ಲಖನೌ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ‘ಪಿಡಿಎ’ ಮಂತ್ರ ಜಪಿಸಿದ್ದಾರೆ. ‘ಪಿಚ್ಡೆ (ಹಿಂದುಳಿದ ವರ್ಗಗಳು), ದಲಿತ ಮತ್ತು ಅಲ್ಪಸಂಖ್ಯಾತರು’ (ಪಿಡಿಎ) ಬಿಜೆಪಿಗೆ ಸೋಲು ಉಣಿಸುತ್ತಾರೆ ಎಂದು ಅಖಿಲೇಶ್ ಭರವಸೆ ವ್ಯಕ್ತಪಡಿಸಿದ್ದಾರೆ. ದೊಡ್ಡ ರಾಷ್ಟ್ರೀಯ ಪಕ್ಷಗಳು ನಮ್ಮ ಬೆಂಬಲಕ್ಕೆ ನಿಂತರೆ ಉತ್ತರ ಪ್ರದೇಶದ ಎಲ್ಲ 80 ಸೀಟುಗಳಲ್ಲಿಯೂ ಬಿಜೆಪಿಯನ್ನು ಸೋಲಿಸಬಹುದು ಎಂದು ಅವರು ಲಖನೌದಲ್ಲಿ ಹೇಳಿಕೆ ನೀಡಿದ್ದಾರೆ. ನಿರ್ದಿಷ್ಟ ರಾಜ್ಯದಲ್ಲಿ ಯಾವ ಮಿತ್ರ ಪಕ್ಷ ಹೆಚ್ಚು ಬಲಿಷ್ಠವಾಗಿದೆಯೋ ಅದರ ಆಧಾರದಲ್ಲಿ ಸೀಟುಗಳ ಹಂಚಿಕೆ ನಿರ್ಧರಿಸಬೇಕು ಎಂದು ತಾವು ಯಾವಾಗಲೂ ಪ್ರತಿಪಾದಿಸುತ್ತಿರುವುದಾಗಿ ಹೇಳಿದ್ದಾರೆ. ಒಗ್ಗಟ್ಟಿನ ವಿರೋಧ ಪಕ್ಷಕ್ಕೆ ಬದ್ಧವಾಗಿರುವುದರ ಕುರಿತಾದ ಪ್ರಯತ್ನಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅಖಿಲೇಶ್, ’80 ಅನ್ನು ಸೋಲಿಸಿ, ಬಿಜೆಪಿಯನ್ನು ಓಡಿಸಿ’ ಎಂಬ ಘೋಷಣೆ ಕೂಗಿದರು.”ಸಮಾಜವಾದಿ ಪಕ್ಷವು ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ಎಂದಿಗೂ ನಾವು ಸೀಟುಗಳ ವಿಚಾರದಲ್ಲಿ ಕಿತ್ತಾಟ ನಡೆಸಿದ್ದನ್ನು ನೀವು ಕೇಳುವುದು ಸಾಧ್ಯವೇ ಇಲ್ಲ”…
Author: Prajatv Kannada
ಗದಗ: ಕೇಂದ್ರ– ರಾಜ್ಯ ಸರ್ಕಾರಗಳ ಅಕ್ಕಿ ಜಟಾಪಟಿ ವಿಚಾರವಾಗಿ ಮಾತನಾಡಿದ ಸಚಿವ ಹೆಚ್ಕೆ ಪಾಟೀಲ್(HK Patil), ಇದು ಜನ ದ್ರೋಹ ನಿಲುವು ಎಂದರು. ಬಡವರಿಗೆ ಅಕ್ಕಿ ವಿತರಣೆ ಮಾಡುವವರಿಗೆ ಕೊಡಲ್ಲ ಅಂತಾರೆ. ಈ ರೀತಿ ರಾಜ್ಯ ಸರ್ಕಾರಗಳಿಗೆ ತಾರತಮ್ಯ ಮಾಡುವಂತಿಲ್ಲ. ಕೇಂದ್ರ ಸರ್ಕಾರ ಈ ಜನ ದ್ರೋಹಿ ನಿಲುವು ಬದಲಿಸಿಕೊಳ್ಳಬೇಕು. ಇಲ್ಲವೆಂದರೆ ಜನರು ಆಕ್ರೋಶಕ್ಕೆ ಕಾರಣವಾಗುತ್ತೀರಿ. ರಾಜ್ಯ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಕೇಂದ್ರ ಮಾಡುತ್ತಿದೆ. ಈ ಇಕ್ಕಟ್ಟಿನಿಂದ ಹೇಗೆ ಜನರ ಆಶೀರ್ವಾದದಿಂದ ಪಾರಾಗಬೇಕು ಅಂತ ನಮಗೆ ಗೋತ್ತು. ಯೋಜನೆ ಜಾರಿ ಮಾಡೇ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅಕ್ಕಿ ಪಡೆಯಲು ಎಲ್ಲ ಪ್ರಯತ್ನ ನಡೆಸಿದ್ದಾರೆ. ಅಧಿಕಾರಿಗಳು ಕೂಡ ಕೆಲಸ ಮಾಡುತ್ತಿದ್ದಾರೆ ಎಂದರು.
ದಾವಣಗೆರೆ: ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಕುರ್ಚಿ ವಾರ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಪರ ಸಚಿವ ಸತೀಶ್ ಜಾರಕಿಹೊಳಿ (Satish Jarakiholi)ಬ್ಯಾಟ್ ಬೀಸಿದ್ದಾರೆ. ತಲಾ ಎರಡೂವರೆ ವರ್ಷ ಅಂತಾ ಇದುವರೆಗೂ ಯಾರೂ ಹೇಳಿಲ್ಲ. ಹೀಗಾಗಿ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ. ಅದು ಪಕ್ಷದ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದರು. ಇನ್ನೂ ಅನ್ನಭಾಗ್ಯ ಅಕ್ಕಿ ಖರೀದಿ ಸಂಬಂಧ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅಕ್ಕಿ ವಿಚಾರಕ್ಕೆ ಬಿಜೆಪಿಯವರು ಧರಣಿ ಮಾಡುತ್ತೇವೆಂದು ಹೇಳುತ್ತಿದ್ದಾರೆ, ಇದು ಬಿಜೆಪಿಯವರಿಗೆ ಸಂಬಂಧಪಟ್ಟ ವಿಚಾರವಲ್ಲ. ಪ್ರಧಾನಿ ಮೋದಿ 15 ಲಕ್ಷ ಕೊಡುತ್ತೇವೆ ಅಂತ ಹೇಳಿದ್ದರು, ಈವರೆಗೆ ಕೊಟ್ಟಿಲ್ಲ. ಬಿಜೆಪಿಯವರು ನೀಡಿದ್ದ 10 ಭರವಸೆಗಳು ಹಾಗೆಯೇ ಇವೆ. ಕಾಲಾವಕಾಶ ಬೇಕು ಎಲ್ಲಾವನ್ನು ಸರಿ ಮಾಡುತ್ತೇವೆ ಎಂದರು.
ಗದಗ ;-ಬಾವಿಗೆ ಹಾರಿ ಸರಕಾರಿ ವೈದ್ಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಜರುಗಿದೆ. 45 ವರ್ಷದ ಕುಮಾರ್ ಸ್ವಾಮಿ ಚಿದಾನಂದಯ್ಯ ಬರದೂರಮಠ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ವೈದ್ಯ, ತಡರಾತ್ರಿ ತಮ್ಮ ಸ್ವಂತ ಜಮೀನಿನ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರು ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಸಾಕಷ್ಟು ದಿನಗಳಿಂದ ಪಾಶ‌್ವ೯ವಾಯು ರೋಗದಿಂದ ಬಳಲುತ್ತಿದ್ದರು. ಹೀಗಾಗಿ ಪಾಶ‌್ವ೯ವಾಯು ರೋಗದಿಂದ ಮಾನಸಿಕವಾಗಿ ನೊಂದು ಆತ್ಮ ಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಶಿಗ್ಗಾಂವಿ: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಹಾಗೂ ಜನ ಬಿಲ್ ಕಟ್ಟದ ವಿಚಾರವಾಗಿ ಕಿವಿಮಾತು ಹೇಳುವ ಮೂಲಕ ಸರ್ಕಾರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Former CM Bommai) ಎಚ್ಚರಿಕೆ ನೀಡಿದ್ದಾರೆ. ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಪೂರೈಕೆ ಆಗುವುದಿಲ್ಲ. ರಾಜ್ಯದಲ್ಲಿ ಮಳೆ ಇಲ್ಲ, ಬರ ಬಂದಿದೆ. ಜನರಿಗೆ ಕುಡಿಯುವ ನೀರು, ಕೃಷಿಗೆ ನೀರು ಇಲ್ಲದೇ ಸಮಸ್ಯೆ ಆಗಿದೆ. ಕುಡಿಯುವ ನೀರು ಸರಬರಾಜು ಆಗಲು ವಿದ್ಯುತ್ ಬೇಕು. ಕರೆಂಟ್ ನೀಡದಿದ್ದರೆ ಕುಡಿಯುವ ನೀರಿಗೆ ಹಾಹಾಕಾರ ಆಗುತ್ತದೆ. ಹೈಡ್ರೋ ಎಲೆಕ್ಟ್ರಿಕ್ ಪವರ್ ಕೊರತೆ ಇದೆ. ವಿದ್ಯುತ್ ಇಲಾಖೆಯ ಎಲ್ಲಾ ನಿಗಮಗಳಿಗೆ ಹಣ ಬಿಡುಗಡೆ ಮಾಡಬೇಕು. ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ವಿದ್ಯುತ್ ಶಕ್ತಿಯ ಕ್ಷಾಮ ಎದುರಾಗಲಿದೆ ಎಂದು ಶಿಗ್ಗಾಂವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ಹೇಳಿದರು.
ದಾವಣಗೆರೆ: ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದವರು ಮುಖ್ಯಮಂತ್ರಿ ಆಗಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಪ್ರಸನ್ನಾನಂದಪುರಿಶ್ರೀ (Prasannanandapuri Shri)ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಮಠದಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದವರು ಮುಖ್ಯಮಂತ್ರಿ ಆಗಲು ಶ್ರಮಿಸಬೇಕಾಗಿದೆ. ಹಿಂದಿನ ಸರ್ಕಾರ ಎಸ್ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿದೆ. ಎಸ್ಟಿ ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್ನಲ್ಲಿ ಸೇರಿಸಬೇಕು. ಈ ಬಗ್ಗೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆಯಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕು ಎಂದರು.
ಮೈಸೂರು: ಸಂಸದ ಪ್ರತಾಪ್ ಸಿಂಹ (Pratap Simha) ಅವರಿಗೆ ತಲೆ ಕೆಟ್ಟಿದೆ. ಅರ್ಥವಿಲ್ಲದ ಹೇಳಿಕೆ ನೀಡುತ್ತಾ ಜಾತಿಗೆ ಒರೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಲೆ ಕೆಟ್ಟಿದೆ, ಅವರದ್ದು ಚಿಲ್ಲರೆ ಮನಸ್ಥಿತಿ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಗುಡುಗಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻಎಂ.ಬಿ ಪಾಟೀಲ್ ಅವರ ಹೆಗಲ ಮೇಲೆ ಸಿದ್ದರಾಮಯ್ಯ (Siddaramaiah) ಇಟ್ಟು ಹೊಡೆದ ಗುಂಡು ಡಿಕೆ ಶಿವಕುಮಾರ್‌ಗೆ ತಗುಲಿಲ್ವಾ?ʼ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕಿಡಿ ಕಾರಿದ್ದಾರೆ. ಪ್ರತಾಪ್ ಸಿಂಹ ಅವರಿಗೆ ತಲೆ ಕೆಟ್ಟಿದೆ, ಜಾತಿಗೆ ಒರೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದು ಅವರ ಚಿಲ್ಲರೆ ಮನಸ್ಥಿತಿ ತೋರಿಸುತ್ತಿದೆ. ಸಿದ್ದರಾಮಯ್ಯ ಅವ್ರು ನನ್ನ ಹೆಗಲ ಮೇಲೆ ಗನ್ ಇಟ್ಟು ಯಾರಿಗೂ ಗುಂಡು ಹೊಡೆಯುವ ಕೆಲಸ ಮಾಡಿಲ್ಲ. ನಾನೂ ಕೂಡ ಅದಕ್ಕೆ ಆಸ್ಪದ ಕೊಟ್ಟಿಲ್ಲ. ಹೊಡೆಯೋದಿದ್ದರೆ ನಾವೇ ಡೈರೆಕ್ಟ್ ಆಗಿ ಹೊಡಿಯುತ್ತೇವೆ. ನನ್ನ ಡಿ.ಕೆ ಶಿವಕುಮಾರ್ ಸಂಬಂಧ ಉತ್ತಮವಾಗಿದೆ. ಒಂದು ವಿಚಾರ ಬಂದಾಗ ಅಭಿಪ್ರಾಯ, ಭಿನ್ನಾಭಿಪ್ರಾಯ…
ತುಮಕೂರು;– ಜಿಲ್ಲೆಯ ಶಿರಾ ತಾಲೂಕಿನ ಕಾಮಗೊಂಡನಹಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಅಗ್ನಿ ಅವಘಡ ಉಂಟಾಗಿರುವ ಘಟನೆ ಜರುಗಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಗಮಣಿ ಮತ್ತು ಮಗ ಮಿಥುನ್ ಗಾಯಾಳು ಎಂದು ಗುರುತಿಸಲಾಗಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮಗನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಅವಘಡ ಸಂಭವಿಸಿದೆ. ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಗದಗ ;- ಉಚಿತ ಬಸ್ ಪ್ರಯಾಣ ಹಿನ್ನೆಲೆ ಸಾರಿಗೆ ಬಸ್ ಗಳು ಮಹಿಳಾ ಮಣಿಗಳಿಂದ ತುಂಬಿ ತುಳುಕ್ಕುತ್ತಿವೆ. ಇದರಿಂದ ಬಾಲಕನೊಬ್ಬ ಬಸ್ ಏರಲು ನಿರಾಕರಣೆ ಮಾಡಿ ಕಣ್ಣೀರು ಹಾಕ್ತಾಯಿರುವ ದೃಶ್ಯ ಸೆರೆಯಾಗಿದೆ. ಗದಗ ತಾಲೂಕಿನ ಮುಳಗುಂದ ಬಳಿಯ ದಾವಲ್ ಮಲ್ಲಿಕ್ ದರ್ಗಾ ಕ್ಕೆ ಬಂದ ಮಹಿಳೆಯೊಬ್ಬರು ಎಲ್ಲಾ ಬಸ್ ಗಳು ಭರ್ತಿಯಾಗಿ ಹೋಗುತ್ತಿರುವದನ್ನು ನೋಡಿ ಕಂಗಾಲಾಗಿದ್ದರು. ಈ ವೇಳೆ ನೂಕು ನುಗ್ಗಲಿನಲ್ಲಿ ನಾ ಬರಲು ಒಲ್ಲೆ ಎಂದು ಬಾಲಕ ಹಠ ಹಿಡಿದಿದ್ದಾನೆ. ಈ ವೇಳೆ ಬಾಲಕನನ್ನು ಸಮಾಧಾನ ಮಾಡಲು ತಾಯಿ ಹರಸಾಹಸ ಪಟ್ಟಿದ್ದಾರೆ, ವೀಕೆಂಡ್ ಹಾಗೂ ಅಮವಾಸ್ಯೆ ಇರೋದರಿಂದ ಹೆಚ್ವಿನ ಸಂಖ್ಯೆಯಲ್ಲಿ ನಿನ್ನೆ ಮಹಿಳೆಯರು ಪ್ರಯಾಣ ಬೆಳೆಸಿದ್ದಾರೆ.
ಗದಗ ; ಕೇಂದ್ರ ಸರ್ಕಾರದ ವಿರುದ್ಧ ವಿರುದ್ಧ ಸಚಿವ ಎಚ್ ಕೆ ಪಾಟೀಲ್ ಕಿಡಿಕಾರಿದ್ದಾರೆ. ಗದಗನಲ್ಲಿ ಮಾತನಾಡಿದ ಸಚಿವ ಎಚ್ ಕೆ ಪಾಟೀಲ್, ರಾಜ್ಯ ಸರ್ಕಾರ ಜೂನ್ 12ರಂದು ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಪತ್ರ ಬರೆದಿತ್ತು. ಬೇಡಿಕೆಯಷ್ಟು ಅಕ್ಕಿ ಕೊಡುವುದಾಗಿ ಎಫ್‌ಸಿಐ ಭರವಸೆ ನೀಡಿತ್ತು. ಅಲ್ಲಿನ ಮುಖ್ಯಸ್ಥರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮಾತನಾಡಿದ್ದರು. ಇನ್ನೇನು ಪ್ರಕ್ರಿಯೆ ಆರಂಭಿಸಬೇಕು ಎನ್ನುವಷ್ಟರಲ್ಲಿ 13ರಂದು ಪತ್ರ ಬರೆದು ಈಶಾನ್ಯ ರಾಜ್ಯ ಹೊರತುಪಡಿಸಿ, ಬೇರೆ ರಾಜ್ಯಗಳಿಗೆ ಅಕ್ಕಿ ಕೊಡಲ್ಲ ಎಂದು ತಿಳಿಸಿದೆ’ ಎಂದು ಕಿಡಿಕಾರಿದರು. ‘ನಾವೇನು ಉಚಿತವಾಗಿ ಅಕ್ಕಿ ಕೇಳಿಲ್ಲ. ನಮಗೆ ಸಾಂವಿಧಾನಿಕ ಹಕ್ಕಿದೆ. ರಾಜ್ಯದ ಸಂಪತ್ತಿನಿಂದ ಹಣ ಖರ್ಚು ಮಾಡುತ್ತೇವೆ. ಆದರೆ, ರಾಜ್ಯಗಳಿಗೆ ಕೊಡಬೇಡಿ; ಖಾಸಗಿಯವರಿಗೆ ಮಾರಾಟ ಮಾಡಿ ಅಂತಿದ್ದಾರೆ’ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.