Author: Prajatv Kannada

ಬೆಂಗಳೂರು ; ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಜೂನ್ 22 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಅವೈಜ್ಞಾನಿಕ ದರ ಹೆಚ್ಚಳ ಖಂಡಿಸಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಕೈಗಾರಿಕೆಗಳ ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದೆ. ರಾಜ್ಯ ಸರ್ಕಾರದ ಜತೆ ಚರ್ಚೆ ನಡೆಸಿ ಮನವರಿಕೆ ಮಾಡಿಕೊಡುವ ಪ್ರಯತ್ನ ವಿಫಲ ಹಿನ್ನಲೆ ಅನಿವಾರ್ಯವಾಗಿ ಸರ್ಕಾರದ ಗಮನ ಸೆಳೆಯಲು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಬಂಧ್ ಗೆ ಕರೆ‌ ನೀಡಿದೆ.

Read More

ಬೆಂಗಳೂರು ;-;ಬೆಂಗಳೂರಿನ ಅಭಿವೃದ್ಧಿಗೆ ಆರು ತಿಂಗಳಲ್ಲಿ ನೀಲನಕ್ಷೆ, ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುವುದು” ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಸಭೆ ನಡೆಸಿ ಮಾತನಾಡಿದ ಅವರು, ಸಭೆಯಲ್ಲಿ ಅನೇಕ ಮೌಲ್ಯಯುತ ಸಲಹೆಗಳು ಬಂದಿವೆ. ಎಲ್ಲರ ಅನುಭವ ಅಭಿಪ್ರಾಯ ಪಡೆಯುತ್ತಿದ್ದೇನೆ. ಮೊದಲು ಎಲ್ಲಾ ಪಕ್ಷಗಳ ಶಾಸಕರ ಅಭಿಪ್ರಾಯ ಪಡೆದಿದ್ದೆ. ಈಗ ಕೈಗಾರಿಕೆ, ಬಂಡವಾಳ ಹೂಡಿಕೆದಾರರ ಅಭಿಪ್ರಾಯ ಪಡೆದಿದ್ದೇನೆ. ಮುಂದೆ ಮತ್ತೊಂದು ಹಂತದ ಸಭೆ ಮಾಡುತ್ತೇನೆ. ಮುಂದಿನ ವಾರ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು‌” ಎಂದರು. ನಮ್ಮ ಆರ್ಥಿಕತೆ ಗಮನದಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಬೇಕು. ಬೆಂಗಳೂರಿನ ಸ್ವಾಭಿಮಾನ, ಗೌರವ ಉಳಿಸಲು ಸಲಹೆ ಕೇಳಿದ್ದೇನೆ. ನಾನು ಕೆಲವು ಸಲಹೆ ಒಪ್ಪುತ್ತೇನೆ. ಎಲ್ಲರೂ ನಮಗೆ ಸಲಹೆ ನೀಡಿದ್ದು, ಸ್ಯಾಟಲೈಟ್ ಟೌನ್ ನಿರ್ಮಾಣ ಮಾಡಬೇಕು ಎಂದು ಹೇಳಿದ್ದಾರೆ. ಫೆರಿಫೆರಲ್ ರಿಂಗ್ ರಸ್ತೆ ಜಾರಿಗೆ ಒತ್ತು ನೀಡಲಾಗುವುದು. ಬೆಂಗಳೂರು ಯೋಜಿತ ನಗರ ಅಲ್ಲ. ಒಂದೇ ದಿನದಲ್ಲಿ ಬದಲಾವಣೆ ಸಾಧ್ಯವಿಲ್ಲ. ಎಲ್ಲರ ಕಷ್ಟಪಟ್ಟು ಉಳಿಸಿಕೊಂಡಿರುವ…

Read More

ಬೆಂಗಳೂರು ;- ಅಕ್ಕಿ ಖರೀದಿ ಮೂಲಕ ಕಾಂಗ್ರೆಸ್ ಸರ್ಕಾರ ಕಮೀಷನ್ ಪಡೆಯಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಆರೋಪಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಛತ್ತೀಸ್‌ಗಢ ಅಕ್ಕಿಯ ಮೂಲಕ ತಮ್ಮ ಜೇಬಿಗೆ ಹಣ ಹಾಕಿಕೊಳ್ಳುವ ಕೆಲಸ ಈ ಸರ್ಕಾರ ಮಾಡ್ತಿದೆ. ಎಐಸಿಸಿಗೆ ಕರ್ನಾಟಕದಲ್ಲಿ ಎಟಿಎಂ ಸರ್ಕಾರ ತೆರೆಯಲಾಗಿದೆ. ಇದೊಂದು ಎಟಿಎಂ ಸರ್ಕಾರ. ಸುರ್ಜೇವಾಲ ಅದರ ಏಜೆಂಟ್ ಎಂದು ವಾಗ್ದಾಳಿ ನಡೆಸಿದ್ದಾರೆ. ಜೂನ್ 20 ಕ್ಕೆ ಕೇಂದ್ರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಇದೊಂದು ಹಾಸ್ಯಾಸ್ಪದ ಪ್ರತಿಭಟನೆ ಅನಿಸ್ತಿದೆ. ದೇಶಾದ್ಯಂತ ಬಡ ಜನರಿಗೆ ಕೇಂದ್ರ ಅಕ್ಕಿ ಕೊಡ್ತಿದೆ. ಹೆಚ್ಚುವರಿ ಅಕ್ಕಿ ಕೊಡೋದು ಕಾಂಗ್ರೆಸ್ ನ ಜವಾಬ್ದಾರಿ.‌ ಕೇಂದ್ರದ ಬಳಿ ಅಕ್ಕಿ ಇಲ್ಲ, ಹಾಗಾಗಿ ಕೊಡಕ್ಕಾಗ್ತಿಲ್ಲ. ಆದ್ರೆ ಕೇಂದ್ರದ ವಿರುದ್ಧ ಕಾಂಗ್ರೆಸ್ ಧರಣಿ, ಜನವಿರೋಧಿ ನಿರ್ಧಾರ. ಕೇಂದ್ರದ ಬಳಿ‌ ಅಕ್ಕಿ ಇದ್ದರೆ ತಾನೇ ಕೊಡೋದು. ಇದು ಮಳೆಗಾಲ, ಅಕ್ಕಿ ಸ್ಟಾಕ್ ಇಲ್ಲ. ಇವರಿಗೆ ಅಕ್ಕಿ ಕೊಟ್ಬಿಟ್ರೆ…

Read More

ಬೆಂಗಳೂರು ;– ಇಂದಿನಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಮಾಸಿಕ 200 ಯೂನಿಟ್ ಒಳಗಿನ ವಿದ್ಯುತ್ ಬಳಕೆ ಮಾಡುವವರು ಅರ್ಜಿ ಸಲ್ಲಿಸಬಹುದಾಗಿದೆ.ರಾಜ್ಯದಲ್ಲಿ 2.14 ಕೋಟಿ ಜನರು ಇದರ ಪ್ರಯೋಜನ ಪಡೆಯಲಿದ್ದಾರೆ. ಅರ್ಜಿ ಸಲ್ಲಿಸುವವರು ಆರ್ ಆರ್ ನಂಬರ್ ಜೊತೆ ಆಧಾರ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು. ಗೃಹಜ್ಯೋತಿ ಯೋಜನೆಯಡಿ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ. ಇದು ಸ್ವಂತ ಮನೆ ಹಾಗೂ ಬಾಡಿಗೆದಾರರಿಗೂ ಅನ್ವಯವಾಗಲಿದ್ದು, ಫ್ರೀ ವಿದ್ಯುತ್ ಗೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದರು. ಗೃಹಜ್ಯೋತಿ ಯೋಜನೆ ಹೆಸರಿನಲ್ಲಿಯೇ ಬೆಸ್ಕಾಂ ಹೆಡ್ ಆಫೀಸ್ ನಲ್ಲಿ ಆಪ್ ಸಿದ್ಧವಾಗುತ್ತಿದೆ. ಸ್ಮಾರ್ಟ್ ಫೋನ್ ಗಳಲ್ಲಿಯೂ ಗೃಹಜ್ಯೋತಿ ಆಪ್ ಲಭ್ಯವಾಗಲಿದೆ ಎಂದು ಹೇಳಿದ್ದರು.

Read More

ಬೆಂಗಳೂರು ;– ಸುಳ್ಳು ಹೇಳಿ, ಜನತೆಯ ದಾರಿ ತಪ್ಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,ಬಡ ಜನತೆಗೆ ರಾಜ್ಯ ಕಾಂಗ್ರೆಸ್ ಸರಕಾರವು ಅನ್ನ ಭಾಗ್ಯ ಯೋಜನೆಯಡಿ ಕೊಡಬೇಕೆಂದು ಹೊರಟ ಅಕ್ಕಿಯನ್ನು ದುರುದ್ದೇಶಪೂರ್ವಕ ನೀತಿ ನಿಯಮಗಳನ್ನು ಬದಲಿಸಿ ರಾಜ್ಯ ಸರಕಾರಕ್ಕೆ ಅಕ್ಕಿ ಕೊಡುವುದನ್ನು ಕೇಂದ್ರದ ನರೇಂದ್ರ ಮೋದಿಯವರ ಸರಕಾರವು ನಿಲ್ಲಿಸಿದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಹೆಚ್ಚುವರಿ 5 ಕೆಜಿ ಅಕ್ಕಿ ಕೊಡಲು ನಾವು ಎಫ್‍ಸಿಐಗೆ- ಕೇಂದ್ರಕ್ಕೆ ಮನವಿ ಮಾಡಿದ್ದೆವು. ತಕ್ಷಣದಲ್ಲಿ ಕರ್ನಾಟಕದ ಫುಡ್ ಕಾರ್ಪೊರೇಷನ್ ಪ್ರಾದೇಶಿಕ ಕಚೇರಿಯವರು ನಮಗೆ ಅನುಮತಿ ಇದೆ ಎಂದು ಪತ್ರ ಬರೆದರು. ನಂತರ ಕೇಂದ್ರವು ಸಭೆ ನಡೆಸಿ ನಿಯಮ ಬದಲಿಸಿ ಹೆಚ್ಚುವರಿ ಅಕ್ಕಿ ನೀಡುವುದಿಲ್ಲ ಎಂದಿದ್ದಾರೆ. ಇದರ ಹಿಂದೆ ರಾಜ್ಯದಲ್ಲಿ ಅನ್ನ ಭಾಗ್ಯ ಅಕ್ಕಿ ವಿತರಣೆ ತಡೆಯುವ ದುರುದ್ದೇಶ ಇದೆ ಎಂದು ಆರೋಪಿಸಲಾಗುತ್ತಿದೆ. ಖಾಸಗಿ ಖರೀದಿಗೆ ಅವಕಾಶ ಮತ್ತು ರಾಜ್ಯ ಸರಕಾರದಿಂದ ಖರೀದಿಗೆ ತಡೆ ಒಡ್ಡಿದ್ದಾಗಿ…

Read More

ಬೆಂಗಳೂರು ;- ಅಫಘಾತವಾಗಿ ಬ್ರೈನ್‌ ಡೆಡ್ ಆದ ಮಗನ ಅಂಗಾಗ ದಾನ ಮಾಡಿ ಯುವಕನ ಕುಟುಂಬ ಸಾವಿನಲ್ಲೂ ಸಾರ್ಥಕತೆ ಮೆರೆದಿದೆ. ಕಡು ಬಡತನದಲ್ಲೂ ಮತ್ತೊಬ್ಬರ ಜೀವನಕ್ಕೆ ದಾರಿ ಮಾಡಿ ಕುಟುಂಬ ಮಾನವೀಯತೆ ಮೆರೆದಿದೆ. ಮೃತ ಗಿರೀಶ್, ಗುರುವಾರ 15 ರಂದು ಮಂಡ್ಯದಲ್ಲಿ ಬೈಕ್ ಅಫಘಾತಕ್ಕಿಡಾಗಿದ್ದ. ಈ ವೇಳೆ ಸ್ಥಳೀಯ ಮಂಡ್ಯ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಸಲಹೆ ನೀಡಿದ ಹಿನ್ನೆಲೆ, ಮಂಡ್ಯದ ವಿಮ್ಸ್ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಕುಟುಂಬಸ್ಥರು ಶಿಫ್ಟ್ ಮಾಡಿದ್ದರು. ಅದರಂತೆ ಕಳೆದ‌ ಮೂರು ದಿನಗಳಿಂದ ಸಾವು ಬದುಕಿನ ನಡುವೆ ಗಿರೀಶ್ ಹೋರಾಟ ಮಾಡ್ತಿದ್ದ. ಆದರೆ ಕೊನೆಗೂ ಚಿಕಿತ್ಸೆ ಫಲಕಾರಿಯಾಗಿದೆ ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸಿದ್ದಾರೆ. ಈ ಹಿನ್ನೆಲೆ ಯುವಕನ 2 ಕಣ್ಣು,  2 ಕಿಡ್ನಿ, ಲಿವರ್, ಲಂಗ್ಸ್, ಹೃದಯ ದಾನ ಮಾಡಲು ಪೋಷಕರು ಮುಂದಾಗಿದ್ದು, ಮಾದರಿ ಮೆರೆದಿದ್ದಾರೆ.

Read More

ಆನೇಕಲ್ ;- ಶಾಂತಿಪುರ ಗ್ರಾಮ ಪಂಚಾಯಿತಿ ಸದಸ್ಯ ಜಯಕುಮಾರ್.ವಿ ಅವರನ್ನು ಬೆಂಗಳೂರು ಹೊರ ವಲಯದ ಹುಲಿಮಂಗಲ ಸುತ್ತ ನೂರಾರು ಮಂದಿಗೆ ಸುಳ್ಳು ದಾಖಲೆ ಸೃಷ್ಟಿಸಿ, ವಂಚಿಸಿದ್ದ ಆರೋಪದಲ್ಲಿ ಹೆಬ್ಬಗೋಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಒಂದೇ ನಿವೇಶನವನ್ನು ಹಲವಾರು ಮಂದಿಗೆ ನೋಂದಾಯಿಸಿ ವಂಚಿಸುತ್ತಿದ್ದ ಮೋಸ ಹೋದ ನೊಂದವರ ನಿವೇಶನದಲ್ಲಿ ಬೇರೆಯವರು ಕಟ್ಟಡ ಕಟ್ಟಿದರೆ ಇನ್ನೊಂದು ನಿವೇಶನ ಕಟ್ಟಿಸಿಕೊಡುವ ಭರವಸೆ ನೀಡಿ ಯಾಮಾರಿಸುತ್ತಿದ್ದನಂತೆ. ಈ ಕುರಿತಂತೆ ಇಲ್ಲಿಯವರೆಗೆ 12 ವಂಚನೆ ಪ್ರಕರಣಗಳು ಜಯಕುಮಾರ್ ಮೇಲೆ ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು 32 ಮಂದಿ ಹೆಬ್ಬಗೋಡಿ ಠಾಣೆಗೆ ಈತನ ಮೇಲೆ ದೂರು ನೀಡಲು ಸಿದ್ಧರಿದ್ದು ನಾಳೆಯಿಂದಲೇ ಹಲವು ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ.

Read More

ಇಂಪಾಲ: ಸಂಘರ್ಷ ಪೀಡಿತ ಪ್ರದೇಶವಾದ ಮಣಿಪುರದಲ್ಲಿ (Manipur) ರಾತ್ರಿ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪೊಲೀಸ್ (Police) ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಮುಂಜಾನೆಯವರೆಗೂ ಗುಂಡಿನ ದಾಳಿ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾ ಮತ್ತು ಚುರಾಚಂದ್‌ಪುರ್ ಜಿಲ್ಲೆಯ ಕಾಂಗ್ವಾಯ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದು, ಗುಂಪು ಗುಂಪಾಗಿ ಸೇರಿಕೊಂಡು ಅಲ್ಲಲ್ಲಿ ಬೆಂಕಿ ಹಚ್ಚುವ ವಿದ್ವಂಸಕ ಕೃತ್ಯಗಳು ನಡೆದಿವೆ. ಭಾರತೀಯ ಸಶಸ್ತ್ರ ಪಡೆ, ಅಸ್ಸಾಂ ರೈಫಲ್ಸ್, ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF) ಮತ್ತು ರಾಜ್ಯ ಪೊಲೀಸರ ಜಂಟಿ ಪಡೆಗಳು ಇಂಪಾಲದ ಪೂರ್ವ ಜಿಲ್ಲೆಯಲ್ಲಿ ಮಧ್ಯರಾತ್ರಿಯವರೆಗೆ ಧ್ವಜ ಮೆರವಣಿಗೆ (Flag March) ಕೈಗೊಂಡಿದ್ದ ಸಂದರ್ಭ ಅಡ್ವಾನ್ಸ್ ಆಸ್ಪತ್ರೆ ಬಳಿಯ ಅರಮನೆ ಕಾಂಪೌಂಡ್‌ನಲ್ಲಿ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ.

Read More

ಲಾಹೋರ್‌ : ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ವೇಗಿ ಶೋಯೆಬ್‌ ಅಖ್ತರ್‌, ಸೋಶಿಯಲ್ ಮೀಡಿಯಾದಲ್ಲಿ ‘ಅಯ್ಲೀನ್‌ ಶೇಖ್‌’ ಎನ್ನುವ ಹೆಸರಿನ ಹುಡುಗಿಯ ಜೊತೆ ಫೋಟೋವೊಂದನ್ನು ಪೋಸ್ಟ್‌ ಮಾಡಿದ್ದು, ‘ಚಿಲ್‌ ವಿತ್‌ ಮೈ ಡಾಟರ್‌’ ಎಂದು ಕರೆದಿದ್ದಾರೆ. ಅಯ್ಲೀನ್‌ ಶೇಖ್‌ರನ್ನು ತಮ್ಮ ಮಗಳು ಎಂದು ಕರೆದಿರುವುದು ಕ್ರಿಕೆಟ್‌ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ವಿಶ್ವದ ಅತ್ಯಂತ ಪ್ರಖರ ವೇಗಿಗಳ ಸಾಲಿನಲ್ಲಿ ನಿಲ್ಲುವ ಶೋಯೆಬ್‌ ಅಖ್ತರ್‌, ತಮ್ಮ ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ ಈ ಫೋಟೋ ಶೇರ್‌ ಮಾಡಿಕೊಂಡಿದ್ದರು. ಅದರೊಂದಿಗೆ ಅಯ್ಲೀನ್‌ ಶೇಖ್‌ರ ಇನ್ಸ್‌ಟಾ ಐಡಿಯನ್ನೂ ಟ್ಯಾಗ್‌ ಮಾಡಿದ್ದರು. ಮಗಳೊಂದಿಗೆ ಚಿಲ್‌ ಮೋಡ್‌ನಲ್ಲಿದ್ದೇನೆ ಎಂದು ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಅಖ್ತರ್‌ ಸ್ಟೋರಿ ಶೇರ್‌ ಮಾಡಿದ ಬೆನ್ನಲ್ಲಿಯೇ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದು, ನಿಮಗೆ ಇಷ್ಟು ದೊಡ್ಡ ಮಗಳಿರಲು ಹೇಗೆ ಸಾಧ್ಯ ಎಂದೇ ಪ್ರಶ್ನೆ ಮಾಡಿದ್ದಾರೆ. 2014ರ ಜುಲೈ 23 ರಂದು ಶೋಯೆಬ್‌ ಅಖ್ತರ್‌, ರುಬಾಬ್‌ ಖಾನ್‌ರನ್ನು ವಿವಾಹವಾಗಿದ್ದರು. ಅದರೊಂದಿಗೆ ಇಲ್ಲಿವರೆಗೂ ಅಯ್ಲೀನ್‌ ಶೇಖ್‌ ಎಲ್ಲಿದ್ದಳು ಎಂದೂ ಪ್ರಶ್ನೆ ಮಾಡಲು ಆರಂಭ ಮಾಡಿದ್ದಾರೆ. ಹೆಚ್ಚಿನವರಿಗೆ…

Read More

ಲಂಡನ್: 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡದ ನವೀನ್ ಉಲ್ ಹಕ್ ನಡುವಿನ ಮಾತಿನ ಚಕಮಕಿ ಸಾಕಷ್ಟು ಸದ್ದು ಮಾಡಿತ್ತು. ಲಖನೌದ ಏಕಾನ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ವೇಳೆ ನಡೆದ ಈ ಮಾತಿನ ಚಕಮಕಿಯ ಕುರಿತಂತೆ ಕ್ರಿಕೆಟ್ ವಿಶ್ಲೇಷಕರು ತಮ್ಮದೇ ಆದ ವ್ಯಾಖ್ಯಾನ ಮಾಡಿದ್ದಾರೆ. ಇದೀಗ ಆಫ್ಘಾನಿಸ್ತಾನ ಮೂಲದ ವೇಗದ ಬೌಲರ್ ನವೀನ್ ಉಲ್‌ ಹಕ್, ಅಂದು ಈ ವಾಗ್ವಾದ ಹೇಗೆ ಶುರುವಾಯಿತು ಎನ್ನುವುದರ ಕುರಿತಂತೆ ಬಿಬಿಸಿ ವಾಹಿನಿಯ ಜತೆಗಿನ ಮಾತುಕತೆಯ ವೇಳೆ ವಿವರಿಸಿದ್ದಾರೆ. “ಪಂದ್ಯ ಮುಗಿದ ಬಳಿಕ, ಹಸ್ತಲಾಘವನ ಮಾಡುವ ವೇಳೆ ಜಗಳ ಆರಂಭಿಸಿದ್ದು ಮೊದಲು ವಿರಾಟ್ ಕೊಹ್ಲಿಯೇ ಹೊರತು ನಾನಲ್ಲ. ದಂಡ ವಿಧಿಸಿದ್ದನ್ನೇ ನೀವು ಗಮನಿಸಿದರೆ, ನಿಮಗೆ ಅರ್ಥವಾಗುತ್ತದೆ, ಯಾರು ಮೊದಲು ಜಗಳ ಶುರುಮಾಡಿದ್ದೆಂದು ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ. ಆರ್‌ಸಿಬಿ ಹಾಗೂ ಲಖನೌ…

Read More