ವಾಷಿಂಗ್ಟನ್: ಮುಳುಗಡೆಗೊಂಡಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಸಣ್ಣ ಜಲಾಂತರ್ಗಾಮಿ ಹಡಲು ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದ್ದು, ಟೈಟಾನಿಕ್ ಸಬ್ಮೆರಿನ್ ಕಣ್ಮರೆಯಾಗಿರುವುದನ್ನು ಸ್ಕೈ ನ್ಯೂಸ್ ದೃಢಪಡಿಸಿದೆ. ಘಟನೆಯ ಕುರಿತು ಮಾಹಿತಿ ನೀಡಿರುವ ಅಮೆರಿಕದ ಕರಾವಳಿ ಕಾವಲು ಪಡೆ, ಸಣ್ಣ ಜಲಾಂತರ್ಗಾಮಿ ಹಡಗು ಒಂದು ಬಾರಿ 5 ಜನರನ್ನು ಹೊತ್ತೊಯ್ಯಬಹುದು ಎನ್ನಲಾಗಿದ್ದು ಟೈಟಾನಿಕ್ ಹಡಗು ದುರಂತದ ಅವಶೇಷಗಳನ್ನು ವೀಕ್ಷಿಸುವ ಪೂರ್ಣ ಡೈವ್ ಸುಮಾರು 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ನಾಪತ್ತೆಯಾಗಿರುವ ಜಲಾಂತರ್ಗಾಮಿ ಹಡಗಿನಲ್ಲಿ ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ಕಂಪನಿಗೆ ಸೇರಿದ್ದಾಗಿದ್ದು, ಅದರಲ್ಲಿ ಎಷ್ಟು ಜನರಿದ್ದರು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಸಿಬ್ಬಂದಿ ಸೇರಿ ಅದರಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. 1912ರಲ್ಲಿ ದೈತ್ಯ ಟೈಟಾನಿಕ್ ಹಡಗು ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಡಗಿನ ಅವಶೇಷವನ್ನು 1985ರಲ್ಲಿ ಕಂಡುಹಿಡಿಯಲಾಯಿತು. ಏಪ್ರಿಲ್…
Author: Prajatv Kannada
ಚಂಡೀಗಢ: ಕಳ್ಳರನ್ನು (Theif) ಪತ್ತೆಹಚ್ಚುವ ಸಲುವಾಗಿ ಪೊಲಿಸರು ಹಲವಾರು ಬಗೆಯ ಟ್ರಿಕ್ಸ್‌ಗಳನ್ನು ಬಳಸುವುದು ನೀವು ನೋಡಿರಬಹುದು. ಆದರೆ ಪಂಜಾಬ್‌ನಲ್ಲಿ (Punjab) 8 ಕೋಟಿ 49 ಲಕ್ಷ ರೂ. ಕದ್ದ ಕಳ್ಳರನ್ನು ಪತ್ತೆಹಚ್ಚುವಲ್ಲಿ ಪೊಲೀಸರಿಗೆ 10 ರೂ. ಜ್ಯೂಸ್ (Juice) ಸಹಾಯ ಮಾಡಿದೆ. ಜೂನ್ 10ರಂದು ಪಂಜಾಬ್‌ನ ಲೂಧಿಯಾನದಲ್ಲಿ (Ludhiana) 8 ಕೋಟಿ 49 ಲಕ್ಷ ರೂ. ದರೋಡೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೂಸ್‌ನ ಸಹಾಯದಿಂದ ಪೊಲೀಸರು ‘ಡಾಕು ಹಸೀನ’ ಎಂದು ಕರೆಯಲ್ಪಡುವ ಮನ್ದೀಪ್ ಕೌರ್ ಎಂಬಾಕೆ ಮತ್ತು ಆಕೆಯ ಪತಿ ಜಸ್ವಿಂದರ್ ಸಿಂಗ್‌ನನ್ನು ಉತ್ತರಾಖಂಡದ ಚಮೋಲಿಯ ಹೇಮಕುಂಡ್ ಸಾಹಿಬ್‌ನಲ್ಲಿ ಬಂಧಿಸಿದ್ದಾರೆ. ದಂಪತಿಯ ಹೊರತಾಗಿ ಪಂಜಾಬ್‌ನ ಗಿಡ್ಡರ್ ಬಾಹಾದಿಂದ ಗೌರವ್ ಎಂಬ ಆರೋಪಿಯನ್ನು ಸಹಾ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಕುರಿತು ಇದುವರೆಗೆ 12 ಮಂದಿ ಆರೋಪಿಗಳ ಪೈಕಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಿದ ಆರೋಪಿ ದಂಪತಿ ತಮ್ಮ ಕೆಲಸ ಯಶಸ್ವಿಯಾಗಿ ನಡೆದುದ್ದಕ್ಕಾಗಿ ದೇವರಿಗೆ ಕೈಮುಗಿಯಲು ಸಿಖ್ ದೇಗುಲಕ್ಕೆ ತೆರಳಿದ್ದ…
ಭೋಪಾಲ್: ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಆಕೆಯ ಪೋಷಕರೇ ಹತ್ಯೆ ಮಾಡಿ ಮೊಸಳೆಗಳಿಗೆ (Crocodile) ಎಸೆದ ಘಟನೆ ಮಧ್ಯಪ್ರದೇಶದ (Madhya Pradesh) ಮೊರೆನಾದಲ್ಲಿ ನಡೆದಿದೆ. ಆರೋಪಿಗಳು ಹೇಳಿದ ಚಂಬಲ್ ನದಿಯ (Chambal River) ಪ್ರದೇಶದಲ್ಲಿ ಹುಡುಕಾಟ ನಡೆಯುತ್ತಿದ್ದು ಇಲ್ಲಿಯವರೆಗೂ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಘಟನೆ ಎರಡು ವಾರಗಳ ಹಿಂದೆ ನಡೆದಿದ್ದು, ಕೆಲವು ಸಂಬಂಧಿಕರ ಜೊತೆ ಸೇರಿ ಆರೋಪಿಗಳು ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಬಳಿಕ ನದಿಯಲ್ಲಿ ಮುಳುಗಿಸಿದ್ದಾರೆ. ಪ್ರಕರಣದಲ್ಲಿ ಮರ್ಯಾದ ಹತ್ಯೆಯ (Honour Killing) ಶಂಕೆ ವ್ಯಕ್ತವಾಗಿದೆ ಎಂದು ಮೊರೆನಾ ಎಸ್‍ಪಿ ಶೈಲೇಂದ್ರ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ರತನ್‍ಬಸಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಶಿವಾನಿ (18) ಪಕ್ಕದ ಗ್ರಾಮದ ಬಲುಪುರ ನಿವಾಸಿ ರಾಧೇಶ್ಯಾಮ್ ತೋಮರ್ (21) ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಜಾತಿ ಸಮಸ್ಯೆಗಳಿಂದ ಯುವತಿ ಕುಟುಂಬದ ವಿರೋಧವಿತ್ತು ಎನ್ನಲಾಗಿದೆ. ಜೂನ್ 3 ರಿಂದ ಹುಡುಗ ಮತ್ತು ಹುಡುಗಿ ಇಬ್ಬರೂ ನಾಪತ್ತೆಯಾಗಿದ್ದರು. ರಾಧೇಶ್ಯಾಮ್ ತೋಮರ್ ಅವರ…
ನವದೆಹಲಿ: ಒಡಿಶಾ ರೈಲು ದುರಂತದ (Odisha Train Tragedy) ತನಿಖೆ ಚುರುಕುಗೊಂಡಿದ್ದು ಕೇಂದ್ರೀಯ ತನಿಖಾ ದಳದ (CBI) ವಿಚಾರಣೆಯ ಎದುರಿಸಿದ್ದ ಜ್ಯೂನಿಯರ್ ಎಂಜಿನಿಯರ್ (Signal Junior Engineer) ಕುಟುಂಬದೊಂದಿಗೆ ನಾಪತ್ತೆಯಾಗಿದ್ದಾರೆ. ಸೊರೋ ಸೆಕ್ಷನ್ ಸಿಗ್ನಲ್ ಆಫೀಸರ್ ಅಮೀರ್ ಖಾನ್ (Amir Khan) ಅವರನ್ನು ಈ ಹಿಂದೆ ಸಿಬಿಐ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿತ್ತು. ಮತ್ತಷ್ಟು ವಿಚಾರಣೆ ನಡೆಸಲು ಸೋಮವಾರ ಸಿಬಿಐ ಅಧಿಕಾರಿಗಳು ಅಮೀರ್ ಖಾನ್ ಮನೆಗೆ ತೆರಳಿದ್ದಾಗ ಮನೆಯಲ್ಲಿ ಯಾರೂ ಇರಲಿಲ್ಲ ಮತ್ತು ಬೀಗ ಜಡಿಯಲಾಗಿತ್ತು. ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸಿಬಿಐ ಈಗ ಅಮೀರ್ ನೆಲೆಸಿದ್ದ ಬಾಡಿಗೆ ಮನೆಯನ್ನು ಸೀಲ್ ಮಾಡಿದೆ. ಅಷ್ಟೇ ಅಲ್ಲದೇ ಮನೆಯ ಮೇಲೆ ನಿಗಾ ಇಡಲು ಇಬ್ಬರು ಅಧಿಕಾರಿಗಳನ್ನು ನಿಯೋಜಿಸಿದೆ. ಬಾಲಾಸೋರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಆಧಾರದಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ. ಕೆಲ ದಿನಗಳ ಹಿಂದೆ ಬಹನಾಗಾ ರೈಲ್ವೆ ನಿಲ್ದಾಣ, ಅಲ್ಲಿನ ಪ್ಯಾನಲ್ ರೂಂ, ರೆಕಾರ್ಡ್ ರೂಂ, ರಿಲೇ ರೂಂ ಪರಿಶೀಲನೆ ನಡೆಸಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ…
ಬೆಂಗಳೂರು ;- ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸುತ್ತಿರುವ ಕೇಂದ್ರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರಕ್ಕೆ ಹೃದಯ, ಕಣ್ಣು, ಕಿವಿ ಏನು ಇಲ್ಲ. ಬಿಜೆಪಿ ನಾಯಕರು ಎಲೆಕ್ಷನ್ ಬಂದಾಗ ಜನರ ಹತ್ತಿರ ಬರುತ್ತಾರೆ. ಆದರೆ, ಇವತ್ತು ಬಡವರಿಗೆ ನೀಡಬೇಕಾದ ಅಕ್ಕಿಯನ್ನು ತಡೆ ಹಿಡಿದಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ. ಕೇಂದ್ರಕ್ಕೆ ಬಿಸಿ ಮುಟ್ಟುತ್ತೊ ಇಲ್ವೊ, ಆಮೇಲೆ ನೋಡೋಣ. ಮೊದಲು 25 ಜನ ಸಂಸದರು ಕಣ್ಣು ತೆಗೆಯಲಿ ಎಂದು ಹೆಬ್ಬಾಳ್ಕರ್ ವಾಗ್ಧಾಳಿ ನಡೆಸಿದ್ದಾರೆ. ಇನ್ನೂ ಅಕ್ಕಿ ಪೂರೈಕೆ ವಿಚಾರ ತಾರಕಕ್ಕೇರಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಇಂದು ತೀವ್ರ ಪ್ರತಿಭಟನೆ ನಡೆಸಿದೆ.
ಬೆಂಗಳೂರು : ಮೇ- ಜೂನ್ ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ (2nd PUC Supplementary Result) ಪ್ರಕಟಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಫಲಿತಾಂಶ ಪ್ರಕಟಗೊಂಡಿದೆ. ಮುಖ್ಯ ಪರೀಕ್ಷೆಯಂತೆ ಪೂರಕ ಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಇಲಾಖೆ ವೆಬ್ ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದೆ. ಪೂರಕ ಪರೀಕ್ಷೆಯಲ್ಲಿ 1,57,756 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 50,478 ವಿದ್ಯಾರ್ಥಿಗಳು ಪಾಸ್ ಆಗಿದ್ದು, ರಾಜ್ಯದಲ್ಲಿ 32% ಫಲಿತಾಂಶ ದಾಖಲಾಗಿದೆ. ಪರೀಕ್ಷೆ ಬರೆದವರ ಪೈಕಿ 28,901 ಬಾಲಕರು (30.22%) ಹಾಗೂ 21,577 ಬಾಲಕಿಯರು (34.75%) ತೇರ್ಗಡೆಯಾಗಿದ್ದಾರೆ. ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪಡೆಯಲು ಜೂನ್ 26 ಕೊನೆ ದಿನವಾಗಿದೆ. ಮರು ಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಕೆಗೆ ಜೂನ್ 30 ಕೊನೆಯ ದಿನವಾಗಿದೆ.
ರಾಯ್ಪುರ: ವಾಹನ ಚಲಾಯಿಸುವಾಗ ಫೋನ್ ಬಳಕೆ ಮಾಡಬಾರದು ಎಂಬ ಅರಿವಿದ್ದರೂ ಇಲ್ಲೊಬ್ಬ ಚಾಲಕ ಫೋನ್ ನಲ್ಲಿ ಮಾತನಾಡುತ್ತಾ ಬಸ್ ಓಡಿಸಿದ್ದಾನೆ. ಪರಿಣಾಮ 26 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಘಟನೆ ಛತ್ತೀಸ್‍ಗಢ (Chhattisgarh) ದ ಘರ್ಘೋಡಾ (Gharghoda Area) ಪ್ರದೇಶದಲ್ಲಿ ನಡೆದಿದೆ. ಚಾಲಕ ಫೋನಿನಲ್ಲಿ ಮಾತನಾಡುತ್ತಾ ಚಾಲನೆ ಮಾಡಿದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ರೈಲ್ವೇ ಬ್ರಿಡ್ಜ್ (Railway Bridge) ಗೆ ಗುದ್ದಿದೆ. ಪರಿಣಾಮ 26 ಮಂದಿ ಗಾಯಗೊಂಡಿದ್ದು, ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ತನಿಖೆ ನಡೆಸಿದಾಗ ಚಾಲಕ ಫೋನ್ (Phone) ಬಳಕೆ ಮಾಡಿರುವುದು ಬಯಲಾಗಿದೆ. ಫೋನ್ ಬಳಕೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದಾಗಿ ತಿಳಿದುಬಂದಿದೆ. ಸದ್ಯ ಗಾಯಾಳುಗಳನ್ನು ರಾಯ್‍ಗಢದ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಸ್‍ಡಿಪಿಓ ದೀಪಕ್ ಮಿಶ್ರಾ ತಿಳಿಸಿದ್ದಾರೆ.
ಲಕ್ನೋ: ರಣ ಬಿಸಿಲಿನ ತಾಪದಿಂದ (High Temperature) ಬಳಲುತ್ತಿರುವ ಉತ್ತರ ಪ್ರದೇಶದಲ್ಲಿ (Uttar Pradesh) ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ (Mansukh Mandaviya) ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ರಾಜ್ಯವು ಶಾಖದ ಅಲೆಗೆ ನಲುಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಹೌದು. ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಖದ ಅಲೆಗೆ ಸಾವು ನೋವುಗಳು ವರದಿಯಾಗಿವೆ. UP ನಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ 54 ಮಂದಿ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ. ಹಠಾತ್ ಸಾವುಗಳು, ಜ್ವರ, ಉಸಿರಾಟದ ತೊಂದರೆ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳು ಭರ್ತಿಯಾಗುತ್ತಿವೆ. ಬಿಹಾರದಲ್ಲೂ 44 ಮಂದಿ ಸಾವನ್ನಪ್ಪಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಏಪ್ರಿಲ್‌ನಿಂದ ಜೂನ್‌ವರೆಗೆ…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಮೊದಲ ಈಜಿಪ್ಟ್ ಪ್ರವಾಸದಲ್ಲಿ 11ನೇ ಶತಮಾನದಲ್ಲಿ ನಿರ್ಮಾಣವಾದ ಅಲ್-ಹಕೀಮ್ ಮಸೀದಿಗೆ (Al-Hakim Mosque) ಭೇಟಿ ನೀಡಲಿದ್ದಾರೆ. ಮತ್ತು ಮೊದಲ ವಿಶ್ವ ಯುದ್ಧದ ಅವಧಿಯಲ್ಲಿ ಈಜಿಪ್ಟ್‌ಗಾಗಿ ಹೋರಾಡಿ ಮಡಿದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ (Vinay Mohan Kwatra) ಸೋಮವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕ, ಈಜಿಪ್ಟ್ ಪ್ರವಾಸ (USA, Egypt Tour) ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಜೂನ್ 24 ಮತ್ತು 25 ರಂದು ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ. ಇದು ಈಜಿಪ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೇಟಿಯಾಗಿದ್ದು, 1997ರ ಬಳಿಕ ಈಜಿಪ್ಟ್‌ಗೆ ತೆರಳಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿರುವ ಮೊದಲ ಪ್ರಧಾನಿಯೂ ಆಗಿದ್ದಾರೆ ಎಂದರು. ಈ ವರ್ಷದ ಗಣರಾಜೋತ್ಸವದಲ್ಲಿ ಈಜಿಪ್ಟ್ ಪ್ರಧಾನಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು, ಆನಂತರ ಎರಡು ದೇಶಗಳ ನಡುವಿನ ಒಡನಾಟ ಹೆಚ್ಚಿದೆ. ಭಾರತದ…
ಗದಗ;- ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದ ಕೇಂದ್ರದ ವಿರುದ್ಧ ಗದಗನಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಗದಗ ನಗರದ ಮಹಾತ್ಮ ಗಾಂಧಿ ಸರ್ಕಲ್ ನಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆದಿದ್ದು, ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರಕ್ಕೆ ದಿಕ್ಕಾರ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಎಥೆನಾಲ್ ತಯಾರಿಸಲು ಅಕ್ಕಿ ಕೊಡುವ ಕೇಂದ್ರ, ತಿನ್ನೋಕೆ ಅಕ್ಕಿ ಕೊಡ್ತಾ ಇಲ್ಲ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ ಎಸ್ ಪಾಟೀಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾರಾರರು ಆಕ್ರೋಶ ಹೊರ ಹಾಕಿದ್ದಾರೆ.