Author: Prajatv Kannada

ಗದಗ:  ವಿಘ್ನ ನಿವಾರಕ ವಿಘ್ನೇಶ್ವರನ ಪೂಜೆಗೆ ಗದಗ ಮಂದಿ ಸಜ್ಜಾಗಿದ್ದು  ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲು ಮುಂದಾಗಿದ್ದಾರೆ ಗದಗ ಜಿಲ್ಲೆಯ ಜನ ಗಣೇಶ ಚತುರ್ಥಿ ಹಿನ್ನೆಲೆ ಗದಗ ಮಾರ್ಕೆಟ್ ಫುಲ್‌ರಶ್ ಆಗಿದ್ದು ಹೂ ಹಣ್ಣುಗಳನ್ನು ಖರೀದಿ ಮಾಡಲು ಜನ ಮುಗಿಬಿದ್ದಿದ್ದಾರೆ. ಪೂಜಾ ಸಾಮಗ್ರಿ, ಹಣ್ಣು, ಬಾಳೆದಿಂಡು, ಮಾವಿನ ತಳಿರು ಕೊಂಡುಕೊಳ್ಳಲು ಮುಗಿಬಿದ್ದ ಜನಕಳೆದ ಬಾರಿಗಿಂತ ಈ ಬಾರಿ ಮಾರುಕಟ್ಟೆ ಚೇತರಿಕೆ ಬೆಲೆ ಏರಿಕೆ ಮಧ್ಯೆ ಹಬ್ಬದ ಖರೀದಿಯಲ್ಲಿ ತೊಡಗಿರೋ ಗದಗ ಮಂದಿ

Read More

ಭಾರತದ ಜನಪ್ರಿಯ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ (Ganesh Chaturthi) ಒಂದು. ಸಂಪತ್ತು ಮತ್ತು ಬುದ್ದಿವಂತಿಕೆಯ ದೇವರು ಗಣೇಶನನ್ನು ಸ್ತುತಿಸುವ ಹಬ್ಬ. ದೇಶದೆಲ್ಲೆಡೆ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ಬೆಂಗಳೂರಿನ ದೊಡ್ಡ ಗಣಪತಿ ದೇಗುಲದಲ್ಲಿ ವಿಘ್ನನಿವಾರಕನಿಗೆ ವಿಶೇಷ ಅಲಂಕಾರ ಮಾಡಿದ್ದು  ಬಸವನಗುಡಿಯಲ್ಲಿರುವ ಪ್ರಸಿದ್ದ ದೊಡ್ಡಗಣಪತಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಪೂಜೆ ಪುನಸ್ಕಾರ 200 ರೂ.ಮುಖಬೆಲೆಯ 180 ನೋಟುಗಳನ್ನು ಬಳಸಿ ಗಣೇಶನಿಗೆ ವಿಶೇಷ ಅಲಂಕಾರ ಮಾಡಲಾಗಿದೆ.ನೋಟು, ನಾಣ್ಯಗಳಿಂದ ದೊಡ್ಡ ಗಣಪತಿಗೆ ಸಿಂಗಾರಗೊಂಡಿದ್ದು ಬಣ್ಣ-ಬಣ್ಣ ಹೂಗಳಿಂದ ದೇಗುಲ ಕಂಗೊಳಿಸುತ್ತಿದೆ. ಬಸವನಗುಡಿಯಲ್ಲಿರುವ 18 ಅಡಿ ಎತ್ತರದ 16 ಅಡಿ ಅಗಲದ ದೊಡ್ಡ ಗಣಪತಿಗೆ 500 ವರ್ಷಗಳ ಇತಿಹಾಸವಿದೆ.ಭಕ್ತರು ಬೆಳಗ್ಗೆಯಿಂದ ದೇಗುಲಕ್ಕೆ ಬಂದು ಕಜ್ಜಾಯ, ಕಡುಬು, ಖರ್ಜಿಕಾಯಿ ಸೇರಿ ವಿವಿಧ ಪ್ರಸಾದ ಅರ್ಪಣೆ ಮಾಡುತ್ತಿದ್ದಾರೆ.

Read More

ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿ‌ನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಸೆ.8ರಿಂದ ಆರಂಭಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ https://youtu.be/0j324MWsvkE?si=xR01qv39wJeVaQ4Z ಅಂದು ಬೆಳಿಗ್ಗೆ 11ಕ್ಕೆ ಹಂಚಿಕೆಗೆ ಲಭ್ಯ ಇರುವ ಸೀಟುಗಳ ವಿವರವನ್ನು ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 2ರಿಂದ ಸೆ.11ರವರೆಗೆ ‘ಆಯ್ಕೆ’  ಗಳನ್ನು ಬದಲಿಸಿಕೊಳ್ಳಲು ಅವಕಾಶ ಇರುತ್ತದೆ. ರಾಷ್ಟೀಯ ಮಟ್ಟದ ನೀಟ್   ಫಲಿತಾಂಶ ನೋಡಿಕೊಂಡು ಎರಡನೇ ಸುತ್ತಿನ ಫಲಿತಾಂಶ ದಿನಾಂಕವನ್ನು‌ ನಂತರ ತಿಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ನೀಟ್‌ಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಣೆ ನಂತರ ಅಭ್ಯರ್ಥಿಗಳಿಗೆ ಯಾವುದೇ ಛಾಯ್ಸ್‌ಗಳನ್ನ ಆಯ್ಕೆ ಮಾಡಲು ಅವಕಾಶ ಇರುವುದಿಲ್ಲ. ಈ ಹಂತದಲ್ಲಿ ಹಂಚಿಕೆಯಾದ ಸೀಟಿಗೆ ಪ್ರವೇಶ ಪಡೆಯುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಶುಲ್ಕ ಪಾವತಿಸಿ, ಕಾಲೇಜಿಗೆ ಪ್ರವೇಶ ಪಡೆಯದಿದ್ದರೆ ಅಂತಹವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಇಷ್ಟ ಇರುವ ಕಾಲೇಜುಗಳನ್ನು ಮಾತ್ರ ದಾಖಲಿಸಬೇಕು‌ ಎಂದು ಅವರು ಸಲಹೆ ನೀಡಿದ್ದಾರೆ. ಯುಜಿ…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ದರ್ಶನ್ ಗೆ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಹೊರಗಿದ್ದ ವೇಳೆ ರಾಜನಂತೆ ಬದುಕಿದ್ದ ದರ್ಶನ್ ಗೆ ಜೈಲಿನ ಜೀವನ ನರಕವಾಗಿದೆ. ನಿತ್ಯ ತಣ್ಣಿರು ಸ್ವಾನವೇ ಗತಿ ಆಗಿದೆ. ಇದರಿಂದ ದರ್ಶನ್ ತೊಂದರೆ ಅನುಭವಿಸುಂತಾಗಿದೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಹಾಯಾಗಿ ಇದ್ದ  ದರ್ಶನ್ ಗೆ ಬಳ್ಳಾರಿ ಜೈಲಿನ ವಾಸ ಹಿಂಸೆ ನೀಡಿದೆ. ಹೈ ಸೆಕ್ಯೂರಿಟಿ ಸೆಲ್​ ನಲ್ಲಿ ದರ್ಶನ್ ರನ್ನ ಇಡಲಾಗಿದೆ. ದರ್ಶನ್ ಅವರನ್ನು ಸಾಮಾನ್ಯ ಕೈದಿಯಂತೆ ಟ್ರೀಟ್ ಮಾಡಲಾಗುತ್ತಿದೆ. ಹೀಗಾಗಿ ಕಳೆದ 9 ದಿನಗಳಿಂದ ಬಳ್ಳಾರಿ ಜೈಲಿನಲ್ಲಿ ದರ್ಶನ್ ತಣ್ಣಿರ ಸ್ನಾನ ಮಾಡುತ್ತಿದ್ದಾರೆ. ಬಳ್ಳಾರಿ ಕಾರಾಗೃಹದಲ್ಲಿರುವ ಜೈಲಿನ ವಾಸ್ತವತೆ ದರ್ಶನ್​ಗೆ ಅರಿವಾಗುತ್ತಿದೆ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಆರೋಪಿ ದರ್ಶನ್ ಇರುವ ಕಾರಣಕ್ಕೆ ಹಬ್ಬದ ಸಂಭ್ರಮ ಕಳೆಗುಂದಿದೆ. ಬಳ್ಳಾರಿ ಜೈಲಿನಲ್ಲಿ ಗಣೇಶನ ಚತುರ್ಥಿ ಈ ವರ್ಷ ಸರಳವಾಗಿ ಆಚರಣೆ ಮಾಡಲು ನಿರ್ಧಾರ‌‌ ಮಾಡಲಾಗಿದೆ. ಕೇವಲ ಜೈಲು ಸಿಬ್ಬಂದಿಗೆ ಮಾತ್ರ ಗಣೇಶ ಮಂಟಪ ಅಲಂಕಾರ ಮಾಡಲು ಅವಕಾಶ…

Read More

ಭಾರತದ ಜನಪ್ರಿಯ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಸಂಪತ್ತು ಮತ್ತು ಬುದ್ದಿವಂತಿಕೆಯ ದೇವರು ಗಣೇಶನನ್ನು ಸ್ತುತಿಸುವ ಹಬ್ಬ. ದೇಶದೆಲ್ಲೆಡೆ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ‘ಗಣಪತಪ.. ಐಸಾ.. ಅವನ ಹೊಟ್ಟೆ ನೋಡಿ.. ಅವನ ಸೊಂಡಿಲು ನೋಡಿ.. ಐಸಾ’ ಎಂದು ಗಣೇಶನ ರೂಪ ವರ್ಣಿಸುವುದು. ‘ಗಣೇಶ ಬಂದ.. ಕಾಯಿ ಕಡುಬು ತಿಂದ.. ಚಿಕ್ಕ ಕೆರೆಯಲ್ಲಿ ಬಿದ್ದ.. ದೊಡ್ಡ ಕೆರೆಯಲ್ಲಿ ಎದ್ದ’ ಎಂದು ಕೂಗುತ್ತಾ ಸಂಭ್ರಮದಿಂದ ಎಲ್ಲೆಲ್ಲೂ ಹಬ್ಬ ಆಚರಿಸುತ್ತಾರೆ. ತಿಂಗಳಾನುಗಟ್ಟಲೆ ಗಣೇಶನನ್ನು ಕೂರಿಸಿ ಹಬ್ಬ ಆಚರಿಸುವುದು ವಾಡಿಕೆ. ದೇವಾಲಯ-ಚಪ್ಪರಗಳ ಅಲಂಕಾರ, ಸಂಗೀತ ಕಾರ್ಯಕ್ರಮ, ರುಚಿಕರವಾದ ಸಿಹಿತಿಂಡಿಗಳ ತಯಾರಿಯು ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಗಣೇಶ ಚತುರ್ಥಿಯನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಮನೆಯಲ್ಲಿ ಮತ್ತು ಸಾರ್ವಜನಿಕವಾಗಿ ಆಚರಿಸುವ ವಿಧಾನದಲ್ಲಿ ವ್ಯತ್ಯಾಸಗಳಿವೆ. ಮಹಾರಾಷ್ಟ್ರದಲ್ಲಿ ಪ್ರತಿಯೊಂದು ಕುಟುಂಬವೂ ತಮ್ಮ ಪ್ರಕಾರದ ಗಣೇಶ ಚತುರ್ಥಿಯನ್ನು ಆಚರಿಸುತ್ತವೆ. ಪ್ರತಿಯೊಂದು ರಾಜ್ಯದಲ್ಲೂ ಒಂದೊಂದು ರೀತಿಯಲ್ಲಿ ಹಬ್ಬ ಆಚರಣೆ ಇರುತ್ತದೆ. ಮಹಾರಾಷ್ಟ್ರವು ಗಣೇಶೋತ್ಸವಕ್ಕೆ ದೇಶದಲ್ಲೇ ಹೆಸರುವಾಸಿಯಾಗಿದೆ. ಎಲ್ಲೆಲ್ಲೆ ಆಚರಣೆ ಹೇಗೆ? ಮಹಾರಾಷ್ಟ್ರ: ಗಣೇಶ…

Read More

ಪುಣೆ: ದೇವರೆಂದು ನಮ್ಮನ್ನು ನಾವೇ ಸ್ವಯಂಘೋಷಣೆ ಮಾಡಿಕೊಳ್ಳಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್  ಹೇಳಿದ್ದಾರೆ. ಮಣಿಪುರದಲ್ಲಿ  ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಮತ್ತು ಭಯ್ಯಾಜಿ ಎಂದು ಜನಪ್ರಿಯರಾಗಿದ್ದ ಶಂಕರ್ ದಿನಕರ್ ಕೇನ್ ಅವರ ಶತಮಾನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ನಾವು ದೇವರಾಗುತ್ತೇವೋ ಇಲ್ಲವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ. ನಾವು ದೇವರಾಗಿದ್ದೇವೆ ಎಂದು ಸ್ವಯಂ ಘೋಷಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಶಾಂತವಾಗಿರುವುದಕ್ಕಿಂತ ಮಿಂಚಿನಂತೆ ಹೊಳೆಯಬೇಕು ಎಂದು ಕೆಲವರು ಭಾವಿಸುತ್ತಾರೆ. ಆದರೆ ಸಿಡಿಲು ಬಡಿದ ನಂತರ ಮೊದಲಿಗಿಂತ ಹೆಚ್ಚು ಕತ್ತಲೆಯಾಗುತ್ತದೆ. ಆದ್ದರಿಂದ ಕೆಲಸಗಾರರು ದೀಪಗಳಂತೆ ಉರಿಯಬೇಕು ಮತ್ತು ಅಗತ್ಯವಿದ್ದಾಗ ಮಾತ್ರ ಹೊಳೆಯಬೇಕು ಎಂದು ಹೇಳಿದರು. ಮಣಿಪುರದಲ್ಲಿ ಪರಿಸ್ಥಿತಿ ಕಷ್ಟಕರವಾಗಿದೆ. ಸುರಕ್ಷತೆಗೆ ಯಾವುದೇ ಗ್ಯಾರಂಟಿ ಇಲ್ಲ. ವ್ಯಾಪಾರ ಅಥವಾ ಸಾಮಾಜಿಕ ಕೆಲಸಕ್ಕಾಗಿ ಅಲ್ಲಿಗೆ ಹೋದವರಿಗೆ ಪರಿಸ್ಥಿತಿ ಇನ್ನಷ್ಟು ಸವಾಲಿನದ್ದಾಗಿದೆ. ಇಂತಹ ಕಠಿಣ ಪರಿಸ್ಥಿತಿಗಳಲ್ಲಿಯೂ ಸಂಘದ ಸ್ವಯಂಸೇವಕರು ದೃಢವಾಗಿ ನಿಂತು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೋಹನ್‌ ಭಾಗವತ್‌ ಆರ್‌ಎಸ್‌ಎಸ್‌ ಕಾರ್ಯಕರ್ತರ ಶ್ರಮಕ್ಕೆ…

Read More

ಹಿಂದಿ ಕಿರುತೆರೆಯ ಖ್ಯಾತ ನಟಿ ಹಿನಾ ಖಾನ್ ಸದ್ಯ ತಮ್ಮ ಜೀವನದಲ್ಲಿ ಕೆಟ್ಟ ದಿನಗಳನ್ನು ಎದುರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ನಟಿ ತನಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದರು. ಸದ್ಯ ನಟಿ ಕಿಮೊಥೆರಪಿಗೆ ಒಳಗಾಗುತ್ತಿದ್ದು ಚಿಕಿತ್ಸೆ ಮತ್ತು ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಅಪ್​ಡೇಟ್ ನೀಡುತ್ತಿದ್ದಾರೆ. ಈಗಂತೂ ಹೀನಾ ವಿಶೇಷ ಪೋಸ್ಟ್ ಒಂದನ್ನು ಶೇರ್ ಮಾಡಿ ಮತ್ತೊಂದು ಕಾಯಿಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕಿಮೋಥೆರಪಿಯ ಅಡ್ಡ ಪರಿಣಾಮಗಳಿಂದ ನಟಿಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ ಹಿನಾ ಖಾನ್ ಕ್ಯಾನ್ಸರ್ ನಂತರದ ಅನಾರೋಗ್ಯವನ್ನು ಬಹಿರಂಗಪಡಿಸಿದ್ದಾರೆ. ಕಿಮೋಥೆರಪಿಯ ಅಡ್ಡ ಪರಿಣಾಮಗಳಿಂದ ನಟಿ ಮ್ಯೂಕೋಸಿಟಿಸ್‌ನಿಂದ ಬಳಲುತ್ತಿದ್ದಾರೆ. ಪೋಸ್ಟ್ ಅನ್ನು ಹಂಚಿಕೊಂಡ ನಟಿ, ‘ಒಂದು ಕಡೆ ಕೀಮೋಥೆರಪಿ ಮತ್ತು ಇನ್ನೊಂದು ಮ್ಯೂಕೋಸಿಟಿಸ್. ವೈದ್ಯರು ಮ್ಯೂಕೋಸಿಟಿಸ್‌ಗೆ ಚಿಕಿತ್ಸೆಯಾಗಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಆದರೆ ನಿಮ್ಮಲ್ಲಿ ಯಾರಾದರೂ ಈ ರೋಗವನ್ನು ಎದುರಿಸಿದ್ದರೆ, ಪರಿಣಾಮಕಾರಿ ಔಷಧವನ್ನು ಹೇಳಿ. ಇದು ತುಂಬಾ ನೋವಿನ ಪ್ರಯಾಣ. ಏನನ್ನೂ…

Read More

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಕ್ರೌರ್ಯತೆ ಮಿತಿ ಮೀರಿತ್ತು ಎನ್ನುವ ವಿಚಾರ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಆಗಿದೆ. ಈ ಬಗ್ಗೆ ಒಂದೊಂದೇ ವಿಚಾರ ರಿವೀಲ್ ಆಗುತ್ತಾ ಇದೆ. ವಿಚಾರಣೆ ವೇಳೆ ದರ್ಶನ್ ಹಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಕ್ರೌರ್ಯವನ್ನು ಬಿಂಬಿಸುವ ಘಟನೆ ಬಗ್ಗೆ ಚಾರ್ಜ್​ಶೀಟ್​ನಲ್ಲಿ ಮಾಹಿತಿ ಲಭ್ಯವಾಗಿದೆ. ರೇಣುಕಾಸ್ವಾಮಿ ಮಾಂಸದೂಟ ತಿನ್ನಿಸಿದ್ದಾಗಿ ವರದಿ ಆಗಿತ್ತು. ಇದು ನಿಜ ಅನ್ನೋದು ಚಾರ್ಜ್​​ಶೀಟ್​ನಿಂದ ಗೊತ್ತಾಗಿದೆ. ರೇಣುಕಾಸ್ವಾಮಿ‌ಯನ್ನು ಕಟ್ಟಿ ಹಾಕಿ ಡಿ ಗ್ಯಾಂಗ್ ಊಟ ನೀಡಿತ್ತು. ರೇಣುಕಾಸ್ವಾಮಿ ಒಂದು ಅಗಳು ತಿಂದ ಕೂಡಲೇ ಅದು ಮಾಂಸಹಾರ ಅನ್ನೋದು ಗೊತ್ತಾಗಿದೆ. ಹೀಗಾಗಿ ಅದನ್ನು ಅವರು ಉಗುಳಿದ್ದಾರೆ. ಅನ್ನ ಉಗುಳುತ್ತೀಯಾ ಬೋ* ಮಗನೆ ಎಂದು ದರ್ಶನ್ ಬೈದಿದ್ದರು. ಆ ಬಳಿಕ ಶೂನಿಂದ ಒದ್ದು ದರ್ಶನ್ ವಿಕೃತಿ‌ ಮೆರೆದಿದ್ದರು. ಬಳಿಕ‌ ಬಿರಿಯಾನಿ ಊಟವನ್ನು ಬಲವಂತವಾಗಿ ತಿನ್ನಿಸಿದ್ದರು ಎಂಬುದು ಚಾರ್ಜ್ ಶೀಟ್ ನಲ್ಲಿ ಗೊತ್ತಾಗಿದೆ. ದರ್ಶನ್ ಬಟ್ಟೆಯ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಇರೋದು ಪತ್ತೆ ಆಗಿತ್ತು. ಅದೇ…

Read More

ಗಣೇಶ ಚತುರ್ಥಿ ಸೂರ್ಯೋದಯ: 06:06, ಸೂರ್ಯಾಸ್ತ : 06:21 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ:ಚೌವತಿ ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ:01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ಇಲ್ಲ ಅಭಿಜಿತ್ ಮುಹುರ್ತ: ಬೆ.11:49 ನಿಂದ ಮ.12:38 ತನಕ ಮೇಷ ರಾಶಿ: ಸಿದ್ಧ ಉಡುಪು ಮಾಲಕರಿಗೆ ಹಾಗೂ ಉದ್ಯಮದಾರರಿಗೆ ಆರ್ಥಿಕ ಚೇತರಿಕೆ, ಕ್ಲಾಸ್ ವನ್ ಕಾಂಟ್ರಾಕ್ಟರ್ ಗೆ ಹಣಕಾಸಿನಲ್ಲಿ ಅಡೆತಡೆ ಸಂಭವ, ಕುರಿ ಮೇಕೆ ಪಶು ಸಂಗೋಪನೆ ಹೊಂದಿದವರಿಗೆ ಧನ ಲಾಭವಿದೆ, ವಿವಾಹ ಕಾರ್ಯ ನಿರೀಕ್ಷೆಯಲ್ಲಿರುವವರಿಗೆ ಶುಭ, ಪ್ರೇಮಿಗಳ ಬಾಂಧವ್ಯ ವೃದ್ಧಿ, ಕುಟುಂಬದಲ್ಲಿ ಜಗಳ ಸಂಭವ, ವ್ಯಾಪಾರದ ಆರ್ಥಿಕ ಮುಗ್ಗಟ್ಟು, ಮಕ್ಕಳಿಂದ ಮನಸ್ತಾಪ, ರಾಜಕೀಯ ರಂಗದ ಜನಪ್ರತಿನಿಧಿಗಳಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ, ಅಣ್ಣ-ತಮ್ಮಂದಿರ ಆಸ್ತಿಗಾಗಿ ಹೋರಾಟ, ಸಹೋದರಿಗಳಿಂದ ಮನಸ್ತಾಪ, ಎಲ್ಲ ಚಲನಚಿತ್ರ ನಟ…

Read More

ಬಾಗಲಕೋಟೆ: ದೇಶದ ನಂಬರ್ 1 ಭಾರತೀಯ ಜೀವ ವಿಮಾ ನಿಗಮಭಾರತ ಸರ್ಕಾರದ ಭದ್ರತಾದೊಂದಿದೆ ದೇಶದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿ ನಿಂತಿರುವುದು ಏಕೈಕ ಸಂಸ್ಥೆ ಎಂದರೆ ಅದು ಭಾರತೀಯ ಜೀವ ವಿಮಾ ನಿಗಮ. ಒಂದೇ ಒಂದು ಕುಟುಂಬ ಎಲ್ಐಸಿ ಪಾಲಿಸಿ ಮಾಡಿದಂತ ಸಮಯದಲ್ಲಿ ಸಂಪೂರ್ಣ ಕುಟುಂಬಕ್ಕೆ ಆಸರೆಯಾಗಿ ನಿಂತಿದೆ ಎಂದು ನಿವೃತ್ತ ಶಿಕ್ಷಕ ಬಸವರಾಜ ಪಾಟೀಲ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಎಲ್ಐಸಿ ಶಾಖೆಯಲ್ಲಿ ಭಾರತೀಯ ಜೀವ ವಿಮಾ ನಿಗಮ ಅಡಿಯಲ್ಲಿ ವಿಮಾ ಸಪ್ತಾಹ ಮತ್ತು ಗುರು ವಂದನ ಕಾರ್ಯಕ್ರಮ ನಡೆಯಿತು. ಇಂದಿನ ಮಕ್ಕಳೇ ನಾಳಿನ ದೇಶದ ಪ್ರಜೆಗಳು ಮಕ್ಕಳಿಗೆ ಪ್ರತಿನಿತ್ಯ ಸಂಸ್ಕಾರವನ್ನು ಕಲಿಸಬೇಕು.ಭಾರತ ದೇಶ ಸಂಸ್ಕೃತದಿಂದ ಕೂಡಿದ ದೇಶ ಅದನ್ನು ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಸಂಸ್ಕಾರವನ್ನು ಕಲಿಸಿ. ವಿಶ್ವದ ಅತ್ಯುತ್ತಮ ಔಷದ ನಗು ಅತ್ಯುತ್ತಮ ಸಂಪತ್ತು ಬುದ್ಧಿ ಅತ್ಯುತ್ತಮ ಅಸ್ತ್ರ ತಾಳ್ಮೆ ಮತ್ತು ಅತ್ಯುತ್ತಮ ಭದ್ರತೆ ನಂಬಿಕೆ ಆ ನಂಬಿಕೆಯನ್ನ ಭಾರತೀಯ ಜೀವ ವಿಮಾ ನಿಗಮ…

Read More