ಕೋಲಾರ: ಕರ್ನಾಟಕವನ್ನು( Karnataka) ನಂ.1 ರಾಜ್ಯವನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದ್ದು, ಕಾಂಗ್ರೆಸ್-ಜೆಡಿಎಸ್’ನಿಂದ(Congress-JDS) ಅದು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Prime Minister Narendra Modi)ಭಾನುವಾರ ಹೇಳಿದ್ದಾರೆ. ಚಿನ್ನದ ನಾಡು ಕೋಲಾರಕ್ಕೆ ಭೇಟಿ ನೀಡಿರುವ ಅವರು, ಬಿಜೆಪಿ ಸಮಾವೇಶದಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಚಿನ್ನದ ನಾಡು ಕೋಲಾರದಲ್ಲಿ ಜನರು ಸೇರಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್(Congress-JDS) ನಿದ್ದೆಗೆಡಿಸುತ್ತದೆ. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಈ ಎರಡೂ ಪಕ್ಷಗಳು ದೊಡ್ಡ ಅಡ್ಡಿಯುಂಟು ಮಾಡುತ್ತಿದ್ದು, ಸಾರ್ವಜನಿಕರು ಈ ಪಕ್ಷಗಳನ್ನು ಕ್ಲೀನ್ ಬೌಲ್ಡ್ ಮಾಡುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಭ್ರಷ್ಟ ಸರಕಾರದಿಂದ ಕರ್ನಾಟಕದ ಜನತೆಯನ್ನು ರಕ್ಷಿಸಬೇಕು. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಹೇಳಿದರು. ಈ ಚುನಾವಣೆ ಬಾರಿಯ ಚುನಾವಣೆ ಬರೀ ಶಾಸಕರ ಆಯ್ಕೆ, ಮುಖ್ಯಮಂತ್ರಿ ಮಾಡಲು ಚುನಾವಣೆಯಷ್ಟೇ ಅಲ್ಲ. ಮುಂದಿನ 25 ವರ್ಷಗಳ ಕಾಲ ಕರ್ನಾಟಕವನ್ನು ಅಭಿವೃದ್ಧಿ ರಾಜ್ಯ ಮಾಡುವುದಾಗಿದೆ. ಅಸ್ತಿರ ಸರ್ಕಾರವಿದ್ದರೇ ಲಾಭಕ್ಕಿಂತ ನಷ್ಟವೇ ಜಾಸ್ತಿ. ಅಸ್ತಿರ ಸರ್ಕಾರದಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಹೀಗಾಗಿ ಕಾಂಗ್ರೆಸ್ ಮತ್ತು…
Author: Prajatv Kannada
ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ- ನಿರ್ದೇಶಕ ದ್ವಾರಕೀಶ್ (Actor Dwarakish) ಅವರು ತಮ್ಮ ಬಗ್ಗೆ ಹರಿದಾಡುತ್ತಿದ್ದ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಆರೋಗ್ಯದ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳಿಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕನಾಗಿ (Producer) ಸಿನಿಮಾರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡವರು ದ್ವಾರಕೀಶ್ (Dwarakish) ಅವರು ಕೆಲ ತಿಂಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆ ಕೂಡ ದ್ವಾರಕೀಶ್ ಅವರು ಪಡೆದುಕೊಂಡಿದ್ದರು. ಇದೀಗ ಅವರು ಫಿಟ್ ಆಗಿ ಆರಾಮಾಗಿದ್ದಾರೆ. ನಟ ದ್ವಾರಕೀಶ್ ಆರೋಗ್ಯದ ಬಗ್ಗೆ ಭಾನುವಾರ (ಏ.30) ಬೆಳಿಗ್ಗೆಯಿಂದ ಇಲ್ಲಸಲ್ಲದ ಊಹಾಪೋಹಗಳು ಹಬ್ಬಿತ್ತು. ಹಿರಿಯ ನಟ ದ್ವಾರಕೀಶ್ ನಿಧನ ಅಂತಾ ಅಪಪ್ರಚಾರ ಮಾಡಲಾಗಿತ್ತು. ಅದಕ್ಕೆ ಇದೀಗ ದ್ವಾರಕೀಶ್ ಅವರೇ ಸ್ವತಃ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಸಾಕಿ ಬೆಳೆಸಿದ ದ್ವಾರಕೀಶ್, ನಾನು ಚೆನ್ನಾಗಿದ್ದೀನಿ ನಿಮ್ಮೆಲ್ಲರ ಆಶೀರ್ವಾದ ಬೇಕು. ಗಟ್ಟಿ ಮುಟ್ಟಾಗಿದ್ದೀನಿ, ಯಾವ ಚಿಂತೆಯೂ ಇಲ್ಲಾ. ನಗು ನಗುತ್ತಾ ಚೆನ್ನಾಗಿದ್ದೀನಿ ಎಂದು ದ್ವಾರಕೀಶ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ನಿಧನದ ವದಂತಿಗೆ…
ಬೆಂಗಳೂರು: ಬಸವನಗುಡಿ ಕ್ಷೇತ್ರದ ಗಿರಿನಗರ ವಾಸವಿ ದೇವಿ ದೇಗುಲದಲ್ಲಿ ಇಂದು ವಾಸವಿ ಜಯಂತಿಯನ್ನ ಬಲು ವಿಜ್ರಂಭಣೆಯಿಂದ ಆಚರಸಿಲಾಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಆರ್ಯ ವೈಶ್ಯ ಮಹಾಮಂಡಳಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ T.A .ಶರವಣ ಭಾಗವಹಿಸಿ ಜಗನ್ಮಾತೆಯ ಆಶಿರ್ವಾದ ಪಡೆದರು. ಅಲ್ಲದೆ ಆರ್ಯ ವೈಶ್ಯ ಕುಲದ ಅನೇಕ ಗಣ್ಯರು ಭಾಗವಹಿಸಿ ದೇವಿಯ ಆಶಿರ್ವಾದ ಪಡೆದರು. ವಾಸವಿ ಜಯಂತಿ – ಹಿನ್ನೆಲೆ ಮತ್ತು ಪೌರಾಣಿಕ ಕಥೆ. ( Vasavi Jayanti ) ಶ್ರೀ ವಾಸವಿ ದೇವಿಯನ್ನು ಶಾಂತಿ ಮತ್ತು ಶಾಂತಿಯ ದೇವತೆ ಎಂದು ಪರಿಗಣಿಸಲಾಗುತ್ತದೆ ಮತ್ತು ಸಂಗೀತ ಮತ್ತು ಕಲೆಗಳ ದೇವತೆ ಎಂದು ಪರಿಗಣಿಸಲಾಗಿದೆ. ಅಸಂಖ್ಯಾತ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ದೇವಸ್ಥಾನಗಳಿವೆ. ಈ ದೇವಾಲಯಗಳಲ್ಲಿ ಶ್ರೀ ವಾಸವಿ ಜಯಂತಿಯನ್ನು ಆಚರಿಸಲಾಗುತ್ತದೆ. ಶ್ರೀ ವಾಸವಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ಶ್ರೀ ವಾಸವಿ ದೇವಿಯನ್ನು ಶಾಂತಿ ಮತ್ತು ನೆಮ್ಮದಿಯ ಪ್ರತಿರೂಪವೆಂದು ಪರಿಗಣಿಸಲಾಗಿದೆ. ಪೌರಾಣಿಕ ಕಥೆಯ ಪ್ರಕಾರ, ಕುಸುಮ ಶ್ರೇಷ್ಠಿ ಪೆನುಗೊಂಡದ ರಾಜ. ಅವನ ಹೆಂಡತಿ ಕುಸುಮಾಂಬ. ಅವರಿಗೆ ಸಂತತಿ…
ಬೆಂಗಳೂರು: ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ (Death Note) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಯಿಶಾ ಬಿ.ಆರ್. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಬಿಎಸ್ ಸಿ ಕಂಪ್ಯೂಟರ್ ಸೈನ್ಸ್ (BSc Computer Science) ಓದುತ್ತಿದ್ದ ಈಕೆ ಇಂದು (ಭಾನುವಾರ) ಬೆಳಗ್ಗೆ ಬಿನ್ನಿ ಮಿಲ್ ಸಮೀಪದ ಪೊಲೀಸ್ ಕ್ವಾರ್ಟರ್ಸ್ ನ ಏಳನೇ ಮಹಡಿಯಿಂದ ಹಾರಿ ಸೂಸೈಡ್ ಮಾಡಿಕೊಂಡಿದ್ದಾಳೆ. ಭೀಮೇಶ್ ಎಂಬ ಯುವಕನನ್ನು ಆಯಿಶಾ ಪ್ರೀತಿ ಮಾಡುತ್ತಾ ಇದ್ದಳು. ಆದರೆ ಇವರಿಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆ ಇರಲಿಲ್ಲ. ಮನೆಯವರು ಪ್ರೀತಿಯನ್ನು ನಿರಾಕರಿಸಿದ್ದರಿಂದ ತನ್ನ ಪ್ರಿಯಕರನ ಮೊಬೈಲ್ ನಂಬರ್ ಕೈ ಮೇಲೆ ಬರೆದುಕೊಂಡು ತನ್ನ ಸಾವಿನ ವಿಚಾರ ಆತನಿಗೆ ತಿಳಿಸುವಂತೆ ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಡೆತ್‍ನೋಟ್‍ನಲ್ಲೇನಿದೆ..?: ನನ್ನ ಸಾವಿಗೆ ಕಾರಣ ಯಾರೂ ಅಲ್ಲ. ಈ ಜೀವನದ ಮೇಲೆ ಜಿಗುಪ್ಸೆ ಬಂದ ಕಾರಣದಿಂದ ನಾನೇ ಸ್ವತಃ ಈ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ನನ್ನ ಕುಟುಂಬಕ್ಕೆ ಹಾಗೂ ಭೀಮೇಶ್ ನಾಯಕ್…
ಮಂಡ್ಯ: ಎಚ್.ಡಿ.ದೇವೇಗೌಡ (H.D Devegowda), ಎಚ್.ಡಿ.ರೇವಣ್ಣ (H.D Revanna) ಬಳಿಕ ಇದೀಗ ಕುಮಾರಸ್ವಾಮಿ (H.D Kumaraswamy) ಯವರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿಯ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಿಂಗಳ ಹಿಂದೆಯಷ್ಟೇ ರೇವಣ್ಣ ಅವರು ತಮ್ಮ ಪತ್ನಿ ಜೊತೆ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿದ್ದರು. ಅಲ್ಲದೆ ಇತ್ತೀಚೆಗೆ ಅಮಾವಾಸ್ಯೆಯಂದು ಹೆಚ್‍ಡಿಡಿ ಕೂಡ ಪೂಜೆ ಸಲ್ಲಿಸಿದ್ದರು. ಇಂದು (ಭಾನುವಾರ) ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಂದ ಪೂಜೆ ಸಲ್ಲಿಕೆಯಾಗಿದೆ. ಈ ಮೂಲಕ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪದೇ ಪದೇ ಕಾಲಭೈರವೇಶ್ವರನ ಮೊರೆ ಹೊಗುತ್ತಿದ್ದಾರೆ. ಬೆಳಗ್ಗೆ 8.30ಕ್ಕೆ ಆದಿಚುಂಚನಗಿರಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿ ಜೊತೆ ಮಂಡ್ಯ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳಿಂದಲೂ ಪೂಜೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಅಭ್ಯರ್ಥಿಗಳ ಜೊತೆ ಕುಮಾರಸ್ವಾಮಿ ಮಹತ್ವದ ಮೀಟಿಂಗ್ ನಡೆಸಲಿದ್ದಾರೆ. ಅಂತಿಮ ಅಂತದ ತಂತ್ರಗಾರಿಕೆ ಬಗ್ಗೆ ಜೆಡಿಎಸ್ ಅಭ್ಯರ್ಥಿಗಳಿಗೆ ಪಾಠ ಮಾಡಿದ್ದಾರೆ. ಕೆಲವು ಸಲಹೆ, ಸೂಚನೆ ನೀಡಲಿದ್ದಾರೆ.
ಕಲಬುರಗಿ: ಕೆಲಸದಲ್ಲಿ ವಿಪರೀತ ಒತ್ತಡ (Work Pressure) ವಿದ್ದ ಹಿನ್ನೆಲೆಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ (Kalaburagi) ನಗರದ ವಿಶ್ವವಿದ್ಯಾಲಯ ಆವರಣದ ಪಾಳು ಬಿದ್ದ ಗೋಡಾನ್‍ನಲ್ಲಿ ನಡೆದಿದೆ. ಜ್ಯೋತಿಬಾ ಪುಲೆ ಬಡಾವಣೆಯ ನಿವಾಸಿ ಶಶಾಂಕ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಆನ್‍ಲೈನ್ ಎನಿಮೇಶನ್ ಕೆಲಸ ಮಾಡುತ್ತಿದ್ದನು. ಆನ್‍ಲೈನ್ ಎನಿಮೇಶನ್ (Online Animation) ಕೆಲಸದಲ್ಲಿ ಬಹಳಷ್ಟು ಒತ್ತಡ ಹಾಕಿಕೊಂಡಿದ್ದ ಶಶಾಂಕ್, ಈ ಒತ್ತಡ ತಾಳಲಾರದೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ : ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಕೋನರಡ್ಡಿ ಪರ ಪ್ರಚಾರಾರ್ಥವಾಗಿ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಉದ್ದೇಶಸಿ ಪ್ರಿಯಾಂಕಾ ವಾದ್ರಾ ಮಾತನಾಡಿದರು. ಪ್ರಿಯಾಂಕಾ ವಾದ್ರಾ ಮಾತನಾಡಿ ನನಗೆ ರೈತ ಬಂಡಾಯ ನಾಡಿಗೆ ಬಂದಿದ್ದು ಸಂತೋಷವಾಯ್ತು, ಬಸವಣ್ಣ ನಾಡು, ಕಿತ್ತೂರ ಚನ್ನಮ್ಮ ನಾಡು, ಸಿದ್ದೇಶ್ವರ ಸ್ವಾಮಿಜೀ ಅವರಿಗೂ ಕೂಡ ನಮಸ್ಕರಿಸುತ್ತೇನೆ ಎಂದರು. ಬಿಜೆಪಿಯವರು ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಅದರಲ್ಲೂ ಮೋಸ ಮಾಡಿದೆ, ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸಬೇಕು, ಆದರೆ ಅದನ್ನೂ ಈ ಸರ್ಕಾರ ಮಾಡುತ್ತಿಲ್ಲ. ನಿಮ್ಮ ಮುಂದೆ ಬಂದು ಅವರು ಮೀಸಲಾತಿ ಹೆಚ್ಚಳದ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಮೀಸಲಾತಿ ಹೆಚ್ಚಳಕ್ಕೆ ಅಗತ್ಯ ಕೆಲಸ ಮಾಡಿಯೇ ಇಲ್ಲ ಎಂದು ಪ್ರಿಯಾಂಕ ಗಾಂಧಿ ಗುಡುಗಿದರು. ಈಗ ಸರ್ಕಾರ ಬದಲಿಸಲು ಸಮಯ ಬಂದಿದೆ. ನಿಮಗೆ ಉದ್ಯೋಗ, ಮಕ್ಕಳ ಭವಿಷ್ಯ, ಮಕ್ಕಳ ವಿಧ್ಯಾಭ್ಯಾಸ ಎಲ್ಲ ಸರಿಯಾಗಬೇಕು. ಶೇಕಡಾ 50ರಷ್ಟು ಮಹಿಳೆಯರು ಈ ದೇಶದಲ್ಲಿ ಇದ್ದೇವೆ. ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬಿ ಆಗಬೇಕು ಪ್ರಿಯಾಂಕಾ ವಾದ್ರಾ ಕರೆ…
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಾಲಿಂಗಪುರದಲ್ಲಿ ಪಕ್ಷೇತರ ಅಭ್ಯರ್ಥಿ ಅಂಬಾದಾಸ್ ಕಾಮೂರ್ತಿ ಭರ್ಜರಿ ಪ್ರಚಾರ ನಡೆಸಿದರು. ಪ್ರಗತಿ ಚಿಂತಕ ಅಂಬಾದಾಸ್ ಕಾಮೂರ್ತಿ ಸಜ್ಜನ ಸೌಮ್ಯ ಸ್ವಭಾವವಾಗಿದ್ದು. ಮೇ ೧೦ರಂದು ಇವರಿಗೆ ಮತ ನೀಡುವ ಮೂಲಕ ಶಾಸಕರಾಗಿ ಆಯ್ಕೆ ಮಾಡಲು ಸಹಕರಿಸಬೇಕೆಂದು ಮತದಾರರಿಗೆ ಮನವಿ ಮಾಡಿದರು. ಪಕ್ಷೇತರ ಅಭ್ಯರ್ಥಿ ಅಂಬಾದಾಸ್ ಕಾಮೂರ್ತಿ ಮಾತನಾಡಿ ತೇರದಾಳ ಮತಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಕ್ಷೇತ್ರದಲ್ಲಿ ಜನಪರ ಕಾರ್ಯಗಳನ್ನು ಮತ್ತಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಮತಕ್ಷೇತ್ರದಲ್ಲಿ ನನಗೆ ವ್ಯಾಪಕ ಬೆಂಬಲ ಸಿಗುತ್ತಿದೆ ಎಂದರು. ಹಿಂದೆಂದೂ ಕಾಣದಷ್ಟು ಮಾಲಿಂಗಪುರ ನಗರದಲ್ಲಿ ದೊಡ್ಡ ಪ್ರಮಾಣದ ಪ್ರಚಾರ ಸಭೆಯಲ್ಲಿ ಜನ ಸೇರುವುದು ಗಮನಿಸಿದರೆ ನನ್ನ ಗೆಲ್ಲುವು ನಿಶ್ಚಿತ ಎಂದರು. ಕಾಂಗ್ರೆಸ್ ಬಿಜೆಪಿಗೆ ಜನರು ಬೇಸತ್ತು ಸ್ವಯಂ ಪ್ರೇರಿತ ನೂರಾರು ಯುವಕರು ಧುರೀಣರು ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಹಾಗಾಗಿ ಈ ಬಾರಿ ನನ್ನ ಕೆಲವು ಶತಸಿದ್ಧ ಎಂದು ಹೇಳಿದರು. ಪ್ರಕಾಶ ಕುಂಬಾರ ಬಾಗಲಕೋಟೆ
ಹುಬ್ಬಳ್ಳಿ : ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಕೋನರಡ್ಡಿ ಪರ ಪ್ರಚಾರಾರ್ಥವಾಗಿ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಉದ್ದೇಶಸಿ ಪ್ರಿಯಾಂಕಾ ವಾದ್ರಾ ಮಾತನಾಡಿದರು. ಪ್ರಿಯಾಂಕಾ ವಾದ್ರಾ ಮಾತನಾಡಿ ನನಗೆ ರೈತ ಬಂಡಾಯ ನಾಡಿಗೆ ಬಂದಿದ್ದು ಸಂತೋಷವಾಯ್ತು, ಬಸವಣ್ಣ ನಾಡು, ಕಿತ್ತೂರ ಚನ್ನಮ್ಮ ನಾಡು, ಸಿದ್ದೇಶ್ವರ ಸ್ವಾಮಿಜೀ ಅವರಿಗೂ ಕೂಡ ನಮಸ್ಕರಿಸುತ್ತೇನೆ ಎಂದರು. ಬಿಜೆಪಿಯವರು ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಅದರಲ್ಲೂ ಮೋಸ ಮಾಡಿದೆ, ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸಬೇಕು, ಆದರೆ ಅದನ್ನೂ ಈ ಸರ್ಕಾರ ಮಾಡುತ್ತಿಲ್ಲ. ನಿಮ್ಮ ಮುಂದೆ ಬಂದು ಅವರು ಮೀಸಲಾತಿ ಹೆಚ್ಚಳದ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಮೀಸಲಾತಿ ಹೆಚ್ಚಳಕ್ಕೆ ಅಗತ್ಯ ಕೆಲಸ ಮಾಡಿಯೇ ಇಲ್ಲ ಎಂದು ಪ್ರಿಯಾಂಕ ಗಾಂಧಿ ಗುಡುಗಿದರು. ಈಗ ಸರ್ಕಾರ ಬದಲಿಸಲು ಸಮಯ ಬಂದಿದೆ. ನಿಮಗೆ ಉದ್ಯೋಗ, ಮಕ್ಕಳ ಭವಿಷ್ಯ, ಮಕ್ಕಳ ವಿಧ್ಯಾಭ್ಯಾಸ ಎಲ್ಲ ಸರಿಯಾಗಬೇಕು. ಶೇಕಡಾ 50ರಷ್ಟು ಮಹಿಳೆಯರು ಈ ದೇಶದಲ್ಲಿ ಇದ್ದೇವೆ. ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬಿ ಆಗಬೇಕು ಪ್ರಿಯಾಂಕಾ ವಾದ್ರಾ ಕರೆ…
ಕೋಲಾರ: ಪ್ರಧಾನಿ ಮೋದಿ ರಾಜ್ಯದಲ್ಲಿ ಪ್ರವಾಹ ಉಂಟಾದಾಗ, ಕೋಲಾರದಲ್ಲಿ ಮಾವಿನ ಬೆಳೆ ಕುಸಿದಾಗ ಬರಲಿಲ್ಲ. ಕೋಲಾರ ಜನರಿಗೆ ಅವಶ್ಯವಾಗಿ ಬೇಕಿರುವ ನೀರಾವರಿ ಸೌಲಭ ಕೊಡಲು ಬರಲಿಲ್ಲ. ಈಗ ಎಡಗೈನಲ್ಲಿ ಟಾಟಾ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನಜ ಗೆಲ್ಲಿಸಿ ಎಂದು ಮನವಿ ಮಾಡಲು ಕೋಲಾರ ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವ್ರು ಹೇಳಿದ್ರು. ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ರು. Video Player 00:00 02:50 ಖಾಸಗಿ ಸಮೀಕ್ಷೆಗಳನ್ನು ಯಾರು ನಂಬಬೇಡಿ ಜನ ಬಲವಿದ್ದರೂ ನನಗೆ ಹಣದ ಕೊರತೆ ಇದೆ ಬಿಜೆಪಿ ಪಕ್ಷದ ತರ ಕಮೀಷನ್ ಪಡೆದು ಕೊಂಡಿದ್ದರೆ ಇವತ್ತು ದುಡ್ಡು ಚೆಲ್ಲಿ ಮತವನ್ನು ಪಡೆಯಬಹುದಿತ್ತು ಆದರೆ ಅಂತಹ ದೊಡ್ಡ ಕುಟುಂಬದಿಂದ ನಾನು ಬಂದಿಲ್ಲ ಎಂದು ತಿಳಿಸಿದ್ರು. ಅಲ್ಲದೆ ‘ಬಂಗಾರಪೇಟೆಯಲ್ಲಿ 2006ರಲ್ಲಿ ಯರಗೋಳು ಜಲಾಶಯ ನಿರ್ಮಾಣಕ್ಕೆ ಚಾಲನೆಯನ್ನು ನೀಡಲಾಗಿತ್ತು ಅದು ಈಗ ತುಂಬಿದೆ. ಆದರೆ, ಆ ನೀರನ್ನು ಬಳಸುವ ಕೆಲಸವನ್ನು ದರಿದ್ರ ಬಿಜೆಪಿ…