ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ವಾರ್ಷಿಕ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿಲ್ಲ. ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಭಾಷಣ ಮಾಡುವವರ ಪರಿಷ್ಕೃತ ತಾತ್ಕಾಲಿಕ ಪಟ್ಟಿಯಲ್ಲಿ ಮೋದಿ ಹೆಸರು ಇಲ್ಲ. ಬದಲಾಗಿ ಜೈಶಂಕರ್ ಭಾಷಣ ಮಾಡುತ್ತಿದ್ದಾರೆ. ಸೆ. 22ರಂದು ಲಾಂಗ್ ಐಲ್ಯಾಂಡ್‌ನ ನಾಸೂ ವೆಟೆರನ್ಸ್ ಮೆಮೊರಿಯಲ್ ಕೊಲಿಸಿಯಂನಲ್ಲಿ ನಡೆಯಲಿರುವ ಸಮುದಾಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ. ಬಳಿಕ ಸೆ.22 ಹಾಗೂ 23ರಂದು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ವಾರ್ಷಿಕ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ ಎಂದು ಈ ಹಿಂದೆ ನಿಗದಿಯಾಗಿತ್ತು. ವಿಶ್ವಸಂಸ್ಥೆಯ 79ನೇ ಸಾಮಾನ್ಯ ಸಭೆ ವಾರ್ಷಿಕ ಸಭೆಯಲ್ಲಿ ಭಾಷಣ ಮಾಡುವವರ ತಾತ್ಕಾಲಿಕ ಪಟ್ಟಿಯನ್ನು ವಿಶ್ವಸಂಸ್ಥೆ ಜುಲೈನಲ್ಲಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯ ಪ್ರಕಾರ ಸೆಪ್ಟೆಂಬರ್ 26ರಂದು ನಡೆಯಲಿರುವ ಉನ್ನತ ಮಟ್ಟದ ಚರ್ಚೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವವರಿದ್ದರು. ಆದರೆ ಶುಕ್ರವಾರ ಬಿಡುಗಡೆ ಮಾಡಿದ ಪರಿಷ್ಕೃತ ಪಟ್ಟಿಯಲ್ಲಿ, ಸೆಪ್ಟೆಂಬರ್ 28ರಂದು ನಡೆಯುವ ಸಂವಾದದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಲಿದ್ದಾರೆ.…
Author: Prajatv Kannada
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರಮುಖ ಭಯೋತ್ಪಾದಕ ದಾಳಿಯ ಸಂಚನ್ನು ವಿಫಲಗೊಳಿಸಲಾಗಿದ್ದು, ಅಲ್-ಖೈದಾ,133 ಬ್ರಿಗೇಡ್ ಸೇರಿದಂತೆ ವಿವಿಧ ನಿಷೇಧಿತ ಗುಂಪುಗಳ 33 ಉಗ್ರರನ್ನು ಬಂಧಿಸಲಾಗಿದೆ. ಪ್ರಾಂತ್ಯದ ವಿವಿಧ ಜಿಲ್ಲೆಗಳಲ್ಲಿ 475 ಗುಪ್ತಚರ-ಆಧಾರಿತ ಕಾರ್ಯಾಚರಣೆ ನಡೆಸಿರುವ ಪಂಜಾಬ್ ಪೊಲೀಸರ ಭಯೋತ್ಪಾದನಾ ನಿಗ್ರಹ ಇಲಾಖೆ ಉಗ್ರರ ವಿರುದ್ಧ ವಿರುದ್ಧ 32 ಪ್ರಕರಣಗಳನ್ನು ದಾಖಲಿಸಿದೆ. ಬಂಧಿತ ಉಗ್ರರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಕನಿಷ್ಠ 475 ಶಂಕಿತ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು CTD ಹೇಳಿಕೆಯಲ್ಲಿ ತಿಳಿಸಿದೆ. ಪಂಜಾಬ್ ನ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆಯ ಸಂದರ್ಭದಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ 33 ಭಯೋತ್ಪಾದಕರನ್ನು ಬಂಧಿಸುವ ಮೂಲಕ ಪಂಜಾಬ್‌ನಲ್ಲಿನ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಲಾಗಿದೆ. ಅಲ್-ಖೈದಾ, 133 ಬ್ರಿಗೇಡ್, ಸಿಪಾಹ್ ಸಹಬಾ ಪಾಕಿಸ್ತಾನ, ಲಷ್ಕರ್ ಜಾಂಗ್ವಿ ಮತ್ತು ತೆಹ್ರೀಕ್ ಜಫಾರಿಯಾ ಪಾಕಿಸ್ತಾನದ ಭಯೋತ್ಪಾದಕರನ್ನು ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಇತರ ನಿಷೇಧಿತ ವಸ್ತುಗಳೊಂದಿಗೆ ಬಂಧಿಸಲಾಗಿದೆ. ಉಗ್ರರ ವಶದಿಂದ ಸ್ಫೋಟಕಗಳು, ಎರಡು ಹ್ಯಾಂಡ್ ಗ್ರೆನೇಡ್‌ಗಳು, ಎರಡು ಐಇಡಿ ಬಾಂಬ್‌ಗಳು, 26 ಡಿಟೋನೇಟರ್‌ಗಳು, ಸುರಕ್ಷತಾ ಫ್ಯೂಸ್…
ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣವನ್ನ ಮುಚ್ಚಿಹಾಕೋಕೆ ಕಾಂಗ್ರೆಸ್ ಅತಿದೊಡ್ಡ ಷಡ್ಯಂತ್ರವನ್ನೇ ಮಾಡಿದೆ. ಜೈಲಿನಲ್ಲಿ ದರ್ಶನ್‌ಗೆ ರಾಜ್ಯಾತಿಥ್ಯದ ಫೋಟೋ ಹೊರಬಿಟ್ಟಿದ್ದೇ ರಾಜ್ಯ ಸರ್ಕಾರ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. https://youtu.be/0j324MWsvkE?si=jSLjHa3oUknhVPMk ಸದಾಶಿವ ನಗರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ , ದರ್ಶನ್ ವಿಚಾರ ಹಾಗೂ ಮುಡಾ ಆರೋಪದ ವಿಚಾರ ಬಿಡಿ. ಈಗ ಮಹದಾಯಿ ವಿಚಾರದಲ್ಲಿ ಏನು ತೊಂದರೆಯಾಗಿದೆ. ಮಹದಾಯಿ ಯೋಜನೆಗೆ ಅನುಮತಿ ಕೊಡಿಸ್ರಪ್ಪ ಎಂದಿದ್ದಾರೆ. ಮಹದಾಯಿ ಯೋಜನೆ ಜಾರಿ ಮಾಡಲು ದುಡ್ಡು ಕೊಡಿಸ್ರಪ್ಪ. ಗಣೇಶ ಚತುರ್ಥಿ ಹಬ್ಬದ ದಿನವೇ ವಿಘ್ನ ನಿವಾರಣೆ ಆಗಲಿ. ಇಲ್ಲಿಂದಲೇ ದೀರ್ಘದಂಡ ನಮಸ್ಕಾರ ಹಾಕುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಗಣೇಶ ಹಬ್ಬ ಆಚರಿಸಲಾಯಿತು. ಪತ್ನಿ ಚೆನ್ನಮ್ಮ ಜೊತೆ ಸೇರಿ ದೇವೇಗೌಡರು, ಗಣೇಶನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. https://youtu.be/MmUiWpJ5THc?si=Ial5IEMEVIZdWRm8 ದೇವೇಗೌಡರ ಪುತ್ರ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲೂ ಗಣೇಶ ಚತುರ್ಥಿ ಆಚರಿಸಲಾಯಿತು. ಬಿಡದಿಯ ತೋಟದ ಮನೆಯಲ್ಲಿ ಗಣೇಶ ಹಬ್ಬವನ್ನು ಹೆಚ್‌ಡಿಕೆ ಆಚರಿಸಿದರು. ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಾಡಿನೆಲ್ಲೆಡೆ ಗಣೇಶ ಹಬ್ಬ ಸಂಭ್ರಮದ ವಾತಾವರಣ ಇದೆ. ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸಲಾಗುತ್ತಿದೆ. ದೇವಾಲಯಗಳು ಜನರಿಂದ ತುಂಬಿ ತುಳುಕುತ್ತಿವೆ. ಗಣೇಶನನ್ನು ವಿವಿಧ ರೀತಿಯಲ್ಲಿ ಅಲಂಕೃತಗೊಳಿಸಿ ಪೂಜಿಸಲಾಗುತ್ತಿದೆ. ಅನೇಕ ರೀತಿಯ ಸಿಹಿತಿಂಡಿಗಳನ್ನು ಮಾಡಿ ದೇವರಿಗೆ ಭಕ್ತರು ಸಮರ್ಪಿಸುತ್ತಿದ್ದಾರೆ. ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಾರೆ. ಸಂಗೀತ, ನಾಟಕ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹಬ್ಬದ ಹಿನ್ನೆಲೆ ಹೂ, ಹಣ್ಣುಗಳ ದರ ಏರಿಕೆಯಾಗಿದೆ. ಈ ಬಾರಿ ಅನೇಕರು ಪರಿಸರ ಪ್ರೇಮಿಗಳು ಗಣೆಶನ ಮೊರೆ ಹೋಗಿದ್ದಾರೆ. ವಿಘ್ನನಿವಾರಕನನ್ನು ಪೂಜಿಸಿದರೆ ಎಲ್ಲ ವಿಘ್ನಗಳು ದೂರ ಆಗುತ್ತದೆ ಎಂಬುದು ಎಲ್ಲರ ನಂಬಿಕೆಯಾಗಿದೆ.
ಮೈಸೂರು: ಎಲ್ಲೆಡೆ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಅರಮನೆ ನಗರ ಮೈಸೂರಿನಲ್ಲಿ ದಸರಾ ಆನೆಗಳಿಗೂ ಪೂಜೆ ನೆರವೇರಿಸಲಾಯಿತು. ನಾಡಹಬ್ಬ ದಸರಾ ಮಹೋತ್ಸವಕ್ಕಾಗಿ ಮೈಸೂರಿಗೆ ಬಂದಿರುವ ಆನೆಗಳಿಗೆ ಅರಮನೆಯ ಆವರಣದಲ್ಲಿ ಪೂಜೆ ನೆರವೇರಿಸಲಾಯಿತು. ಆನೆಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ನೆರವೇರಿಸಲಾಗಿದೆ. ಮಳೆಯ ನಡುವೆಯೇ ಗಣಪತಿಗೇ ಇಷ್ಟವಾದ ಮೋದಕ, ಬೆಲ್ಲ, ಕಬ್ಬು ಹೀಗೆ ಅನೇಕ ಭಕ್ಷ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸಿಸಿಎಫ್ ಮಾಲತಿ ಪ್ರಿಯಾ, ಡಿಸಿಎಫ್ ಡಾ.ಪ್ರಭುಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸುಗ್ರೀವ, ಮಹೇಂದ್ರ, ಗೋಪಿ, ಭೀಮ, ಲಕ್ಷ್ಮಿ, ವರಲಕ್ಷ್ಮಿ ಸೇರಿದಂತೆ ಎಲ್ಲ 14 ಆನೆಗಳೂ ಪಾಲ್ಗೊಂಡಿದ್ದವು. ಗಣೇಶ ಹಬ್ಬದ ದಿನ ದಸರಾ ಆನೆಗಳಿಗೆ ಪೂಜೆ ಸಲ್ಲಿಸೋದು ವಾಡಿಕೆ. ಹಬ್ಬದ ದಿನ ಅಧಿಕಾರಿಗಳು ಕುಟುಂಬ ಸಮೇತರಾಗಿ ಪೂಜೆಯಲ್ಲಿ ಪಾಲ್ಗೊಂಡರು. ಆನೆಗಳಿಗೆ 21 ಬಗೆಯ ನೈವೇದ್ಯ ರೂಪದ ತಿನಿಸುಗಳನ್ನು ನೀಡಲಾಯಿತು.
ತುಮಕೂರು : ಮೀಟರ್ ಬಡ್ಡಿ ಕಿರುಕುಳಕ್ಕೆ ಬೇಕರಿ ಮಾಲೀಕ ಬಲಿಯಾಗಿರುವ ಘಟನೆ ಗುಬ್ಬಿ ಹೊರವಲಯದ ಸಿಐಟಿ ಕಾಲೇಜು ಬಳಿ ನಡೆದಿದೆ. ಹೌದು.. ಮೊಬೈಲ್ ವಿಡಿಯೋ ಮಾಡಿಟ್ಟು ಬೇಕರಿ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿದ್ದು ಗುಬ್ಬಿ ಹೊರವಲಯದ ಸಿಐಟಿ ಕಾಲೇಜು ಬಳಿ ಬೇಕರಿ ನಡೆಸುತ್ತಿದ್ದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಸವರಾಜು. ಸಾವಿಗೂ ಮುನ್ನ ಮೀಟರ್ ಬಡ್ಡಿ ದಂಧೆ,ಕಿರುಕುಳ ಬಗ್ಗೆ ವಿಡಿಯೋದಲ್ಲಿ ಮಾಹಿತಿ ಮೃತ ಬಸವರಾಜು ಚೆಕ್ ನೀಡಿ ಮೀಟರ್ ಬಡ್ಡಿ ನಾಗ ಎನ್ನುವವನಿಂದ ಸಾಲ ಪಡೆದಿದ್ದ ಕೊಟ್ಟ ಸಾಲಕ್ಕೆ ಮೀಟರ್ ಬಡ್ಡಿ ನೀಡುವಂತೆ ಮೀಟರ್ ಬಡ್ಡಿ ನಾಗ ಎಂಬ ವ್ಯಕ್ತಿಯಿಂದ ಕಿರುಕುಳ ಆರೋಪ ತನಗೆ ಕಿರುಕುಳ ನೀಡುತ್ತಿರುವ ಬಗ್ಗೆ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ. ತನ್ನ ಬೇಕರಿಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣು ತುಂಬಾ ರೌಡಿಸಂ ಮಾಡುತ್ತಿದ್ದಾನೆ,ಎಷ್ಟೋ ಜನ ಇವನಿಂದ ಹೆದರಿ ಓಡಿ ಹೋಗಿದ್ದಾರೆ ಎಂದು ವಿಡಿಯೋದಲ್ಲಿ ಅಳಲು.. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದಕ್ಕೆಲ್ಲಾ ಕಡಿವಾಣ ಹಾಕ್ತಾರಾ ನೋಡಬೇಕಿದೆ.
ನಿತ್ಯ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ ಗಂಡನ ನಡೆಗೆ ಬೇಸತ್ತು ಮಹಿಳೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವು ಅಕ್ಷಯನಗರದಲ್ಲಿ ನಡೆದಿದೆ. https://youtu.be/hYcxmNWwMRU?si=eAXwErVmiu4Z0-HG ಅನುಷಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಯ ಪತಿ ಶ್ರೀಹರಿ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ ಹೀಗೆ ಸಹಕರಿಸು ಎಂದು ಟಾರ್ಚರ್ ಕೊಡುತ್ತಿದ್ದ. ಅಲ್ಲದೇ ಆಕೆಯ ಮುಂದೆಯೇ ಇನ್ನೊಂದು ಹುಡುಗಿಯ ಜೊತೆ ಸಲುಗೆ ಬೆಳೆಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಎರಡು ತಿಂಗಳಿಂದ ಡೈವರ್ಸ್ ಕೊಡುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಅನುಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಹರಿ ಹಾಗೂ ಅನುಷಾಗೆ ಮದುವೆಯಾಗಿ 5 ವರ್ಷ ಆಗಿತ್ತು. ಒಂದು ಮಗು ಕೂಡ ಇತ್ತು. ಹಾಗಿದ್ದರೂ ಪತಿ ಶ್ರೀಹರಿ ಇತರೆ ಹುಡುಗಿಯರ ಜೊತೆ ಸಹವಾಸ ಮಾಡಿದ್ದ. ಮನೆಯ ವಾಶ್ ರೂಂನಿಂದ ಗಂಡನಿಗೆ ವೀಡಿಯೋ ಕಾಲ್ ಮಾಡಿ ಪೆಟ್ರೋಲ್ ಸುರಿದುಕೊಳ್ಳುತ್ತೇನೆ ಎಂದು ಹೆಂಡತಿ ಹೇಳಿದ್ದಳು. ಈ ವೇಳೆ ರಕ್ಷಣೆ ಮಾಡದೇ ನಿರ್ಲಕ್ಷ್ಯ ಮಾಡಿರುವುದಾಗಿ ಮೃತ ಅನುಷಾ ಕುಟುಂಬಸ್ಥರು…
ಬಾಗಲಕೋಟೆ : ಜಿಲ್ಲೆಯಾದಂತ ಗೌರಿ ಗಣೇಶನ ಹಬ್ಬ ಸಂಭ್ರಮ ಮುಗಿಲು ಮುಟ್ಟಿದೆಪ್ರತಿಯೊಬ್ಬರು ಬಂದು ಗಣೇಶ್ ಮೂರ್ತಿಯನ್ನ ಮಾರುಕಟ್ಟೆಯಲ್ಲಿ ಖರೀದಿ ಮಾಡಿ ಸಂಭ್ರಮದೊಂದಿಗೆ ಗಣಪತಿ ಬಪ್ಪಾ ಮೋರಯ್ಯ ಎಂದು ಘೋಷಣೆ ಕೂಗಿ ವಾದ್ಯ ಮೇಳದೊಂದಿಗೆ ತಮ್ಮ ತಮ್ಮ ಮನೆಗಳಿಗೆ ಗಣಪತಿಯನ್ನು ಬರಮಾಡಿಕೊಂಡರು ಮಾರುಕಟ್ಟೆಯಲ್ಲಿ ಜನವೋ ಜನ ಗಣೇಶ್, ಹೂವು ಹಣ್ಣು ಖರೀದಿಸಿ ಗಣೇಶ ಮೂರ್ತಿ ಕೊಂಡೊಯ್ಯುತ್ತಿರೋ ಜನರು.
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಕೊನೆಗೂ ಟಿವಿ ಭಾಗ್ಯ ಸಿಕ್ಕಿದೆ. ಸತತ ಮೂರನೇ ಬಾರಿಗೆ ದರ್ಶನ್ ಅವರ ಬೇಡಿಕೆಯನ್ನು ಜೈಲಧಿಕಾರಿಗಳು ಈಡೇರಿಸಿದ್ದಾರೆ. ಕೊನೆಗೂ ದರ್ಶನ್ ಸೆಲ್‌ಗೆ ಟಿವಿ ಬಂದಿದೆ. ಕಳೆದ ಐದು ದಿನಗಳ ಹಿಂದೆ ಟಿವಿಗೆ ಆರೋಪಿ ದರ್ಶನ್ ಬೇಡಿಕೆ ಇಟ್ಟಿದ್ದರು. ಐದು ದಿನಗಳ ಬಳಿಕ ಇಂದು ಬೆಳಗ್ಗೆ ದರ್ಶನ್ ಇರುವ ಸೆಲ್‌ಗೆ ಟಿವಿ ಅಳವಡಿಸಲಾಗಿದೆ. ಜಾರ್ಜ್‌ಶೀಟ್ ಸಲ್ಲಿಕೆ ಸೇರಿದಂತೆ ಹೊರ ಜಗತ್ತಿನ ವಿಷಯ ತಿಳಿದುಕೊಳ್ಳವ ಕುತೂಹಲ ಇರುವ ಹಿನ್ನೆಲೆ, ಕಳೆದ ಮಂಗಳವಾರ ಟಿವಿ ನೀಡಬೇಕೆಂದು ದರ್ಶನ್ ಮನವಿ ಮಾಡಿದ್ದರು. ಜೈಲು ನಿಯಮದ ಪ್ರಕಾರ ಟಿವಿ ನೀಡಬಹುದು. ಅದರೆ ಟಿವಿ ರಿಪೇರಿ ಇದ್ದ ಹಿನ್ನೆಲೆ ಈವರೆಗೂ ನೀಡಿರಲಿಲ್ಲ. ಆದರೆ, ಇಂದು ದರ್ಶನ್ ಇರುವ ಸೆಲ್‌ಗೆ ಟಿವಿ ನೀಡಲಾಗಿದೆ. ಹೈಯರ್ ಕಂಪನಿಯ 32 ಇಂಚಿನ ಟಿವಿಯನ್ನು ದರ್ಶನ್ ಇರುವ ಸೆಲ್‌ಗೆ ನೀಡಲಾಗಿದೆ. ಸದ್ಯ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್ ಕೇಳಿದ್ದ ಮೂರು ಬೇಡಿಕೆಗಳು ಈಡೇರಿದಂತಾಗಿದೆ. ಸರ್ಜಿಕಲ್ ಚೇರ್ ಮೊದಲನೆಯದ್ದು.…