Author: Prajatv Kannada

ಮೈಸೂರು: ಜನರಿಗೆ ಹೆಚ್ಚು ಸಮಯ ಕೊಡದ ಕಾರಣ ಕಳೆದ ಬಾರಿ ಸೋಲು ಕಂಡಿದ್ದೆ ಎಂದು ಸಂವಾದ ಕಾರ್ಯಕ್ರಮದಲ್ಲಿ ಸಚಿವ ಹೆಚ್​.ಸಿ.ಮಹದೇವಪ್ಪ ಹೇಳಿದ್ರು. ಚುನಾವಣೆಯಲ್ಲಿ 6 ಬಾರಿ ಗೆದ್ದಿದ್ದೇನೆ, ಮೂರು ಬಾರಿ ಸೋತಿದ್ದೇನೆ. ಮೂರು ಬಾರಿಯೂ ನನ್ನಿಂದ ನಾನೇ ಸೋತಿದ್ದೇನೆ. ಗೆದ್ದಾಗ ಮಂತ್ರಿ ಆಗುತ್ತಿದ್ದೆ, ಜನರಿಗೆ ಹೆಚ್ಚು ಸಮಯ ಕೊಡುತ್ತಿರಲಿಲ್ಲ. ಕಾರ್ಯಕರ್ತರಿಂದ ದೂರವಾಗಿದ್ದ ಕಾರಣ ಸೋಲಾಯಿತು ಅಷ್ಟೇ. ಸೋತಾಗ ಕುಗ್ಗಿಲ್ಲ, ಗೆದ್ದಾಗ ಬೀಗಿಲ್ಲ. ಯಾವತ್ತೂ ಟಿಕೆಟ್ ಕೇಳಿಲ್ಲ, ನನ್ನ ಹೋರಾಟ ನೋಡಿ ಟಿಕೆಟ್ ನೀಡಿದ್ದಾರೆ. ನಾನು ತೆರೆದ ಪುಸ್ತಕ, ಯಾರು ಬೇಕಾದರೂ ನೋಡಬ ಹುದು. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ, ಆದರೆ ಪ್ರಚಾರ ಮಾಡಿಕೊಳ್ಳಲಿಲ್ಲ. ದುರಾದೃಷ್ಟವಶಾತ್ ಕಾಂಗ್ರೆಸ್ಸಿಗರು ನನ್ನ ಕೆಲಸದ ಪ್ರಚಾರ ಮಾಡಲಿಲ್ಲ. ನನ್ನ ಅವಧಿಯಲ್ಲಿ ಎಲ್ಲವನ್ನೂ ಕ್ರೋಡೀಕರಿಸಿ ಉತ್ತಮ ದಸರಾ ಮಾಡಿದ್ದೇನೆ. ನಿಜವಾದ ವೈಚಾರಿಕತೆ ಹಾಗೂ ಸಾಂವಿಧಾನಿಕ ದಸರಾ ಆಚರಣೆ ಮಾಡಿದ್ದೇನೆ ಎಂದು ಮೈಸೂರಿನಲ್ಲಿ ಸಮಾಜಕಲ್ಯಾಣ ಸಚಿವ ಡಾ.H​.C.ಮಹದೇವಪ್ಪ ಹೇಳಿದ್ರು.

Read More

ಚಿಕ್ಕಮಗಳೂರು: ಚಿಪ್ಸ್ ಕಾಯಿಸುವ ದೊಡ್ಡ ಬಾಣಲೆಗೆ ಬಿದ್ದಿದ್ದ 25 ವರ್ಷದ ಯುವಕ 13 ದಿನಗಳ ಬಳಿಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಕ್ರೆ ಗ್ರಾಮದಲ್ಲಿ ನಡೆದಿದೆ. ಸಂದೇಶ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಮೃತ ಸಂದೇಶ್ ಕಿಕ್ರೆ ಗ್ರಾಮದಲ್ಲಿ ಚಿಪ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಚಿಪ್ಸ್‌ ಫ್ಯಾಕ್ಟರಿಯಲ್ಲಿ 20 ಕ್ಕೂ ಹೆಚ್ಚು ಯುವಕರು ಕೆಲಸ ಮಾಡುತ್ತಿದ್ದಾರೆ. ಕಳೆದ 13 ದಿನಗಳ ಹಿಂದೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ವೇಳೆ ಚಿಪ್ಸ್ ಕರೆಯುವ ಒಲೆಗೆ ತಾಪಮಾನ ಹೆಚ್ಚಿರಲಿ, ಎಣ್ಣೆ ಬೇಗ ಬಿಸಿಯಾಗಲಿ ಎಂಬ ಕಾರಣಕ್ಕೆ ಎಣ್ಣೆ ಅಂಶ ಇರುವ ಮತ್ತು ತಾಪಮಾನವೂ ಹೆಚ್ಚಿರುವ ಗೇರು ಬೀಜಗಳನ್ನ ಹಾಕುತ್ತಾರೆ. ಹೊಗೆ ಹೆಚ್ಚಾಗಿ ಕಟ್ಟಿಕೊಂಡಿದ್ದ ಹೊಗೆ ಪೈಪ್ ಕ್ಲೀನ್ ಮಾಡಲು ಫ್ಯಾಕ್ಟರಿಯ ಮೇಲ್ಛಾವಣಿಗೆ ಹತ್ತಿದ್ದ ಸಂದೇಶ್ ಆಯಾ ತಪ್ಪಿ ಸೀದಾ ಚಿಪ್ಸ್ ಕರೆಯುವ ದೊಡ್ಡ ಬಾಣಲೆಗೆ ಬಿದ್ದಿದ್ದ. ಸಂದೇಶ್‌ ದೇಹದ 80% ರಷ್ಟು ಭಾಗ ಸುಟ್ಟು ಹೋಗಿತ್ತು. ಕೂಡಲೇ ಶೃಂಗೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ…

Read More

ಮಂಡ್ಯ: ನೋಟಿನ ಕಂತೆಗಳಲ್ಲಿ ಮಧ್ಯ ಮದ್ಯೆ ಬಿಳಿ ಹಾಳೆಗಳನ್ನು ಇಟ್ಟು ಯಾಮಾರಿಸಲು ಯತ್ನಿಸಿದವನಿಗೆ ಸಾರ್ವಜನಿಕರು ಧರ್ಮ ದೇಟು ನೀಡಿದ ಘಟನೆ ಮಂಡ್ಯದ ಉಪ ನೋಂದಣಾಧಿಕಾರಿ ಕಚೇರಿ ಬಳಿ ನಡೆದಿದೆ. ನೋಟುಗಳ ಮಧ್ಯೆ ಬಿಳಿ ಹಾಳೆ ಇಟ್ಟು ಯಾಮಾರಿಸಿದವನಿಗೆ ಜನರು ಗೂಸಾ ನೀಡಿದ್ದಾರೆ. ಸೈಯದ್ ಅಮೀನ್ ಎಂಬಾತನಿಗೆ ಜನ ಧರ್ಮದೇಟು ನೀಡಿದ್ದಾರೆ. ಕಾಳೇನಹಳ್ಳಿಯ ಉಮೇಶ್ ಎಂಬುವರಿಂದ ಸೈಯದ್ ಅಮೀನ್ ಮೂರು ಗುಂಟೆ ಭೂಮಿ ಖರೀದಿಸಿದ್ದ. Video Player 00:00 01:01 ಮಂಡ್ಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿತ್ತು. ಭೂಮಿ ರಿಜಿಸ್ಟ್ರೇಷನ್ ನಂತರ ಆರೋಪಿ ಹಣ ನೀಡುವಾಗ ನೋಟುಗಳ ಮಧ್ಯೆ ಬಿಳಿ ಹಾಳೆಗಳನ್ನು ಇಟ್ಟು ವಂಚಿಸಿದ್ದ. ನೋಟಿನ ಕಂತೆಗಳ ನಡುವೆ ಬಿಳಿ ಹಾಳೆ ಇಟ್ಟು ಯಾಮಾರಿಸಿದ್ದು, ಸೈಯದ್ ವಂಚನೆ ಗೊತ್ತಾಗುತ್ತಿದ್ದಂತೆ ಆತನನ್ನು ಹಿಡಿದು ಜನ ಥಳಿಸಿಸಿದ್ದಾರೆ. ವಂಚಕ ಸೈಯದ್ ನನ್ನು ಮಂಡ್ಯದ ಪಶ್ಚಿಮ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

Read More

ಮೈಸೂರು:  ಸಂವಿಧಾನಕ್ಕೆ ತಿದ್ದುಪಡಿಗೆ ಅವಕಾಶವಿದೆ. ಆದರೆ ಸಂವಿಧಾನವನ್ನು ತಿರುಚಲು ಎಂದಿಗೂ ಅವಕಾಶವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ(HC Mahadevappa) ತಿಳಿಸಿದ್ದಾರೆ. ಇಂದು ಜಿಲ್ಲಾ ಪತ್ರಕರ್ತರ ಸಂಘದಲ್ಲಿ  ಪತ್ರಕರ್ತರೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಸಂವಿಧಾನಕ್ಕೆ ತಿದ್ದುಪಡಿಗೆ ಅವಕಾಶವಿದೆ. ತಿರುಚಲು ಅವಕಾಶವಿಲ್ಲ. ಆಶ್ವಾಸನೆಗಳು ಸಂವಿಧಾನದ ಕಾನೂನುಗಳಲ್ಲ. ಪಠ್ಯ ಪರಿಷ್ಕರಿಸಿದ ವೇಳೆ ಅನಗತ್ಯ ವಿಚಾರ ಹಾಕಿದರೆ ಅದನ್ನು ಅಭ್ಯಸಿಸುವ ಯುವ ಸಮೂಹ ದಾರಿ ತಪ್ಪಲಿದೆ ಎಂದು ಅವರು ತಿಳಿಸಿದರು. ಬಲವಂತದ ಮತಾಂತರಕ್ಕೆ ಸಂವಿಧಾನದಲ್ಲೂ ಅವಕಾಶವಿಲ್ಲ. ಆದರೆ ಸ್ವಯಂ ಪ್ರೇರಿತ ಮತಾಂತರ ಎಲ್ಲರೂ ಹಕ್ಕು ಎಂಬುದಾಗಿ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಗೋಹತ್ಯೆ ನಿಷೇಧ ವಿಚಾರವಾಗಿ ನಾನು ಸಿದ್ದರಾಮಯ್ಯ ದನ, ಎಮ್ಮೆಗಳ ಜತೆಗೆ ಬೆಳೆದಿದ್ದು, ಅದರ ಅರಿವು ನಮಗೂ ಹೆಚ್ಚಾಗಿ ಗೊತ್ತಿದೆ ಎಂದರು.

Read More

ಗಂಗಾವತಿ: ಪಟ್ಟಣದ ಮಾರುಕಟ್ಟೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಮಣ್ಣೆತ್ತುಗಳ ಮಾರಾಟ ಭರ್ಜರಿಯಾಗಿದೆ. ಭಾನುವಾರ ಮಣ್ಣೆತ್ತಿನ ಅಮಾವಾಸ್ಯೆ. ಹೀಗಾಗಿ ರೈತರು ಸೇರಿದಂತೆ ಸಾರ್ವಜನಿಕರು ಮಣ್ಣೆತ್ತಿನ ಗೊಂಬೆಗಳನ್ನು ಖರೀದಿಸುತ್ತಿದ್ದಾರೆ. ಇಲ್ಲಿನ ಚಿತ್ರಗಾರ, ಕುಂಬಾರ ಸಮುದಾಯದ ಕೆಲವರು ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕಾರಹುಣ್ಣಿಮೆ ನಂತರ ಬರುವುದೇ ಮಣ್ಣೆತ್ತಿನ ಅಮಾವಾಸ್ಯೆ. ಮಣ್ಣೆತ್ತಿನ ಅಮವಾಸ್ಯೆಯಂದು ರೈತರು ಹೊಲಕ್ಕೆ ಹೋಗಿ ಜಿಗುಟಾದ ಮಣ್ಣನ್ನು ತಂದು ಮನೆಯಲ್ಲಿ ಮಣ್ಣಿನಿಂದ ಜೋಡಿ ಎತ್ತುಗಳನ್ನು ಮಾಡುತ್ತಾರೆ. ನಂತರ ಮಣ್ಣಿನ ಎತ್ತುಗಳಿಗೆ ಸಿಂಗಾರ ಮಾಡುತ್ತಾರೆ.

Read More

ಬೆಂಗಳೂರು; ನಮ್ಮ ದೇಶ ನಾಲ್ಕು ಧರ್ಮಗಳ ಹುಟ್ಟನ್ನು ಕಂಡಿದೆ. ಹಿಂದು, ಬೌದ್ದ. ಜೈನ ಹಾಗೂ ಸಿಖ್ ಧರ್ಮಗಳು ಹುಟ್ಟಿದ್ದು ನಮ್ಮ ದೇಶದಲ್ಲಿಯೇ. ವಿಶ್ವಕ್ಕೆ ಈ ನಾಲ್ಕೂ ಧರ್ಮಗಳು ವಿಶೇಷ ಸಂದೇಶ ನೀಡುತ್ತಿವೆ. ಜೈನ ಧರ್ಮ ನೀಡಿರುವ ಶಾಂತಿಯ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಗೃಹ ಸಚಿವರಾದ ಮಾನ್ಯ ಡಾ. ಜಿ. ಪರಮೇಶ್ವರ ಅಭಿಪ್ರಾಯ ವ್ಯಕ್ತ ಪಡಿಸಿದರು. ಇಂದು ಚಾಮರಾಜ ಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ʻಚಾವುಂಡರಾಯʼ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಧರ್ಮದ ಕುರಿತ ಅಧ್ಯಯನ ನಮ್ಮಲ್ಲಿ ಕೇವಲ ಅಕಾಡಮಿಕ್ ನೆಲೆಯಲ್ಲಿ ನಡೆಯುತ್ತಿದೆಯೇ ಹೊರತು ಅದರ ಅಂತ:ಸತ್ವ ಹಿಡಿಯುವ ಕೆಲಸವಾಗುತ್ತಿಲ್ಲ, ಪ್ರೊ.ಕೆ.ಇ.ರಾಧಾಕೃಷ್ಣ ಅವರು ಇಂತಹ ಮಹತ್ವದ ಕೆಲಸವನ್ನು ಮಾಡಿದ್ದಾರೆ ಎಂದು ಅವರು ಮೆಚ್ಚಿಗೆ ಸೂಚಿಸಿದರು. ಜೈನ ಧರ್ಮ ನಮ್ಮ ದೇಶದಲ್ಲಿ ಹುಟ್ಟಿಕೊಂಡು ಪ್ರಪಂಚಕ್ಕೆ ಶಾಂತಿಯ ಸಂದೇಶವನ್ನು ನೀಡುತ್ತ ಬಂದಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಯೋಗ್ಯರನ್ನು ಹುಡುಕಿ ಅವರನ್ನು ಗೌರವಿಸುವ ಕಾರ್ಯ ಮಾಡುತ್ತ…

Read More

ಬೆಂಗಳೂರು ; ಶಾಸಕ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ. ಕಮಿಷನ್ ಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡುತ್ತಿದ್ದಾರೆ ಎಂಬ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಬೆಂಗಳೂರಿನ ಶಕ್ತಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಮಿಷನ್ ಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ಎಂಬುದು ಸುಳ್ಳು ಆರೋಪ. ಬಿಜೆಪಿ ನಾಯಕರು ಸುಮ್ಮನೇ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದಲ್ಲಿಯೇ ಅಕ್ಕಿ ಸಿಗುವುದಾದರೆ ಮೊದಲು ಬಿ.ವೈ. ವಿಜಯೇಂದ್ರ ಅವರ ಮಿಲ್ ನಲ್ಲಿ ಎಷ್ಟು ಅಕ್ಕಿ ಇದೆ ಅದನ್ನು ಕೊಡಲಿ ಎಂದು ತಿರುಗೇಟು ನೀಡಿದರು.

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಇಂದು ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಬಿಬಿಎಂಪಿ ಶುರುಮಾಡಿತ್ತು. ಆದರೆ ಈ ವೇಳೆ ರಾಜಕಾಲುವೆ ಮೇಲೆ ಅಕ್ರಮವಾಗಿ ಕಟ್ಟಡಗಳನ್ನು ಮನೆ ಮಾಲೀಕರು ಕಟ್ಟಿರುವ ಹಿನ್ನೆಲೆ ಬಾಡಿಗೆದಾರರು ಪರದಾಟ ಅನುಭವಿಸಿದರು. ಮಾಹದೇವಪುರದ ಸ್ಪೈಸ್ ಗಾರ್ಡನ್ ಬಡವಾಣೆಯಲ್ಲಿ ಇಂದು ರಾಜಕಾಲುವೆ ತೆರವಿಗೆ ಪಾಲಿಕೆ ಮುಂದಾಗಿತ್ತು. ಮಾಲೀಕರು ರಾಜಕಾಲುವೇ ಮೇಲೆ ಅಕ್ರಮವಾಗಿ ಪಿಜಿ ಕಟ್ಟಡಗಳನ್ನ ನಿರ್ಮಾಣ ಮಾಡಿದ್ದಾರೆ. ರಾಜಕಾಲುವೆ ಮೇಲೆ ಅಕ್ರಮವಾಗಿ ನಾಲ್ಕು ಹಾಗೂ ಐದು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಪಾಲಿಕೆ ಒತ್ತುವರಿ ತೆರುವಿಗೆ ಮಾರ್ಕ್ ಮಾಡಲಾಗಿದ್ದು, ಒತ್ತುವರಿ ತೆರವು ಮಾಡುವುದಾಗಿ ಕೂಡಾ ಮೊದಲೆ ಹೇಳಿತ್ತು. ಆದ್ರೆ ಪಿಜಿ ಬಾಡಿಗೆದಾರರಿಗೆ ಈ ಬಗ್ಗೆ ಮಾಲೀಕರು ಯಾವುದೇ ಸೂಚನೆ ನೀಡಿಲ್ಲ. ಈಗ ಪಾಲಿಕೆ ಅಧಿಕಾರಿಗಳು ತೆರವಿಗೆ ಅನೌನ್ಸ್ ಮಾಡ್ತಾ ಇದ್ದಂತೆ ಬಾಡಿಗೆದಾರರು ಪರದಾಟ ನಡೆಸಿದ್ದಾರೆ. ಮಾಹಿತಿ ಇಲ್ಲ ಹೀಗಾ ಏಕಾಏಕಿ ಖಾಲಿ ಮಾಡಿ ಅಂತಿದ್ದಾರೆ ಅಂತಾ ಬೇಸರ ಹೊರ ಹಾಕಿದ್ದಾರೆ.

Read More

ಬೆಂಗಳೂರು:- ಕೆಪಿಸಿಸಿ ಅಧ್ಯಕ್ಷ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಸಭೆ ಆರಂಭವಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ಆರಂಭವಾಗಿದ್ದು, ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಸಲಹೆ ಪಡೆಯಲು ಡಿಸಿಎಂ ಡಿಕೆಶಿ ಸಭೆ ಕರೆದಿದ್ದಾರೆ. ಬೆಂಗಳೂರು ಸಂಸದರು, ಶಾಸಕರು, ಬಿಬಿಎಂಪಿ, ಬಿಡಿಎ, ಬಿಎಮ್ ಆರ್ ಸಿಎಲ್, ಬೆಂಗಳೂರು ಟ್ರಾಫಿಕ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಲ್ಲದೇ ಇನ್ಫೋಸಿಸ್‌ನ ಕ್ರಿಸ್‌ ಗೋಪಾಲಕೃಷ್ಣ, ಆರ್.ವಿ.ಇಸ್ಟಿಟ್ಯೂಟ್ ನ ಎಂಪಿ ಶ್ಯಾಮ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜೂದಾರ್ ಷಾ, ವಂಡರ್ ಲಾ ಎಂಡಿ ಅರುಣ್, ನ್ಯಾಷನಲ್ ಲಾ ಸ್ಕೂಲ್ ನ ಸುಧೀರ್ ಕೃಷ್ಣಮೂರ್ತಿ, ಕಿರ್ಲೋಸ್ಕರ್ ಎಂಡಿ ಗೀತಾಂಜಲಿ ಕಿಲೋಸ್ಕರ್, ಬಿ ಪ್ಯಾಕ್ ಸಂಸ್ಥೆ ಸಿಇಓ ರೇವತಿ ಅಶೋಕ್, FICCI ಚೇರ್ಮನ್ ಉಲ್ಲಾಸ್ ಕಾಮತ್ , ಕೂ ಆಪ್ ಕೋ ಪೌಂಡರ್ ಅಪ್ರಮೇಯ ರಾಮಕೃಷ್ಣ, ಬಾಗ್ಮನೆ ಟೆಕ್ ಪಾರ್ಕ್ ಸಂಸ್ಥಾಪಕ ರಾಜಾ ಬಾಗ್ಮನೆ, ಬ್ರಿಗೇಡ್ ಗ್ರೂಪ್ ಎಂಡಿ, ಜೈ ಶಂಕರ್, ಎಂಬೆಸಿ ಗ್ರೂಪ್ ಸಿಇಓ ಜಿತೇಂದ್ರ, ಮಾಜಿ ಕ್ರಿಕೆಟೆರ್…

Read More

ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಅವರ ಮಾದರಿಯನ್ನೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅನುಸರಿಸಿದ್ದು, ಇನ್ನು ಮುಂದೆ ಸನ್ಮಾನದ ಸಂದರ್ಭದಲ್ಲಿ ಹಾರ, ತುರಾಯಿ, ಶಾಲುಗಳನ್ನು ಹಾಕಬೇಡಿ ಬದಲಿಗೆ ಪುಸ್ತಕ ನೀಡಿ ಎಂದು ಮನವಿ ಮಾಡಿದ್ದಾರೆ. ಸಚಿವ ದಿನೇಶ್ ಗುಂಡೂರಾವ್ ಅವರ ಸೂಚನೆಯ ಮೇರೆಗೆ, ಅವರ ಆಪ್ತಕಾರ್ಯದರ್ಶಿ ಕೆ.ಎ. ಹಿದಾಯತ್ತುಲ್ಲ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಸುತ್ತೋಲೆ ಹೊರಡಿಸುವಂತೆ ನಿರ್ದೇಶನ ನೀಡಿದ್ದರು. ಅದರಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಜಿಲ್ಲೆಯ ಉಸ್ತುವಾರಿಯಾಗಿರುವ ದಿನೇಶ್ ಗುಂಡೂರಾವ್ ಅವರಿಗೆ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದಾಗ ಹಾರ, ತುರಾಯಿ ಬದಲು ಪುಸ್ತಕ ಕೊಡುವಂತೆ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಬೆನ್ನಲ್ಲೇ ತಮಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ಹಾರ, ಶಾಲು ನೀಡದಂತೆ ಮತ್ತು ಕೊಡಲೇಬೇಕೆಂದರೆ ಪುಸ್ತಕಗಳನ್ನು ಕೊಡುವಂತೆ ಮನವಿ ಮಾಡಿದ್ದರು. ಸಿದ್ದರಾಮಯ್ಯ ಅವರ ಈ ನಡೆ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು, ನಂತರ ಬೆಂಗಳೂರು ಟ್ರಾಫಿಕ್ ಗಮನದಲ್ಲಿಟ್ಟುಕೊಂಡು ತಮಗೆ ಝೀರೋ ಟ್ರಾಫಿಕ್ ಸೌಲಭ್ಯ ಕೂಡ…

Read More