ಬೆಂಗಳೂರು: 2023-24ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇಂದು(ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಬೆಂಗಳೂರಿನ ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದರು. karresults.nic.in ಹಾಗೂ cetonline.karnataka.gov.in ವೆಬ್ಸೈಟ್ನಲ್ಲಿ ಬೆಳಗ್ಗೆ 11 ಗಂಟೆ ನಂತರ ಫಲಿತಾಂಶ ಲಭ್ಯವಾಗಲಿದೆ. ಒಟ್ಟು 2.61.610 ಅಭ್ಯರ್ಥಿ ಗಳು ಸಿಇಟಿ ಪರೀಕ್ಷೆ ಗೆ ಅರ್ಜಿ ಪೈಕಿ 2.44.345 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರು.1.66.808 ಅಭ್ಯರ್ಥಿ ಗಳು ಸಿಇಟಿ ಪರೀಕ್ಷೆಗೆ ಅರ್ಹತೆ.ಇಂಜಿನಿಯರಿಂಗ್ ಕೋರ್ಸ್ ಗೆ 203381 ಅಭ್ಯರ್ಥಿ ಗಳು ಅರ್ಹತೆ ಕೃಷಿ ವಿಜ್ಞಾನ ಕೋರ್ಸ್ ಗಳಿಗೆ 164187 ಅಭ್ಯರ್ಥಿಗಳಿಗೆ ರ್ಯಾಂಕ್, ಪಶುಸಂಗೋಪನೆ 166756 ,166746 ಯೋಗ ನ್ಯಾಚುರೋಪತಿ, 206191 ಬಿ ಫಾರ್ಮ್,206340 ಫಾರ್ಮ್ ಡಿ ಕೋರ್ಸ್ ಗೆ ಅರ್ಹತೆ. ಈ ಬಾರಿ ಸಿಇಟಿಯಲ್ಲೂ ಬಾಲಕಿಯರದ್ದೇ ಮೇಲುಗೈ. ಇಂಜಿನಿಯರಿಂಗ್ ವಿಭಾಗದಲ್ಲಿ: ವಿಘ್ನೇಶ್ ಪ್ರಥಮ ಸ್ಥಾನ ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ ಸ್ಥಾನ ಸಮೃದ್ಧ್ ಶೆಟ್ಟಿ ತೃತೀಯ ಸ್ಥಾನ ಎಸ್.ಸುಮೇಧ್ಗೆ 4ನೇ…
Author: Prajatv Kannada
ಬೆಂಗಳೂರು: ಹದಿ ಹರೆಯದ ಜೋಷ್ ಇದ್ಯಲ್ಲ ಅದರ ಎಫೆಕ್ಟ್ ಇದು . ಈಗೋಗೆ ಬಿದ್ದ ಯುವಕರು ನಡೆಸಿದ ಕೃತ್ಯಕ್ಕೆ ಈಗ ಜೈಲು ಸೇರಬೇಕಿದೆ. ಸರ್ಕಾರಿ ಬಸ್ ನಲ್ಲಿ ನಡೆದ ಕಿರಿಕ್ ಕೈಮೀರಿ,ಖಾಕಿ ಮೇಲೆಯೇ ಕೈಎತ್ತುವವರೆಗೂ ಹೋಗಿದೆ. ಯಸ್ ಬಸ್ ನಲ್ಲಿ ನಡೆದ ಪ್ರಹಸನ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ . ಅಷ್ಟಕ್ಕೂ ನಡೆದಿದ್ದೇನು ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. ಯಲಹಂಕ ರೂಟ್ ಸರ್ಕಾರಿ ಬಸ್ ನಲ್ಲಿ ನಡೆದ ಘಟನೆ ಇದು. ಮೌನೇಶ್ ಎಂಬ ಮೆಡಿಕಲ್ ಸ್ಟೂಡೆಂಟ್ , ಕಂಡಕ್ಟರ್ ಜೊತೆ ಪಾಸ್ ಕಾರಣಕ್ಕಾಗಿ ವಾಗ್ವಾದ ನಡೆಸಿದ್ದಾನೆ . ಈ ವೇಳೆ ಕೈಕೈ ಮಿಲಾಯಿಸೋ ಹಂತಕ್ಕೆ ಹೋದಾಗ ಪೊಲೀಸರಿಗೆ ಕರೆ ಮಾಡಿದ್ದ ಹಿನ್ನಲೆ ಮೌನೇಶ್ ನನ್ನ ಪೊಲೀಸರು ಎಳೆದೊಯ್ದಿದ್ದರು. ಈ ಘಟನೆ ನಡೆದಿದ್ದು ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿರುವ ಮೌನೇಶ್ ಕಾಲೇಜಿಗೆಂದು ಹೊರಟಿದ್ದ. ಈ ವೇಳೆ ಬಸ್ ನಲ್ಲಿ ಪಾಸ್ ನ ಜೆರಾಕ್ಸ್ ತೋರಿಸಿದ್ದಾನೆ. ಜೆರಾಕ್ಸ್ ಬೇಡ ಒರಿಜಿನಲ್ ಬಸ್ ಪಾಸ್…
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಅಥವಾ ನೇರವಾಗಿ ಕೂಡ ಅರ್ಜಿ ಸಲ್ಲಿಸಬಹುದು ಎಂದು ವಿಧಾನಸೌಧದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿದರು. ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೆದುರಿಗೆ ಮಾತನಾಡಿದ ಅವರು, ಗೃಹ ಲಕ್ಷ್ಮೀ ಯೋಜನೆ ನಮ್ಮ ಸರ್ಕಾರದ ಧ್ಯೇಯ ರೇಷನ್ ಕಾರ್ಡ್ ಹೋಲ್ಡರ್ ಮುಖ್ಯಸ್ಥೆಗೆ ಇದರ ಲಾಭ ಸಿಗಲಿದೆ.ಕೆಲವು ಕಾರಣಗಳಿಂದ ಲೇಟ್ ಆಗಿದೆ ಜೂನ್ 16 ತಾರೀಖು ಅಂದ್ರೆ ನಾಳೆಯಿಂದ ಅರ್ಜಿ ಸಲ್ಲಿಸಬಹುದು ಹಾಗೆ ಆನ್ ಲೈನ್ ಪೋರ್ಟಲ್ ಹಾಗೂ ಭೌತಿಕವಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು. ಸೇವಾಸಿಂಧು ಪೋರ್ಟಲ್, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಮಹಿಳೆ ಆಧಾರ್ ಕಾರ್ಡ್, ಪತಿ ಆಧಾರ್ ಕಾರ್ಡ್ ಮಾಹಿತಿ ನೀಡಬೇಕು. ಈ ಬಗ್ಗೆ ಯಾವುದೇ ಗೊಂದಲಗಳಿದ್ದರೆ ಸಹಾಯವಾಣಿ ಸಂಖ್ಯೆ 1902ಕ್ಕೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು. ಅಲ್ಲದೇ ಅರ್ಜಿ ಸಲ್ಲಿಸಲು…
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಜುಲೈ 1 ರಿಂದ ಜಾರಿಯಾಗುವುದು ಅನುಮಾನ ಎನ್ನಲಾಗುತ್ತಿದೆ. ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡೆಪ್ಯುಟಿ ಮ್ಯಾನೇಜರ್ ಜೂನ್ 12 ರಂದು ತಮಗೆ ಪತ್ರ ಬರೆದು ಹೆಚ್ಚುವರಿ ಅಕ್ಕಿ ಕೊಡುವುದಾಗಿ ತಿಳಿಸಿದ್ದರು. ಇದಾದ ಬಳಿಕ ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದು, ಅಕ್ಕಿ ಸಂಗ್ರಹ ಇದ್ದರೂ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಹೀಗಾಗಿ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದ ನಿರ್ಧಾರ ಸಂಕಷ್ಟ ತಂದೊಡ್ಡುತ್ತ ಎನ್ನಲಾಗುತ್ತಿದೆ. ಜುಲೈ ಒಂದರಿಂದ ಜಾರಿಯಾಗಬೇಕಿದ್ದ ಅನ್ನಭಾಗ್ಯ ಯೋಜನೆಗೆ ಕತ್ತರಿ ಬೀಳುತ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ. FCI ನಿರ್ಧಾರದಿಂದಾಗಿ ಆಹಾರ ಇಲಾಖೆಗೆ ದೊಡ್ಡ ಟೆನ್ಷನ್ ಶುರುವಾಗಿದೆ. ಅನ್ನ ಭಾಗ್ಯ ಯೋಜನೆಗೆ ಎಫ್ಸಿಐ ನಿಂದ ಅಕ್ಕಿ ರವಾನೆ ಮಾಡಿಕೊಳ್ಳಲು ಆಹಾರ ಇಲಾಖೆ ಸಿದ್ದತೆ ನಡೆಸಿತ್ತು.. ಆದ್ರೀಗಾ ಎಫ್ಸಿಐನಿಂದ ಅಕ್ಕಿ ಸ್ಥಗಿತ ಮಾಡಿದ್ದು ಜುಲೈ ಒಂದರಿಂದ ಅನ್ನಭಾಗ್ಯ ಯೋಜನೆ ಜಾರಿಯಾಗುತ್ತ ಎನ್ನುವ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು: ವಿಧಾನಸೌಧದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿದ್ದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಹತ್ತಿರ ಅಕ್ಕಿ ದಾಸ್ತಾನು ಇರುತ್ತೆ. ಆದರೆ ಕೇಂದ್ರ ಸರ್ಕಾರ ಮಲತಾಯಿ ದೋರಣೆ ಮಾಡ್ತಿದೆ. ಪಾರ್ಲಿಮೆಂಟ್ ಚುನಾವಣೆಗೆ ಕಾಂಗ್ರೆಸ್ ಪ್ರಬಲ ಆಗುತ್ತೆ ಅಂತ ಭಯ ಅವರಿಗೆ. ಬಿಜೆಪಿ ನಾಯಕರಿಗೆ ಜನರ ಮೇಲೆ ಕಾಳಜಿ ಇದ್ದರೆ ಕೇಂದ್ರಕ್ಕೆ ಹೋಗಿ ಕೇಳಬೇಕಿತ್ತು. ನಮ್ಮ ಸರ್ಕಾರ ಏಳು ಕೆ.ಜಿ ಅಕ್ಕಿ ಕೊಟ್ಟಿರುವುದನ್ನು ಬಿಜೆಪಿ ಸರ್ಕಾರ ಕಡಿಮೆ ಮಾಡಿದ್ರು. ಕೇಂದ್ರ ಸರ್ಕಾರ ಯಾರದು. ನಾವು ಮಾಡುವ ಕಾರ್ಯಕ್ರಮಕ್ಕೆ ಕೇಂದ್ರದ ಜೊತೆಗೆ ಕೇಳ್ಬೇಕಾ. ಬಿಜೆಪಿಯವರು ಯಡಬಿಡಂಗಿಗಳು ಅವರಿಗೆ ಇದು ಅವರಿಗೆ ಗೊತ್ತಾಗಲ್ಲ. ಸೋಲಿನ ಹತಾಶೆಯಿಂದ ಏನ್ ಮಾತಾಡ್ತಾರೆ ಅಂತ ಅವರಿಗೆ ಗೊತ್ತಾಗಲ್ಲ. ಅವರಿಗೆ ಅವರೇ ಸೋಲಿಸಿದ್ದಾರೆ ಅಂತ ಹತಾಶೆ ಆಗಿದ್ದಾರೆ ಎಂದರು.
ಬೆಂಗಳೂರು: ಜೂನ್ 21ರಂದು ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದು ಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿಗೆ ನಿರ್ಧರಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಸಮಯಾವಕಾಶ ಸಹ ಕೇಳಿದ್ದಾರೆ ಹಾಗೆ ರಾಷ್ಟ್ರಪತಿಗಳ ಭೇಟಿಗೂ ಸಹ ಅನುಮತಿ ಕೇಳಲಾಗಿದೆ. ಈ ವೇಳೆ ಅನ್ನಬಾಗ್ಯ ಅಕ್ಕಿ ಸೇರಿದಂತೆ ರಾಜ್ಯದ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಅವರಿಬ್ಬರು ಪ್ರೀತಿಸಿ ಮದುವೆಯಾಗಿ 9 ವರ್ಷ ಕಳೆದಿತ್ತು.ಮುದ್ದಾದ ಮೂರು ಪುಟಾಣಿ ಹೆಣ್ಣು ಮಕ್ಕಳು ಸಹ ಇದ್ರು.ದುಶ್ಚಟಕ್ಕೆ ಬಿದ್ದ ಪತಿ ಪ್ರತಿದಿನ ಪತ್ನಿ ಹಾಗೂ ಮಕ್ಕಳಿಗೆ ಪ್ರತಿಕ್ಷಣ ಹಿಂಸೆ ಕೊಟ್ಟು ತವರು ಮನೆಗೆ ಕಳುಹಿಸಿದ್ದ.ಹೆಂಡತಿ ಮಕ್ಕಳು ಬೇಕು ಎಂದು ನಟಿಸಿ ಪತ್ನಿಯ ಮನೆಗೆ ಬಂದು ಇದೀಗ ತನ್ನ ಸ್ವಂತ ಪುಟಾಣಿ ಕಂದಮನನ್ನೇ ಸಾವಿನ ಮನೆಗೆ ಕಳುಹಿಸಿದ್ದಾನೆ.ಆ ಮನಮಿಡಿಯುವ ಹೃದ್ರಾವಕ ಘಟನೆಯನ್ನು ತೋರಿಸ್ತೀವಿ ನೋಡಿ.! ಮುಗಿಲು ಮುಟ್ಟಿದ ತಾಯಿ ಹಾಗೂ ಗ್ರಾಮಸ್ಥರ ಆಕ್ರಂದನ,ಏನಾಗ್ತಿದೆ ಅಂತ ಅರಿಯದೆ ಆಟವಾಡ್ತಿರುವ ಎರಡು ಪುಟಾಣಿ ಮಕ್ಕಳು,ನಿರ್ಜನ ಪ್ರದೇಶದಲ್ಲಿ ಸತ್ತು ಬಿದ್ದಿರುವ ಎರಡು ವರ್ಷ ವಯಸ್ಸಿನ ಮಗು.ಎಂತಹವರ ಕಣ್ಣಾಲಿಗಳು ಒದ್ದೆಯಾಗುವ ದೃಶ್ಯಗಳು ಕಂಡುಬಂದಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೆ.ಬಿ ಕೊತ್ತೂರು ಗ್ರಾಮದಲ್ಲಿ. ಕೇವಲ ಒಂದೇ ಕಿಮೀ ದೂರದಲ್ಲಿರುವ ಆಂಧ್ರದ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ನಡಿಬಾರದು ಘಟನೆಯೊಂದು ನಡೆದು ಹೋಗಿದೆ,ಈ ಫೋಟೋದಲ್ಲಿ ಕಿರಾತಕನಂತೆ ಫೋಸ್ ಕೊಡ್ತಿರುವ ಇವನ ಹೆಸರು ಗಂಗಾಧರ ಅಂತಾ 30 ವರ್ಷ,ಇವನು ಮಾಡಿರುವ ನೀಚ ಕೆಲಸಕ್ಕೆ ಇವತ್ತು…
ಮಂಡ್ಯ – ಜಿಲ್ಲೆಯ ಮಳವಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಮನೆಯಲ್ಲಿ ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 34 ವರ್ಷದ ಕೆ ಆಶಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಈಕೆ ಗ್ರಾಮದ ನಿವಾಸಿ ಎಚ್.ಎಂ.ಮದುಸೂಧನ್ ಎಂಬವರ ಪತ್ನಿ ಎಂದು ಹೇಳಲಾಗಿದೆ. ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುತ್ತಿದ್ದ ಇವರು, ಕಳೆದ ಒಂಬತ್ತು ವರ್ಷಗಳ ಹಿಂದೆ ಮಧುಸೂಧನ್ ನನ್ನು ಪ್ರೀತಿಸಿ ವಿವಾಹವಾಗಿದ್ದು, ಪತಿ,ಪತ್ನಿ ಆಗಿಂದಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಹಲವುಬಾರಿ ಹಿರಿಯರು ಸಂಧಾನ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೇ ಇತ್ತೀಚೆಗೆ ಮಧುಸೂಧನ್ ಪತ್ನಿ ಆಶಾರನ್ನು ತವರುಮನೆಯಿಂದ ಹಣ ಪಡೆದು ಬರುವಂತೆ ಕಿರುಕುಳ ನೀಡುತ್ತಿದ್ದನ್ನು ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಸಹೋದರ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಂಗಳೂರು: ರಾಜ್ಯದಲ್ಲಿ ಇನ್ನೂ ಮಳೆ ಬಿರುಸು ಪಡೆದಿಲ್ಲ. ಆದರೆ ಕರಾವಳಿಯಲ್ಲಿ ಬಿಪರ್‌ಜಾಯ್ ಚಂಡಮಾರುತದ (Biparjoy Cyclone) ಅಬ್ಬರಕ್ಕೆ ಕಡಲ್ಕೊರೆತ ತೀವ್ರಗೊಂಡಿದೆ. ಮಳೆ ಬರುವುದಕ್ಕೆ ಮೊದಲೇ ಚಂಡಮಾರುತ ಕಾಣಿಸಿದ್ದರಿಂದ ಕಡಲು ಅಬ್ಬರಿಸತೊಡಗಿದ್ದು ತೀರ ಪ್ರದೇಶದ ನಿವಾಸಿಗಳು ಆತಂಕದಲ್ಲಿ ಕಾಲ ತಳ್ಳುತ್ತಿದ್ದಾರೆ. ಅರಬ್ಬೀ ಸಮುದ್ರದಲ್ಲಿ (Arabian Sea) ಎದ್ದಿರುವ ಚಂಡಮಾರುತದ ಪರಿಣಾಮ ಕಡಲು ಮಾತ್ರ ಭೋರ್ಗರೆಯುತ್ತ ಬರುತ್ತಿದ್ದು ರಕ್ಕಸ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇದರಿಂದಾಗಿ ಮಂಗಳೂರು (Mangaluru) ಹೊರವಲಯದ ಉಳ್ಳಾಲದ ಬಟ್ಟಂಪಾಡಿ, ಉಚ್ಚಿಲದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ತೀರದಲ್ಲಿರುವ ಮನೆಗಳು ಸಮುದ್ರ ಸೇರುತ್ತಿವೆ. ನೂರಾರು ತೆಂಗಿನ ಮರಗಳು ಧರಾಶಾಯಿ ಆಗಿದ್ದು ತೀರ ಪ್ರದೇಶದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಭಾಗದಲ್ಲಿ ಕಡಲ್ಕೊರೆತ ಪ್ರತಿ ಬಾರಿ ಕಾಣಿಸಿಕೊಳ್ಳುವ ಸಮಸ್ಯೆ. ಮಳೆ ಜೋರಾದರೆ, ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಕಾಣಿಸಿಕೊಂಡರೆ, ಕರಾವಳಿಯ ಕೆಲವು ಪ್ರದೇಶಗಳು ಟಾರ್ಗೆಟ್ ಆಗುತ್ತವೆ. ಕಡಲ ರಾಜನ ಅಬ್ಬರಕ್ಕೆ ಭೂಪ್ರದೇಶ ಕೊಚ್ಚಿ ಹೋಗುತ್ತಿದ್ದು, ಅಲ್ಲಿನ ಮನೆಗಳು ಸಮುದ್ರಕ್ಕೆ ಆಹುತಿಯಾಗುತ್ತವೆ. ಈ ಸಮಸ್ಯೆಗೆ ಪ್ರತಿ ಬಾರಿ ರಾಜಕಾರಣಿಗಳು ಶಾಶ್ವತ…
ಆನೇಕಲ್ – ಹಾಡಹಗಲೇ ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನು ಡೆಂಕಣಿಕೋಟೆ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ತಮಿಳ್ ಸೆಲ್ವನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ರಾಜ್ಯ ಗಡಿ ತಮಿಳುನಾಡಿನ ಡೆಂಕಣಿಕೋಟೆ ಬಸ್ ನಿಲ್ದಾಣದ ರಸ್ತೆ ಬದಿ ಬೈಕ್ ಪಾರ್ಕ್ ಮಾಡಲಾಗಿತ್ತು. ಈ ವೇಳೆ ಕ್ಷಣಮಾತ್ರದಲ್ಲಿ ಆರೋಪಿಯು ಬೈಕ್ ಕದ್ದು ಎಸ್ಕೇಪ್ ಆಗಿದ್ದಾನೆ. ಇನ್ನೂ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡೆಂಕಣಿ ಕೋಟೆ ನಿವಾಸಿ ಮೊಹಮ್ಮದ್ ಗೌಸ್ ಎಂಬುವವರಿಗೆ ಸೇರಿದ ಬೈಕ್ ಎಂದು ತಿಳಿದು ಬಂದಿದೆ. ಇನ್ನೂ ಡೆಂಕಣಿಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.