ಬೆಂಗಳೂರು: ದಿನನಿತ್ಯ ಓಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದೆ ಕಾಲು ಜಾರಿ ಹಿಂದಕ್ಕೆ ಬೀಳಲು ಆಗಿದ್ದೆ. ಗಾಬರಿ ಪಡುವಂತಹದ್ದೇನಿಲ್ಲ, ನಾನು ಆರೋಗ್ಯವಾಗಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಈ ವಿಚಾರವನ್ನು ಅತಿ ರಂಜಿತವಾಗಿ ವರದಿ ಮಾಡಿ ಜನ ಗಾಬರಿ ಪಡುವಂತೆ ಮಾಡಬೇಡಿ ಎಂದು ಸಿದ್ದು ಸುದ್ದಿಗಾರರಿಗೆ ವಿನಂತಿ ಮಾಡಿದ್ದಾರೆ. ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆ ಕುಡ್ಲಿಗಿಯಲ್ಲಿ (Kudligi) ಕಾಂಗ್ರೆಸ್ (Congress) ಅಭ್ಯರ್ಥಿ ಡಾ.ಎನ್.ಟಿ ಶ್ರೀನಿವಾಸ್ ಅವರ ಪರವಾಗಿ ಪ್ರಚಾರಕ್ಕೆ ಶನಿವಾರ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ಈ ವೇಳೆ ಅವರು ಕಾರು ಹತ್ತುವಾಗ ಕುಸಿದು ಬಿದ್ದರು. ಅಲ್ಲೇ ಇದ್ದ ವೈದ್ಯರು ಅವರ ಕೈಹಿಡಿದು ಕಾರಿನಲ್ಲಿ ಕೂರಿಸಿದ್ದರು. ಬಳಿಕ ಕಾರಿನೊಳಗೆ ಕೂರಿಸಿ ಗ್ಲೂಕೋಸ್ ನೀಡಿದರು. ಗ್ಲೂಕೋಸ್ ಕುಡಿದ ಬಳಿಕ ಚೇತರಿಸಿಕೊಂಡ ಸಿದ್ದರಾಮಯ್ಯ ಜನರತ್ತ ಕೈ ಬೀಸಿ ಕಾರ್ಯಕ್ರಮಕ್ಕೆ ತೆರಳಿದ್ದರು. SHARE.
Author: Prajatv Kannada
ಕೆ ಆರ್ ಪುರ : ಬೆಂಗಳೂರಿನ ಕೆಆರ್ ಪುರದ ಕೇಂಬ್ರಿಡ್ಜ್ ವಿದ್ಯಾಸಂಸ್ಥೆಯಲ್ಲಿ ರೆಫ್ರಲ್ ಲ್ಯಾಬ್ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು , ಕಾಲೇಜಿನ ವಿದ್ಯಾರ್ಥಿಗಳು , ಪೋಷಕರು ಸೇರಿದಂತೆ ಸಿಬ್ಬಂದಿ ವರ್ಗದವರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಸಾಮಾನ್ಯ ಆರೋಗ್ಯ ತಪಾಸಣೆಯ ಜೊತೆಗೆ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಇಸಿಜಿ , ಕಣ್ಣು, ಲಿವರ್ , ಕಿವಿ-ಮೂಗು,ರಕ್ತ ಪರೀಕ್ಷೆ ಹಲ್ಲಿಗೆ ಸಂಬಂಧಿಸಿದ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳನ್ನು ಉಚಿತವಾಗಿ ಮಾಡಿ ಔಷಧಿಯನ್ನು ನೀಡಲಾಯಿತು. ಕಾಲೇಜಿನ ಅಧ್ಯಕ್ಷ ಡಿ.ಕೆ.ಮೋಹನ್ ಬಾಬು ಅವರ ರೆಫ್ರಲ್ ಲ್ಯಾಬ್ ಸಹಯೋಗದಲ್ಲಿ ಈ ಶಿಬಿರವನ್ನು ಹಮ್ಮಿಕೊಂಡು ವಿದ್ಯಾಸಂಸ್ಥೆ ಎಲ್ಲಾರು ಸದುಪಯೋಗ ಪಡೆಸಿಕೊಳ್ಳುವಂತೆ ಕರೆ ನೀಡಿದರು.ಆರೋಗ್ಯ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಇಂತಹ ಶಿಬಿರಗಳು ಆರೋಗ್ಯ ದೃಷ್ಟಿಯಿಂದ ಬಹಳಷ್ಟು ಅಗತ್ಯವಿದೆ ಎಂದರು ಉಚಿತ ಆರೋಗ್ಯ ಶಿಬಿರದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನ ಉಪಯೋಗ ಪಡೆದುಕೊಂಡಿದ್ದರು. ಲ್ಯಾಬ್ ನ ಚೀಪ್ ಎಕ್ಸ್ಯೂಟಿವ್ ಆಫೀಸರ್ ಶ್ರೀಧರ್ ಮತ್ತಿತರರಿದ್ದರು. SHARE.
ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ಬೆಂಗಳೂರಿನಲ್ಲಿ(Bangalore) ರೋಡ್ ಶೋ ನಡೆಸುವ ಹಿನ್ನೆಲೆ, ನಗರದ ಹಲವೆಡೆ ಸಂಚಾರ ನಿರ್ಬಂಧಿಸಲಾಗಿದೆ. ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಮಾಡಲಿರುವ ಪ್ರಧಾನಿ ಮೋದಿ(PM Modi) 6 ಸಮಾವೇಶ, 2 ರೋಡ್ ಶೋ ನಡೆಸಲಿದ್ದಾರೆ. ಪ್ರಧಾನಿ ಮೋದಿ ರೋಡ್ ಶೋ ನಲ್ಲಿ 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಾಗಡಿ ರಸ್ತೆಯ ನೈಸ್ ಜಂಕ್ಷನ್ ನಿಂದ ಸುಮನಹಳ್ಳಿ ಸರ್ಕಲ್ ವರೆಗೂ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ನಡೆಸುವ ಸುತ್ತಮುತ್ತಲ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಇಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 7:30ರ ವರೆಗೆ ಸಂಚಾರ ನಿರ್ಬಂಧಿಸಲಾಗಿದೆ. ಓಲ್ಡ್ ಏರ್ ಪೋರ್ಟ್ ರಸ್ತೆ, ಕಬ್ಬನ್ ರಸ್ತೆ, ಅಂಬೇಡ್ಕರ್ ರಸ್ತೆ, ದೇವಾಂಗ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಡಿಕನ್ ಸನ್ ರಸೆ, ಲಾಲ್ ಬಾಗ್ ವೆಸ್ಟ್ ಗೇಟ್ ರಸ್ತೆ, ಕೆ ಆರ್ ಸರ್ಕಲ್, ಆರ್ ವಿ ಕಾಲೇಜು ರಸ್ತೆ, ಲಾಲ್ ಬಾಗ್ ಮುಖ್ಯ…
ಬೆಂಗಳೂರು: ಮುಂದಿನ ಆರು ತಿಂಗಳಲ್ಲಿ ರಾಜ್ಯದ ಮೂರು ಕಂದಾಯ ವಿಭಾಗಗಳಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯ ಸ್ಥಾಪಿಸಲು ಬೆಂಗಳೂರಿನ ಹೈಕೋರ್ಟ್ (High Court)ಪೀಠ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವೀರಪ್ಪ ಮತ್ತು ನ್ಯಾಯಮೂರ್ತಿ ಟಿ ವೆಂಕಟೇಶ್ ನಾಯಕ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೇ, ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದ ಎನ್‌ಐಎ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಯಡಿ ರಾಜ್ಯ ಸರ್ಕಾರ ಇಡೀ ರಾಜ್ಯಕ್ಕೆ ಬೆಂಗಳೂರು ನಗರದಲ್ಲಿ ಮಾತ್ರ ಒಂದು ವಿಶೇಷ ನ್ಯಾಯಾಲಯ ರಚನೆ ಮಾಡಿದೆ. ಎನ್‌ಐಎ ಪ್ರಕರಣಗಳನ್ನು ಪರಿಶೀಲಿಸಿದಾಗ ಸುಮಾರು 8 ರಿಂದ 9 ವರ್ಷಗಳ ಹಳೆಯ ಪ್ರಕರಣಗಳು ಬಾಕಿ ಉಳಿದಿವೆ. ನ್ಯಾಯಾಂಗ ಪ್ರಸ್ತುತ ಸಾರ್ವಜನಿಕರ ನಂಬಿಕೆಯ ಅಂತಿಮ ಹಾಗೂ ಕೊನೆಯ ಕೇಂದ್ರ ಬಿಂದುವಾಗಿದೆ. ಎಲ್ಲ ಕಡೆಗಳಲ್ಲಿ ನ್ಯಾಯ ಲಭ್ಯವಾಗದಿದ್ದಾಗ ಜನ ಅಂತಿಮವಾಗಿ ನ್ಯಾಯಾಲಯದ ಕದ ತಟ್ಟುತ್ತಾರೆ. ಧರ್ಮ, ಜಾತಿ ಲಿಂಗ ಅಥವಾ ಜನ್ಮ ಸ್ಥಳವನ್ನು ಲೆಕ್ಕಿಸದೆ ಪ್ರತಿಯೊಬ್ಬರು ಗೌರವಿಸುವ ಸ್ಥಳವೇ ನ್ಯಾಯಾಲಯವಾಗಿದೆ.…
ಮಹದೇವಪುರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡಿ ಜನಮನ್ನಣೆ ಪಡೆದುಕೊಂಡಿದ್ದು, ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ಅಭಿಪ್ರಾಯಪಟ್ಟರು. ಹಗದೂರು ಮತ್ತು ಗಾಂಧಿಪುರದಲ್ಲಿ ಗ್ರಾಮದ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಶಾಸಕ ಅರವಿಂದ ಲಿಂಬಾವಳಿಯವರ ಪಕ್ಷ ಸಂಘಟನೆ, ಅಭಿವೃದ್ಧಿ ಕಾರ್ಯವೈಖರಿಯನ್ನ ಮೆಚ್ಚಿ ಕಾಂಗ್ರೆಸ್‌ನ ಮಾಜಿ ತಾಲೂಕು ಪಂಚಾಯತಿ ಸದಸ್ಯ ಜಿ.ಎಂ.ನಾರಾಯಣ್, ಹಿರಿಯ ಕಾಂಗ್ರೆಸ್ ಮುಖಂಡರಾದ ಎಚ್. ಕೆ.ನಾರಾಯಣಸ್ವಾಮಿ, ರಘು ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು ಅರವಿಂದ ಲಿಂಬಾವಳಿ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿಯವರು,ನರೇಂದ್ರ ಮೋದಿ ಅವರು ಕಳೆದ 9 ವರ್ಷಗಳಲ್ಲಿ ಕಳಂಕ ರಹಿತ ಆಡಳಿತ ನೀಡುವ ಮೂಲಕ, ಭಾರತೀಯ ಜನತಾ ಪಾರ್ಟಿಗೆ ಗೌರವ ತಂದು ಕೊಟ್ಟಿದ್ದಾರೆ. ಹೀಗಾಗಿ, ಇಂದಿಗೂ ಸಹ ದೇಶದ ಜನತೆ ಭಾರತೀಯ ಜನತಾ ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ಹಾಕುತ್ತಿದ್ದು, ಇಂದಿಗೂ ಸಹ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ, ಬಿಜೆಪಿ…
ಬೆಂಗಳೂರು: ಎಐಎಡಿಎಂಕೆ ಅಭ್ಯರ್ಥಿಯೆಂದು ಚುನಾವಣೆ ಆಯೋಗಕ್ಕೆ(Election Commission)ವಂಚಿಸಲು ಯತ್ನಿಸಿದ ಕುಮಾರ್ ಕಣ್ಣನ್ ವಿರುದ್ಧ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ(Cotton Town Police Station) ಪ್ರಕರಣ ದಾಖಲಾಗಿದೆ. ಕುಮಾರ್ ಕಣ್ಣನ್ ಎಂಬುವರು ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ(Gandhinagar Assembly Constituency) ಎಐಎಡಿಎಂಕೆ ಪಕ್ಷದ ಆಭ್ಯರ್ಥಿಯಾಗಿ ನಕಲಿ ಎ ಫಾರಂ ಹಾಗೂ ಬಿ ಫಾರಂ ಸಲ್ಲಿಸಿದ್ದರು. ಸಲ್ಲಿಸಿದ್ದ ಅರ್ಜಿಯಲ್ಲಿ ಓ ಪನ್ನೀರ್ ಸೆಲ್ವಂ ಸಹಿಯಿತ್ತು. ವಾಸ್ತವವಾಗಿ ಎಐಎಡಿಎಂಕೆ ಪದಾಧಿಕಾರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕುಮಾರ್ ಕಣ್ಣನ್ ಅವರನ್ನು ಪಕ್ಷೇತರ ಅಭ್ಯರ್ಥಿ ಎಂದು ಚುನಾವಣಾ ಆಯೋಗ ಪರಿಗಣಿಸಿತ್ತು. ಆಯೋಗಕ್ಕೆ ವಂಚಿಸಲು ಯತ್ನಿಸಿದ ಆರೋಪದ ಹಿನ್ನೆಲೆ ಚುನಾವಣಾ ಅಧಿಕಾರಿಯೊಬ್ಬರು ಕುಮಾರ್ ಕಣ್ಣನ್ ವಿರುದ್ಧ ದೂರು ನೀಡಿದ ಮೇರೆಗೆ ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು: ರಾಜ್ಯದ ಜನ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಲಿದ್ದಾರೆ ಎಂದು ರಾಜ್ಯಸಭಾ ಸದ್ಯಸ ರಾಜೀವ್ ಶುಕ್ಲಾ(Rajeev Shukla) ಹೇಳಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ(KPCC) ಮಾತನಾಡಿದ ಅವರು, ಕಳೆದ ಬಾರಿ ಬಿಜೆಪಿ ನಮ್ಮ ಶಾಸಕರನ್ನು ಖರೀದಿ ಮಾಡಿ ಸರ್ಕಾರ ಬೀಳಿಸಿತ್ತು. ಹೀಗಾಗಿ ರಾಜ್ಯದ ಜನ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಎದ್ದಿದ್ದು, ಕಾಂಗ್ರೆಸ್ ಪ್ರಚಂಡ ಬಹುಮತ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದಿದ್ದು, ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿದ್ದಾರೆ. ನಾವು ಹಿಮಾಚಲ ಪ್ರದೇಶದಲ್ಲೂ ಸಾಕಷ್ಟು ಯೋಜನೆ ಘೋಷಣೆ ಮಾಡಿದ್ದು, ಅವುಗಳನ್ನು ಜಾರಿ ಮಾಡುತ್ತಿದ್ದೇವೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿ, ಮಹಿಳೆಯರಿಗೆ 1500 ರೂ. ಉಚಿತ ವಿದ್ಯುತ್, ರೈತರಿಗೆ ಬೆಂಬಲ ಬೆಲೆ ಕುರಿತ ಭರವಸೆಯನ್ನು ಹಿಮಾಚಲ ಪ್ರದೇಶದಲ್ಲಿ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ರಾಜೀವ್ ಶುಕ್ಲಾ ತಿಳಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆ (Legislative Assembly) ಕಣ ರಂಗೇರಿದೆ. ಸುದೀಪ್ ಸೇರಿದಂತೆ ಹಲವು ನಟರ ನಾನಾ ಪಕ್ಷಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಆದರೆ, ನಟಿ ಲೀಲಾವತಿ (Leelavathi) ಮತದಾನ (Voting) ಮಾಡುವ ಮೂಲಕ ಮಾದರಿಯಾಗಿದ್ದಾರೆ. ಮೇ 10ರಂದು ಮತದಾನ ದಿನಾಂಕ ಘೋಷಣೆ ಆಗಿದ್ದರೂ, ಚುನಾವಣೆ ಆಯೋಗ ಹಿರಿಯ ನಾಗರೀಕರಿಗೆ ವಿಶೇಷ ಸೌಲಭ್ಯ ಕಲ್ಪಿಸಿರುವುದರಿಂದ ಇಂದು ಲೀಲಾವತಿ ಅವರು ಮತದಾನ ಮಾಡಿದ್ದಾರೆ. ಈ ಬಾರಿಯ ಮತದಾನ ಮಾಡಿದ ಮೊದಲ ನಟಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಎಂಬತ್ತು ವರ್ಷ ತುಂಬಿದ ನಾಗರೀಕರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ ಚುನಾವಣೆ (Election) ಆಯೋಗ. ಇದರ ಅಡಿಯಲ್ಲಿ ಹಿರಿಯ ನಟಿ ಲೀಲಾವತಿ, ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಮನೆಯಲ್ಲಿ ಮತದಾನ ಮಾಡಿದ್ದಾರೆ. ಮಗ ವಿನೋದ್ ರಾಜ್ (Vinod) ಸಹಾಯದಿಂದ ಅವರು ಮನೆಯಲ್ಲಿ ಮತದಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಲೀಲಾವತಿ, ‘ಚುನಾವಣೆ ಆಯೋಗ ಈ ಅವಕಾಶ ಕಲ್ಪಿಸಿದ್ದು ನನ್ನಂತಹ ಹಿರಿಯರಿಗೆ ಅನುಕೂಲ ವಾಗಿದೆ. ಎಲ್ಲರೂ ತಪ್ಪದೇ ಮತದಾನ…
ಬೆಂಗಳೂರು: ಕಾಂಗ್ರೆಸ್ ಪಕ್ಷದ ಗೌರವಾನ್ವಿತ ನಾಯಕಿ ಸೋನಿಯಾ ಗಾಂಧಿಯವರನ್ನುಅಶ್ಲೀಲ ಶಬ್ದಗಳಿಂದ ನಿಂದಿಸುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Basan Gowda Patil Yatnal)ಅವರನ್ನು ತಕ್ಷಣ ಪಕ್ಷದಿಂದ ಉಚ್ಚಾಟಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಬೇಕು, ಇಲ್ಲದೆ ಇದ್ದರೆ ಅವರ ಬೆಂಬಲದಿಂದಲೇ ಯತ್ನಾಳ್ ಅವರು ಇಂತಹ ನೀಚತನದ ಪ್ರದರ್ಶನ ಮಾಡುತ್ತಿದ್ದಾರೆಂದು ತಿಳಿದುಕೊಳ್ಳಬೇಕಾಗುತ್ತದೆ ಎಂಬುದಾಗಿ (Siddaramaiah) ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಸರಣಿ ಟ್ವಿಟ್ ಮಾಡಿರುವಂತ ಅವರು, ಸೋನಿಯಾ ಗಾಂಧಿಯವರ ವಿರುದ್ಧ ಈ ರೀತಿ ಅವಹೇಳನ ಕಾರಿಯಾದ ನಿಂದನೆ, ಚಾರಿತ್ರ್ಯಹನನದ ಪ್ರಯತ್ನ ಇದು ಮೊದಲ ಬಾರಿ ಅಲ್ಲ. ಸಾಕ್ಷಾತ್ ನರೇಂದ್ರ ಮೋದಿ ಅವರೇ ಸೋನಿಯಾ ಗಾಂಧಿಯವರನ್ನು ಕಾಂಗ್ರೆಸಿನ ವಿಧವೆ, ಜರ್ಸಿಕೌ, ಬಾರ್ ಡಾನ್ಸರ್ ಎಂದೆಲ್ಲ ಅವಹೇಳನ ಮಾಡಿದ್ದಾರೆ. ಬಹುಷಃ ಇದರ ಪ್ರಚೋದನೆಯಿಂದಲೇ ಯತ್ನಾಳ್ ಅಂತಹವರು ಈ ರೀತಿಯ ನೀಚ ಬುದ್ದಿಯನ್ನು ನಿರ್ಭೀತಿಯಿಂದ ಪ್ರದರ್ಶಿಸುತ್ತಿರುವಂತಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು: ನನ್ನ ಅಭಿವೃದ್ಧಿ ಕೆಲಸಗಳೇ ನನಗೆ ಗೆಲವು ತಂದು ಕೊಡುತ್ತದೆ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ(Minister K. Gopalaya) ಹೇಳಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ನಂದಿನಿ ಬ್ಲಾಕ್ ನಲ್ಲಿ (Nandini Block of Mahalakshmi Layout Constituency)ಮಾತನಾಡಿದ ಅವರು, ನಾನು ಯಾವುದೇ ಭಾಗಕ್ಕೆ ಹೋದರು ನಮಗೆ ಮತ ಹಾಕುತ್ತೇವೆ ಎಂದು ನಗುಮುಖದಿಂದ ಜನರು ಸ್ವಾಗತಿಸುತ್ತಾರೆ ನಾನು 10 ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಕಾರಣಬೂತವಾಗಿದೆ. Jagadish Shetter: ತೇಜಸ್ವಿನಿ ಅನಂತಕುಮಾರ್ ಗೆ ಟಿಕೆಟ್ ಕೈತಪ್ಪಲು ಬಿಎಲ್ ಸಂತೋಷ್ ಕಾರಣ: ಶೆಟ್ಟರ್ ಬಾಂಬ್ ಕಳೆದ ಹತ್ತು ವರ್ಷಗಳಿಂದ ಡಯಾಲಿಸಿ ಸೆಂಟರ್ ಹೆರಿಗೆ ಆಸ್ಪತ್ರೆ ನಮ್ಮ ಕ್ಲಿನಿಕ್ ರಾಣಿ ಅಬ್ಬಕ್ಕ ಕ್ರೀಡಾಂಗಣ ಕಿತ್ತೂರಾಣಿ ಚೆನ್ನಮ್ಮ ಕ್ರೀಡಾಂಗಣ ಬಾಲಗಂಗಾಧರನಾಥ ಸ್ವಾಮಿ ಪಾರ್ಕ್ ಶಿವಕುಮಾರ ಸ್ವಾಮೀಜಿ ಪಾರ್ಕ್ ಸರ್ಕ್ಯುಲರ್ ಪಾರ್ಕ್ ನವ ನಂದಿನಿ ಉದ್ಯಾನವನ ಕೆಂಪೇಗೌಡ ಉದ್ಯಾನವನ ಅಭಿವೃದ್ಧಿ ಕೆಲಸಗಳ ದೊಡ್ಡಪಟ್ಟಿದೆ . ಈ ಚುನಾವಣೆಯಲ್ಲಿ ಕಳೆದ ಚುನಾವಣೆಗಿಂತ ಹೆಚ್ಚಿನ ಬಹುಮತ ಜನ ನೀಡುತ್ತಾರೆ…