Author: Prajatv Kannada

ಟೊರಂಟೊ: ಕೆನಡಾ ಸಂಸದ ಮೈಕೇಲ್‌ ಚಾಂಗ್‌ ಅವರ ಹಾಂಕಾಂಗ್‌ ಸಂಬಂಧಿಕರಿಗೆ ಚೀನದ ರಾಜತಾಂತ್ರಿಕ ಅಧಿಕಾರಿಯೊಬ್ಬರು ಬೆದರಿಕೆ ಹಾಕಿದ್ದಾರೆ. ಚೀನಾ ರಾಜತಾಂತ್ರಿಕರನ್ನು ದೇಶದಿಂದ ಹೊರಕ್ಕೆ ಹಾಕಲು ಚಿಂತಿಸಲಾಗುತ್ತಿದೆ ಎಂದು ಕೆನಡಾ ವಿದೇಶಾಂಗ ಸಚಿವ ಮೆಲಾನಿ ಜಾಲಿ ಹೇಳಿದ್ದಾರೆ. ಈ ಬಗ್ಗೆ ಚೀನಾ ರಾಯಭಾರಿಗೂ ಸಮನ್ಸ್‌ ನೀಡಿ, ಇಂತಹ ವರ್ತನೆಗಳನ್ನು ಕೆನಡಾ ಸಹಿಸುವುದಿಲ್ಲ ಎಂದು ಹೇಳಲಾಗಿದೆ. ಬೀಜಿಂಗ್‌ ಮಾನವ ಹಕ್ಕು ಗಳನ್ನು ದಮನ ಮಾಡುತ್ತಿದೆ ಎಂದು ಕೆನಡಾ ವಿಪಕ್ಷ ಕನ್ಸರ್ವೇಟಿವ್‌ನ ಸಂಸದ ಮೈಕೇಲ್‌ ಚಾಂಗ್‌ ಟೀಕಿಸಿದ್ದರು. ಅದಾದ ಮೇಲೆ ಚಾಂಗ್‌ ಮತ್ತು ಅವರ ಹಾಂಕಾಂಗ್‌ ಸಂಬಂಧಿಕರನ್ನು ಗುರಿ ಮಾಡಿಕೊಳ್ಳಲಾಗಿತ್ತು. ಇದನ್ನು ಕೆನಡಾ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾಲಿ, ನಾವು ವಿವಿಧ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಅದರಲ್ಲಿ ಚೀನ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕುವುದೂ ಒಂದು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ ರಾಯಭಾರಿ ಕಾಂಗ್‌ ಪೆಲು, ತಮ್ಮ ರಾಜತಾಂತ್ರಿಕರನ್ನು ಹೊರಹಾಕುವುದರ ವಿರುದ್ಧ ಕೆನಡಾಕ್ಕೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

Read More

ಬೀಜಿಂಗ್‌: ದೇಶದಲ್ಲಿ ದಿನೇ ದಿನೇ ಜನಸಂಖ್ಯೆ ಪ್ರಮಾಣ ಇಳಿಕೆ ಹಾದಿಯಲ್ಲಿ ಸಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ, ಇದೀಗ ಅವಿವಾಹಿತ ಮಹಿಳೆಯರಿಗೂ ಕಾನೂನು ಬದ್ಧವಾಗಿ ಮಕ್ಕಳನ್ನು ಹೊಂದಲು ಅವಕಾಶ ನೀಡುವ ಸಂಬಂಧ ಚಿಂತನೆ ನಡೆಸಿದೆ. ಸದ್ಯ ಸಿಚುವಾನ್‌ ಪ್ರಾಂತ್ಯದಲ್ಲಿ ಅವಿವಾಹಿತ ಮಹಿಳೆಯರು ಪ್ರನಾಳ ಶಿಶು (ಐವಿಎಫ್‌) ತಂತ್ರಜ್ಞಾನ ಮೂಲಕ ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಡಲಾಗಿದೆ. ಇದನ್ನು ದೇಶವ್ಯಾಪಿ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. ಹಾಲಿ ವಿಶ್ವದಲ್ಲಿ ಪ್ರನಾಳ ಶಿಶು ಮಾದರಿಯಲ್ಲಿ ಮಕ್ಕಳನ್ನು ಹೆರುವವರ ಪ್ರಮಾಣ ವಾರ್ಷಿಕ 15 ಲಕ್ಷದಷ್ಟಿದೆ. ಇದರಲ್ಲಿ ಚೀನಾ ಪಾಲೇ 10 ಲಕ್ಷ ಇದೆ. ಒಂದು ವೇಳೆ ಸರ್ಕಾರ ಅವಿವಾಹಿತ ಮಹಿಳೆಯರಿಗೂ ಅವಕಾಶ ಕೊಟ್ಟರೆ ಈ ಪ್ರಮಾಣ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಇತ್ತೀಚೆಗಷ್ಟೇ ಭಾರತ 142.86 ಕೋಟಿ ಜನಸಂಖ್ಯೆಯೊಂದಿಗೆ ಈವರೆಗೆ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ಚೀನಾ (142.57 ಕೋಟಿ) ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. 6 ದಶಕಗಳಲ್ಲಿ ಮೊದಲ ಬಾರಿ ಚೀನಾ ಜನಸಂಕ್ಯೆಯ ಕುಸಿತವಾಗಿದ್ದು, ಮತ್ತು ಈಗಿನ ಜನಸಂಖ್ಯೆಯ ಪೈಕಿ ವಯಸ್ಸಾದ ಜನರೇ ಹೆಚ್ಚಿದ್ದಾರೆ. ಈ ಹಿನ್ನೆಲೆ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಸರ್ಕಾರದ ರಾಜಕೀಯ ಸಲಹೆಗಾರರು ಮಾರ್ಚ್‌ನಲ್ಲಿ ಒಂಟಿ ಮತ್ತು ಅವಿವಾಹಿತ ಮಹಿಳೆಯರು ಇತರ ಸೇವೆಗಳ ಜೊತೆಗೆ ಮೊಟ್ಟೆಯ ಘನೀಕರಣ ಮತ್ತು IVF ಚಿಕಿತ್ಸೆಗೆ ಪ್ರವೇಶವನ್ನು ಹೊಂದಿರಬೇಕು ಎಂದು ಪ್ರಸ್ತಾಪಿಸಿದರು. ಆದರೆ, ಈ ಶಿಫಾರಸುಗಳ ಬಗಗೆ ಚೀನಾದ ನಾಯಕರು ಇನ್ನೂ ಸಾರ್ವಜನಿಕವಾಘಿ ಪ್ರತಿಕ್ರಿಯೆ ನೀಡಿಲ್ಲ. ಇನ್ನು, IVF ಅನ್ನು ರಾಷ್ಟ್ರವ್ಯಾಪಿಯಾಗಿ ಉದಾರಗೊಳಿಸುವುದರಿಂದ ಈಗಾಗಲೇ ಪ್ರಪಂಚದ ಅತಿದೊಡ್ಡ ಮಾರುಕಟ್ಟೆಯಾಗಿರುವ ಫಲವಂತಿಕೆಯ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆಯನ್ನು ಸಡಿಲಿಸಬಹುದು, ಸೀಮಿತ ಫಲವತ್ತತೆ ಸೇವೆಗಳನ್ನು ತಗ್ಗಿಸಬಹುದು ಎನ್ನಲಾಗಿದೆ. ಇನ್ನು, ಈ ಉದ್ಯಮದಲ್ಲಿ ಕೆಲವು ಹೂಡಿಕೆದಾರರು ವಿಸ್ತರಿಸಲು ಅವಕಾಶವನ್ನು ನೋಡುತ್ತಾರೆ. “ಒಂಟಿ ಮಹಿಳೆಯರಿಗೆ ಮಕ್ಕಳನ್ನು ಹೊಂದಲು ಚೀನಾ ತನ್ನ ನೀತಿಯನ್ನು ಬದಲಾಯಿಸಿದರೆ, ಇದು IVF ಬೇಡಿಕೆಯ ಹೆಚ್ಚಳಕ್ಕೆ ಕಾರಣವಾಗಬಹುದು” ಎಂದು INVO ಬಯೋಸೈನ್ಸ್‌ನಲ್ಲಿ ಏಷ್ಯಾ ಪೆಸಿಫಿಕ್‌ನ ವ್ಯಾಪಾರ ಅಭಿವೃದ್ಧಿ ನಿರ್ದೇಶಕ ವೈವ್ ಲಿಪ್ಪೆನ್ಸ್ ಹೇಳಿದ್ದಾರೆ. ಕಳೆದ ವರ್ಷ ಗುವಾಂಗ್‌ಝೌ ಮೂಲದ ಒನ್‌ಸ್ಕಿ ಹೋಲ್ಡಿಂಗ್ಸ್‌ನೊಂದಿಗೆ ವಿತರಣಾ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಚೀನಾದಲ್ಲಿ ತನ್ನ IVF ತಂತ್ರಜ್ಞಾನವನ್ನು ಪ್ರಾರಂಭಿಸಲು ನಿಯಂತ್ರಕ ಅನುಮೋದನೆಗಾಗಿ ಕಾಯುತ್ತಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು (NHC) IVF ಪ್ರವೇಶವನ್ನು ಉದಾರಗೊಳಿಸುವ ಕುರಿತು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಆದರೂ ಅನೇಕ ಯುವತಿಯರು ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಯೋಜನೆಗಳನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಹಿಂದೆ ಒಪ್ಪಿಕೊಂಡಿದೆ, ಆದರೆ, ಮದುವೆ ಪ್ರಮಾಣಗಳು ಕಡಿಮೆಯಾಗಲು ಹೆಚ್ಚಿನ ಶಿಕ್ಷಣ ಮತ್ತು ಮಕ್ಕಳ ಪೋಷಣೆಯ ವೆಚ್ಚಗಳು ಕೊಡುಗೆ ನೀಡಿವೆ ಎಂದು ತಿಳಿದುಬಂದಿದೆ.ಶಾಂಘೈ ಮತ್ತು ದಕ್ಷಿಣ ಗುವಾಂಗ್‌ಡಾಂಗ್ ಪ್ರಾಂತ್ಯಗಳು ಅವಿವಾಹಿತ ಮಹಿಳೆಯರಿಗೆ ತಮ್ಮ ಮಕ್ಕಳನ್ನು ನೋಂದಾಯಿಸಲು ಅನುಮತಿ ನೀಡಿವೆ. ಆದರೆ ಒಂಟಿ ಮಹಿಳೆಯರಿಗೆ IVF ಸೇವೆಗಳನ್ನು ನಿಷೇಧಿಸಲಾಗಿದೆ.

Read More

ಪಾಟ್ನಾ: ಬಿಹಾರದ ಮಹಿಳೆಯೊಬ್ಬಳು (Bihar Women) ಮತ್ತೊಬ್ಬನನ್ನ ಮದುವೆಯಾಗಲು ತನ್ನ ನಾಲ್ಕು ಮಕ್ಕಳನ್ನು ಬಿಟ್ಟು ಓಡಿಹೋಗಿರುವ ಘಟನೆ ಬಿಹಾರದ (Bihar) ಮುಜಾಫರ್‌ಪುರದಲ್ಲಿ ನಡೆದಿದೆ. ಕತ್ರಾ ಪೊಲೀಸ್ ಠಾಣಾ (Katra Police Station) ವ್ಯಾಪ್ತಿಯಲ್ಲಿ ವಾಸವಿದ್ದ‌ ಅಮೋದ್ ಮಹತೋ ತನ್ನ ಪತ್ನಿ ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದನು. ಬ್ಯಾಂಕ್‌ಗೆ ಹೋಗುವುದಾಗಿ ಹೇಳಿ ಹೋಗಿದ್ದ ಪತ್ನಿ, ಸಂಜೆಯಾದರೂ ವಾಪಸ್‌ ಮನೆಗೆ ಹಿಂದಿರುಗದಿದ್ದಾಗ ಪತಿ ಕಿಡ್ನ್ಯಾಪ್‌ ಆಗಿರುವುದಾಗಿ ದೂರು ದಾಖಲಿಸಿದ್ದಾನೆ. ಈ ಸಂಬಂಧ ಕೇಸ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಆಕೆ ಮತ್ತೊಬ್ಬನೊಂದಿಗೆ ಓಡಿಹೋಗಿರುವುದು ಕಂಡುಬಂದಿದೆ. ವ್ಯಕ್ತಿಯೊಬ್ಬ ಆಕೆಗೆ ಮದುವೆಯ ಆಮಿಷ ಒಡ್ಡಿ ಕರೆದೊಯ್ದಿದ್ದಾನೆ ಎಂದು ಹೇಳಲಾಗಿದೆ. ಸಂತ್ರಸ್ತೆಗೆ ನಾಲ್ಕು ಮಕ್ಕಳಿದ್ದಾರೆ. ಪತಿ ಅಮೋದ್‌ ಕೂಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾನೆ. ಸದ್ಯ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

Read More

ನವದೆಹಲಿ: ಹಾರ್ವರ್ಡ್ ಮತ್ತು ಆಕ್ಸ್‌ಫರ್ಡ್‌ನಂತಹ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆದಿರುವ ಭಾರತದ ಅನೇಕ ವಕೀಲರು ಮತ್ತು ನ್ಯಾಯಾಧೀಶರು ಇಂಗ್ಲಿಷ್‌ನಲ್ಲಿ ಯೋಚಿಸುತ್ತಾರೆ ಮತ್ತು ಮಾತನಾಡುತ್ತಾರೆ. ಆದರೆ ಅವರು ತಮ್ಮ ಆಲೋಚನೆಗಳಲ್ಲಿ ನಡೆಗಳಲ್ಲಿ ‘ಭಾರತೀಯರು‘ ಆಗಿ ಇರುವುದು ಅಗತ್ಯ ಹಾಗೂ ಬಹಳ ಮುಖ್ಯ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು  ಹೇಳಿದ್ದಾರೆ. ಇಂಗ್ಲಿಷ್ ಮಾತನಾಡುವ ವಕೀಲರು ಸ್ಥಳೀಯ ಭಾಷೆಗಳಲ್ಲಿ ಮಾತನಾಡುವವರಿಗೆ ಹೋಲಿಸಿದರೆ ಹೆಚ್ಚು ಶುಲ್ಕವನ್ನು ಪಡೆಯುತ್ತಿರುವ ಬಗ್ಗೆಯೂ ಕಾನೂನು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಭಾರತದಲ್ಲಿರುವ ಅನೇಕ ಒಳ್ಳೆಯ ನ್ಯಾಯಾಧೀಶರು ಹಾಗೂ ವಕೀಲರು ವಿದೇಶಿ ವಿಶ್ವವಿದ್ಯಾನಿಲಯಗಳಾದ ಹಾರ್ವರ್ಡ್‌(Harvard)  ಹಾಗೂ ಆಕ್ಸ್‌ಫರ್ಡ್‌ಗಳಲ್ಲಿ  (Oxford) ಶಿಕ್ಷಣ ಪಡೆದವರಾಗಿದ್ದು, ಅವರು ಮಾತು ಹಾಗೂ ಯೋಚನೆ ಕೂಡ ಇಂಗ್ಲೀಷ್‌ನಲ್ಲೇ ಇರುತ್ತದೆ. ಆದರೆ  ಮೂಲದಲ್ಲಿ ಹಾಗೂ  ಆಲೋಚನೆಯಲ್ಲಿ ಅವರು ಭಾರತೀಯರಾಗಿ ಉಳಿಯುವುದು  ಬಹಳ ಅಗತ್ಯ. ಇದರಿಂದ ಅವರು ಬಹಳ ವಿನಮ್ರರಾಗಬಹುದು ಎಂದು ಕಾನೂನು ಸಚಿವ ಕಿರೆನ್ ರಿಜಿಜು ಹೇಳಿದರು. ಕುತೂಹಲಕಾರಿ ಅಂಶವೆಂದರೆ ಭಾರತದ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ (Chief Justice of India) ಡಿ.ವೈ .ಚಂದ್ರಚೂಡ್ (DY Chandrachud) ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ (Harvard University) ಸ್ನಾತಕೋತ್ತರ ಪದವಿಯನ್ನು ಪೂರ್ಣಗೊ ಳಿಸಿದ್ದಾರೆ. ಸ್ಥಳೀಯ ಭಾಷೆಗಳಲ್ಲಿ ಮಾತನಾಡುವವರಿಗೆ ಹೋಲಿಸಿದರೆ ಇಂಗ್ಲಿಷ್ ಮಾತನಾಡುವ ವಕೀಲರು ಹೆಚ್ಚು ಶುಲ್ಕವನ್ನು ಪಡೆಯುತ್ತಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.  ದೆಹಲಿ ನ್ಯಾಯಾಲಯದಲ್ಲಿ ಇಂಗ್ಲಿಷ್‌ನ ಮೇಲಿನ ಅಧಿಕಾರದ ಆಧಾರದ ಮೇಲೆ ವಕೀಲರಿಗೆ ಪಾವತಿಸುವ ಬಗ್ಗೆಯೂ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.  ಇಂಗ್ಲಿಷ್ ಚೆನ್ನಾಗಿ ಮಾತನಾಡುವ ವಕೀಲರಿಗಿಂತ ಭಾರತೀಯ ಭಾಷೆಗಳಲ್ಲಿ ಮಾತನಾಡುವ ವಕೀಲರು ಹೆಚ್ಚು ಸಮರ್ಥರಾಗಿದ್ದಾರೆ ಎಂಬ ಅಂಶವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ರಿಜಿಜು ಹೇಳಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಕೆಲವು ವಕೀಲರಿದ್ದಾರೆ, ಅವರ ಕಾನೂನು ಜ್ಞಾನವನ್ನು ಲೆಕ್ಕಿಸದೆ, ಅವರು ಉತ್ತಮ ಇಂಗ್ಲಿಷ್ ಮಾತನಾಡುತ್ತಾರೆ ಎಂಬ ಕಾರಣದಿಂದ ಹೆಚ್ಚು ಸಂಬಳ ಪಡೆಯುತ್ತಾರೆ. ನೀವು ಚೆನ್ನಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತೀರಿ ಎಂಬ ಕಾರಣಕ್ಕಾಗಿ ನೀವು ಹೆಚ್ಚು ಹಣವನ್ನು ಪಡೆಯುತ್ತೀರಿ ಎಂಬುದು ಸರಿಯಲ್ಲ. ಸ್ವಲ್ಪ ಯೋಚಿಸಿ, ಮರಾಠಿ (Marathi), ಹಿಂದಿಯಲ್ಲಿ (Hindi) ಉತ್ತಮ ಹಿಡಿತ ಹೊಂದಿರುವ ವಕೀಲರಿದ್ದಾರೆ, ಆದರೆ ಅವರ ಶುಲ್ಕ ಕಡಿಮೆ ಇರುತ್ತದೆ, ಏಕೆಂದರೆ ಅವರಿಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಸಾಧ್ಯವಿಲ್ಲ, ಎಂದು ಅವರು ಹೇಳಿದರು. ಮುಂದೆ ಇಂತಹ ಪ್ರವೃತ್ತಿ ರಾಷ್ಟ್ರಕ್ಕೆ ಒಳ್ಳೆಯದಲ್ಲ, ಕಾನೂನು ಬಾಂಧವರು ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.

Read More

ಮದುವೆ ಮನೆ ಅಂದ್ರೆ ಸಂಭ್ರಮ, ಸಡಗರ ಇದ್ದೇ ಇರುತ್ತೆ. ಆದ್ರೆ ಇತ್ತೀಚಿನ ಮದುವೆ ಮನೆಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗೋದು ಸಾಮಾನ್ಯವಾಗಿ ಹೋಗಿದೆ. ಮಂಟಪ, ಡೆಕೊರೇಷನ್, ವರದಕ್ಷಿಣೆ, ಊಟ ಹೀಗೆ ನಾನಾ ಕಾರಣಗಳಿಗೆ ಗಲಾಟೆ ನಡೆಯುತ್ತದೆ. ಕೆಲವೊಮ್ಮೆ ಸಮಾರಂಭಕ್ಕೆ ಬಂದ ಅತಿಥಿಗಳು ಸಹ ಗಲಾಟೆ ಮಾಡುತ್ತಾರೆ. ಜಾರ್ಖಂಡ್ ಮದುವೆಯೊಂದರಲ್ಲಿ ಬಿಸಿ ಪೂರಿಗಳನ್ನು ಕೊಡಲು ನಿರಾಕರಿಸಿದ್ದಕ್ಕೆ ಅತಿಥಿಗಳು ಗಲಾಟೆ ನಡೆಸಿದ್ದಾರೆ. ಮಾತ್ರವಲ್ಲ ಕಲ್ಲು ತೂರಾಟ ಕೂಡಾ ಮಾಡಿದ್ದಾರೆ. ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಈ ಘಟನೆ ನಡೆದಿದೆ. ಬಿಸಿ ಬಿಸಿ ಪೂರಿ ಕೊಡದ್ದಕ್ಕೆ ಅತಿಥಿಗಳಿಗೆ ಸಿಟ್ಟು ರಾತ್ರಿ ಮುಫಾಸಿಲ್ ಠಾಣಾ ವ್ಯಾಪ್ತಿಯ ಪಟರೋಡಿ ಪ್ರದೇಶದಲ್ಲಿ ಶಂಕರ್ ಯಾದವ್ ಎಂಬುವರು ಆಯೋಜಿಸಿದ್ದ ಮದುವೆ (Marriage) ಸಮಾರಂಭದಲ್ಲಿ ಯುವಕರ ಗುಂಪೊಂದು ಪಾಲ್ಗೊಂಡಿತ್ತು. ಊಟ ಮಾಡುವ ಸಂದರ್ಭದಲ್ಲಿ ಅತಿಥಿಗಳು (Guest) ಬಿಸಿ ಬಿಸಿ ಪೂರಿಯನ್ನು ಕೇಳಿದ್ದಾರೆ. 2 ಗಂಟೆ ಸುಮಾರಿಗೆ ಬಿಸಿ ಬಿಸಿ ಪೂರಿಯನ್ನು ಕೇಳಲು ಆರಂಭಿಸಿದ ಯುವಕನೊಬ್ಬನಿಂದ ಗಲಾಟೆ ಶುರುವಾಗಿದೆ ಎಂದು ತಿಳಿದುಬಂದಿದೆ. ಬಿಸಿ ಪೂರಿ ರೆಡಿ ಇಲ್ಲವಾದ ಕಾರಣ ಜಗಳವಾಡಿದ್ದಾರೆ. ನಂತರ ಮದುವೆ ಮನೆಯಲ್ಲೇ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿದೆ ಎಂದು ತಿಳಿದುಬಂದಿದೆ. ಮದ್ವೆ ಮನೆಯಲ್ಲಿ ಗಲಾಟೆ, ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು ಗಲಾಟೆ ಮಾಡಲು ಕೆಲವು ಇತರ ಯುವಕರನ್ನು ಹೊರಗಿನಿಂದ ಕರೆಸಲಾಗಿತ್ತು ಎಂದು ನಂತರ ತಿಳಿದುಬಂತು. ಪರಿಸ್ಥಿತಿ ತ್ವರಿತವಾಗಿ ಉಲ್ಬಣಗೊಂಡಿತು ಮತ್ತು ಕಲ್ಲು ತೂರಾಟ ಮತ್ತು ಗೂಂಡಾಗಿರಿಯ ನಡೆಸಲಾಯಿತು. ಇದರ ಪರಿಣಾಮವಾಗಿ ಮೂರ್ನಾಲ್ಕು ಜನರಿಗೆ ಗಾಯಗಳಾಗಿವೆ (Injury). ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಪೊಲೀಸರು ಅತಿಥಿಗಳನ್ನು (Guests) ಶಾಂತಗೊಳಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಇಡೀ ವಿವಾದಕ್ಕೆ ಪ್ರಚೋದನೆ ನೀಡಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ (Treatment) ಪಡೆಯುತ್ತಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮೇ 8ರಿಂದ 11ರ ನಡುವೆ ಪೂರ್ವ ಕರಾವಳಿಗೆ ಮೋಚಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಅದಕ್ಕೆ ಮಳೆ ತೊಂದರೆ ಕೊಡುವ ಆತಂಕ ಎದುರಾಗಿದೆ. ಬಂಗಾಳ ಕೊಲ್ಲಿಯ (Bay of Bengal)ಆಗ್ನೇಯ ದಿಕ್ಕಿನಲ್ಲಿ ಚಂಡಮಾರುತವೊಂದು ರೂಪುಗೊಳ್ಳುವ ಲಕ್ಷಣ ಕಂಡುಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ಬುಧವಾರ ತಿಳಿಸಿದೆ. ಮೇ 9ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ (cyclone) ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದ್ದು, ಅದರ ಪಥ ಯಾವ ಕಡೆ ಇರಲಿದೆ ಎಂಬುದನ್ನು ಇನ್ನು ಕೆಲವೇ ದಿನಗಳಲ್ಲಿ ಹೇಳುವುದಾಗಿ ಮಾಹಿತಿ ನೀಡಿದೆ. ಮೇ 6ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಹಲವು ಬದಲಾವಣೆಗಳಾಗಲಿವೆ. ಅದಾದ ಮರುದಿನವೇ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಹಾಗೂ ಹಡಗು ನಡೆಸುವವರು ಬಂಗಾಳ ಕೊಲ್ಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ (Mrityunjaya Mohapatra) ಅವರು ಮನವಿ ಮಾಡಿದ್ದಾರೆ. ಒಂದು ವೇಳೆ ಈ ಚಂಡಮಾರುತ ಸೃಷ್ಟಿಯಾದದ್ದೇ ಆದಲ್ಲಿ ಅದು ಭಾರತ ಕಾಣುತ್ತಿರುವ ಈ ವರ್ಷದ ಮೊದಲ ಚಂಡಮಾರುತ ವಾಗಲಿದ್ದು, ಅದಕ್ಕೆ ಸರದಿಯ ಪ್ರಕಾರ ‘ಮೋಕಾ’ ಎಂಬ ಹೆಸರನ್ನು ಇಡಬೇಕಾಗುತ್ತದೆ. ಈ ಹೆಸರನ್ನು ಯೆಮೆನ್‌ ಸೂಚಿಸಿದೆ. ಮೋಕಾ ಎಂಬುದು ಯೆಮೆನ್‌ನಲ್ಲಿರುವ ಕೆಂಪು ಸಮುದ್ರದ ಬಂದರು ನಗರಿಯ ಹೆಸರಾಗಿದೆ. ಭಾರತದಲ್ಲಿ ಎರಡು ಚಂಡಮಾರುತ ಋುತುಗಳು ಇವೆ. ಏಪ್ರಿಲ್‌- ಮೇ– ಜೂನ್‌ ಅವಧಿಯಲ್ಲಿ ಚಂಡಮಾರುತ ಕಂಡುಬರುತ್ತವೆ. ಬಳಿಕ ಅಕ್ಟೋಬರ್‌- ನವೆಂಬರ್‌- ಡಿಸೆಂಬರ್‌ ಅವಧಿಯಲ್ಲೂ ಚಂಡಮಾರುತಗಳು ಕಾಣಿಸಿಕೊಳ್ಳುತ್ತವೆ.

Read More

ವೆಡ್ಡಿಂಗ್‌ ಡೇ ಎಂಬುದು ಎಲ್ಲರ ಪಾಲಿಗೆ ಜೀವನದಲ್ಲೇ ದಿ ಬಿಗ್ ಡೇ. ಹೀಗಾಗಿಯೇ ಈ ದಿನ ಯಾವಾಗ್ಲೂ ಮೆಮೊರೆಬಲ್ ಆಗಿರಬೇಕೆಂದು ಫೋಟೋ, ವೀಡಿಯೋ ಮಾಡಿಕೊಳ್ತಾರೆ. ಆದ್ರೆ ಇಲ್ಲೊಂದು ಮದ್ವೆ ಮನೆ ನೂತನ ವಧು–ವರರ ಜೊತೆ ಫೋಟೋ ತೆಗೆದುಕೊಳ್ಳುವ ವಿಚಾರಕ್ಕಾಗಿಯೇ ರಣಾಂಗಣವಾಗಿಬಿಟ್ಟಿದೆ.  ಮದುವೆಗಳು (Marriage) ವಿಶೇಷವಾಗಿರುತ್ತವೆ ಮತ್ತು ಮದುವೆಯ ಚಿತ್ರಗಳು ಇನ್ನೂ ಹೆಚ್ಚು ವಿಶೇಷವಾಗಿರುತ್ತವೆ. ಏಕೆಂದರೆ ಈ ಚಿತ್ರಗಳು ವಧು ಮತ್ತು ವರ ಮತ್ತು ಅವರ ಕುಟುಂಬದ ಸುಂದರ ಕ್ಷಣಗಳನ್ನು ಶಾಶ್ವತವಾಗಿ ಸೆರೆಹಿಡಿಯುತ್ತವೆ. ಆದರೆ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಮದುವೆಯೊಂದರಲ್ಲಿ, ವಧು ಮತ್ತು ವರನ (Bride-groom) ಜೊತೆ ಚಿತ್ರಗಳನ್ನು ತೆಗೆದುಕೊಳ್ಳುವ ಬಗ್ಗೆ ಗಲಾಟೆಯೇ ನಡೆದು ಹೋಯ್ತು. ಯಾರು ಮೊದಲು ಫೋಟೋ ತೆಗೆದುಕೊಳ್ಳಬೇಕು ಅನ್ನೋ ವಿಚಾರವಾಗಿ ವಧು ಮತ್ತು ವರನ ಕುಟುಂಬ ಸದಸ್ಯರ ನಡುವೆ ಜಗಳ ನಡೆದು ಜನರು ದಿಕ್ಕಾಪಾಲಾದರು. ಸುಂದರವಾದ ದಿನವೊಂದು ಗಲಾಟೆಯಲ್ಲಿ (Fight) ಕೊನೆಗೊಂಡಿತು.

Read More

ವಿಜಯನಗರ:  ಪಕ್ಷೇತರ ಅಭ್ಯರ್ಥಿಯಾಗಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಎಂ ಸುರೇಶ್ ಅವರು ಅಂಕಸಮುದ್ರ ಗ್ರಾಮದಲ್ಲಿ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡರು, ಡಾಕ್ಟರ್ ಸುರೇಶ್ ಅವರು ಹೋದ ಕಡೆಯಲೆಲ್ಲ ಜನವೋ ಜನ, ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ಮರಿಚಿಕೆಯಾಗಿದ್ದು ಕುಡಿಯುವ ನೀರು ಮೂಲಸೌಕರ್ಯವು ಕೂಡ ಇಲ್ಲದಂತಾಗಿದೆ ಎಂದು ಸ್ಥಳಿಯರು ಡಾ.ಸುರೇಶ್ ಅವರ ಬಳಿ ಹೇಳಿಕೊಳ್ಳತ್ತಿದ್ದ ದೃಶ್ಯ ಸರ್ವೇಸಾಮನ್ಯವಾಗಿತ್ತು. ಈ ಭಾರಿ ಕ್ಷೇತ್ರದಲ್ಲಿ ಡಾ.ಸುರೇಶ್ ಅವರ ಆಟೋ ಗುರುತಿಗೆ ಮತ ಚಲಾಯಿಸುತ್ತವೆ ಎಂಬ ಮಾತುಗಳು ಎಲ್ಲೆಡೆ ವ್ಯಕ್ತವಾಗುತ್ತಿವೆ ಅಲ್ಲದೆ, ಬದಲಾವಣೆ ಜಗದ ಎಂಬ ಮಾತಿನಂತೆ ಪಕ್ಷೇತರ ಅಭ್ಯರ್ಥಿ ಪರ ಕ್ಷೇತ್ರದ ಮತದಾರರು ಒಲವು ಹೊಂದಿದ್ದಾರೆ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ

Read More

ಮಂಡ್ಯ: ಬಿಜೆಪಿ (BJP) ಅಧಿಕಾರಕ್ಕೆ ಬಂದ್ರೆ 3 ಸಿಲಿಂಡರ್ ಕೊಡ್ತೀನಿ ಅಂತಾ ಹೇಳಿದೆ. ನಮ್ಮ ಸರ್ಕಾರ ಬಂದ್ರೆ 5 ಸಿಲಿಂಡರ್ ಕೊಡ್ತೀನಿ ಅಂತಾ ಹೇಳಿರುವುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಮಂಡ್ಯದ (Mandya) ಕೆ.ಆರ್.ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ (Election Campaign) ಸಭೆಯಲ್ಲಿ ಮಾತನಾಡಿದ ಅವರು, ನಾನು ಹೇಳಿದ ಮೇಲೆ ಬಿಜೆಪಿಯವರು ಹೇಳಿದ್ದಾರೆ. ಕೊಡುವುದಿದ್ದರೇ ಸರ್ಕಾರ ಇದ್ದಾಗಲೇ ಕೊಡಬೇಕಿತ್ತು ಎಂದು ಕುಟುಕಿದ್ದಾರೆ. ದೇವೇಗೌಡರು ಆರೋಗ್ಯದ ಸಮಸ್ಯೆ ನಡುವೆ ನನ್ನ ಏಕಾಂಗಿ ಹೋರಾಟವನ್ನು ಅವರು ಗಮನಿಸಿದ್ದಾರೆ. ನನ್ನ ಮೇಲೆ ಬಿದ್ದಿರುವ ಒತ್ತಡವನ್ನು ಕಡಿಮೆ ಮಾಡಲು 3-4 ದಿನಗಳಿಂದ ತಾವೂ ಓಡಾಡುತ್ತಿದ್ದಾರೆ. ವೈದ್ಯರು ಅವರಿಗೆ ವಿಶ್ರಾಂತಿ ಬೇಕು ಅಂದಿದ್ದರಿAದ ಮತ್ತಷ್ಟು ಆರೋಗ್ಯ ಹದಗೆಟ್ಟಿತ್ತು. ಆದ್ರೆ ಮೈಸೂರಿನ ಪಂಚರತ್ನ ಸಮಾರೋಪದಲ್ಲಿ ಭಾಗಿಯಾಗಿ ಜನರನ್ನು ನೋಡಿದ ಮೇಲೆ ಅವರ ಆರೋಗ್ಯ ಸುಧಾರಿಸಿದೆ. ದೇವೇಗೌಡರು ಈ ಬಾರಿ ಪ್ರಚಾರ ಮಾಡುತ್ತಾರೆ ಅಂದುಕೊಂಡಿರಲಿಲ್ಲ. ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ದೇವೇಗೌಡರು ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಬಹುಮತ ಬಂದ್ರೆ ರೈತರ ಸಮಸ್ಯೆ ಬಗೆಹರಿಸುತ್ತೇನೆ: ಕಳೆದ ಮೂರು…

Read More

ರಾಮನಗರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಸುಗ್ಗನಹಳ್ಳಿ ಗ್ರಾಮದಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ (Nikhil kumaraswamy) ಪರ ಮಾಜಿ ಪ್ರಧಾನಿ ಹೆಚ್‍ಡಿಡಿ ಅದ್ದೂರಿ ರೋಡ್ ಶೋ ನಡೆಸಿದರು. ಬಳಿಕ ಮಾತನಾಡಿದ ಹೆಚ್.ಡಿ.ದೇವೇಗೌಡ (HD Devegowda) ಭಾವನಾತ್ಮಕವಾಗಿ ನಿಖಿಲ್ ಗೆಲ್ಲಿಸುವಂತೆ ಮನವಿ ಮಾಡಿದರು. ನಾನು ಎಲ್ಲಾ ಕಡೆ ಸುತ್ತಾಡಿ ಬಂದಾಗ ಈ ಗ್ರಾಮದ ಹೆಣ್ಣು ಮಗಳು ನನಗೆ ಊಟ ಹಾಕಿದ್ರು. ಈ ಮಣ್ಣಿನ ಅನ್ನದ ಖುಣ ನನ್ನ ಮೇಲಿದೆ. ನಿಮ್ಮ ಮುಂದೆ ಕೈಚಾಚಲಿಕ್ಕೆ ಬಂದಿದ್ದೇನೆ. ನಾನು ಯಾರಿಗೋಸ್ಕರ ಬಂದಿದ್ದೇನೆ ಅಂತ ನಿಮಗೆ ಗೊತ್ತು. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನ ಮೋಸ, ವಂಚನೆ ಮಾಡಿ ಸೋಲಿಸಿದರು. ಇವತ್ತು ರಾಮನಗರದ ಜನತೆ ನಾವಿದ್ದೇವೆ ಅನ್ನೋ ವಿಶ್ವಾಸ ಕೊಟ್ಟಿದ್ದಾರೆ. ನಿಖಿಲ್ ಗೆಲ್ಲಿಸುತ್ತೇವೆ ಎಂಬ ಧೈರ್ಯ ನೀಡ್ತಿದ್ದಾರೆ. ಮುದುಕ ಬಂದು ಮತ ಕೇಳ್ತಿದ್ದಾನೆ ಅಂತ ವ್ಯಂಗ್ಯ ಮಾಡಿದರು. ಅದಕ್ಕೆ ನೀವು ಉತ್ತರ ಕೊಡಬೇಕು ಎಂದರು. ಬಿಜೆಪಿ (BJP) ಅವರು ಹಿಂದಿನ ಬಾಗಿಲಿನಿಂದ ಬಂದು ಅಧಿಕಾರ ಹಿಡಿದಿದ್ದಾರೆ. ಕಾಂಗ್ರೆಸ್ ಅವರ ಕೈಯಲ್ಲೂ…

Read More