Author: Prajatv Kannada

ಬೆಂಗಳೂರು ;- ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಟ್ಟಡಗಳ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದು, ಬೆಳಿಗೆ 9 ಗಂಟೆಯಿಂದಲೇ ಕೆಆರ್ ಪುರಂ, ಮಹದೇವಪುರ, ಹೊಯ್ಸಳ ನಗರ ವ್ಯಾಪ್ತಿಯಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಆರಂಭವಾಗಿದೆ. ತೆರವು ಕಾರ್ಯ ಆರಂಭವಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರೂ ತೆರವಿಗೆ ಮುಂದಾಗಿರುವ ಪಾಲಿಕೆ ಕ್ರಮ ಪ್ರಶ್ನಿಸಿದ್ದು, ದಾಖಲೆಗಳನ್ನು ತೋರಿಸಿದ್ದಾರೆ. ತಹಶೀಲ್ದಾರ್ ಎಡವಟ್ಟಿನಿಂದಾಗಿ ಪಾಲಿಕೆ ಅಧಿಕಾರಿಗಳು ಮುಜುಗರಕ್ಕೀಡಾಗಿದ್ದಾರೆ. ಕೆಲ ದಿನಗಳ ಹಿಂದೆ ತೆರವು ಕಾರ್ಯಾಚರಣೆ ಮಾಡುವುದಾಗಿ ಬೆಂಗಳೂರು ಉತ್ತರ ತಹಶೀಲ್ದಾರ್ ಸ್ಥಳೀಯ ನಿವಾಸಿಗಳಿಗೆ ನೋಟಿಸ್ ನೀಡಿದ್ದರು. ತಹಶೀಲ್ದಾರ್ ನೋಟಿಸ್ ಗೆ ನಿವಾಸಿಗಳು ಸ್ಟೇ ತಂದಿದ್ದರು. ಜೂನ್ 15ರಂದು ಶಾಸಕರು ಹಾಗೂ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿದ್ದ ತಹಶೀಲ್ದಾರ್, ನಿವಾಸಿಗಳು ತಂದಿದ್ದ ಸ್ಟೇ ಬಗ್ಗೆ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತರದೇ ಬೇಜವಾಬ್ದಾರಿ ಮೆರೆದಿದ್ದಾರೆ.

Read More

ಬೆಂಗಳೂರು ;- ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ವಿದ್ಯುತ್ ದರವನ್ನು ಇಳಿಕೆ ಮಾಡುವಂತೆ ಆಗ್ರಹಿಸಿ ಇಂಧನ ಸಚಿವರಿಗೆ ಪತ್ರ ಬರೆದಿದ್ದಾರೆ. ವಿದ್ಯುತ್ ಬಳಕೆ ಶುಲ್ಕವನ್ನು ಪ್ರತಿ ಯೂನಿಟ್ ಗೆ 70 ಪೈಸೆಯಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಹಿನ್ನಲೆ ಬೃಹತ್ ಬೆಂಗಳೂರು ಹೋಟೆಲ್​ ಮಾಲೀಕರ ಸಂಘ ವಿದ್ಯುತ್​​ ದರ ಇಳಿಸುವಂತೆ ಕೋರಿ ಇಂಧನ ಸಚಿವ ಕೆ.ಜೆ ಜಾರ್ಜ್​ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ವಿದ್ಯುತ್ ದರ ಹೆಚ್ಚಳ ಮುಂದಿನ ಒಂದು ವರ್ಷಕ್ಕೆ ಮುಂದೂಡಬೇಕು. ಸದ್ಯಕ್ಕೆ ಇರುವ ವಿದ್ಯುತ್ ತೆರಿಗೆಯನ್ನು 9 ಪರ್ಸೆಂಟ್ ರಿಂದ 3 ಪರ್ಸೆಂಟ್ ಇಳಿಕೆ ಮಾಡಬೇಕು. ಪ್ರಿಪೈಡ್ ಮೀಟರ್ ಅಳವಡಿಕೆ ಮಾಡಿ ಗ್ರಾಹಕರ ಠೇವಣಿ ಹಣ ಹಿಂದಿರುಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Read More

ಬೆಂಗಳೂರು : ರಾಜ್ಯದ ಜನತೆಗೆ ಮತ್ತೆ ದರ ಸಿಡಿಲು ಕಾದಿದ್ಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಕರೆಂಟ್ ಆಯಿತು ಹೋಟೆಲ್ ಮುಗೀತು ಇದೀಗ ನಂದಿನಿ ಹಾಲು ಸರದಿನಾ..? ಎಂಬ ಪ್ರಶ್ನೆ ಎದ್ದಿದೆ. ವಿದ್ಯುತ್ ದರ ಹೆಚ್ಚಳ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಫಿಕ್ಸ್ ಆಗಿದ್ದು, ಶೀಘ್ರದಲ್ಲೇ ಪರಿಷ್ಕರಣೆಯಾಗುತ್ತಾ‌‌ ನಂದಿನಿ ಹಾಲಿನ ದರ ? ಎಂಬ ಅನುಮಾನ ಮೂಡಿದೆ. ಹಾಲಿನ ದರ ಏರಿಕೆಗೆ ಹಾಲು ಒಕ್ಕೂಟಗಳಿಂದ ನಿರಂತರ ಸರ್ಕಸ್ ನಡೆಯುತ್ತಿದ್ದು, KERC ಎಲ್ಲಾ ಎಸ್ಕಾಂಗಳ ವಿದ್ಯುತ್ ದರ ಏರಿಕೆಗೆ ಅಸ್ತು ಬೆನ್ನಲ್ಲೇ ಇದೀಗ ಹಾಲು ಒಕ್ಕೂಟಗಳಿಂದ ದರ ಏರಿಕೆಗೆ ಬಿಗಿಪಟ್ಟು ಹಿಡಿಯಲಾಗಿದೆ. ವಿದ್ಯುತ್ ದರದಂತೆ ಹಾಲಿನ ದರವನ್ನೂ ಏರಿಸಲು ರಾಜ್ಯದ 14 ಹಾಲು ಒಕ್ಕೂಟಗಳು ಸರ್ಕಾರದ ಮೇಲೆ ಒತ್ತಡ ಹಾಕಲು ಪ್ಲ್ಯಾನ್ ಮಾಡಿದೆ. ಹೀಗಾಗಿ ಈ ವಾರದೊಳಗೆ ಸಿಎಂ ಸಿದ್ದರಾಮಯ್ಯ ಭೇಟಿಗೆ ಹಾಲು ಒಕ್ಕೂಟಗಳು ನಿರ್ಧಾರ ಮಾಡಿವೆ. ಈ ಬಗ್ಗೆ KMF ವ್ಯವಸ್ಥಾಪಕ ನಿರ್ದೇಶಕ ಸತೀಶ್ ಜತೆ ಚರ್ಚೆ ನಡೆಸಿರೋ ಒಕ್ಕೂಟಗಳ ಅಧ್ಯಕ್ಷರುಗಳು ಇನ್ನೆರಡು…

Read More

ಕೆಆರ್ ಪುರ ;– ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನಿಂದ ಒತ್ತುವರಿ ತೆರವು ಶುರುವಾಗಲಿದೆ. ಅದರಂತೆ ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ ಹೊರಮಾವು ವಾರ್ಡನ ಹೊಯ್ಸಳನಗರದಲ್ಲಿ ಹೀಗಾಗಲೇ ಒತ್ತುವರಿ ತೆರವು ಮಾಡಲಾಗಿದೆ. ಮೂರು ಅಂಗಡಿ ಶೆಡ್ ಗಳ ತೆರವು ಕಾರ್ಯಚರಣೆ ನಡೆಸಲಾಗಿದ್ದು, 500ಮೀಟರ್ ಒತ್ತುವರಿ ತೆರವು ಮಾಡಲಾಗಿದೆ. ಸಾಮಗ್ರಿಗಳನ್ನು ತೆಗೆದುಕೊಳ್ಳಲು ಅಂಗಡಿ ಮಾಲೀಕರಿಗೆ ಅವಕಾಶ ನೀಡಲಾಗಿದ್ದು, ತೆರವಿನ ನಂತರ ಮುಂದಿನ ದಿನಗಳಲ್ಲಿ ರಾಜಕಾಲುವೆ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತದೆ. ಇನ್ನೂ ಬೆಂಗಳೂರಿನ ಹೊಯ್ಸಳನಗರದಲ್ಲಿ ಮನೆ ಮಾಲೀಕರಿಗೆ ಸಮಯಾವಕಾಶ ನೀಡಲಾಗಿದ್ದು, ಸೋಮವಾರ ಒತ್ತುವರಿ ತೆರವು ಕಾರ್ಯಚರಣೆ ಮುಂದುವರಿ ಮಾಡಲಾಗುತ್ತದೆ. Video Player 00:00 00:22 ಇನ್ನೂ ಆಮೆಗತಿಯಲ್ಲಿ ಸಾಗುತ್ತಿದ್ದ ರಾಜಕಾಲುವೆ ಒತ್ತುವರಿ ತೆರವು ಚುರುಕುಗೊಳಿಸಲು ಅಧಿಕಾರಿಗಳಿಗೆ ಕಮಿಷನರ್‌ 15 ದಿನ ಗಡುವು ಕೊಟ್ಟಿದ್ದಾರೆ. ಕಳೆದ ವರ್ಷ ಮಳೆಯಿಂದಾಗಿ ಭಾಗಶಃ ಬೆಂಗಳೂರು ಮುಳುಗಡೆಯಾಗಿತ್ತು. ಮನೆಗಳಲ್ಲಿ ನೀರು ಹೊಕ್ಕು ನಿವಾಸಿಗರು ಪರದಾಡಿದ್ದರು. ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದರು. ಕೆಲವು ಬಡಾವಣೆಗಳು ಅಕ್ಷರಶಃ ಕೆರೆಯಂತಾಗಿದ್ದವು. ಈ ಸಮಸ್ಯೆಗೆ ರಾಜಕಾಲುವೆ…

Read More

ಬೆಂಗಳೂರು:– ಅಧಿಕಾರಕ್ಕೆ ಬಂದ ಕೂಡಲೇ ಡಿಕೆ ಸಹೋದರರಿಂದ ದ್ವೇಷ ರಾಜಕಾರಣ ಸಾಧಿಸಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್, ವಿಶೇಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ನನ್ನ ವಿರುದ್ಧ ರಾಜಕೀಯ ದ್ವೇಷ ಸಾಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಕಾಂಗ್ರೆಸ್ ನಾಯಕರ ಸೇಡಿನ ರಾಜಕಾರಣವಲ್ಲದೆ ಬೇರೇನೂ ಅಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಬಿಬಿಎಂಪಿ ಅಧಿಕಾರಿಗಳ ಅಮಾನತು ಹಾಗೂ ನನ್ನ ಹೆಸರನ್ನು ವಿವಾದಕ್ಕೆ ಎಳೆದು ತರುತ್ತಿರುವುದು ಆರಂಭವಷ್ಟೇ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದ್ವೇಷದ ರಾಜಕೀಯ ನಡೆಯಲಿದೆ ಎಂದಿದ್ದಾರೆ. ರಾಜ್ಯಪಾಲರಿಗೆ ದೂರು ಸಲ್ಲಿಸುವ ಅಥವಾ ಬಿಜೆಪಿ ಹೈಕಮಾಂಡ್ಗೆ ವಿಷಯ ಪ್ರಸ್ತಾಪಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುನಿರತ್ನ ಮುಂದಿನ ಬೆಳವಣಿಗೆಯನ್ನು ಕಾದು ನೋಡುತ್ತೇನೆ ಎಂದು ಹೇಳಿದರು.

Read More

ನವ​ದೆ​ಹ​ಲಿ: ಭಾರತೀಯ ಕುಸ್ತಿ ಒಕ್ಕೂಟ(ಡ​ಬ್ಲ್ಯು​ಎ​ಫ್‌​ಐ​)ದ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ಕುಸ್ತಿ​ಪ​ಟು​ಗ​ಳಿಗೆ ಲೈಂಗಿಕ ದೌರ್ಜನ್ಯ ಎಸ​ಗಿದ್ದಾರೆ ಎಂದು ಚಾರ್ಜ್‌ಶೀಟ್‌​ನಲ್ಲಿ ಉಲ್ಲೇಖಿ​ಸಿ​ದ್ದರೂ, ಅಪ್ರಾಪ್ತೆಯ ಮೇಲೆ ಕಿರುಕುಳವಾದ ಬಗ್ಗೆ ಸಮರ್ಥನೀಯ ಸಾಕ್ಷಿಗಳು ಲಭ್ಯವಾಗಿಲ್ಲ ಎನ್ನುವ ಕಾರಣ ನೀಡಿ ಪೋಕ್ಸೋ ಕೇಸ್‌ ರದ್ದು​ಗೊ​ಳಿ​ಸಲು ದೆಹಲಿ ಪೊಲೀ​ಸರು ನ್ಯಾಯಾ​ಲ​ಯಕ್ಕೆ ಶಿಫಾ​ರಸು ಮಾಡಿ​ರು​ವು​ದಕ್ಕೆ ಕುಸ್ತಿ​ಪಟು ಸಾಕ್ಷಿ ಮಲಿಕ್‌ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾ​ರೆ. ಕುಸ್ತಿ​ಪ​ಟು​ಗಳು ಈಗಾ​ಗಲೇ ಬ್ರಿಜ್‌ ವಿರುದ್ಧ ಎಫ್‌​ಐ​ಆ​ರ್‌ ದಾಖ​ಲಿ​ಸಲು ವಿಳಂಬ, ಪೊಲೀಸರ ತನಿಖಾ ಪ್ರಕ್ರಿ​ಯೆ ಹಾಗೂ ಅದ​ರ​ಲ್ಲಿ ಬ್ರಿಜ್‌​ಭೂ​ಷಣ್‌ ಸಿಂಗ್‌ ಪ್ರಭಾ​ವ ಬೀರು​ತ್ತಿ​ರುವ ಬಗ್ಗೆ ಹಲವು ಬಾರಿ ಬೇಸರ ಹೊರ​ಹಾ​ಕಿ​ದ್ದರು. ಚಾರ್ಜ್‌ಶೀಟ್‌ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಸಾಕ್ಷಿ, ‘ಬ್ರಿಜ್‌ಭೂಷಣ್‌ ಕುಸ್ತಿ​ಪ​ಟು​ಗ​ಳಿಗೆ ಲೈಂಗಿಕ ಕಿರು​ಕುಳ ನೀಡಿ​ರುವ ಬಗ್ಗೆ ಪೊಲೀ​ಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿ​ಸಿ​ದ್ದಾ​ರೆ. ಆದರೆ ಪೂರಕ ಸಾಕ್ಷ್ಯಾ​ಧಾರ ಇಲ್ಲ ಎಂದು ಪೋಕ್ಸೋ ಕೇಸ್‌ ಬಿಡಲು ಶಿಫಾರಸು ಮಾಡಿ​ದ್ದಾ​ರೆ. ಅಪ್ರಾ​ಪ್ತೆಯ ತಂದೆಗೆ ಒತ್ತಡ ಇದ್ದಿ​ದ್ದ​ರಿಂದಲೇ ಅವರು ತಮ್ಮ ಹೇಳಿಕೆ ಬದ​ಲಿ​ಸಿ​ದ್ದಾರೆ. ಅವರ ಕುಟುಂಬಕ್ಕೆ ತುಂಬಾ ಒತ್ತ​ಡ​ವಿತ್ತು. ಬ್ರಿಜ್‌ಭೂಷಣ್‌ರನ್ನು ಮೊದಲೇ ಬಂಧಿಸಿದ್ದರೆ ಅಪ್ರಾಪ್ತ ಕುಸ್ತಿಪಟು…

Read More

ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮಾತನಾಡಿ ಐಪಿಎಲ್ ಪಂದ್ಯಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದರು.  ಟಿ 20 ಗೂ,ಏಕದಿನ,ಟೆಸ್ಟ್ ಪಂದ್ಯಗಳಿಗೆ ಸಾಕಷ್ಟು ವ್ಯತ್ಯಾಸವಿದೆ.ನಾವು ಟೆಸ್ಟ್ ಕ್ರಿಕೆಟ್ ನನ್ನು ಯಾವುದೇ ಕಾರಣಕ್ಕೂ ಮರೆಯಬಾರದು.ಟೆಸ್ಟ್ ನಲ್ಲಿ ಕ್ರಿಕೆಟ್ ಭವಿಷ್ಯ ಅಡಗಿದೆ. ವೀಕ್ಷಕರ ಮನರಂಜನೆಗಾಗಿ ಐಪಿಎಲ್ ನಡೀತಿದೆ.ವಿಭಿನ್ನ ವಾತಾವರಣದಲ್ಲಿ ಕ್ರಿಕೆಟ್ ಆಡುವಾಗ ಪಿಚ್ ಅನ್ನೂ ಅರ್ಥ ಮಾಡಿಕೊಳ್ಳಲೂ ಕಷ್ಟ ಆಗುತ್ತೆ.ಅಸೀಸ್ ವಿರುದ್ಧದ ಟೆಸ್ಟ್ ಪೈನಲ್ ವೇಳೆ ಮೊದಲ ದಿನ ಸರಿಯಾಗಿ ಆಡಲಿಲ್ಲ.ಟೀಮ್ ಆಯ್ಕೆಯ ವೇಳೆ ಒಂದು ಸಣ್ಣ ತಪ್ಪು ಕೂಡ ಆಗಿದೆ.ಇಲ್ಲದಿದ್ದರೆ ಆ ಪಂದ್ಯ ಗೆಲ್ಲುತ್ತಿದ್ವಿ.ಇಡೀ ವರ್ಷ ಅಭ್ಯಾಸ ಮಾಡುವುದರಿಂದ ಅಭ್ಯಾಸದ ಅಗತ್ಯವಿಲ್ಲ. ಟಿ ಟ್ವೆಂಟಿ ಇರಲಿ,ಏಕದಿನವಾಗಲಿ,ಟೆಸ್ಟ್ ಇರಲಿ ಎಲ್ಲದಕ್ಕೂ ಆಟಗಾರರು ಹೊಂದಾಣಿಕೆ ಆಗಬೇಕು.ಆಗ ಅವರು ಉತ್ತಮ ಆಟಗಾರರಾಗಿರುತ್ತಾರೆಂದು ತಿಳಿಸಿದರು.

Read More

ಹೊಸದಿಲ್ಲಿ: ತಮ್ಮ ಗರಡಿಯಲ್ಲಿ ಟೀಮ್ ಇಂಡಿಯಾ ಅಂಡರ್ 19 ವಿಶ್ವಕಪ್ ಗೆಲ್ಲಲು ಮಹತ್ತರ ಕಾಣಿಕೆ ನೀಡಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಮೇಲೆ ಭರವಸೆ ಇಟ್ಟು ಬಿಸಿಸಿಐ ಹೆಡ್ ಕೋಚ್ ಹುದ್ದೆ ನೀಡಿ ದಶಕದ ಟ್ರೋಫಿಯ ಬರ ನೀಗಿಸಿಕೊಳ್ಳುವ ಮಾಸ್ಟರ್ ಪ್ಲ್ಯಾನ್ ರೂಪಿಸಿತ್ತು ಆದರೆ ಆ ಕನಸು ಕೈಗೂಡಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ತಕ್ಷಣವೇ ಮಹಾಗೋಡೆಯನ್ನು ಮುಖ್ಯ ತರಬೇತುದಾರನ ಹುದ್ದೆಯಿಂದ ಕೆಡವಬೇಕೆಂದು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಚೊಚ್ಚಲ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡ ಬೆನ್ನಲ್ಲೇ ರವಿಶಾಸ್ತ್ರಿಯನ್ನು ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿಸಿ ಬಿಸಿಸಿಐ ದ್ರಾವಿಡ್ ರನ್ನು ಕರೆ ತಂದಿತ್ತು. ಆದರೆ ಏಷ್ಯಾಕಪ್ ಟೂರ್ನಿ, ಟಿ 20 ವಿಶ್ವಕಪ್ ಟೂರ್ನಿ ಹಾಗೂ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲೂ ರೋಹಿತ್ ಶರ್ಮಾ ಪಡೆ ದ್ರಾವಿಡ್ ಗರಡಿಯಲ್ಲಿ ಮುಗ್ಗರಿಸಿದೆ. ಟೆಸ್ಟ್ ಸ್ಪೆಷಾಲಿಸ್ಟ್ ಬ್ಯಾಟರ್ ಆಗಿದ್ದ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ…

Read More

ಹೊಸದಿಲ್ಲಿ: ಹದಿನಾರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬಾರಿ ಸದ್ದು ಮಾಡಿದ್ದ ವಿರಾಟ್‌ ಕೊಹ್ಲಿ, ಗೌತಮ್‌ ಗಂಭೀರ್‌ ಹಾಗೂ ತಮ್ಮ ನಡುವಣ ಜಗಳದ ಬಗ್ಗೆ ಲಖನೌ ಸೂಪರ್‌ ಜಯಂಟ್ಸ್‌ ಹಾಗೂ ಅಫಘಾನಿಸ್ತಾನ ವೇಗಿ ನವೀನ್ ಉಲ್‌ ಹಕ್‌ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. ಮೇ. 1 ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ನಡೆದಿದ್ದ ಲೋ ಸ್ಕೋರಿಂಗ್ ಪಂದ್ಯದಲ್ಲಿ 18 ರನ್ ಅಂತರದಿಂದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿತ್ತು. ಲಖನೌ ಇನಿಂಗ್ಸ್‌ನಲ್ಲಿ ನವೀನ್‌ ಉಲ್‌ ಹಕ್‌ ಹಾಗೂ ವಿರಾಟ್‌ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಪಂದ್ಯ ಮುಗಿದ ಬಳಿಕ ಆಟಗಾರರು ಪರಸ್ಪರ ಹಸ್ತಲಾಘವ ನೀಡುವ ವೇಳೆಯೂ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ನಡುವೆಯೂ ಮಾತಿಗೆ ಮಾತು ಬೆಳೆದಿತ್ತು. ಅಷ್ಟೇ ಅಲ್ಲದೆ ಪಂದ್ಯದ ಮುಗಿದ ಬೆನ್ನಲ್ಲೆ ಡಗ್‌ಔಟ್‌ನಿಂದ ಮೈದಾನಕ್ಕೆ ಬಂದ ಲಖನೌ ಸೂಪರ್‌ ಜಯಂಟ್ಸ್‌ ಮೆಂಟರ್‌ ಗೌತಮ್‌ ಗಂಭೀರ್‌ ಅವರು, ವಿರಾಟ್‌ ಕೊಹ್ಲಿಯನ್ನು ನಿಂದಿಸಿದ್ದರು.…

Read More

ಭಾರತ ಕ್ರಿಕೆಟ್ ತಂಡದ ಆಟಗಾರರು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಸೋಲುಂಡ ಬಳಿಕ ತವರಿಗೆ ಮರಳಿದ್ದು ಎಲ್ಲ ಪ್ಲೇಯರ್ಸ್ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇದರ ನಡುವೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಶಾಕ್ ನೀಡಲು ಬಿಸಿಸಿಐ ಮುಂದಾಗಿದೆ. ಭಾರತ ತಂಡ ತನ್ನ ಮುಂದಿನ ಸರಣಿಯನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಕೆರಿಬಿಯನ್ನರ ನಾಡಿಗೆ ಟೀಮ್ ಇಂಡಿಯಾ ಪ್ರವಾಸ ಬೆಳೆಸಲಿದ್ದು, ಜುಲೈ 12 ರಿಂದ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಜುಲೈ 12 ರಿಂದ ಭಾರತದ ಮುಂದಿನ ಪಂದ್ಯ ಇರುವ ಕಾರಣ ಆಟಗಾರರು ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಿದ್ದರೂ ಫಾರ್ಮ್​ನಲ್ಲಿ ಇಲ್ಲದ ನಾಯಕ ರೋಹಿತ್ ಶರ್ಮಾ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಸಂಪೂರ್ಣ ಟೆಸ್ಟ್ ಅಥವಾ ವೈಟ್-ಬಾಲ್ ಸರಣಿಯಿಂದ ಕೈಬಿಡುವ ಸಾಧ್ಯತೆಯಿದೆ ಎಂದು ವರದಿ ಆಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ರೋಹಿತ್ ಶರ್ಮಾ…

Read More