ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿಯ ವಿಧಾನಸಭೆ (Assembly) ಚುನಾವಣೆಯ ಮತದಾನದ (Voting) ಪ್ರಮಾಣ ಹೆಚ್ಚಳವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಆದರೂ, ಯುವ ಜನಾಂಗ ಮತದಾನ ಕೇಂದ್ರದತ್ತ ಸುಳಿಯದೇ ಇರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಯುವಜನತೆ ಬೂತ್ ನತ್ತ ಮುಖಮಾಡಿಲ್ಲವೆಂದು ಬೆಳಗ್ಗೆಯೇ ನಟಿ ಮೇಘನಾ ರಾಜ್ ಬೇಸರ ವ್ಯಕ್ತಪಡಿಸಿದ್ದರು. ಈ ಮಾತಿನ ಬೆನ್ನಲ್ಲೇ ಹಿರಿಯ ನಟ ಅನಂತ್ ನಾಗ್ (Anant Nag) ಕೂಡ ಇದೇ ಮಾತುಗಳನ್ನು ಆಡಿದ್ದಾರೆ. ಆರ್.ಎಂ.ವಿ ಸೆಕೆಂಡ್ ಸ್ಟೇಜ್ ನಲ್ಲಿ ಮತದಾನ ಮಾಡಿ, ಮಾಧ್ಯಮಗಳೊಂದಿಗೆ ಮಾತನಾಡಿದ ಅನಂತ್ ನಾಗ್, ‘ಮತದಾರರು ಮತದಾನ (Election) ಮಾಡುವುದಕ್ಕೆ ನಿರಾಸಕ್ತಿ ತೋರಿಸುತ್ತಿದ್ದಾರೆ. ಇದು ಸರಿಯಾದದ್ದು ಅಲ್ಲ. ಅದರಲ್ಲೂ ಯುವಕ ಯುವತಿಯರು ಹೆಚ್ಚೆಚ್ಚು ಬರಬೇಕಿತ್ತು. ಅವರೂ ಕಾಣುತ್ತಿಲ್ಲ. ಹಿರಿಯ ನಾಗರೀಕರಿಗೆ ಮನೆಯಲ್ಲೇ ಮತದಾನದ ವ್ಯವಸ್ಥೆ ಮಾಡಿದಂತೆ ಅವರಿಗೆ ಮಾಡಬೇಕಿತ್ತೇನೋ’ ಎಂದು ಬೇಸರ ವ್ಯಕ್ತ ಪಡಿಸಿದರು ಅನಂತ್ ನಾಗ್. ಮುಂದುವರೆದು ಮಾತನಾಡಿದ ಅನಂತ್ ನಾಗ್, ‘ಬಹುಶಃ ಯುವಕ ಯುವತಿಯರಿಗೆ ಮತದಾನದ ಬೂತ್ ಅನ್ನು ಪಬ್…
Author: Prajatv Kannada
ಶಿವಮೊಗ್ಗ: ಗ್ರಾಮದಲ್ಲಿರುವ ಸಮಸ್ಯೆಗಳನ್ನು ಈಡೇರಿಸದ ಹಿನ್ನಲೆ ಗ್ರಾಮಸ್ಥರು ಮತದಾನ ಬಹಿಷ್ಕಾರ (Boycott) ಮಾಡಿರುವ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ (Bhadravathi) ತಾಲೂಕಿನ ಕನಸಿನಕಟ್ಟೆ (Kanasinakatte) ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿರುವ ಸ್ಮಶಾನ, ರಸ್ತೆ, ಬಸ್ ಸೌಕರ್ಯ ಹಾಗೂ ನೆಟ್‌ವರ್ಕ್ ಸಮಸ್ಯೆ ಬಗೆಹರಿಸದ ಕಾರಣ ಮತದಾನ ಬಹಿಷ್ಕರಿಸಿದ್ದಾರೆ. ಬೆಳಗ್ಗೆಯಿಂದಲೂ ಚುನಾವಣಾ ಅಧಿಕಾರಿಗಳು ಮತದಾರು ಈಗ ಬರಬಹುದು ಎಂದು ಕಾದು ಕುಳಿತಿದ್ದಾರೆ. ಕನಸಿನಕಟ್ಟೆ ಗ್ರಾಮದಲ್ಲಿ ಒಟ್ಟು 1,081 ಮತಗಳಿದ್ದು, ಇಲ್ಲಿಯವರೆಗೆ ಕೇವಲ 3 ಮಂದಿ ಮಾತ್ರ ಮತದಾನ ಮಾಡಿದ್ದಾರೆ
ಗದಗ: ಮತದಾನಕ್ಕೆ ಬಂದ ಮಹಿಳೆಗೆ ಲಾಠಿಯಿಂದ ಹೊಡೆದಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ ಸಂಖ್ಯೆ 216ರಲ್ಲಿ ನಡೆದಿದೆ. ಘಟನೆಯಿಂದ ಮತದಾನ ಸ್ಥಗಿತ ಮಾಡಿದ ಗ್ರಾಮಸ್ಥರು ಚುನಾವಣಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಲಗೇಮ್ಮ ಎಂಬ ಮಹಿಳೆಯ ಕೈಗೆ ಲಾಠಿಯಿಂದ ಹೊಡೆದಿರುವ ಆರೋಪ, ಸಿಪಿಐ ಸದಲಗಿ ಹಾಗೂ ಗ್ರಾಮಸ್ಥರು ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಘಟನೆ ನಡೆಯುತ್ತಿದ್ದಂತೆ ಲಾಠಿಯಿಂದ ಹೊಡೆದಿರುವ ಸಿಬ್ಬಂದಿ ಮೇಲೆ ಕ್ರಮ ಜರುಗಿಸುವಂತೆ ಜನರು ಒತ್ತಾಯಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ಏಕವಚನದಲ್ಲಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. Video Player 00:00 01:30 ಘಟನೆ ತಿಳಿದು ತಹಶೀಲ್ದಾರ್ ಶ್ರುತಿ ಮಳ್ಳಪ್ಪಗೌಡ ಕೂಡಲೇ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದಾರೆ. ಮತಗಟ್ಟೆಯಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಜನರು ಮತದಾನಕ್ಕೆ ಬಂದಾಗ ಘಟನೆ ನಡೆದಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದ್ದಾರೆ.
ಇಡೀ ರಾಜ್ಯವೇ ಕುತೂಹಲದಿಂದ ಎದುರು ನೋಡ್ತಿದ್ದ(Karnataka Assembly Elections 2023) ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಭರ್ಜರಿಯಾಗಿ ಸಾಗುತ್ತಿದೆ. ವಯಸ್ಸಾದವರು, ಮೊದಲ ಬಾರಿಗೆ ಮತ ಹಾಕುತ್ತಿರುವ ಯುವಕ-ಯುವತಿಯರು, ಮಂಗಳಮುಖಿಯರು, ಅಂಗವಿಕಲರು ಉತ್ಸಾಹದಿಂದ ಮತಚಲಾಯಿಸುತ್ತಿದ್ದಾರೆ. ಮತ್ತೊಂದೆಡೆ ಮೈಸೂರಿನಲ್ಲಿ ವರ-ವಧು ಕುಟುಂಬ ಸಮೇತ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ತಾಳಿಕಟ್ಟುತಿದ್ದಂತೆ ವರ ಮತ್ತು ವಧು ಸೀದಾ ಮಂಟಪದಿಂದ ಕುಟುಂಬ ಸಮೇತ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ನೆಪಗಳನ್ನು ಹೇಳಿ ಮತ ಹಾಕದೆ ಇರುವವರಿಗೆ ಮಾದರಿಯಾಗಿದ್ದಾರೆ.
ತುಮಕೂರು: ಅಪಘಾತದಲ್ಲಿ (Accident) ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಂಬುಲೆನ್ಸ್‌ನಲ್ಲಿ (Ambulence) ಬಂದು ಮತದಾನ (Voting) ಮಾಡಿದ ಘಟನೆ ತುಮಕೂರು (Tumakuru) ಜಿಲ್ಲೆಯಲ್ಲಿ ನಡೆದಿದೆ. ಸಂಪಗಿರಾಮು ಮತ ಚಲಾಯಿಸಿದ ವ್ಯಕ್ತಿ. ಇವರಿಗೆ ಅಫಘಾತವಾಗಿ ಗಂಭೀರ ಗಾಯವಾಗಿದ್ದರ ಪರಿಣಾಮ ನಾಲ್ಕು ತಿಂಗಳಿನಿಂದ ಹಾಸಿಗೆಯಲ್ಲಿಯೇ ಮಲಗಿದ್ದರು. ಇದೀಗ ಪತ್ನಿ ಜೊತೆ ಆಂಬುಲೆನ್ಸ್‌ನಲ್ಲಿ ಬಂದು ತುಮಕೂರು ನಗರದ ರೈಲ್ವೇ ಸ್ಟೇಷನ್ ರಸ್ತೆಯ ಮತಗಟ್ಟೆ ಸಂಖ್ಯೆ 148ರಲ್ಲಿ ಮತದಾನ ಮಾಡಿದ್ದಾರೆ ಚುನಾವಣಾ ಸಿಬ್ಬಂದಿಯ ಸಹಾಯದಿಂದ ಇವರು ತಮ್ಮ ಮತದಾನವನ್ನು ಮಾಡಿದ್ದಾರೆ. ಎಂತಹ ಸ್ಥಿತಿಯಲ್ಲಿದ್ದರೂ ಮತ ಚಲಾಯಿಸಬೇಕು ಎಂಬ ಇವರ ಮಾತು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.
ರಾಮನಗರ: ರಾಜ್ಯಾದ್ಯಂತ ವಿಧಾನಸಭಾ ಚುನಾವಣೆ (Assembly Election) ಹಿನ್ನೆಲೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಸ್ವಗ್ರಾಮದಲ್ಲಿ ಮತದಾನ ಮಾಡಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆಟೋ ಚಲಾಯಿಸಿ ಖುಷಿಪಟ್ಟಿದ್ದಾರೆ. ಚುನಾವಣೆ ಹಿನ್ನೆಲೆ ಡಿಕೆಶಿ ಮತದಾನ ಮಾಡಲು ಸ್ವಗ್ರಾಮವಾದ ದೊಡ್ಡಾಲನಹಳ್ಳಿಗೆ ಬಂದಿದ್ದರು. ಮತದಾನ ಮಾಡಿದ ಬಳಿಕ ಅವರು ಆಟೋ ಹತ್ತಿ ತಾವೇ ಕೆಲ ದೂರದ ವರೆಗೆ ಆಟೋವನ್ನು ಓಡಿಸಿದ್ದಾರೆ. ಸ್ವಗ್ರಾಮದಲ್ಲಿ ಆಟೋ ಓಡಿಸಿ ಡಿಕೆಶಿ ಖುಷಿ ಪಟ್ಟರೆ, ಇದೇ ವೇಳೆ ಗ್ರಾಮಸ್ಥರು ಶಿವಕುಮಾರ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು.
ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದೆ. ವೋಟ್ ಹಾಕಿ ನಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಬೇಕು ಎಂದುಕೊಂಡಿದ್ದವರಿಗೆ ಶಾಕ್ ಆಗಿದೆ. ಬೆಳ್ಳಂಬೆಳಿಗ್ಗೆ ಮತಗಟ್ಟೆಗೆ ಬಂದರೂ ಲಿಸ್ಟ್ ನಲ್ಲಿ ಮಾತ್ರ ಹೆಸರು ಇಲ್ಲ. ಚೆಕ್ ಮಾಡಿದರೇ ಡಿಲೀಟೆಡ್ ಅಂತ ತೋರಿಸುತ್ತಿದೆ. ವೋಟ್ ಹಾಕಲು ಬಂದವರೂ ಶಾಕ್ ಆಗಿರುವ ಸ್ಟೋರಿ ತೋರಿಸ್ತಿವಿ ನೋಡಿ.. ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಮತ ಕೇಂದ್ರದಲ್ಲಿ ಗೊಂದಲ ಉಂಟಾಗಿದೆ. ಹೌದು..ಒಂದೇ ಮತ ಕೇಂದ್ರದಲ್ಲಿ 400 ಕ್ಕೂ ಅಧಿಕ ಮತಗಳು ಡಿಲೀಟ್ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತಗಳೇ ಡಿಲೀಟ್ ಆಗಿದ್ದು, ಗುರುನಾಥ ನಗರದಲ್ಲಿರುವ ಪ್ರಿಯದರ್ಶಿನಿ ಕಾಲೇಜಿನ ಮತಗಟ್ಟೆಯಲ್ಲಿ ಮತಗಳೇ ಡಿಲೀಟ್ ಆಗಿದ್ದು, ಸಾರ್ವಜನಿಕರು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಇನ್ನೂ ಮತದಾರರ ಪಟ್ಟಿಯಲ್ಲಿ ಬದುಕಿದ್ದವರ ಹೆಸರೇ ಡಿಲೀಟ್ ಆಗಿದ್ದು, ಬದುಕಿದ್ದವರನ್ನೇ ಡಿಲೀಟ್ ಮಾಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಮತಗಳ ಡಿಲೀಟ್ ಆದ…
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (HD Devegowda) ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮತ ಚಲಾಯಿಸಿದರು. ರಾಜ್ಯ ರಾಜಧಾನಿ ಬೆಂಗಳೂರಿನಿಂದ (Bengaluru) ಹೆಲಿಕಾಪ್ಟರ್ ಮೂಲಕ ಬಂದ ಹೆಚ್.ಡಿ ದೇವೇಗೌಡ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಲ್ಯಾಂಡಿಂಗ್ ಆದರು. ಅದಾದ ಬಳಿಕ ಹೊಳೆನರಸೀಪುರದಿಂದ ಪಡುವಲಹಿಪ್ಪೆ ಗ್ರಾಮಕ್ಕೆ ಆಗಮಿಸಿ ಹೊಳೆನರಸೀಪುರ ಕ್ಷೇತ್ರದ ಮತಗಟ್ಟೆ ಸಂಖ್ಯೆ 251 ರಲ್ಲಿ ಹಕ್ಕು ಚಲಾವಣೆ ಮಾಡಿದರು. ಈ ವೇಳೆ ಹೆಚ್‌ಡಿ ದೇವೇಗೌಡರ ಜೊತೆಗೆ ಪತ್ನಿ ಚನ್ನಮ್ಮ ಜೊತೆಗಿದ್ದು, ಅವರು ತಮ್ಮ ಹಕ್ಕನ್ನು ಹೊಳೆನರಸೀಪುರದ ಪಡುವಲಹಿಪ್ಪೆ ಗ್ರಾಮದಲ್ಲಿ ಚಲಾಯಿಸಿದರು
ಚಿತ್ರದುರ್ಗ: ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಚಿತ್ರದುರ್ಗ ಜಿಲ್ಲೆಯಲ್ಲಿ 30 ವಿದ್ಯುನ್ಮಾನ ಮತಯಂತ್ರಗಳನ್ನು ಬದಲಾವಣೆ ಮಾಡಲಾಗಿದೆ. ಮತಯಂತ್ರಗಳಲ್ಲಿ ದೋಷ ಕಾಣಿಸಿಕೊಂಡ ಕಾರಣ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ. 30 ಯಂತ್ರಗಳಲ್ಲಿ ತಾಂತ್ರಿಕ ದೋಷ ಅಣಕು ಮತದಾನದ ವೇಳೆ 23 ಹಾಗೂ ವೋಟಿಂಗ್ ಪ್ರಕ್ರಿಯೆ ಆರಂಭವಾದ ಮೇಲೆ 7 ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಅಣಕು ಮತದಾನದ ವೇಳೆ 4 ಬ್ಯಾಲೆಟ್ ಯೂನಿಟ್, 2 ಕಂಟ್ರೋಲ್ ಯೂನಿಟ್, 17 ವಿವಿಪ್ಯಾಟ್ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಮತದಾನ ಪ್ರಕ್ರಿಯೆ ಶುರುವಾದ ಬಳಿಕ 7 ವಿವಿಪ್ಯಾಟ್ಗಳಲ್ಲಿ ದೋಷ ಕಾಣಿಸಿಕೊಂಡಿದ್ದು ಕಾಲಮಿತಿಯಲ್ಲಿ ಅದನ್ನು ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ದಿವ್ಯ ಫ್ರಭು ಮಾಹಿತಿ ನೀಡಿದ್ದಾರೆ.
ದಾವಣಗೆರೆ: ಮತದಾನಕ್ಕಾಗಿಯೇ ದೂರದ ಅಮೇರಿಕಾದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ದಾವಣಗೆರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣಕ್ಕೆ ಮತದಾನದಿಂದ ವಂಚಿತರಾಗಿದ್ದಾರೆ. ಅಮೆರಿಕಾದಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಆಗಿರುವ ರಾಘವೇಂದ್ರ ಕಮಾಲಕರ್ ಮತದಾನಕ್ಕಾಗಿಯೇ ದಾವಣಗೆರೆಗೆ ಬಂದಿದ್ದಾರೆ. ಆದರೆ, ಅವರ ಹೆಸರೇ ಮತದಾನದ ಪಟ್ಟಿಯಲ್ಲಿ ಇರಲಿಲ್ಲ. ಹೀಗಾಗಿ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಜನವರಿ ತಿಂಗಳಲ್ಲಿ ನನ್ನ ಹೆಸರು ಪಟ್ಟಿಯಲ್ಲಿತ್ತು. ನನಗೆ ಮಾಹಿತಿಯೂ ಬಂದಿತ್ತು. ವಿದ್ಯಾನಗರದ ಮಾಗನೂರು ಬಸಪ್ಪ ಶಾಲೆಯಲ್ಲಿ ನಾನು ಮತ ಚಲಾಯಿಸಲು ಬಂದಾಗ ಪಟ್ಟಿಯಲ್ಲಿ ನನ್ನ ಹೆಸರೇ ಇಲ್ಲ. ಮತದಾನ ಮಾಡಲಿಕ್ಕೆ ಆಗಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಾನು ಮತದಾನ ಮಾಡುವ ಸಲುವಾಗಿಯೇ ಅಮೇರಿಕಾದಿಂದ ಸುಮಾರು ಒಂದೂವರೆ ಲಕ್ಷ ಖರ್ಚು ಮಾಡಿಕೊಂಡು ಬಂದಿದ್ದೇನೆ ಆದರೆ ನನಗೆ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಮತದಾನ ಪ್ರತಿಯೊಬ್ಬರ ಜವಾಬ್ದಾರಿ. ಅದನ್ನರಿತು ಮತ ಚಲಾಯಿಸಲು ಬಂದಿದ್ದೆ ಆದರೆ ಮತಹಾಕಲು ಸಾಧ್ಯವಾಗಲಿಲ್ಲ ಎಂದರು.