ಆನೇಕಲ್: ಶನಿವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಸಂಘದ (Industrial Association) ಅಧ್ಯಕ್ಷರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Raid) ನಡೆದಿದೆ. 20ಕ್ಕೂ ಹೆಚ್ಚು ಅಧಿಕಾರಿಗಳು ಬೊಮ್ಮಸಂದ್ರ ಪುರಸಭಾ ಸದಸ್ಯರಾಗಿರುವ ಎ. ಪ್ರಸಾದ್ ಹಾಗೂ ಸಹೋದರ ಛಲಪ್ರಸಾದ್ ಅವಳಿ ಸಹೋದರರ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. Vote from Home: ಇಂದಿನಿಂದ ಬ್ಯಾಲೆಟ್ ಪೇಪರ್ ವೋಟಿಂಗ್ ಆರಂಭ: 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನ ಎ. ಪ್ರಸಾದ್ ಅವರ ಬೊಮ್ಮಸಂದ್ರ ನಿವಾಸ, ಸಹೋದರ ಛಲಪ್ರಸಾದ್ ಅವರ ಆರ್‌ಎಸ್ ಗಾರ್ಡೇನಿಯ ನಿವಾಸ, ಬೊಮ್ಮಸಂದ್ರ ಕೈಗಾರಿಕಾ ಸಂಘದ ಕಚೇರಿ ಹಾಗೂ ಕಂಪನಿ ಮೇಲೆ ದಾಳಿ ಮಾಡಿದ್ದಾರೆ. ಬೊಮ್ಮಸಂದ್ರದಲ್ಲಿ ಪ್ರಭಾವಿ ನಾಯಕರಾಗಿರುವ ಎ.ಪ್ರಸಾದ್ ಹಾಗೂ ಛಲಪ್ರಸಾದ್ ಬಿಜೆಪಿಯಿಂದ (BJP) ಬೊಮ್ಮಸಂದ್ರ ಪುರಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ರು.
Author: Prajatv Kannada
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಾಧಾರಣ ಪ್ರದರ್ಶನ ನೀಡಿದೆ. ಈವರೆಗೆ ಆಡಿದ 7 ಪಂದ್ಯಗಳಲ್ಲಿ ಸತತ ಐದು ಸೋಲಿನ ಬಳಿಕ ಬ್ಯಾಕ್ ಟು ಬ್ಯಾಕ್ ಜಯ ದಾಖಲಿಸಿದರೂ ಅಂಕಪಟ್ಟಿಯ ಕೊನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಇದೀಗ ಡೇವಿಡ್ ವಾರ್ನರ್ ಸಾರಥ್ಯದ ಡೆಲ್ಲಿ ತಂಡಕ್ಕೆ ಮತ್ತೊಂದು ತಲೆಬಿಸಿ ಎದುರಾಗಿದೆ. ಪಾರ್ಟಿ ಒಂದರಲ್ಲಿ ಮಹಿಳೆಯೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡಿರುವ ಡೆಲ್ಲಿ ಫ್ರಾಂಚೈಸಿ ಹದ್ದು ಮೀರಿ ವರ್ತಿಸಿದ ಆಟಗಾರನಿಗೆ ಎಚ್ಚರಿಕೆ ರವಾನಿಸಿದೆ ಎಂದು ವರದಿಯಾಗಿದೆ. ಡೆಲ್ಲಿ ಫ್ರಾಂಚೈಸಿ ತಂಡ ಆಟಗಾರರ ಶಿಸ್ತು ಕಾಪಾಡುವ ಸಲುವಾಗಿ ನೀತಿ ಸಂಹಿತೆ ಹೊಂದಿದೆ. ಇದನ್ನು ಉಲ್ಲಂಘಿಸಿದ ಆಟಗಾರರ ವಿರುದ್ಧ ತಂಡ ದಂಡ ವಿಧಿಸಬಹುದು. ಆಟಗಾರನ ಜೊತೆಗಿನ ಒಪ್ಪಂದವನ್ನೂ ರದ್ದು ಪಡಿಸಬಹುದಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಈ ವರದಿ ಮಾಡಿದ್ದು, ನಿಯಮ ಉಲ್ಲಂಘನೆ ಮಾಡಿರುವ ಆಟಗಾರ ಯಾರು ಎಂದು ಎಲ್ಲಿಯೂ ವಿವರಿಸಲಾಗಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೇ ಪಂದ್ಯದಲ್ಲಿ ಸನ್‌ರೈಸರ್ಸ್…
ಮೊಹಾಲಿ: ಸಿಕ್ಸರ್, ಬೌಂಡರಿಗಳ ಸುರಿಮಳೆ ಆಟದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ 56 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 5 ವಿಕೆಟ್ ನಷ್ಟಕ್ಕೆ 257 ರನ್ ಹೊಡೆಯಿತು. ಭಾರೀ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ 19.5 ಓವರ್‌ಗಳಲ್ಲಿ 201 ರನ್‌ಗಳಿಗೆ ಆಲೌಟ್ ಆಯ್ತು ಪಂಜಾಬ್ ಆರಂಭದಲ್ಲೇ ತನ್ನ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತ್ತು. ನಾಯಕ ಶಿಖರ್ ಧವನ್ 1 ರನ್ ಗಳಿಸಿ ಔಟಾದರೆ ಪ್ರಭಾಸಿಮ್ರಾನ್ ಸಿಂಗ್ 9 ರನ್ ಗಳಿಸಿ ಔಟಾದರು. ಆದರೆ ಅಥರ್ವ ತೈದೆ ಮತ್ತು ಸಿಕಂದರ್ ರಜಾ ಮೂರನೇ ವಿಕೆಟಿಗೆ 47 ಎಸೆತದಲ್ಲಿ 78 ರನ್ ಜೊತೆಯಾಟವಾಡಿದರು. ಅಥರ್ವ ತೈದೆ 66 ರನ್(36 ಎಸೆತ, 8 ಬೌಂಡರಿ, 2 ಸಿಕ್ಸರ್), ಸಿಕಂದರ್ ರಾಜಾ 36 ರನ್(22 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ಸ್ಯಾಮ್ ಕರ್ರನ್ 21 ರನ್(11…
ಈ ಬಾರಿಯ ಐಪಿಎಲ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಅಷ್ಟು ಉತ್ತಮವಾಗಿಲ್ಲ. ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇಂತಹ ಕಳಪೆ ಪ್ರದರ್ಶನದ ನಡುವೆಯೇ ಕೆಕೆಆರ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಕೆಕೆಆರ್ ತಂಡದ ಆರಂಭಿಕ ಆಟಗಾರ ಲಿಟ್ಟನ್ ದಾಸ್ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಕೌಟುಂಬಿಕ ಕಾರಣದಿಂದಾಗಿ ದಾಸ್ ಬಾಂಗ್ಲಾದೇಶಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ. ಇದೇ ಮೊದಲ ಬಾರಿಗೆ ಐಪಿಎಲ್ ಆಡುತ್ತಿದ್ದ ಲಿಟ್ಟನ್ ದಾಸ್ ಅವರನ್ನು ಕೋಲ್ಕತ್ತಾ 50 ಲಕ್ಷಕ್ಕೆ ಖರೀದಿಸಿತು. ಕೇವಲ ಒಂದು ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದ ದಾಸ್ 4 ರನ್ ಮಾತ್ರ ಬಾರಿಸಿದ್ದರು. ಅಲ್ಲದೆ ಲಿಟನ್ ದಾಸ್ಗೆ ಮತ್ತೆ ತಂಡದಲ್ಲಿ ಅವಕಾಶ ಸಿಗುವುದು ಕಷ್ಟಕರವಾಗಿತ್ತು. ಏಕೆಂದರೆ ಕೋಲ್ಕತ್ತಾ ತಂಡ ಸುನಿಲ್ ನರೈನ್, ಆಂಡ್ರೆ ರಸೆಲ್, ಜೇಸನ್ ರಾಯ್ ಮತ್ತು ಡೇವಿಡ್ ವಿಸಾ ರೂಪದಲ್ಲಿ ನಾಲ್ಕು ವಿದೇಶಿ ಆಟಗಾರರಿಗೆ ಅವಕಾಶ ನೀಡುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಪ್ಲೇಆಫ್ ತಲುಪಲು ಇನ್ನೂ…
ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ (Jantar Mantar) ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಭಾರತದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ (Kapil Dev) ಬೆಂಬಲ ನೀಡಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಪ್ರತಿಭಟನಾ ನಿರತರ ಫೋಟೋ ಹಂಚಿಕೊಂಡು ನ್ಯಾಯ ಸಿಗುತ್ತದೆಯೇ? ಎಂದು ಬರೆದುಕೊಂಡಿದ್ದಾರೆ. ಕುಸ್ತಿ ಫೆಡರೇಷನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ವಿನೇಶ್ ಫೋಗಟ್ (Vinesh Phogat), ಬಜರಂಗ್ ಪುನಿಯಾ (Bajrang Punia), ಸಾಕ್ಷಿ ಮಲಿಕ್ (Sakshi Malik) ಸೇರಿ ಹಲವಾರು ಕುಸ್ತಿ ಪಟುಗಳು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ದೇವ್ ಅವರಿಗೆ ಬೆಂಬಲ ನೀಡಿದ್ದು ಹೊಸ ಸಂಚಲನ ಮೂಡಿಸಿದೆ. ಇದಕ್ಕೂ ಮುನ್ನ ಒಲಿಂಪಿಕ್ಸ್ (Olympic) ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಪ್ರತಿಭಟನಾ ನಿರತ ಕುಸ್ತಿ ಪಟುಗಳಿಗೆ ಬೆಂಬಲ ಸೂಚಿಸಿದ್ದರು. ಸಂತ್ರಸ್ತರಿಗೆ ಶೀಘ್ರವಾಗಿ ನ್ಯಾಯ ಒದಗಿಸುವಂತೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅಲ್ಲದೆ ಕುಸ್ತಿಪಟುಗಳು ಬೀದಿಗಿಳಿದಿರುವುದು ದುಃಖದ…
ರಾವಲ್ಪಿಂಡಿಯಲ್ಲಿ ಬಾಬರ್ ಅಜಮ್ ಸಾರಥ್ಯದ ಪಾಕಿಸ್ತಾನ ತಂಡ ಕಿವೀಸ್ ತಂಡವನ್ನು ಸೋಲಿಸಿ ಇತಿಹಾಸ ನಿರ್ಮಿಸಿದೆ. ಪಾಕಿಸ್ತಾನ ಸದ್ಯ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯಲ್ಲಿ ನಿರತವಾಗಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಕಿವೀಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಪಾಕಿಸ್ತಾನ ಭಾರತ-ಆಸ್ಟ್ರೇಲಿಯಾ ರೀತಿಯಲ್ಲಿ ಎಲೈಟ್ ಗುಂಪಿಗೆ ಪ್ರವೇಶಿಸಿದೆ. ಇದರೊಂದಿಗೆ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ 500ನೇ ಏಕದಿನ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಹಾಗಿದ್ದರೆ ಏಕದಿನ ಕ್ರಿಕೆಟ್‌ನಲ್ಲಿ ಅಧಿಕ ಪಂದ್ಯ ಗೆದ್ದು ದಾಖಲೆ ಬರೆದಿರುವ ತಂಡಗಳು ಯಾವುವು ಎಂಬುದನ್ನು ನೋಡುವುದಾದರೆ ಇಲ್ಲಿದೆ ನೋಡಿ. ಪಾಕಿಸ್ತಾನಕ್ಕಿಂತ ಮೊದಲು ಭಾರತ ಏಕದಿನ ಕ್ರಿಕೆಟ್‌ನಲ್ಲಿ 500 ನೇ ಗೆಲುವಿನ ದಾಖಲೆಯನ್ನು ಮಾಡಿದೆ. ಭಾರತ ತಂಡ ಇದುವರೆಗೆ ಒಟ್ಟು 1029 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಟೀಂ ಇಂಡಿಯಾ 539 ಪಂದ್ಯಗಳನ್ನು ಗೆದ್ದಿದ್ದರೆ, 438 ಪಂದ್ಯಗಳಲ್ಲಿ ಸೋಲು ಕಂಡಿದೆ. 43 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದ್ದರೆ, 9 ಪಂದ್ಯಗಳು ಟೈ ಆಗಿವೆ. ಆಸ್ಟ್ರೇಲಿಯಾ ಇದುವರೆಗೆ ಒಟ್ಟು…
ಹಾಲಿವುಡ್ ಮಾದಕ ನಟಿ, ಮಾಡೆಲ್ ಕಿಮ್ ಕಾರ್ಡಶಿಯಾನ್ ರಂತೆ ಕಾಣಿಸುತ್ತಿದ್ದ ಮಾಡೆಲ್ ಕ್ರಿಸ್ಟೀನಾ ಆಸ್ಟೆನ್ ತಮ್ಮ 34ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಕ್ರಿಸ್ಟೀನಾ ಆಸ್ಟೆನ್ ಸಾವಿಗೆ ಆಕೆ ಮಾಡಿಸಿಕೊಂಡಿದ್ದ ಪ್ಲಾಸ್ಟಿಕ್ ಸರ್ಜರಿಯೇ ಕಾರಣ ಎಂದು ಹೇಳಲಾಗುತ್ತಿದೆ. ಈಕೆ ಮಾಡೆಲ್ ಕಿಮ್ ರೀತಿಯಲ್ಲಿ ಕಾಣುವುದಕ್ಕಾಗಿ ಪ್ಲಾಸ್ಟಿಕ್ ಸರ್ಜರಿಗೆ ಮೊರೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಹಾಲಿವುಡ್ ನ ಖ್ಯಾತ ಮಾಡೆಲ್ ಕಿಮ್ ಕಾರ್ಡಶಿಯಾನ್ ಜೊತೆ ಹಲವಾರು ವೇದಿಕೆಗಳನ್ನು ಹಂಚಿಕೊಂಡಿದ್ದ ಕ್ರಿಸ್ಟೀನಾ ಥೇಟ್ ಕಿಮ್ ಹಾಗೆಯೇ ಕಾಣಿಸಿಕೊಳ್ಳಬೇಕು ಅನ್ನುವ ಬಯಕೆ ಇತ್ತಂತೆ. ಹಲವರು ಇವರನ್ನು ಜ್ಯೂನಿಯರ್ ಕಿಮ್ ಅಂತಾನೂ ಕರೆಯುತ್ತಿದ್ದರಂತೆ. ಈ ಆಸೆಯೇ ಅವರನ್ನು ಬಲಿ ತಗೆದುಕೊಂಡಿದೆ ಎನ್ನಲಾಗುತ್ತಿದೆ. ಕಿಮ್ ಹಾಲಿವುಡ್ ನಲ್ಲಿ ಮಾದಕ ನಟಿ ಹಾಗೂ ಮಾಡೆಲ್ ಎಂದೇ ಫೇಮಸ್. ಹಾಟ್ ಹಾಟ್ ವಿಡಿಯೋ ಮತ್ತು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾರೆ. ಕಿಮ್ ಗೆ ಕೋಟ್ಯಂತರ ಅಭಿಮಾನಿಗಳು ಕೂಡ ಇದ್ದಾರೆ. ಕ್ರಿಸ್ಟೀನಾ ಕೂಡ ಕಿಮ್ ನಂತೆಯೇ ಅದೆಲ್ಲವನ್ನೂ ಬಯಸಿದ್ದು ಆಕೆಯಂತೆ ಕಾಣಲು…
ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಸಿನಿಮಾದ ಸಾಹಸ ಸನ್ನಿವೇಶದಲ್ಲಿ ಉದಯೋನ್ಮುಖ ಖಳ ನಟರಾದ ಉದಯ್ ಮತ್ತು ಅನಿಲ್ ನೀರಿಗೆ ಬಿದ್ದು ದುರಂತ ಅಂತ್ಯಕಂಡಿದ್ದರು. ಇಬ್ಬರ ಸಾವಿಗೆ ಸಂಬಂಧಿಸಿದಂತೆ ಸಾಹಸ ನಿರ್ದೇಶಕ ರವಿವರ್ಮ ಸೇರಿದಂತೆ ಹಲವರು ಮೇಲೆ ಎಫ್.ಐ.ಆರ್ ದಾಖಲಾಗಿತ್ತು. ಉದಯ್ ಹಾಗೂ ಅನಿಲ್ ಸಾವಿನ ವಿಚಾರಣೆ ಬೆಂಗಳೂರು ನಗರದ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಬಂದಿದ್ದು, ನ್ಯಾಯಧೀಶರಿಗೆ ರವಿವರ್ಮ ಪರ ವಕೀಲರು ಕೆಲವು ವಿಷಯವನ್ನು ಹೇಳಿದ್ದಾರೆ. ವಿಚಾರಣೆ ವೇಳೆ ರವಿವರ್ಮ ಪರ ವಕೀಲರಾದ ಸಿ.ಎಚ್. ಹನುಮಂತರಾಯ ವಾದ ಮಂಡಿಸಿ, ಆ ನಟರ ಸಾವಿಗೆ ಅವರೇ ಕಾರಣ. ಅದೊಂದು ಆಕಸ್ಮಿಕ ಸಾವು. ತಮ್ಮ ದೇಹದ ಸಿಕ್ಸ್ ಪ್ಯಾಕ್ ತೋರಿಸಲು ಹೋಗಿ ಈ ರೀತಿ ಮಾಡಿಕೊಂಡಿದ್ದಾರೆ. ಸಿಕ್ಸ್ ಪ್ಯಾಕ್ ಅಭಿಮಾನಿಗಳು ನೋಡಲಿ ಎನ್ನುವುದಕ್ಕಾಗಿ ಅವರು ಸೇಫ್ಟಿ ಜಾಕೆಟ್ ಧರಿಸಲು ಒಪ್ಪಲಿಲ್ಲ. ಹಾಗೆಯೇ ತಮಗೆ ಈಜು ಬರುತ್ತದೆ ಎಂದೂ ಹೇಳಿದ್ದರು’ ಎಂದಿದ್ದಾರೆ ವಕೀಲರು. ಪೊಲೀಸರೇ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಮೇಲೆ ತಿಳಿಸಿದ…
ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಕುರಿತು ಹತ್ತು ವರ್ಷಗಳ ಬಳಿಕ ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದೆ. ಜಿಯಾ ಸಾವಿನ ಪ್ರಮುಖ ಆರೋಪಿ ಹಾಗೂ ಜಿಯಾ ಗೆಳೆಯ ಸೂರಜ್ ಪಂಚೋಲಿಯನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ. ಈ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ಜಿಯಾ ತಾಯಿ ರಬಿಯಾ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗು ಹೇಗೆ ಸತ್ತಿತು ಎನ್ನುವುದರ ಸತ್ಯ ನನಗೆ ಗೊತ್ತಾಗಬೇಕು. ಇದೊಂದು ಕೊಲೆ ಎಂದು ಮತ್ತೆ ರಬಿಯಾ ಹೇಳಿದ್ದು ಇದೀಗ ನೀಡಿರುವ ತೀರ್ಪು ನಮಗೆ ಸಮಂಜಸವಾಗಿಲ್ಲ. ಹಾಗಾಗಿ ಮತ್ತೆ ಜೀಯಾ ಸಾವಿಗೆ ನ್ಯಾಯ ಕೇಳಲು ಹೈಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಪ್ರಕರಣ ಬಾಲಿವುಡ್ ಸಿನಿಮಾ ರಂಗದಲ್ಲಿ ಭಾರೀ ಆಘಾತ ಮೂಡಿಸಿತ್ತು. ಚಿತ್ರರಂಗದಲ್ಲಿ ಆಗ ತಾನೆ ಮಿಂಚುತ್ತಿದ್ದ ಜಿಯಾ ಏಕಾಏಕಿ 2013ರ ಜೂನ್ 3ರಂದು ಮುಂಬೈನ ಜುಹೂ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಈ ಸಾವಿಗೆ ಅವರ…
ಬಿಟೌನ್ ಕ್ವೀನ್, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್ ಗಳನ್ನು ಹಾಕುತ್ತಲೆ ಇರುತ್ತಾರೆ. ಕಂಗನಾ ಹಂಚಿಕೊಳ್ಳುವ ಫೋಸ್ಟ್ ಗಳು ಸಾಕಷ್ಟು ವಿವಾದ ಸೃಷ್ಟಿಸುತ್ತವೆ. ಈ ಬಾರಿ ಕಂಗನಾ ಮಾಡಿರುವ ಟ್ವೀಟ್ ಯಾರ ಕುರಿತಾಗಿ ಎಂಬುದನ್ನು ಮಾತ್ರ ಕಂಗನಾ ರಿವೀಲ್ ಮಾಡಿಲ್ಲ ಕೆಲವು ವಿಚಾರಗಳಲ್ಲಿ ಕಂಗನಾ ರಣಾವತ್ ನೇರ, ದಿಟ್ಟ. ಯಾರಿಗೆ ತಮ್ಮ ಮಾತು ತಲುಪಬೇಕಿತ್ತೋ ಅದನ್ನು ನೇರವಾಗಿಯೇ ತಲುಪಿಸುತ್ತಾರೆ. ಅದರಲ್ಲೂ ಕರಣ್ ಜೋಹಾರ್ ಬಗ್ಗೆ ನೇರವಾಗಿಯೇ ರಣಕಣಕ್ಕೆ ಆಹ್ವಾನಿಸುತ್ತಾರೆ. ಆದರೆ, ಕೆಲವರ ವಿಚಾರದಲ್ಲಿ ಪರೋಕ್ಷವಾಗಿ ವಿಷಯ ಪ್ರಸ್ತಾಪ ಮಾಡುತ್ತಾರೆ. ಹಾಗಾಗಿ ಇವತ್ತು ಬರೆದ ಬೆಡ್, ಹಾಸಿಗೆ, ಲೈಂಗಿಕ ವಿಚಾರ ಯಾರ ಮೇಲಿನ ಪ್ರಸ್ತಾಪ ಎನ್ನುವುದು ಮಾತ್ರ ಕಂಗನಾ ಬರೆದುಕೊಂಡಿಲ್ಲ. ಹೆಣ್ಣು, ಗಂಡು ತಾರತಮ್ಯದ ಬಗ್ಗೆಯೂ ಮಾತನಾಡಿರುವ ನಟಿ, ನಮ್ಮ ವೃತ್ತಿಯ ಮೇಲೆಯೇ ನಮ್ಮ ಐಡೆಂಟಿಟಿ ನಿರ್ಧಾರವಾಗುತ್ತದೆ. ಯಾರೂ ಈಗ ನಟಿ, ನಿರ್ದೇಶಕಿ ಎಂದು ಕರೆಯುವುದಿಲ್ಲ. ಕಲಾವಿದರು ಮತ್ತು ನಿರ್ದೇಶಕರು ಎನ್ನುತ್ತಾರೆ. ಜಗತ್ತು…