಟಿ ಎಂದು ಮಾಜಿ ಸಚಿವ ಮುನಿರತ್ನ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್ ನಲ್ಲಿನ ಸಿಎಂ ಅಧಿಕಾರ ಹಂಚಿಕೆಯ ಕಥೆ ಮೂಲಕ ಕೌಂಟರ್ ನೀಡಿದ ಮುನಿರತ್ನ ಅವರು, ”ಗ್ಯಾರಂಟಿ ಮಾಡಲು ಸುರ್ಜೇವಾಲ, ವೇಣುಗೋಪಾಲ್ ಬಂದು ಸಭೆ ಮಾಡ್ತಾರೆ. ಅಲ್ಲಿ ಗ್ಯಾರಂಟಿ ಪ್ರಿಂಟ್ ಮಾಡಿ, ಒಬ್ಬರು ಸಹಿ ಮಾಡ್ತಾರೆ. ಆದರೆ ಇನ್ನೊಬ್ಬರು ಸಹಿ ಮಾಡಬೇಕು ಅಂತಾರೆ. ಅಲ್ಲಿ ಶಿವಕುಮಾರ್ ಒಬ್ರು ಇದ್ದು ಸಹಿ ಹಾಕ್ತಾರೆ. ಆದರೆ ಸಿದ್ದರಾಮಯ್ಯ ಇರೋದಿಲ್ಲ. ಕೊನೆಗೆ ಸಿದ್ದರಾಮಯ್ಯ ರನ್ನು ಕರೆಸಿಕೊಂಡು ಅವರಿಂದ ಒಂದು ಸಹಿ ಮಾಡಿ ಅಂತಾರೆ. ಆದರೆ ಸಿದ್ದರಾಮಯ್ಯ ನಾನು ಸಹಿ ಮಾಡಲ್ಲ ಅಂತಾರೆ. ಆಮೇಲೆ ನನ್ನ ಜನರು ಓಡಿಸಿಕೊಂಡು ಬರ್ತಾರೆ ನಾನು ಹಾಕಲ್ಲ ಅಂತಾರೆ. ಆಮೇಲೆ ಅಲ್ಲಿ ಅವರು ಕಂಡಿಷನ್ ಹಾಕ್ತಾರೆ 5 ವರ್ಷ ನಾನೇ ಸಿಎಂ ಅಂತಾ. ಸಿದ್ದರಾಮಯ್ಯ ಮಾತಿಗೆ ವೇಣುಗೋಪಾಲ್, ಸುರ್ಜೇವಾಲ ಒಪ್ಪುತ್ತಾರೆ. ಅಂತಿಮವಾಗಿ ಸಿದ್ದರಾಮಯ್ಯ ಗ್ಯಾರಂಟಿಗೆ ಸಹಿ ಹಾಕ್ತಾರೆ” ಎಂದು ವಿವರಿಸಿದರು. ಇದು ಮುಚ್ಚಿ…
ಮಡಿಕೇರಿ: ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಸವಾರನ ದೇಹ ಎರಡು ತುಂಡಾಗಿ ಮೃತಪಟ್ಟ ಘಟನೆ ಕುಶಾಲನಗರದ ಕೂಡ್ಲೂರು ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಗಂಗಾಧರ ಎಂದು ಗುರುತಿಸಲಾಗಿದೆ. ಈತ ಮೂಲತ ಹಾಸನ (Hassan) ಜಿಲ್ಲೆಯ ಅರಸಿಕೆರೆಯವನಾಗಿದ್ದ. ಕುಶಾಲನಗರದಲ್ಲಿ ವಿದ್ಯುತ್ ಕಂಬದ ಕೆಲಸ ಮಾಡುತ್ತಿದ್ದ. ಗುರುವಾರ ರಾತ್ರಿ ಕೆಲಸ ಮುಗಿಸಿ ವಾಪಸ್ ರೂಮಿಗೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ ಅಪಘಾತ ನಡೆದ ಮೇಲೆ ಬೈಕ್ ಸವಾರನ ಮೇಲೆ ಲಾರಿ ಹರಿದಿದೆ. ಇದರ ಪರಿಣಾಮ ಬೈಕ್ ಸವಾರನ ದೇಹ ಎರಡು ತುಂಡಾಗಿದೆ. ಘಟನೆ ಸಂಬಂಧಿಸಿದಂತೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ತುಮಕೂರು: ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಗರದ ಗ್ಲಾಸ್ ಹೌಸ್ನಲ್ಲಿ ಬಿಜೆಪಿ ಸಾಧನೆ ಹಾಗೂ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಗುತ್ತಿದ್ದು, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವ ಬಿಸಿ ನಾಗೇಶ್, ಸಂಸದ ಜಿಎಸ್ ಬಸವರಾಜು, ಶಾಸಕರಾದ ಸುರೇಶ್ ಗೌಡ, ಜ್ಯೋತಿ ಗಣೇಶ್ ಸೇರಿ ಅನೇಕರು ಭಾಗಿಯಾಗಿದ್ದಾರೆ. ಅಧಿವೇಶನಕ್ಕೂ ಮುಂಚೆ ವಿಪಕ್ಷ ನಾಯಕರನ್ನು ಆಯ್ಕೆ ಮಾಡುತ್ತೇವೆ ಎಂದು ತುಮಕೂರಿನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ನನಗೆ 81 ವರ್ಷ ಆದರೂ ನಾನು ಹೋರಾಟ ಮಾಡುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ನಾವೇ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ನನ್ನನ್ನು ಯಾರೂ ನಿರ್ಲಕ್ಷ್ಯ ಮಾಡಿಲ್ಲ ಎಂದಿದ್ದಾರೆ.
ಬೆಂಗಳೂರು: ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಷಿಯೇಷನ್ ಅವರ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿತು. ರಾಜ್ಯದಲ್ಲಿ 2863 ವೈನ್ ಅಂಗಡಿಗಳು ಹೆಚ್ಚಾಗಿದ್ದು, ಮಾರಾಟ ಕಡಿಮೆಯಾಗಿದೆ. ಡಿಸ್ಟಿಲರಿಗಳು, ಅಬಕಾರಿ, ಚಿಲ್ಲರೆ ವ್ಯಾಪಾರಿಗಳ ಮಧ್ಯೆ ಸಮನ್ವಯದ ಕೊರತೆಯಿದ್ದು, ಸಮನ್ವಯ ಸಮಿತಿ ರಚಿಸಿದರೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು. ಈ ಕುರಿತು ಬಜೆಟ್ ಅಧಿವೇಶನದ ನಂತರ ಸಭೆ ಕರೆದು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಭರವಸೆ ನೀಡಿದ ಮುಖ್ಯ ಮಂತ್ರಿಗಳು, ಸೋರಿಕೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.