ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ವರ್ಷದ ಸಾಮೂಹಿಕ ವಿವಾಹದಲ್ಲಿ ನಟ ದರ್ಶನ್ ಭಾಗಿಯಾಗಿ ಹಿಂದಿನ ಘಟನೆಯೊಂದನ್ನು ಮೆಲುಕು ಹಾಕಿದರು. ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಟ್ಟು 52 ಅಂತರ್ಜಾತಿ ಜೋಡಿಗಳು, ಪರಿಶಿಷ್ಟ ಜಾತಿಗೆ ಸೇರಿದ 52 ಜೋಡಿಗಳು, ಕುರುಬ ಸಮುದಾಯಕ್ಕೆ ಸೇರಿದ ತಲಾ ಒಂಬತ್ತು ಜೋಡಿಗಳು ಮತ್ತು ವೀರಶೈವರು, ಪರಿಶಿಷ್ಟ ಪಂಗಡಕ್ಕೆ ಸೇರಿದ 11 ಜೋಡಿಗಳು ವಿವಾಹವಾದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ದರ್ಶನ್ ತಮ್ಮ ವಿವಾಹ ಕೂಡ ಧರ್ಮಸ್ಥಳದಲ್ಲಿ ನೆರವೇರಿತು ಎಂದು ನೆನಪು ಮಾಡಿಕೊಂಡರು. ದುಂದುವೆಚ್ಚಗಳನ್ನು ಮಾಡದೆ ಸರಳ ವಿವಾಹವಾಗುವುದು ಉತ್ತಮ ಎಂದ ದರ್ಶನ್ ಇದೇ ವೇಳೆ ತಮ್ಮ ಜೀವನದ ಮುಖ್ಯವಾದ ವಿಷಯವನ್ನು ಹೇಳಿಕೊಂಡರು. ಅದು ತಮ್ಮ ತಂದೆ ಖ್ಯಾತ ನಟ ತೂಗುದೀಪ ಶ್ರೀನಿವಾಸ್ ನಿಧನ ಹೊಂದಿದ ಸಮಯ, ಮನೆಯಲ್ಲಿ ಆರ್ಥಿಕವಾಗಿ ಕಷ್ಟವಿತ್ತು. ನಾವು ಮಕ್ಕಳು ಚಿಕ್ಕವರು ಅಕ್ಕನ ಮದುವೆಯೂ ಆಗಿರಲಿಲ್ಲ. ಒಂದು ದಿನ ಇದ್ದಕ್ಕಿದ್ದ ಹಾಗೆ ಅಮ್ಮ ಧರ್ಮಸ್ಥಳಕ್ಕೆ…
Author: Prajatv Kannada
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಸೂಪರ್ ಹಿಟ್ ‘777 ಚಾರ್ಲಿ’ ಚಿತ್ರ ದೆಹಲಿಯಲ್ಲಿ 13ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಚಿತ್ರೋತ್ಸವದಲ್ಲಿ ನಿರ್ದೇಶಕ ಕಿರಣ್‌ರಾಜ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಲು ಸಿದ್ದವಾಗಿದ್ದಾರೆ.. ಇದೇ ಜೂನ್ 10ಕ್ಕೆ ಕಿರಣ್‌ರಾಜ್ ನಿರ್ದೇಶನದ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಪೂರ್ಣವಾಗಲಿದೆ. ವಾರ್ಷಿಕೋತ್ಸವವನ್ನು ಆಚರಿಸಲು ಚಿತ್ರತಂಡ ಸಿದ್ಧವಾಗಿದ್ದು, ಇದರ ಜೊತೆಗೆ ಮತ್ತೊಂದು ಸಿಹಿ ಸುದ್ದಿಯನ್ನು ಚಾರ್ಲಿ ತಂಡ ನೀಡಿದೆ. ಅಂದಹಾಗೆಯೇ ಚಾರ್ಲಿ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಸಿನಿಮಾವಾಗಿದೆ. ಶ್ವಾನ ಮತ್ತ ಮನುಷ್ಯನ ನಡುವಿನ ಸಂಬಂಧವನ್ನು ಭಿನ್ನವಾಗಿ ತೋರಿಸಲಾಗಿದೆ. ಹಾಗಾಗಿ ಈ ಸಿನಿಮಾ ಪ್ರಾಣಿ ಪ್ರೀಯರಿಗೆ ಹೆಚ್ಚು ಇಷ್ಟವಾಗಿದೆ. ಈ ಸಿನಿಮಾ ಶೂಟಿಂಗ್ಗಾಗಿ ಚಿತ್ರತಂಡ ಸಾಕಷ್ಟು ಸರ್ಕಸ್ ಮಾಡಿದೆ. ಬಾಲ್ಯದಲ್ಲೇ ಹೆತ್ತವರು, ತಂಗಿಯನ್ನು ಕಳೆದುಕೊಂಡು ಒಂಟಿ ಜೀವನ ನಡೆಸುತ್ತಿದ್ದ ಧರ್ಮನ ಬಾಳಿಗೆ ಬಂದ ಶ್ವಾನ ಚಾರ್ಲಿ ಆತನಲ್ಲಿ ಜೀವನದಲ್ಲಿ ತೀರಾ ಬದಲಾವಣೆಯನ್ನು ಮಾಡುತ್ತದೆ. ಇದನ್ನು ನಿರ್ದೇಶಕ ಕಿರಣ್ ರಾಜ್…
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ನರಸಿಂಹರಾಜು ಅವರ ಶತಮಾನೋತ್ಸವದ ಹಿನ್ನೆಲೆಯಲ್ಲಿ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ದಿವಾಕರ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡ್ತಿದ್ದಾರೆ. ಈ ಮೂಲಕ ಅಜ್ಜನಿಗೆ ವಿಶೇಷ ಉಡುಗೊರೆ ನೀಡಲು ಅವಿನಾಶ್ ದಿವಾಕರ್ ಮುಂದಾಗಿದ್ದಾರೆ. ‘ಜುಗಾರಿ’ ಚಿತ್ರ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ನಟ ಅವಿನಾಶ್ ಇದೀಗ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಜುಲೈ 24ಕ್ಕೆ ನರಸಿಂಹರಾಜು ಅವರು ಹುಟ್ಟಿ 100 ವರ್ಷ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಅವಿನಾಶ್ ಹೊಸ ಹೆಜ್ಜೆ ಇಡುತ್ತಿದ್ದು ಅಂದು ತಮ್ಮ ಸಿನಿಮಾದ ಕುರಿತು ಮಾಹಿತಿ ನೀಡಲಿದ್ದಾರೆ. ಅವಿನಾಶ್ ದಿವಾಕರ್ ಸಿನಿಮಾರಂಗಕ್ಕೆ ಎಂಟ್ರಿಕಪೊಟ್ಟು 10 ವರ್ಷಗಳು ಕಳೆದಿವೆ. ಕಲಾ ನಿರ್ದೇಶಕನಾಗಿ, ನಾಯಕ ನಟನಾಗಿ ಹೀಗೆ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿರೋ ಅವಿನಾಶ್ ಇದೀಗ ನಿರ್ದೇಶಕನ ಕ್ಯಾಪ್ ತೊಡೋಕೆ ರೆಡಿಯಾಗಿದ್ದಾರೆ. ಅವಿನಾಶ್ ನಿರ್ದೇಶನದ ಚಿತ್ರಕ್ಕೆ ‘ರುದ್ರಾಂಕುಶ’ ಅಂತ ಹೆಸರಿಡಲಾಗಿದೆ. ಈ ಚಿತ್ರದ ಒಂದು ಝಲಕ್ ಈಗಾಗಲೇ ರಿವೀಲ್ ಮಾಡಲಾಗಿದ್ದು 24ರಂದು ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ.
ದಾಂಪತ್ಯದಲ್ಲಿ ಶಾರೀರಿಕ ಸಂಬಂಧ ಬಹಳ ಮುಖ್ಯ. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕಾಂಡೋಮ್ ಬಳಕೆ ಅತ್ಯಗತ್ಯ. ಸಂಭೋಗದ ವೇಳೆ ಸುರಕ್ಷತೆ ಬಹಳ ಮುಖ್ಯ. ಸೇಫ್ಟಿ ಬಯಸುವವರು ಕಾಂಡೋಮ್ ಗೆ ಆದ್ಯತೆ ನೀಡ್ತಾರೆ. ಬಹುತೇಕ ಜೋಡಿಗಳು ಪ್ರೆಗ್ನೆನ್ಸಿ ಅವಾಯ್ಡ್ ಮಾಡಬೇಕೆಂದರೆ ಕಾಂಡೋಮ್ ಮೊರೆ ಹೋಗುತ್ತಾರೆ. ಕಾಂಡೋಮ್ ಅನಗತ್ಯ ಗರ್ಭಧಾರಣೆ ತಡೆಗಟ್ಟಲು ಪ್ರಮುಖ ಪಾತ್ರವಹಿಸುತ್ತದೆ. ಲೈಂಗಿಕ ಚಟುವಟಿಕೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಕಾಂಡೋಮ್‌ಗಳನ್ನು ಬಳಸಲಾಗುತ್ತದೆ, ಅಂದರೆ, ಅನಗತ್ಯ ಗರ್ಭಧಾರಣೆ ಅಥವಾ ಲೈಂಗಿಕವಾಗಿ ಹರಡುವ ಸೋಂಕುಗಳ ಅಪಾಯವನ್ನು ತಡೆಗಟ್ಟಲು. ಪುರುಷರು ಮತ್ತು ಮಹಿಳೆಯರಿಗೆ ಕಾಂಡೋಮ್‌ಗಳು ಲಭ್ಯವಿದ್ದರೂ, ಪುರುಷ ಕಾಂಡೋಮ್‌ಗಳನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ಹಾಗಿದ್ರೆ ಮಹಿಳೆಯರ ಕಾಂಡೋಮ್ ಬಳಸೋದು ಹೇಗೆ ? ಇದು ಪುರುಷರ ಕಾಂಡೋಮ್‌ಗಿಂತ ಹೇಗೆ ವಿಭಿನ್ನವಾಗಿರುತ್ತದೆ ಎಂಬುದನ್ನು ತಿಳಿಯೋಣ. ಸುರಕ್ಷಿತ ಸೆಕ್ಸ್‌ನ ವಿಷಯದ ಬಗ್ಗೆ ಗಪ್‌ಚುಪ್ ಆಗಿ ಚರ್ಚಿಸುವ ದಿನಗಳು ಕಳೆದುಹೋಗಿವೆ. ಎಲ್ಲರೂ ಈಗ ಲೈಂಗಿಕ ಜೀವನದ (Sex life) ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಸುರಕ್ಷಿತ ಲೈಂಗಿಕತೆಯ ವಿಷಯಕ್ಕೆ ಬಂದಾಗ, ಕಾಂಡೋಮ್‌ಗಳು ಹೆಚ್ಚಿನ…
ನಾರದ ಜಯಂತಿಯನ್ನು ದೇವಋಷಿ ನಾರದ ಮುನಿಯ ಜನ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ವೈದಿಕ ಪುರಾಣಗಳು ಮತ್ತು ಪುರಾಣಗಳ ಪ್ರಕಾರ ದೇವಋಷಿ ನಾರದನು ಸಾರ್ವತ್ರಿಕ ದೈವಿಕ ಸಂದೇಶವಾಹಕ ಮತ್ತು ದೇವರುಗಳ ನಡುವೆ ಮಾಹಿತಿಯ ಪ್ರಾಥಮಿಕ ಮೂಲವಾಗಿದೆ. ನಾರದ ಮುನಿಯು ಎಲ್ಲಾ ಹದಿಹರೆಯದ ಲೋಕಗಳು, ಆಕಾಶ ಅಥವಾ ಸ್ವರ್ಗ, ಪೃಥ್ವಿ ಅಥವಾ ಭೂಮಿ ಮತ್ತು ಪಾತಾಳ ಅಥವಾ ನೆದರ್‌ವರ್ಲ್ಡ್ ಅನ್ನು ಭೇಟಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾನೆ ಮತ್ತು ಭೂಮಿಯ ಮೇಲಿನ ಮೊದಲ ಪತ್ರಕರ್ತ ಎಂದು ನಂಬಲಾಗಿದೆ. ಮಾಹಿತಿಯನ್ನು ತಿಳಿಸಲು ನಾರದ ಮುನಿಯು ಬ್ರಹ್ಮಾಂಡದಾದ್ಯಂತ ಸಂಚರಿಸುತ್ತಿರುತ್ತಾನೆ. ಆದಾಗ್ಯೂ, ಅವರ ಹೆಚ್ಚಿನ ಸಮಯೋಚಿತ ಮಾಹಿತಿಯು ತೊಂದರೆಯನ್ನು ಉಂಟುಮಾಡುತ್ತದೆ ಆದರೆ ಅದು ಬ್ರಹ್ಮಾಂಡದ ಸುಧಾರಣೆಗಾಗಿ. ನಾರದ ಜಯಂತಿ – ದೇವರ್ಷಿ ನಾರದರ ಜನ್ಮದಿನವನ್ನು ಜ್ಯೇಷ್ಠ ಮಾಸದ ಮೊದಲ ದಿನದಂದು ಆಚರಿಸಲಾಗುತ್ತದೆ – ನಾರದ ಜಯಂತಿಯು ವೈಶಾಖ ಮಾಸದ ಕೃಷ್ಣ ಪಕ್ಷ ಪ್ರತಿಪದದಂದು ಬರುತ್ತದೆ. ದೇವಋಷಿ ನಾರದ ಯಾರು? ನಾರದ – ದೇವ-ಋಷಿ ಅಥವಾ ದೇವಋಷಿ – ದೇವತೆಗಳ ಋಷಿ ಪ್ರಾಚೀನ…
ನಾರದ ಜಯಂತಿ ಸೂರ್ಯೋದಯ: 05.57 AM, ಸೂರ್ಯಾಸ್ತ : 06.36 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ವೈಶಾಖ ಮಾಸ, ಕೃಷ್ಣ ಪಕ್ಷ, ವಸಂತ ಋತು, ಉತ್ತರಾಯಣ ತಿಥಿ: ಇವತ್ತು ಪಾಡ್ಯ 09:52 PM ತನಕ ನಂತರ ಬಿದಿಗೆ ನಕ್ಷತ್ರ: ಇವತ್ತು ವಿಶಾಖ 09:13 PM ತನಕ ನಂತರ ಅನುರಾಧ ಯೋಗ: ಇವತ್ತು ವ್ಯತೀಪಾತ 07:31 AM ತನಕ ನಂತರ ವರಿಯಾನ್ ಕರಣ: ಇವತ್ತು ಬಾಲವ 10:31 AM ತನಕ ನಂತರ ಕೌಲವ 09:52 PM ತನಕ ನಂತರ ತೈತಲೆ ರಾಹು ಕಾಲ: 09:00 ನಿಂದ 10:30 ವರೆಗೂ ಯಮಗಂಡ: 01:30 ನಿಂದ 03:00 ವರೆಗೂ ಗುಳಿಕ ಕಾಲ: 06:00 ನಿಂದ 07:30 ವರೆಗೂ ಅಮೃತಕಾಲ: 12.35 PM to 02.09 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:47 ನಿಂದ ಮ.12:38 ವರೆಗೂ “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob.…
ನವದೆಹಲಿ: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಜು.14ರಂದು ನಡೆಯಲಿರುವ “ಬಾಸ್ಟಿಲ್ ಡೇ ಪರೇಡ್”ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಮೋದಿ ಜೊತೆಗೆ ಭಾರತೀಯ ಸೇನಾ ಪಡೆಗಳ ತಂಡವೊಂದು ಈ ಪರೇಡ್‌ನಲ್ಲಿ ಭಾಗವಹಿಸಲಿದೆ. ಭಾರತ-ಫ್ರಾನ್ಸ್ ರಾಜತಾಂತ್ರಿಕ ಸಂಬಂಧಕ್ಕೆ 25 ವರ್ಷ ಸಂದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಫ್ರಾನ್ಸ್ ಅಧ್ಯಕ್ಷರ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಪ್ರಧಾನಿ ಮೋದಿ ಅವರ ಫ್ರಾನ್ಸ್ ಭೇಟಿಯಿಂದ ಕೈಗಾರಿಕೆಗಳು ಒಳಗೊಂಡಂತೆ ಕಾರ್ಯತಂತ್ರ, ಸಾಂಸ್ಕೃತಿಕ, ವೈಜ್ಞಾನಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಹಕಾರದಲ್ಲಿ ಮಹತ್ವಾಕಾಂಕ್ಷೆಯ ಗುರಿ ಸಾಧಿಸುವ ನಿಟ್ಟಿನಲ್ಲಿ ಭಾರತ-ಫ್ರಾನ್ಸ್ ರಾಜತಾಂತ್ರಿಕ ಸಂಬಂಧವು ಮುಂದಿನ ಹಂತಕ್ಕೆ ನಾಂದಿ ಹಾಡುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಲಂಡನ್: ಬ್ರಿಟನ್ ರಾಜನಾಗಿ ಮೂರನೇ ಚಾರ್ಲ್ಸ್ ಶನಿವಾರ ಪಟ್ಟಾಭಿಷಿಕ್ತರಾಗಲು ಸಿದ್ದವಾಗಿದ್ದಾರೆ. ಆದ್ರೆ ರಾಜಮನೆತನದ ಹೊನ್ನ ಕಳಸದಂತಿರುವ ರಾಣಿಯ ಕಿರೀಟದಲ್ಲಿ ಕೊಹಿನೂರ್ ವಜ್ರವಿರುವುದಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ. ಅಂದರೆ ರಾಜನಾಗಿ ಪಟ್ಟಾಭಿಷೇಕ ಆಗಲಿರುವ ಚಾರ್ಲ್ಸ್ ಪತ್ನಿ ಕ್ಯಾಮಿಲಾ, ಕೊಹಿನೂರ್ ವಜ್ರವಿರುವ ಕಿರೀಟವನ್ನು ಧರಿಸುವುದಿಲ್ಲ ಎಂದು ಬಕಿಂಗ್‌ಹ್ಯಾಮ್ ಪ್ಯಾಲೇಸ್ ಸ್ಪಷ್ಟಪಡಿಸಿದೆ. “ಕೊಹಿನೂರ್ ದಿ ಹಿಸ್ಟರಿ ಆಫ್ ವರ್ಲ್ಡ್ ಮೋಸ್ಟ್ ಫೇಮಸ್ ಡೈಮಂಡ್’ ಪುಸ್ತಕದ ಸಹಬರಹಗಾರ್ತಿ ಅನಿತಾ ಆನಂದ್ ಈ ಕುರಿತು ಪ್ರತಿಕ್ರಿಯಿಸಿದ್ದು, “ಕೊಹಿನೂರ್ ವಜ್ರದ ಇತಿಹಾಸವು ಬ್ರಿಟಿಷ್ ವಸಾಹತು ಶಾಹಿ ಚರಿತ್ರೆಯನ್ನು ನೆನಪಿಸುತ್ತದೆ. ಈ ಹಿನ್ನೆಲೆಯಲ್ಲಿ ಕೊಹಿನೂರ್ ಅನುಪಸ್ಥಿತಿ ಘೋಷಿಸಿರಬಹುದು’ ಎಂದಿದ್ದಾರೆ.
ಬಾಗಲಕೋಟೆ: ಪಕ್ಷೇತರ ಅಭ್ಯರ್ಥಿಯಾಗಿ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅಂಬಾದಾಸ ಕಾಮೂರ್ತಿ ಅವರು ರಬಕವಿ ಬನಹಟ್ಟಿಯಲ್ಲಿ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡರು. ನಿಮ್ಮ ಅಮೂಲ್ಯವಾದ ಮತವನ್ನು ಪಕ್ಷೇತರ ಅಭ್ಯರ್ಥಿ ಅಂಬಾದಾಸ್ ಮೂರ್ತಿಗೆ ಮತ ನೀಡಲು ಮನವಿ ಮಾಡಿದರು. ಕಾಂಗ್ರೆಸ್ ಬಿಜೆಪಿ ಪಕ್ಷವನ್ನು ನೋಡಿದ್ದೀರಿ. ನನಗೆ ಒಂದು ಬಾರಿ ತೇರದಾಳ ಮತ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಂಬಾದಾಸ್ ಕಾಮೂರ್ತಿಗೆ ಅವಕಾಶ ಮಾಡಿಕೊಡಿ. ತೇರದಾಳ ಕ್ಷೇತ್ರದ ಅಭಿವೃದ್ಧಿ ಮಾಡುವ ಕನಸನ್ನ ಹೊತ್ತು ಬಂದಿರುವ ಪಕ್ಷೇತರ ಅಭ್ಯರ್ಥಿ ಕಾಮೂರ್ತಿಗೆ ಆಶೀರ್ವಾದ ಮಾಡಿ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ಮನೆ ಮನೆಗೆ ತೆರಳಿ ಕರಪತ್ರಗಳನ್ನು ಹಂಚಿ ಅಬ್ಬರ ಪ್ರಚಾರ ನಡೆಸಿದರು. ತೇರದಾಳ ಮತಕ್ಷೇತ್ರಕ್ಕೆ ನೂರಕ್ಕೆ ನೂರರಷ್ಟು ಅನುದಾನ ತಂದು ಈ ಕ್ಷೇತ್ರ ಅಭಿವೃದ್ದಿ ಮಾಡುವುದೇ ನನ್ನ ಮೊದಲ ಸಂಕಲ್ಪ ಎಂದು ಪಕ್ಷೇತರ ಅಭ್ಯರ್ಥಿ…
ವಾಷಿಂಗ್ಟನ್: ತಾಯಿಯ ಗರ್ಭದಲ್ಲಿರುವ ಮಗುವಿನ ಮೆದುಳನ್ನೇ ಅಮೆರಿಕ ವೈದ್ಯರ ತಂಡವೊಂದು ಶಸ್ತ್ರಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದ್ದು, ವಿಶ್ವದಲ್ಲೇ ಇಂಥ ಪ್ರಯತ್ನ ಮೊದಲನೆಯದಾಗಿದೆ. ಮಹಿಳೆಯೊಬ್ಬರ ಗರ್ಭದಲ್ಲಿದ್ದ 7 ತಿಂಗಳ ಮಗುವಿಗೆ “ವೆನಸ್ ಆಫ್ ಗ್ಯಾಲೆನ್ ಮಾಲ್‌ಫಾರ್ಮೇಶನ್’ ಎಂಬ ಸಮಸ್ಯೆ ಎದುರಾಗಿತ್ತು. ಅಂದರೆ ಮಗುವಿನ ಮೆದುಳಿನಿಂದ ಹೃದಯಕ್ಕೆ ರಕ್ತವನ್ನು ತಲುಪಿಸುವ ನರವೊಂದು ಸರಿಯಾಗಿ ಬೆಳವಣಿಗೆ ಹೊಂದಿರಲಿಲ್ಲ. ಇದರಿಂದ ಮಗುವಿನ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಅಲ್ಲದೇ, ಮಗು ಹುಟ್ಟಿದ ತಕ್ಷಣವೇ ಮೆದುಳಿನ ಸಮಸ್ಯೆಗೆ ಗುರಿಯಾಗುವ ಅಥವಾ ಹುಟ್ಟಿದ ಕೂಡಲೇ ಹೃದಯವೈಫಲ್ಯಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿತ್ತು. ಈ ಹಿನ್ನೆಲೆ 34 ವಾರಗಳ ಗರ್ಭಾವಸ್ಥೆಯಲ್ಲಿರುವ ತಾಯಿಯ ಗರ್ಭದಲ್ಲಿರುವ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅಲ್ಟ್ರಾಸೌಂಡ್ ಸಹಾಯದೊಂದಿಗೆ ಬ್ರಿಗಮ್ ವುಮೆನ್ಸ್ ಹಾಸ್ಪಿಟಲ್ ಹಾಗೂ ಬೋಸ್ಟನ್ ಚಿಲ್ಡ್ರನ್ಸ್ ಹಾಸ್ಪಿಟಲ್‌ನ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಮಗುವಿನ ಮೆದುಳಿನ ಸಮಸ್ಯೆ ಸರಿಪಡಿಸಿವೆ ಎಂದು ಆಸ್ಪತ್ರೆಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.