ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಾಸರವಾಡ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಎಮ್ಮೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಲ್ಲಯ್ಯ ಶಂಕ್ರಯ್ಯ ಮುದಗಲ್ಲಮಠ ಅನ್ನೋ ರೈತರಿಗೆ ಸೇರಿದ್ದ ಎಮ್ಮೆ ಇದಾಗಿದ್ದು, ಸಾಸರವಾಡ ಗ್ರಾಮದ ನದಿದಡದಲ್ಲಿ ಮೇಯಿಸಲು ಹೋದಾಗ ಈ ರ್ದುಘಟನೆ ನಡೆದಿದ್ದು, 50 ರಿಂದ 60 ಸಾವಿರ ರೂಪಾಯಿ ನಷ್ಟವನ್ನ ರೈತ ಅನುಭವಿಸಿದ್ದಾನೆ. ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Author: Prajatv Kannada
ರಾಮನಗರ: ನನಗೆ ರಾಜಕಾರಣದ (Politics) ಮೇಲೆ ಒಲವಿಲ್ಲ. ಆದರೆ ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ಬಾರಿಯೂ ನನಗೆ ಚುನಾವಣೆ (Election) ಎದುರಿಸುವ ಆಸಕ್ತಿ ಇರಲಿಲ್ಲ. ಆದ್ರೆ ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣದಲ್ಲಿದ್ದೇನೆ ಎಂದರು. ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ (BJP) ಜೊತೆ ಮೈತ್ರಿ ಬಗ್ಗೆ ಕೇಳಿದ್ದಕ್ಕೆ, ಇದೆಲ್ಲವೂ ಗಾಳಿ ಸುದ್ದಿ. ಆ ರೀತಿಯ ಯಾವುದೇ ಚರ್ಚೆ ಆಗುತ್ತಿಲ್ಲ. ಈ ವಿಚಾರವನ್ನು ನನ್ನ ಮುಂದೆ ಯಾರೂ ಪ್ರಸ್ತಾಪ ಮಾಡಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ನಾನು ಜಿಲ್ಲಾವಾರು ಸಭೆ ಮಾಡಿದ್ದೇನೆ. ಗೆದ್ದವರು ಹಾಗೂ ಸೋತವರ ಜೊತೆ ಚರ್ಚೆ ಮಾಡಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಉತ್ತರಿಸಿದರು. ಸಂಸದ ಡಿ.ಕೆ. ಸುರೇಶ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು, “ನನ್ನ ವಿಚಾರ ಬಿಡಿ, ರಾಮನಗರದ ಹಾಲಿ ಸಂಸದರ ವಿಚಾರವನ್ನೇ ಕೇಳಿ. ಭ್ರಷ್ಟಾಚಾರದ ಮಧ್ಯೆ ಚುನಾವಣೆ…
ಬೆಂಗಳೂರು: ಜನಸಾಮಾನ್ಯರಿಗೆ ಮಾತ್ರವಲ್ಲ ಕೈಗಾರಿಕೆಗಳಿಗೂ ಕರೆಂಟ್ ಶಾಕ್ ವಿದ್ಯುತ್ ಬಿಲ್ ಗೆ ಬೆದರಿ ಬಳಲಿ ಬೆಂಡಾದ ಸಣ್ಣ ಕೈಗಾರಿಕೆಗಳು. ಕೈಗಾರಿಕೆ ಬೀಗ ಹಾಕಿ ಸರ್ಕಾರಕ್ಕೆ ನಡೆಸುವಂತೆ ಕೀ ಕೊಡಲು ಮುಂದಾದ ಪೀಣ್ಯ ಸಣ್ಣ ಕೈಗಾರಿಕೆಗಳು ಏಷ್ಯಾದಲ್ಲಿ ಸುಪ್ರಸಿದ್ದ ಬೆಂಗಳೂರಿನ ಪೀಣ್ಯ ಕೈಗಾರಿಕೆ ಮೆಕಾನಿಕಲ್, ಗಾರ್ಮೆಂಟ್ ಸಣ್ಣ ಕೈಗಾರಿಕೆಗೆ ಹೆಸರುವಾಸಿ ಆದ್ರೆ ಕರೆಂಟ್ ಯೂನಿಟ್ ಬೆಲೆ ಹಾಗೂ ನಿಗದಿತ ಶುಲ್ಕ ಹೆಚ್ಚಳದಿಂದ ಕೈಗಾರಿಕೆ ನಡೆಸಲು ಹಿಂದೇಟು ಪೀಣ್ಯ ಕೈಗಾರಿಕೆ ವಲಯದಲ್ಲಿವೆ 12 ಸಾವಿರ ಸಣ್ಣ ಕೈಗಾರಿಕೆಇದರಲ್ಲಿ ಬಿಡಿಭಾಗ ತಯಾರಿಸುವ 5 ಸಾವಿರ ಮೆಕಾನಿಕಲ್ ಸಣ್ಣ ಕೈಗಾರಿಕೆ ಇವೆಲ್ಲ ಕರೆಂಟ್ ಮೇಲೆ ಅವಲಂಬಿತ ಕೈಗಾರಿಕೆಗಳುಕಮರ್ಷಿಯಲ್ ಕರೆಂಟ್ ಬಿಲ್ ಶೇ.30ರಷ್ಟು ಹೆಚ್ಚಳ. ಈ ಮೊದಲು ಪ್ರತಿ ಯೂನಿಟ್ ಗೆ 6.75 ರೂ ಇದೀಗ ಪ್ರತಿ ಯೂನಿಟ್ ಬೆಲೆ 8.50 ರೂ. ಹೆಚ್ಚಳ 0-1000 8.50 ರೂ. ಪ್ರತಿ ಯೂನಿಟ್ ನಿಗದಿತ ಶುಲ್ಕವೂ ಶೇ. 40-60ರಷ್ಟು ಹೆಚ್ಚಳ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಕೊಡಿ ಅದು ಬಿಟ್ಟು ಈ ರೀತಿ…
ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗ್ತಿದೆ. ಕೆಲವೆಡೆ ವಿರೋಧ ಕೂಡ ವ್ಯಕ್ತವಾಗ್ತಿದೆ. ಈ ನಡುವೆ ಶಕ್ತಿ ಯೋಜನೆಯ ಎಫೆಕ್ಟ್ ಓಲಾ, ಊಬರ್, ಮೆಟ್ರೋ, ಪ್ರೈವೇಟ್ ಬಸ್ ಗಳಿಗೂ ಸಹ ತಟ್ಟಿದ್ದು, ಓಲಾ, ಊಬರ್ ಬುಕ್ಕಿಂಗ್‌ನಲ್ಲಿ ಶೇ.30 ರಷ್ಟು ಇಳಿಕೆಯಾಗಿದೆ . ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮಹಿಳೆಯರು BMTC ಬಸ್‌ನತ್ತ ಮುಖ ಮಾಡಿದ್ದಾರೆ. ಆಸ್ಪತ್ರೆ, ಆಫೀಸ್, ಶಾಪಿಂಗ್, ಹೀಗೆ ವಿವಿಧ ಕೆಲಸಗಳಿಗೆ ನಗರದಲ್ಲಿ ಬಿಎಂಟಿಸಿಯನ್ನೇ ಹೆಚ್ಚು ಅವಲಂಬಿಸಿಕೊಂಡಿದ್ದಾರೆ. ಹೀಗಾಗಿ ಫ್ರೀ ಬಸ್ ಪ್ರಯಾಣದ ಎಫೆಕ್ಟ್ ಓಲಾ, ಊಬರ್‌ಗೂ ತಟ್ಟಿದೆ. ಶಕ್ತಿ ಯೋಜನೆ ಜಾರಿಯಾದ ಎರಡು ದಿನಗಳಿಂದ, ಓಲಾ-ಊಬರ್ ಚಾಲಕರಿಗೆ ಬುಕ್ಕಿಂಗ್‌ನಲ್ಲಿ ವಿಳಂಬವಾಗ್ತಿದೆ. ಗಂಟೆಗೆ ಒಂದೋ ಎರಡೋ ಬುಕ್ಕಿಂಗ್ ಬರುತ್ತಿದೆ. ಹೀಗಾಗಿ ಓಲಾ- ಊಬರ್, ಟ್ಯಾಕ್ಸಿ ಚಾಲಕರು ಆತಂಕದಲ್ಲಿದ್ದಾರೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ನಮ್ಮ ಹೊಟ್ಟೆ ಮೇಲೂ ಸರ್ಕಾರ ಹೊಡೆದಂತಾಗುತ್ತೆ. ಕನಿಷ್ಟ ಪಕ್ಷ ಸರ್ಕಾರ ನಮ್ಮ ವಾಹನಗಳ ಮೇಲಿರುವ ಪರ್ಮಿಟ್ ಟ್ಯಾಕ್ಸ್ ಆದ್ರೂ ಕಡಿಮೆ ಮಾಡಲಿ ಅಂತಾ ಒತ್ತಾಯಿಸಿದ್ದಾರೆ
ಬೆಂಗಳೂರು: ಶಾಸಕ ಜನಾರ್ದನ ರೆಡ್ಡಿ ಮತ್ತು ಪತ್ನಿ ಲಕ್ಷ್ಮೀ ಅರುಣಾ ರೆಡ್ಡಿ ಸಂಕಷ್ಟ ಆಸ್ತಿ ಜಪ್ತಿ ಮಾಡುವಂತೆ ಸಿಬಿಐ (CBI) ವಿಶೇಷ ಕೋರ್ಟ್ ಆದೇಶ ಕ್ರಿಮಿನಲ್ ಕೇಸ್ ಮುಗಿಯುವವರೆಗೆ ಒಟ್ಟು 77 ಆಸ್ತಿಗಳನ್ನು ಜಪ್ತಿ ಸಿಬಿಐ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಜನಾರ್ದನ ರೆಡ್ಡಿ ದಂಪತಿಗೆ ಸೇರಿದ ಒಟ್ಟು 124 ಆಸ್ತಿಗಳ ಜಪ್ತಿ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದೀಗ ನ್ಯಾಯಾಲಯ ಭ್ರಷ್ಟಾಚಾರ ತಡೆ ಕಾಯ್ದೆ, ಕ್ರಿಮಿನಲ್ ಲಾ ತಿದ್ದುಪಡಿ ಕಾಯ್ದೆ ಒಟ್ಟು 77 ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ. ಈ ಹಿಂದೆ 2023ರ ಜನವರಿ 12 ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಕರ್ನಾಟಕ ಗೃಹ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಹೈಕೋರ್ಟ್ ಚಾಟಿ ಬೀಸಿದ ಬಳಿಕ ಎಚ್ಚೆತ್ತುಕೊಂಡಿದ್ದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ. ಜನವರಿ 12 ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಪ್ರತಿಕ್ರಿಯೆಗೆ ಅನುಮತಿ ನೀಡಿತ್ತು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಿಬಿಐ…
ಬೆಂಗಳೂರು: ತಾಯಿನೇ ದೇವರು, ತಾಯಿನೇ ಎಲ್ಲಾ . ಆ ತಾಯಿ ಪ್ರೀತಿಗಾಗಿ ಎಷ್ಟೋ ಜನ ಹಪಹಪಿಸುತ್ತಾರೆ ಆದ್ರೆ ಇಲ್ಲೊಬ್ವಾಕೆ ತನ್ನ ಹೆತ್ತ ತಾಯುಯನ್ನ ಕೊಂದು ಸೂಟ್ ಕೇಸ್ ನಲ್ಲಿ ಶವ ಪ್ಯಾಕ್ ಮಾಡಿ ಸೀದಾ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಮಾಸ್ಟರ್ ಆಫ್ ಪಿಸಿಯೋ ಥೆರಪಿ ಮಾಡಿರೋ ಸೇನಾಲಿ ಸೇನ್ ಅನ್ನೋ 39ವರ್ಷದ ಮಹಿಳೆ ತನ್ನ 70ವರ್ಷ ತಾಯಿ ಬೀವಾ ಪಾಲ್ ನ ಕೊಲೆ ಮಾಡಿದ್ದಾಳೆ. ಇದಕ್ಕೆ ಕಾರಣ ಸೇನಾಲಿ ಅತ್ತೆ ಮತ್ತು ಅಮ್ಮನ ಜಗಳವಂತೆ. ಒಂದೆ ಮನೆಯಲ್ಲಿದ್ದ ಬೀಗರ ಜಗಳಕ್ಕೆ ಬೇಸತ್ತು ಬೀವಾ ಪೌಲ್ ಮಗಳಿಗೆ ನಿದ್ದೆ ಮಾತ್ರೆ ನುಂಗಿ ಸಾಯೋದಾಗಿ ಹೇಳಿದ್ದಾಳೆ. ಮಗಳು ಅಮ್ಮನಿಗೆ ಇಂದು ಮುಂಜಾನೆ 20 ಮಾತ್ರೆಗಳನ್ನ ನುಂಗಿಸಿದ್ದಾಳೆ. ನಂತರ ಸುಮಾರು11 ಗಂಟೆಗೆ ತಾಯಿ ಹೊಟ್ಟೆ ನೋವು ಅಂದಾಗ ಆಸ್ಪತ್ರೆಗೆ ಸೇರಿಸಬೇಕಾದ ಮಗಳು ವೇಲ್ ನಿಂದ ಕುತ್ತಿಗೆ ಜೀರಿದ್ದಾಳೆ. ಟ್ರ್ಯಾಲಿ ಸೂಟ್ ಕೇಸ್ ನಲ್ಲಿ ತಾಯಿಯನ್ನ ಪ್ಯಾಕ್ ಮಾಡಿ ತಂದೆ ಫೋಟೋ ಜೊತೆಗೆಗಿಟ್ಟು ಸೀದಾ ಮೈಕೋ…
ಸೂರ್ಯೋದಯ: 05.53 AM, ಸೂರ್ಯಾಸ್ತ : 06.46 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಉತ್ತರಾಯಣ, ವಸಂತ್ ಋತು, ತಿಥಿ: ಇವತ್ತು ದಶಮಿ 09:28 AM ತನಕ ನಂತರ ಏಕಾದಶಿ ನಕ್ಷತ್ರ: ಇವತ್ತು ರೇವತಿ 01:32 PM ತನಕ ನಂತರ ಅಶ್ವಿನಿ ಯೋಗ: ಇವತ್ತು ಸೌಭಾಗ್ಯ 05:55 AM ತನಕ ನಂತರ ಶೋಭಾನ ಕರಣ: ಇವತ್ತು ವಿಷ್ಟಿ 09:28 AM ತನಕ ನಂತರ ಬವ 09:05 PM ತನಕ ನಂತರ ಬಾಲವ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 11.10 AM to 12.45 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:50 ನಿಂದ ಮ.12:42 ವರೆಗೂ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು…
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ(Congress Government) ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ(Siddaramaiah) ಚಾಲನೆ ನೀಡಿದ್ದು ರಾಜ್ಯಾದ್ಯಂತ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಏನ್ ಹೇಳಿದ್ದಾರೆ ಗೊತ್ತಾ ಇಲ್ಲಿದೆ ನೋಡಿ. ಕಾಂಗ್ರೆಸ್ ಸರ್ಕಾರದಿಂದ ಐದು ಗ್ಯಾರಂಟಿಗಳ ಜಾರಿ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ನ ಗ್ಯಾರಂಟಿಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆ ಬಗ್ಗೆ ಚರ್ಚೆ ಮಾಡುವುದಕ್ಕೆ ಇನ್ನೂ ಸಮಯವಿದೆ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದರು. ಯಾವುದೇ ಕಾರ್ಯಕ್ರಮಕ್ಕೆ ಹಣ ಒದಗಿಸುವುದು ಕಷ್ಟವಲ್ಲ. ಫಲಾನುಭವಿಗಳಿಗೆ ಎಷ್ಟರಮಟ್ಟಿಗೆ ತಲುಪುತ್ತದೆ ಎಂಬುದು ಮುಖ್ಯ. ಬಾಡಿಗೆದಾರರಿಗೆ ಅಗ್ರಿಮೆಂಟ್ ಪೇಪರ್ ಕೊಡಲ್ಲವೆಂದು ಹೇಳ್ತಿದ್ದಾರೆ. ವಿದ್ಯುತ್ ದರ ಏರಿಕೆಗೆ 2 ರಾಷ್ಟ್ರೀಯ ಪಕ್ಷಗಳು ಕಾರಣ. 2017-18ರಲ್ಲೇ ಮುಂದೆ ಆಗುವ ಅನಾಹುತ ಬಗ್ಗೆ ನಾನು ಹೇಳಿದ್ದೆ ಎಂದರು.
ಬೆಂಗಳೂರು: ಇಂದಿರಾ ಕ್ಯಾಂಟೀನ್ ಪುನಾರಂಭಿಸುವ ಸಂಬಂಧ ಬಿಬಿಎಂಪಿ ಅಧಿಕಾರಿಗಳ ಸಭೆಯನ್ನು ಸಿಎಂ ಸಿದ್ದರಾಮಯ್ಯ ಕರೆದಿದ್ದು ಸಭೆಯಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಪುನಾರಾಂಭಿಸಲು ತೀರ್ಮಾನ ಮಾಡಿದ್ದಾರೆ. ಬೆಂಗಳೂರಲ್ಲಿ ಒಟ್ಟು 250 ಇಂದಿರಾ ಕ್ಯಾಂಟೀನ್ ಪುನಾ ತೆರೆಯಲು ಒಪ್ಪಿಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ 185 ಇಂದಿರಾ ಕ್ಯಾಂಟೀನ್ ಗಳನ್ನು ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಆರಂಭ ಮಾಡಲಾಗಿತ್ತು. ಜೊತೆಗೆ ಹತ್ತು ಮೊಬೈಲ್ ಕ್ಯಾಂಟೀನ್ ಗಳನ್ನು ಆರಂಭಿಸಲಾಗಿತ್ತು. ಆದರೆ ಇದೀಗ 172 ಕ್ಯಾಂಟೀನ್ ಗಳು ಕಾರ್ಯಾಚರಣೆ ಮಾಡುತ್ತಿವೆ. ಇಂದಿರಾ ಕ್ಯಾಂಟೀನ್ ಊಟದ ಮೆನುವಿನಲ್ಲಿ ಕೆಲವೊಂದು ಬದಲಾವಣೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಊಟದ ಮೆನು, ದರ ಪರಿಷ್ಕರಣೆ ಸೇರಿದಂತೆ ಒಂದಿಷ್ಟು ಬದಲಾವಣೆಗಳೊಂದಿಗೆ ಇಂದಿರಾ ಕ್ಯಾಂಟೀನ್ ಪುನಾರಾಂಭ ಮಾಡುವುದು ಸರ್ಕಾರದ ಉದ್ದೇಶವಾಗಿದೆ
ಬೆಂಗಳೂರು: ನಮ್ಮ ಮೆಟ್ರೋ (Namma Metro) ಕಾಮಗಾರಿಯಲ್ಲಿ ಇಲ್ಲಿಯವರೆಗೆ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದರೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ತನ್ನ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಖಾಸಗಿ ಸುದ್ದಿ ಸಂಸ್ಥೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. 2007 ರಲ್ಲಿ ಮೆಟ್ರೋ ನಿರ್ಮಾಣ ಕಾಮಗಾರಿ ಪ್ರಾರಂಭವಾದ ನಂತರ 38 ಜನರು ಸಾವನ್ನಪ್ಪಿದ್ದಾರೆ. 50 ಜನರು ಗಾಯಗೊಂಡಿದ್ದಾರೆ. 2023 ರ ಜನವರಿಯಲ್ಲಿ ಅಪಘಾತವನ್ನು ಹೊರತುಪಡಿಸಿ, ಎಲ್ಲಾ ಅಪಘಾತಗಳು ಗುತ್ತಿಗೆ ಸಿಬ್ಬಂದಿಯನ್ನು ಒಳಗೊಂಡಿವೆ. ಬಿಎಂಆರ್ಸಿಎಲ್ ರೀಚ್ 2 ವಿಸ್ತರಣೆಯಲ್ಲಿ (ಪರ್ಪಲ್ ಲೈನ್‌ನ ಪಶ್ಚಿಮ ಭಾಗ) ಕೇವಲ ಎರಡು ಸಾವುಗಳು ಸಂಭವಿಸಿವೆ ಎಂದು ಹೇಳಿದೆ. ಬಿಎಂಆರ್ಸಿಎಲ್ನ ಗೊಟ್ಟಿಗೆರೆಯಿಂದ ರೀಚ್ 6 ಎಲಿವೇಟೆಡ್ ಭಾಗದ ಕಾಮಗಾರಿಯಲ್ಲಿ ಡೆಲಿವರಿ ಬಾಯ್ ಸುಶೀಲ್ ಕಾಂಚನ್ ಮತ್ತು ಆನಂದಪ್ಪ ಇಬ್ಬರು ಸಾರ್ವಜನಿಕರು ಮೃತಪಟ್ಟಿದ್ದರು. ಒಟ್ಟು ಕಾಮಗಾರಿಯಲ್ಲಿ ಈ ಇಬ್ಬರು ಸೇರಿದಂತೆ ಏಳುನರು ಸಾವನ್ನಪ್ಪಿದ್ದರು. ಆದರೆ ಸುಶೀಲ್ ಅವರ ಕುಟುಂಬಕ್ಕೆ ಗುತ್ತಿಗೆದಾರರು ಪಾವತಿಸಿದ ಪರಿಹಾರದ ಮೊತ್ತವನ್ನು ಬಹಿರಂಗವಾಗಿಲ್ಲ.…