ಲಕ್ನೋ: ಕಬಾಬ್ ರುಚಿಯಾಗಿಲ್ಲ ಎಂದು ಕಬಾಬ್ ತಯಾರಿಸಿದ ವ್ಯಕ್ತಿಯನ್ನೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ರಾತ್ರಿ ಉತ್ತರ ಪ್ರದೇಶದ ಪ್ರೇಮ್ ನಗರದಲ್ಲಿ ನಡೆದಿದೆ. ಐಷಾರಾಮಿ ಕಾರಿನಲ್ಲಿ ಬಂದ, ಕುಡಿದ ಮತ್ತಿನಲ್ಲಿದ್ದ ಇಬ್ಬರು ಯುವಕರು ಕಬಾಬ್ ಆರ್ಡರ್ ಮಾಡಿ ತಿಂದು ಇದು ಚೆನ್ನಾಗಿಲ್ಲ ಎಂದು ಹೋಟೆಲ್ ಮಾಲೀಕನೊಟ್ಟಿಗೆ ಜಗಳ ಮಾಡಿ ಹಣ ಕೊಡದೇ ಕಾರು ಹತ್ತಿದ್ದಾರೆ. 120 ರು. ಹಣ ವಸೂಲಿ ಮಾಡುವಂತೆ ನಾಸೀರ್ ಅಹ್ಮದ್ (52) ಎಂಬ ಅಡುಗೆಯವನನ್ನು ಮಾಲೀಕ ಕಾರಿನ ಬಳಿ ಕಳಿಸಿದಾಗ ಅದರಲ್ಲೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳಪೆ ಗುಣಮಟ್ಟದ ಕಬಾಬ್‌ಗಳ ಬಗ್ಗೆ ಅಸಮಾಧಾನಗೊಂಡ ಇಬ್ಬರು ಬರೇಲಿ ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಚೇರಿಯ ಹೊರಗೆ ಮಾಂಸಾಹಾರಿ ಉಪಾಹಾರ ಗೃಹದ 52 ವರ್ಷದ ಅಡುಗೆಯವರನ್ನು ಹಣ ಕೇಳಿದಾಗ ಗುಂಡಿಕ್ಕಿ ಕೊಂದಿದ್ದಾರೆ. ಮಾಯನ್ ರಸ್ತೋಗಿ ಅಲಿಯಾಸ್ ಗೋಲ್ಡನ್ ಬಾಬಾ ಮತ್ತು ಆತನ ಸ್ನೇಹಿತ ತಾಜಿಮ್ ಶಮ್ಸಿ ಎಂಬಿಬ್ಬರನ್ನು ಸಂಜೆ ರಾಂಪುರದಿಂದ ಬಂಧಿಸಲಾಗಿದೆ ಎಂದು…
Author: Prajatv Kannada
ನವದೆಹಲಿ: ಅಂತಾರಾಷ್ಟ್ರೀಯವಾಗಿ ಖಾದ್ಯ ತೈಲಗಳ ಬೆಲೆ ಕಡಿಮೆಯಾಗಿರುವುದರಿಂದ ಗ್ರಾಹಕರ ಹಿತದೃಷ್ಟಿಯಿಂದ ದೇಶೀಯ ವಾಗಿಯೂ ಬೆಲೆ ಇಳಿಕೆ ಮಾಡುವಂತೆ ಖಾದ್ಯತೈಲ (edible oils) ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅದರ ಬೆನ್ನಲ್ಲೇ ಕೆಲ ಕಂಪನಿಗಳು ದರ ಇಳಿಕೆಯ ನಿರ್ಧಾರ ಪ್ರಕಟಿಸಿವೆ. 2021-22ನೇ ಸಾಲಿನಲ್ಲಿ 1.75 ಲಕ್ಷ ಕೋಟಿ ರು. ಮೌಲ್ಯದ ಖಾದ್ಯ ತೈಲನ್ನು ಭಾರತದ ಕಂಪನಿಗಳು ಆಮದು ಮಾಡಿಕೊಂಡಿವೆ. ಈ ಕಂಪನಿಗಳು ಪಾಮ್ ಎಣ್ಣೆಯನ್ನು (Palm Oil) ಮಲೇಷ್ಯಾ (Malaysia) ಮತ್ತು ಇಂಡೋನೇಷ್ಯಾದಿಂದ (Indonesia) ಹಾಗೂ ಸೋಯಾಬೀನ್ ಎಣ್ಣೆಯನ್ನು (soybean) ಅರ್ಜೇಂಟೀನಾ (Argentina) ಮತ್ತು ಬ್ರೆಜಿಲ್‌ನಿಂದ (Brazil) ಆಮದು ಮಾಡಿಕೊಳ್ಳುತ್ತವೆ. ಈ ತೈಲಗಳ ಬೆಲೆ ಅಂತಾರಾಷ್ಟ್ರೀಯವಾಗಿ ಇಳಿಕೆಯಾಗಿರುವುದರಿಂದ ಬೆಲೆ ಇಳಿಕೆ ಮಾಡಲು ಸರ್ಕಾರ ಸೂಚಿಸಿದೆ. ಧಾರಾ ಹೆಸರಿನಲ್ಲಿ ಅಡಿಗೆಎಣ್ಣೆಯನ್ನು ಮಾರಾಟ ಮಾಡುವ ಮದರ್ ಡೈರಿ ಈಗಾಗಲೇ ಬೆಲೆಯನ್ನು 15ರಿಂದ 20 ರು. ಇಳಿಕೆ ಮಾಡಿರುವುದಾಗಿ ಘೋಷಿಸಿದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಕಡಲೆಕಾಯಿ (groundnut) ಎಣ್ಣೆ ಪ್ರತಿ ಕೇಜಿಗೆ 189.13 ರು., ಸಾಸಿವೆ ಎಣ್ಣೆ ಕೇಜಿಗೆ…
ಮಲಪ್ಪುರಂ: ಯುವತಿಗೆ ಇರಿದ ಯುವಕನೋರ್ವ ಬಳಿಕ ತನ್ನ ಕತ್ತನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಘಾತಕಾರಿ ಘಟನೆ ಕೇರಳದ ಮಲಪ್ಪುರಂನ ತಿರುರಂಗಡಿ ಎಂಬಲ್ಲಿ ನಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ ಕೇರಳ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಈ ಬಸ್ ಕೇರಳದ ಮುನ್ನಾರ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿತ್ತು. ಕೃತ್ಯವೆಸಗಿದ ಯುವಕನನ್ನು 25 ವರ್ಷದ ಸನಿಲ್ ಎಂದು ಗುರುತಿಸಲಾಗಿದ್ದು, ಈತ ವಯನಾಡ್ ಮೂಲದವನಾಗಿದ್ದು, ಗೂಡ್ಲುರ್ ಮೂಲದ ಸೀತಾ ಎಂಬಾಕೆಗೆ ಚಾಕುವಿನಿಂದ ಇರಿದಿದ್ದಾನೆ. ಈ ಇಬ್ಬರೂ ಹಿಂದಿನಿಂದಲೂ ಪರಿಚಯಸ್ಥರಾಗಿದ್ದಾರೆ. ಇನ್ನು ಇವರಿಬ್ಬರು ಬೇರೆ ಬೇರೆ ಕಡೆಗಳಿಂದ ಬಸ್ ಏರಿದ್ದಾರೆ. ಹುಡುಗ ಇಡಪಲ್‌ನಿಂದ (Edapal) ಬಸ್ ಹತ್ತಿದ್ದರೆ ಹುಡುಗಿ ಅಂಗಮಲೈನಿಂದ (Angamaly) ಬಸ್ ಏರಿದ್ದಾಳೆ. ಮೊದಲಿಗೆ ಇಬ್ಬರು ಬಸ್‌ನಲ್ಲಿ ಮಧ್ಯದ ಸೀಟ್‌ನಲ್ಲಿ ಜೊತೆಯಲ್ಲೇ ಕುಳಿತಿದ್ದರು. ಆದರೆ ಇಬ್ಬರ ಮಧ್ಯೆ ಜಗಳ ಶುರುವಾಗಿದ್ದು, ಕೊಟ್ಟಕ್ಕಲ್ (Kottakkall) ಬಳಿ ಬಸ್ ತಲುಪಿದಾಗ ಇಬ್ಬರೂ ಇಬ್ಬರೂ ಬಸ್‌ನ ಹಿಂಭಾಗದ ಸೀಟಿಗೆ ಶಿಫ್ಟ್ ಆಗಿದ್ದಾರೆ ಎಂದು ಬಸ್‌ನ ಸಿಬ್ಬಂದಿ ಮಾಹಿತಿ…
ಮುಂಬೈ : ಮಹಾರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈನ ಭಾಯಂದರ್ ಪಶ್ಚಿಮದಲ್ಲಿರುವ ಆಭರಣ ಅಂಗಡಿಯೊಂದರಲ್ಲಿ ಪ್ಲಾಸ್ಟಿಕ್ ಗನ್ ಬಳಸಿ ದರೋಡೆಗೆ ಯತ್ನಿಸಿದ 16 ವರ್ಷದ ಬಾಲಕನ ಮೇಲೆ ಪ್ರಕರಣ ದಾಖಲಾಗಿದೆ. ಬಾಲಕ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಬಯಸಿದ್ದರಿಂದ ಈ ಅಪರಾಧ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ. ಭಾಯಂದರ್ ವೆಸ್ಟ್‌ನ 60 ಅಡಿ ರಸ್ತೆಯಲ್ಲಿರುವ ಶಕ್ತಿ ಜ್ಯುವೆಲರ್ಸ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. “ಬಾಲಕ ಅಂಗಡಿಗೆ ಪ್ರವೇಶಿಸಿ ಚಿನ್ನದ ಬಿಸ್ಕತ್ತುಗಳನ್ನು ಮಾರಾಟ ಮಾಡಲು ಬಯಸುವುದಾಗಿ ಆಭರಣ ವ್ಯಾಪಾರಿಗೆ ತಿಳಿಸಿದನು. ಆಭರಣ ವ್ಯಾಪಾರಿ ಅವುಗಳನ್ನು ಖರೀದಿಸಲು ನಿರಾಕರಿಸಿದನು ಮತ್ತು ಹುಡುಗನನ್ನು ಜ್ಯುವೆಲ್ಲರಿ ಅಂಗಡಿಯಿಂದ ಹೊರಗೆ ಹೋಗುವಂತೆ ಹೇಳಿದನು. ಕೆಲವು ನಿಮಿಷಗಳ ನಂತರ, ಹುಡುಗ ಮತ್ತೆ ಅಂಗಡಿಯನ್ನು ಪ್ರವೇಶಿಸಿದ್ದು, ಈ ಬಾರಿ ಪ್ಲಾಸ್ಟಿಕ್ ಗನ್ ಹಿಡಿದಿದ್ದನು ಎಂದು ಭಾಯಂದರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಮುಕುಟರಾವ್ ಪಾಟೀಲ್ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ನಿಜವಾದ ಗನ್ ಎಂದು ನಂಬಿಸಿ ಆಭರಣ ವ್ಯಾಪಾರಿಯನ್ನು ಆತ ಮೂರ್ಖರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾನೆ ಮತ್ತು ಆಭರಣ ಅಂಗಡಿಯನ್ನು ಲೂಟಿ ಮಾಡಿದ್ದಾನೆ. ಆದರೆ, ಲೂಟಿಯೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಕೆಲ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅವರು ಆರೋಪಿ ಬಾಲಕನನ್ನು ನಮಗೆ ಒಪ್ಪಿಸಿದರು. ಕದ್ದ ಚಿನ್ನಾಭರಣಗಳಲ್ಲದೆ, ಆಟಿಕೆ ಪ್ಲಾಸ್ಟಿಕ್ ಗನ್ ಅನ್ನು ಸಹ ಆತನಿಂದ ವಶಪಡಿಸಿಕೊಂಡಿದ್ದೇವೆ ಎಂದೂ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆರೋಪಿಯು ಎಸ್‌ಎಸ್‌ಸಿ ವಿದ್ಯಾರ್ಥಿಯಾಗಿದ್ದು, ಭಾಯಂದರ್ ನಿವಾಸಿಯಾಗಿದ್ದಾನೆ. ಬಾಲಕನ ತಂದೆ ಟೀ ಅಂಗಡಿ ನಡೆಸುತ್ತಿದ್ದರೆ, ತಾಯಿ ಗೃಹಿಣಿ. ಬಾಲಕ ತನ್ನ ತಂದೆಯ ಡಿಮ್ಯಾಟ್ ಖಾತೆಯನ್ನು ನೋಡಿಕೊಳ್ಳುತ್ತಿದ್ದ ಹಾಗೂ ಅದರಿಂದ ಉತ್ತಮ ಆದಾಯವನ್ನು ಗಳಿಸುತ್ತಿದ್ದನು, ಆದರೆ ಹೆಚ್ಚಿನ ಹಣದ ಅಗತ್ಯವಿದೆ ಎಂದು ಹೇಳಿದ್ದು, ಈ ಹಿನ್ನೆಲೆ ಈ ಕೃತ್ಯಕ್ಕೆ ಕೈ ಹಾಕಿದ್ದಾಗಿಯೂ ಬಾಲಕ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. “ಅವನು ಶ್ರೀಮಂತ ವ್ಯಕ್ತಿಯಾಗಲು ಮತ್ತು ಷೇರು ಮಾರುಕಟ್ಟೆಯಿಂದ ಹೆಚ್ಚು ಹಣವನ್ನು ಗಳಿಸಲು ಬಯಸಿದ್ದ” ಎಂದು ಹಿರಿಯ ಪೊಲೀಸ್ ಅಧಿಕಾರಿ ಮುಕುಟರಾವ್ ಪಾಟೀಲ್ ಹೇಳಿದರು.
ನವದೆಹಲಿ: ಛತ್ತೀಸ್‌ಗಢದ ಕಾಂಗ್ರೆಸ್ ನಾಯಕರೊಬ್ಬರ ಸೋದರ ಮತ್ತು ಹಿರಿಯ ಐಎಎಸ್ ಅಧಿಕಾರಿ ಸೇರಿಕೊಂಡು ಮದ್ಯ ಮಾರಾಟದಲ್ಲಿ ಭಾರಿ ಅಕ್ರಮ ಎಸಗುವ ಮೂಲಕ ರಾಜ್ಯದ ಬೊಕ್ಕಸಕ್ಕೆ 4 ವರ್ಷಗಳಲ್ಲಿ 2000 ಕೋಟಿ ರೂ ವಂಚಿಸಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಐಎಎಸ್ ಅಧಿಕಾರಿ ಅನಿಲ್ ಟುಟೇಜ್ ಎಂಬಾತನನ್ನು ಈ ಹಿಂದೆಯೇ ಬಂಧಿಸಿದ್ದ ಜಾರಿ ನಿರ್ದೇಶನಾಲಯ, ಇದೀಗ ಅನ್ವರ್ ಧೇಬರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಇಬ್ಬರೂ ಹೀಗೆ ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ರಾಜ್ಯದಲ್ಲಿ ಚುನಾವಣೆ ವೆಚ್ಚಕ್ಕೂ ಬಳಸಲಾಗಿತ್ತು. ಇದರಲ್ಲಿ ಸಾಕಷ್ಟು ಜನ ಪಾಲು ಹಂಚಿಕೊಂಡಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಭಾಗಿಯಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿರುವ ಕಾರಣ, ಮುಂದಿನ ದಿನಗಳಲ್ಲಿ ಈ ಹಗರಣ ಇನ್ನಷ್ಟು ರಾಜಕೀಯ ನಾಯಕರ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ. ಏನಿದು ಹಗರಣ?: ಛತ್ತೀಸ್‌ಗಢದಲ್ಲಿ ಖಾಸಗಿ ಮದ್ಯದಂಗಡಿಗೆ ಅನುಮತಿ ಇಲ್ಲ. ಇರುವ 800 ಅಂಗಡಿಗಳು ಸರ್ಕಾರದ ಸಿಎಸ್‌ಎಂಸಿಎಲ್ ನಿಗಮಕ್ಕೆ ಸೇರಿವೆ. ಈ ನಿಗಮ ಮಾತ್ರ ಮದ್ಯ ಮಾರಾಟದ ಉಸ್ತುವಾರಿ ಹೊಂದಿದೆ. ಆದರೆ ಈ ಅಂಗಡಿಗಳಲ್ಲಿ ಅಧಿಕೃತದ ಮದ್ಯದ ಜತೆಗೆ ದೇಶೀ ನಿರ್ಮಿತ ಅಕ್ರಮ ಮದ್ಯವನ್ನು ಅನ್ವರ್ ಧೇಬರ್ ಮಾರಾಟ ಮಾಡಿಸಿದ್ದಾನೆ. ಈ ರೀತಿ ಮಾರಾಟವಾದ ಮದ್ಯದಲ್ಲಿ 1 ರೂ. ಕೂಡ ರಾಜ್ಯದ ಖಜಾನೆಗೆ ಹೋಗಿಲ್ಲ. ಸಂಪೂರ್ಣ ಆದಾಯವನ್ನು ಧೇಬರ್‌ನ ಜಾಲವೇ ಪಡೆದಿದೆ. 2019ರಿಂದ 2022ರ ನಡುವೆ, ಈ ರೀತಿಯ ಅಕ್ರಮ ಮಾರಾಟವು ರಾಜ್ಯದಲ್ಲಿನ ಒಟ್ಟು ಮದ್ಯದ ಮಾರಾಟದ ಶೇ.30-40ರ ಷ್ಟಿತ್ತು ಮತ್ತು 1,200 – 1,500 ಕೋಟಿ ರೂ. ಅಕ್ರಮ ಲಾಭವನ್ನು ಗಳಿಸಿದೆ ಎಂದು ತನಿಖೆ ವೇಳೆ ಕಂಡುಬಂದಿದೆ. ಇದರ ಜೊತೆಗೆ, ಮಳಿಗೆಗಳಿಗೆ ಅಧಿಕೃತವಾಗಿ ಮದ್ಯ ಸರಬರಾಜು ಮಾಡುವ ಸಂಸ್ಥೆಗಳ ಜೊತೆಗೂ ಅನ್ವರ್ ಡೀಲ್ ಕುದುರಿಸಿದ್ದ. ಅವರಿಂದ ಪ್ರತಿ ಕೇಸ್‌ಗೆ 75-150 ರೂ. ವಸೂಲಿ ಮಾಡುತ್ತಿದ್ದ. ಅಂದರೆ ಮಳಿಗೆಗಳ ಮೂಲಕ ಮಾರಾಟವಾಗುವ ಪ್ರತಿ ಬಾಟಲ್‌ನಿಂದಲೂ ಹಣ ಸಂಗ್ರಹಿಸಿದ್ದಾನೆ. ವಿತರಣೆ ಮತ್ತು ಪೂರೈಕೆಯ ಪ್ರತಿ ಹಂತದಲ್ಲೂ ತನ್ನ ಬಂಟರನ್ನು ನೇಮಿಸಿಕೊಂಡಿದ್ದ ಅನ್ವರ್ ಖಾಸಗಿ ಡಿಸ್ಟಿಲರ್‌ಗಳು, ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಬಕಾರಿ ಅಧಿಕಾರಿಗಳು, ಗಾಜಿನ ಬಾಟಲಿ ತಯಾರಕರು, ಹಾಲೋಗ್ರಾಮ್ ತಯಾರಕರು, ನಗದು ಸಂಗ್ರಹ ಮಾರಾಟಗಾರರು ಇತ್ಯಾದಿಗಳನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದ ಎಂದು ಇ.ಡಿ. ಹೇಳಿದೆ.
ನವದೆಹಲಿ : ಲೇಡಿ ಬ್ಲ್ಯಾಕ್‌ಮೇಲರ್ ಅರ್ಚನಾ ನಾಗ್ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಶ್ರದ್ಧಾಂಜಲಿ ಬೆಹರಾಗೆ ಕೋರ್ಟ್ ಶಾಕ್ ನೀಡಿದೆ.ವಿ ಶೇಷ ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯವು ವೈಯಕ್ತಿಕವಾಗಿ ತನ್ನ ಮುಂದೆ ಹಾಜರಾಗುವಂತೆ ಶ್ರದ್ಧಾಂಜಲಿಗೆ ಸೂಚನೆ ನೀಡಿದೆ. ತನ್ನ ವಕೀಲರ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜಾರಾಗುತ್ತೇನೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಶ್ರದ್ಧಾಂಜಲಿ ಬೆಹರಾಗೆ ಹಿನ್ನಡೆಯಾಗಿದ್ದು, ಮೇ 8 ರಂದು ಕೋರ್ಟ್‌ನಲ್ಲು ಖುದ್ದು ಹಾಜರಾಗಿರುವಂತೆ ಸೂಚನೆ ನೀಡಿದೆ.ಬಂಧನಕ್ಕೆ ಒಳಗಾಗುವ ಭೀತಿಯಲ್ಲಿರುವ ಶ್ರದ್ಧಾಂಜಿಲಿ, ತಮ್ಮ ವಕೀಲರ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಲು ಅನುಮತಿ ಕೋರಿದ್ದರು ಎಂದು ಮೂಲಗಳು ತಿಳಿಸಿವೆ. ಈ ನಡುವೆ ಜಾರಿ ನಿರ್ದೇಶನಾಲಯ ಶ್ರದ್ಧಾಂಜಲಿ ಕೂಡ ಹನಿ ಟ್ರ್ಯಾಪ್ ಕೇಸ್‌ನಲ್ಲಿ ಆರೋಪಿ ಎಂದು ಹೆಸರಿಸಿದ ಬಳಿಕ ಆಕೆಗೆ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ಮೇ 8 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆಕೆಯನ್ನು (ಶ್ರದಾಂಜಲಿ) ಕೇಳಲಾಗಿದೆ ಎಂದು ಇಡಿ ಪರವಾಗಿ ವಾದ ಮಂಡಿಸಿದ ಗೋಪಾಲ್ ಅಗರ್ವಾಲ್ ಹೇಳಿದ್ದಾರೆ. ಶ್ರದ್ಧಾಂಜಲಿ ಪರ ವಕೀಲ ಅಶೋಕ್ ದಾಸ್, “ವಿಶೇಷ ನ್ಯಾಯಾಲಯವು ಖುದ್ದಾಗಿ ಅಥವಾ ವಕೀಲರ ಮೂಲಕ ಹಾಜರಾಗಲು ನೋಟಿಸ್ ನೀಡಿದಾಗ, ನಾನು ಸೆಕ್ಷನ್ 205 ರ ಅಡಿಯಲ್ಲಿ ವಕೀಲರ ಮೂಲಕ ಪ್ರತಿನಿಧಿಸುತ್ತೇವೆ ಎಂದು ಉಲ್ಲೇಖಿಸಿ ಪ್ರಾತಿನಿಧ್ಯವನ್ನು ನೀಡಿದ್ದೆ. ಅದನ್ನು ನ್ಯಾಯಾಲಯ ತಿರಸ್ಕರಿಸಿದೆ. ನಾವು ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದೇವೆ‘ ಎಂದು ಹೇಳಿದ್ದಾರೆ. “ಹೈಕೋರ್ಟ್ ವಿಶೇಷ ನ್ಯಾಯಾಲಯಕ್ಕೆ ಅರ್ಜಿಯನ್ನು ಮರುಪರಿಶೀಲಿಸಲು ಕೇಳಿದೆ. ಆದರೆ ನ್ಯಾಯಾಲಯವು ಏಪ್ರಿಲ್ 24 ರಂದು ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು. ಈಗ, ಮನವಿಯನ್ನು ತಿರಸ್ಕರಿಸಲಾಗಿದೆ ಮತ್ತು ಮೇ 9 ರಂದು ಖುದ್ದಾಗಿ ಹಾಜರಾಗುವಂತೆ ನ್ಯಾಯಾಲಯ ಶ್ರದ್ಧಾಂಜಲಿಯನ್ನು ಕೇಳಿದೆ ”ಎಂದು ದಾಸ್ ಹೇಳಿದ್ದಾರೆ. ಏಪ್ರಿಲ್ 11 ರಂದು, ಚಲನಚಿತ್ರ ನಿರ್ಮಾಪಕ, ಅಕ್ಷಯ ಪಾರಿಜಾಗೆ ಸಂಬಂಧಿಸಿದ ನಯಾಪಾಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಚನಾ ನಾಗ್ ಮತ್ತು ಅವರ ಪತಿ ಜಗಬಂಧು ಚಂದ್‌ಗೆ ಒರಿಸ್ಸಾ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ, ದಂಪತಿ ವಿರುದ್ಧ ಖಂಡಗಿರಿ ಪೊಲೀಸ್ ಠಾಣೆಯಲ್ಲಿ ಇತರೆ ಪ್ರಕರಣಗಳು ಬಾಕಿಯಿರುವುದರಿಂದ ಇನ್ನೂ ಜೈಲಿನಲ್ಲಿದ್ದಾರೆ. ಏನಿದು ಕೇಸ್, ಯಾರೀಕೆ ಅರ್ಚನಾ?: ಅರ್ಚನಾ ನಾಗ್ ಬ್ಲ್ಯಾಕ್ ಮೇಲರ್. ಹನಿ ಟ್ರ್ಯಾಪ್ ಮಾಡುವ ಮೂಲಕ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಿನಿಮಾ ನಿರ್ಮಾಪಕರ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುವುದನ್ನೇ ತಮ್ಮ…
ರಾಮನಗರ: ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿರುವ ರಾಜ್ಯದ ಸಾಕಷ್ಟು ಸರಕಾರಿ ಶಾಲೆಗಳು ವಿಧಾನಸಭೆ ಚುನಾವಣೆ ಮತದಾನಕ್ಕಾಗಿ ಬಾಗಿಲುತೆಗೆಯುತ್ತಿವೆ. ಚುನಾವಣಾ ಆಯೋಗದ ಪ್ರಕಾರ ಮತದಾನ ಕೇಂದ್ರವನ್ನು ಸರಕಾರಿ ಶಾಲೆಗಳಲ್ಲೇ ಮಾಡಬೇಕೆಂಬ ನಿಯಮವಿದೆ. ಆದರೆ ರಾಜ್ಯದ ಸಾಕಷ್ಟು ಸರಕಾರಿ ಶಾಲೆಗಳಿಗೆ ಸಂಪೂರ್ಣ ಬೀಗ ಹಾಕಿರುವುದರಿಂದ ಈಗ ಬಾಗಿಲು ಮುಚ್ಚಿರುವ ಶಾಲೆಗಳನ್ನು ಗುರುತಿಸಿ ರಾಜ್ಯದ ಜಿಲ್ಲಾ ಹಂತದ ಚುನಾವಣಾಧಿಕಾರಿಗಳು ಬೀಗ ತೆರೆಸಿ ಸ್ವಚ್ಛತೆ ಕಾಪಾಡುವ ಜತೆಗೆ, ಮೂಲಸೌಕರ್ಯ ಒದಗಿಸಲಾಗುತ್ತಿದೆ. 2380 ಶಾಲೆಗಳು ಮುಚ್ಚಿವೆ ಚುನಾವಣಾ ಆಯೋಗ ಗುರುತಿಸಿರುವ ರಾಜ್ಯದ 52282 ಮತಗಟ್ಟೆಗಳ ಪೈಕಿ ಎಲ್ಲಾ ಮತಗಟ್ಟೆಗಳು ಬಹುತೇಕ ಸರಕಾರಿ ಶಾಲೆಗಳಲ್ಲೇ ಇವೆ. ಆದರೆ ಕಳೆದ 5 ವರ್ಷಗಳಿಂದ ರಾಜ್ಯದಲ್ಲಿ 2380 ಪ್ರಾಥಮಿಕ, ಹಿರಿಯ ಮತ್ತು ಪ್ರೌಢಶಾಲೆಗಳನ್ನು ಮುಚ್ಚಲಾಗಿದ್ದು. ಚುನಾವಣಾ ಆಯೋಗ ಮತಗಟ್ಟೆಗಳಾಗಿಸಿದ್ದ ಮುಚ್ಚಿರುವ ಶಾಲೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳ ನೆರವಿನಿಂದ ಗುರುತಿಸಿ, ಆ ಶಾಲೆಗಳ ಬಾಗಿಲು ತೆಗೆಸಿ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಆಯೋಗದ ನಿಯಮದ ಪ್ರಕಾರ 750 ರಿಂದ 1250ಕ್ಕೂ ಹೆಚ್ಚು ಮತದಾರರಿರುವ ಕಡೆ ಸರಕಾರಿ ಶಾಲೆಗಳನ್ನು ಗುರುತಿಸಿ ಮತಗಟ್ಟೆಗಳನ್ನು ಮಾಡಲಾಗಿದೆ. ಆದರೆ…
ಮೈಸೂರು: ಅನಾರೋಗ್ಯದಿಂದ ಅಸುನೀಗಿದ್ದ ದಸರಾ ಆನೆ ಬಲರಾಮ (Balarama Elephant) ಮಣ್ಣಲ್ಲಿ ಮಣ್ಣಾಗಿದ್ದಾನೆ. 14 ಬಾರಿ ದಸರಾ ಕ್ಯಾಪ್ಟನ್ ಆಗುವ ಜವಾಬ್ದಾರಿ ನಿರ್ವಹಿಸಿದ್ದ ಬಲರಾಮನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಸತತ 14 ವರ್ಷ ದಸರಾ (Mysuru Dasara) ಅಂಬಾರಿಯನ್ನ ಹೊತ್ತು ಸಾಗಿದ್ದ ಹಿರಿಯ ಆನೆ ಬಲರಾಮ ಇಹಲೋಕ ತ್ಯಜಿಸಿದ್ದು, ಹಿರಿಯ ಜೀವಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾರದ ಮನಸ್ಸಿನಿಂದಲೇ ಅಂತಿಮ ವಿದಾಯ ಹೇಳಲಾಗಿದೆ. ಅತ್ಯಂತ ಸೌಮ್ಯ ಸ್ವಭಾವದ ಬಲರಾಮ ಆನೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನದ (Nagarahole Forest) ಹುಣಸೂರು ಅರಣ್ಯ ವ್ಯಾಪ್ತಿಯ ಹನಗೂಡು ಬಳಿಯ ಭೀಮನಕಟ್ಟೆ ಅರಣ್ಯ ಶಿಬಿರದಲ್ಲಿ ಆರೈಕೆ ಮಾಡಲಾಗುತ್ತಿತ್ತು. ಹಲವು ದಿನಗಳಿಂದ ಆಹಾರ, ನೀರು ಸೇವಿಸಿದರೂ ವಾಂತಿ ಮಾಡುತ್ತಿರುವುದಾಗಿ ಕಾವಾಡಿ ತಿಳಿಸಿದ ಮೇರೆಗೆ ಪಶುವೈದ್ಯಾಧಿಕಾರಿಗಳು ಬಲರಾಮನನ್ನು ಪರೀಶಿಲಿಸಿದಾಗ ಒಣಗಿದ ಮರದ ಚೂಪಾದ ಕವಟೆ ಸಿಕ್ಕಿದ್ದು, ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ನಂತರವು ಸುಧಾರಣೆ ಕಾಣದ ಕಾರಣ ಎಂಡೋಸ್ಕೋಪಿ ಮಾಡಿ ಮಾದರಿಯನ್ನು ಪ್ರಯೋಗ ಶಾಲೆಗೆ ಕಳುಹಿಸಿ ಪರೀಕ್ಷೆ ನಡೆಸಿದ…
ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಗೆಸೊಪ್ಪು ನಾಟಿಯು ಚುರುಕುಗೊಂಡಿದೆ. ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ವ್ಯಾಪಿಯಲ್ಲಿ ಕಳೆದ ಒಂದು ವಾರದಿಂದ ಹದಮಳೆಯು ಸುರಿಯುತ್ತಿದ್ದು, ಅರಕಲಗೂಡು ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಹೊಗೆಸೊಪ್ಪು ಬೆಳೆಗಾರರು ಸಸಿಗಳ ನಾಟಿ ಮತ್ತು ಆರೈಕೆಯಲ್ಲಿ ತೊಡಗಿದ್ದಾರೆ. ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಮಂಡಳಿಯ ವತಿಯಿಂದ ರಸಗೊಬ್ಬರವನ್ನು ನೀಡಲು ಪ್ರಾರಂಭಿಸಿದ್ದು, ತಂಬಾಕು ಬೆಳೆಗಾರರು ಶೀಘ್ರದಲ್ಲಿ ತಮ್ಮ ಪರವಾನಗಿಯನ್ನು ನವೀಕರಿಸಿಕೊಂಡು ಗೊಬ್ಬರ ಪಡೆದು ಸಕಾಲದಲ್ಲಿ ಬೆಳೆಗೆ ಒದಗಿಸಿ ಉತ್ತಮ ದರ್ಜೆಯ ತಂಬಾಕು ಉತ್ಪಾದನೆಗೆ ಒತ್ತು ನೀಡಲು ಮಾರುಕಟ್ಟೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸದ್ಯ ತಂಬಾಕು ಮಂಡಳಿಯ ವತಿಯಂದ ಕಾಲ್ಸಿಯಂ ನೈಟ್ರೇಟ್, ಡೈ ಅಮೋನಿಯಂ ಫಾಸ್ಪೇಟ್, ಸಲ್ಪರ್ ಆಫ್ ಫಾಸ್ಪೆಟ್, ಅಮೋನಿಯಂ ಸಲ್ಪೆಟ್ ರಾಸಾಯನಿಕ ಗೊಬ್ಬರಗಳನ್ನು ನೀಡುತ್ತಿದ್ದು, ಸಿಂಗಲ್ ಬ್ಯಾರಲ್‌ಗೆ 31 ಸಾವಿರ ರೂ. ಮತ್ತು ಡಬಲ್ ಬ್ಯಾರಲ್ ಪರವಾನಗಿ ಹೊಂದಿರವವರಿಗೆ 62 ಸಾವಿರ ರೂ. ಬೆಲೆಯ ಗೊಬ್ಬರ ನೀಡಲಾಗುತ್ತಿದೆ. ಫ್ಲಾಟ್ ಫಾರಂ 7 ವ್ಯಾಪ್ತಿಯ 9 ಕ್ಲಸ್ಟರ್ ಮತ್ತು ಫ್ಲಾಟ್…
ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ಪ್ರಮುಖ 10 ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ. ಮೇ 10 ರಂದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದ ಹಲವೆಡೆ ವಲಸೆ ತೆರಳಿರುವ ಮತದಾರರು ಅಂದು ತಮ್ಮ ಊರುಗಳಿಗೆ ತೆರಳಿ ಮತದಾನ ಮಾಡಲು ಸಜ್ಜಾಗಿದ್ದಾರೆ. ಅಂತಹ ಪ್ರಯಾಣಿಕರಿಗಾಗಯೇ ಮೇ 9 ಹಾಗೂ 10 ರಂದು ಜನ್ ಶತಾಬ್ದಿ ಸೇರಿ ಪ್ರಮುಖ ರೈಲುಗಳಲ್ಲಿ ಹೆಚ್ಚುವರಿ ಬೋಗಿಗಳಿರಲಿದೆ. ಯಾವ್ಯಾವ ರೈಲುಗಳಿಗೆ ಹೆಚ್ಚುವರಿ ಬೋಗಿ? ಮೈಸೂರು – ಬಾಗಲಕೋಟ ಬಸವಾ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 17307 ) – ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಯನ್ನು ಅಳವಡಿಸಲಾಗಿದೆ. ಈ ರೈಲು ಮಧ್ಯಾಹ್ನ30ಕ್ಕೆ ಮೈಸೂರಿನಿಂದ ಹೊರಟು ಬೆಂಗಳೂರು ಮಾರ್ಗವಾಗಿ ಮರು ದಿನ ಬಾಗಲಕೋಟೆ ತಲುಪಲಿದೆ. ಮೇ 9 ರಂದು ಹೆಚ್ಚುವರಿ ಬೋಗಿ ಇರಲಿದೆ. ಬಾಗಲಕೋಟ–ಮೈಸೂರುಬಸವಾ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 17308 ) – ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಯನ್ನು ಅಳವಡಿಸಲಾಗಿದೆ. ಈ ರೈಲು ಮಧ್ಯಾಹ್ನ35ಕ್ಕೆ ಬಾಗಲಕೋಟೆಯಿಂದ ಹೊರಟು ಬೆಂಗಳೂರು ಮಾರ್ಗವಾಗಿ ಮರು ದಿನ…