ಗಣೇಶ ಚತುರ್ಥಿ ಸೂರ್ಯೋದಯ: 06:06, ಸೂರ್ಯಾಸ್ತ : 06:21 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ:ಚೌವತಿ ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ:01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ಇಲ್ಲ ಅಭಿಜಿತ್ ಮುಹುರ್ತ: ಬೆ.11:49 ನಿಂದ ಮ.12:38 ತನಕ ಮೇಷ ರಾಶಿ: ಸಿದ್ಧ ಉಡುಪು ಮಾಲಕರಿಗೆ ಹಾಗೂ ಉದ್ಯಮದಾರರಿಗೆ ಆರ್ಥಿಕ ಚೇತರಿಕೆ, ಕ್ಲಾಸ್ ವನ್ ಕಾಂಟ್ರಾಕ್ಟರ್ ಗೆ ಹಣಕಾಸಿನಲ್ಲಿ ಅಡೆತಡೆ ಸಂಭವ, ಕುರಿ ಮೇಕೆ ಪಶು ಸಂಗೋಪನೆ ಹೊಂದಿದವರಿಗೆ ಧನ ಲಾಭವಿದೆ, ವಿವಾಹ ಕಾರ್ಯ ನಿರೀಕ್ಷೆಯಲ್ಲಿರುವವರಿಗೆ ಶುಭ, ಪ್ರೇಮಿಗಳ ಬಾಂಧವ್ಯ ವೃದ್ಧಿ, ಕುಟುಂಬದಲ್ಲಿ ಜಗಳ ಸಂಭವ, ವ್ಯಾಪಾರದ ಆರ್ಥಿಕ ಮುಗ್ಗಟ್ಟು, ಮಕ್ಕಳಿಂದ ಮನಸ್ತಾಪ, ರಾಜಕೀಯ ರಂಗದ ಜನಪ್ರತಿನಿಧಿಗಳಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ, ಅಣ್ಣ-ತಮ್ಮಂದಿರ ಆಸ್ತಿಗಾಗಿ ಹೋರಾಟ, ಸಹೋದರಿಗಳಿಂದ ಮನಸ್ತಾಪ, ಎಲ್ಲ ಚಲನಚಿತ್ರ ನಟ…
Author: Prajatv Kannada
ಬಾಗಲಕೋಟೆ: ದೇಶದ ನಂಬರ್ 1 ಭಾರತೀಯ ಜೀವ ವಿಮಾ ನಿಗಮಭಾರತ ಸರ್ಕಾರದ ಭದ್ರತಾದೊಂದಿದೆ ದೇಶದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿ ನಿಂತಿರುವುದು ಏಕೈಕ ಸಂಸ್ಥೆ ಎಂದರೆ ಅದು ಭಾರತೀಯ ಜೀವ ವಿಮಾ ನಿಗಮ. ಒಂದೇ ಒಂದು ಕುಟುಂಬ ಎಲ್ಐಸಿ ಪಾಲಿಸಿ ಮಾಡಿದಂತ ಸಮಯದಲ್ಲಿ ಸಂಪೂರ್ಣ ಕುಟುಂಬಕ್ಕೆ ಆಸರೆಯಾಗಿ ನಿಂತಿದೆ ಎಂದು ನಿವೃತ್ತ ಶಿಕ್ಷಕ ಬಸವರಾಜ ಪಾಟೀಲ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಎಲ್ಐಸಿ ಶಾಖೆಯಲ್ಲಿ ಭಾರತೀಯ ಜೀವ ವಿಮಾ ನಿಗಮ ಅಡಿಯಲ್ಲಿ ವಿಮಾ ಸಪ್ತಾಹ ಮತ್ತು ಗುರು ವಂದನ ಕಾರ್ಯಕ್ರಮ ನಡೆಯಿತು. ಇಂದಿನ ಮಕ್ಕಳೇ ನಾಳಿನ ದೇಶದ ಪ್ರಜೆಗಳು ಮಕ್ಕಳಿಗೆ ಪ್ರತಿನಿತ್ಯ ಸಂಸ್ಕಾರವನ್ನು ಕಲಿಸಬೇಕು.ಭಾರತ ದೇಶ ಸಂಸ್ಕೃತದಿಂದ ಕೂಡಿದ ದೇಶ ಅದನ್ನು ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಸಂಸ್ಕಾರವನ್ನು ಕಲಿಸಿ. ವಿಶ್ವದ ಅತ್ಯುತ್ತಮ ಔಷದ ನಗು ಅತ್ಯುತ್ತಮ ಸಂಪತ್ತು ಬುದ್ಧಿ ಅತ್ಯುತ್ತಮ ಅಸ್ತ್ರ ತಾಳ್ಮೆ ಮತ್ತು ಅತ್ಯುತ್ತಮ ಭದ್ರತೆ ನಂಬಿಕೆ ಆ ನಂಬಿಕೆಯನ್ನ ಭಾರತೀಯ ಜೀವ ವಿಮಾ ನಿಗಮ…
ಕೋಲಾರ : ಭಾರತದ ಜನಪ್ರಿಯ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಸಂಪತ್ತು ಮತ್ತು ಬುದ್ದಿವಂತಿಕೆಯ ದೇವರು ಗಣೇಶನನ್ನು ಸ್ತುತಿಸುವ ಹಬ್ಬ. ದೇಶದೆಲ್ಲೆಡೆ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ಹಾಗೆ ಕೋಲಾರದಲ್ಲೂ ಕರಿಗಡುಬಿನಲ್ಲಿ ಅರಳಿದ ಗಣೇಶ ಸಂಕಷ್ಟಹರ ಗಣಪತಿ ದೇವಾಲಯದಲ್ಲಿ ಕರಿಗಡಬು ಗಣೇಶ, 10001 ಕರಿಗಡುಬು ಬಳಸಿ ಗಣೇಶ ತಯಾರಿ ಸುಮಾರು 15 ಅಡಿ ಎತ್ತರದ ಕರಿಗಡಬು ಗಣೇಶ, ಗಣೇಶನನ್ನು ನೋಡಲು ಭಕ್ತರ ದಂಡು, ವಿಶೇಷವಾಗಿ ನಿರ್ಮಾಣ ಮಾಡಿರುವ ಗಣೇಶ ಗಣೇಶ ಹಬ್ಬದ ವಿಶೇಷ ಆಕರ್ಷಣೆ.
ದೊಡ್ಡಬಳ್ಳಾಪುರ: ತಾಲೂಕಿನ ಕಂಟನಕುಂಟೆಯ ಲಿಟ್ಲ್ ಮಾಸ್ಟರ್ ಶಾಲೆಯ ವಿಧ್ಯಾರ್ಥಿಗಳು ಪ್ರತಿಭಾ ಕಾರಂಜಿ,ಕ್ರೀಡಾಕೂಟ, ಯೋಗಾಸನ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. 2024-25 ನೇ ಸಾಲಿನ ಹಾಡೋನಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ/ ಕಲೋತ್ಸವ ಕಾರ್ಯಕ್ರಮವು ಕಂಟನಕುಂಟೆಯ ಲಿಟಲ್ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. 25 ಶಾಲೆಗಳಿಂದ 250ಕ್ಕೂ ಹೆಚ್ಚು ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲೋತ್ಸವಕ್ಕೆ ಮೆರುಗು ತಂದರು. ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯ 30ಕ್ಕೂ ಹೆಚ್ಚು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ 25ಕ್ಕೂ ಹೆಚ್ಚು ಪ್ರಥಮ, ದ್ವಿತೀಯ ತೃತೀಯ ಸ್ಥಾನಗಳನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ .ಗ್ರಾಮಾಂತರ ಜಿಲ್ಲೆ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆ, ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರ ಆಯೋಜಿಸಿದ್ದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಲಿಟ್ಲ್‌ಮಾಸ್ಟರ್ ಪಬ್ಲಿಕ್ ಶಾಲೆಯ ಮಕ್ಕಳು ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ…
ಬಿಎಂಟಿಸಿ ಬಸ್ ನಲ್ಲಿ ಕಾಣಿಸಿಕೊಂಡ ಹಾವು ಬಸ್ ಹಿಂಬದಿಯ ಗ್ಲಾಸ್ ನಲ್ಲಿ ಹಾವು ಇದ್ದಿದ್ದನ್ನ ನೋಡಿ ಗಾಬರಿಯಾದ ಪ್ರಯಾಣಿಕರು ಹಾಗೆ ಹಿಂಬದಿ ಗ್ಲಾಸ್ ನಲ್ಲಿ ಸಿಲುಕಿಕೊಂಡ ಹಾವುಹಾವನ್ನು ಗಮನಿಸಿದ ಬಸ್ ನ ಹಿಂಬದಿ ಬರ್ತಿದ್ದ ಕ್ಯಾಂಟರ್ ಚಾಲಕ ಡಿಪೋ 29 ರ ಬಸ್ ನಲ್ಲಿ ಕಾಣಿಸಿಕೊಂಡಿರುವ ಹಾವು ಬಿಎಂಟಿಸಿ ಬಸ್ ನಲ್ಲಿ ಕಾಣಿಸಿಕೊಂಡ ಹಾವು ಬಸ್ ಹಿಂಬದಿಯ ಗ್ಲಾಸ್ ನಲ್ಲಿ ಹಾವು ಇದ್ದಿದ್ದನ್ನ ನೋಡಿ ಗಾಬರಿಯಾದ ಪ್ರಯಾಣಿಕರು ಹಾಗೆ ಹಿಂಬದಿ ಗ್ಲಾಸ್ ನಲ್ಲಿ ಸಿಲುಕಿಕೊಂಡ ಹಾವುಹಾವನ್ನು ಗಮನಿಸಿದ ಬಸ್ ನ ಹಿಂಬದಿ ಬರ್ತಿದ್ದ ಕ್ಯಾಂಟರ್ ಚಾಲಕ ಡಿಪೋ 29 ರ ಬಸ್ ನಲ್ಲಿ ಕಾಣಿಸಿಕೊಂಡಿರುವ ಹಾವು
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾರೋಷವಾಗಿದ್ದ ದರ್ಶನ್ ಗೆ ಬಳ್ಳಾರಿ ಜೈಲಿನ ವಾತಾವರಣ ದೊಡ್ಡ ತಲೆನೋವಾಗಿದೆ. ಇದೀಗ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಕಳೆದ ಒಂಬತ್ತು ದಿನದಲ್ಲಿ 735 ರೂ. ಖರ್ಚು ಮಾಡಿದ್ದಾರೆ. ಜೈಲಿನ ಕ್ಯಾಂಟೀನ್‌ನಲ್ಲಿ ಟೀ, ಕಾಫಿಗಾಗಿ ಖರ್ಚು ಮಾಡಿದ್ದಾರೆ. ಜೈಲಿನಲ್ಲಿ ಒತ್ತಡಕ್ಕೆ ಒಳಗಾಗಿರುವ ಆರೋಪಿ ದರ್ಶನ್ ಕಾಫಿ, ಟೀ ಮೊರೆ ಹೋಗಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿರುವ ಆರೋಪಿ ದರ್ಶನ್ ಅವರ ಪ್ರೀಜ್ ನರ್ಸ್ ಪ್ರೈವೇಟ್ ಅಕೌಂಟ್‌ನಲ್ಲಿದ್ದ ಹಣ ಖರ್ಚಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ 35,000 ರೂ. ಹಣ ದರ್ಶನ್ ಅವರ ಪಿಪಿಸಿ ಅಕೌಂಟ್‌ನಲ್ಲಿತ್ತು. ದರ್ಶನ್ ಬಳ್ಳಾರಿ ಜೈಲಿಗೆ ಬಂದ ಬಳಿಕ ಅದೇ ಹಣ ವರ್ಗಾವಣೆ ಆಗಿತ್ತು. ಇದೀಗ ಅದೇ ಹಣದಲ್ಲಿ ಕಾಫಿ, ಟೀ ಗಾಗಿ ಖರ್ಚು ಮಾಡಿದ್ದಾಗಿ ಜೈಲು ಕ್ಯಾಂಟೀನ್ ಮೂಲಗಳಿಂದ ಮಾಹಿತಿ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ…
ಚಿತ್ರರಂಗದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಯಲು ಸಮಿತಿ ರಚನೆಯಾಗಬೇಕು ಎಂದು ಈಗಾಗ್ಲೇ ಕನ್ನಡದ ನಟ, ನಟಿಯರು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ರಕ್ಷಿತ್ ಶೆಟ್ಟಿ, ಕನ್ನಡದಲ್ಲೂ ಕೇರಳದ ಹೇಮಾ ಸಮಿತಿ ರೀತಿ ವರದಿ ಆಗಬೇಕು ಎಂದಿದ್ದಾರೆ. ಹೇಮಾ ಸಮಿತಿ ರೀತಿ ನಮ್ಮಲ್ಲೂ ಒಂದು ಕಮಿಟಿ ರಚನೆ ಆಗಬೇಕು ಎಂಬುದು ಒಳ್ಳೆಯ ಉದ್ದೇಶ. ನಾವು ಕೂಡ ಅದಕ್ಕೆ ಸಹಿ ಹಾಕುತ್ತೇವೆ. ಸಹಿ ಹಾಕಿದ ಮೇಲೆ ನಾನು ಮತ್ತೆ ಗುಹೆಯಲ್ಲಿ ಹೋಗಿ ಕುಳಿತುಕೊಂಡು ಸಿನಿಮಾ ಮಾಡಿದರೆ ಅದಕ್ಕೆ ಅರ್ಥ ಇರುವುದಿಲ್ಲ. ಒಮ್ಮೆ ಸಹಿ ಮಾಡಿದ ಮೇಲೆ ಅದರ ಹಿಂದಿರುವ ಕೆಲಸವನ್ನು ಕೂಡ ನಾನು ಮಾಡಬೇಕು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಅಂದಹಾಗೆ, ಸೆ.5ರಂದು ನಟ ಚೇತನ್ ನೇತೃತ್ವದಲ್ಲಿ ‘ಫೈರ್ ಸಂಸ್ಥೆ’ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಹೇಮಾ ಕಮಿಟಿಯಂತೆ ಸಮಿತಿ ರಚಿಸಬೇಕು ಎಂದು ಸಿಎಂಗೆ ಮನವಿ ಮಾಡಿದ್ದಾರೆ. ಚೇತನ್ ಜೊತೆ ಶೃತಿ ಹರಿಹರನ್, ನೀತು ಶೆಟ್ಟಿ ಸಾಥ್ ನೀಡಿದರು.…
ಸ್ಯಾಂಡಲ್‌ವುಡ್ ನಿರ್ದೇಶಕ ನಾಗಶೇಖರ್ ಚಲಾಯಿಸುತ್ತಿದ್ದ ಕಾರು ಅಪಘಾತವಾಗಿದ್ದು ಮಹಿಳೆ ಗಾಯಗೊಂಡಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ 1:30ಕ್ಕೆ ನಿರ್ದೇಶಕ ನಾಗಶೇಖರ್ ಬೆಂಜ್ ಕಾರು ಡ್ರೈವ್ ಮಾಡಿಕೊಂಡು ಬರುವಾಗ ರಭಸವಾಗಿ ಬಂದು ಮರಕ್ಕೆ ಗುದ್ದಿದೆ. ಘಟನೆಯಲ್ಲಿ ಓರ್ವ ಮಹಿಳೆಗೆ ಗಾಯವಾಗಿದ್ದು, ಅಪಘಾತದ ನಂತರ ಮಹಿಳೆಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಸ್ಥಳಕ್ಕೆ ಜ್ಞಾನಭಾರತಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ನಾಗಶೇಖರ್, ಕಾರಿನಲ್ಲಿ ಹೋಗುವಾಗ ಸ್ವಲ್ಪ ಕಣ್ಮುಚ್ಚಿದ ಪರಿಣಾಮ ಅಪಘಾತವಾಯಿತು. ಕಾರು ಡ್ಯಾಮೇಜ್ ಆಗಿದೆ, ಅದು ಬಿಟ್ಟರೆ ನನಗೇನು ತೊಂದರೆ ಆಗಿಲ್ಲ. ಈ ವೇಳೆ ಓರ್ವ ಮಹಿಳೆಗೆ ಗಾಯವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಅವರ ಕಾಲಿಗೆ ಸಣ್ಣದಾಗಿ ಗಾಯವಾಗಿದೆ ಎಂದಿದ್ದಾರೆ.
ಮಲಯಾಳಂ ನಟ ನಿವೀನ್ ಪೌಳಿ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನಿವೀನ್ ಹೇಳಿದ್ದಾರೆ. ಸದ್ಯ ನಟ ಪೊಲೀಸ್ ಮಹಾ ನಿರ್ದೇಶಕ ಹಾಗೂ ವಿಶೇಷ ತನಿಖಾ ತಂಡಕ್ಕೆ ಪತ್ರ ಬರೆದಿದ್ದು, ಈ ಆರೋಪದಲ್ಲಿ ತಕ್ಷಣ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ನಿವೀನ್ ಅವರನ್ನು ಬೆಂಬಲಿಸಿ ಅನೇಕರು ಮಾತನಾಡಿದ್ದರು. ಈಗ ಅವರು ತಮ್ಮ ತಪ್ಪಿಲ್ಲ ಎಂಬುದುನ್ನು ಸಾಬೀತು ಮಾಡಲು ತನಿಖೆಗೆ ಆದೇಶಿಸಿದ್ದಾರೆ. ಈ ಘಟನೆ ನಡೆದಿದ್ದು ದುಬೈನಲ್ಲಿ ಎನ್ನಲಾಗಿದೆ. ಹೀಗಾಗಿ, ತನಿಖಾ ಸಂದರ್ಭದಲ್ಲಿ ತಾವು ಅಲ್ಲಿಗೆ ತೆರಳುವುದಿಲ್ಲ ಎಂಬುದನ್ನು ಸಾಬೀತು ಮಾಡಲು ಈಗಾಗಲೇ ಅವರು ಪಾಸ್ಪೋರ್ಟ್ನ ಪೊಲೀಸರಿಗೆ ನೀಡಿದ್ದಾರೆ. ಸತ್ಯ ಹೊರಬರಬೇಕು ಎಂದು ಅವರು ಆಗ್ರಹಿಸಿದ್ದಾರೆ. ‘ನನ್ನ ವಿರುದ್ಧ ಬಂದಿರೋದು ಸುಳ್ಳು ಆರೋಪ. ಈ ಪ್ರಕರಣದಲ್ಲಿ ತನಿಖೆ ಆಗಬೇಕು. ಈ ಪ್ರಕರಣದಿಂದ ತಮ್ಮ ಹೆಸರನ್ನು ತೆಗೆದುಹಾಕಿ’ ಎಂದು ನಟ ಮನವಿ ಮಾಡಿದ್ದಾರೆ. ಇತ್ತೀಚೆಗೆ ಹೇಮಾ ಸಮಿತಿ ವರದಿ ಬಹಿರಂಗ ಆಗಿತ್ತು. ಈ ವೇಳೆ ಮಲಯಾಳಂ…
ದರ್ಶನ್ ಎಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಚಾರಣೆ ಕೊನೆಯ ಹಂತ ತಲುಪಿದ್ದು ಪೊಲೀಸರು ಚಾರ್ಜ ಶೀಟ್ ಸಲ್ಲಿಸಿದ್ದಾರೆ. ಈ ವೇಳೆ ಸಾಕಷ್ಟು ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಅಲ್ಲದೆ ಆರೋಪಿಗಳ ಮೊಬೈಲ್ ನಲ್ಲಿದ್ದ ಮಾಹಿತಿಗಳು ಡಿಲೀಟ್ ಆಗಿದ್ದು ಅವುಗಳನ್ನು ರಿಟ್ರೀವ್ ಮಾಡಲಾಗಿದೆ.ಅವುಗಳಲ್ಲಿ ಕೆಲ ಫೋಟೋಗಳು ಲೀಕ್ ಆಗಿವೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದು, ರಿಟ್ರೀವ್ ಮಾಡಿರುವ ಫೋಟೋ ಬಿಟ್ಟಿರುವುದು ಅಕ್ಷಮ್ಯ ಅಪರಾಧ. ಪರಪ್ಪನ ಅಗ್ರಹಾರ ಜೈಲಿನ ದರ್ಶನ್ ಫೋಟೋ ಹೊರಬಿಟ್ಟಿದ್ದೇ ಸರ್ಕಾರ ಎಂದು ಆರೋಪಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕರ್ನಾಟಕ ಕಂಡ ಅತ್ಯಂತ ಕ್ರೂರವಾದ ಹತ್ಯೆ. ಮುಡಾ, ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ದೊಡ್ಡ ಚರ್ಚೆಯಾಯಿತು. ಮುಡಾ ವಿಚಾರ ಡೈವರ್ಟ್ ಮಾಡಲು ದರ್ಶನ್ ಕೇಸ್ ಮುನ್ನೆಲೆಗೆ ತಂದರು. ರಾಜ್ಯ ಸರ್ಕಾರ ಸಂಕುಚಿತ ಷಡ್ಯಂತ್ರ ನಡೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ರೇಣುಕಾಸ್ವಾಮಿಯನ್ನು ಕ್ರೂರವಾಗಿ ಹತ್ಯೆಗೈದ ಆರೋಪಿಗಳಿಗೆ ಶಿಕ್ಷೆಯಾಗಬೇಕು.ಇದರಲ್ಲಿ ಯಾವ ಅನುಮಾನ ಇಲ್ಲ. ರಿಟ್ರೀವ್ ಮಾಡಿರುವ…