ಸೂರ್ಯೋದಯ: 05.53 AM, ಸೂರ್ಯಾಸ್ತ : 06.45 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಉತ್ತರಾಯಣ, ವಸಂತ ಋತು, ತಿಥಿ: ಇವತ್ತು ಸಪ್ತಮಿ 02:01 PM ತನಕ ನಂತರ ಅಷ್ಟಮಿ ನಕ್ಷತ್ರ: ಇವತ್ತು ಶತಭಿಷ 03:39 PM ತನಕ ನಂತರ ಪೂರ್ವಾ ಭಾದ್ರ ಯೋಗ: ಇವತ್ತು ವಿಷ್ಕುಂಭ12:49 PM ತನಕ ನಂತರ ಪ್ರೀತಿ ಕರಣ: ಇವತ್ತು ವಿಷ್ಟಿ 03:08 AM ತನಕ ನಂತರ ಬವ 02:01 PM ತನಕ ನಂತರ ಬಾಲವ ರಾಹು ಕಾಲ: 09:00 ನಿಂದ 10:30 ವರೆಗೂ ಯಮಗಂಡ: 01:30 ನಿಂದ 03:00 ವರೆಗೂ ಗುಳಿಕ ಕಾಲ:06:00 ನಿಂದ 07:30 ವರೆಗೂ ಅಮೃತಕಾಲ: 08.54 AM to 10.24 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:49 ನಿಂದ ಮ.12:41 ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.…
Author: Prajatv Kannada
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ,ಪಕ್ಷದೊಳಗೆ ಬಿ ಎಲ್ ಸಂತೋಷ್ ವಿರುದ್ಧ ಅಸಮಧಾನ ಸ್ಪೋಟವಾಗಿದೆ. ಬಿ ಎಲ್ ಸಂತೋಷ್ ರಾಜಕೀಯವಾಗಿ ತೀರ್ಮಾನಗಳಿಗೆ ಬಿಜೆಪಿ ಮಕಾಡೆ ಮಲಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕಪಡಿಸಿದ್ದಾರೆ.ನಿನ್ನೆ ನಡೆದ ಬಿಜೆಪಿ ಸೋಲಿನಾ ಪರಾಮರ್ಶೆ ಸಭೆಯಲ್ಲಿ ಬಿ ಎಲ್ ಸಂತೋಷ ವಿರುದ್ಧ ಬಿಜೆಪಿ ನಾಯಕರು ಬೆಂಕಿಯುಗಳಿದ್ದಾರೆ. ಸೋಲು… ಹತಾಶೆ… ಅಸಮಾಧಾನ.. ನೋವು… ಹೌದು.. ಇದು ಬಿಜೆಪಿ ಪರಾಜಿತ ಅಭ್ಯರ್ಥಿಗಳ ಮುಖದಲ್ಲಿ ಗೋಚರಿಸಿತ್ತು.. ಇತ್ತ ಗೆದ್ದ ಸಂತೋಷದಲ್ಲಿದ್ದರು ಅಧಿಕಾರದಲ್ಲಿ ಇಲ್ಲ ಎಂಬ ಸಂಕಟ ಗೆದ್ದ ಬಿಜೆಪಿ ಶಾಸಕರಲ್ಲಿತ್ತು.. ಈ ಎರಡು ಕ್ಷಣಕ್ಕೆ ಸಾಕ್ಷಿಯಾಗಿದ್ದು ರಾಜ್ಯ ಬಿಜೆಪಿ ಕಚೇರಿ… ಇದರ ಜತೆ ಬಿ ಎಲ್ ಸಂತೋಷ್ ವಿರುದ್ದ ಸಭೆಯಲ್ಲಿ ಸಾಕಷ್ಟು ಅಸಮಾಧಾನ ಹೊರಹಾಕಿದ್ರು.. ಎಲೆಕ್ಷನ್ ಮುಗಿದು ತಿಂಗಳಾಗಿದ್ರು ಬಿಜೆಪಿ ನಾಯಕರು ಆತ್ಮಾವಲೋಕನ ಸಭೆಯೇ ನಡೆಸಿರಲಿಲ್ಲ.. ಸೋಲು ಗೆಲುವಿನ ಲೆಕ್ಕಾಚಾರದ ನಡುವೆ ಕೊನೆಗೂ ಬಿಜೆಪಿ ನಾಯಕರ ಒಗ್ಗೂಡಿಸುವ ಪ್ರಯತ್ನ ಕೂಡ ನಡೀತು.. ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಸೋತ…
ಬೆಂಗಳೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮೂರು ಪ್ರತ್ಯೇಕ ಪಾಲಿಕೆ ವಿಭಜನೆ ಸಂಬಂಧ ಬಿ.ಎಸ್.ಪಾಟೀಲ್ ನೇತೃತ್ವದ ತಜ್ಞರ ಸಮಿತಿ ರಚಿಸಿದ್ದರು. ಈ ಸಮಿತಿಯು ಸರಕಾರಕ್ಕೆ ವರದಿ ಸಲ್ಲಿಸಿತ್ತು. ಆಗ ಬಿಬಿಎಂಪಿ ವಿಭಜನೆಗೆ ಪ್ರತಿಪಕ್ಷಗಳು, ಸಂಘ-ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆನಂತರ ಆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಇದೀಗ ಕಾಂಗ್ರೆಸ್ ಸರಕಾರವು ಆ ಕುರಿತು ಚಿಂತನೆ ನಡೆಸಿದೆ. ಬಿಬಿಎಂಪಿ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್‌ಗಳು, ಆಡಳಿತ ಪಕ್ಷದ ನಾಯಕರು, ಕಾರ್ಪೊರೇಟರ್‌ಗಳ ನಿಯೋಗವು ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿತು. ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಅಲೆ ಇದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಜನರಿಗೆ ಪಕ್ಷದ ಮೇಲೆ ವಿಶ್ವಾಸ ಮೂಡಿದೆ. ತಕ್ಷಣವೇ ಪಾಲಿಕೆಗೆ ಚುನಾವಣೆ ನಡೆಸಿದರೆ, ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಮೇಯರ್‌ಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ”ಒಬ್ಬರು ಮೇಯರ್, ಮುಖ್ಯ ಆಯುಕ್ತರಿಂದ…
ಗೃಹಲಕ್ಷ್ಮೀ ಯೋಜನೆಗೆ ಅನೇಕ ಷರತ್ತುಗಳನ್ನು ಸರ್ಕಾರ ವಿಧಿಸಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಯೋಜನೆಯ ಲಾಭ ಸಿಗಲಿದ್ದು, ಅರ್ಜಿ ಸಲ್ಲಿಕೆ ಹೇಗೆ? ಯಾರು ಅರ್ಹರು? ಯೋಜನೆ ಜಾರಿ ಯಾವಾಗಿನಿಂದ? ಯಾವ್ಯಾವ ದಾಖಲೆಗಳನ್ನು ಹೊಂದಿರುಬೇಕು? ಗೃಹಿಣಿಯರ ಖಾತೆಗೆ ಹಣ ಯಾವಾಗ ಬರುತ್ತದೆ ಎಂಬ ಪ್ರಶ್ನೆಗಳು ಸೇರಿ ಅನೇಕ ಗೊಂದಲಗಳಿಗೆ ಇಲ್ಲಿ ಉತ್ತರ ನೀಡುವ ಪ್ರಯತ್ನವನ್ನು ಮಾಡಲಾಗಿದೆ. ಏನಿದು ಗೃಹಲಕ್ಷ್ಮೀ ಯೋಜನೆ? ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ನೀಡುವ ಯೋಜನೆಯೇ ಗೃಹಲಕ್ಷ್ಮೀ ಯೋಜನೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈಗ ಅಧಿಕಾರಕ್ಕೆ ಬಂದ ಹಿನ್ನೆಲೆ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುತ್ತಿದೆ. ಗೃಹಲಕ್ಷ್ಮೀ ಯೋಜನೆ ಜಾರಿ ಯಾವಾಗ? ಗೃಹಲಕ್ಷ್ಮೀ ಯೋಜನೆ ಆಗಸ್ಟ್ 17 ಅಥವಾ 18ರಂದು ಜಾರಿಗೆ ಬರಲಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ವೇಳೆ ಇರಲಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಯಾರು ಅರ್ಹರು? ಆಹಾರ…
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಉಳಿದುಕೊಂಡಿದ್ದ ಸರ್ಕಾರಿ ನಿವಾಸದ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣಿಟ್ಟಿದ್ದಾರೆ. ಹೌದು, ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್ ನಲ್ಲಿರುವ ಸರ್ಕಾರಿ ಬಂಗಲೆಯಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ಉಳಿದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಸ್ಯಾಂಕಿ ರಸ್ತೆಯಲ್ಲಿ ಇರುವ ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್ ನಲ್ಲಿ ಇರುವ ಬಲಭಾಗದ ನಾಲ್ಕನೇ ನಿವಾಸದಲ್ಲಿ ಈ ಹಿಂದೆ ರಮೇಶ್ ಜಾರಕಿಹೊಳಿ ಉಳಿದುಕೊಂಡಿದ್ದರು. ಸಮ್ಮಿಶ್ರ ಸರ್ಕಾರ ಪತನವಾಗುವ ಸಂದರ್ಭದಲ್ಲಿ ಇದೇ ಸರ್ಕಾರಿ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ವಾಸ್ತವ್ಯ ಹೂಡಿದ್ದರು. ಆದರೆ ಇದೀಗ ನೂತನವಾಗಿ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇದೇ ಸರ್ಕಾರಿ ನಿವಾಸಕ್ಕೆ ತಮ್ಮ ವಾಸ್ತವ್ಯ ಬದಲಾವಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಪೂರಕ ಎಂಬಂತೆ ಅವರು ಶುಕ್ರವಾರ ಬೆಳಗ್ಗೆ 11.30 ಗಂಟೆಗೆ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ಗೆ ಆಗಮಿಸಿ ಸರ್ಕಾರಿ ಬಂಗಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಿವಾಸದ ಕೀ ಇಲ್ಲದ ಕಾರಣದಿಂದ ಹೊರಗಡೆ ಮಾತ್ರ ಪರಿಶೀಲನೆ ನಡೆಸಿ ತೆರಳಿದ್ದಾರೆ. ಖಾತೆ,…
ಬೆಂಗಳೂರು: ಇಂದಿನಿಂದ 11ರ ವರೆಗೆ 2 ದಿನಗಳ ಕಾಲ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ತಿಳಿಸಿದೆ ಇಂದು (ಜೂನ್ 10) ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ? ಬೈರೋಹಳ್ಳಿ, ರಾಮೋಹಳ್ಳಿ, ಕೆಂಗೇರಿ ಟೌನ್, ಬಿಡದಿ ಗ್ರಾಮಾಂತರ, ದೇವಿಕಿರಣ್, ಡೆಕ್ಕನ್ ಹೆರಾಲ್ಡ್, ಕೆಎಐಡಿಬಿ 1ನೇ ಹಂತ, ಕೆಎಐಡಿಬಿ 2ನೇ ಹಂತ, ಗೇರುಪಾಳ್ಯ ಕೈಗಾರಿಕಾ ಪ್ರದೇಶ, ಇಸ್ರೋ, ಗೋಣಿಪುರ, ಬಿಜಿಎಸ್, ಕೆಂಗೇರಿ, ಬ್ರಿಗೇಡ್ ಪನೋರಮಾ, ಶ್ರೀರಾಮ ಬಡಾವಣೆ, ಕಣ್ಮಿಣಿಕೆ, ಸಂದೀಪ್ ತೋಟ, ಡೈಮಂಡ್ ಡಿಸ್ಟ್ರಿಕ್ಟ್ 1 ಮತ್ತು 2, ಕೋಡಿಹಳ್ಳಿ, ಯಲಾಪುರ, ಸಾಗರನಹಳ್ಳಿ, ಎಂ ಎಸ್ ಹಳ್ಳಿ, ಹೇಮಾವತಿ, ಬಂಡಿಹಳ್ಳಿ, ಬೊಮ್ಮೇನಹಳ್ಳಿ, ತ್ಯಾಗಟೂರು, ಬೆಣಚಿಗೆರೆ, ಹೆಸರಹಳ್ಳಿ, ಬೆಳವತ, ಮತ್ತಿಗಟ್ಟ, ಎಂ ಎನ್ ಕೋಟೆ, ರಾಂಪುರ, ನಿಟ್ಟೂರು, ಸೋಪನಹಳ್ಳಿ, ಗುಬ್ಬಿ, ಬಿದರೆ, ಕಲ್ಲೂರು, ಕೆಜಿ ದೇವಸ್ಥಾನ, ಸೋಮಲಾಪುರ, ಗುಡ್ಡದಹಳ್ಳಿ, ಕಗ್ಗೆರೆ, ರಂಗನಾಥಪುರ, ಗೌರಿಪುರ, ಎಂಎಸ್ ಪಾಳ್ಯ, ಕಾಶಿಮಠ, ಮುನಿಯಪ್ಪನಪಾಳ್ಯ, ಗುಬ್ಬಿ ಟೌನ್, ಹೇರೂರು, ಜಿ ಹೊಸಹಳ್ಳಿ, ಅಮ್ಮನಘಟ್ಟ ಗ್ರಾಮ ಪಂಚಾಯಿತಿ…
ಚಾಮರಾಜನಗರ: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣವನ್ನು ಮರುತನಿಖೆ ನಡೆಸಲು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮುಂದಾ ಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಮನ್ವಯ ಇರುವುದರಿಂದ ತನಿಖೆ ಮಾಡಬೇಕಿದೆ. ಈ ಹಿಂದಿನ ಸರ್ಕಾರ ತನಿಖೆಗೆ ಕೆಲವರನ್ನು ನೇಮಕ ಮಾಡಿತ್ತು. ಆದರೆ ಆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ನಮ್ಮ ಹೊಸ ಸರ್ಕಾರ ಬಂದಿರುವುದರಿಂದ ಮರು ತನಿಖೆಗೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ತಿಳಿಸಿದ್ದೇನೆ. ಅದಕ್ಕೆ ಡಿಪಿಆರ್ ಕೂಡ ಸಿದ್ಧವಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರು: ಕೆಲವು ದಿನಗಳ ಹಿಂದೆ ಕಬ್ಬನ್ ಪಾರ್ಕ್ ಪೊಲೀಸರಿಂದ ಮೂರು ಪಿಸ್ತೂಲ್ ಹಾಗೂ ಜೀವಂತ ಗುಂಡು ವಶ ಪಡೆದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಿಚಾರಣೆ ವೇಳೆ ಬೆಂಗಳೂರು ಮಾರ್ಗವಾಗಿ ಸಾಗಟವಾಗ್ತಿದ್ದ ಪಿಸ್ತೂಲ್ ಗಳು ನಾಗಲ್ಯಾಂಡ್ ನಿಂದ ಕೇರಳಕ್ಕೆ ರವಾನೆಯಾಗ್ತಿದ್ವು ಎಂದು ಬೆಳಕಿಗೆ ಬಂದಿದ್ದು, ಪೊಲೀಸ್ರ ಎರಡು ವಿಶೇಷ ತಂಡಗಳು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಆ ಕುರಿತ ಸ್ಟೋರಿ ಇಲ್ಲಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಪಿಸ್ತೂಲ್ ಮಾರಾಟಕ್ಕೆ ಯತ್ನಿಸ್ತಿದ್ದ ಕೇರಳ ಮೂಲದ ನೀರಜ್ ಜೋಸೆಫ್ ಎಂಬಾತನನ್ನ ಕಬ್ಬನ್ ಪಾರ್ಕ್ ಪೊಲೀಸ್ರು ಬಂಧಿಸಿದ್ರು. ಆರಂಭದಲ್ಲಿ ಕಂಟ್ರಿಮೇಡ್ ಪಿಸ್ತೂಲ್ ಎಂದು ತಿಳಿದುಕೊಂಡಿದ್ದ ಪಿಸ್ತೂಲ್ ಗಳು ಪಕ್ಕಾ ಪ್ಯಾಕ್ಟರಿ ಮೇಡ್ ಪಿಸ್ತೂಲ್ ಗಳು. 2.2 ಎಂಎಂ ಗುಂಡುಗಳನ್ನ ಹಾರಿಸೋ ಸಾರ್ವಜನಿಕರ ಸೇಫ್ಟೀಗೆ ಬಳಸೋ ಗನ್ ಗಳೆಂದು ಪೊಲೀಸ್ರ ಪರಿಶೀಲನೆಯಿಂದ ತಿಳಿದು ಬಂದಿದೆ. ಪಿಸ್ತೂಲ್ ಗಳ ಗುಣಮಟ್ಟ ಹಾಗೂ ಅವು ತಯಾರಾಗ್ತಿದ್ದ ಸ್ಥಳ ನಕ್ಸಲ್ ಪೀಡಿತ ಪ್ರದೇಶ ಹಾಗೂ ಸಪ್ಲೈ ಆಗ್ತಿದ್ದ ರಾಜ್ಯ ಪಿಎಫ್ಐ ಆಕ್ಟೀವ್ ಆಗಿರೋ ಸ್ಟೇಟ್ ಆದ್ದರಿಂದ…
ಬೆಂಗಳೂರು: ಶಾಲಾ ಪಠ್ಯಪುಸ್ತಕದಲ್ಲಿರುವ ‘ಚಕ್ರವರ್ತಿ ಸೂಲಿಬೆಲೆ’ ಅಧ್ಯಾಯ ಕಡಿತ ಮಾಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಸಂಬಂಧ ವಿಕಾಸಸೌಧದಲ್ಲಿ ಮಾತನಾಡಿದ ಅವರು, ವಾಟ್ಸಪ್ ಯೂನಿವರ್ಸಿಟಿಯಲ್ಲಿ ಓದಿರುವವರೆಲ್ಲಾ ಪಠ್ಯ ರಚನೆ ಮಾಡಲು ಪ್ರಾರಂಭಿಸಿದ್ದಾರೆ. ಅಂತಹ ಪಾಠ ನಮ್ಮ ಮಕ್ಕಳು ಕಲಿತರೆ ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು ಕನ್ನಡ ಸಾಹಿತ್ಯಕ್ಕೆ ಅಷ್ಟು ಬರ ಬಂದಿದೆಯಾ? ಎಂದು ಕಿಡಿಕಾರಿದ್ದಾರೆ. ನಾನು ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪಠ್ಯ ಓದಿಲ್ಲ. ಆದರೂ ಅವರು ಬರೆದಿರುವ ಪಠ್ಯ ನಮ್ಮ ಮಕ್ಕಳು ಓದುವುದು ಬೇಡ. ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಪಾಠ ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ? ಬಾಡಿಗೆ ಭಾಷಣಕಾರರನ್ನೆಲ್ಲ ನೀವು ಲೇಖಕರು, ಸಾಹಿತಿಗಳು ಮಾಡಿದ್ದೀರಿ. ಅದನ್ನು ನಮ್ಮ ಮಕ್ಕಳು ಓದಬೇಕಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು: ಇನ್ಮುಂದೆ ಪೊಲೀಸರು ವಾಹನ ಸವಾರರಿಗೆ ಅನಗತ್ಯ ಕಿರಿಕಿರಿಯಾಗುವಂತೆ ವಾಹನ ತಡೆಯುವಂತಿಲ್ಲ ಎಂದು ಡಿಜಿ-ಐಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ. ಬೆಂಗಳೂರಿನ ಕಚೇರಿಯಲ್ಲಿ ಮಾತನಾಡಿದ ಅವರು, ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಮಾತ್ರವೇ ವಾಹನ ತಡೆಯಬೇಕು. ಇಲ್ಲವಾದಲ್ಲಿ ವಾಹನ ಸವಾರರನ್ನು ತಡೆಯುವಂತಿಲ್ಲ ಎಂದು ತಿಳಿಸಿದ್ದಾರೆ. ಪೀಕ್ ಅವರ ಟ್ರಾಫಿಕ್ ಆರಂಭಕ್ಕೂ ಮುನ್ನವೇ ಸಂಚಾರಿ ಪೊಲೀಸರು ಆಯಾ ಸ್ಥಳಗಳಲ್ಲಿ ನಿಯೋಜನೆಗೊಂಡಿರಬೇಕು. ಸಂಚಾರ ದಟ್ಟಣೆ ಆರಂಭವಾಗುವ ಮೊದಲು ತಮ್ಮ ಸಮಯಕ್ಕೂ ಮುಂಚಿತವಾಗಿ ಸ್ಥಳದಲ್ಲಿದ್ದರೆ ಟ್ರಾಫಿಕ್ ಜಾಮ್, ಸಂಚಾರಿ ನಿಯಮ ಉಲ್ಲಂಘನೆ ತಡೆಗಟ್ಟಲು ಸಾಧ್ಯ. ಸಂಚಾರಿ ಪೊಲೀಸರು ಸಾಧ್ಯವಾದಷ್ಟು ದೇಹಕ್ಕೆ ಧರಿಸುವ ಕ್ಯಾಮರಾ ಧರಿಸಬೇಕು. ಇದರಿಂದ ವಿವಾದ ಹಾಗೂ ಪ್ರಕರಣಗಳಲ್ಲಿ ಸ್ಪಷ್ಟ ಸಾಕ್ಷ್ಯ ಒದಗಿಸಲು ಸಹಾಯವಾಗಲಿದೆ. ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ