ಸೂರ್ಯೋದಯ: 05.56 AM, ಸೂರ್ಯಾಸ್: 06.36 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079 ವೈಶಾಖ ಮಾಸ, ಕೃಷ್ಣ ಪಕ್ಷ, ಉತ್ತರಾಯಣ, ವಸಂತ ಋತು, ತಿಥಿ: ಇವತ್ತು ಚೌತಿ 04:08 PM ತನಕ ನಂತರ ಪಂಚಮಿ ನಕ್ಷತ್ರ: ಇವತ್ತು ಮೂಲ 05:45 PM ತನಕ ನಂತರ ಆಷಾಢ ಯೋಗ: ಇವತ್ತು ಶಿವ 12:10 AM ತನಕ ನಂತರ ಸಿದ್ದಿ 09:16 PM ತನಕ ನಂತರ ಸಾಧ್ಯ ಕರಣ: ಇವತ್ತು ಬವ 05:14 AM ತನಕ ನಂತರ ಬಾಲವ 04:08 PM ತನಕ ನಂತರ ಕೌಲವ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 10:30 ನಿಂದ 12:00 ವರೆಗೂ ಗುಳಿಕ ಕಾಲ: 01:30 ನಿಂದ 03:00 ವರೆಗೂ ಅಮೃತಕಾಲ: 11.44 AM to 01.14 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:47 ನಿಂದ ಮ.12:38 ವರೆಗೂ ಮೇಷ: ಉದ್ಯೋಗ ಕ್ಷೇತ್ರದಲ್ಲಿ ಬಂದಿರುವ ಸಮಸ್ಯೆಗಳಿಗೆ ಆಪ್ತರಿಂದ ಪರಿಹಾರಗಳು ದೊರೆಯಲಿದೆ, ಮದುವೆ ಸಾಲಾವಳಿ ಕೇಳುವ…
Author: Prajatv Kannada
ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಸೋಮವಾರ ಭಾರೀ ಮಳೆ (Rain) ಸುರಿದ ಪರಿಣಾಮ ಪಿಎಸ್ ಕಾಲೇಜ್ ಬಳಿಯ ವೀರಭದ್ರನಗರದ ಸ್ಲಮ್‌ನಲ್ಲಿ 5 ಮನೆಗಳು ಮತ್ತು ಕಾಂಪೌಂಡ್ ಗೋಡೆ ಕುಸಿದು ಪಕ್ಕದ ಅಪಾರ್ಟ್ಮೆಂಟ್‌ನಲ್ಲಿ (Apartment) ನಿಲ್ಲಿಸಿದ್ದ ಕಾರುಗಳು ಸಂಪೂರ್ಣ ಜಖಂಗೊಂಡಿದೆ. ರಿಂಗ್ ರೋಡ್‌ನ ವೀರಭದ್ರೇಶ್ವರ ನಗರದಲ್ಲಿ (Veerabhadreshwara Nagar) ಈ ಘಟನೆ ನಡೆದಿದ್ದು, ವಸುಂಧರಾ ಕೃತಿಕಾ ಅಪಾರ್ಟ್ಮೆಂಟ್‌ನ ತಡೆಗೋಡೆ ಸಮೇತ ಮನೆ ಸಂಪೂರ್ಣ ನೆಲಸಮವಾಗಿದೆ. ಅಲ್ಲದೇ ತಡೆಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿದ್ದು, ಮತ್ತೆರಡು ಕಾರಗಳಿಗೂ ಸಹ ಹಾನಿಯಾಗಿದೆ. ಗೋಪಾಲ್ ಎಂಬುವವರ ಮನೆ ಸಂಪೂರ್ಣ ಕುಸಿದು ಹಾನಿಯಾಗಿದ್ದು, ಮನೆಯಲ್ಲಿದ್ದ ವಸ್ತುಗಳು ನೆಲಸಮಗೊಂಡಿವೆ. ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ಘಟನೆಯಲ್ಲಿ ಯಾರಿಗೂ ಸಹ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಎಲೆಕ್ಷನ್‌ಗೆ ಇಡೀ ರಾಜ್ಯ ಸಜ್ಜಾಗ್ತಿದೆ. ಮತದಾನಕ್ಕೆ ದಿನಗಣನೆ ಶುರುವಾಗಿದೆ. ನೀವು ನಿಮ್ಮ ನಿಮ್ಮ ಏರಿಯಾಗಳಲ್ಲಿ ವೋಟ್ ಹಾಕೋದು ಹೇಗೆ? ವೋಟಿಂಗ್ ಕೇಂದ್ರಗಳನ್ನು ಹುಡುಕೋದು ಹೇಗೆ? ಯಾವ ಬೂತ್‌ನಲ್ಲಿ ನಿಮ್ಮ ಹೆಸರು ಇರುತ್ತೆ? ಅದನ್ನು ಕಂಡು ಹಿಡಿಯೋಕೆ ಕಷ್ಟ ಪಡಬೇಕಿಲ್ಲ. ವೋಟ್ ಹಾಕೋದು ತುಂಬಾನೇ ಸುಲಭ! ಮತದಾನ ಪ್ರಕ್ರಿಯೆಯ ಇಂಚಿಂಚೂ ಮಾಹಿತಿಯನ್ನು ವಿವರಿಸುವ ಪ್ರಯತ್ನ ಇಲ್ಲಿದೆ.. ನೀವು ಮೊದಲ ಬಾರಿ ವೋಟ್ ಮಾಡುತ್ತಿದ್ದರೆ ಈ ಮಾಹಿತಿ ನಿಮಗೆ ಬೇಕೇ ಬೇಕು ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ವೇಳೆ ಬಳಕೆಯಾಗುವ ಮತದಾರರ ಗುರುತಿನ ಚೀಟಿ ಅತ್ಯಂತ ಪ್ರಮುಖವಾದ ದಾಖಲೆ. ಈ ದಾಖಲೆಯನ್ನು ಸುರಕ್ಷಿತವಾಗಿ ಇಟ್ಟುಕೊಂಡಿರಬೇಕು. ಕೆಲವು ವೇಳೆ ನೀವು ಎಲ್ಲೋ ಇಟ್ಟು ಮರೆತಿರಬಹುದು, ಅಥವಾ ಕಳೆದು ಹೋಗಿರಬಹುದು. ಇಂಥಾ ಹೊತ್ತಲ್ಲೂ ಕೂಡಾ ನೀವು ಮತದಾನ ಮಾಡೋಕೆ ಯಾವುದೇ ಅಡ್ಡಿ ಆತಂಕ ಇಲ್ಲ. ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಸರ್ಕಾರಿ ನೌಕರರ ಗುರುತಿನ ಚೀಟಿ, ಫೋಟೋ ಸಹಿತ ಇರುವ ಪಾಸ್‌ಬುಕ್, ಪಾನ್ ಕಾರ್ಡ್, ನರೇಗಾ ಜಾಬ್ ಕಾರ್ಡ್,…
ಚುನಾವಣೆ ಘೋಷಣೆ ನಂತರ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಅಲ್ಲಲ್ಲಿ ಚೆಕ್ಪೋಸ್ಟ್ಗಳನ್ನು ಹಾಕಿ ತಪಾಸಣೆ ನಡೆಸಿ ಅಕ್ರಮವಾಗಿ ಅಥವಾ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ವಸ್ತುಗಳನ್ನು ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ. ಈವರೆಗೆ ಒಟ್ಟು 230 ಕೋಟಿ ಮೌಲ್ಯದ ವಸ್ತುಗಳನ್ನು ಹಾಗೂ 105 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ. ಇಂದು ಸಹ ಹಣ ಸಾಗಾಟದ ಬಗ್ಗೆ ನಿಗಾ ಇಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಈವರೆಗೆ 53,406 ವ್ಯಕ್ತಿಗಳ ವಿರುದ್ಧ ಬಾಂಡ್ ಓವರ್ ಮಾಡಲಾಗಿದೆ. ಭದ್ರತಾ ಪ್ರಕರಣ ಉಲ್ಲಂಘಿಸಿದ 115 ಪ್ರಕರಣ ದಾಖಲಿಸಲಾಗಿದೆ. 1.57 ಕೋಟಿ ಹಣ ಮುಟ್ಟುಗೋಲುಗೆ ಕ್ರಮ ಕೈಗೊಳ್ಳಲಾಗಿದೆ. 714 ಜನರ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ವಶಕ್ಕೆ ಪಡೆದ ಹಣ ಎಷ್ಟು ಗೊತ್ತಾ? ಬೆಂಗಳೂರು ನಗರದಲ್ಲಿ ಚುನಾವಣೆ ಘೋಷಣೆ ನಂತರ ಈವರೆಗೆ ಒಟ್ಟು 10,93,97,005 ರೂ ನಗದು ವಶಕ್ಕೆ ಪಡೆಯಲಾಗಿದೆ ಎಂದು ಶರಣಪ್ಪ ಹೇಳಿದ್ದಾರೆ. ಈವರೆಗೆ ಒಟ್ಟು 28.5 ಕೆಜಿ ಬಂಗಾರ, 140…
ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಎಲ್ಲಾ ರೀತಿಯಲ್ಲಿ ಕ್ರಮ ಕೈಗೊಂಡಿದ್ದು, ಭದ್ರತೆಗಾಗಿ 1,56,000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದೆ. 304 ಡಿವೈಎಸ್ ಪಿ, 991 ಪಿಐ, 2610 ಪಿಎಸ್ ಐ, 5803 ಎಎಸ್ ಐ, 46,421 ಎಚ್ ಸಿ/ ಪಿಸಿ, 27,990 ಹೋಂ ಗಾರ್ಡ್ ಸೇರಿದಂತೆ 84,119 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಹೊರರಾಜ್ಯದ 8500 ಮಂದಿ ನಿಯೋಜನೆ ಜೊತೆಗೆ 8,500 ಮಂದಿ ಹೊರ ರಾಜ್ಯದ ಪೊಲೀಸರು ಹಾಗೂ 650 ಸಿಎ ಪಿ ಎಫ್ ಒಟ್ಟು ಪೊಲೀಸರು ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ. ಜೊತೆಗೆ 101 ಸಿಆರ್ ಪಿ ಎಫ್, 108 ಬಿಎಸ್ ಎಫ್, 75, ಸಿಐಎಸ್ ಎಫ್, 70 ಐಟಿಬಿಪಿ, 75 ಎಸ್ ಎಸ್ ಬಿ, 35 ಆರ್ ಪಿ ಎಫ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಜೊತೆಗೆ 890 ಸ್ಟ್ರೆಕಿಂಗ್ ಪಾರ್ಟಿಗಳನ್ನು ಬಂದೋಬಸ್ತ್…
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದ್ದು, ನಗರದ್ಯಾಂತ ಪೊಲೀಸರು ಈಗಾಗಲೇ ಕಟ್ಟೆಚ್ಚರವಹಿಸಿದ್ದು, ಮತದಾನದ ದಿನ ಭದ್ರತೆಗಾಗಿ ಹರಸಾಹಸ ಪಡುತ್ತಿದ್ದಾರೆ. ಮೇ 10ರಂದು ಮತದಾನ ನಡೆಯಲಿದ್ದು, ಭಾರೀ ಪೊಲೀಸ್ ಭದ್ರತೆ (Police Security) ಕೈಗೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ (Alok Kumar), ಚುನಾವಣೆ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಚುನಾವಣೆ ಭದ್ರತೆಗೆ ಬೇಕಾದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ರಾಜ್ಯಾದ್ಯಂತ ಒಟ್ಟು 1.60 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು. ಭದ್ರತಾ ಕಾರ್ಯದಲ್ಲಿ 304 ಡಿವೈಎಸ್ಪಿ, 991 ಪೊಲೀಸ್ ಇನ್ಸ್ಪೆಕ್ಟರ್, 2,610 ಪಿಎಸ್ಐ, 5,803 ಎಎಸ್ಐ ಸೇರಿದಂತೆ 84,000 ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಇವರೊಂದಿಗೆ 8.5 ಸಾವಿರ ಹೋಂಗಾರ್ಡ್ಗಳನ್ನು, 650 ಸಿಆರ್ಪಿಎಫ್ ತುಕಡಿ, ಕೆಎಸ್ಆರ್ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಹೆಚ್ಚಿನ ಭದ್ರತೆಗಾಗಿ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಗೋವಾ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆ ಯಾವತ್ತು ನಿಯೋಜಿಸಿರಲಿಲ್ಲ, ಚುನಾವಣಾಧಿಕಾರಿಗಳ ಕೆಲವು ಮಾನದಂಡಗಳ ಪ್ರಕಾರ ನಿಯೋಜನೆ…
ಕಲಬುರಗಿ: ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Elections 2023) ಬಹಿರಂಗ ಸಭೆಯ ಅಂತಿಮ ದಿನವಾದ ಇಂದು ಕಲಬುರಗಿಯಲ್ಲಿ (Kalaburagi) ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಭಾವುಕ ಭಾಷಣ ಮಾಡಿ ಮತಯಾಚನೆ ನಡೆಸಿದರು. ಕರ್ನಾಟಕದ ಭೂಮಿ ಪುತ್ರನಾಗಿರುವ ನನ್ನನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ನೀವೆಲ್ಲರೂ ಹೆಮ್ಮೆ ಪಡಬೇಕು. ಯಾರು ಏನೇ ಹೇಳಿದರೂ ನಾನು ನನ್ನ ಕೊನೆಯ ಉಸಿರು ಇರುವವರೆಗೂ ಬಡವರಿಗಾಗಿ ಹೋರಾಟವನ್ನು ಮುಂದುವರೆಸುತ್ತೇನೆ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ನನ್ನನ್ನು ಮುಗಿಸಲೇಬೇಕು ಎಂದು ಬಿಜೆಪಿ ನಾಯಕರ ಮನಸ್ಸಿಗೆ ಬಂದಿರಬಹುದು, ಇಲ್ಲದಿದ್ದರೆ ಖರ್ಗೆ ಮತ್ತು ಕುಟುಂಬವನ್ನು ಮುಗಿಸುತ್ತೇನೆ ಎಂದು ಹೇಳುವ ಧೈರ್ಯ ಯಾರಿಗೆ ಇರುತ್ತದೆ? ಎಂದು ಹೇಳಿದ ಮಲ್ಲಿಕಾರ್ಜುನ ಖರ್ಗೆ, ಯಾರೂ ನನ್ನನ್ನು ಸುಲಭವಾಗಿ ಮುಗಿಸಲು ಸಾಧ್ಯವಿಲ್ಲ. ನನ್ನ ರಕ್ಷಣೆಗೆ ಬಾಬಾಸಾಹೇಬರ ಸಂವಿಧಾನವಿದೆ, ಕಲಬುರಗಿ, ಕರ್ನಾಟಕದ ಜನತೆ ನನ್ನ ಬೆನ್ನಿಗಿದ್ದಾರೆ. ಈಗ ಎಐಸಿಸಿ ಅಧ್ಯಕ್ಷರಾದ ಮೇಲೆ ದೇಶದ ಜನ ನನ್ನ ಬೆನ್ನಿಗಿದ್ದಾರೆ ಎಂದು ಹೇಳಿದರು. ನಾನು ಸಹ ಬಲಶಾಲಿಯಾಗಿದ್ದೇನೆ. ಒಬ್ಬ…
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ನಿರೀಕ್ಷೆ ಮೀರಿ ಬಿಜೆಪಿ ಅಭ್ಯರ್ಥಿ ಸಚಿವ ಭೈರತಿ ಬಸವರಾಜ್ ಪರ ಅಲೆ ಹೆಚ್ಚಾಗಿದೆ. ಎಲ್ಲೆಡೆ ಭವ್ಯ ಸ್ವಾಗತದೊಂದಿಗೆ ಗೆಲುವಿನ ವಿಶ್ವಾಸ ಇಮ್ಮಡಿಯಾಗಲು ಕಾರಣವಾಗಿದೆ. ಇಂದು ರಾಮಮೂರ್ತಿನಗರ ಮತ್ತು ವಿಜಿನಾಪುರದ ವಾರ್ಡ್ ನ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಮುಖಂಡ ದುಶಾಂತ್ ಹಾಗೂ ಪ್ರಶಾಂತ್ ನೇತ್ರತ್ವದಲ್ಲಿ ನೂರಾರು ಜನ ರೋಡ್ ಶೋ ದಲ್ಲಿ ಪಾಲ್ಗೊಂಡು ಸಚಿವ ಭೈರತಿ ಬಸವರಾಜ್ ಗೆ ಜೈಕಾರ ಕೂಗಿದರು. ನಂತರ ಬಿಜೆಪಿ ಹಿರಿಯ ಮುಖಂಡ ಬಾಕ್ಸರ್ ನಾಗರಾಜ್ ಅವರ ನೇತ್ರತ್ವದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಸಾಗಿದ ಪ್ರಚಾರ ಒಂದೊಂದು ಬಡವಾಣೆ, ಗ್ರಾಮಗಳಿಗೆ ಸಾಗಿದಾಗ ನೂರಾರು ಬೆಂಬಲಿಗರು ಜೊತೆಯಾಗಿ ಹೂವಿನ ಸುರಿಮಳೆಯ ಮೂಲಕ ಸ್ವಾಗತಿಸಿದರು. ಮೆರೆವಣಿಗೆ ವೇಳೆ ಪುಷ್ಪವೃಷ್ಟಿ: ಇದಲ್ಲದೆ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯನ್ನೂ ನಡೆಸಿರುವ ಸಚಿವ ಭೈರತಿ ಬಸವರಾಜ್ ಅವರಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಪುಷ್ಪವೃಷ್ಟಿ ಸುರಿಸಿದ್ದಾರೆ. ತಮಟೆ ವಾದ್ಯದೊಂದಿಗೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದ್ದಾರೆ. ರಸ್ತೆಯುದ್ದಕ್ಕೂ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಬಿಜೆಪಿ, ಭೈರತಿ…
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ಘೋಷಣೆ ಮಾಡಿರುವ ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Sivakumar) ತಿಳಿಸಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ನಾನು ಕನಕಪುರಕ್ಕೆ ಹೋಗ್ತಿದ್ದೀನಿ. ಮೂರು ಗಂಟೆಗೆ ಹೋಗಿ ಮನವಿ ಮಾಡಿ ಬರ್ತೀನಿ. ಈ ರಾಜ್ಯಕ್ಕೆ ಒಳ್ಳೆಯ ಸರ್ಕಾರ ಕೊಡ್ತೀವಿ. ರೈತರಿಗೆ ಕರೆಗಳು ತುಂಬಿಸುತ್ತೇವೆ. ಹೆಣ್ಣು ಮಕ್ಕಳಿಗೆ ಹೆರಿಕೆ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ. ಎಲ್ಲರನ್ನೂ ಸಮಾನತೆಯಿಂದ ನೋಡುತ್ತೇವೆ. ಮಕ್ಕಳಿಗೆ ಗ್ರಾಮಗಳಲ್ಲಿ ಉತ್ತಮ ಶಿಕ್ಷಣ ನೀಡಿ ಸಿಟಿಗಳಿಗೆ ಬರೋದನ್ನು ತಪ್ಪಿಸುತ್ತೇವೆ” ಎಂದು ಹೇಳಿದರು. ರಾಜ್ಯ ವಿಧಾನಸಭಾ ಚುನಾವಣೆಯ (Karnataka Election)ಮತದಾನಕ್ಕೆ ಕೇವಲ ಎರಡೇ ದಿನ ಬಾಕಿ ಇದೆ. ಈ ನಡುವೆ, “ಯಾರ ನೇತೃತ್ವದ ಕ್ಯಾಬಿನೆಟ್ ಎನ್ನುವ ವಿಚಾರ ಮೇ 15 ರಂದು ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡ್ತಾರೆ. ನಾವು 141 ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ. 15ನೇ ತಾರೀಖಿನಂದು ಕ್ಯಾಬಿನೆಟ್ನಲ್ಲಿ ನಾವು ಘೋಷಣೆ ಮಾಡಿರುವ ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆ” ಎಂದರು. ಕಾಂಗ್ರೆಸ್ಗೆ…
ಮತದಾನದ ದಿನ ಹತ್ತಿರಕ್ಕೆ ಬಂದಿದೆ. ಮೇ 10ರಂದು ಮತದಾನಕ್ಕಾಗಿ ಇಡೀ ಕರ್ನಾಟಕವೇ ಸಜ್ಜುಗೊಂಡಿದೆ. ಆದರೆ, ಅನೇಕ ಮತದಾರರಿಗೆ ತಮ್ಮ ಬೂತ್ ಯಾವುದು ಎಂಬುದು ಗೊತ್ತಿರುವುದಿಲ್ಲ. ಗೊತ್ತಿದ್ದರೂ ಯಾವ ಕಡೆಯಿಂದ ಹೋಗಬೇಕು ಎಂಬಿತ್ಯಾದಿ ಗೊಂದಲಗಳಿರುತ್ತವೆ. ಅಷ್ಟೇ ಅಲ್ಲ, ಇನ್ನೂ ಹಲವಾರು ಮಂದಿಗೆ ತಾವು ಮತ ಚಲಾಯಿಸುವ ಬೂತ್ ಅಥವಾ ಅಲ್ಲಿಗೆ ಹೋಗುವ ದಾರಿ ಎರಡೂ ಗೊತ್ತಿದ್ದರೂ, ವೃದ್ಧ ಮತದಾರರನ್ನು ಕರೆದುಹೋಗುವ ಜವಾಬ್ದಾರಿಯಿರುತ್ತದೆ, ವಿಕಲ ಚೇತನರಿಗೆ ಮತಗಟ್ಟೆಗಳಲ್ಲಿ ತಮಗೆ ವ್ಹೀಲ್ ಚೇರ್ ನಂಥ ಸೌಲಭ್ಯಗಳಿವಿಯೇ ಎಂಬ ಬಗ್ಗೆ ಪ್ರಶ್ನೆಗಳಿರುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ, ಗೊಂದಲಗಳಿಗೆ ಉತ್ತರ ಕೊಡುವ ಸಲುವಾಗಿ, ಚುನಾವಣಾ ಆಯೋಗವು ‘ಚುನಾವಣಾ’ ಎಂಬ ಮೊಬೈಲ್ ಅಪ್ಲಿಕೇಷನ್ ಕೂಡ ಬಿಡುಗಡೆ ಮಾಡಿದೆ. ಕರ್ನಾಟಕ ಚುನಾವಣಾ ಮಾಹಿತಿ ಎಂಬ ವೆಬ್ ಸೈಟ್ ಕೂಡ ರೂಪಿಸಲಾಗಿದ್ದು, ಚುನಾವಣಾ ಆ್ಯಪ್ ಇದೇ ವೆಬ್ ಸೈಟ್ ಅಡಿಯಲ್ಲಿ ಕೆಲಸ ಮಾಡುತ್ತದೆ. ಈ ವೆಬ್ ಸೈಟ್ ಅಥವಾ ಆ್ಯಪ್ ಮೂಲಕ ಮತದಾರರು ತಮ್ಮ ಮತಗಟ್ಟೆಗಳ ಬಗ್ಗೆ ಮಾಹಿತಿ ಹಾಗೂ ಇತರ ಸೌಲಭ್ಯಗಳನ್ನು…