ಬೆಳಗಾವಿ: ಲೋಕಸಭೆ ಚುನಾವಣೆವರೆಗೆ (Loka Sabha Elections 2024) ಮಾತ್ರ ಗುದ್ದಾಡಿಕೊಂಡು ಐದು ಗ್ಯಾರಂಟಿ (Congress Guarantees) ಯೋಜನೆಗಳನ್ನು ಮುಂದುವರಿಸುತ್ತಾರೆ. ನಂತರ ಕಾಂಗ್ರೆಸ್ನವರು ಜನರಿಗೆ ಮೋಸ ಮಾಡುತ್ತಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದ್ದಾರೆ. ಜಿಲ್ಲೆಯ ಅಥಣಿಯಲ್ಲಿ ಕಾರ್ಯಕರ್ತರ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಮುಂದುವರಿಸಿದರೆ ಅಭಿವೃದ್ಧಿಕಾರ್ಯ ಬಂದ್ ಮಾಡಬೇಕಾಗುತ್ತದೆ. ಇದರಿಂದ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು. ನಾವು ಯಾರೂ ಗ್ಯಾರಂಟಿಗಳ ಬಗ್ಗೆ ಮಾತನಾಡಬಾರದು ಎಂದು ಬಿಜೆಪಿ ಮುಖಂಡರು, ನಾಯಕರಲ್ಲಿ ನಾನು ಮನವಿ ಮಾಡುತ್ತೇನೆ ಎಂದು ಹೇಳಿದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ನಾಯಕರು ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ, ಜನ ಮತ ಹಾಕಿದ್ದಾರೆ, ಅವರಿಗೂ ಇದೆ, ನಮಗೂ ಇದೆ. ಆಮೇಲೆ ತಪ್ಪು ಮಾಡಿದರೆ ಮಾತಾಡೋಣ ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಎರಡು ಸ್ಥಾನಕ್ಕೆ ಸೀಮಿತ ಮಾಡುತ್ತೇವೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಆಗಲಿ ಆಗಲಿ ಬಹಳ ಸಂತೋಷ ಬಹಳ ಸಂತೋಷ ಎಂದರು.
Author: Prajatv Kannada
ಕಾರವಾರ: ಅರಬ್ಬೀ ಸಮುದ್ರದಲ್ಲಿ ಬಿಪೋರ್ ಜಾಯ್ ಚಂಡಮಾರುತ (Biporjoy Cyclone) ಅಬ್ಬರ ಜೋರಾದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ (Uttar Kannada) ರವೀಂದ್ರನಾಥ ಟ್ಯಾಗೋರ್ ಬೀಚ್ (Rabindranath Tagore Beach) ಕಡಲ್ಕೊರೆತ (Sea Erosion) ಉಂಟಾಗಿದೆ. ಗಾಳಿಯ ರಭಸಕ್ಕೆ 3 ರಿಂದ 4 ಮೀಟರ್ ಎತ್ತರದಷ್ಟು ಅಲೆಗಳು ಏಳುತ್ತಿದ್ದು, ಕಡಲತೀರಕ್ಕೆ ಅಪ್ಪಳಿಸುತ್ತಿವೆ. ಅಲೆಗಳ ಹೊಡೆತಕ್ಕೆ ತೀರಪ್ರದೇಶದ ಮರಳು ಕೊಚ್ಚಿ ಹೋಗುತ್ತಿದೆ. ಚಂಡಮಾರುತದಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಇನ್ನು ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇನ್ನು ಚಂಡಮಾರುತ ಪರಿಣಾಮ ಕರಾವಳಿಯಲ್ಲಿ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಕಡಲಕೊರೆತ ಹಿನ್ನಲೆ ಮೀನುಗಾರರು ದೋಣಿಗಳನ್ನ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಅಲೆಗಳ ಹೊಡೆತಕ್ಕೆ ಬೋಟ್‌ಗಳು ಸಿಲುಕದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಜಿಲ್ಲಾಡಳಿತ ಕಡಲತೀರದ ಸಮುದ್ರಕ್ಕಿಳಿಯದಂತೆ ಪ್ರವಾಸಿಗರಿಗೆ ಸೂಚಿಸಿದೆ.
ದಾವಣಗೆರೆ: ಮಹಿಳೆಯರು ಅಂದರೆ ಮಹಿಳೆಯರು, ಮತ್ಯಾಕೆ ಆ ಚೀಟಿ, ಈ ಚೀಟಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಪ್ರಶ್ನಿಸಿದ್ದಾರೆ. ಶಕ್ತಿ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬೇರೆ ರಾಜ್ಯದ ಮಹಿಳೆಯರೂ ಬಸ್ಸಿನಲ್ಲಿ ಉಚಿತವಾಗಿ (Free bus travel for women) ಸಂಚರಿಸಲಿ. ಸರ್ಕಾರ ಬಹಳ ಷರತ್ತು (Condition) ಹಾಕಬಾರದು. ಈ ಬಗ್ಗೆ ಅಧಿವೇಶನದಲ್ಲೂ ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದರು. ಯಾವುದೇ ದಾಖಲೆ ಇರಲಿ ಬಿಡಲಿ. ಅವರು ಹೆಣ್ಣುಮಕ್ಕಳಾಗಿದ್ದರೆ ಸಾಕು. ಮಹಿಳೆಯರ ಉಚಿತ ಓಡಾಟಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಷರತ್ತುಗಳಿಗೆ ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಮೊದಲ ಗ್ಯಾರಂಟಿಯನ್ನ ರಾಜ್ಯ ಸರ್ಕಾರ ಭಾನುವಾರ ಈಡೇರಿಸಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣದ ನಾರಿ ಶಕ್ತಿ ಯೋಜನೆಯನ್ನ ರಾಜ್ಯ ಸರ್ಕಾರ ಇಂದಿನಿಂದ ಜಾರಿಗೊಳಿಸಿದೆ.
ರಾಯಚೂರು: ರಾಯಚೂರು ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ದೇವದುರ್ಗ ತಾಲೂಕಿನ ಗೆಜ್ಜೆಬಾವಿದೊಡ್ಡಿ ಗ್ರಾಮದಲ್ಲಿ ಸಿಡಿಲು ಬಡಿದು ಮೌನೇಶ (35) ಎಂಬವರು ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ದೇವದುರ್ಗ ಕ್ಷೇತ್ರದ ಶಾಸಕಿ ಕರಿಯಮ್ಮ ನಾಯಕ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಬೆಂಗಳೂರು: ಚಿಕ್ಕಪೇಟೆಯಲ್ಲಿ ನೆದರ್ ಲ್ಯಾಂಡ್ ಪ್ರಜೆ ಪೆಡ್ರೋ ಮೊಟಾ ಯೂಟ್ಯೂಬರ್ ಮೇಲೆ ಕಿರುಕುಳ ಪ್ರಕರಣ ಆರೋಪಿ ನವಾಬ್ ನನ್ನು ಚಿಕ್ಕಪೇಟೆ ಪೊಲೀಸರು ಸುಮೋಟೋ ಕೇಸ್ ನಡಿ ಬಂಧಿಸಿದ್ದಾರೆ. ನವಾಬ್ ಹಯಾತ್ ಶರೀಫ್ ಬಂಧಿತ ಆರೋಪಿ. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸ್, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿದೇಶಿ ಪ್ರವಾಸಿಗರೊಂದಿಗೆ ಇಂತಹ ಅನುಚಿತ ವರ್ತನೆಯನ್ನು ಸಹಿಸುವುದಿಲ್ಲ ಎಂದು ಹೇಳಿದೆ. ದರ್‌ಲ್ಯಾಂಡ್ ಮೂಲದ ಮ್ಯಾಡ್ಲಿ ರೋವರ್ (Madly Rover) ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವೀಡಿಯೋ ಮಾಡುತ್ತಾ ಸುತ್ತುತ್ತಿದ್ದರು. ಸಂಡೇ ಬಜಾರ್‌ನಲ್ಲಿ ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗ ನವಾಬ್ ಹಯಾತ್ ಶರೀಫ್ ವಿಡಿಯೋ ಮಾಡದಂತೆ ಹಲ್ಲೆಗೆ ಯತ್ನಿಸಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ (Social Meida) ವೀಡಿಯೋ ಹರಿದಾಡುತ್ತಿದ್ದಂತೆ ಬಹಳ ಟೀಕೆ ವ್ಯಕ್ತವಾಗಿತ್ತು. ನೆಟ್ಟಿಗರು ಖಂಡನೆ ವ್ಯಕ್ತಪಡಿಸಿ ಬೆಂಗಳೂರು ಪೊಲೀಸರಿಗೆ (Bengaluru Police) ಟ್ಯಾಗ್ ಮಾಡಿ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವೀಟ್ ಮಾಡಿದ್ದರು.
ಬೆಂಗಳೂರು: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಹಿನ್ನೆಲೆ ಜಾಥಾಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ಎಂಜಿ.ರಸ್ತೆಯ ಮಹಾತ್ಮಗಾಂಧಿ ಪ್ರತಿಮೆಯ ಬಳಿ ಕಾರ್ಯಕ್ರಮಕ್ಕೆ ಚಾಲನೆ ಕಾರ್ಮಿಕ ಇಲಾಖೆ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಾಲಾ- ಕಾಲೇಜು ವಿಧ್ಯಾರ್ಥಿಗಳು, NCC ವಿಧ್ಯಾರ್ಥಿಗಳು ಭಾಗಿ. ಎಂ.ಜಿ ರಸ್ತೆ ಬಳಿಯ ಗಾಂಧಿ ಪ್ರತಿಮೆ ಬಳಿ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಜಾಥಾಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಜಾಥಾಗೆ ಚಾಲನೆ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಯಾರಾದ್ರೂ ಬಾಲ ಕಾರ್ಮಿಕರು ಕಂಡರೆ ಕೆಲಸದಿಂದ ಬಿಡಿಸಿ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಜಾತಿ ವ್ಯವಸ್ಥೆ ಪದ್ಧತಿಯಿಂದಾಗಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಗುಲಾಮಗಿರಿ ಮನಸ್ಥಿತಿಯಿಂದ ಹೊರ ಬರಬೇಕು ಎಂದರು.
ಬೆಂಗಳೂರು: ಭಾವನೆಗಳನ್ನು ಕೆರಳಿಸುವುದು ಸುಲಭ. ಇದರಿಂದ ಸಂಘರ್ಷಗಳಾಗಬಹುದೇ ಹೊರತು ಜನರ ಬದುಕಿಗೆ ಉಪಯೋಗ ಆಗುವುದಿಲ್ಲ. ಸಿದ್ಧಲಿಂಗಯ್ಯ ಅವರು ಜನಸಾಮಾನ್ಯರ ಬದುಕಿಗಾಗಿ ಹೋರಾಟ ಮಾಡಿದವರು ಎಂದು ಕಾಂಗ್ರೆಸ್ ನಾಯಕ ವಿ.ಆರ್. ಸುದರ್ಶನ್ ಹೇಳಿದರು. ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನ, ಬಾಬು ಜಗಜೀವನ ರಾಂ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸಿದ್ಧಲಿಂಗಯ್ಯ ಅವರ ಅಭಿಮಾನಿ ಬಳಗವು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿದ್ಧಲಿಂಗಯ್ಯ ಪರಿನಿಬ್ಬಾಣ ಎರಡನೇ ವರ್ಷದ ಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎ.ಕೆ. ಸುಬ್ಬಯ್ಯ, ಎಂ.ಸಿ. ನಾಣಯ್ಯ, ಎಚ್. ನರಸಿಂಹಯ್ಯ ಅವರಂತೆ ಸಿದ್ಧಲಿಂಗಯ್ಯ ಅವರಿಂದಲೂ ಸದನಕ್ಕೆ ಮಹತ್ವ ಬಂತು. ಶಿಕ್ಷಕರ ಸಮಸ್ಯೆಗಿಂತ ಶಿಕ್ಷಣದ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿದ್ದರು. ಜನರ ಒಡನಾಟ ಇದ್ದ ಅವರು ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದರು ಎಂದು ಹೇಳಿದರು. ಸಿದ್ಧಲಿಂಗಯ್ಯ ಅವರ ‘ಅವತಾರ’ಗಳು ಕೃತಿಯನ್ನು ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕಿ ಮಂಗಳಾ ಕುಮಾರಿ ಬಿ.ಎಸ್. ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದ ‘ಅವತಾರಸ್’ ಕೃತಿಯನ್ನು ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಬಿಡುಗಡೆ ಮಾಡಿದರು.…
ಬೆಂಗಳೂರು: ಕೆಲ ತಿಂಗಳ ಹಿಂದೆಯಷ್ಟೇ ಬೆಂಗಳೂರಲ್ಲಿ ದಂಪತಿಗಳಿಬ್ಬರು ಗ್ಯಾಸ್ ಸೋರಿಕೆಯಿಂದ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಜೋಡಿಯ ದಾರುಣ ಅಂತ್ಯವಾಗಿದೆ. ಸ್ನಾನಕ್ಕೆ ಜೋಡಿಯಾಗಿ ಹೋಗಿದ್ದ ಯುವಕ ಯುವತಿ ಬಾತ್ ರೂಮ್ ನಲ್ಲಿ ಗ್ಯಾಸ್ ಗೀಸರ್ ಸೋರಿಕೆಯಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಜಾಲದ ತರಬನಹಳ್ಳಿಯಲ್ಲಿ ನಡೆದಿದೆ. ಗ್ಯಾಸ್ ಗೀಸರ್ ನಿಂದ ವಿಷ ಅನಿಲ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ದಾರುಣ ಸಾವು ಕಂಡಿದ್ದು ಎರಡು ದಿನದ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಜೂನ್ ಹತ್ತನೇ ತಾರೀಖು ಸಂಜೆ ಚಿಕ್ಕಜಾಲದ ತರಬನಹಳ್ಳಿ ನಡೆದಿರುವ ಘಟನೆ ರಾತ್ರಿ 9 ಗಂಟೆ ಸುಮಾರಿಗೆ ಗ್ಯಾಸ್ ಗೀಸರ್ ಆನ್ ಮಾಡಿಕೊಂಡು ಬಾತ್ ರೂಮ್ ಗೆ ಸ್ನಾನಕ್ಕೆಂದು ಹೋಗಿದ್ದ ಜೋಡಿ ಗುಂಡ್ಲುಪೇಟೆ ತಾಲೂಕು ಚಂದ್ರಶೇಖರ್,ಗೋಕಾಕ್ ತಾಲೂಕು ಸುಧಾರಾಣಿ ಮೃತ ದುರ್ದೈವಿಗಳು ಬಾತ್ ರೂಮ್ ನ ಕಿಟಕಿ ಹಾಗೂ ಬಾಗಿಲು ಸಂಪೂರ್ಣವಾಗಿ ಲಾಕ್ ಮಾಡಿ ಇಬ್ಬರು ಸ್ನಾನಕ್ಕಿಳಿದಾಗ ಕಾರ್ಬನ್ ಮೊನಾಕ್ಸೈಡ್ ಬಾತ್ ರೂಂನಲ್ಲಿ ಸೋರಿಕೆಯಾಗಿ…
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ(Congress Government) ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ(Siddaramaiah) ಚಾಲನೆ ನೀಡಿದ್ದು ರಾಜ್ಯಾದ್ಯಂತ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ ಶಕ್ತಿ ಸ್ಕೀಂ ಬಿಎಂಟಿಸಿಗೆ ಭಾರೀ ಬರೆ ಹಾಕುವ ಸಂಭವ ಎದುರಾಗಬಹುದು. ನಿನ್ನೆ ಫ್ರೀಂ ಬಸ್ ಜರ್ನಿ ಸ್ಕೀಂಗೆ ಚಾಲನೆ ಬೆನ್ನಲ್ಲೇ ಇಂದಿನಿಂದ ಬಿಎಂಟಿಸಿಗೆ ಶುರುವಾಯಿತು ಭಾರೀ ಟೆನ್ಷನ್. ಶಕ್ತಿ ಯೋಜನೆಗೆ ತಗಲುವ ಹೊರೆಯನ್ನು ಸರ್ಕಾರ ಭರಿಸುವ ಭರವಸೆ.ಸರ್ಕಾರದ ಸಮಯಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡದಿದ್ರೆ ಬಿಎಂಟಿಸಿ ಪರಿಸ್ಥಿತಿ ಅಧೋಗತಿ.ಅನುದಾನ ವಿಳಂಬವಾದ್ರೆ ಬಸ್ಗಳಿಗೆ ಡೀಸೆಲ್ ಹೊರೆ ಭಾರ,ಮತ್ತೊಂದೆಡೆ ನೌಕರರ ವೇತನದ ಚಿಂತೆ.ಬೆಂಗಳೂರು ಜೀವನಾಡಿಗೆ ಸರ್ಕಾರದ ಶಕ್ತಿ ಅನುದಾನ್ದೇ ಹೊರೆಯಾಗಿಬಿಟ್ಟಿದೆ. ಬಸ್ ಕಾರ್ಯಾಚರಣೆ ನಡುವೆಯೂ ನಿತ್ಯ ಡೀಸೆಲ್ ಗೂ ಹಣ ಒದಗಿಸುವದಕ್ಕೆ ಒದ್ದಾಡ್ತಿರೋ ಬಿಎಂಟಿಸಿ ನಿತ್ಯ ಕಾರ್ಯಾಚರಣೆ ಆದಾಯವನ್ನೇ ನಂಬಿ ನಿಗಮ ನಿರ್ವಹಣೆ ಪ್ರತಿ ನಿತ್ಯ 3.16 ಲಕ್ಷ , ಮಾಸಿಕ 94.80 ಲಕ್ಷ ಲೀಟರ್ ಡೀಸೆಲ್ ಬಿಎಂಟಿಸಿಗೆ ಬೇಕು ಬಿಪಿಸಿಎಲ್ ನಿಂದ ಡೀಸೆಲ್ ಖರೀದಿ ಮಾಡ್ತಿರೋ ಬಿಎಂಟಿಸಿ ಈಗಾಗಲೇ ನಷ್ಟದಿಂದ…
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ(Congress Government) ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ(Siddaramaiah) ಚಾಲನೆ ನೀಡಿದ್ದು ರಾಜ್ಯಾದ್ಯಂತ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ. ಶಕ್ತಿ ಯೋಜನೆ(Free Bus Travel For Women Scheme) ಎರಡನೇ ದಿನಕ್ಕೆ ಕಾಲಿಟ್ಟು ಮಹಿಳೆಯರು, ಯುವತಿಯರು, ವಿದ್ಯಾರ್ಥಿಗಳು ಹಣ ಖರ್ಚು ಮಾಡದೆ ಓಡಾಡುತ್ತಿದ್ದಾರೆ. ಬಹುತೇಕ ಕೆಎಸ್ಆರ್ಟಿಸಿ, ಸರ್ಕಾರಿ ಬಸ್ಗಳು ಫುಲ್ ಆಗಿದ್ದು ಖಾಸಗಿ ಬಸ್ಗಳು ಖಾಲಿ ಖಾಲಿಯಾಗಿವೆ. ಸರ್ಕಾರದ ಫ್ರೀ ಬಸ್ ಯೋಜನೆಗೆ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ ಉಚಿತ ಪ್ರಯಾಣ ಎಂದು ತಿಳಿದಿದ್ದ ಹಿನ್ನೆಲೆ ಸಾಕಷ್ಟು ಮಂದಿ ಉಚಿತ ಪ್ರಯಾಣದ ಅನುಭವವನ್ನು ಪಡೆದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ನಿಲ್ದಾಣಗಳಿಗೆ ಆಗಮಿಸಿದ್ದರು. ಮಧ್ಯಾಹ್ನದ ಬಳಿಕ ನಗರ ಸಾರಿಗೆ ಅಥವಾ ಸಮೀಪದ ಊರಿಗಳಿಗೆ ತೆರಳಿ ಶೂನ್ಯ ಶುಲ್ಕ ಟಿಕೆಟ್ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಸ್ನೇಹಿತರಿಗೆ ಟಿಕೆಟ್ ತೋರಿಸಿ ಅಥವಾ ಮನೆಯಲ್ಲಿ ಉಚಿತ ಪ್ರಯಾಣ ಅನುಭವ ಹೇಳಿಕೊಂಡು ಖುಷಿಪಟ್ಟರು. ಇತ್ತ ಸಾರಿಗೆ ಸಂಸ್ಥೆಗಳು ಮಹಿಳೆಯರಿಗೆ ಹೂ ನೀಡಿ ಸ್ವಾಗತಿಸಿದ್ದು ಮಹಿಳೆಯರ ಸಂತೋಷವನ್ನು…