Author: Prajatv Kannada

ಬೆಳಗಾವಿ: ಬೈಕ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ದೆರಟ್ಟಿ ಗ್ರಾಮದಲ್ಲಿ ನಡೆದಿದೆ. ಸಾವನ್ನಪ್ಪಿದ ಬೈಕ್ ಸವಾರನನ್ನು ಮಲ್ಲಿಕಾರ್ಜುನ ಬಾವಿ (28) ಎಂದು ಗುರುತಿಸಲಾಗಿದೆ. ರಡ್ದೆರಟ್ಟಿ ಗ್ರಾಮದಿಂದ ಅಥಣಿ ಮಾರ್ಗವಾಗಿ ಬರುತ್ತಿದ್ದ ಬೈಕ್ ಮತ್ತು ಲಾರಿ ಡಿಕ್ಕಿ ಹೊಡೆದಿತ್ತು. ಲಾರಿಗೆ ಗುದ್ದಿದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಮಂಡ್ಯ: ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆ ಕೆಆರ್‌ಎಸ್‌ನಲ್ಲಿ ವರುಣನಿಗಾಗಿ ವಿಶೇಷ ಹೋಮ ಹವನ ನಡೆಸಲಾಗುವುದು. ಗಂಗಾ ಪೂಜೆ ಸೇರಿದಂತೆ ವಿಶೇಷ ಪೂಜೆ ನಡೆಸಲು ಸಿದ್ಧತೆ ಮಾಡಲಾಗಿದೆ. ಎರಡು ವರ್ಷದ ಹಿಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾವೇರಿ ಒಡಲು ತುಂಬಲು ಪೂಜೆ ಮಾಡಿದ್ದರು. ಆಗ ಕೆಆರ್‌ಎಸ್‌ ಸಂಪೂರ್ಣ ಭರ್ತಿಯಾಗಿತ್ತು. ಈಗಾಗಲೇ ಮುಂಗಾರು ಆರಂಭವಾಗಬೇಕಿತ್ತು. ಆದ್ರೆ ಆಗಿಲ್ಲ. ಕಳೆದ ವರ್ಷ ಇದೇ ತಿಂಗಳಿನಲ್ಲಿ ನೀರು 103 ಅಡಿಗೂ ಹೆಚ್ಚಿತ್ತು. ಸ್ಥಳೀಯ ಶಾಸಕ ರಮೇಶ್‌ ಬಾಬು ನೇತೃತ್ವದಲ್ಲಿ ಪೂಜೆ ನಡೆಯಲಿದ್ದು, ಹಲವು ರೀತಿಯ ಪೂಜಾ ಕೈಂಕರ್ಯಗಳನ್ನು ಪುರೋಹಿತ ತಂಡ ನಡೆಸಲಿದೆ. ಕಾವೇರಿ ಪ್ರತಿಮೆ ಬಳಿ ಪೂಜೆ ನಡೆಯಲಿದೆ.

Read More

ಗದಗ ; ಹೈವೇಯಲ್ಲಿನ ವಿದ್ಯುತ್ ಕಂಬ ಸ್ಪರ್ಶದಿಂದ 6ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಜನತಾ ಕಾಲೋನಿಯಲ್ಲಿ‌ ಜರುಗಿದೆ. ಪಂಕಜ್ ರಾಮು ಕಲಾಲ್ (12) ಮೃತ ಬಾಲಕ ಎಂದು ಗುರುತಿಸಲಾಗಿದೆ. ಮೃತ ಬಾಲಕ ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡ್ತಿದ್ದ ಕೂಲಿಕಾರ್ಮಿಕನ ಓರ್ವನೇ ಸುಪುತ್ರ ಎಂದು ಹೇಳಲಾಗಿದ್ದು, ಮಗನ ಸಾವು ನೋಡಲಾಗದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಾಲೆಯಿಂದ ಬಂದು ಆಟವಾಡಲು ಹೋಗುತ್ತಿದ್ದಾಗ ಹೈವೇ ಕ್ರಾಸ್ ಮಾಡುವಾಗ ವಿದ್ಯುತ್ ಕಂಬ ಸ್ಪರ್ಶವಾಗಿ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ್ದಾನೆ. ಇನ್ನೂ ಮಗನ ಸಾವು ಖಂಡಿಸಿ ಹೈವೇ ತಡೆದು ಶವ ಸಮೇತ ಕುಟುಂಬಸ್ಥರು ಪ್ರತಿಭಟನೆ ಮಾಡಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

Read More

ತುಮಕೂರು:- ಜಿಲ್ಲೆಯ ತಿಪಟೂರು ಸೋಮವಾರ ಸಂಜೆ ಸುರಿದ ಕೆಲವೇ ಗಂಟೆಗಳ ಮಳೆಯ ಅಬ್ಬರಕ್ಕೆ ಅಕ್ಷರಕ್ಷಃ ಪತರುಗುಟ್ಟಿದೆ. ನೂತನ ಕೆ.ಎಸ್.ಆರ್ ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿದ್ದರೆ, ಮಳೆಯಲ್ಲಿ ಕೊಚ್ಚಿ ಹೋಗಿರೋ.. ವಾಹನಗಳು, ಮನೆಯ ಒಳಗೆ ನುಗ್ಗಿರೋ ನೀರು ಜನರನ್ನು ಪರದಾಡುವಂತೆ ಮಾಡಿತು. Video Player ಮತ್ತೊಂದೆಡೆ ತಿಪಟೂರಿನ ಗಾಂಧಿ ನಗರದ ಬಳಿಯ ಅಂಡರ್ ಪಾಸ್ ಬಳಿ ಲಘು ಭೂಕುಸಿತವೇ ಆಗಿದೆ. ಇದಕ್ಕೆ ಕಾರಣ ಅಂಡರ್ ಪಾಸ್ ನಲ್ಲಿ ತುಂಬಿದ 10 ಅಡಿಗೂ ಹೆಚ್ಚಿನ ಆಳಕ್ಕೆ ಮಳೆ ನೀರು ತುಂಬಿರೋದು. ಜೆಸಿಬಿಯಿಂದ ಕಾರ್ಯಾಚರಣೆಗೆ ರೇಲ್ವೆ ಇಲಾಖೆ ಮುಂದಾಗಿತ್ತು. ಪರಿಣಾಮ ನಿಜಾಮುದ್ದಿನ್ ಎಕ್ಸ್ಪ್ರೆಸ್ ಸೇರಿದಂತೆ ಕೆಲವು ರೈಲು ಸಂಚಾರವನ್ನೇ ತಾತ್ಕಾಲಿಕ ಸ್ಥಗಿತಗೊಳಿಸಿದೆ.

Read More

ಮೈಸೂರು: ಸಾಂಸ್ಕೃತಿಕ ನಗರಿಯನ್ನ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಪರಿಸರ ಸ್ನೇಹಿ ತಂಡ ಹಾಗೂ ಕೆ.ಎಂ.ಪಿ.ಕೆ.ಟ್ರಸ್ಟ್ ಸಂಘಟನೆಗಳು ಜಾಗೃತಿ ಅಭಿಯಾನ ಇಂದಿನಿಂದ  ಕೈಗೊಂಡಿದೆ.ಈಗಾಗಲೇ ಹಲವೆಡೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘಟನೆ ಇಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದೆ.ಮೆಟ್ಟಿಲು ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳುವ ಭಕ್ತರಿಗೆ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಪ್ಲಾಸ್ಟಿಕ್ ಬಳಕೆ ತ್ಯಜಿಸುವಂತೆ ಜಾಗೃತಿ ಮೂಡಿಸಿದ್ದಾರೆ. ಪ್ಲಾಸ್ಟಿಕ್ ಬಿಡಿ…ಬಟ್ಟೆ ಬ್ಯಾಗ್ ಹಿಡಿ ಎಂಬ ಸಂದೇಶ ಸಾರುವ ಭಿತ್ತಿ ಚಿತ್ರಗಳನ್ನ ಪ್ರದರ್ಶಿಸುತ್ತಾ ಭಕ್ತರಿಗೆ ಬಟ್ಟೆ ಬ್ಯಾಗ್ ಗಳನ್ನ ವಿತರಿಸಿ ಪರಿಸರ ಸಂರಕ್ಷಣೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷಣೆ ಕೂಗಿ ಅರಿವು ಮೂಡಿಸಿದ್ದಾರೆ.ಪರಿಸರ ಸ್ನೇಹಿ ತಂಡ ಹಾಗೂ ಕೆ.ಎಂ.ಪಿ.ಕೆ.ಟ್ರಸ್ಟ್ ನ ಜಾಗೃತಿ ಕಾರ್ಯಕ್ರಮಕ್ಕೆ ಪಾಲಿಕೆ ಅಧಿಕಾರಿಗಳು ಸಹ ಕೈ ಜೋಡಿಸಿದರು.

Read More

ಮೈಸೂರು: ನಂಜನಗೂಡು(Nanjangud) ತಾಲೂಕಿನ ಹುರ ಗ್ರಾಮದಲ್ಲಿ ಹೊಟ್ಟೆನೋವು (Stomach ache) ತಾಳಲಾರದೆ ಕೆರೆಗೆ ಹಾರಿ ಬಾಲಕಿ ಗೀತಾ ಎಂಬುವವರು ಆತ್ಮಹತ್ಯೆ(suicide)ಮಾಡಿಕೊಂಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ವಣಕನಪುರ ಗ್ರಾಮದವರಾದ ಬಾಲಕಿ ಗೀತಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು, ತೀವ್ರ ನೋವು ತಾಳಲಾರದೇ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಹುಲ್ಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಮೈಸೂರು: ರಾಜ್ಯ ಸರ್ಕಾರದಿಂದ 5 ಗ್ಯಾರಂಟಿ ಯೋಜನೆಗಳ ಜಾರಿ ವಿಚಾರ‘ ಕರ್ನಾಟಕ ರಾಜ್ಯದ ಹಣಕಾಸಿನ ಸ್ಥಿತಿ ಹೇಗಿದೆ?, ಎಷ್ಟು ಸಾಲವಿದೆ? ಈ ಎಲ್ಲದರ ಬಗ್ಗೆಯೂ ಯೋಚಿಸಿ ಯೋಜನೆ ಘೋಷಣೆ ಮಾಡಬೇಕು ಎಂದು ಮೈಸೂರು ನಗರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಕಾಂಗ್ರೆಸ್ ಬಹಳ ಧೈರ್ಯದ ಮೇಲೆ ಗ್ಯಾರಂಟಿ ಘೋಷಣೆ ಮಾಡಿದೆ. ಹಣವನ್ನು ಹೇಗೆ ಹೊಂದಿಸುತ್ತಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ಹೆಚ್ಚುವರಿ ತೆರಿಗೆ ವಿಧಿಸ್ತೀರಾ?, ಸಾಲ ಮಾಡುತ್ತೀರಾ ಮೊದಲು ತಿಳಿಸಿ ಎಂದರು.

Read More

ಕೋಲಾರ:-  ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರವನ್ನು ಪಶು ಇಲಾಖೆ ಅಧಿಕಾರಿಗಳು ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಿಪಬ್ಲಿಕನ್ ಸೇನಾ ಕೋಲಾರ ಜಿಲ್ಲಾ ಸಮಿತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿದ್ರು. ಇದೇ ವೇಳೆ ಕರ್ನಾಟಕ ರಿಪಬ್ಲಿಕ್ ಸೇನೆ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ ಮಾತನಾಡಿ ಜಿಲ್ಲೆಯ ಎಲ್ಲಾ ತಾಲೂಕಿನ ಪಶು ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಪಶು ಇಲಾಖೆಯ ಉಪ ನಿರ್ದೇಶಕರು ಸೇರಿದಂತೆ ಅಧಿಕಾರಿಗಳು ಮಾಡಿರುವ ಭ್ರಷ್ಟಾಚಾರದ ದಾಖಲೆಗಳನ್ನು ನೀಡಿದ್ದೇವೆ ಯಾರು ಭ್ರಷ್ಟಾಚಾರವನ್ನು ಮಾಡಿದ್ದಾರೆ ಅವರ ವಿರುದ್ದ ಕಾನೂನು ಕ್ರಮವನ್ನು ಜರುಗಿಸ ಬೇಕು ಅಲ್ಲದೆ ಲೋಕಾಯುಕ್ತ ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಹ ಸಲ್ಲಿಸಿದರು. ಮಂಜುನಾಥ್ ನವೀನ್ ಕುಮಾರ್ ನಾರಾಯಣ ಸ್ವಾಮಿ, ಅಮರೇಶ್, ಕೆ ವಿ ಶ್ರೀನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Read More

ಬಾಗಲಕೋಟೆ ;- ಕಾಂಗ್ರೆಸ್ ಸರ್ಕಾರದ ಮೊದಲ ಗ್ಯಾರಂಟೀ `ಶಕ್ತಿ’ ಯೋಜನೆಯಾದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ತೇರದಾಳ ಶಾಸಕ ಸಿದ್ದು ಸವದಿ ಬನಹಟ್ಟಿಯಲ್ಲಿ ಅಧಿಕೃತ ಚಾಲನೆ ನೀಡಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬನೆ, ಶೈಕ್ಷಣಿಕ ಪ್ರವಾಸ, ವೃತ್ತಿ ಕೌಶಲ ವೃದ್ಧಿ ಸೇರಿ ಎಲ್ಲ ಉದ್ದೇಶಗಳಿಗೆ `ಶಕ್ತಿ’ ಯೋಜನೆ ಬಳಸಿಕೊಳ್ಳಬೇಕು. ಇದಕ್ಕೆ ಸರ್ಕಾರ ಯಾವದೇ ಮಿತಿ ಹಾಕದೆ ಎಲ್ಲ ಮಹಿಳೆಯರಿಗೂ ನಿರಂತರ ದೊರಕುವಂತೆ ಮಾಡಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು. ಮಹಿಳೆಯರಿಗೆ ನೀಡಿದ ಭರವಸೆಯನ್ನು ಸಂಪೂರ್ಣವಾಗಿ ಈಡೇರಿಸುವ ಗುರಿ ಹೊಂದಿರುವ ಸರ್ಕಾರದ ನಡೆಯನ್ನು ಗೌರವಿಸುತ್ತೇನೆ. ಯಾವದೇ ಕಾರಣಕ್ಕೂ ದುರುದ್ಧೇಶ ಅಥವಾ ನಿಯಮಗಳನ್ನು ಹಾಕುವದು ಬೇಡವೆಂದು ಸವದಿ ತಿಳಿಸಿದರು. ಕೆಲ ಹೊತ್ತು ಗೊಂದಲ: ಬೆಳಿಗ್ಗೆಯಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಬನಹಟ್ಟಿ ಬಸ್ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶಾಸಕ ಸಿದ್ದು ಸವದಿ ಬಸ್ ನಿಲ್ದಾಣದೊಳಗೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ಪರ…

Read More

ಉತ್ತರ ಕನ್ನಡ:  ರಾಜ್ಯದ ಕರಾವಳಿಯಲ್ಲಿ ಬಿಪರ್ ಜಾಯ್ ಚಂಡಮಾರುತ ಅಬ್ಬರ ಹಿನ್ನಲೆ ಜಿಲ್ಲೆಯ ಕಾರವಾರದ ಮಾಜಾಳಿ ಕಡಲತೀರದಲ್ಲಿ ಭಾರಿ ಕಡಲ ಕೊರತವಾಗಿದೆ. ಇನ್ನು ಅಲೆಗಳ ಹೊಡೆತಕ್ಕೆ ಪಿಚಿಂಗ್ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಡಲ ಕೊರೆತ ತಡೆಯಲು ಹಾಕಿದ್ದ ಪಿಚಿಂಗ್ (ತಡೆ ಗೋಡೆ) ಅಲೆಗಳ ಹೊಡೆತಕ್ಕ ಬೇರು ಸಮೇತ ಕಿತ್ತು ಬಂದಿದೆ. ಇನ್ನು ಎರಡು ದಿನಗಳ ಕಾಲ ಕಡಲ ಅಲೆಗಳು ಅಬ್ಬರಿಸಲಿದ್ದು, ಅಲೆಗಳ ಅಬ್ಬರಕ್ಕೆ ಪ್ರವಾಸಿಗರು ಆತಂಕಗೊಂಡಿದ್ದಾರೆ.

Read More