ಬೆಂಗಳೂರು: ರಾಜ್ಯ ಸರ್ಕಾರ ದ್ವೇಷ ರಾಜಕಾರಣಕ್ಕೆ ಮುಂದಾಯ್ತಾ ಎಂಬ ಅನುಮಾನಗಳು ವ್ಯಕ್ತವಾಗ್ತಿವೆ..ಹಿಂದೆ ಅವ್ರು ಮಾಡಿದ್ರು ಈಗ ನಾವು ಮಾಡ್ತಿದ್ದೇವೆ ತಪ್ಪೇನು ಅನ್ನೋ ಮನಸ್ಥಿತಿಗೆ ಬಂದಂತಿದೆ..ಬಿಜೆಪಿಯ ಕೇಸರೀಕರಣದ ವಿರುದ್ಧ ಸಮರಸಾರಿದಂತೆ ಕಾಣ್ತಿದೆ..ಬಿಜೆಪಿ ಸರ್ಕಾರ ತಂದ ಕೆಲವು ವಿಚಾರ,ನಿಯಮಗಳಿಗೆ ಬ್ರೇಕ್ ಹಾಕೋಕೆ ಮುಂದಾಗಿದೆ.. ಹಿಂದಿನ ಬಿಜೆಪಿ ಸರ್ಕಾರದ ತಂದಿದ್ದ ಹಲವು ವಿಚಾರ, ನಿಯಮಗಳಿಗೆ ಕಾಂಗ್ರೆಸ್ ಸರ್ಕಾರ ಬ್ರೇಕ್ ಹಾಕೋಕೆ ಹೊರಟಿದೆ.. ಕೇಸರೀಕರಣದ ವಿರುದ್ಧ ಸಮರಸಾರಿದೆ..ಪಠ್ಯ ಪುಸ್ತಕ ಪರಿಷ್ಕರಣೆಯಿಂದ ಹಿಡಿದು,ಗೋಹತ್ಯೆ ಸಂರಕ್ಷಣಾ ಕಾಯ್ದೆ,ಭೂ ಸುಧಾರಣಾ ತಿದ್ದುಪಡಿಕಾಯ್ದೆಗಳ ವಾಪಸ್ ವರೆಗೆ ಹಲವು ವಿಚಾರಗಳಲ್ಲಿ ಬದಲಾವಣೆ ಬಯಸಿದೆ. ಇನ್ನು ಇದರ ಜೊತೆಗೆ ಪಾರ್ಕ್,ಶಾಲಾ ಕೊಠಡಿ ಗೋಡೆಗಳ ಮೇಲಿನ ಕೇಸರಿ ಬಣ್ಣ ತೆರವು ಮಾಡುವುದಕ್ಕೂ ಮುಂದಾಗಿದೆ.. ಕೊನೆಗೆ ಬಿಬಿಎಂಪಿ ಪೌರ ಕಾರ್ಮಿಕರ ಸಮವಸ್ತ್ರದಲ್ಲೂ ಕೇಸರಿ ಕಲರ್ ಇದೆ ಎಂಬ ಕಾರಣಕ್ಕೆ ಸಮವಸ್ತ್ರ ಬದಲಾವಣೆಗೆ ಹೊರಟಿದೆ. ಹಿಂದುತ್ವದ ಆಧಾರದಮೇಲೆಯೇ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳನ್ನ ಎದುರಿಸುತ್ತಿರುವ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೂ ಇದನ್ನೇ ಆಡಳಿತದಲ್ಲಿ ಒಳ ತಂದಿತ್ತು..ಪಠ್ಯ ಪುಸ್ತಕದಿಂದಿಡಿದು,ಗೋ ಹತ್ಯಾ ಸಂರಕ್ಷಣಾ ಕಾಯ್ದೆ,ಮತಾಂತರ ನಿಷೇಧ…
Author: Prajatv Kannada
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಾಗಿರುವ ಕ್ರೈಂ ಚಟುವಟಿಕೆ ಹಾಗೂ ಗಾಂಜಾ ಪ್ರಕರಣಗಳ ಹಿನ್ನಲೆಯಲ್ಲಿ ಪೊಲೀಸರು ಬೆಳ್ಳಂ ಬೆಳ್ಳಗೆ ರೌಡಿಶೀಟರ್‌ಗಳಿಗೆ ಶಾಕ್ ನೀಡಿದ್ದಾರೆ. ನೂತನ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ಮೇರೆಗೆ ದಾಳಿ ನಗರದ 8 ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ಮಾಡಲಾಗಿದ್ದು, 1 ಸಾವಿರಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳಲ್ಲಿ ಪರಿಶೀಲನೆ ಮಾಡಲಾಗಿದೆ. ದಾಳಿ ವೇಳೆ ಹಲವರ ಮನೆಗಳಲ್ಲಿ ಮಾರಕಾಸ್ತ್ರಗಳು, ಗಾಂಜಾ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಪೂರ್ವ ವಿಭಾಗದ ಪೋಲಿಸರು ಹಲಸೂರು, ಪುಲಕೇಶಿನಗರ, ಡಿಜೆ ಹಳ್ಳಿ, KG ಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್‌ಗಳ ಮನೆಗಳ ಮೇಲೆ ಡಿಸಿಪಿ ಭೀಮಾಶಂಕರ ಗುಳೇದ್ ನೇತೃತ್ವದಲ್ಲಿ ದಾಳಿ ಮಾಡಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗಳು (SSLC Supplementary Exam 2023) ಜೂನ್ 12 ರಿಂದ ಆರಂಭ ಗೊಳ್ಳಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ (KSRTC) ಉಚಿತವಾಗಿ ಪ್ರಯಾಣಿಸಿದ ಬೆನ್ನೇಲೆ ಬಿಎಂಟಿಸಿ ಕೂಡ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಘೋಷಿಸಿದೆ. ಹಾಲ್ ಟಿಕೆಟ್ ತೋರಿಸಿ, ನಿವಾಸದಿಂದ ಪರೀಕ್ಷಾ ಕೇಂದ್ರದವರೆಗೆ BMTC ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿ ಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಅವಕಾಶವನ್ನು ಕಲ್ಪಿಸಿದೆ. ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗಳು ಜೂನ್ 12ರಿಂದ ಜೂನ್ 19ರವರೆಗೆ ನಡೆಯುತ್ತಿದ್ದು, ಸದರಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ. ಮರೆಯದೆ ಹಾಲ್ ಟಿಕೆಟ್ ತೆಗೆದುಕೊಂಡು ಹೋಗಿ ಪರೀಕ್ಷೆ ಬರೆಯಬೇಕಾದರೆ ಹಾಲ್ ಟಿಕೆಟ್ ಅವಶ್ಯವಾಗಿದೆ. ಅದೇ ರೀತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಬಸ್ ಕಂಡೆಕ್ಟರ್ಗೆ ಹಾಲ್ ಟಿಕೆಟ್ ತೋರಿಸಿದರಷ್ಟೇ ಉಚಿತವಾಗಿ ಪ್ರಯಾಣಿಸುವ ಅವಕಾಶ…
ಬೆಂಗಳೂರು: ಚಿತ್ರನಟ ಅಂಬರೀಷ್ ಪುತ್ರ ಅಭಿಷೇಕ್ ವಿವಾಹದ ಆರತಕ್ಷತೆಯಲ್ಲಿ ಸಿಎಂ ಸಿದ್ದರಾಮ್ಯ (Siddaramaiah) ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮುಖಾಮುಖಿ ಆಗಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಅಭಿಷೇಕ್ ಅಂಬರೀಷ್ (Abhishek Ambarish) ಹಾಗೂ ಅವಿವಾ (Aviva) ಅವರ ಆರತಕ್ಷತೆ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಾಲಿ ಹಾಗೂ ಮಾಜಿ ಸಿಎಂಗಳು ಫುಡ್‍ಕೋರ್ಟ್ ಬಳಿ ಆಹಾರ ಸವಿಯುವ ವೇಳೆ ಮುಖಾಮುಖಿ ಯಾಗಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಕ್ಷೇಮ ಸಮಾಚಾರ ಹಂಚಿಕೊಂಡಿದ್ದಾರೆ. ಈ ವೇಳೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಹಾಗೂ ಬಿಜೆಪಿ ಮಾಜಿ ಶಾಸಕ ನಾರಾಯಣ ಗೌಡ ಉಪಸ್ಥಿತರಿದ್ದರು.
ಸಿಎಂ ಸಿದ್ದರಾಮಯ್ಯ ಅವರು ತಯಾರಿಸಿದ್ದ ಪ್ರಾಥಮಿಕ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯಲ್ಲಿ ಒಂದಿಷ್ಟು ಬದಲಾವಣೆ ಆಗಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಯಾಕೆಂದರೆ ಕೆಲವು ಸಚಿವರು ತಮಗೆ ಇಂತಹದ್ದೇ ಜಿಲ್ಲೆ ಬೇಕು ಎಂದು ಪಟ್ಟು ಹಿಡಿದಿರುವುದು ಜಿಲ್ಲಾ ಉಸ್ತುವಾರಿಗಳ ನೇಮಕ ವಿಳಂಬವಾಗುತ್ತಿದೆ. ಒಂದಿಷ್ಟು ಜಿಲ್ಲೆಗಳ ಉಸ್ತುವಾರಿಗಾಗಿ ಸಚಿವ ಸಂಪುಟ ಸದಸ್ಯರ ನಡುವೆಯೇ ಭಿನ್ನಾಭಿಪ್ರಾಯ ಉಂಟಾಗಿರುವುದರಿಂದ ಸಿಎಂ ಸಿದ್ದರಾಮಯ್ಯ ಅಳೆದು ತೂಗಿ ಉಸ್ತುವಾರಿ ಪಟ್ಟಿ ತಯಾರಿಸುತ್ತಿದ್ದಾರೆ. ಪ್ರಮುಖವಾಗಿ ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿಗಾಗಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಅವರ ಬಳಿಯೇ ಬೆಂಗಳೂರು ಅಭಿವೃದ್ಧಿ ಇಲಾಖೆ ಇರುವುದರಿಂದ ಉಸ್ತುವಾರಿ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಹಲವು ಹಿರಿಯ ಸಚಿವರು ಇರುವುದರಿಂದ ಅವರು ಕೂಡ ರಾಜಧಾನಿಯ ಉಸ್ತುವಾರಿಗಾಗಿ ಬೇಡಿಕೆ ಇಟ್ಟಿದ್ದಾರೆ. ಇದಷ್ಟೇ ಅಲ್ಲದೇ ತುಮಕೂರು, ಬೀದರ್ ಮತ್ತು ಮೈಸೂರು ಜಿಲ್ಲೆಯ ಉಸ್ತುವಾರಿ ಬಗ್ಗೆಯೂ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ. ಪ್ರಮುಖವಾಗಿ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಪಟ್ಟಿ ತಡವಾಗಲು…
ಬೆಂಗಳೂರು: ಶಿಕ್ಷಕರ ಶೈಕ್ಷಣಿಕ ಅರ್ಹತೆಯ ದಾಖಲೆಗಳನ್ನು ಪರಿಶೀಲಿಸದೆಯೇ, ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಅಕ್ರಮವೆಸಗಿರುವ ಆರೋಪಗಳು ಕೇಳಿಬಂದಿವೆ.ನಗರದಲ್ಲಿ 164 ಶಾಲಾ-ಕಾಲೇಜುಗಳು ಬಿಬಿಎಂಪಿ ಅಧೀನದಲ್ಲಿದ್ದು, 171 ಮಂದಿ ಕಾಯಂ ಶಿಕ್ಷಕರು, ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ 741 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಇವರಲ್ಲಿ ಹಲವರು ಸರಕಾರದ ಮಾರ್ಗಸೂಚಿಯಂತೆ ಶೈಕ್ಷಣಿಕ ಅರ್ಹತೆ ಪಡೆಯದಿರುವುದು ತನಿಖೆಯಿಂದ ಸಾಬೀತಾಗಿದೆ. ಪಾಲಿಕೆಯಲ್ಲಿ ಹಲವು ವರ್ಷಗಳಿಂದಲೂ ಹೊರಗುತ್ತಿಗೆ ಪದ್ಧತಿ ಚಾಲ್ತಿಯಲ್ಲಿದೆ. ಕ್ರಿಸ್ಟಲ್ ಎಂಬ ಸಂಸ್ಥೆಯು ಶಿಕ್ಷಕರನ್ನು ಪೂರೈಸುವ ಗುತ್ತಿಗೆ ಪಡೆದಿದೆ. ಆದರೆ, ಈ ಗುತ್ತಿಗೆ ಸಂಸ್ಥೆಯು ವೃಂದ ಮತ್ತು ನೇಮಕಾತಿ ನಿಯಮಾವಳಿ, ಸರಕಾರದ ಮಾರ್ಗಸೂಚಿಯಂತೆ ಅರ್ಹ, ನಿಗದಿತ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ಒದಗಿಸಿಲ್ಲ. ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸದೆಯೇ ಪಾಲಿಕೆಯ ಶಿಕ್ಷಣ ವಿಭಾಗದ ಅಧಿಕಾರಿಗಳು ಹೇಗೆ ನೇಮಕ ಮಾಡಿಕೊಂಡರು ಎಂಬ ಪ್ರಶ್ನೆ ಉದ್ಭವಿಸಿದೆ. 181 ಮಂದಿ ಅನರ್ಹ ಶಿಕ್ಷಕರ ನೇಮಕ: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಪಾಲಿಕೆಯ ಶಾಲಾ-ಕಾಲೇಜುಗಳು ಕಳಪೆ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ…
ಸೂರ್ಯೋದಯ: 05.53 AM, ಸೂರ್ಯಾಸ್ತ : 06.45 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಉತ್ತರಾಯಣ, ವಸಂತ ಋತು, ತಿಥಿ: ಇವತ್ತು ಪಂಚಮಿ 06:58 PM ತನಕ ನಂತರ ಷಷ್ಠಿ ನಕ್ಷತ್ರ: ಇವತ್ತು ಶ್ರವಣ 06:59 PM ತನಕ ನಂತರ ಧನಿಷ್ಠ ಯೋಗ: ಇವತ್ತು ಇಂದ್ರ 06:59 PM ತನಕ ನಂತರ ವೈಧೃತಿ ಕರಣ: ಇವತ್ತು ಕೌಲವ 08:23 AM ತನಕ ನಂತರ ತೈತಲೆ 06:58 PM ತನಕ ನಂತರ ಗರಜ ರಾಹು ಕಾಲ: 01:30 ನಿಂದ 03:00 ವರೆಗೂ ಯಮಗಂಡ:06:00 ನಿಂದ 07:30 ವರೆಗೂ ಗುಳಿಕ ಕಾಲ: 09:00 ನಿಂದ 10:30 ವರೆಗೂ ಅಮೃತಕಾಲ: 09.28 AM to 10.56 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:49 ನಿಂದ ಮ.12:41 ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ,…
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮೀ ಯೋಜನೆಯ (Gruhalakshmi Scheme) ಮಾರ್ಗಸೂಚಿ ಪ್ರಕಟವಾಗಿದ್ದು ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ (BPL, APL, Antyodaya) ಹೊಂದಿದ ಮಹಿಳೆಯರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಕಾರ್ಡ್ನಲ್ಲಿ ನಮೂದಾಗಿರುವ ಯಜಮಾನಿಗೆ ಮಾತ್ರ 2 ಸಾವಿರ ರೂ. ಸಿಗಲಿದ್ದು ಒಂದು ಕುಟುಂಬದ ಓರ್ವ ಮಹಿಳೆಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ. ಜೂನ್ 15 ರಿಂದ ಜುಲೈ 15ರ ವರೆಗೆ ಸೇವಾಸಿಂಧು (Seva Sindhu) ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿದೆ. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಂದು ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಯಜಮಾನಿ ಅಥವಾ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಯಜಮಾನಿ ಅಥವಾ ಪತಿ ಜಿಎಸ್ಟಿ ರಿಟರ್ನ್ ಸಲ್ಲಿಸುವವರರಾಗಿದ್ದಲ್ಲಿ ಈ ಯೋಜನೆಯ ಲಾಭ ಸಿಗುವುದಿಲ್ಲ. ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದಲ್ಲಿ ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು…
ಬೆಂಗಳೂರು: ವ್ಯಕ್ತಿಯೊಬ್ಬ ತನಗೆ ಗಂಡು ಮಗುವಾಯಿತು ಎಂದು ಸ್ನೇಹಿತರಿಗೆ ಪಾರ್ಟಿ ಕೊಡಿಸಿದ. ಆದರೆ ಆ ಸ್ನೇಹಿತರು ಆತನ ತಲೆ ಬರುಡೆಯನ್ನೇ ಓಪನ್ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ರಂಗನಾಥ್ ಹಲ್ಲೆಗೊಳಗಾದ ವ್ಯಕ್ತಿ. ತನಗೆ ಗಂಡು ಮಗು ಆದ ಎಂಬ ಖುಷಿಯಲ್ಲಿ ಸ್ನೇಹಿತರಾದ ಮನೋಜ್, ಮಧುಸೂದ್, ಪ್ರಸಾದ್‍ಗೆ ಪಾರ್ಟಿ ಕೊಡಿಸಿದ್ದನು. ಈ ಪಾರ್ಟಿಯಲ್ಲಿ ರಾಜಕೀಯ ಪಕ್ಷದ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ. ಪಾರ್ಟಿ ವೇಳೆ ರಂಗನಾಥ್ ಹಾಗೂ ಸ್ನೇಹಿತರ ನಡುವೆ ರಾಜಕೀಯ ಮಾತನಾಡುವಾಗ ಗಲಾಟೆ ಆಗಿದೆ. ಕಾಂಗ್ರೆಸ್ (Congress) ಪರ ಮಾತನಾಡುತ್ತಿದ್ದ ರಂಗನಾಥ್‍ಗೆ ಸ್ನೇಹಿತರು ಬಿಜೆಪಿ (BJP) ಪರ ಮಾತನಾಡಿಕೊಂಡು ಕಿಚಾಯಿಸಿದ್ದಾರೆ. ಆಗ ರಂಗನಾಥ್ ಹಾಗೂ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಜಗಳ ತಾರಕಕ್ಕೇರಿ ಪಕ್ಕದಲ್ಲಿದ್ದ ಬಿಯರ್ ಬಾಟ್ಲಿಯಿಂದ ರಂಗನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯಿಂದ ತೀವ್ರ ರಕ್ತಸ್ರಾವ ಹಿನ್ನೆಲೆ ರಂಗನಾಥ್‍ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಂಗನಾಥ್ ಹಾಗೂ ಸ್ನೇಹಿತರು ಸ್ವಿಗ್ಗಿ ಡೆಲಿವರಿ ಬಾಯ್ ಆಗಿ…
ಚಂಡಮಾರುತವು ಮುಂದಿನ 24 ಗಂಟೆಗಳಲ್ಲಿ ಉತ್ತರದ ಕಡೆಗೆ ಬಲವಾಗಿ ನುಗ್ಗಲಿದೆ. ಬಳಿಕ ಮುಂದಿನ ಮೂರು ದಿನಗಳಲ್ಲಿ ಉತ್ತರ- ವಾಯವ್ಯ ದಿಕ್ಕಿನ ಕಡೆಗೆ ಚಲಿಸಲಿದೆ ಎಂದು ಹೇಳಿದೆ. ಬಿಪರ್‌ಜಾಯ್ ಚಂಡಮಾರುತ ಬಿರುಗಾಳಿ ತೀವ್ರವಾಗಿ ರೂಪುಗೊಂಡಿದೆ. ಮುಂದಿನ 12 ಗಂಟೆಗಳಲ್ಲಿ ಅದು ತೀವ್ರ ಚಂಡಮಾರುತದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಅದು ತಿಳಿಸಿದೆ. ನೈಋತ್ಯ ರಾಜ್ಯಗಳಲ್ಲಿ ಬಹಳ ಕಠಿಣವಾದ ವಾತಾವರಣ ಮತ್ತು ಸಮುದ್ರ ಅಪಾಯಕಾರಿಯಾಗಿ ವರ್ತಿಸುವ ಸಾಧ್ಯತೆ ಇರುತ್ತದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಗಾಳಿಯ ವೇಗವು ಗಂಟೆಗೆ 135- 145 ಕಿಮೀ ವೇಗಕ್ಕೆ ತಲುಪುವಷ್ಟು ಸಮರ್ಥವಾಗಿದ್ದು, ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ 160 ಕಿಮೀವರೆಗೂ ಬೀಸುವ ಸಂಭವವಿದೆ. ಸಮುದ್ರಕ್ಕೆ ಇಳಿಯುವುದರಿಂದ ದೂರ ಇರುವಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಬಿಪಾರ್‌ಜಾಯ್ ಚಂಡಮಾರುತದ ಪರಿಣಾಮವು ಅನೇಕ ನೈಋತ್ಯ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉಂಟಾಗುವ ನಿರೀಕ್ಷೆ ಇದೆ. ಈ ಭಾಗಗಳಲ್ಲಿ ಮುಂದಿನ ಐದು ದಿನ ಬಲವಾದ ಗಾಳಿ ಬೀಸಬಹುದು ಎಂದು ಐಎಂಡಿ ಹೇಳಿದೆ. ಜೂನ್…