ಭೋಪಾಲ್:- ಮಧ್ಯಪ್ರದೇಶದ ಜಬಲ್ಪುರ್ ರೈಲ್ವೆ ನಿಲ್ದಾಣದ ಹತ್ತಿರದಲ್ಲಿ ರೈಲಿನ ಎರಡು ಬೋಗಿಗಳು ಹಳಿ ತಪ್ಪಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಂದೋರ್-ಜಬಲ್ಪುರ್ ಎಕ್ಸ್ಪ್ರೆಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ್ದು ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ. ಇಂದೋರ್‌ನಿಂದ ಹೊರಟ ರೈಲು ಜಬಲ್ಪುರ್ ರೈಲ್ವೆ ನಿಲ್ದಾಣದ 6ನೇ ಪ್ಲಾಟ್‌ಫಾರಂಗೆ ಬರಬೇಕಿತ್ತು. ಪ್ಲಾಟಫಾರಂನಿಂದ ಕೇವಲ 150 ಮೀಟರ್ ದೂರ ಇರುವಾಗಲೇ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದೋರ್‌ನಿಂದ ಇಂದೋರ್-ಜಬಲ್ಪುರ್ ಎಕ್ಸ್ಪ್ರೆಸ್ ರೈಲು ಬರುತ್ತಿತ್ತು. ಅದು ಜಬಲ್ಪುರದ ರೈಲ್ವೆ ನಿಲ್ದಾಣದ 6ನೇ ಪ್ಲಾಟ್‌ಫಾರಂಗೆ ಬರಬೇಕಿತ್ತು. ಜಬಲ್ಪುರ್ ರೈಲ್ವೆ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ರೈಲಿನ ವೇಗ ಕಡಿಮೆಯಾಗಿತ್ತು. ಆ ವೇಳೆಗಾಗಲೇ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಎಲ್ಲ ಪ್ರಯಾಣಿಕರು ತಮ್ಮ ತಮ್ಮ ಮನೆಗೆ ಸುರಕ್ಷಿತವಾಗಿ ತೆರಳಿದ್ದಾರೆ ಎಂದು ಪಶ್ಚಿಮ ವಲಯದ ರೈಲ್ವೆ…
Author: Prajatv Kannada
ಹೈದರಾಬಾದ್ನಲ್ಲಿ ಮಲಯಾಳಂ ಖ್ಯಾತ ನಟ ವಿನಾಯಕನ್ ಬಂಧಿಸಲಾಗಿದೆ.ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯ ಮೇಲೆ ಹಿನ್ನೆಲೆಯಲ್ಲಿ ವಿನಾಯಕನ್ ಅವರನ್ನು ಏರ್ಪೋರ್ಟ್ ಪೊಲೀಸರು ಬಂಧಿಸಿದ್ದಾರೆ. ಗೋವಾಕ್ಕೆ ಹೋಗುತ್ತಿದ್ದ ವಿನಾಯಕನ್, ಕನೆಕ್ಟಿಂಗ್ ಫ್ಲೈಟ್ ಹತ್ತಲೆಂದು ಹೈದರಾಬಾದ್ನಲ್ಲಿ ಇಳಿದಾಗ ವಿಮಾನ ನಿಲ್ದಾಣದ ಸಿಐಎಸ್ಎಫ್ ಸಿಬ್ಬಂದಿ ಒಬ್ಬರೊಟ್ಟಿಗೆ ಜಗಳ ಮಾಡಿಕೊಂಡಿದ್ದು, ಹಲ್ಲೆ ಸಹ ಮಾಡಿದ್ದಾರೆ ಎಂದು ಏರ್ಪೋರ್ಟ್ ಭದ್ರತೆ ಸಿಬ್ಬಂದಿ ಆರೋಪ ಮಾಡಿದ್ದಾರೆ. ಆದರೆ ಮಲಯಾಳಂ ಪತ್ರಿಕೆ ಮನೋರಮಾ ಜೊತೆಗೆ ಮಾತನಾಡಿರುವ ವಿನಾಯಕನ್, ವ್ಯತಿರಿಕ್ತ ಹೇಳಿಕೆ ನೀಡಿದ್ದು, ಸಿಐಎಸ್ಎಫ್ ಸಿಬ್ಬಂದಿಯೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಳಿದ್ದಾರೆ. ಮನೋರಮಾಕ್ಕೆ ವಿನಾಯಕನ್ ನೀಡಿರುವ ಹೇಳಿಕೆಯಂತೆ, ಅವರು ಗೋವಾಕ್ಕೆ ತೆರಳುತ್ತಿದ್ದ ಹೈದರಾಬಾದ್ನಲ್ಲಿ ಇಳಿದಿದ್ದಾರೆ. ಸಿಐಎಸ್ಎಫ್ ಸಿಬ್ಬಂದಿ ಕೆಲವರು ಅವರನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಹಿಗ್ಗಾ-ಮುಗ್ಗ ಥಳಿಸಿದರಂತೆ. ಸಣ್ಣ ವಿಷಯಕ್ಕೆ ಭದ್ರತಾ ಸಿಬ್ಬಂದಿ ಜೊತೆಗೆ ವಿನಾಯಕನ್ ಜಗಳ ಮಾಡಿದ್ದಕ್ಕೆ ತಮಗೆ ಹೀಗೆ ಥಳಿಸಿದ್ದಾರೆಂದು ಅವರೇ ಹೇಳಿಕೊಂಡಿದ್ದಾರೆ. ‘ನಾನು ಯಾವುದೇ ತಪ್ಪು ಮಾಡಿಲ್ಲ ಬೇಕಿದ್ದರೆ ಸಾಕ್ಷ್ಯವಾಗಿ ಸಿಸಿಟಿವಿ ದೃಶ್ಯಗಳನ್ನು…
ಬಾಗಲಕೋಟೆ: ರಾಜ್ಯ ಸರ್ಕಾರವು ವಿದ್ಯುತ್ ಮಗ್ಗ ಮತ್ತು ಮಗ್ಗಪೂರ್ವ ಚಟುವಟಿಕೆಗಳಿಗೆ ವಿದ್ಯುತ್ ಮಿತಿ ರದ್ದು ಪಡಿಸುವುದರ ಮೂಲಕ ಗಣೇಶ ಹಬ್ಬಕ್ಕೆ ನೇಕಾರರಿಗೆ ಸಿಹಿ ಸುದ್ದಿ ಕೊಟ್ಟಿದೆ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ. ಅಭಿನಂದನಾರ್ಹ ಮಾತುಗಳನ್ನು ಹೇಳಿದ್ದಾರೆ. ಅನೇಕ ಹೋರಾಟಗಳ ಮೂಲಕ ನೇಕಾರರಿಗೆ 10.1ಹೆಚ್‍ಪಿ ಯಿಂದ 20ಹೆಚ್‍ಪಿ ವರೆಗಿನ ಘಟಕಗಳಿಗೆ 500ಯುನಿಟ್ ಉಚಿತ ಸಬ್ಸಿಡಿ ಮಿತಿಯನ್ವಯ ಜಾರಿಮಾಡಿತ್ತು. ಇದೀಗ ಗಣೇಶ ಹಬ್ಬದ ಪ್ರಯುಕ್ತ ಈ ಮಿತಿಯನ್ನು ರದ್ದುಪಡಿಸಲಾಗಿದೆ ಎಂದರು. ಪ್ರಕಾಶ ಕುಂಬಾರ ಬಾಗಲಕೋಟೆ
ಶಿವಮೊಗ್ಗ:- ಜಿಲ್ಲೆ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್‌ನಲ್ಲಿ ಗಣಪತಿ ಪ್ರತಿಷ್ಠಾಪನೆ ವೇಳೆಯೇ ಗಲಾಟೆ ನಡೆದಿದೆ. ಡೊಳ್ಳು ಬಾರಿಸಲು ಎರಡು ಸಮುದಾಯದವರು ಒಂದೇ ತಂಡಕ್ಕೆ ಡೊಳ್ಳು ಬಾರಿಸಲು ಆರ್ಡರ್ ಕೊಟ್ಟಿದ್ದರು. ಆದರೆ ಎರಡು ಸಮುದಾಯದವರು ಒಂದೇ ಸಮಯದಲ್ಲಿ ಗಣಪತಿ ತರುತ್ತಿದ್ದರು. ಈ ವೇಳೆ ನಮ್ಮ ಸಮುದಾಯದ ಗಣಪತಿ ಮೆರವಣಿಗೆಗೆ ಡೊಳ್ಳು ಬಾರಿಸುವವರು ಹಣ ಪಡೆದು ಬಂದಿಲ್ಲ ಎಂದು ಗಲಾಟೆ ನಡೆದಿದೆ. ಡೊಳ್ಳುನವರ ಮೇಲೆ ಕಲ್ಲು ತೂರಾಟ ನಡೆಸಿ, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮೆರವಣಿಗೆಯಲ್ಲಿದ್ದ ಗ್ರಾಮಸ್ಥರಿಗೂ ಗಾಯವಾಗಿದೆ. ಇದಕ್ಕೆ ಪ್ರತಿಯಾಗಿ ಇನ್ನೊಂದು ಗುಂಪಿನವರು ಕಲ್ಲು ತೂರಾಟ ನಡೆಸಿದ್ದಾರೆ. ಗಲಾಟೆ ನಡೆಯುತ್ತಿದ್ದ ವೇಳೆ ಸ್ಥಳದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ. ಘಟನೆಯಲ್ಲಿ ಪೊಲೀಸರು ಸೇರಿದಂತೆ 8-10 ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗೆ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಘಟನೆ ನಂತರ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಎಲ್ಲಾ ಗಣೇಶ…
ಚಾಮರಾಜನಗರ:- ಗಡಿಜಿಲ್ಲೆ ಚಾಮರಾಜನಗರದಲ್ಲಿ ಹಿಂದೂಪರ ಸಂಘಟನೆಗಳು ಈ ಬಾರಿ ಅಯೋಧ್ಯೆ ರಾಮನ ಅವತಾರದ ಗಣಪತಿಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಗಡಿಜಿಲ್ಲೆ ಚಾಮರಾಜನಗರದಲ್ಲಿ ಹಿಂದೂಪರ ಸಂಘಟನೆಗಳು ಈ ಬಾರಿ ಅಯೋಧ್ಯೆ ರಾಮನ ಅವತಾರದ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಇದಕ್ಕೂ ಮುನ್ನ ಮಂಗಳವಾದ್ಯದಲ್ಲಿ ಗಣೇಶಮೂರ್ತಿಯನ್ನು ಮೆರವಣಿಗೆಯಲ್ಲಿ ತರಲಾಯಿತು. ಹೆಚ್ಚು ಪೊಲೀಸ್ ಬಂದೋಬಸ್ತ್ ಇರುವುದರಿಂದ ಇದು ಪೊಲೀಸ್ ಗಣಪತಿ ಅಂಥಲೂ, ದೊಡ್ಡ ಗಣಪತಿ, ಆರ್‌ಎಸ್‌ಎಸ್ ಗಣಪತಿ ಅಂಥಲೂ ಈ ಗಣೇಶ ಜನಪ್ರಿಯತೆ ಗಳಿಸಿದೆ. ಇನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಪ್ರತಿಷ್ಠಾಪನೆ ವೇಳೆ ಹಾಜರಿದ್ದು, ಪೂಜೆಯಲ್ಲಿ ಪಾಲ್ಗೊಂಡು ಮೊದಲ ಪೂಜೆ ಮಾಡಿ ಗಮನ ಸೆಳೆದರು. ಈ ಬಾರಿಯೂ ಕೂಡ ಹಿಂದೂಪರ ಮುಖಂಡರು 27 ದಿನಗಳ ಕಾಲ ಪೂಜೆ, 7 ದಿನ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಲು ತಯಾರಿ ಮಾಡಿಕೊಂಡಿದ್ದಾರೆ. ಕಳೆದ 62 ವರ್ಷಗಳಿಂದ ವಿಜೃಂಭಣೆಯಿಂದ, ಸೌಹಾರ್ದತೆಯಿಂದ ಗಣೇಶ ಹಬ್ಬ ನಡೆದುಕೊಂಡು ಬಂದಿದ್ದು, ಈ ಬಾರಿಯೂ ಕೂಡ ಅದ್ಧೂರಿಯಾಗಿ ಮತ್ತು ಸೌಹಾರ್ದತೆಯಿಂದ ಕೂಡಿರಲಿ ಎಂದು ಡಿಸಿ ಶಿಲ್ಪಾನಾಗ್ ಹೇಳಿದರು. ಪ್ರತಿ ವರ್ಷ…
ಮಂಡ್ಯ:- ಮಂಡ್ಯ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಬಂಧಿಸಲಾಗಿದೆ. ಬಂಧಿತರನ್ನು ರಾಮಕೃಷ್ಣ, ಗುರು, ಸೋಮಶೇಖರ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ 12 ಜನರನ್ನ ಬಂಧಿಸಲಾಗಿದೆ. ಇದೀಗ ಮತ್ತೆ ಮೂವರು ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಆರೇಳು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮೇಲುಕೋಟೆ, ನಂಜನಗೂಡು, ಪಾಂಡವಪುರ, ಬೆಳ್ಳೂರು ಠಾಣೆಗಳಲ್ಲಿ ಪ್ರಕರಣ ಸಂಬಂಧ ಪ್ರಕರಣಗಳು ದಾಖಲಾಗಿದ್ದು ಮಂಡ್ಯ ಪೊಲೀಸರು ಮತ್ತಷ್ಟು ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದ ಹೆಣ್ಣುಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಹಣದಾಸೆಗೆ ಕರುಳಬಳ್ಳಿಗಳನ್ನ ಕೊಲ್ಲುವಂತಹ ಹೇಯ ಕೃತ್ಯವನ್ನ ಪಾಪಿಗಳು ಎಸುಗುತ್ತಿದ್ದರು. ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಏನೆಲ್ಲ ಕ್ರಮಗಳನ್ನ ತೆಗೆದುಕೊಂಡರು ಸಕ್ಕರಿನಗರಿಯಲ್ಲಿ ಇಂತಹ ಹೇಯಕೃತ್ಯ ನಿರಂತರವಾಗಿ ನಡೆಯುತ್ತಿತ್ತು. ಅದರಲ್ಲೂ ತಮ್ಮದೇ ಆದ ನೆಟ್ ವರ್ಕ್ ಮಾಡಿಕೊಂಡು ಕರಾಳದಂಧೆಯ್ನ ಪಾಪಿಗಳು ನಡೆಸುತ್ತಿದ್ದರು. ಇನ್ನು ಇಂತಹ ಹಲವು ಪ್ರಕರಣಗಳಲ್ಲಿ…
ಬೆಳಗಾವಿ:- ಬೆಳಗಾವಿಯಲ್ಲಿ ಮಹಿಳೆಯರ ನಗ್ನ ವಿಡಿಯೋ ಸೆರೆ ಹಿಡಿದು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದವರ ಮೇಲೆ FIR ದಾಖಲಾಗಿದೆ. ಬೆಳಗಾವಿ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾತನಾಡಿ, ಹೊಸ ಮಾದರಿಯ ಸೈಬರ್ ಕ್ರೈಮ್ ಬೆಳಕಿಗೆ ಬಂದಿದೆ. ಮಹಿಳೆಯರಿಗೆ ಮೇಲ್, ಮೆಸೇಜ್, ಕರೆ ಅಥವಾ ವಾಟ್ಸಪ್ ಮೂಲಕ ಒಂದು ಸಂದೇಶ ಬರುತ್ತೆ. ಕ್ರೈಮ್ ಬ್ರ್ಯಾಂಚ್ದಿಂದ ಕರೆ ಮಾಡಿದ್ದೇವೆ ಎಂದು ಹೇಳುತ್ತಾರೆ. ಒಂದು ಅಪರಾಧ ಪ್ರಕರಣದಲ್ಲಿ ನಿಮ್ಮ ಹೆಸರು ತಳಕು ಹಾಕಿಕೊಂಡಿದೆ ಎಂದು ಹೆದರಿಸುತ್ತಾರೆ. ಹೀಗಾಗಿ, ನೀವು ನಮ್ಮ ಹತ್ತಿರ ಬಂದು, ಯಾಕೆ ಈ ರೀತಿ ಮಾಡಿದೀರಿ ಅಂತ ವಿವರಣೆ ನೀಡಬೇಕೆಂದು ಹೆದರಿಸುತ್ತಾರೆ. ನಾವೀಗ ನಿಮ್ಮನ್ನು ವಿಚಾರಣೆ ಮಾಡಬೇಕು ಕ್ಯಾಮೆರಾ ಮುಂದೆ ಬನ್ನಿ ಎಂದು ಹೇಳುತ್ತಾರೆ. ಒಂದು ವೇಳೆ ನೀವು ಈ ವಿಚಾರ ಹೊರಗಡೆ ಗೊತ್ತಾದರೆ ನಿಮ್ಮ ಅಪರಾಧದ ಬಗ್ಗೆ ನಿಮ್ಮ ಕುಟುಂಬದವರಿಗೆ ಹೇಳುತ್ತೇವೆ ಅಂತ ಹೆದರಿಸುತ್ತಾರೆ. ಹೇಗೆ ಅಪರಾಧ ಕೃತ್ಯ…
1999ರಲ್ಲಿ ನಡೆದ ಭಾರತದ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೇನೆಯು ತನ್ನ ಪಾತ್ರವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದೆ. ಪಾಕಿಸ್ತಾನದ ರಕ್ಷಣಾ ದಿನದ ಅಂಗವಾಗಿ ರಾವಲ್ಪಿಂಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್, 1965, 1971 ಮತ್ತು 1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಅನೇಕ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥರು, 1948, 1965, 1971 ಅಥವಾ 1999ರ ಕಾರ್ಗಿಲ್ ಯುದ್ಧವಿರಲಿ, ಪಾಕಿಸ್ತಾನ ಮತ್ತು ಇಸ್ಲಾಂ ಧರ್ಮಕ್ಕಾಗಿ ಸಾವಿರಾರು ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೇನೆಯು ತನ್ನ ನೇರ ಪಾತ್ರವನ್ನು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಇದು ‘ಮುಜಾಯಿದ್ದೀನ್’ಗಳ ಕೆಲಸ ಎಂದು ಯಾವಾಗಲೂ ಅಧಿಕೃತವಾಗಿ ಹೇಳಿಕೊಂಡಿದೆ. 1999ರ ಯುದ್ಧದಲ್ಲಿ ಪಾಕಿಸ್ತಾನ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಲಡಾಖ್‌ನಲ್ಲಿ ಸುಮಾರು ಮೂರು ತಿಂಗಳ ಹೋರಾಟದ ನಂತರ ಟೈಗರ್ ಹಿಲ್ ಸೇರಿದಂತೆ ಕಾರ್ಗಿಲ್ ಸೆಕ್ಟರ್‌ನಲ್ಲಿ ಎಲ್‌ಒಸಿಯ ಭಾರತದ ಭಾಗದಲ್ಲಿ ನುಸುಳುಕೋರರು ವಶಪಡಿಸಿಕೊಂಡ…
ಅಮೆರಿಕದ ಕೆಂಟುಕಿಯ ಲಾರೆಲ್ ಕೌಂಟಿಯ ಅಂತರರಾಜ್ಯ 75 ಬಳಿ ಹಲವಾರು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಲಾರೆಲ್ ಕೌಂಟಿ ಶೆರಿಫ್ ಕಚೇರಿಯನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ ಕೆಂಟುಕಿ ರಾಜ್ಯ ಪೊಲೀಸ್ ಟ್ರೂಪರ್ ಸ್ಕಾಟಿ ಪೆನ್ನಿಂಗ್ಟನ್ ಜನರನ್ನು ತಮ್ಮ ಮನೆಗಳಿಂದ ಹೊರ ಬರದಂತೆ ಸೂಚನೆ ನೀಡಿದ್ದಾರೆ. “ಸಕ್ರಿಯ ಶೂಟರ್ ಪರಿಸ್ಥಿತಿಯಿಂದಾಗಿ ಐ -75 ಅನ್ನು ಮೈಲ್ ಮಾರ್ಕರ್ / ಎಕ್ಸಿಟ್ 49 ಮತ್ತು ಯುಎಸ್ 25 ಲಂಡನ್ನ ಉತ್ತರಕ್ಕೆ ಒಂಬತ್ತು ಮೈಲಿ ದೂರದಲ್ಲಿ ಮುಚ್ಚಲಾಗಿದೆ” ಎಂದು ಶೆರಿಫ್ ಕಚೇರಿ ಫೇಸ್ಬುಕ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿದೆ. “ಐ -75 ಬಳಿ ಹಲವಾರು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೆಂಟುಕಿ ರಾಜ್ಯ ಪೊಲೀಸ್ ಟ್ರೂಪರ್ ಸ್ಕಾಟಿ ಪೆನ್ನಿಂಗ್ಟನ್ ಸಾಮಾಜಿಕ ಮಾಧ್ಯಮದ ಮೂಲಕ ಶಂಕಿತನನ್ನು “ಈ ಸಮಯದಲ್ಲಿ ಹಿಡಿಯಲಾಗಿಲ್ಲ” ಎಂದು ಹೇಳಿದರು. ನಾವು ಜನರನ್ನು ಮೆನ ಒಳಗೆ ಇರುವಂತೆ ಒತ್ತಾಯಿಸುತ್ತಿದ್ದೇವೆ. ಕಾನೂನು ಜಾರಿಯು “ಲಭ್ಯವಿರುವಷ್ಟು ಮಾಹಿತಿಯನ್ನು” ಒದಗಿಸುತ್ತದೆ ಎಂದು ಅವರು ಹೇಳಿದರು. ಕೆಂಟುಕಿ ಗವರ್ನರ್…
ಉಕ್ರೇನ್-ರಷ್ಯಾ ಸಂಘರ್ಷವನ್ನು ಭಾರತ ಕೊನೆಗೊಳಿಸಬಹುದು ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉಕ್ರೇನ್‌ನಲ್ಲಿನ ಸಂಘರ್ಷವನ್ನು ಪರಿಹರಿಸುವಲ್ಲಿ ಭಾರತ ಮತ್ತು ಚೀನಾದಂತಹ ದೇಶಗಳು ಪ್ರಮುಖ ಪಾತ್ರ ವಹಿಸಬಹುದು ಎಂದಿದ್ದಾರೆ. ಉತ್ತರ ಇಟಲಿಯ ಸೆರ್ನೊಬಿಯೊ ನಗರದ ಅಂಬ್ರೊಸೆಟ್ಟಿ ಫೋರಮ್‌ನಲ್ಲಿ ಮೆಲೋನಿ ಈ ಹೇಳಿಕೆಯನ್ನು ನೀಡಿದ್ದಾರೆ. ಅವರು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸಭೆ ನಡೆಸಿದರು. ಇದಕ್ಕೂ ಮುನ್ನ, ಈ ಪ್ರದೇಶದಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಭಾರತದ ಪ್ರಯತ್ನಗಳ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಪ್ರತಿಕ್ರಿಯಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ರಷ್ಯಾ ಮತ್ತು ಉಕ್ರೇನ್ ಪ್ರವಾಸದ ನಂತರ ಇದೀಗ ಇಡೀ ವಿಶ್ವದ ಕಣ್ಣು ಭಾರತ ಹಾಗೂ ಪ್ರಧಾನಿ ಮೋದಿಯತ್ತ ನೆಟ್ಟಿದೆ. ಈ ಯುದ್ಧವು ಕೊನೆಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ನಿನ್ನೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಈ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸುವ ದೇಶಗಳ ಬಗ್ಗೆ ಮಾತನಾಡಿದ್ದರು. ಪುಟಿನ್ ಭಾರತ ಮಾತ್ರವಲ್ಲದೆ ಚೀನಾ ಮತ್ತು ಬ್ರೆಜಿಲ್ ಕೂಡ ಮಧ್ಯಸ್ಥಿಕೆ ವಹಿಸುವಂತೆ…