ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೆಸರಿನಲ್ಲಿ ಫೇಸ್‌ಬುಕ್ ಖಾತೆ (Facebook Account) ತೆರೆದು, ಹಣ ಪಡೆದುಕೊಂಡು ವಂಚಿಸುತ್ತಿದ್ದಾತನನ್ನು ಚಿಕ್ಕಬಳ್ಳಾಪುರ (Chikkaballapura) ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ (Mysuru) ರಾಜೀವ್ ನಗರದ ನಿವಾಸಿ ಕಾರು ಚಾಲಕ ಮುದಾಸೀರ್ ಪಾಷಾ ಬಂಧಿತ ಆರೋಪಿ. ಈತ ‘ಪ್ರದೀಪ್ ಈಶ್ವರ್ ನಿಮ್ಮೊಂದಿಗೆ’ ಎಂಬ ಫೇಸ್‌ಬುಕ್ ಖಾತೆಯಲ್ಲಿ ಸಹಾಯದ ನೆಪದಲ್ಲಿ ಜನರಲ್ಲಿ ಹಣ ಪೀಕಿಸುತ್ತಿದ್ದ. ಅಲ್ಲದೇ ಕಾಮೆಂಟ್ ಸೆಕ್ಷನ್‌ನಲ್ಲಿ ಸಹಾಯಕ್ಕಾಗಿ ಮನವಿ ಮಾಡಿದವರಿಗೆ ಕರೆ ಮಾಡಿ ವಂಚನೆ ಮಾಡುತ್ತಿದ್ದ. ತಾನು ಪ್ರದೀಪ್ ಈಶ್ವರ್ ಅವರ ಆಪ್ತ ಕಾರ್ಯದರ್ಶಿ ಎಂದು ಪರಿಚಯ ಮಾಡಿಕೊಂಡ ಈತ ಬಳಿಕ ಸಹಾಯ ಮಾಡುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚನೆ ಮಾಡಿದ್ದಾನೆ. ಖಾಸಿಂಸಾಬ್ ಎಂಬವರು ತಾನು ಬಡವನಾಗಿದ್ದು, ಶಾಸಕರ ಕಡೆಯಿಂದ ಏನಾದರೂ ಸಹಾಯ ಮಾಡುವಂತೆ ಕೇಳಿದ್ದಾರೆ. ಈ ವೇಳೆ ಪಾಷಾ ತನಗೆ 5,000 ರೂ. ಫೋನ್ ಪೇ ಮಾಡಿದರೆ ನಿಮಗೆ ಶಾಸಕರ ಕಡೆಯಿಂದ 4 ಲಕ್ಷ ರೂ. ಕೊಡಿಸುವುದಾಗಿ ಹೇಳಿದ್ದಾನೆ. ಇದನ್ನು…
Author: Prajatv Kannada
ರಾಮನಗರ: ರಾಜಕಾರಣ (Politics) ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ. ಹಾಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂಬುದು ನನ್ನ ಉದ್ದೇಶ ಎಂದು ಸಂಸದ ಡಿಕೆ ಸುರೇಶ್ (D.K.Suresh) ವೈರಾಗ್ಯದ ಮಾತುಗಳನ್ನಾಡಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ರಾಮನಗರದಲ್ಲಿ (Ramanagara) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕಾರ್ಯಕರ್ತರು ಮತ್ತು ಮುಖಂಡರ ಸಲಹೆ ಪಡೆಯಬೇಕು. ಯಾರು ಸೂಕ್ತ ಎಂದು ಅವರು ತೀರ್ಮಾನ ಮಾಡುತ್ತಾರೋ ಅವರಿಗೆ ಬೆಂಬಲ ಕೊಡುತ್ತೇನೆ ಎಂದರು. ಸಂಸದರ ಬಗ್ಗೆ ಹೆಚ್‌ಡಿಕೆ (H.D.Kumaraswamy) ವ್ಯಂಗ್ಯ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅವರಿಗೆ ವ್ಯಂಗ್ಯ ಬಿಟ್ಟು ಬೇರೆ ಏನೂ ಬರುವುದಿಲ್ಲ, ವ್ಯಂಗ್ಯ ಮಾಡಲಿ. ಅಧಿಕಾರದ ದಾಹ ಇದ್ದವರಿಗೆ ರಾಜಕಾರಣ ಬೇಕು. ನನಗಿರುವುದು ಅಭಿವೃದ್ಧಿಯ ದಾಹ. ಇನ್ನೂ ಒಂದು ವರ್ಷ ಸಮಯವಿದೆ. ನಾನು ಅಭಿವೃದ್ಧಿಯ ಕಡೆ ಗಮನ ಕೊಡುತ್ತೇನೆ ಎಂದು ಹೇಳಿದರು. ಡಿಕೆ ಸುರೇಶ್ ಸೋಲಿಸಲು ಬಿಜೆಪಿ (BJP)-ಜೆಡಿಎಸ್ (JDS) ಹೊಂದಾಣಿಕೆ ಕುರಿತು ಮಾತನಾಡಿದ ಅವರು, ಅವರು ಹೊಂದಾಣಿಕೆ…
ಸೋಮಶೇಖರ್ ಗುರೂಜಿ B.Sc M.9353488403 ಅಮವಾಸೆ ಸೂರ್ಯೋದಯ: 05.54 AM, ಸೂರ್ಯಾಸ್ತ : 06.47 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ಅಮವಾಸ್ಯೆ 10:06 AM ತನಕ ನಂತರ ಪಾಡ್ಯ ನಕ್ಷತ್ರ: ಇವತ್ತು ಮೃಗಶಿರ 06:06 PM ತನಕ ನಂತರ ಆರ್ದ್ರಾ ಯೋಗ: ಇವತ್ತು ಶೂಲ01:02 AM ತನಕ ನಂತರ ಗಂಡ ಕರಣ: ಇವತ್ತು ನಾಗವ 10:06 AM ತನಕ ನಂತರ ಕಿಂಸ್ತುಘ್ನ 10:43 PM ತನಕ ನಂತರ ಬವ ರಾಹು ಕಾಲ: 04:30 ನಿಂದ 06:00 ವರೆಗೂ ಯಮಗಂಡ: 12:00 ನಿಂದ 01:30 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: 08.41 AM to 10.24 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:51 ನಿಂದ ಮ.12:43 ವರೆಗೂ ಮೇಷ ರಾಶಿ: ನಂಬಿದ ಸಹೋದ್ಯೋಗಿಯಿಂದ ನೌಕರದಾರರಿಗೆ ಮುಂಬಡ್ತಿಯಿಂದ ವಿಳಂಬ, “ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ…
ಬೆಂಗಳೂರು ; ನಗರದ ವಿಮಾನ ನಿಲ್ದಾಣದಲ್ಲಿ ಬಸ್ ಅಪಘಾತ ಸಂಭವಿಸಿದ್ದು, 25ಕ್ಕೂ ಅಧಿಕ ಪ್ರಯಾಣಿಕರಿಗೆ ಗಂಭೀರ ಗಾಯವಾಗಿರುವ ಘಟನೆ ಜರುಗಿದೆ. ರಾಜಧಾನಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ರಿಂದ ಟರ್ಮಿನಲ್ 1 ಕ್ಕೆ ತೆರಳುವ ಶೆಟಲ್ ಬಸ್, ಇಂದು ಬೆಳಗ್ಗೆ T2 ಯಿಂದ ಪ್ರಯಾಣಿಕರನ್ನ ಕರೆದೋಗುತ್ತಿತ್ತು. ಈ ವೇಳೆ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಸ್ಸಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಏರ್ಪೋಟ್ನ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಂಗಳೂರು: ಮೊನ್ನೆ ಅಂದ್ರೆ ಕಳೆದ ಮಂಗಳವಾರ. ಬೆಂಗಳೂರಿನ ಔಟರ್ ರಿಂಗ್ ರೋಡ್ ನಲ್ಲಿರೋ ಪ್ರತಿಷ್ಟಿತ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಆ ಸುದ್ದಿ ಕೇಳಿ ಸ್ಥಳಕ್ಕೆ ದೌಡಾಯಿಸಿದ ಬೆಳ್ಳಂದೂರು ಪೊಲೀಸ್ರು ತನಿಖೆ ಕೈಗೊಂಡಿದ್ರು. ತನಿಖೆ ವೇಳೆ ಹುಸಿ ಬಾಂಬ್ ಕಾಲ್ ಮಾಡಿದವ್ರು, ಅದೇ ಕಂಪನಿಯ ಮಾಜಿ ಉದ್ಯೋಗಿ ಅನ್ನೊದ್ರ ಜೊತೆಗೆ ಟೀಂ ಲೀಡರ್ ಮೇಲಿನ ಕೋಪಕ್ಕೆ ಬೆದರಿಕೆ ಕರೆ ಮಾಡಿದ್ದಾಗಿ ಬೆಳಕಿಗೆ ಬಂದಿದ್ದು, ಮಾಡಿತ ತಪ್ಪಿಗೆ ಪೊಲೀಸ್ರ ಅತಿಥಿಯಾಗಿದ್ದಾನೆ. ಆ ಕುರಿತ ಸ್ಟೋರಿ ಇಲ್ಲಿದೆ. ಅವತ್ತು. ಜೂನ್. 13. ಮಂಗಳವಾರ. ಬೆಳ್ಳಂಬೆಳಗ್ಗೆ ಕಚೇರಿಗೆ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಿದ್ರು.ಅದೇ ವೇಳೆಗೆ ಕಚೇರಿ ನಂಬರ್ ಗೆ ಒಂದ್ ಕರೆ ಬಂದಿತ್ತು. ಕಾಲ್ ಬಂತು ಅಂತ ಕಚೇರಿಯ ರಿಸೆಪ್ಷನಿಸ್ಟ್ ಕಾಲ್ ರಿಸೀವ್ ಮಾಡ್ತಿದ್ದಂತೆ ಹೆಲೋ ಅಂದಿದ್ರು. ಹಾಗೆ ಮಾತಾಡ್ತಿದ್ದ ವೇಳೆ ಕಾಲ್ ರಿಸೀವ್ ಮಾಡಿದ ರಿಸೆಪ್ಷನಿಸ್ಟ್ ಒಂದ್ ಕ್ಷಣ ಬೆಚ್ಚಿ ಬಿದ್ದಿದ್ದಿಉಲ, ಎಲ್ಲರು ಕಚೇರಿಯಿಂದ ಓಡಿ ಬಂದಿದ್ರು. ಅಷ್ಟರಲ್ಲಾಗಿ ಪೊಲೀಸ್ರಿಗೂ ಸುದ್ದಿ ಮುಟ್ಟಿತ್ತು. ಹಾಗೇ…
ಬೆಂಗಳೂರು: ವಿಧಾನಸಭೆ ಸೋಲಿನ ನಂತ್ರ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೊಟಗೊಂಡಿದೆ.. ಬಿಎಸ್ ವೈ ಹಾಗೂ ಬಿ.ಎಲ್.ಸಂತೋಷ್ ನಡುವಿನ ಹಳೆಯ ಕೋಲ್ಡ್ ವಾರ್ ಬಿರುಸು ಪಡೆದಿದೆ..ಸಂಸದ ಪ್ರತಾಪ್ ಸಿಂಹ ಹೇಳಿಕೆಯ ನಂತರ ಬಣರಾಜಕೀಯ ಶುರುವಾಗಿದೆ.. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರದಾನ ಕಾರ್ಯದರ್ಶಿಯ ವಿರುದ್ಧ ಬಿಎಸ್ ವೈ ಆಪ್ತ ಬಳಗ ಸಿಡಿದು ನಿಂತಿದೆ.. ಶೀಘ್ರದಲ್ಲೇ ವರಿಷ್ಠರಿಗೆ ದೂರು ನೀಡಲು ಮುಂದಾಗಿದೆ.. ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.. ವಿಧಾನಸಭೆಯ ಸೋಲಿನ ನಂತ್ರ ನಾಯಕರು ಒಳಗೊಳಗೆ ಕತ್ತಿಮಸೆಯೋಕೆ ಶುರುಮಾಡಿದ್ದಾರೆ.. ಸಂಸದ ಪ್ರತಾಪ್ ಸಿಂಹ ಹೊಡೆದ ಮಾತಿನ ಗುಂಡು ಮಾಜಿ ಸಿಎಂ ಬಿಎಸ್ ವೈ ಹಾಗೂ ಅವರ ಶಿಷ್ಯ ಬೊಮ್ಮಾಯಿಯವರ ಎದೆಗೆ ಬಿದ್ದಿದೆ.. ಹೀಗಾಗಿ ಲಿಂಗಾಯತ ವರ್ಸಸ್ ಸಂಘಪರಿವಾರ ಎಂಬ ಹೊಸ ಬೀಜ ಕಾದಟ ಆರಂಭವಾಗಿದೆ.. ಕಾಂಗ್ರೆಸ್ ನಾಯಕರ ಜೊತೆ ಹೊಂದಾಣಿಕೆ ರಾಜಕಾರಣದಿಂದಾಗಿಯೇ ಸೋಲಾಯ್ತು ಅನ್ನೋದನ್ನ ಯಡಿಯೂರಪ್ಪ ಹಾಗೂ ಬೊಮ್ಮಾಯಿ ತಲೆಗೆ ಕಟ್ಟೋಕೆ ಸಂತೋಷ್ ಬಣ ಪ್ರಯತ್ನ ನಡೆಸಿದೆ.. ಹಾಗಾಗಿಯೇ ಅದಕ್ಕೆ ಪ್ರತಾಪ್ ಸಿಂಹ,ಸಿ.ಟಿ.ರವಿಯಂತವರನ್ನ ಬಳಸಿಕೊಳ್ಳಲಾಗ್ತಿದೆ ಎಂಬ ಚರ್ಚೆಗಳು ಶುರುವಾಗಿವೆ..…
ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನಾ ಫಲಾನುಭವಿಗಳು ಎಚ್ಚರಿಕೆ ವಹಿಸಬೇಕು. ಯಾಕೆಂದ್ರೆ ಅರ್ಜಿ ಸಲ್ಲಿಕೆ ಮಾಡುವವರ ಮಾಹಿತಿಗೆ ಕನ್ನ ಹಾಕಲು ಸೈಬರು ಕಳ್ಳರು ಕಾಯುತ್ತಿದ್ದಾರೆ ಎನ್ನುವ ಶಾಕಿಂಗ್ ಸುದ್ದಿ ನೀಡುವ ಮೂಲಕ ಸೈಬರ್ ತಜ್ಞರು ಎಚ್ಚರಿಕೆ ರವಾನಿಸಿದ್ದಾರೆ. ಗ್ಯಾರಂಟಿಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನಾ ಎಚ್ಚರವಾಗಿರಿ. ಅರ್ಜಿ ಸಲ್ಲಿಕೆಗೆ ಸೇವಾಸಿಂಧು ಪೋರ್ಟಲ್ ಇದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು, ಈಗ ಫೇಕ್ ಲಿಂಕ್‌ಗಳನ್ನು ಹರಿಯಬಿಡುತ್ತಿದ್ದಾರೆ.ಅಪ್ಪಿ ತಪ್ಪಿ ಈ ಲಿಂಕ್ ಕ್ಲಿಕ್ ಮಾಡಿ, ಬ್ಯಾಂಕ್ ಖಾತೆ ವಿವರಗಳನ್ನು ನೀಡಿದರೆ, ಬ್ಯಾಂಕ್‌ನಲ್ಲಿರುವ ದುಡ್ಡು ಸೈಬರ್ ಚೋರರ ಪಾಲಾಗೋದು ಖಚಿತ. ಹೀಗಾಗಿ ಜನ ತುಂಬಾ ಎಚ್ಚರಿಕೆಯಿಂದ ಅರ್ಜಿ ಸಲ್ಲಿಕೆ ಮಾಡಬೇಕು. ಸಿಕ್ಕ ಸಿಕ್ಕ ಲಿಂಕ್‌ಗಳಲ್ಲಿ ಸಲ್ಲಿಕೆ ಮಾಡಬಾರದು ಎನ್ನುವ ಎಚ್ಚರಿಕೆಯನ್ನು ರವಾನೆ ಮಾಡಿದ್ದಾರೆ. ಸರ್ಕಾರ ಕೂಡ ಈ ವಿಚಾರದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಇಲ್ಲದೇ ಇದ್ರೆ ಜನರಿಗೆ ತೊಂದರೆಯಾಗಲಿದೆ. ಈಗಾಗಲೇ ಸಾಕಷ್ಟು ಫೇಕ್ ಲಿಂಕ್‌ಗಳ…
ಚಿಕ್ಕಮಗಳೂರು: ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಯನ್ನು ಕಾಂಗ್ರೆಸ್ ರದ್ದು ಪಡಿಸಲು ಮುಂದಾಗಿದೆ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸರ್ಕಾರ ನಮ್ಮ ರಕ್ಷಣೆಗೆ ಬರುವುದಿಲ್ಲ. ನಾವೇ ನಮ್ಮ ರಕ್ಷಣೆ ಮಾಡಿಕೊಳ್ಳಬೇಕು. ನಮ್ಮ ಧರ್ಮ, ಸಮುದಾಯ ರಕ್ಷಣೆಗೆ ಸ್ವಂತ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಈ ಸರ್ಕಾರ ಕಳ್ಳ- ಕಾಕರ, ಮತಾಂತರಿಗಳ ಪರವಾಗಿದೆ. ಬಲಾತ್ಕಾರದ ಮತಾಂತರದ ಪರವಾಗಿ ಕಾಂಗ್ರೆಸ್ ಇದೆಯಾ? ಆಸೆ, ಆಮಿಷ, ಬಲತ್ಕಾರ, ಮೋಸದ ಮತಾಂತರಕ್ಕೆ ನಿಷೇಧ ಇದೆ? ಬಲವಂತದ ಮತಾಂತರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು? ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಮೈಸೂರು: ಗೃಹ ಲಕ್ಷ್ಮಿ ಯೋಜನೆ ಜಾರಿಯಿಂದ ಕುಟುಂಬಗಳಲ್ಲಿ ಒಡಕು ಉಂಟಾಗಿದೆ. ಮುಸ್ಲಿಮರಿಗೆ ಎರಡು ಮೂರು ಹೆಂಡತಿಯ ರಿರುತ್ತಾರೆ. ಆಗ ಯಾರನ್ನು ಮನೆಯ ಯಜಮಾನಿ ಎಂದು ಗುರುತಿಸುತ್ತೀರಾ ? ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ. ಪ್ರತಾಪ್ ಸಿಂಹಗೆ ಆಸೆ ಇದ್ದರೆ ಇನ್ನೊಂದು ಮದುವೆಯಾಗಿ ಅದರ ಅನುಭವವನ್ನು ನಮಗೆ ಬಂದು ಹೇಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿ ನಾವು ಉಚಿತವಾಗಿ ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಕೇಳ್ತಿಲ್ಲ. ಕೇಂದ್ರದ ದರ ಏನಿದೆ ಆ ಪ್ರಕಾರ ಅಕ್ಕಿ ಕೊಡಿ ಎಂದು ಕೇಳ್ತಿದ್ದೇವೆ. ಕೇಂದ್ರ ಸರ್ಕಾರದ ಬಳಿ ಸಾಕಷ್ಟು ಪ್ರಮಾಣದ ಅಕ್ಕಿ ದಾಸ್ತಾನು ಇದೆ. ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ. ಬಡವರು, ಸಾಮಾನ್ಯ ಜನರ ಆರ್ಥಿಕ ಹೊರೆ ಕಡಿಮೆ ಮಾಡಬೇಕು. ಆ ನಿಟ್ಟಿನಲ್ಲಿ ಹೆಚ್ಚುವರಿವಾಗಿ 5 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದೇವೆ. ಕಾಂಗ್ರೆಸ್ಗೆ ಮತ ಹಾಕಿದವರಿಗೂ ಉಚಿತವಾಗಿ ಅಕ್ಕಿ ಸಿಗಲಿದೆ. ಬಿಜೆಪಿ ಹಾಗೂ ಜೆಡಿಎಸ್ಗೆ ಮತ ಹಾಕಿದವರಿಗೂ ಅಕ್ಕಿ ಸಿಗುತ್ತೆ. ಕೇಂದ್ರ ಸರ್ಕಾರ ಬಡವರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಅಕ್ಕಿ ವಿತರಣೆ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಸಂಸದ ಡಿಕೆ ಸುರೇಶ್ ಆಕ್ರೋಶ ಹೊರ ಹಾಕಿದ್ರು.