Author: Prajatv Kannada

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ಆಟಗಾರರಾದ ರಾಹುಲ್​ ಡ್ರಾವಿಡ್​ ಅವರು ತಮ್ಮ ಹಕ್ಕನ್ನು ಚಲಾಯಿಸಿದರು. ಪ್ರಸ್ತುತ ಟೀಮ್​ ಇಂಡಿಯಾದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಮಲ್ಲೇಶ್ವರಂ ಕ್ಷೇತ್ರದ ಡಾಲರ್ಸ್ ಕಾಲೋನಿ ಮತಗಟ್ಟೆ 53ರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಇನ್ನೂ ನಟ ಉಪೇಂದ್ರ, ರಕ್ಷಿತ್​ ಶೆಟ್ಟಿ, ರಿಷಭ್​ ಶೆಟ್ಟಿ, ರಮೇಶ್​ ಅರವಿಂದ್​, ಶ್ರೀ ಮುರುಳಿ, ಅಮೂಲ್ಯ, ಮಾಲಾಶ್ರೀ, ಹರ್ಷಿಕಾ ಪೂಣಚ್ಚ, ನಟ ನೆನಪಿರಲಿ ಪ್ರೇಮ್​, ಡಾಲಿ ಧನಂಜಯ್​, ವಿಕ್ಕಿ ವರುಣ್​, ಕೃಷಿ ತಾಪಂಡ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈಗಾಗಲೇ ತಮ್ಮ ಮತವನ್ನು ಚಲಾಯಿಸಿದ್ದಾರೆ.

Read More

ಬೀದರ್ : ಮತದಾನ ಮಾಡಲು ಜನರು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಆರೋಪದ ಮಧ್ಯೆ ತಾಳಿ ಕಟ್ಟಿ ನೇರವಾಗಿ ಮದುವೆ ಡ್ರೆಸ್‌ನಲ್ಲೇ ವರ ಮತದಾನ ಕೇಂದ್ರಕ್ಕೆ ಬಂದು ತನ್ನ ಮತದಾನದ (Vote) ಹಕ್ಕು ಚಲಾಯಿಸಿದ್ದಾರೆ. ವರ ಕಾರ್ತಿಕ್‌ ಪಾಟೇಲ್‌ ಮತದಾನ ಮಾಡಿದ ವ್ಯಕ್ತಿ. ಬೀದರ್‌ನ (Bidar) ಓಲ್ಡ್ ನಾವದಗಿಯಲ್ಲಿರುವ ತಮ್ಮ ಮನೆಯಲ್ಲೇ ಮದುವೆಯಿತ್ತು. ಈ ವೇಳೆ ಕಾರ್ತಿಕ್‌ ವಧುವಿಗೆ ತಾಳಿ ಕಟ್ಟಿ ಬಳಿಕ ಕುಟುಂಬ ಸಮೇತರಾಗಿ ನೇರವಾಗಿ ಮತಗಟ್ಟೆಗೆ ಬಂದಿದ್ದಾರೆ. ನಂತರ ಮತದಾನ ಮಾಡಿದರು. ಈ ವೇಳೆ ಮಾತನಾಡಿದ ಕಾರ್ತಿಕ್‌ ಪಾಟೀಲ್‌ ಅವರು, ಇದು ಪ್ರಜಾಪ್ರಭುತ್ವದ ಹಬ್ಬ. ಹೀಗಾಗಿ ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ನಾನು ಕೂಡಾ ತಾಳಿ ಕಟ್ಟಿ ನೇರವಾಗಿ ಮತಗಟ್ಟೆ ಬಂದು ಮತದಾನ ಮಾಡಿದ್ದು ನಾವು ಅಭಿವೃದ್ಧಿಗಾಗಿ ಮತದಾನ ಮಾಡೋಣ ಎಂದು ವರ ಸಮಾಜಕ್ಕೆ ಮತದಾನ ಮಹತ್ವದ‌ ಸಂದೇಶ ನೀಡಿದರು

Read More

ಉಡುಪಿ: ಡಿವೈನ್ ಸ್ಟಾರ್, ನಟ ರಿಷಬ್ ಶೆಟ್ಟಿ (Rishabh Shetty) ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ್ದಾರೆ. ಉಡುಪಿ ಜಿಲ್ಲೆ, ಬೈಂದೂರು ತಾಲೂಕಿನ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಬಂದಿದ್ದ ರಿಷಬ್ ಶೆಟ್ಟಿ ಮತದಾನ (Voting) ಮಾಡುವ ಮೂಲಕ ಮಾದರಿಯಾಗಿದ್ದಾರೆ. ಕಾಂತಾರ-2 ಸ್ಕ್ರಿಪ್ಟ್ ವರ್ಕ್ ನಲ್ಲಿ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ, ಮತದಾನಕ್ಕೋಸ್ಕರ ಬಿಡುವು ಮಾಡಿಕೊಂಡು ಮನೆಗೆ ಆಗಮಿಸಿದ್ದರು. ಬೆಳಗ್ಗೆ 11 ಗಂಟೆಗೆ ಮತಗಟ್ಟೆಗೆ ಆಗಮಿಸಿದ ರಿಷಬ್ ಸಾರ್ವಜನಿಕರ ಜೊತೆ ಸರದಿ ಸಾಲಿನಲ್ಲಿ ನಿಂತರು. ಸುಮಾರು 20 ನಿಮಿಷಗಳ ಕಾಲ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಮತಗಟ್ಟೆ ಸಮೀಪ ಇದ್ದ ರಿಷಬ್ ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡರು. ಬೆಳಗ್ಗೆ 7 ಗಂಟೆಯಿಂದಲೇ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಶುರುವಾಗಿದ್ದು, ದಿನದ ಮೊದಲರ್ಧದಲ್ಲೇ ಸ್ಯಾಂಡಲ್ ವುಡ್ (Sandalwood) ನ ಬಹುತೇಕ ನಟ (Actor) -ನಟಿಯರು (Actress) ಹಾಗೂ ತಂತ್ರಜ್ಞರು ಮತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.…

Read More

ಮೈಸೂರು : ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, 2615 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮೈಸೂರಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಉತ್ತಮ ಪ್ರಜಾಪ್ರಭುತ್ವಕ್ಕಾಗಿ ಜನರು ಬಂದು, ಮತ ಚಲಾಯಿಸಿ ಮತ್ತು ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕೆಂದು ನಾನು ವಿನಂತಿಸುತ್ತೇನೆ. ನಾನೂ ಮತ ಹಾಕಿದ್ದೇನೆ… ನಾವು ಪ್ರಜಾಪ್ರಭುತ್ವದಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಒಟ್ಟು 5, 31,33,054 ಕೋಟಿ ಮತದಾರರಿದ್ದಾರೆ. ಈ ಪೈಕಿ 2,67,28,053 ಕೋಟಿ ಪುರುಷ ಹಾಗೂ 2,64,00,074 ಕೋಟಿ ಮಹಿಳಾ ಮತದಾರರಿದ್ದಾರೆ. ಜೊತೆಗೆ 11, 71,558 ಯುವ ಮತದಾರರು ಇದ್ದಾರೆ. ಒಟ್ಟು ಮತದಾರರ ಪೈಕಿ 4,92,85,247 ಮತದಾರರಿಗೆ ಮತದಾರರ ಚೀಟಿ ವಿತರಿಸಲಾಗಿದೆ. ರಾಜ್ಯದಲ್ಲಿ ಸಕ್ರಿಯ ಮತಗಟ್ಟೆ ಕೇಂದ್ರಗಳು- 58,282, ಹೆಚ್ಚುವರಿ ಮತಗಟ್ಟೆ ಕೇಂದ್ರಗಳು- 263 ಒಳಗೊಂಡು ಒಟ್ಟು – 58,545 ಮತಗಟ್ಟೆಗಳು ಇವೆ.

Read More

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ ಚಲಾಯಿಸಿದ್ದಾರೆ. ಸಿದ್ದರಾಮಹುಂಡಿಯಲ್ಲಿ ಮತಗಟ್ಟೆ ಸಂಖ್ಯೆ 86ರಲ್ಲಿ ಪುತ್ರ ಯತೀಂದ್ರ, ಸೊಸೆ ಸ್ಮಿತಾ ಜತೆಗೆ ತೆರಳಿ ಮತದಾನ ಮಾಡಿದ್ದಾರೆ. ಬಳಿಕ ಸಿದ್ದರಾಮನಹುಂಡಿಯಲ್ಲಿರುವ ಮನೆಯಲ್ಲಿ ಕೆಲಕಾಲ ವಿಶ್ರಾಂತಿ ಪಡೆದು, ಸಿದ್ದರಾಮೇಶ್ವರ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 130 ಸೀಟುಗಳನ್ನು ಪಡೆಯುತ್ತದೆ, ಅದು 150 ಸ್ಥಾನಗಳಿಗೆ ಏರಬಹುದು ಎಂದು ನಿರಂತರವಾಗಿ ಹೇಳುತ್ತಲೇ ಇದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ಮತದಾರರಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಶೇ.60ಕ್ಕೂ ಹೆಚ್ಚು ಮತಗಳನ್ನು ಪಡೆಯುತ್ತೇನೆ. ಕಾಂಗ್ರೆಸ್ ಸ್ವಂತ ಬಲದಿಂದ ಈ ಬಾರಿ ಸರ್ಕಾರ ರಚಿಸಲಿದೆ. ನಾನು ಯಾವುದೇ ಕಾರಣಕ್ಕೂ ರಾಜಕೀಯದಿಂದ ನಿವೃತ್ತಿ ಆಗುವುದಿಲ್ಲ. ಆದರೆ ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇದು ನನ್ನ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

Read More

ರಾಮನಗರ: ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಮತದಾನ ಮಾಡಿದರು. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸೊಸೆ ರೇವತಿ ನಿಖಿಲ್ ಜೊತೆ ಎಚ್​ಡಿಕೆ ಮತದಾನ ಮಾಡಿದರು. ಕೇತಗಾನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲಾ ಮತಗಟ್ಟೆ ಸಂಖ್ಯೆ 235ರಲ್ಲಿ ಮತ ಚಲಾಯಿಸಿದರು. ಮಾಜಿ ಸಿಎಂ ಎಚ್​ಡಿಕೆಗೆ ಮಾಗಡಿ ಶಾಸಕ ಎ.ಮಂಜುನಾಥ್ ಸಾಥ್ ನೀಡಿದರು. ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದ್ದಾರೆ. ಎ.ಮಂಜುನಾಥ್ ಆ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಶೇ. 20.94% ರಷ್ಟು ಮತದಾನ ನಡೆದಿದ್ದು ಕೇವಲ 4 ಗಂಟೆಗಳಲ್ಲಿ ಈ ಸಂಖ್ಯೆಯನ್ನು ತಲುಪಿದ್ದು ಉತ್ತಮ ಸ್ಟಾರ್ಟ್ ಆಗಿದೆ. ಬೆಂಗಳೂರು ಉತ್ತರ ಶೇ 17.50 % ಮತದಾನ ನಡೆದಿದ್ದು, ಬೆಂಗಳೂರು ದಕ್ಷಿಣ 19.18 % ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್​ನಲ್ಲಿ 19.30 % ಮತದಾನ ದಾಖಲಾಗಿದ್ದು, ಬೆಂಗಳೂರು ಗ್ರಾಮೀಣ ಭಾಗದಲ್ಲಿ 20.23 % ಮತದಾನವಾಗಿದೆ. ಬೆಂಗಳೂರು ನಗರ ಪ್ರದೇಶದಲ್ಲಿ…

Read More

ಮೈಸೂರು: ಕುಟುಂಬ ಸಮೇತ ಸಾಮಾನ್ಯರಂತೆ ಮತದಾನ ಕೇಂದ್ರಕ್ಕೆ ಬಂದ ಡಾಲಿ ಧನಂಜಯ್ (Dolly Dhananjay) ಮತದಾನ (Voting) ಮಾಡಿದ್ದಾರೆ. ಸಹೋದರಿ, ಸಹೋದರ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಅರಸಿಕೆರೆ ತಾಲ್ಲೂಕು ಕಾಳೇನಹಳ್ಳಿ ಮತದಾನ ಕೇಂದ್ರಕ್ಕೆ ಆಗಮಿಸಿದ್ದ ಧನಂಜಯ್, ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಬಿಳಿ ಶರ್ಟ್ ಹಾಗೂ ಲುಂಗಿ ಧರಿಸಿದ್ದ ಧನಂಜಯ್, ತಾವು ಕಲಿತಿದ್ದ ಶಾಲೆಯಲ್ಲೇ ಮತದಾನ ಮಾಡಿ ಸಂಭ್ರಮಿಸಿದ್ದರು. ಅದೇ ಸಮಯದಲ್ಲಿ ಆಗಮಿಸಿದ್ದ ಅಭಿಮಾನಿಗಳ ಜೊತೆ ಸೆಲ್ಫಿಗೆ ಸಹಕರಿಸಿದರು. ನೆಚ್ಚಿನ ನಟನ ಜೊತೆ ಅನೇಕರು ಫೋಟೋ ತಗೆಸಿಕೊಂಡು ಖುಷಿ ಪಟ್ಟರು. ಮತದಾನ ಎಷ್ಟು ಶ್ರೇಷ್ಠ ಎನ್ನುವ ಕುರಿತು ಡಾಲಿ ಮಾತನಾಡಿದರು. ಬೆಳಗ್ಗೆ 7 ಗಂಟೆಯಿಂದಲೇ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಶುರುವಾಗಿದ್ದು, ದಿನದ ಮೊದಲರ್ಧದಲ್ಲೇ ಸ್ಯಾಂಡಲ್ ವುಡ್ (Sandalwood) ನ ಬಹುತೇಕ ನಟ (Actor)-ನಟಿಯರು (Actress) ಹಾಗೂ ತಂತ್ರಜ್ಞರು ಮತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ. ತಮ್ಮ ಹಕ್ಕನ್ನು ಚಲಾಯಿಸುವುದರ ಜೊತೆಗೆ ಅಭಿಮಾನಿಗಳಿಗೆ ಸಂದೇಶವನ್ನೂ ಸಾರಿದ್ದಾರೆ. ನಟ ಯಶ್ ಕತ್ರಿಗುಪ್ಪೆಯಲ್ಲಿ…

Read More

ಬೆಂಗಳೂರು: ವಿವಾಹಕ್ಕೂ ಮುನ್ನ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದ ಮದುಮಗ ಬಳಿಕ ಕಲ್ಯಾಣ ಮಂಟಪಕ್ಕೆ ತೆರಳಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ಮತದಾನ ಮಾಡಿದ ಬಳಿಕ ಮದುಮಗ ಸಾಹಿಲ್ ಕಲ್ಯಾಣ ಮಂಟಪಕ್ಕೆ ತೆರಳಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜ್ಯಾದ್ಯಂತ ಮತದಾನ ಚುರುಕುಗೊಂಡಿದ್ದು, ಮತದಾರರು ಮತಗಟ್ಟೆಗಳಿಗೆ ಧಾವಿಸಿ ಉತ್ಸಾಹದಿಂದಲೇ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

Read More

ಬೆಂಗಳೂರು: ರಾಜ್ಯದಲ್ಲಿ ಇಂದು ವಿಧಾನಸಭೆಗೆ ಚುನಾವಣೆ ಭರದಿಂದ ಸಾಗುತ್ತಿದ್ದು, ಮತದಾರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಜನಸಾಮಾನ್ಯರಂತೆ ಸೆಲೆಬ್ರಿಟಿಗಳು ಮತಚಲಾಯಿಸಿದ್ದಾರೆ.ಅದರಂತೆ ಸರತಿ ಸಾಲಿನಲ್ಲಿ ನಿಂತು ಜೆಪಿ‌ ನಗರ ಸೆಂಟ್ ಪಾಲ್ ಸ್ಕೂಲ್ನಲ್ಲಿ ನಟಿ ಸಪ್ತಮಿ ಗೌಡ ಮತ ಚಲಾಯಿಸಿದ್ದಾರೆ. Video Player 00:00 00:05 ನಂತರ ಮಾತನಾಡಿದ ನಟಿ, ಮತದಾನ ನಮ್ಮ ಹಕ್ಕು ಆದರಿಂದ ಓಟರ್ ಐಡಿಯನ್ನ ಮಾಡಿಸಿಕೊಮಡ ದಯವಿಟ್ಟು ಬಂದು ಮತದಾನ ಮಾಡಿ ಎಂದು ನಟಿ ಸಪ್ತಮಿ ಗೌಡ ಕರೆ ನಿಡಿದರು.

Read More

ಬೆಂಗಳೂರು: BTL ವಿದ್ಯಾವಾಹಿನಿ ಶಾಲೆಯ ಮತಗಟ್ಟೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕ್ಯೂ ನಲ್ಲಿ ನಿಂತು ಮತ ಚಲಾವಣೆ ಮಾಡಿದ್ದಾರೆ. ಮತ ಚಲಾವಣೆ ಬಳಿಕ ನಟ/ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಹೇಳಿಕೆ ನೀಡಿದ್ದು “ದೊಡ್ಡದಾಗಿ ಕರ್ನಾಟಕದ ಹಾಗೂ ದೇಶದ ಭವಿಷ್ಯ ಅನ್ನೋದಕ್ಕಿಂತ ಸರಳವಾಗಿ ಹೇಳೋಣ, ನಮ್ಮ ಭವಿಷ್ಯ ಇದು. ಎಲ್ಲರೂ ವೋಟ್ ಮಾಡಿ. ವೋಟ್ ಮಾಡದೆ ಇರುವ 30% ಎದ್ದು ಬಂದು ವೋಟ್ ಮಾಡಿದ್ರೆ ಅದು ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆ ಆಗುತ್ತದೆ” ಎಂದಿದ್ದಾರೆ. ಬುದ್ಧಿವಂತಿಕೆಯಿಂದ ಮತ ಚಲಾಯಿಸುವಂತೆ ಕೈಸನ್ನೆ ಮೂಲಕ ಸೂಚನೆ ನೀಡಿದ್ದು ಕೆಲವೆಡೆ ವೋಟ್ ಡಿಲೇಟ್ ಆಗಿ ಕೆಲವರಿಗೆ ವೋಟ್ ಮಾಡಲು ಅವಕಾಶ ಸಿಗದೆ ಇರುವ ವಿಚಾರದ ಬಗ್ಗೆಯೂ ಅವರು “ಆ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಮತಗಟ್ಟೆ 220ರಲ್ಲಿ ಉಪೇಂದ್ರ ಮತ ಚಲಾಯಿಸಿದ್ದು ನಂತರ ಅವರೊಂದಿಗೆ ಫೋಟೊ, ಸೆಲ್ಫಿ ತೆಗೆಸಿಕೊಳ್ಳಲು ಜನ ಮುಗಿಬಿದ್ದರು.

Read More