ಬೆಳಗಾವಿ: ನನ್ನ ಕ್ಷೇತ್ರದ ಪ್ರತಿಯೊಬ್ಬರಿಗೂ ಗ್ಯಾರಂಟಿ ಯೋಜನೆ ತಲುಪಬೇಕು. ನಮ್ಮ ಪಕ್ಷದ ನಾಯಕರು ನನಗೆ ಸಚಿವ ಸ್ಥಾನ ನೀಡಿದ್ದಾರೆ. ಕಷ್ಟ ಬರಲಿ, ಸುಖ ಬರಲಿ ಮನೆ ಮಗಳಂತೆ ಕೆಲಸ ಮಾಡಿದ್ದೇನೆ. ಗ್ರಾಮೀಣ ಕ್ಷೇತ್ರದ ಮನೆ ಮಗಳಾಗಿ ಜವಾಬ್ದಾರಿ ನಿಭಾಯಿಸುವೆ. ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ಮನೆ ಯಜಮಾನಿಗೆ ಹಣ ನೀಡುವ ಯೋಜನೆ ನನ್ನ ಇಲಾಖೆಯಲ್ಲಿದೆ. ಮನೆ ಯಜಮಾನಿ ಖಾತೆಗೆ 2 ಸಾವಿರ ರೂ. ಹಣ ಹಾಕುವುದು ನನ್ನ ಜವಾಬ್ದಾರಿ. ಮಹಿಳೆಯರು ಮುಖ್ಯವಾಹಿನಿಗೆ ಬರಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಕನಸು ಎಂದು ಅಭಿನಂದನಾ ಸಮಾರಂಭದಲ್ಲಿ (Lakshmi Hebbalkar)ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
Author: Prajatv Kannada
ಬೆಂಗಳೂರು:- ಕೇಂದ್ರದ ಮೇಲೆ ಒತ್ತಡ ಹಾಕಿ ರಾಜ್ಯಕ್ಕೆ ಅಕ್ಕಿ ನೀಡುವಂತೆ ರಾಜ್ಯ ಬಿಜೆಪಿ ನಾಯಕರು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೆಚ್ಚುವರಿ ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ. ಮೊದಲು ಭಾರತೀಯ ಆಹಾರ ನಿಗಮ ಅಕ್ಕಿ ನೀಡುವುದಾಗಿ ಹೇಳಿತ್ತು. ಜೂನ್ 12ರಂದು ಎಫ್ಸಿಐ ಕೂಡ ಪತ್ರ ಬರೆದಿತ್ತು. ಆದರೆ ಇದೀಗ ಎಫ್ಸಿಐ ಅಕ್ಕಿ ನೀಡಲಾಗಲ್ಲ ಎಂದು ಪತ್ರ ಬರೆದಿದೆ. ಬಡವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಯಾಕೆ? ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದರು. ನಮ್ಮ ರಾಜ್ಯದಲ್ಲಿ ಅಕ್ಕಿ ಇಲ್ಲ. ಅಕ್ಕಿ ಇದ್ದರೆ ಕೊಡಿಸಿ ನೀವೇ ಎಂದು ಹೇಳಿದ ಸಿದ್ದರಾಮಯ್ಯ, ರಾಯಚೂರಿನಲ್ಲಿ ಸೋನಾ ಮಸೂರಿ ಇರುವುದು. ಅದು ಒಂದು ಕೆ.ಜಿಗೆ 55 ರೂಪಾಯಿ ಅಂತ ಹೇಳುವ ಮೂಲಕ ರಾಜ್ಯದ ರೈತರಿಂದ ಅಕ್ಕಿ ಖರೀದಿಸಲ್ಲ ಅಂತ ಪರೋಕ್ಷವಾಗಿ ಹೇಳಿದರು.
ಬೆಂಗಳೂರು ;-ಉಚಿತ ಪ್ರಯಾಣ ಹಿನ್ನೆಲೆ ಸರ್ಕಾರಿ ಬಸ್‌ಗಳೆಲ್ಲಾ ತುಂಬಿ ತುಳುಕುತ್ತಿರುವ ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ನಿಜ. ಇದು ಆರಂಭ ಅಲ್ವಾ? ಜನರು ಪುಣ್ಯ ಕ್ಷೇತ್ರಗಳಿಗೆ ಹೋಗುತ್ತಿರುವುದರಿಂದ ರಷ್ ಆಗುತ್ತಿದೆ. ಒಂದು ಸಲ ಹೋಗಿ ಬಂದ ಮೇಲೆ ಜನ ಮತ್ತೆ ಹೋಗುವುದಿಲ್ಲ. ಹೀಗಾಗಿ ಸ್ವಲ್ಪ ದಿನ ಕಳೆದ ಮೇಲೆ ಈ ರೀತಿ ಇರುವುದಿಲ್ಲ. ಒಂದು ತಿಂಗಳು ನೋಡುತ್ತೇವೆ. ಸತತವಾಗಿ ಜನ ಹೆಚ್ಚಾಗಿದ್ದಾರೆ ಅನ್ನಿಸುವ ಕಡೆ ಬಸ್‌ಗಳ ಹೆಚ್ಚಿಸುವ ಕೆಲಸ ಮಾಡುತ್ತೇವೆʼʼ ಎಂದು ಹೇಳಿದರು. ಮಹಿಳೆಯರ ಸಂಖ್ಯೆಯೇ ಹೆಚ್ಚಿದ್ದರಿಂದ ಕೆಲವು ಕಡೆ ಅವಾಂತರಗಳು ಆಗಿರುವುದು ನಿಜ. ರಷ್‌ನಲ್ಲಿ ತಳ್ಳಾಡಿ, ಎಳೆದಾಡಿದ ಹಿನ್ನೆಲೆಯಲ್ಲಿ ಒಂದು ಕಡೆ ಡೋರೇ ಕಿತ್ತು ಬಂದಿದೆ. ಒಂದೆ ಸಲಕ್ಕೆ ಎಲ್ಲರೂ ಹೋಗಬೇಕು ಅಂದಾಗ ಹೀಗೆ ಆಗುತ್ತದೆ. ಎಲ್ಲರೂ ಒಂದೇ ಸಲ ಹೋಗೊದಕ್ಕಿಂದ ಜನ ತಾಳ್ಮೆಯಿಂದ ಪ್ಲಾನ್ ಮಾಡಿ ಓಡಾಡಬೇಕು ಎಂದು ಹೇಳಿದರು. ʻʻಪುರುಷರಿಗೆ ಶೇಕಡಾ…
ಬೆಂಗಳೂರು ;– ಪ್ರತಾಪ ಸಿಂಹ ಅವರದ್ದು ಚಿಲ್ಲರೆ ಮನಸ್ಥಿತಿ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಎಂ.ಬಿ ಪಾಟೀಲ್ ಹೆಗಲ ಮೇಲೆ ಬಂದೂಕು ಇಟ್ಟು ಡಿಸಿಎಂ ಡಿ ಕೆ ಶಿವಕುಮಾರ್ಗೆ ಶೂಟ್ ಮಾಡಿದ್ದಾರೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನನ್ನ ಹಾಗೂ ಡಿ ಕೆ ಶಿವಕುಮಾರ್ ಸಂಬಂಧ ಚೆನ್ನಾಗಿದೆ. ಪಕ್ಷದ ಮಟ್ಟದಲ್ಲಿ ನಮ್ಮದೇ ಆದ ಭಿನ್ನಾಭಿಪ್ರಾಯಗಳು ಇರಬಹುದು. ಇಲ್ಲಾ ಅಂತ ನಾನು ಹೇಳಲ್ಲ. ಅದು ಪಕ್ಷದ ಒಳಗಡೆ ಮಾತ್ರ, ಅದರ ಹೊರತಾಗಿ ನಮ್ಮ ಸಂಬಂಧ ಚೆನ್ನಾಗಿದೆ. ಸಿದ್ದರಾಮಯ್ಯ ಇನ್ಯಾರದೋ ಹೆಗಲ ಮೇಲೆ ಬಂದೂಕು ಇಟ್ಟು ಶೂಟ್ ಮಾಡುವಂತವರಲ್ಲ. ನಾನು ಅಷ್ಟೇ, ಏನೇ ಇದ್ರೂ ಡೈರೆಕ್ಟ್ ಆಗಿಯೇ ಹೊಡೆಯುತ್ತೇನೆ. ನನಗೂ ಆ ತಾಕತ್ತಿದೆ” ಎಂದು ಕಿಡಿಕಾರಿದ್ದಾರೆ. “ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರಿಯುವ ವಿಚಾರವಾಗಿ ಹಿಂದೆ ನಾನು ಏನು ಹೇಳಿದ್ದೇನೊ ಅದಕ್ಕೆ ನಾನು ಈಗಾಗಲೇ ಕ್ಲಾರಿಫಿಕೇಶನ್ ಕೊಟ್ಟಿದ್ದೇನೆ. ಅದರ ಬಗ್ಗೆ ಈಗ…
ಬೆಂಗಳೂರು ;- ಯಾವುದೇ ಕಾರಣಕ್ಕೂ ವಿದ್ಯುತ್ ದರ ಕಡಿಮೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿದ್ಯುತ್ ದರ ಕಡಿಮೆ ಆಗಲ್ಲ. 2 ತಿಂಗಳ ಬಿಲ್ ಒಟ್ಟಿಗೆ ಬಂದಿದೆ. ಹೀಗಾಗಿ ದರ ಜಾಸ್ತಿಯಾಗಿದೆ ಎಂದರು. ಮುಂದಿನ ತಿಂಗಳಿನಿಂದ ವಿದ್ಯುತ್ ಬಿಲ್ ಸರಿಯಾಗಿ ಬರುತ್ತದೆ. ಅಲ್ಲಿಯವರೆಗೆ ಕಾದು ನೋಡಿ ಎಂಬುದಾಗಿ ತಿಳಿಸಿದರು. ಇದೇ ವೇಳೆ bವಿದ್ಯುತ್ ದರ ಏರಿಕೆ ಖಂಡಿಸಿ ಎಫ್ ಕೆ ಸಿಸಿಐ ಪ್ರತಿಭಟನೆ ವಿಚಾರವಾಗಿ ಮಾತನಾಡಿದಂತ ಸಿದ್ದರಾಮಯ್ಯ ಅವರು, ಎಫ್ ಕೆ ಸಿಸಿಐ ಜೊತೆಗೆ ಮಾತನಾಡಿ, ಚರ್ಚಿಸುವುದಾಗಿ ತಿಳಿಸಿದರು. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಸಂಬಂಧ ಅಕ್ಕಿ ಹೊಂದಾಣಿಕೆಯಲ್ಲಿ ಸರ್ಕಾರ ತೊಡಗಿದೆ. ರಾಜಯಚೂರಿನಲ್ಲಿ ಸೋನಾ ಮಸೂರಿ ಅಕ್ಕಿ ಇದೆ. ಪ್ರತಿ ಕೆಜಿಗೆ 55 ರೂಪಾಯಿ, ಎಫ್ ಸಿಐ ಪ್ರತಿ ಕೆಜಿಗೆ 36.60 ದರ ನಿಗದಿಯಲ್ಲಿ ಕೊಡಲು ಹೇಳಿತ್ತು. ಸೋನಾ ಮಸೂರಿ ಅಕ್ಕಿಯನ್ನು ಕೊಡಲಾಗುತ್ತಾ ಎಂದು ಹೇಳಿದರು.
ಬೆಂಗಳೂರು ;- ಮೋದಿಯವರ ಅಂಧ ಭಕ್ತರೂ ‘ಮನ್ ಕಿ ಬಾತ್’ ಕೇಳುತ್ತಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಟೀಕೆ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಇತ್ತೀಚಿನ ವರದಿಗಳ ಪ್ರಕಾರ ಮೋದಿಯವರ ಅಂಧ ಭಕ್ತರೂ ಮನ್ ಕಿ ಬಾತ್ ಕೇಳುತ್ತಿಲ್ಲ. ಆದರೂ ಮೋದಿಯವರು ಛಲ ಬಿಡದ ತ್ರಿವಿಕ್ರಮನಂತೆ ಮನ್ ಕಿ ಬಾತ್ ಮಾಡುತ್ತಲೇ ಇದ್ದಾರೆ. ಮೋದಿಯವರೇ, ಇಂದಿನ ಮನ್ ಕಿ ಬಾತ್‌ನಲ್ಲಾದರೂ ಚರ್ವಿತ ಚರ್ವಣದಂತೆ ಹೇಳಿದನ್ನೇ ಹೇಳುವುದ ಬಿಟ್ಟು ಹೊಸದೇನಾದರೂ ಹೇಳುವಿರಾ? ಮೋದಿಯವರೇ, ನಿಮ್ಮ ಇಂದಿನ ಮನ್ ಕಿ ಬಾತ್ ಬಗ್ಗೆ ಅನೇಕ ನಿರೀಕ್ಷೆಗಳಿವೆ. ಇಂದು ನಿಮ್ಮ ಮನದಾಳದ ಮಾತಿನಲ್ಲಿ ಮಣಿಪುರದ ಹಿಂಸಾಚಾರದ ಬಗ್ಗೆ ಮಾತಾಡುವಿರೆ? ಮಹಿಳಾ ಕುಸ್ತಿಪಟುಗಳ ಮೇಲೆ ನಿಮ್ಮ ಪಕ್ಷದ ಸಂಸದ ಎಸಗಿದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತಾಡುವಿರೆ? ಚೀನಾ ಮತ್ತು ಭಾರತದ ಗಡಿ ಸಂಘರ್ಷದ ಬಗ್ಗೆ ದೇಶದ ಜನರೆದುರು ಸತ್ಯ ಮಾತಾಡುವಿರೆ? ಮೋದಿಯವರೇ, ನಮ್ಮ ರಾಜ್ಯಕ್ಕೆ ಅಕ್ಕಿ ಕೊಡಲು ಒಪ್ಪಿ ನಂತರ ನಿರಾಕರಿಸಿದ ಬಗ್ಗೆ ಮನ್…
ಬೆಂಗಳೂರು ;– ಅಕ್ಕಿ ರಾಜಕಾರಣದ ಬಗ್ಗೆ ಎಂ ಬಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಸಿಎಂ ಈಗಾಗಲೇ ಗಂಭೀರ ಪ್ರಯತ್ನ ಮಾಡ್ತಾ ಇದಾರೆ. ಛತ್ತೀಸ್ ಗಡ ರಾಜ್ಯದ ಜೊತೆ ಮಾತಾಡಿದ್ದಾರೆ. ಆದರೆ ಟ್ರಾನ್ಸ್‌ಪೋರ್ಟ್ ಖರ್ಚನ್ನು ಕೂಡಾ ನೋಡಬೇಕು. ನಾವೇನು ಕೇಂದ್ರ ಸರ್ಕಾರದ ಬಳಿ ಸುಮ್ಮನೆ ಕೊಡಲು ಕೇಳ್ತಾ ಇಲ್ಲ. ಹಣ ಕೊಡ್ತೀವಿ ಅಂತಾ ಕೇಳ್ತಾ ಇದೀವಿ. ಬಡವರ ವಿಚಾರದಲ್ಲಿ ರಾಜಕಾರಣ ಮಾಡಬಾರದು. ನಮ್ಮ ಸಂಸದರಿಗೆ ಸಚಿವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ” ಎಂದರು. ಬಿ.ಎಲ್. ಸಂತೋಷ್, ಅದಾನಿ ಉದ್ಯಮಗಳಿಗೆ ರಾಜ್ಯಕ್ಕೆ ಆಹ್ವಾನ ಎಂಬ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾನಾಡಿದ ಅವರು, “ಯಾವುದೇ ಗ್ರೂಪ್ ಇರಲಿ, ಕೈಗಾರಿಕೋದ್ಯಮಿಗಳ ಸಭೆ ಕರೆಯಲಾಗಿತ್ತು. ಅವರು ಸಲಹೆ-ಸೂಚನೆ ನೀಡಿದ್ರು. ನಾನು ಪಾರದರ್ಶಕವಾಗಿ ಉದ್ಯಮ ಸ್ಥಾಪಿಸುವವರಿಗೆ ಸ್ವಾಗತ ಅಂತ ಹೇಳಿದ್ದೆ” ಎಂದು ತಿಳಿಸಿದರು. ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ನಿಂದ ಯಾವುದೇ ಮಾಹಿತಿ ಇಲ್ಲ. ಸುದ್ದಿಗೋಷ್ಠಿಯಲ್ಲಿ ಹೇಳಿದಷ್ಟೇ ಮಾಹಿತಿ ಇದೆ,…
ಬೆಂಗಳೂರು ; ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಿಸಲು ಬಿಜೆಪಿ ಸಹಕಾರ ನೀಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಮನವಿ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ 25 ಸಂಸದರು ಇರುವುದರಿಂದ 5 ಕೆ.ಜಿ. ಅಕ್ಕಿ ಕೊಡಿಸುತ್ತಿದ್ದೇವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿರುವುದಕ್ಕೆ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಪಂಚಖಾತ್ರಿ ಯೋಜನೆಗಳನ್ನು ನೀಡಿವೆ. ಅದರಲ್ಲಿ ಅನ್ನಭಾಗ್ಯವೂ ಒಂದು. ಕರ್ನಾಟಕದಿಂದ ಸಂಸದರೂ ಹಾಗೂ ಸಚಿವರಾಗಿರುವ ಬಿಜೆಪಿಯವರು ರಾಜ್ಯದ ಜನರ ನೆರವಿಗೆ ಬರಬೇಕು. ಅನ್ನಭಾಗ್ಯಕ್ಕೆ ನಾವು ಉಚಿತವಾಗಿ ಅಕ್ಕಿ ನೀಡುವಂತೆ ಕೇಳುತ್ತಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಹಣ ಪಾವತಿಸಲು ತಯಾರಿದ್ದೇವೆ. ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು ರಾಜ್ಯಸರ್ಕಾರ ಪಂಚಖಾತ್ರಿ ಯೋಜನೆಗಳಿಗೆ ಬದ್ಧವಾಗಿದೆ. ಕೇಂದ್ರ ಸರ್ಕಾರದ ಸಹಕಾರ ಸಿಗಲಿ, ಸಿಗದೇ ಇರಲಿ ಅದನ್ನು ಈಡೇರಿಸುವ ಬದ್ಧತೆ ಇದೆ. ಎಲ್ಲೆಲ್ಲಿ ಲಭ್ಯವಿರುತ್ತದೆಯೋ ಅಲ್ಲಿಂದೆಲ್ಲಾ ಅಕ್ಕಿ ಖರೀದಿಸಿ ತರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ;– ಶಕ್ತಿ ಯೋಜನೆ ಯಶಸ್ಸಿನ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ಸಂತಸ ವ್ಯಕ್ತಡಿಸಿದ್ದಾರೆ. ಶಕ್ತಿ ಯೋಜನೆಯಿಂದ ದೇವಸ್ಥಾನಕ್ಕೆ ಬರುವವರ ಸಂಖ್ಯೆ ದ್ವಿಗುಣವಾಗಿದೆ. ಜನರ ಅಂತರಾಳದಲ್ಲಿ ಪೂಜಿಸುವ, ಪ್ರೀತಿಸುವ ಭಾವನೆ ಸಬಲಗೊಳಿಸಲಾಗಿದೆ. ಹಿಂದುತ್ವವು ಜನರನ್ನು ಧರ್ಮದ ದಾರಿಯಲ್ಲಿ ಸಾಗಿಸುವ ಬದಲಿಗೆ ಸಮಾಜವನ್ನು ಇಬ್ಭಾಗಿಸುವ ದ್ವೇಷ ಹಾಗೂ ಅಸೂಯೆಯ ಕೂಪಕ್ಕೆ ತಳ್ಳಿತ್ತು. ದ್ವೇಷದಿಂದ ಜನರನ್ನು ದೇವರ ಬಳಿ ಕರೆದೊಯ್ಯಲು ಸಾಧ್ಯವಿಲ್ಲ. ಆದರೆ ಪ್ರೀತಿ ಹಾಗೂ ಕಾಂಗ್ರೆಸ್ ಸರ್ಕಾರದ ‘ಶಕ್ತಿ’ ಯೋಜನೆಯು ಜನರನ್ನು ತಮ್ಮ ಪೂಜ್ಯ ಸ್ಥಳಗಳಿಗೆ ಮತ್ತಷ್ಟು ಹತ್ತಿರ ಮಾಡಿದೆ. ದೇವಸ್ಥಾನಗಳ ಸುತ್ತಲಿನ ಸಣ್ಣ ವ್ಯಾಪಾರಿಗಳಿಗೆ ನೇರ ಅನುಕೂಲ ಆಗಲಿದೆ. ಅಲ್ಲಿನ ಆರ್ಥಿಕ ಪ್ರಗತಿಯ ವೇಗ ಕೂಡ ದ್ವಿಗುಣಗೊಳ್ಳಲಿದೆ. ದ್ವೇಷ ಕೇಂದ್ರಿತ ಅಧರ್ಮವನ್ನು ಸೋಲಿಸಿ ಪ್ರೀತಿ ಹಾಗೂ ಸಹಬಾಳ್ವೆ ಕೇಂದ್ರಿತ ಧರ್ಮ ಗೆಲ್ಲಿಸಲು ಹೆಜ್ಜೆ ಇಟ್ಟಿದ್ದೇವೆ. ಸಹಬಾಳ್ವೆ ಕೇಂದ್ರಿತ ಧರ್ಮ ಗೆಲ್ಲಿಸಲು ‘ಶಕ್ತಿ’ಯುತ ಹೆಜ್ಜೆ ಇಟ್ಟಿದ್ದೇವೆ ಎಂದು ಶಕ್ತಿ ಯೋಜನೆ ಯಶಸ್ಸಿನ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ; ರಾಜಧಾನಿ ಬೆಂಗಳೂರಿನಲ್ಲಿ ಯುಪಿಎಸ್‌ಸಿ ಟಾಪರ್ಸ್ ಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 2022 ನೇ ಸಾಲಿನ ಇನ್ಸೈಡ್ ಐಎಎಸ್ ಸಂಸ್ಥೆಯ ಯುಪಿಎಸ್‌ಸಿ ಟಾಪರ್ಸ್‌ಗೆ ನಡೆದ ಅಭಿನಂದನೆ ಕಾರ್ಯಕ್ರಮವು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಇನ್ಸೈಡ್ ಐಎಎಸ್ ಸಂಸ್ಥಾಪಕ ವಿನಯ್ , ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.