Author: Prajatv Kannada

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜನಸಂಖ್ಯೆಗೆ ಏನೂ ಕಡಿಮೆ ಇಲ್ಲ ಹಾಗೆ ಅದೇ ರೀತಿ ವೆಹಿಕಲ್ ಗಳಿಗೂ ಕೂಡ ಕಮ್ಮಿ ಇಲ್ಲ ಅಂತಾನೇ ಹೇಳಬಹುದು. ಮನೆಗೊಬ್ಬರಿಗೊಂದು ವಾಹನ ಇಟ್ಟುಕೊಂಡಿದ್ದಾರೆ. ಇದರಿಂದ ಕೆಲವೆಡೆ ಟ್ರಾಫಿಕ್ ಜಾಂ ಬಗ್ಗೆ ಕೇಳೋದೆ ಬೇಡ ಸುಸ್ತಾಗಿ ಹೋಗುತ್ತೆ! ಬಿಬಿಎಂಪಿ ವ್ಯಾಪ್ತಿಯಲ್ಲಿನ 191 ಕಿ.ಮೀ ಉದ್ದದ 12 ಹೈಡೆನ್ಸಿಟಿ ಕಾರಿಡಾರ್‌ಗಳನ್ನು 273 ಕೋಟಿ ರೂ. ವೆಚ್ಚದಲ್ಲಿಅಭಿವೃದ್ಧಿಪಡಿಸಲು ರಾಜ್ಯ ಸರಕಾರವು 2022ರ ಡಿ.17ರಂದು ಅನುಮೋದನೆ ನೀಡಿ ಆದೇಶಿಸಿತ್ತು. ಬಳಿಕ ಪಾಲಿಕೆಯು ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿರುವ ಮೂರು ಕಾರಿಡಾರ್‌ಗಳನ್ನು ಕೈಬಿಟ್ಟು, ಉಳಿದ 9 ಕಾರಿಡಾರ್‌ಗಳ ಅಭಿವೃದ್ಧಿಗೆ 2023ರ ಮಾ. 2ರಂದು ಟೆಂಡರ್‌ ಆಹ್ವಾನಿಸಿತ್ತು. 9 ಕಾರಿಡಾರ್‌ಗಳನ್ನು ಮೂರು ಪ್ಯಾಕೇಜ್‌ಗಳಾಗಿ ವಿಂಗಡಿಸಿ ಕರೆದಿದ್ದ ಟೆಂಡರ್‌ ಪ್ರಕ್ರಿಯೆಯನ್ನು ಅಂತಿಮಗೊಳಿಸಿ, ಅನುಮೋದನೆ ಕೋರಿ ಸರಕಾರದಿಂದ ರಚಿತವಾಗಿರುವ ಅಧಿಕಾರಯುಕ್ತ ಸಮಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆನಂತರ ಅಧಿಕಾರಯುಕ್ತ ಸಮಿತಿಯು ಸಭೆಯಲ್ಲಿಕೈಗೊಂಡ ನಿರ್ಣಯದಂತೆ ನಗರಾಭಿವೃದ್ಧಿ ಇಲಾಖೆಯು ಮಾ. 23ರಂದು ಕಾರಿಡಾರ್‌ಗಳ ಅಭಿವೃದ್ಧಿ ಕಾಮಗಾರಿಯ ಟೆಂಡರ್‌ಗಳಿಗೆ ಅನುಮೋದನೆ ನೀಡಿ ಆದೇಶಿಸಿದೆ. ವಿಧಾನಸಭಾ ಚುನಾವಣೆ ಘೋಷಣೆಗೆ…

Read More

ಬೆಂಗಳೂರು: ಗೃಹಜ್ಯೋತಿ ಕಾರ್ಯಕ್ರಮ ಅನುಷ್ಠಾನ ವಿಚಾರವಾಗಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಉನ್ನತ ಮಟ್ಟದ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಹೊಸ ಮನೆಗಳಿಗೆ ದಾಖಲೆ ಇರಲ್ಲ. ಹಾಗಾಗಿ ಹೊಸ ಮನೆಗಳಿಗೂ ಫ್ರೀ ಕರೆಂಟ್ ನೀಡಲಾಗುವುದು. ಹೊಸದಾಗಿ ಸಂಪರ್ಕದ ಮನೆಗಳಿಗೆ, ಹೊಸ ಮನೆ ಬಾಡಿಗೆದಾರರಿಗೂ ಇದು ಅನ್ವಯವಾಗಲಿದೆ. ಒಂದು ವರ್ಷದ ತನಕ ಈ ನಿಯಮ ಇರುತ್ತದೆ. ಆ ಬಳಿಕ ಅವರು ಬಳಸಿದ ವಾರ್ಷಿಕ ಸರಾಸರಿ ಆಧಾರದ ಮೇಲೆ ಯೂನಿಟ್ ಮರು ಪರಿಷ್ಕರಣೆ ಮಾಡಲಾಗುವುದು. ಉಳಿದಂತೆ ಎಲ್ಲ ಉಚಿತ ಕರೆಂಟ್ ಮಾರ್ಗಸೂಚಿಗಳು ಹೊಸ ಮನೆ ಸಂಪರ್ಕ, ಹೊಸ ಮನೆ ಬಾಡಿಗೆದಾರರಿಗೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದರು. ಹೊಸ ಮನೆಗೆ ಬರುವವರಿಗೆ ದಾಖಲೆ ಇರಲ್ಲ. ಅವರಿಗೆ 12 ತಿಂಗಳ ಸರಾಸರಿಯಂತೆ 53 ಯುನಿಟ್ ಮತ್ತು 10% ಹೆಚ್ಚುವರಿ ಸೇರಿಸಿ ಒಟ್ಟು 58 ಅಥವಾ 59 ಯೂನಿಟ್ ನೀಡಲಾಗುವುದು. ಹೊಸ ಮನೆಯ ಬಾಡಿಗೆದಾರರಿಗೂ ಇದು ಅನ್ವಯ. ಜೊತೆಗೆ ಆ ಆರ್‌ಆರ್ ನಂಬರ್‌ನಲ್ಲಿ ಇರುವ ಹಳೆಯ ಬಾಡಿಗೆದಾರರಿಗೂ…

Read More

ಬೆಂಗಳೂರು: ಮುಖ್ಯಮಂತ್ರಿ, ಡಿಸಿಎಂ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ, ನಗರದಲ್ಲಿ ನಡೆದಿರುವ ಒತ್ತುವರಿಗಳನ್ನು ತೆರವು ಮಾಡಲು ಮುಂದಾಗಿದ್ದು, ಈ ಸಂಬಂದ ಇಂದು ಮಹತ್ವದ ಸಭೆ ಕರೆಯಲಾಗಿದೆ. ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿ ದಯಾನಂದ ನೇತೃತ್ವದಲ್ಲಿ ಬಿಬಿಎಂಪಿ ಎಸ್​ಡಬ್ಲ್ಯುಡಿ ಇಂಜಿನಿಯರ್ಸ್, ಸರ್ವೆ ಅಧಿಕಾರಿ, ತಹಶೀಲ್ದಾರ್​​ ಅವರ ಸಭೆ ನಡೆಯಲಿದೆ ಇಂದು ರಾಜಕಾಲುವೆ ಒತ್ತುವರಿ ತೆರುವು ಸಂಬಂಧ ಮಹತ್ವದ ಸಭೆ ನಡೆಯಲಿದ್ದು, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಎಸ್​ಡಬ್ಲ್ಯುಡಿ ಇಂಜಿನಿಯರ್ಸ್, ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ, ಸರ್ವೇ ಆಫಿಸರ್ಸ್, ಬೆಂಗಳೂರು ನಗರ ತಹಸೀಲ್ದಾರ್ಸ್ ಸಭೆಯಲ್ಲಿರಲಿದ್ದಾರೆ. ಸರ್ವೇ ಕಾರ್ಯ ಮುಗಿದಿದ್ದು ಸದ್ಯದಲ್ಲೇ ಒತ್ತುವರಿ ಮಾರ್ಕಿಂಗ್ ಕಾರ್ಯ ಶುರುವಾಗಲಿದೆ ಎಂದು ತಿಳಿಸಿದ್ದಾರೆ.

Read More

ಬೆಂಗಳೂರು: ಆಟೋ ಚಾಲಕರ ಪಾಲಿಗೆ ಪ್ರಯಾಣಿಕರೇ ದೇವರು.. ಆದರೆ ಕೆಲವರು ಕನ್ನಡ ಭಾಷೆ ಬಾರದ ಪ್ರಯಾಣಿಕರು ಸಿಕ್ಕರೆ ಸಾಕು  ಸುಲಿಗೆಗೆ ಇಳಿದು ಬಿಡ್ತಾರೆ.. ಹಣಕಾಸಿನ ವಿಚಾರದಲ್ಲಿ ಆಟೋ ಚಾಕಲ ಮತ್ತು ಪ್ರಯಾಣಿಕರ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿದೆ.. ಈ ಫೋಟೋದಲ್ಲಿ ಕಾಣ್ತಿರೋ ವ್ಯಕ್ತಿಯ ಹೆಸರು ಅಹಮದ್.. ಮೂಲತಃ ಒರಿಸ್ಸಾದವನು.. ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದ.. ಈತ ಮತ್ತು ಈತನ ಸ್ನೇಹಿತ ಆಯೂಬ್ ಇಬ್ಬರು ಸಂಬಂಧಿಕನೊಬ್ಬನನ್ನು ಕರೆದುಕೊಂಡು ಹೋಗಲು ಮೆಜೆಸ್ಟಿಕ್ ನಿಂದ ಆಟೋವನ್ನ ಹತ್ತಿದ್ದಾರೆ.. ಆದರೆ ಸಂಬಂಧಿಕ ಎಲ್ಲಿ ಇಳಿಯಬಹುದು ಎಂಬ ಕನ್ಫೂಸ್ ಆಗಿದ್ದಾರೆ.. ಅಷ್ಟೇ ಆಟೋ ಚಾಲಕ ಅಶ್ವಥ್  ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಬಿಡಲು ಪ್ರಯಾಣಿಕರ ಬಳಿ ಹೆಚ್ಚು ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ.. ಆದರೆ ಹಣ ನೀಡಲು ಪ್ರಯಾಣಿಕ ನಿರಾಕರಿಸಿದ್ದೆ ಪ್ರಯಾಣಿಕ ಅಹಮದ್ ಮತ್ತು ಆಯೂಬ್ ಮೇಲೆ ಹಲ್ಲೆ ನಡೆಸಿದ್ದಾನೆ.. ಇದರಿಂದ ಆಯೂಬ್ ಕಾಲಿಗೆ ಪೆಟ್ಟು ಬಿದ್ದಿದ್ರೆ.. ಅಹಮದ್ ಗಂಭೀರವಾಗಿ ಗಾಯಗೊಂಡಿದ್ದಾನೆ.. ಅಹಮದ್ ನನ್ನು ಆಸ್ಪತ್ರೆಗೆ ಸಾಗಿಸಿದರಾದ್ರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಆಟೋ…

Read More

ಬೊಗೋಟಾ: ವಿಮಾನ ಅಪಘಾತದಿಂದ ಅಮೆಜಾನ್‌ ದಟ್ಟ ಅರಣ್ಯದಲ್ಲಿ ಕಳೆದ 40 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡಿ ಗೆದ್ದು ಬಂದಿರುವ ನಾಲ್ವರು ಮಕ್ಕಳನ್ನು ರಕ್ಷಿಸಿದ ರಕ್ಷಣಾ ತಂಡದ ಸದಸ್ಯರು ಸಂದರ್ಶನ ನೀಡಿದ್ದು, ಈ ವೇಳೆ ಹಲವು ಸ್ವಾರಸ್ಯಕರ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ವಿಮಾಣ ಅಪಘಾತವಾಗಿ ಮಕ್ಕಳ ತಾಯಿ, ಅಜ್ಜಿ ಹಾಗೂ ಪೈಲರ್ ದಾರುಣವಾಗಿ ಸಾವನ್ನಪ್ಪಿದ್ದರು. ಈ ವೇಳೆ 13, 9, 5 ಮತ್ತು 1 ವರ್ಷದ ನಾಲ್ವರು ಮಕ್ಕಳು ಪವಾಡ ಸದೃಶ್ಯ ರೀತಿಯಲ್ಲಿ ಅಮೆಜಾನ್‌ ಕಾಡಿನಲ್ಲಿ ಜೀವ ಉಳಿಸಿಕೊಂಡಿದ್ದಾರೆ. ಒಂದು ತಿಂಗಳಿಗೂ ಹೆಚ್ಚ ದಿನಗಳ ಕಾಲ ಕಾಡಿನಲ್ಲಿ ಸಿಲುಕಿದ್ದ ಮಕ್ಕಳನ್ನು ರಕ್ಷಿಸಲಾಯಿತು. ಆಗ ಮಕ್ಕಳ ಆರೋಗ್ಯ ಸ್ಥಿತಿಗತಿ ಹೇಗಿತ್ತು? ಅವರು ಏನು ಹೇಳಿದರು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪುಟ್ಟ ಮಗುವನ್ನು ಎತ್ತಿಕೊಂಡಿದ್ದ ಲೆಸ್ಲಿ ನನ್ನನ್ನು ಕಂಡಾಕ್ಷಣ ಓಡಿ ಬಂದಳು. ಬಂದವಳೇ, “ನನಗೆ ಹಸಿವಾಗಿದೆ” ಎಂದಳು. ಇಬ್ಬರು ಹುಡುಗರಲ್ಲಿ ಒಬ್ಬ ಮಲಗಿದ್ದ. ಅವರು ಕೂಡ ಎದ್ದು ಬಂದು “ನಮ್ಮ ತಾಯಿ ಸತ್ತಿದ್ದಾರೆ” ಎಂದರು ಅಂತ…

Read More

ಬೀಜಿಂಗ್‌: ಸುದ್ದಿ ವರದಿ ಮಾಡುತ್ತಿದ್ದ ಕೊನೆಯ ಭಾರತದ ಪತ್ರಕರ್ತನಿಗೆ ದೇಶವನ್ನು ತೊರೆಯುವಂತೆ ಚೀನಾ ಸೂಚನೆ ನೀಡಿದೆ. ಕೋವಿಡ್‌ 19 ಬಳಿಕ ವಿದೇಶಿ ಪತ್ರಕರ್ತರಿಗೆ ನಿರ್ಬಂಧ ವಿಧಿಸಿದ್ದರೂ ಚೀನಾದಲ್ಲಿ ಭಾರತದ ಮಾಧ್ಯಮಗಳು ಕೆಲಸ ಮಾಡುತ್ತಿದ್ದವು. ಪ್ರಸಾರ ಭಾರತಿಯ ಇಬ್ಬರು ಮತ್ತು ಹಿಂದೂ ಪತ್ರಿಕೆಯ ವರದಿಗಾರರ ವೀಸಾವನ್ನು ಈ ವರ್ಷದ ಏಪ್ರಿಲ್‌ನಲ್ಲಿ ಚೀನಾ ನವೀಕರಿಸಿರಲಿಲ್ಲ. ಈಗ ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾದ ವರದಿಗಾರನಿಗೆ ದೇಶವನ್ನು ತೊರೆಯುವಂತೆ ಸೂಚಿಸಿದೆ. ಚೀನಾದಲ್ಲಿ ವಾಕ್‌ ಸ್ವಾತಂತ್ರ್ಯ ಇಲ್ಲ ಎನ್ನುವುದು ಗೊತ್ತಿರುವ ವಿಚಾರ. ಸರ್ಕಾರದ ಎಡವಟ್ಟುಗಳು ವಿಶ್ವಕ್ಕೆ ತಿಳಿಯಬಾರದು ಎಂದು ಬಹಳ ಮಾಧ್ಯಮಗಳಿಗೆ ಷರತ್ತು ವಿಧಿಸುತ್ತದೆ. ಅಲ್ಲಿನ ಪ್ರಜೆಗಳಿಗೆ ಭಾರತ ಸುದ್ದಿ ವೆಬ್‌ಸೈಟ್‌ ವೀಕ್ಷಣೆಯ ಸ್ವಾತಂತ್ರ್ಯವೂ ಇಲ್ಲದಾಗಿದೆ. ಭಾರತದ ಸುದ್ದಿ ಮಾಧ್ಯಮಗಳ ವೆಬ್‌ಸೈಟ್‌ಗಳ ಮೇಲೆ ಚೀನಿ ಸರ್ಕಾರ ಈ ಹಿಂದೆಯೇ ಸೆನ್ಸಾರ್‌‌ ಕತ್ತರಿ ಪ್ರಯೋಗಿಸಿತ್ತು. ಚೀನಾದ ಮಂದಿ ವಿಪಿಎನ್‌ ಸರ್ವರ್‌ ಮೂಲಕ ಭಾರತದ ವೆಬ್‌ಸೈಟ್‌ಗಳನ್ನು ನೋಡುತ್ತಿದ್ದರು. ಭಾರತದ ವಾಹಿನಿಗಳನ್ನು ಐಪಿ ಟಿವಿ ಮೂಲಕ ವೀಕ್ಷಿಸಬಹುದಾಗಿತ್ತು. ಆದರೆ ಇದಕ್ಕೂ ಚೀನಾ ಕತ್ತರಿ ಹಾಕುವಲ್ಲಿ…

Read More

ಭೋಪಾಲ್: ಮೇಕೆಯೊಂದಿಗೆ (Goat) ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಆರೋಪದ ಮೇಲೆ ಓರ್ವ ಆರೋಪಿಯನ್ನು ಬಂಧಿಸಿದ ಪ್ರಕರಣ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ಸೆಹೋರ್‌ನ ಭೇರುಂಡ ಪೊಲೀಸ್ ಠಾಣಾ ವ್ಯಾಪ್ತಿಯ ನೀಲಕಂಠ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಮೇಕೆಯ ಮಾಲೀಕ ನೀಡಿದ ದೂರಿನ ಅನ್ವಯ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಲೆ ಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇಕೆಗಳನ್ನು ಮೇಯಿಸುತ್ತಿದ್ದಾಗ ಅದರಲ್ಲಿ ಒಂದು ಮೇಕೆ ನಾಪತ್ತೆಯಾಗಿತ್ತು. ಸ್ವಲ್ಪ ದೂರದಲ್ಲಿ ಮೇಕೆಯ ಕೂಗು ಕೇಳಿಸಿದ್ದು, ಆರೋಪಿಗಳು ಅದರೊಂದಿಗೆ ಅಸ್ವಾಭಾವಿಕ ಕೃತ್ಯ ಎಸಗುತ್ತಿರುವುದನ್ನು ನೋಡಿದ್ದಾಗಿ ದೂರು ನೀಡಿರುವ ಮೇಕೆಯ ಮಾಲೀಕ ತಿಳಿಸಿದ್ದಾರೆ.

Read More

ಶ್ರೀನಗರ: ಜಮ್ಮು-ಕಾಶ್ಮೀರದ (Jammu Kashmir) ನೌಶೆರಾ ಪಟ್ಟಣದ ನಿವಾಸಿ ಸಿಮ್ರಾನ್‌ ಬಾಲಾ (Simran Bala) ಅವರು ಕೇಂದ್ರ ಲೋಕಸೇವಾ ಆಯೋಗ (UPSC) ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳ (CAPF) ಪರೀಕ್ಷೆಯಲ್ಲಿ ತೇರ್ಗಡೆಯಾದ ರಾಜ್ಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವರ್ಷ ಯುಪಿಎಸ್‌ಸಿ ಸಿಎಪಿಎಫ್‌ಗೆ ಅರ್ಹತೆ ಪಡೆದ 151 ಅಭ್ಯರ್ಥಿಗಳ ಪೈಕಿ 82ನೇ ರ‍್ಯಾಂಕ್‌ ಪಡೆಯುವ ಮೂಲಕ ಸಿಮ್ರಾನ್‌ ಬಾಲಾ ಅವರು ಇತಿಹಾಸ ನಿರ್ಮಿಸಿದ್ದಾರೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಜಮ್ಮು ಮತ್ತು ಕಾಶ್ಮೀರದ ಏಕೈಕ ಹುಡುಗಿ ನಾನು. ನನಗೆ ಹೆಮ್ಮೆ ಎನಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದವಳು. ನನ್ನ ಪ್ರದೇಶದಲ್ಲಿ ಗಡಿಯಾಚೆಗಿನ ಗುಂಡಿನ ದಾಳಿಗಳನ್ನು ನಾನು ನೋಡಿದ್ದೇನೆ. ಇದು ನನ್ನನ್ನು ಸಿಎಪಿಎಫ್‌ಗೆ ಸೇರಲು ಪ್ರೇರೇಪಿಸಿತು. ಇದರಿಂದ ನಾನು ಗಡಿ ಪ್ರದೇಶದಲ್ಲಿಯೂ ಸೇವೆ ಸಲ್ಲಿಸಬಹುದು ಎಂದು ಸಿಮ್ರಾನ್ ಬಾಲಾ ಪ್ರತಿಕ್ರಿಯಿಸಿದ್ದಾರೆ. ನನ್ನ ಕನಸು ನನಸಾಗಿದೆ. ನಾನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸಹಾಯಕ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದೇನೆ. ನನ್ನ ಕರ್ತವ್ಯವನ್ನು…

Read More

ಲಕ್ನೋ: ಫ್ಯಾಷನ್‌ ರನ್‌ವೇನಲ್ಲಿ ರ‍್ಯಾಂಪ್‌ವಾಕ್‌ (Ramp Walk) ಮಾಡುತ್ತಿದ್ದ ವೇಳೆ ಕಬ್ಬಿಣದ ಪಿಲ್ಲರ್‌ ಬಿದ್ದು 24 ವರ್ಷದ ಮಾಡೆಲ್‌ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ ನಡೆದಿದೆ. ಮೃತ ಮಾಡೆಲ್‌ ವಂಶಿಕಾ ಚೋಪ್ರಾ ಎಂದು ಗುರುತಿಸಲಾಗಿದೆ. ನೋಯ್ಡಾದ ಸೆಕ್ಟರ್‌ 16ಎ ನಲ್ಲಿರುವ ಫಿಲ್ಮ್‌ ಸಿಟಿಯ (Noida Film City) ಲಕ್ಷ್ಮೀ ಸ್ಟುಡಿಯೋನಲ್ಲಿ ಅಪಘಾತ ಸಂಭವಿಸಿದೆ. ಲೈಟಿಂಗ್‌ ವ್ಯವಸ್ಥೆಗಾಗಿ ಕಬ್ಬಿಣದ ಪಿಲ್ಲರ್‌ ನಿರ್ಮಿಸಲಾಗಿತ್ತು. ಅದು ವೇದಿಕೆ ಮೇಲೆ ಬಿದ್ದು ಮಾಡೆಲ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬಾಬಿ ರಾಜ್‌ ಎಂಬ ವ್ಯಕ್ತಿ ಸಹ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಷನ್ ಶೋ (Fashion Show) ಆಯೋಜಕರು ಮತ್ತು ಲೈಟಿಂಗ್ ಕಾರ್ಯದಲ್ಲಿ ತೊಡಗಿದ್ದ ನಾಲ್ವರನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಶಿಕಾ ಸಾವಿನ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿರುವ ಹೆಚ್ಚುವರಿ ಡಿಸಿಪಿ ಮೋಹನ್ ಅವಸ್ತಿ, ಫ್ಯಾಷನ್ ಶೋಗೆ ಅನುಮತಿ…

Read More

ಬೆಳಗಾವಿ: ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಇದೀಗ ವರದಿ ಬಗ್ಗೆ ಕೇಂದ್ರ ಸರ್ಕಾರವೂ ಉತ್ತರ ನೀಡಿದೆ. ಈಗ ಅದಕ್ಕೆ ಕರ್ನಾಟಕ‌ ಸರ್ಕಾರ ಮರು ಉತ್ತರ ಕೊಡಬೇಕಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಜಾಮದಾರ (dr. sivananda jamadar) ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಲಿಂಗಾಯತ ಧರ್ಮ ವಿಚಾರದಲ್ಲಿ ಏನೆಲ್ಲ ನಡೆದಿದೆ ಗೊತ್ತು. ಹೆಚ್​.ಡಿ ಕುಮಾರಸ್ವಾಮಿ ಲಿಂಗಾಯತ ಧರ್ಮದ ಫೈಲ್ ಮುಟ್ಟಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು ಎಂದು ಕಿಡಿಕಾರಿದ್ದಾರೆ. ಬಿಎಸ್​ ಯಡಿಯೂರಪ್ಪ ಸಹ ಲಿಂಗಾಯತ ವಿರೋಧಿಗಳಂತೆ ನಡೆದುಕೊಂಡರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಏನೆಲ್ಲ ಮಾಡಿದ್ರು ಅಂತಾ ಗೊತ್ತಿದೆ. ಲಿಂಗಾಯತ ಧರ್ಮದ ವಿಚಾರವಾಗಿ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣದಲ್ಲಿ ಹಲವು ಹೋರಾಟಗಳು ನಡೆದಿವೆ ಎಂದರು.

Read More