Author: Prajatv Kannada

ಬೆಂಗಳೂರು ; ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಲೈಂಗಿಕ ಕಾರ್ಯಕರ್ತೆಯ ಮೇಲೆ ಮೂವರು ಆರೋಪಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಜರುಗಿದೆ. ಲೈಂಗಿಕ ಕಾರ್ಯಕರ್ತೆ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಮೆಜೆಸ್ಟಿಕ್ ಬಳಿ ಇರುವ ಎಟಿಎಂ ಕಿಯೋಸ್ಕ್ ಬಳಿ ಗ್ರಾಹಕರಿಗಾಗಿ ಕಾದು ನಿಂತಿದ್ದಳು. ಈ ವೇಳೆ ಮೂವರು ಯುವಕರು ಮಹಿಳೆ ಬಳಿ ಬಂದಿದ್ದಾರೆ. ಆದರೆ, ಮೂವರು 20 ವರ್ಷದೊಳಗಿನ ಯುವಕರಾಗಿದ್ದರಿಂದ ಮಹಿಳೆ ನಿರಾಕರಿಸಿದ್ದಾರೆ. ಬಳಿಕ ಟೀ ಕುಡಿಯಲು ತೆರಳಿದ ಮಹಿಳೆ ಮತ್ತೊಬ್ಬ ಲೈಂಗಿಕ ಕಾರ್ಯಕರ್ತೆ ಜೊತೆಗೆ ಸ್ಥಳಕ್ಕೆ ಬಂದಿದ್ದಾರೆ. ಜೊತೆಗೆ ಬಂದಿದ್ದ ಮತ್ತೊಬ್ಬ ಮಹಿಳೆಯನ್ನೂ ಯುವಕರು ಸಂಪರ್ಕಿಸಿದ್ದು, ಅವರೂ ಕೂಡ ನಿರಾಕರಿಸಿದ್ದಾರೆ. ಇದರಿಂದ ಕೆಂಡಾಮಂಡಲಗೊಂಡ ಯುವಕರು ಮಾತಿನ ಚಕಮಕಿಗೆ ಇಳಿದಿದ್ದಾರೆ. ಸ್ಥಳದಿಂದ ಹೋಗುವಂತೆ ಮಹಿಳೆ ತಿಳಿಸಿದ್ದು, ಈ ವೇಳೆ ಯುವಕರು ಮರದ ಹಲಗೆಯಿಂದ ತಲೆ ಮೇಲೆ ಬಡಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕೂಡಲೇ ಮಹಿಳೆಯನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸರು…

Read More

ಬೆಂಗಳೂರು ;– ಶಕ್ತಿ ಯೋಜನೆ ಜಾರಿಗೊಂಡ ನಂತರ ಮೊದಲ ಭಾನುವಾರವಾದ ಇಂದು ಮಹಿಳೆಯರು ದೇವಾಲಯಗಳಿಗೆ ಲಗ್ಗೆ ಇಡುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು, ಸಿಗಂಧೂರು, ಶೃಂಗೇರಿ, ನಂದಿಬೆಟ್ಟ ಸೇರಿದಂತೆ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿತಾಣಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಜೊತೆಗೆ ಇಂದು ಭಾನುವಾರ ರಜಾ ದಿನವಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಮಕ್ಕಳನ್ನು ಸಹ ಕರೆದೊಯ್ಯುತ್ತಿದ್ದಾರೆ. ಸಾರಿಗೆ ಸಂಸ್ಥೆಯ 3 ನಿಗಮಗಳಿಂದ ಎಲ್ಲಾ ಘಟಕಗಳಿಂದಲೂ ಧಾರ್ಮಿಕ ಸ್ಥಳಗಳಿಗೆ ಬಸ್‍ಗಳ ಲಭ್ಯವಿದ್ದು ಎಲ್ಲಾ ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿ ಕಂಡುಬಂದಿತು.ಮೆಜೆಸ್ಟಿಕ್ ಕೆಎಸ್‍ಆರ್‍ಟಿಸಿ ಬಸ್ ಬಸ್ ನಿಲ್ದಾಣ, ಮೈಸೂರು ರಸ್ತೆಯ ಸಟಲೈಟ್ ಬಸ್ ನಿಲ್ದಾಣದಲ್ಲಿ ಹೆಚ್ಚಾಗಿ ಮಹಿಳಾ ಪ್ರಯಾಣಿಕರು ಕಂಡುಬಂದಿದ್ದು, ಮೈಸೂರು ಹಾಗು ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೆರಳಿದ್ದಾರೆ. ಆಷಾಡ ಅಮವಾಸ್ಯೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯ, ಮೈಸೂರಿನ ಚಾಮುಂಡೇಶ್ವರಿ ದೇವಾಲಯಗಳಿಗೆ ಮಹಿಳಾ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಇಂದಿನಿಂದ ಆಷಾಡ ಪ್ರಾರಂಭವಾಗುತ್ತಿದ್ದು, ದೇವಿಯ ದರ್ಶನ ಪಡೆದರೆ…

Read More

ಬೆಂಗಳೂರು ;ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಹೀಗಾಗಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕರಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಆದರೆ ಹಲವೆಡೆ ವೆಬ್ ಸೈಟ್ ಓಪನ್ ಆಗದ ಹಿನ್ನೆಲೆ ಜನತೆ ಬೇಸರದಿಂದ ವಾಪಸ್ ತೆರಳುತ್ತಿರುವ ದೃಶ್ಯ ಸೆರೆಯಾಗಿದೆ. ನೆಲಮಂಗಲ ನಗರದ ಬೆಸ್ಕಾಂ ಕಚೇರಿ ಬಳಿ ಮೂರು ನೊಂದಣಿ ಕೇಂದ್ರಕ್ಕೆ ಬಂದ ಜನತೆ, ವೆಬ್ ಸೈಟ್ ಒಪನ್ ಆಗದ ಹಿನ್ನೆಲೆ ವಾಪಸ್ ತೆರಳುತ್ತಿದ್ದಾರೆ. ಇಂದಿನಿಂದ 200 ಯೂನಿಟ್ ವಿದ್ಯುತ್ ಉಚಿತಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಗೃಹಜ್ಯೋತಿ ಯೋಜನೆಗೆ ಮೊದಲ ದಿನವೇ ತಾಂತ್ರಿಕ ಸಮಸ್ಯೆಯಿಂದ ಜನರು ಬೇಸರ ಹೊರ ಹಾಕಿದ್ದಾರೆ. ಒಬ್ಬೊಬ್ಬರಾಗಿ ನೋಂದಣಿ ಕೇಂದ್ರಕ್ಕೆ ಬಂದು ವಾಪಸ್ ಆಗುತ್ತಿದ್ದಾರೆ.

Read More

ಬೆಂಗಳೂರು ;– ಬೆಂಗಳೂರಿನ ಎಂ.ಜಿ.ರಸ್ತೆಯ ಬೆಸ್ಕಾಂ ಪ್ರಾದೇಶಿಕ ಕಚೇರಿಯಲ್ಲಿ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 200 ಯೂನಿಟ್ ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಸೇವಾಸಿಂಧು ಪೋರ್ಟಲ್ ಮೂಲಕವೂ ಅರ್ಜಿ ನೋಂದಣಿ ಮಾಡಬಹುದಾಗಿದೆ. ವೆಬ್ ಸೈಟ್ ವಿಳಾಸ ; http://sevasindhugs.karnataka.gov.in ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1912 ಕರೆ ಮಾಡಬಹುದು. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡಕಚೇರಿಗಳಲ್ಲಿಯೂ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್, ಆರ್ ಆರ್ ನಂಬರ್, ಮೊಬೈಲ್ ಸಂಖ್ಯೆ, ಮನೆ ಬಾಡಿಗೆ ಕರಾರು ಪತ್ರ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

Read More

ನವದೆಹಲಿ: ಬಾಹುಬಲಿ ಖ್ಯಾತಿಯ ಪ್ರಭಾಸ್​ ನಟನೆಯ ‘ಆದಿಪುರುಷ’ ಸಿನಿಮಾದ ಸಂಭಾಷಣೆಗಳು ಸಾಕಷ್ಟು ಟೀಕೆಗೆ ಗುರಿಯಾಗಿವೆ. ಸಿನಿಮಾದಲ್ಲಿ ಹಿಂದು ದೇವರನ್ನು ಅದರಲ್ಲೂ ಹನುಮಂತನನ್ನು ಅವಮಾನಿಸುವ ರೀತಿಯಲ್ಲಿ ಡೈಲಾಗ್​ ಹೇಳಿಸಲಾಗಿದ್ದು, ಇದಕ್ಕೆ ಹಲವು ರಾಜಕಾರಣಿಗಳು, ನಟರು ಹಾಗೂ ಧಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದೀಗ ಈ ಕುರಿತು ಗಾಯಕ ಸೋನು ನಿಗಮ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿರುವ ಗಾಯಕ ಸೋನು ನಿಗಂ, ‘ಈ ದೇಶಕ್ಕೆ ಅಪಾಯ ಇರುವುದು ಇಬ್ಬರಿಂದ ಮಾತ್ರ. ಒಬ್ಬರು ಜಾತಿವಾದಿಗಳು ಮತ್ತೊಬ್ಬರು ಜಮಾತ್ ಜನರು’. ದೇವರು ಅಂಥವರಿಗೆ ಬುದ್ಧಿ ಕೊಡಲಿ’ ಎಂದು ಬರೆದುಕೊಂಡಿದ್ದಾರೆ. ಆಜಾದ್ ಸೇನಾ ಅಧ್ಯಕ್ಷ ಅಭಿಷೇಕ್ ಶುಕ್ಲಾ ಅವರು ಆದಿಪುರುಷ ಸಿನಿಮಾವನ್ನು ಉಲ್ಲೇಖಿಸಿ, ‘ನೀವೆಲ್ಲರೂ ಚಿತ್ರವನ್ನು ಸಾಧ್ಯವಾದಷ್ಟು ವಿರೋಧಿಸಿ ಅಥವಾ ಬೆಂಬಲಿಸಿ. ಅದು ನಿಮ್ಮ ಸ್ವಾತಂತ್ರ್ಯ. ಆದರೆ, ಬ್ರಾಹ್ಮಣ ಸಮಾಜದ ಉದಯೋನ್ಮುಖ ಮುಖವಾದ ಮನೋಜ್ ಮುಂತಾಶಿರ್ ಅವರನ್ನು ವಿರೋಧಿಸಿದಾಗ ಮಾತ್ರ ನಿಮಗೆ ತಕ್ಕ ಉತ್ತರ ಸಿಗುತ್ತದೆ’ ಎಂದು ಬರೆದುಕೊಂಡಿದ್ದರು. ಇವರ ಜಾತಿ…

Read More

ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿಕೊಡ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ. ಆದರೆ ಈ ಬಗ್ಗೆ ವಿಜಯ್ ಮಾತ್ರ ಯಾವುದೇ ಸ್ಪಷ್ಟನೆ ನೀಡಲ್ಲ. ಇದೀಗ ತಮಿಳು ರಾಜಕೀಯದ ಅಗ್ರಮಾನ್ಯ ನಾಯಕರ ನಿಧನದಿಂದ ಉಂಟಾದ ನಿರ್ವಾತವನ್ನು ತುಂಬುವ ಗುರಿಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಶನಿವಾರ ತಮಿಳುನಾಡಿನ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಮೊದಲ ಮೂರು ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ದಳಪತಿ ವಿಜಯ್ ಶಿಕ್ಷಣ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಸಮಾರಂಭದಲ್ಲಿ ವಿಜಯ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು, ಬಿ.ಆರ್. ಅಂಬೇಡ್ಕರ್, ತಿರುವಳ್ಳೂರ್ ಹಾಗೂ ಕಾಮರಾಜ್ ಅತ್ಯಂತ ಗೌರವಾನ್ವಿತ ವ್ಯಕ್ತಿಗಳು. ವಿವಿಧ ರಾಜಕೀಯ ಪಕ್ಷಗಳಿಂದ ಹಣ ಪಡೆದು ತಮ್ಮ ಅಮೂಲ್ಯವಾದ ಮತಗಳನ್ನು ಚಲಾಯಿಸದಂತೆ ತಮ್ಮ ಪೋಷಕರಿಗೆ ಸಲಹೆ ನೀಡುವಂತೆ ಮಕ್ಕಳಿಗೆ ಕರೆ ನೀಡಿದರು. ವಿಜಯ್ ಅವರ ಅಭಿಮಾನಿಗಳ ಸಂಘವಾಗಿರುವ ಟಿವಿಎಂಐ (ಥಲಪತಿ ವಿಜಯ್ ಮಕ್ಕಳ್ ಇಯ್ಯಕಂ) ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಕಳೆದ…

Read More

ಮಳೆಯ ಬರ ಆವರಿಸಿರುವ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮಸ್ಥರು ಮಳೆರಾಯನಿಗಾಗಿ ಕತ್ತೆಗಳ ಮದುವೆ ಮಾಡಿ ವರ್ಷಧಾರೆಗಾಗಿ ಮೊರೆಯಿಟ್ಟಿದ್ದಾರೆ. ಗ್ರಾಮಸ್ಥರ ಒಮ್ಮತದಂತೆ ಗ್ರಾಮದೇವತೆ ಹನುಮಾನ ದೇವಸ್ಥಾನಮುಂಭಾಗದಲ್ಲಿ ಶನಿವಾರ ಗಂಡು ಮತ್ತು ಹೆಣ್ಣು ಕತ್ತೆಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಯಿತು. ಅಷ್ಠೇ ಅಲ್ಲ ನವ ಜೋಡಿಯ ವಿವಾಹದ ಖುಷಿ ಹಂಚಲು ಊರಿಗೆಲ್ಲ ಊಟ ಹಾಕಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ 4 ಗಂಟೆವರೆಗೆ ನಡೆದ ಆರತಕ್ಷತೆಯಲ್ಲಿ ನಾವಲಗಿ ಹಾಗು ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡರು. ಗಂಡಿನ ಕಡೆಯವರಾಗಿ ರಾಮಪ್ಪ ಭಜಂತ್ರಿ ನೇತೃತ್ವ ವಹಿಸಿದರೆ, ಹೆಣ್ಣಿನ ಕಡೆಯವರಾಗಿ ಸಣ್ಣಪ್ಪ ನಿಂತಿದ್ದರು. ದೇವಸ್ಥಾನ ಮುಂಭಾಗದಲ್ಲಿ ಸ್ವಚ್ಛಂಧವಾಗಿ ಚಪ್ಪರದೊಂದಿಗೆ ರಂಗೋಲಿ ಹಾಕಿ, ಗಂಡಿನ ಕಡೆಯವರನ್ನು ಕತ್ತೆ ಜತೆ ವಾದ್ಯ ತಂಡ ದೊಂದಿಗೆ ಮದುವೆ ಮಂಟಪಕ್ಕೆ ಬರಮಾಡಿಕೊಂಡರು. ಬೀಗರನ್ನು ಎದುರುಗೊಂಡ ಜನರು ವರೋಪಚಾರಗಳನ್ನು ಮಾಡಿದರು. ಅರಿಷಿನ ನೀರು ಹಾಕಿ ಹೆಣ್ಣು ಕತ್ತೆಗೆ ಸೀರೆ, ಬಳಿ, ಮಂಗಳ ಸೂತ್ರದೊದಿಗೆ ಹಾರವನ್ನು ಹಾಕಿ, ಗಂಡು ಕತ್ತೆಗೆ ಬಟ್ಟೆ, ಟೊಪ್ಪಿಗೆ, ಟಾವೆಲ್ ಹಾಕಿದ್ದರು. ಎರಡೂ ಕಡೆಯವರು ತಮ್ಮ ನೆಂಟರಿಷ್ಟರ ಮದುವೆಗಳಲ್ಲಿ ಪಾಲ್ಗೊಂಡಿರುವಂತೆ…

Read More

ಶಿವಮೊಗ್ಗ: ಅಕ್ಕಿ ವಿತರಣೆ ವಿಚಾರದಲ್ಲಿ ಕಾಂಗ್ರೆಸ್ (Congress)ಉದ್ದೇಶ ಪೂರ್ವಕವಾಗಿ ಗೊಂದಲ ಉಂಟು ಮಾಡುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿ ಉಚಿತವಾಗಿ ಕೊಡುತ್ತಿದೆ. ಹೆಚ್ಚುವರಿಯಾಗಿ ಅಕ್ಕಿ ಕೊಡಲಿಕ್ಕೆ ಕೇಂದ್ರ ಒಪ್ಪಿರಲಿಲ್ಲ. ಅದು ರಾಜ್ಯ ಸರ್ಕಾರದ ಜವಾಬ್ದಾರಿ. ಎಲ್ಲಿಯಾದರೂ ಖರೀದಿ ಮಾಡಿ ಕೊಡಲಿ. ಕಾಂಗ್ರೆಸ್ ನಾಯಕರು 10 ಕೆಜಿ ಅಕ್ಕಿ ವಿತರಣೆ ಮಾಡ್ತೇವೆ ಎಂದು ಭರವಸೆ ಕೊಟ್ಟಿದ್ದರು. ಅದರಂತೆ ಅಕ್ಕಿ ವಿತರಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ(Yadiyurappa) ಹೇಳಿದ್ದಾರೆ.

Read More

ಬೆಂಗಳೂರು ;- ಕೃಷಿ ಕ್ಷೇತ್ರಕ್ಕೆ ನಷ್ಟ ತಪ್ಪಿಸಲು ಲ್ಯಾಂಡ್ ಬ್ಯಾಂಕ್​ಗೆ ಮೇಜರ್ ಸರ್ಜರಿ ಮಾಡುವೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಭೂಬ್ಯಾಂಕ್ ಸಮಗ್ರ ಪರಿಶೋಧನೆ ನಡೆಸಿ, ವಸ್ತುಸ್ಥಿತಿ ವರದಿ ಸಲ್ಲಿಸಲು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿರುವೆ. ಸ್ವಾಧೀನವಾದ ಭೂಮಿ, ವರ್ಷ, ಬಳಕೆ, ಸದ್ಯದ ಸ್ಥಿತಿ, ವಿಳಂಬಕ್ಕೆ ಕಾರಣ ಇತ್ಯಾದಿ ವಿವರ ಒಳಗೊಂಡ ಮಾಹಿತಿ, ಅಂಕಿ-ಅಂಶಗಳ ವರದಿ ನಿರೀಕ್ಷಿಸಿರುವೆ. ಸಮಗ್ರ ವರದಿ ಬಯಸಿದ ಉದ್ದೇಶವನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡಿದ್ದಾರೆ. ಈ ತಿಂಗಳ ಅಂತ್ಯದೊಳಗೆ ವರದಿ ಸಲ್ಲಿಸಲಿದ್ದು, ಪರಾಮಶಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿಟ್ಟು ಮುಂದಿನ ಕ್ರಮಗಳ ಬಗ್ಗೆ ಸಲಹೆ ಪಡೆಯುವೆ ಎಂದರು. ಇನ್ನೂ ತೆರೆಮರೆ ಪ್ರಯತ್ನ ನಡೆಸಿ ಫಾಕ್ಸ್​ಕಾನ್ ಮೊಬೈಲ್ ಘಟಕ ರಾಜ್ಯದಲ್ಲೇ ಸ್ಥಾಪನೆಯಾಗುವಂತೆ ನೋಡಿಕೊಂಡು, ರ್ತಾಕ ಅಂತ್ಯ ಕಾಣಿಸಿದ್ದೇವೆ ಎಂದು ಎಂ.ಬಿ. ಪಾಟೀಲ್ ಸಂತಸ ವ್ಯಕ್ತಪಡಿಸಿದರು.

Read More

ಬೆಂಗಳೂರು ;- ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕೆಂದು ಒತ್ತಾಯಿಸಿ ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವೀಯ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. ಶನಿವಾರ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ ಅವರು, ರಾಯಚೂರಿನಲ್ಲಿ ಆರೋಗ್ಯ, ಶಿಕ್ಷಣದ ಮಟ್ಟ ಮತ್ತು ತಲಾ ಆದಾಯವು ಇತರ ಪ್ರದೇಶಗಳಿಗಿಂತ ಕಡಿಮೆ ಇದೆ. ವಿಪರೀತ ಹವಾಗುಣ ಈ ಎಲ್ಲ ಕಾರಣಗಳಿಂದಾಗಿ ರಾಯಚೂರಿನಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳ ಅಗತ್ಯವಿದೆ. ಏಮ್ಸ್ ಸ್ಥಾಪನೆಯಿಂದ ಈ ಭಾಗದಲ್ಲಿ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯ ಒದಗಿಸಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಮ್ಮ ಅತ್ಯಾದ್ಯತೆಯ ವಿಷಯವಾಗಿದೆ. ಆದ್ದರಿಂದ ಸಂಬಂಧಿಸಿದವರಿಗೆ ಈ ಕುರಿತು ಕ್ರಮ ವಹಿಸಲು ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರನ್ನು ಪತ್ರದಲ್ಲಿ ಕೋರಿದ್ದಾರೆ.

Read More