ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಏಕಾಏಕಿ ಮಳೆಗೆ ಕೆಲವೆಡೆ ಅವಾಂತರ ಸೃಷ್ಟಿಯಾಗಿದೆ.ಅಡ್ಡಾದಿಡ್ಡಿ ಮಳೆಗೆ ಚಿಂಚೋಳಿ ತಾಲೂಕಿನ ದೇಗುಲಮಡಿ ಸೇತುವೆ ಕೊಚ್ಚಿಹೋಗಿದೆ. ಮಳೆ ಬಂದ ಪರಿಣಾಮ ದೇಗುಲಮಡಿ ಗ್ರಾಮದ ಸಂಚಾರ ಕಡಿತಗೊಂಡಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆದಿತ್ತು.. ಹೀಗಾಗಿ ಸಂಚಾರಕ್ಕೆ ಅನುವಾಗಲು ಪಕ್ಕದಲ್ಲಿ ಚಿಕ್ಕದೊಂದು ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ವಿಚಿತ್ರ ಅಂದ್ರೆ ಆ ಚಿಕ್ಕ ಸೇತುವೆ ಇದೀಗ ಮಳೆಗೆ ನೆಲಕಚ್ಚಿದೆ.
Author: Prajatv Kannada
ಹಾವೇರಿ: ಮೇವು ತರಲು ಹೋದ ಸಂದರ್ಭದಲ್ಲಿ ಹಾವು ಕಚ್ಚಿ ರೈತ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲ್ಲೂಕಿನ ಹನುಮಾಪುರ ಗ್ರಾಮದ ನಡೆದಿದೆ. ಮೃತ ದುರ್ದೈವಿ ದಾದಾಖಲಂದರ್ ಮೌಲಾಸಾಬ ನದಾಪ್ (45) ವರ್ಷ ಎಂದು ತಿಳಿದು ಬಂದಿದ್ದು, ರೈತನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಮೃತ ರೈತನ ಹೆಸರಿನಲ್ಲಿ ೩ ಎಕರೆ ಜಮಿನಿದ್ದು, ಹೊನ್ನತ್ತಿಯ ಕೆವಿಜಿಬಿ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದಿದ್ದ. ಈ ಹಿನ್ನಲೆ ರಾಣಿಬೇನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರ: ಸರ್ಕಾರಿ ಶಾಲಾ ಕಟ್ಟಡದ ಕಾಮಗಾರಿಯ ಬಿಲ್ ಮಂಜೂರಾತಿಗಾಗಿ ಗುತ್ತಿಗೆದಾರನಿಂದ 30 ಸಾವಿರ ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ಇಲಾಖೆಯ ಇಬ್ಬರು ಎಂಜಿನಿಯರ್‌ಗಳು ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇಲಾಖೆಯ ಚಾಮರಾಜನಗರ ತಾಲ್ಲೂಕಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆಂಪರಾಜು ಮತ್ತು ಕಿರಿಯ ಎಂಜಿನಿಯರ್ ಮಧುಸೂದನ್ ಬಲೆಗೆ ಬಿದ್ದವರು. ಲೋಕಾಯುಕ್ತ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡು ಇಬ್ಬರನ್ನೂ ಬಂಧಿಸಿದ್ದಾರೆ. ನಗರದ ಸೂರ್ಯ ಬಿಲ್ಡರ್ ಅಂಡ್ ಡೆವಲಪರ್ ಸಂಸ್ಥೆಯು ತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ಶಾಲೆ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಲೋಕೋಪಯೋಗಿ ಇಲಾಖೆಯು ಬಿಲ್ ಹಣ ಮಂಜೂರು ಮಾಡಬೇಕಿತ್ತು, ಬಿಲ್ ಪಾವತಿಗಾಗಿ ಇಬ್ಬರೂ ಇಂಜಿನಿಯರ್ ಗಳೂ 30 ಸಾವಿರ ಲಂಚ ಕೇಳಿದ್ರು. ಈ ಸಂಬಂಧವಾಗಿ ಗುತ್ತಿಗೆದಾರ ದೂರು ನೀಡಿದ್ದರು. ಶುಕ್ರವಾರ ಸಂಜೆ ಕಾಮಗಾರಿ ನಡೆದ ಸ್ಥಳದಲ್ಲಿ ಮಧುಸೂದನ್ ಅವರು ಗುತ್ತಿಗೆದಾರನಿಂದ 30 ಸಾವಿರ ಲಂಚ ಪಡೆದಿದ್ದಾರೆ. ಅಲ್ಲಿಂದ ಕಾರಿನಲ್ಲಿ ಬರುತ್ತಿದ್ದಾಗ ಕುದೇರು ಚಾಮುಲ್ ಘಟಕದ ಬಳಿ ಅಡ್ಡ ಕಟ್ಟಿ ವಶಕ್ಕೆ…
ಮಂಡ್ಯ : ಮದ್ದೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಸಂಜೆ ನಿರಂತರವಾಗಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಸುರಿದ ಬಿರುಗಾಳಿ ಮಳೆಗೆ ನಗರಕೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ 30 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮಳೆಯಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ನಗರಕೆರೆ, ಸೋಂಪುರ, ಮಾಲಗಾರನಹಳ್ಳಿ, ಅಜ್ಜಹಳ್ಳಿ, ಕ್ಯಾತಘಟ್ಟ, ಹುಲಿಗೆರೆಪುರ ಸೇರಿದಂತೆ 9 ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರಿಗೆ ತೊಂದರೆ ಉಂಟಾಗಿದ್ದು, ವಾಹನ ಸಂಚಾರಕ್ಕೂ ಅಸ್ತವ್ಯಸ್ತಗೊಂಡಿದೆ. ಹಾಗೂ 30 ಕ್ಕೂ ಹೆಚ್ಚು ಮನೆಗಳ ಹಂಚುಗಳು ಗಾಳಿಗೆ ತೂರಿ ಹೋಗಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಬೆಸಗರಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲೂ 15 ಕ್ಕೂ ಹೆಚ್ಚು ತೆಂಗಿನ ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿರುವ ಬಗ್ಗೆ ವರದಿಯಾಗಿದೆ. ಸೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ…
ಮಂಡ್ಯ: ಕನ್ನಂಬಾಡಿ ಅಣೆಕಟ್ಟು ಹಳೇ ಮೈಸೂರು ಭಾಗದ ಜೀವನಾಡಿ. ಡ್ಯಾಂ ಭರ್ತಿಯಾದ್ರೆ ಬೆಂಗಳೂರು ಸೇರಿದಂತೆ ಮೂರ್ನಾಲ್ಕು ಜಿಲ್ಲಯ ಜನರು ನೆಮ್ಮದಿಯಾಗಿರ್ತಾರೆ. ಆದ್ರೀಗ ಡ್ಯಾಂ ಬರಿದಾಗುತ್ತಿದ್ದು ಜೀವಜಲಕ್ಕೂ ಹಾಹಾಕಾರ ಎದುರಾಗುವ ಭೀತಿ ಶುರುವಾಗಿದೆ. ಮತ್ತೊಂದೆಡೆ ಬೆಳೆದಿರುವ ಬೆಳೆ ಎಲ್ಲಿ ಕೈಗೆ ಸಿಗೋದಿಲ್ವೊ ಎಂಬ ಆತಂಕ ಅನ್ನದಾತರನ್ನ ಆವರಿಸಿದೆ. ಹಾಗಿದ್ರೆ ಡ್ಯಾಂನಲ್ಲಿ ಸದ್ಯ ನೀರಿನ ಸಂಗ್ರಹ ಎಷ್ಟಿದೆ? ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬುದನ್ನ ತೋರಿಸ್ತೀವಿ ಈ ಸ್ಟೋರಿ ನೋಡಿ ನಾಲ್ಕೈದು ದಿನಗಳಿಂದ ಬೆಂಗಳೂರು ಸೇರಿದಂತೆ ಹಲವೆಡೆ ವರುಣನ ಆರ್ಭಟಕ್ಕೆ ಅವಾಂತರಗಳು ಸೃಷ್ಟಿಯಾಗಿವೆ. ರಾಜಧಾನಿಯ ಜನರಂತೂ ತತ್ತರಿಸಿಹೋಗುತ್ತಿದ್ದು, ಮಳೆಯ ನಡುವೆಯೂ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಭೀತಿ ಬೆಂಗಳೂರಿಗರನ್ನ ಕಂಗೆಡುವಂತೆ ಮಾಡಿದೆ. ಹೌದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಭಾರೀ ಕುಸಿತವಾಗಿದ್ದು, ಜೂನ್ ಮೊದಲವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗದಿದ್ರೆ ಜಲ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. 124.80 ಗರಿಷ್ಟ ಮಟ್ಟ ಹೊಂದಿರುವ ಕೆ.ಆರ್.ಎಸ್ ಡ್ಯಾಂನಲ್ಲಿ ಕಳೆದ ಐದುವರ್ಷದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ನೀರಿನ…
ತುಮಕೂರು: ಹೈವೆಯಲ್ಲಿ ಕುರಿ ಸಾಗಿಸುತ್ತಿದ್ದ ಕಂಟೇನರ್ ವಾಹನವನ್ನು ಪೊಲೀಸರು (Police) ಅಡ್ಡಗಟ್ಟಿ ಚಾಲಕನಿಂದ ಹಣ ವಸೂಲಿ ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ತುಮಕೂರು (Tumakuru) ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಠಾಣೆಯ ಪೊಲೀಸರು ಹೈವೆಯಲ್ಲಿ ಹೋಗುತಿದ್ದ ಕಂಟೇನರ್ ತಡೆದು ಹಣ ಪೀಕುತಿದ್ದ ದೃಶ್ಯವನ್ನು ಸಾರ್ವಜನಿಕರು ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ಪೊಲೀಸರು ಲಂಚ (Bribery) ಪಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಳ್ಳಂಬೆಳ್ಳ ಠಾಣೆಯ ಎಎಸ್‌ಐ ಚಿದಾನಂದಸ್ವಾಮಿ, ಚಿಕ್ಕಹನುಮಯ್ಯ ಹಣ ವಸೂಲಿ ಮಾಡಿದ ಪೊಲೀಸರು. ಸಾರ್ವಜನಿಕರು ವೀಡಿಯೋ ಸಹಿತ ರೆಡ್ ಹ್ಯಾಂಡ್ ಆಗಿ ಹಿಡಿದಾಗ ನಮ್ಮಿಂದ ತಪ್ಪಾಗಿದೆ ಬಿಟ್ ಬಿಡಿ ಅಣ್ಣಾ ಎಂದು ಕ್ಷಮೆ ಕೇಳಿದ್ದಾರೆ. ಈ ನಡುವೆ ಲಂಚ ಸ್ವೀಕಾರ ಮಾಡಿದ ಇಬ್ಬರೂ ಪೊಲೀಸರನ್ನು ಅಮಾನತುಗೊಳಿಸಿ ಎಸ್‌ಪಿ ರಾಹುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ನೈಋತ್ಯ ಮಾನ್ಸೂನ್ ಇಂದು ಕರ್ನಾಟಕಕ್ಕೆ ಪ್ರವೇಶಿಸುವ ಸಾಧ್ಯತೆ ಇದ್ದು, ಹೀಗಾಗಿ 5 ದಿನ ಮಳೆಯ ಎಚ್ಚರಿಕೆ ನೀಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು, ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಹಾವೇರಿ, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಮುಂದಿನ 5 ದಿನ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಶಕ್ತಿ ಯೋಜನೆ (Shakthi Yojane) ಗೆ ಸಿಎಂ ಸಿದ್ದರಾಮಯ್ಯ (Siddaramaiah) ಭಾನುವಾರ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ವಹಿಸಲಿದ್ದಾರೆ. ಕೇವಲ ಸಿದ್ದರಾಮಯ್ಯ ಸರ್ಕಾರದ ಮಂತ್ರಿಮಂಡಲದವರು ಮಾತ್ರವಲ್ಲ, ಡಿ.ವಿ.ಸದಾನಂದಗೌಡ (DV Sadananda Gowda), ತೇಜಸ್ವಿಸೂರ್ಯ ಸೇರಿದಂತೆ ಬಿಜೆಪಿ (BJP) ಸಂಸದರಿಗೂ ಆಹ್ವಾನ ನೀಡಲಾಗಿದೆ. ನಾಳೆಯ ಶಕ್ತಿ ಯೋಜನೆ ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸಲು ಸರ್ಕಾರ ಸಿದ್ದತೆ ಮಾಡಿದೆ. ಬಸ್‍ನಲ್ಲಿ ಸಿದ್ದರಾಮಯ್ಯ ನಾಲ್ಕು ಕಿಲೋಮೀಟರ್‍ವರೆಗೂ ರೌಂಡ್ಸ್ ಹಾಕಲಿದ್ದು, ಬಿಎಂಟಿಸಿಯ ಬಿಎ-6 ಬಸ್‍ನಲ್ಲಿ ಸಂಚರಿಸಲಿದ್ದಾರೆ. ನಾಲ್ಕು ಸಾರಿಗೆ ನಿಗಮಗಳ ಎಂಟು ಬಸ್‍ಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ. ಒಂದು ನಿಗಮದಿಂದ ಎರಡು ಬಸ್‍ಗಳಿಗೆ ವಿಧಾನಸೌಧ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸಿಎಂ ಹಾಗೂ ಮಂತ್ರಿಮಂಡಲ ವಿಧಾನಸೌಧ ಟು ವಿಧಾನಸೌಧಕ್ಕೆ ಬಸ್‍ನಲ್ಲಿ ಸಂಚಾರಿಸಲಿದ್ದಾರೆ. ವಿಧಾನಸೌಧ-ಎಂಎಸ್ ಬಿಲ್ಡಿಂಗ್-ಮೈಸೂರು ಬ್ಯಾಂಕ್ ಸರ್ಕಲ್-ಮೆಜೆಸ್ಟಿಕ್- ವಿಧಾನಸೌಧಕ್ಕೆ ಬಸ್ ಸಂಚರಿಸಲಿದೆ. ಪ್ರಥಮ ಫ್ರೀ ಟಿಕೆಟ್ ಸಿಎಂ ಸಿದ್ದರಾಮಯ್ಯ ವಿತರಿಸಲಿದ್ದಾರೆ.…
ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ (Gruha Lakshmi Scheme) ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರ ಬೆನ್ನಲ್ಲೇ ಅರ್ಜಿ ನಮೂನೆಯನ್ನೂ ಸಹ ಬಿಡುಗಡೆ ಮಾಡಿದೆ. ಆದ್ರೆ, ಅರ್ಜಿಯಲ್ಲಿ ಜಾತಿ ನಮೂದು ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿವೆ. ಎಲ್ಲಾ ಓಕೆ ಆದರೆ ಈ ಅರ್ಜಿಯಲ್ಲಿ ಜಾತಿ ಕಾಲಂ ಯಾಕೆ? ಎಂದು ಪ್ರಶ್ನಿಸಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ, ಗೃಹಲಕ್ಷ್ಮೀ ಯೋಜನೆ ಅರ್ಜಿಯಲ್ಲಿ ಕೆಲ ಬದಲಾವಣೆ ಮಾಡಲು ಮುಂದಾಗಿದೆ. ಈ ಬಗ್ಗೆ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಮಾಹಿತಿ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ‘ಗೃಹಲಕ್ಷ್ಮೀ’ ಅರ್ಜಿ ಅಸಲಿಯಾಗಿದೆ. ಆದ್ರೆ, ಗೃಹಲಕ್ಷ್ಮೀ ಯೋಜನೆ ಅರ್ಜಿಯಲ್ಲಿ ಕೆಲ ಬದಲಾವಣೆ ಮಾಡಲಿದ್ದೇವೆ. ‘ಗೃಹಲಕ್ಷ್ಮೀ’ ಅರ್ಜಿಯಲ್ಲಿ ಜಾತಿ ಬದಲು ವರ್ಗ ಎಂದು ಹಾಕುತ್ತೇವೆ. ಬ್ಯಾಂಕ್ ಪಾಸ್ ಬುಕ್ ಸಹ ಸೇರಿಸಲಾಗುವುದು ಎಂದು ಹೇಳಿದರು. ಅರ್ಹ ಫಲಾನುಭವಿಗಳಿಗೆ…
ಬೆಂಗಳೂರು: ಪೂರ್ಣ ಪ್ರಮಾಣದ ಸಂಪುಟ ರಚನೆಯ ನಂತರ ಉಸ್ತುವಾರಿಗಳ ನೇಮಕಕ್ಕೆ ಬೇಡಿಕೆ ಹೆಚ್ಚಾಗಿತ್ತು..ಇದೀಗ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕಗೊಳಿಸಿ ಸಿಎಂ ಆದೇಶ ಹೊರಡಿಸಿದ್ದಾರೆ..ಕೆಲವರಿಗೆ ಅವರದೇ ಜಿಲ್ಲೆಯನ್ನ ನೀಡಿದ್ದಾರೆ..ಇನ್ನು ಕೆಲವು ಕಡೆ ಪಕ್ಷಕ್ಕೆ ಅನುಕೂಲ ಆಗುವಂತೆ ಸಚಿವರನ್ನ ನೇಮಕಗೊಳಿಸಲಾಗಿದೆ.. ಪೂರ್ಣ ಪ್ರಮಾಣದ ಸಂಪುಟ ರಚನೆಯಾದ್ರೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿರ್ಲಿಲ್ಲ..ಪ್ರಸ್ತುತ ಮಳೆಗಾಲ ಬೇರೆ ಶುರುವಾಗಿದ್ದು ಉಸ್ತುವಾರಿ ನೇಮಕ ಮಾಡುವಂತೆ ಬೇಡಿಕೆ ಹೆಚ್ಚಿತ್ತು..ಕೆಲವರು ತಮಗೆ ತಮ್ಮದೇ ಜಿಲ್ಲೆ ನೀಡಬೇಕೆಂದು ಸಿಎಂ ಮೇಲೆ ಒತ್ತಡ ತಂದಿದ್ದರು..ಇದೀಗ ಅಳೆದು ತೂಗಿ ನೋಡಿ ಪಕ್ಷಕ್ಕೆ ಅನುಕೂಲವಾಗುವಂತೆ,ಲೋಕಸಭೆ ಚುನಾವಣೆಯಲ್ಲಿ ಲಾಭವಾಗುವಂತೆ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿಯನ್ನ ನೀಡಲಾಗಿದೆ.. ಯಾರಿಗೆಲ್ಲಾ ತವರು ಜಿಲ್ಲೆಯ ಉಸ್ತುವಾರಿ ಸಿಕ್ಕಿದೆ..? ಡಾ.ಜಿ.ಪರಮೇಶ್ವರ್- ತುಮಕೂರು ಹೆಚ್.ಕೆ.ಪಾಟೀಲ್-ಗದಗ ಸತೀಶ್ ಜಾರಕಿಹೊಳಿ- ಬೆಳಗಾವಿ ಎಂ.ಬಿ.ಪಾಟೀಲ್- ವಿಜಯಪುರ ಹೆಚ್.ಸಿ.ಮಹದೇವಪ್ಪ- ಮೈಸೂರು ಈಶ್ವರ್ ಖಂಡ್ರೆ- ಬೀದರ್ ಪ್ರಿಯಾಂಕ್ ಖರ್ಗೆ- ಕಲಬುರಗಿ ಆರ್.ಬಿ.ತಿಮ್ಮಾಪೂರ- ಬಾಗಲಕೋಟೆ ಚೆಲುವರಾಯಸ್ವಾಮಿ- ಮಂಡ್ಯ ಎಸ್.ಎಸ್.ಮಲ್ಲಿಕಾರ್ಜುನ್- ದಾವಣಗೆರೆ ಸಂತೋಷ್ ಲಾಡ್- ಧಾರವಾಡ ಶಿವರಾಜ್ ತಂಗಡಗಿ-ಕೊಪ್ಪಳ ಡಿ.ಸುಧಾಕರ್- ಚಿತ್ರದುರ್ಗ ಎಂ.ಸಿ.ಸುಧಾಕರ್- ಚಿಕ್ಕಬಳ್ಳಾಪುರ ಯಾರಿಗೆಲ್ಲಾ ತವರು…