ಲಂಡನ್: ಕಳೆದ ಒಂದು ದಶಕದಿಂದ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈ ಪೀಳಿಗೆಯ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಲಂಡನ್‌ನ ದಿ ಓವಲ್ ಅಂಗಣದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಟೀಮ್ ಇಂಡಿಯಾ ಮಾಜಿ ನಾಯಕ, ಆಸ್ಟ್ರೇಲಿಯಾದ ಉಪನಾಯಕನ ಬ್ಯಾಟಿಂಗ್ ಶೈಲಿಯನ್ನು ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯಾದ ಭರವಸೆಯ ಆಟಗಾರ ಸ್ಟೀವನ್ ಸ್ಮಿತ್ ಅವರು ಕಳೆದ ಒಂದು ದಶಕದಿಂದ ತಮ್ಮ ಬ್ಯಾಟಿಂಗ್‌ನಲ್ಲಿ ತೋರಿರುವ ಸ್ಥಿರತೆ ಮತ್ತು ರನ್ ಸರಾಸರಿಯನ್ನು ಆಧಾರವಾಗಿಟ್ಟುಕೊಂಡು ಮಹತ್ವದ ಹೇಳಿಕೆ ನೀಡಿದ್ದಾರೆ. “ನನ್ನ ಪ್ರಕಾರ ಸ್ಟೀವನ್ ಸ್ಮಿತ್ ಅವರು ಪ್ರಸಕ್ತ ತಲೆಮಾರಿನ ನಿಜವಾದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಇದನ್ನು ಸಾಬೀತುಪಡಿಸಿದ್ದಾರೆ. ಈ ಕಾಲದ ಯಾವುದೇ ಬ್ಯಾಟರ್‌ಗಳಿಗೆ ಹೋಲಿಸಿದರೆ, ಅವರ ಆಟದಲ್ಲಿರುವ ಕೌಶಲತೆ ನಿಜಕ್ಕೂ ಅದ್ಭುತವಾಗಿದೆ,” ಎಂದು ವಿರಾಟ್…
Author: Prajatv Kannada
ಲೂಸಿಯಾ ಪವನ್ ನಿರ್ದೇಶನದ, ಮಲಯಾಳಂನ ಖ್ಯಾತ ನಟ ಫಹಾದ್ ನಟನೆಯ ಧೂಮಂ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕೇವಲ ಎರಡೇ ತಿಂಗಳಲ್ಲಿ ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಟ್ರೈಲರ್ ರಿಲೀಸ್ ಮಾಡಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಧೂಮಂ ಸಿನಿಮಾದ ಟ್ರೈಲರ್ ನಲ್ಲಿ ಯಶ್ ನಟನೆಯ ಕೆಜಿಎಫ್ ಸಿನಿಮಾದ ದೃಶ್ಯವೊಂದನ್ನು ತೋರಿಸಲಾಗಿದ್ದು ಇದು ರಾಖಿ ಬಾಯ್ ಅಭಿಮಾನಿಗಳಿಗೆ ಖುಷಿ ನೀಡಿದೆ. ಇದೇ ಮೊದಲ ಭಾರಿಗೆ ಲೂಸಿಯಾ ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಮಲಯಾಳಂ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಕುರಿತು ಫೋಟೋವೊಂದನ್ನು ಹಂಚಿಕೊಂಡಿದ್ದ ಹೊಂಬಾಳೆ ಫಿಲ್ಮ್ಸ್ ತಮ್ಮ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಮತ್ತೊಂದು ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದೆ ಎಂದು ಘೋಷಿಸಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಮೊದಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದ ನಿರ್ದೇಶಕರೇ ಆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ವಿಶೇಷ. ಪ್ರಧಾನ ಪಾತ್ರದಲ್ಲಿ ಫಾಹದ್ ಫಾಸಿಲ್ …
ಒಟ್ಟಾವಾ: ಉನ್ನತ ಶಿಕ್ಷಣದ ಕನಸು ಹೊತ್ತು ಕೆನಡಾಗೆ ತೆರಳಿರುವ ಪಂಜಾಬ್‌ನ ಸುಮಾರು 700 ವಿದ್ಯಾರ್ಥಿಗಳ ಭವಿಷ್ಯ ಇದೀಗ ಗೊಂದಲಕ್ಕೆ ಈಡಾಗಿದೆ. ಪಂಜಾಬ್‌ನ ಜಲಂಧರ್‌ನಲ್ಲಿರುವ ಕೆಲವು ಏಜೆಂಟ್‌ಗಳು ಈ ವಿದ್ಯಾರ್ಥಿಗಳಿಗೆ ನಕಲಿ ಆಫರ್ ಲೆಟರ್‌ಗಳನ್ನು ನೀಡಿದ್ದು, ಅದನ್ನು ಪಡೆದಿರುವ ವಿದ್ಯಾರ್ಥಿಗಳು ಇದೀಗ ಗಡಿಪಾರಿನ ಭೀತಿ ಎದುರಿಸುವಂತಾಗಿದೆ. ತಮ್ಮ ಆಫರ್ ಲೆಟರ್ ನಕಲಿ ಎಂದು ಗೊತ್ತಾಗುತ್ತಿದ್ದಂತೆ ಅನೇಕ ವಿದ್ಯಾರ್ಥಿಗಳು ಕೆನಡಾದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈಗ ಕೆನಡಾ ಸರ್ಕಾರ ಈ ಎಲ್ಲ ವಿದ್ಯಾರ್ಥಿಗಳನ್ನೂ ಭಾರತಕ್ಕೆ ಗಡಿಪಾರು ಮಾಡಲು ಸಿದ್ಧತೆ ನಡೆಸಿದೆ.
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಫೆಡರಲ್ ಕ್ರಿಮಿನಲ್ ಆರೋಪಗಳನ್ನು ಹೊರಿಸಿರುವ ನ್ಯಾಯಾಂಗ ಇಲಾಖೆಯು ಕಾನೂನುಬದ್ಧವಾಗಿ ಮತ್ತು ರಾಜಕೀಯವಾಗಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರ ಕಳೆದುಕೊಂಡ ಬಳಿಕ ತಮ್ಮೊಂದಿಗೆ ತೆಗೆದುಕೊಂಡು ಹೋದ ವರ್ಗೀಕೃತ ದಾಖಲೆಗಳ ನಿರ್ವಹಣೆ ಮತ್ತು ಅವುಗಳನ್ನು ಹಿಂಪಡೆಯಲು ಸರ್ಕಾರದ ಪ್ರಯತ್ನಗಳಿಗೆ ಅಡ್ಡಿಪಡಿಸಿದ್ದಾರೆಯೇ ಎಂಬ ಕುರಿತು ನಡೆದ ಸುದೀರ್ಘ ತನಿಖೆಯ ಆಧಾರದ ಮೇಲೆ ಟ್ರಂಪ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ವಿಶೇಷ ಅಭಿಯೋಜಕ ಜಾಕ್ ಸ್ಮಿತ್ ಅವರ ಕಚೇರಿಯಿಂದ ಮಿಯಾಮಿ ಜಿಲ್ಲಾ ನ್ಯಾಯಾಲಯದಲ್ಲಿ ದೋಷಾರೋಪಪಟ್ಟಿ ಸಲ್ಲಿಸಲಾಗಿದ್ದು, ಅಮೆರಿಕದ ಇತಿಹಾಸದಲ್ಲಿ ಮೊದಲ ಬಾರಿಗೆ ಮಾಜಿ ಅಧ್ಯಕ್ಷರೊಬ್ಬರು ಫೆಡರಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಟ್ರಂಪ್ ಮಾಜಿ ಅಧ್ಯಕ್ಷರಷ್ಟೇ ಅಲ್ಲ. 2024ರ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಗಾದಿಗೆ ಸ್ಪರ್ಧೆ ಮಾಡುವ ಮೂಲಕ ಅಧ್ಯಕ್ಷ ಜೋ ಬೈಡನ್ ಅವರನ್ನು ಎದುರಿಸಲು ಮುಂಚೂಣಿಯಲ್ಲಿರುವವರಾಗಿದ್ದಾರೆ, ಬೈಡನ್ ಆಡಳಿತವು ಈಗ ಅವರ ಸಂಭಾವ್ಯ ಪ್ರತಿಸ್ಪರ್ಧಿಯನ್ನು ಶಿಕ್ಷಿಸಲು ಪ್ರಯತ್ನಿಸುತ್ತಿದೆ ಎಂಬ ಸಂಶಯವನ್ನೂ ಮೂಡಿಸಬಹುದು. ಗೂಢಚರ್ಯೆ ಕಾಯಿದೆಯನ್ನು ಉಲ್ಲಂಘಿಸಿ…
ಬೆಂಗಳೂರು: ಜೂನ್ 9ರಿಂದ 11ರ ವರೆಗೆ 3 ದಿನಗಳ ಕಾಲ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ತಿಳಿಸಿದೆ ಜೂನ್ 9ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ? ಹೊಸೂರು, ಕೆಂಗ್ಲಾಪುರ, ಸೊರಲಮಾವು, ಕೊರಗೆರೆ, ಕೆಂಕೆರೆ, ಏಳ್ನಾಡು, ಸಿಂಗಾಪುರ, ಚಿಕ್ಕಬಿದರೆ, ನಂದಿಹಳ್ಳಿ, ಲಿಂಗಪ್ಪನಹಳ್ಳಿ, ಮತಿಹಳ್ಳಿ, ಕಲ್ಲಹಳ್ಳಿ, ಸೀಗೆಬಾಗಿ, ಕೇಶವಪುರ, ಹೊಸಳ್ಳಿ, ಸೋಮಜ್ಜನಪಾಳ್ಯ, ಬರಕೊನಾಲು ಮತ್ತು ಚಿಕ್ಕಪ್ಪೇನಹಳ್ಳಿ. ಶಿವನವಳ್ಳಿ, ಅಪಾರ್ಟ್‌ಮೆಂಟ್‌ನ ಚಿಕ್ಕಪೇಟೆ ಸುಣ್ಣವಳ್ಳಿ ವನಹಳ್ಳಿ ಉಪ ಕೇಂದ್ರಗಳು. ಜೂನ್ 10 ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ? ಬೈರೋಹಳ್ಳಿ, ರಾಮೋಹಳ್ಳಿ, ಕೆಂಗೇರಿ ಟೌನ್, ಬಿಡದಿ ಗ್ರಾಮಾಂತರ, ದೇವಿಕಿರಣ್, ಡೆಕ್ಕನ್ ಹೆರಾಲ್ಡ್, ಕೆಎಐಡಿಬಿ 1ನೇ ಹಂತ, ಕೆಎಐಡಿಬಿ 2ನೇ ಹಂತ, ಗೇರುಪಾಳ್ಯ ಕೈಗಾರಿಕಾ ಪ್ರದೇಶ, ಇಸ್ರೋ, ಗೋಣಿಪುರ, ಬಿಜಿಎಸ್, ಕೆಂಗೇರಿ, ಬ್ರಿಗೇಡ್ ಪನೋರಮಾ, ಶ್ರೀರಾಮ ಬಡಾವಣೆ, ಕಣ್ಮಿಣಿಕೆ, ಸಂದೀಪ್ ತೋಟ, ಡೈಮಂಡ್ ಡಿಸ್ಟ್ರಿಕ್ಟ್ 1 ಮತ್ತು 2, ಕೋಡಿಹಳ್ಳಿ, ಯಲಾಪುರ, ಸಾಗರನಹಳ್ಳಿ, ಎಂ ಎಸ್ ಹಳ್ಳಿ, ಹೇಮಾವತಿ, ಬಂಡಿಹಳ್ಳಿ, ಬೊಮ್ಮೇನಹಳ್ಳಿ, ತ್ಯಾಗಟೂರು, ಬೆಣಚಿಗೆರೆ,…
ಬೆಂಗಳೂರು: ಕಲುಷಿತ ನೀರು ಸೇವನೆಯಿಂದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಚೂಡಸಂದ್ರದಲ್ಲಿರುವ ಮಹಾವೀರ್ ರಾರಯಂಚೆಸ್ ಅಪಾರ್ಟ್‌ಮೆಂಟ್‌ನ 118 ಮಂದಿ ನಿವಾಸಿಗಳು ಅಸ್ವಸ್ಥರಾಗಿದ್ದಾರೆ. ವಾಂತಿ, ಭೇದಿಯಿಂದ ನರಳುತ್ತಿರುವ ನಿವಾಸಿಗಳಿಗೆ ಚಿಕಿತ್ಸೆ ನೀಡಲು, ಅಪಾರ್ಟ್‌ಮೆಂಟ್ ಆವರಣದಲ್ಲಿಯೇ ಬಿಬಿಎಂಪಿ ತಾತ್ಕಾಲಿಕ ಕ್ಲಿನಿಕ್ ತೆರೆದಿದೆ. ನಿವಾಸಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ವೈದ್ಯರ ತಂಡವನ್ನು ನಿಯೋಜಿಸಿದೆ. ಜತೆಗೆ ಆ್ಯಂಬುಲೆನ್ಸ್ ಕೂಧಿಡ ಒದಗಿಸಲಾಗಿದೆ. ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಶುದ್ಧ ನೀರು ಒದಗಿಸದ ಬಿಲ್ಡರ್ ವಿರುದ್ಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಅಲ್ಲದೆ, ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳು ಕೂಡ ಬಿಲ್ಡರ್‌ಗೆ ನೋಟಿಸ್ ಜಾರಿ ಮಾಡಿ, ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರು: ಭಾರತ್ ಇನ್ಫ್ರಾ ಎಕ್ಸ್ಪೋರ್ಟ್ಸ್ ಅಂಡ್ ಇಂಪೋರ್ಟ್ಸ್ ಸಂಸ್ಥೆಯ ಬೆಂಗಳೂರು ಹಾಗೂ ದಾವಣಗೆರೆ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 113.38 ಕೋಟಿ ರೂ ಸಾಲ ಬಾಕಿ ಉಳಿಸಿಕೊಂಡ ಹಾಗೂ ಸಾಲದ ಹಣಕ್ಕಾಗಿ ಸುಳ್ಳು ದಾಖಲೆಗಳನ್ನು ಕೊಟ್ಟ ಆರೋಪ ಭಾರತ್ ಇನ್ಫ್ರಾ ಮೇಲಿದೆ. ಈ ಪ್ರಕರಣದ ಮೇಲೆ ಇಡಿ ಅಧಿಕಾರಿಗಳ ತಂಡಗಳು ಜೂನ್ 5ರಂದು ರೇಡ್ ನಡೆಸಿರುವುದು ತಿಳಿದುಬಂದಿದೆ.
ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಬಿಪರ್‌ಜಾಯ್ ಚಂಡಮಾರುತ ಪ್ರಭಾವದ ಹಿನ್ನೆಲೆ, ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೂ.11 ಮತ್ತು ಜೂ.12ರಂದು ವ್ಯಾಪಕ ಮಳೆಯಾಗಲಿದ್ದು, ಎಲ್ಲಾ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ. ಇದೇ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲೂ ವ್ಯಾಪಕ ಮಳೆಯಾಗಲಿದೆ. ಬಿಪರ್‌ಜಾಯ್ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ತೀವ್ರ ಸ್ವರೂಪ ಪಡೆದಿದೆ, ಇದರ ಪರಿಣಾಮ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಾಗಲಿದೆ. ಮುಂದಿನ 3-4 ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ಕರಾವಳಿ, ಗೋವಾ, ಕೇರಳ, ಲಕ್ಷದ್ವೀಪ, ತಮಿಳುನಾಡು, ಆಂಧ್ರಪ್ರದೇಶ, ರಾಜಸ್ಥಾನ, ಅಸ್ಸಾಂ, ಮಿಜೋರಾಂ, ಮಣಿಪುರ, ಅರಿಣಾಚಲಪ್ರದೇಶ, ಮೇಘಾಲಯದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ತುಮಕೂರಿನಲ್ಲಿ ಭಾರಿ ಮಳೆಯಾಗಲಿದೆ, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ…
ಬೆಂಗಳೂರು: ಕಾಂಗ್ರೆಸ್ ಪಕ್ಷದ ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ ಗ್ಯಾರಂಟಿ ಯೋಜನಗಳ ಗೊಂದಲ ಬಗ್ಗೆ ಇಲಾಖೆ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಿಎಂ ನಡೆಸಿದ್ರು. ಬಾಡಿಗೆದಾರರಿಗೆ ಉಚಿತ ಕರೆಂಟ್ ನೀಡುವ ತೀರ್ಮಾನಕ್ಕೆ ಬಂದ್ರೆ , ಮನೆಯಲ್ಲಿ ಟ್ಯಾಕ್ಸ್ ಕಟ್ಟುವವರು ಇದ್ರೆ ಗೃಹ ಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ ಎಂದು ತೀರ್ಮಾನ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷಗಳು ತಿರುಗಿಬಿದ್ದಿದ್ದು ವ್ಯಂಗ್ಯವಾಡ್ತಿವೆ. ಕಾಂಗ್ರೆಸ್ ಅಧಿಕಾರ ಬಂದ ತಕ್ಷಣ ತಾವು ಘೋಷಣೆ ಮಾಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಈಗಾಗಲೇ ಗ್ಯಾರಂಟಿ ಜಾರಿಯಾಗುವ ದಿನಾಂಕ ಮತ್ತು ಕೆಲ ದಾಖಲೆ ಒದಗಿಸಲು ಸಮಯಾವಕಾಶ ಸಹಾ ನೀಡಿದೆ. ಆದ್ರೆ ಈ ಗ್ಯಾರಂಟಿಗಳಲ್ಲಿ ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ ಬಗ್ಗೆ ರಾಜ್ಯದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಯಾರಿಗೆ ಈ ಯೋಜನೆಗಳು ಅನ್ವಯವಾಗುತ್ತೆ ಎಂಬ ಚರ್ಚೆಗಳು ನಡೆಯುತ್ತಿದ್ದವು, ಈ ಗೊಂದಗಳಿಗೆ ತೆರೆ ಎಳೆಯಲು ಇಂದು ಸಿಎಂ ಸಿದ್ದರಾಮಯ್ಯ ಸಂಬಂಧ ಪಟ್ಟ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಜೊತೆ…
ಮುಂಬೈ: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನೂ ಮೀರಿಸುವ ಘಟನೆ ಮುಂಬೈನ ಮೀರಾ ರೋಡ್‌ನಲ್ಲಿರುವ ಗೀತಾ ನಗರದಲ್ಲಿ ನಡೆದಿದೆ. ಲಿವ್- ಇನ್- ಪಾರ್ಟ್‌ನರ್ ನಲ್ಲಿದ್ದ ತನ್ನ ಗೆಳತಿಯನ್ನು ಹತ್ಯೆ ಮಾಡಿರುವ ಆರೋಪಿ 20 ಕ್ಕೂ ಅಧಿಕ ತುಂಡುಗಳಾಗಿ ಕತ್ತರಿಸಿ ಕುಕ್ಕರ್ (Cooker) ನಲ್ಲಿ ಬೇಯಿಸಿ ವಿಲೇವಾರಿ ಮಾಡುವ ಪ್ರಯತ್ನ ಮಾಡಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಗೀತಾ ನಗರದ ಏಳನೇ ಹಂತದಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿದ್ದ 56 ವರ್ಷದ ಮನೋಜ್ ಸಹಾನಿ ಎಂಬಾತನನ್ನು ನಯಾನಗರ ಪೊಲೀಸ್ ಠಾಣೆ (Nayanagar Police Station) ಯ ಪೊಲೀಸರು ಬಂಧಿಸಿದ್ದಾರೆ. ಮನೋಜ್ ಸಹಾನಿ (Manoj Sahni) ತನ್ನ ಗೆಳತಿ ಸರಸ್ವತಿ ವೈದ್ಯ ಜೊತೆಗೆ ಕಳೆದ ಮೂರು ವರ್ಷಗಳಿಂದ ಮುಂಬೈನ ಮೀರಾ ರೋಡ್‌ನಲ್ಲಿರುವ ಗೀತಾ ನಗರ 7 ನೇ ಹಂತದಲ್ಲಿರುವ ಗೀತಾ ಆಕಾಶ್ ದೀಪ್ ಕಟ್ಟಡದಲ್ಲಿ ಫ್ಲಾಟ್ 704 ರಲ್ಲಿ ವಾಸಿಸುತ್ತಿದ್ದರು. ಆಗ್ಗಾಗ್ಗೆ ನಡೆಯುತ್ತಿದ್ದ ಜಗಳ ತಾರಕಕ್ಕೇರಿ ಸರಸ್ವತಿಯನ್ನು ಹತ್ಯೆ ಮಾಡಲಾಗಿದೆ…