ಬೆಂಗಳೂರು:- ರೈಲು ಹಳಿ ಬದಿಯಲ್ಲಿ ಇಬ್ಬರು ಬೌದ್ಧ ಬಿಕ್ಕುಗಳ ಮೃತದೇಹ ಪತ್ತೆಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬೆತ್ತನಗೆರೆಯಲ್ಲಿ ರೈಲು ಹಳಿ ಬದಿಯಲ್ಲಿ ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿನಿಂದ ಬಿದ್ದು ಸಾವಿಗೀಡಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇವರು ಕುಶಾಲನಗರದ ಗೋಲ್ಡನ್ ಟೆಂಪಲ್‌ಗೆ ಹೋಗಿ ಬೆಂಗಳೂರಿಗೆ ಬರುತ್ತಿದ್ದರು ಎಂದು ಶಂಕಿಸಲಾಗಿದೆ. ಬೌದ್ಧ ಬಿಕ್ಕುಗಳು ಮೃತಪಟ್ಟಿರುವ ವಿಚಾರ ಟ್ರ್ಯಾಕ್ ಮ್ಯಾನ್‌ನಿಂದ ಬೆಳಕಿಗೆ ಬಂದಿದೆ. ರೈಲಿನ ಬಾಗಿಲಿನಲ್ಲಿ ಕುಳಿತಿದ್ದ ವೇಳೆ ಆಯತಪ್ಪಿ ಬಿದ್ದರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮೃತದೇಹದ ಬಳಿ ಕುಶಾಲನಗರಕ್ಕೆ ಹೋಗಿರುವ ಬಸ್ ಟಿಕೆಟ್ ಪತ್ತೆಯಾಗಿದೆ. ಆದರೆ ಈವರೆಗೂ ಮೃತರ ಗುರುತು ಪತ್ತೆಯಾಗಿಲ್ಲ. ಮೃತದೇಹಗಳನ್ನು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Author: Prajatv Kannada
ಬೆಂಗಳೂರು ;ಟೊಮ್ಯಾಟೊ’ದಲ್ಲಿ ಚಾನ್ಸ್ ಕೊಡುಸ್ತಿನಿ ಎಂದು 75 ಲಕ್ಷ ತೆಗೆದುಕೊಂಡು ಮಹಿಳೆಯ ಮರ್ಯಾದೆಯನ್ನೂ ತೆಗೆದಿರುವ ಘಟನೆ ಜರುಗಿದೆ. ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಲವ್ , ಸೆಕ್ಸ್ ,ದೋಖಾ ಬೆಳಕಿಗೆ ಬಂದಿದ್ದು, ದಿ ಕಲರ್ ಆಫ್ ಟೊಮೆಟೋ” ಚಿತ್ರ ನಿರ್ಮಾಪಕನ ವಿರುದ್ಧ ಮಹಿಳೆ ಅತ್ಯಾಚಾರ ದೂರ ದಾಖಲಿಸಿದ್ದಾರೆ. ಸಿನಿಮಾ ಮಾಡೋದಾಗಿ 75 ಲಕ್ಷ ಹಣ ಪಡೆದುಕೊಂಡಿದ್ದನಂತೆ ಸಿನಿಮಾ ರಿಲೀಸ್ ಆದ್ಮೆಲೆ ಬಿಗ್ ಹಿಟ್ ಆಗುತ್ತೆ 75 ಲಕ್ಷದ ಬದಲಾಗಿ 1.5 ಕೋಟಿ ಕೊಡ್ತಿನಿ ಎಂದು ನಂಬಿಸಿದ್ದನಂತೆ. ಈ ಮೂಲಕ ನಟನೆಗೆ ಅವಕಾಶ ಕೊಡೋದಾಗಿ ನಿರ್ಮಾಪಕ ವಂಚನೆ ಮಾಡಿದ್ದಾನೆ. The colour of tomoto ಎಂಬ ವಿಲಕ್ಷಣ ಹೆಸರಿನ ಚಿತ್ರ ನಿರ್ಮಾಪಕ ಈ ಕೃತ್ಯ ಎಸಗಿದ್ದು, 50 ಹಾಗೂ ದಿ ಕಲರ್ಸ್ ಆಫ್ ಟೊಮೋಟೋ ಎಂಬ ಎರಡು ಚಿತ್ರ ಮಾಡ್ತಿನಿ ಹೀಗಾಗಿ 75 ಲಕ್ಷ ಬೇಕು ಎಂದು ನಿರ್ಮಾಪಕ ಕುಮಾರ್ ಹೇಳಿದ್ದನಂತೆ. ಚಿತ್ರದಲ್ಲಿ ಅವಕಾಶ ಸಿಗುತ್ತೆ ಹಾಗು ಕೊಟ್ಟ ಹಣ ಡಬಲ್ ಆಗಿ…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಒಂದಾದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡುವ ಗೃಹಜ್ಯೋತಿ(Gruha Jyothi Scheme) ಯೋಜನೆಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಗೆ ಜೂನ್ 18 ರಿಂದ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ. ರಾಜ್ಯದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಪಡೆಯುವ ಗೃಹ ಜ್ಯೋತಿ ಯೋಜನೆಗೆ ಇದೇ ತಿಂಗಳು 15 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಹೇಳಿದ್ದರು. ಆದ್ರೆ, ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಸೇವಾಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ವಿಳಂಬವಾಗಲಿದೆ. ಇದರಿಂದ ಸರ್ಕಾರ ಅರ್ಜಿ ಸಲ್ಲಿಸುವ ದಿನಾಂಕ ಮುಂದೂಡಿದೆ
ಕಲಬುರಗಿ: ಈ ಹಿಂದಿನ ಬಿಜೆಪಿ ಸರಕಾರ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದಿರುವ ಕೃಷಿಕಾಯ್ದೆ ಕೂಡಲೆ ವಾಪಸ್ ಪಡೆಯಬೇಕೆಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ(Kodihalli Chandrasekhar) ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೃಷಿ ಕಾಯ್ದೆ ವಾಪಸ್ ಪಡೆಯುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಸರ್ಕಾರ ರಚಿಸಿರುವ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆ ರದ್ದುಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀನಮೇಷ ಎಣಿಸಬಾರದು ಎಂದು ಕಿವಿಮಾತು ಹೇಳಿದರು. ವಿವಾದಾತ್ಮಕ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವುದಾಗಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಾಗ್ಯೂ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ. ಇದರಲ್ಲಿ ಪರಿಶೀಲಿಸುವುದು ಏನಿದೆ? ಈ ಹಿಂದೆ ಪ್ರತಿಪಕ್ಷದ ನಾಯಕರಾಗಿದ್ದಾಗ ಕಾಯ್ದೆಯನ್ನು ವಿರೋಧಿಸಿದವರಿಗೆ ಅದನ್ನು ರದ್ದುಪಡಿಸುವುದರಲ್ಲಿ ತೊಂದರೆ ಏನಿದೆ? ಎಂದು ಕೋಡಿಹಳ್ಳಿ ಪ್ರಶ್ನಿಸಿದರು.
ಭಟ್ಕಳ: ಮುರುಡೇಶ್ವರ ಬೀಚ್ ನಲ್ಲಿ ಕಳೆದ 2 ದಿನದ ಹಿಂದೆ ಅಲೆಗೆ ಸಿಕ್ಕು ಇಬ್ಬರು ಪ್ರವಾಸಿಗರು ಸಮುದ್ರಪಾಲಾದ ಹಿನ್ನೆಲೆ ಮುರ್ಡೇ ಶ್ವರ ಬೀಚ್ ಗೆ (Murudeshwar Beach) ಪ್ರವೇಶ ನಿರ್ಬಂಧಿಸಲಾಗಿದೆ. ಬಿಪಾಯ್ ಚಂಡಮಾರುತದ ಹಿನ್ನೆಲೆ ಅಲೆಗಳ ಅಬ್ಬರ ಜೋರಾಗಿದ್ದು, ಕಡಲ ತೀರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಕಡಲ ತೀರಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿಲಾಗಿದೆ. ಬೀಚ್ ಪ್ರವೇಶಿಸುವ ಎರಡು ಪ್ರವೇಶ ದ್ವಾರಗಳನ್ನು ಕೂಡ ಬಂದ್ ಮಾಡಲಾಗಿದೆ. ಸುಳಿ ಗಾಳಿ ಹಾಗೂ ಅಲೆಯ ಕಾರಣದಿಂದ ಸಮಸ್ಯೆ ಆಗುತ್ತಿರುವ ಹಿನ್ನೆಲೆ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ಪ್ರವಾಸಿಗರ ವಿಚಾರದಲ್ಲಿ ಸಹ ಜಿಲ್ಲಾಡಳಿತ ಕಟ್ಟು ನಿಟ್ಟಾಗಿ ಕ್ರಮ ಕೈಗೊಳ್ಳುತ್ತಿದೆ. ಈ ಚಂಡಮಾರುತ ಹಾಗೂ ಮಳೆಯ ಹಿನ್ನೆಲೆ ಮುರುಡೇಶ್ವರ ಕಡಲತೀರದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಇವತ್ತಿನಿಂದ ನಿಷೇಧ ಹೇರಿ ಜಿಲ್ಲಾಡಳಿತ ಆದೇಶ ನೀಡಿದೆ.
ಬೆಂಗಳೂರು: ಈಗಾಗಲೇ ನಾವು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. ಈಗಾಗಲೇ ಒಂದು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಐದು ಗ್ಯಾರಂಟಿಗಳಲ್ಲಿ ಅನ್ನಾಭಾಗ್ಯ ಯೋಜನೆಯೂ ಒಂದು. ಪ್ರತಿಯೊಬ್ಬರಿಗೆ ತಲಾ 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಹೇಳಿದ್ದೇವೆ. BPL, ಅಂತ್ಯೋದಯ ಕಾರ್ಡ್ನವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ. ಜುಲೈ 1ರಿಂದ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ತಿಂಗಳಿಗೆ 2 ಲಕ್ಷದ 28 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ಅಕ್ಕಿ ಬೇಕು ಎಂದರು. ಅನ್ನಭಾಗ್ಯ ಯೋಜನೆಗಾಗಿ ತಿಂಗಳಿಗೆ 840 ಕೋಟಿ ರೂ. ವೆಚ್ಚ ಆಗಲಿದೆ. ಪ್ರತಿ ವರ್ಷಕ್ಕೆ 10,092 ಕೋಟಿ ರೂ. ಬೇಕು. ಹೆಚ್ಚುವರಿ ಅಕ್ಕಿ ವಿತರಣೆ ಬಗ್ಗೆ FCI ಡೆಪ್ಯುಟಿ ಮ್ಯಾನೇಜರ್ ಜೊತೆ ಚರ್ಚೆ ಮಾಡಿದ್ದು, ಹೆಚ್ಚುವರಿ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ. ಇಷ್ಟೆಲ್ಲ ಆದ್ಮೇಲೆ ಡೆಪ್ಯುಟಿ ಮ್ಯಾನೇಜರ್ ಜೂ.12ರಂದು ಪತ್ರ ಬರೆದಿದ್ದಾರೆ. ಜೂನ್ 12ರಂದು ಹೆಚ್ಚುವರಿ ಅಕ್ಕಿ ಕೊಡುವುದಾಗಿ ಒಪ್ಪಿಗೆ…
ಬೆಂಗಳೂರು: ಅಧಿಕಾರಿಗಳ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಸಭೆ ವಿಚಾರಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಇವರು ವಸೂಲಿಗೆ ಬಂದಿರೋದು, ಜನ ಉದ್ದಾರ ಮಾಡೋದಿಕ್ಕೆ ಬಂದಿಲ್ಲ. ಈ ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಸಂಪತ್ತನ್ನು ಯಾವ ರೀತಿ ಲೂಟಿ ಮಾಡ್ತಿದ್ದಾರೆ ಗೊತ್ತಾಗ್ತಿದೆ. ಯಾವುದೇ ಸೂಚನೆ ಇದ್ದರೆ ಕಾಂಗ್ರೆಸ್ ಕಚೇರಿ ಒಳಗೆ ಸಭೆ ಮಾಡ್ಕೊಳಿ. ಸರ್ಕಾರಿ ಅಧಿಕಾರಿಗಳ ಜೊತೆ ಕೂತು ಸೂಚನೆ ಕೊಡೋದಲ್ಲ ಎಂದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿಗೂ ರಾಜ್ಯದ ಜನತೆಗೂ ಸಂಬಂಧ ಇಲ್ಲ. ಅವರಿಗೆ ಸರ್ಕಾರದ ಅಧಿಕಾರಿಗಳ ಜೊತೆ ಸಭೆ ಮಾಡುವ ಯಾವುದೇ ಅಧಿಕಾರ ಇಲ್ಲ. ನಿನ್ನೆ ಅವರು ಸಭೆ ನಡೆಸುವ ಫೋಟೋ ಹೊರಬಂದಿದೆ. ಅವರ ಮಂತ್ರಿಗಳೇ ಅದನ್ನು ಹೊರಗೆ ಬಿಟ್ಟಿದ್ದಾರೆ. ಉಪಮುಖ್ಯಮಂತ್ರಿಗಳು ಎಷ್ಟು ಸುಳ್ಳು ಹೇಳ್ತಾರೆ ಅನ್ನೊದಕ್ಕೆ ಇದೇ ಸಾಕ್ಷಿ. ಅವರು ಹೇಳ್ತಾರೆ ಅದ್ಯಾವುದೋ ಶಾಂಗ್ರೀಲಾ ಹೋಟೆಲ್‌ನಲ್ಲಿ ಇವರು ಇದ್ದರಂತೆ. ಇವರನ್ನು ಕರೆದುಕೊಂಡು ಹೋಗೋದಕ್ಕೆ ಅಧಿಕಾರಿಗಳು ಬಂದ್ರಂತೆ. ಯಾವುದೇ ಸಭೆ ಮಾಡಿಲ್ಲ ಅಂತ ಹೇಳ್ತಾವ್ರೆ ಎಂದರು.
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳನ್ನ ಜಾರಿ ಮಾಡುತ್ತೇವೆ ಎಂದು ಹೇಳಿದ್ದು ಅದೇ ರೀತಿ ಈಗಾ ಒಂದು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಐದು ಗ್ಯಾರಂಟಿಗಳಲ್ಲಿ ಅನ್ನಾಭಾಗ್ಯ ಯೋಜನೆಯೂ ಒಂದು. ಪ್ರತಿಯೊಬ್ಬರಿಗೆ ತಲಾ 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಹೇಳಿದ್ದೇವೆ. BPL, ಅಂತ್ಯೋದಯ ಕಾರ್ಡ್ನವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ. ಜುಲೈ 1ರಿಂದ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ತಿಂಗಳಿಗೆ 2 ಲಕ್ಷದ 28 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ಅಕ್ಕಿ ಬೇಕು ಎಂದರು.
ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಅಧಿಕಾರಿಗಳ ಜೊತೆ ಸಭೆ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಅದು ಅಧಿಕೃತ ಸಭೆ ಆಗಿರಲಿಲ್ಲ. ಡಿಸಿಎಂ ಡಿ ಕೆ ಶಿವಕುಮಾರ್ ಸಭೆ ನಡೆಸಿದ್ರು. ಆ ವೇಳೆ ರಣದೀಪ್ ಸಿಂಗ್ ಸುರ್ಜೇವಾಲ ಬಂದಿದ್ದಾರೆ ಅಷ್ಟೇ ಎಂದರು. ವಿಧಾನಸೌಧದ ಒಳಗೆ ಸಭೆ ಮಾಡಿದ್ರೆ ತಪ್ಪು. ಖಾಸಗಿ ಹೊಟೇಲ್ ನಲ್ಲಿ ಡಿಕೆ ಶಿವಕುಮಾರ್ ಸಭೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸುರ್ಜೇವಾಲ ಬಂದಿದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸಿಲ್ಲ. ಬಿಜಪಿಯವರು ದೂರು ನೀಡಲಿ. ರಾಜಭವನದವರು ಪರಿಶೀಲನೆ ಮಾಡ್ತಾರೆ ಎಂದರು. ದಲಿತ ಸಿಎಂ ವಿಚಾರವಾಗಿ ಮಾತನಾಡಿ, ದಲಿತ ಸಿಎಂ ವಿಚಾರದಲ್ಲಿ ನೀವು ಬಹಳ ಆಳವಾಗಿ ಹೋಗುವ ಅಗತ್ಯವಿಲ್ಲ. ನಮ್ಮ ಸಮುದಾಯಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ಮಾತನಾಡಿದ್ದೇನೆ ಎಂದರು. ನಾಳೆಯೇ ಹೋಗಿ ನಾವು ಸಿಎಂ ಆಗಬೇಕು ಅಂತ ನಾವು ಕೇಳುವುದಿಲ್ಲ. ಯಾವುದು ಗೊಂದಲವಾದ ಮಾತುಗಳು ಅದರಲ್ಲಿ ಇಲ್ಲ ಎಂದು ಸಮರ್ಥಿಸಿಕೊಂಡರು.
ಕೋಲ್ಕತ್ತಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Sheikh Hasina) ಅವರಿಗೆ 600 ಕೆಜಿ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ. ʻಹಿಂಸಾಗರ್ʼ ಹಾಗೂ ʻಲಂಗ್ರಾʼ ತಳಿಯ ಮಾವಿನ ಹಣ್ಣುಗಳನ್ನು (Mangoes) ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಕಳೆದ ವರ್ಷ ಸಹ ಮಾವಿನ ಹಣ್ಣುಗಳನ್ನು ಕಳುಹಿಸಿಕೊಡಲಾಗಿತ್ತು, ಎಂದು ಬಾಂಗ್ಲಾದೇಶದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಸೀನಾ ಅವರು ಈಶಾನ್ಯದ ಎಲ್ಲಾ ಮುಖ್ಯಮಂತ್ರಿಗಳಿಗೂ ಮಾವಿನ ಹಣ್ಣುಗಳನ್ನು ಕಳುಹಿಸಿದ್ದಾರೆ. ಕಳೆದ ವರ್ಷ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಅಸ್ಸಾಂ ಮುಖ್ಯಮಂತ್ರಿಗಳಿಗೆ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ಕಳುಹಿಸಿದ್ದರು. ರಾಜತಾಂತ್ರಿಕ ಪ್ರಯತ್ನಗಳ ಭಾಗವಾಗಿ ಬಾಂಗ್ಲಾದೇಶದ ಪ್ರಧಾನಿ ಮಮತಾ ಬ್ಯಾನರ್ಜಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದ್ದಾರೆ.