Author: Prajatv Kannada

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಪಟ್ಟಿಯಲ್ಲಿ ರೇಣುಕಾ ಸ್ವಾಮಿ ಹಾಗೂ ಪವಿತ್ರಾ ಗೌಡ ನಡುವೆ ನಡೆದಿರುವ ಮೆಸೇಜ್ ಸಂಭಾಷಣೆ ಬಹಿರಂಗವಾಗಿದೆ. ರೇಣುಕಾ ಸ್ವಾಮಿ, ಪವಿತ್ರಾಗೆ ಏನು ಮೆಸೇಜ್ ಮಾಡಿದ್ದ? ಅದಕ್ಕೆ ಪವಿತ್ರಾ ನೀಡಿದ್ದ ಪ್ರತಿಕ್ರಿಯೆ ಏನು? A1 ಆರೋಪಿ ಪವಿತ್ರಾಗೌಡ ಮತ್ತು ಕೊಲೆಯಾದ ರೇಣುಕಾಸ್ವಾಮಿ ನಡುವೆ ಇನ್​ಸ್ಟಾಗ್ರಾಂ ಮೂಲಕ ನಡೆದಿ ಚಾಟಿಂಗ್​ ಚಾರ್ಜ್​​​​ಶೀಟ್​​​ನಲ್ಲಿ ಉಲ್ಲೇಖಿಸಲಾಗಿದೆ. ಫೇಕ್​​​​ ಅಕೌಂಟ್​​​​ನಿಂದ ಮೆಸೇಜ್​​ ಮಾಡಿದ್ದ ರೇಣುಕಾಸ್ವಾಮಿ : Goutham_KS_1990 ಎಂಬ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದ ರೇಣುಕಾಸ್ವಾಮಿ ಪವಿತ್ರಗೌಡ್‌ಎ ಅಶ್ಲೀಲ ಮೆಸೇಜ್ ಮಾಡಿರುವ ವಿಚಾರ ರಿವೀಲ್ ಆಗಿದೆ. ಚಿತ್ರದುರ್ಗದಿಂದ ಅವನು ಕಿಡ್ನಾಪ್​ ಆಗುವ 8 ದಿನಕ್ಕೂ ಮುನ್ನ ಪವಿತ್ರಾಗೌಡಳ  ಅಧಿಕೃತ ಇನ್​ಸ್ಟಾಗ್ರಾಂಗೆ ರೇಣುಕಾಸ್ವಾಮಿ ಮೆಸೇಜ್​ ಮಾಡಿದ್ದ. ಮರ್ಮಾಂಗದ ಫೋಟೋ ಕಳುಹಿಸಿದ್ದ ಸ್ವಾಮಿ : ನಟ ದರ್ಶನ್​ರನ್ನು ಬಿಟ್ಟು ಬಂದು ನನ್ನ ಜೊತೆ ಇರು ಎಂದು ಪವಿತ್ರಾಗೌಡಗೆ ರೇಣುಕಾಸ್ವಾಮಿ ಮೆಸೇಜ್​ ಮಾಡಿದ್ದ. ಅಲ್ಲದೇ ಪವಿತ್ರಾಗೌಳ ಸೌಂದರ್ಯವನ್ನು ಅಶ್ಲೀಲವಾಗಿ ವರ್ಣಿಸಿ ಮೆಸೇಜ್​​​​​​​​ನಲ್ಲಿ ವರ್ಣಿಸಿದ್ದ. ನಾನು…

Read More

ಹೆಚ್‌ಎಮ್‌ಟಿಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಮುಂದಾಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ  ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಇಂದು ಹೆಚ್‌ಎಮ್‌ಟಿ ವಾಚ್ ಗಿಫ್ಟ್ ನೀಡಿದ್ದಾರೆ. ಗೌರಿ ಹಬ್ಬದ ಹಿನ್ನಲೆಯಲ್ಲಿ ಪುತ್ರ ನಿಖಿಲ್‌ಗೆ ಸ್ವತಃ ಕುಮಾರಸ್ವಾಮಿ ಹೆಚ್‌ಎಮ್‌ಟಿ ವಾಚ್ ಖರೀದಿ ಮಾಡಿ ಹಬ್ಬದ ಉಡುಗೊರೆ ನೀಡಿದ್ದಾರೆ. https://youtu.be/NQBy2k-IhNA?si=FAkGpF0LOj4816oY ಸಾಮಾಜಿಕ ಜಾಲತಾಣದಲ್ಲಿ ಹೆಚ್‌ಎಮ್‌ಟಿ ವಾಚ್  ಕುರಿತು ಮಾಹಿತಿ ನೀಡಿದ ನಿಖಿಲ್ ಕುಮಾರಸ್ವಾಮಿ, ಜನರು ಹೆಚ್‌ಎಮ್‌ಟಿ ವಾಚ್ ಬಳಕೆ ಮಾಡುವಂತೆ ಕರೆ ನೀಡಿದ್ದಾರೆ. ಹೆಚ್‌ಎಮ್‌ಟಿ ಕೈಗಡಿಯಾರ ಒಂದು ಕಾಲದಲ್ಲಿ ಭಾರತದ ಹೃದಯ ಬಡಿತವಾಗಿತ್ತು. ಎಲ್ಲರ ಪಾಲಿಗೂ ಅದು ನಿತ್ಯನಾಡಿಯಾಗಿತ್ತು ನಮ್ಮ ತಲೆಮಾರಿನ ಯುವಜನರಿಗೆ ಹೆಚ್‌ಎಮ್‌ಟಿ ವಾಚ್ ಎಂದರೆ ಅದೊಂದು ದಂತಕಥೆ. ನನ್ನ ಪೂಜ್ಯ ತಂದೆಯವರು ಹಾಗೂ ಕೇಂದ್ರ ಸರಕಾರದ ಭಾರೀ ಕೈಗಾರಿಕೆ, ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗೌರಿಹಬ್ಬದ ದಿನವಾದ ಇಂದು ಹೆಚ್‌ಎಮ್‌ಟಿ ಕೈಗಡಿಯಾರ ಖರೀದಿಸಿ ನನ್ನ ಕೈಗೆ ಕಟ್ಟಿದ್ದಾರೆ. ಈ ಸಂದರ್ಭದಲ್ಲಿ ಹೆಚ್‌ಎಮ್‌ಟಿ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಕೊಹ್ಲಿ ಇನ್ನಿತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು

Read More

ಫ್ರಾನ್ಸ್‌ ನ ಸಂಸತ್ತಿನ ಚುನಾವಣೆಗಳು ಮುಗಿದು 50 ದಿನಗಳ ಬಳಿಕ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಗುರುವಾರ ಮೈಕೆಲ್ ಬಾರ್ನಿಯರ್ ಅವರನ್ನು ನೂತನ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದ್ದಾರೆ. ಬಾರ್ನಿಯರ್ ಅವರು ಪಿಎಂ ಗೇಬ್ರಿಯಲ್ ಅಟ್ಟಲ್ ಅವರಿಂದ ಅಧಿಕಾರ ವಹಿಸಿಕೊಂಡರು. ಗ್ರೇಬ್ರಿಯಲ್ ಅವರು ಚುನಾವಣಾ ಫಲಿತಾಂಶಗಳ ನಂತರ ಹಂಗಾಮಿ ಪ್ರಧಾನ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು. ಫ್ರಾನ್ಸ್ ಐದನೇ ಗಣರಾಜ್ಯವನ್ನು ಸ್ವೀಕರಿಸಿದ ನಂತರ ಇದು ಇಬ್ಬರು ಪ್ರಧಾನ ಮಂತ್ರಿಗಳ ನಡುವಿನ ಸುದೀರ್ಘ ಪರಿವರ್ತನೆಯ ಅವಧಿಯಾಗಿದೆ . ಎಲಿಸೀ ಅರಮನೆ ಹಂಚಿಕೊಂಡ ಪ್ರಕಟಣೆಯ ಪ್ರಕಾರ, ಮ್ಯಾಕ್ರನ್ ಗುರುವಾರ ಬಾರ್ನಿಯರ್ ಸರ್ಕಾರವನ್ನು ರಚಿಸಿದ್ದಾರೆ ಎಂದು ಆರೋಪಿಸಿದರು. 73 ವರ್ಷದ ಕನ್ಸರ್ವೇಟಿವ್ ಈಗ ಆಡಳಿತವನ್ನು ವಹಿಸಿಕೊಳ್ಳುವ ಮೊದಲು ಸಂಸತ್ತಿನ ಕೆಳಮನೆಯಲ್ಲಿ ಅವಿಶ್ವಾಸ ಮತವನ್ನ ಎದುರಿಸಬೇಕಾಗಿದೆ.

Read More

ಗದಗ: ನಗರದ ಭೂಮರೆಡ್ಡಿ ಸರ್ಕಲ್​ನಲ್ಲಿ ಕಾಂಕ್ರಿಟ್​​ ಮಿಕ್ಸಿಂಗ್ ವಾಹನ ಹರಿದು ಹೆಡ್​ ಕಾನ್​ಸ್ಟೇಬಲ್​ ರಮೇಶ್ ಡಂಬಳ(42) ಎಂಬುವವರು ಸಾವನ್ನಪ್ಪಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣೆಯ ಹೆಡ್​ಕಾನ್​​ಸ್ಟೇಬಲ್ ಆಗಿದ್ದ ರಮೇಶ್, ಮನೆಯಲ್ಲಿ ನಾಳೆ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆ ಹೊಂಡಾ ಎಕ್ಟಿವಾ ವಾಹನದಲ್ಲಿ ಹೆಡ್ ಕಾನಸ್ಟೇಬಲ್ ಹಾಗೂ ಆತ ಸಾಕಿದ ನಾಯಿ ಕರೆದುಕೊಂಡು ಹೂವು-ಹಣ್ಣು ಸೇರಿ ಪೂಜೆ ಸಾಮಾಗ್ರಿಗಳನ್ನು ಖರೀದಿ ಮಾಡಿಕೊಂಡು ಮನೆ‌ಗೆ ಹೊರಟ್ಟಿದ್ದರು. ಈ ವೇಳೆ ಯಮನಂತೆ ಆಗಮಿಸಿದ ಕಾಂಕ್ರಿಟ್​​ ಮಿಕ್ಸಿಂಗ್ ವಾಹನ ಹರಿದು ಘಟನೆಯಲ್ಲಿ ಮಾಲೀಕ ಸಾವನ್ನಪ್ಪಿದರೆ, ಸಾಕಿದ ನಾಯಿ ಬಚಾವ್ ಆಗಿದೆ. ಇತ್ತ ಮಾಲೀಕನ ಸಾವಿನಿಂದ ನಾಯಿ ಕಂಗಾಲಾಗಿದ್ದು, ಮನೆಯವರ ದುಖಃ ಮುಗಿಲುಮುಟ್ಟಿದೆ. ಸ್ಥಳಕ್ಕೆ ಡಿವೈಎಸ್​ಪಿ ಜೆ.ಹೆಚ್​.ಇನಾಮದಾರ, ಸಿಪಿಐ ಶಿವಯೋಗಿ ಹಾಗೂ ಪಿಎಸ್ಐ ಶಕುಂತಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಬೀದರ್: ಮಳೆಯಿಂದ ಬೆಳೆ ನಷ್ಟಕ್ಕೊಳಗಾದ ರೈತರಿಗೆ ರಾಜ್ಯ ಸರ್ಕಾರ ಎಕರೆಗೆ ₹25 ಸಾವಿರ ಪರಿಹಾರ ಕೊಡಬೇಕು ಎಂದು ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದರು. ಬೀದರ ತಾಲ್ಲೂಕಿನ ಮನ್ನಳ್ಳಿ, ಯಾಕತಪುರ, ನಾಗೋರಾ ವಿವಿಧ ಗ್ರಾಮಗಳಲ್ಲಿ  ಬೆಳೆ ಹಾನಿ ವೀಕ್ಷಿಸಿ  ಮಾತನಾಡಿದರು. ‘ಹಿಂದಿನ ಬಿಜೆಪಿ ಸರ್ಕಾರದಂತೆ ಪೂರ್ಣ ಮನೆ ಹಾನಿಗೆ ₹5 ಲಕ್ಷ, ಭಾಗಶಃ ಹಾನಿಗೆ ₹2.5 ಲಕ್ಷ ಹಾಗೂ ಅಲ್ಪ ಹಾನಿಗೆ ₹ 50 ಸಾವಿರ ಪರಿಹಾರ ಕಲ್ಪಿಸಬೇಕು  ಒತ್ತಾಯಿಸಿದರು. ಬೀದರ ನಲ್ಲಿ ವಾರದ ಮಳೆಯಿಂದಾಗಿ ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿನ ಉದ್ದು, ಸೋಯಾಬೀನ್, ಕಬ್ಬು, ತೊಗರಿ ಮೊದಲಾದ ಬೆಳೆಗಳು ಹಾನಿಯಾಗಿವೆ. ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಕೆಲ ಮನೆಗಳು ಸಂಪೂರ್ಣ ಕುಸಿದರೆ, ಇನ್ನು ಹಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ ಮಾಹಿತಿ ನೀಡಿದರು.

Read More

ಮಂಡ್ಯ :- ಲೋಕಸಭಾ ಚುನಾವಣೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ನಿರೀಕ್ಷೆಗೂ ಮೀರಿ ಬಹುಮತ ನೀಡಿದ ಪರಿಣಾಮ ಮಾನ್ಯ ಸಂಸದರಾದ ಕುಮಾರಸ್ವಾಮಿ ಅವರು ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಮಂಡ್ಯಗೆ ಸ್ಥಳಾಂತರ ಮಾಡುವ ಮೂಲಕ ಕ್ಷೇತ್ರದ ಜನತೆಗೆ ನೀಡಿದ ಬಹುದೊಡ್ಡ ಬಹುಮಾನ ಎಂದು ಶಾಸಕ ಕೆ.ಎಂ.ಉದಯ್ ಲೇವಡಿ ಮಾಡಿದರು.ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದಿಂದ ಕೊಲ್ಲಿ ವೃತ್ತದವರೆಗೆ ಹಳೇಮೈಸೂರು ರಾಷ್ಟ್ರೀಯ ಹೆದ್ದಾರಿಯ ಮರು ಡಾಂಬರೀಕರಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ನಿರೀಕ್ಷೆಗೂ ಮೀರಿ ಬಹುಮತ ನೀಡಿದ ಪರಿಣಾಮ ಮಾನ್ಯ ಸಂಸದರಾದ ಕುಮಾರಸ್ವಾಮಿ ಅವರು ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಮಂಡ್ಯಗೆ ಸ್ಥಳಾಂತರ ಮಾಡುವ ಮೂಲಕ ಕ್ಷೇತ್ರದ ಜನತೆಗೆ ಬಹುದೊಡ್ಡ ಬಹುಮಾನ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಕೇಂದ್ರದಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ತೆರೆಯಲು ತುಂಬಾ ಕಷ್ಟದ ಕೆಲಸ ಆದರೆ, ಈಗಿರುವ ಪಾಸ್ ಪೋರ್ಟ್ ಸೇವಾ ಕೇಂದ್ರದಿಂದ ತಾಲೂಕಿನ ಸಾವಿರಾರು ಜನರಿಗೆ ತುಂಬಾ ಅನುಕೂಲವಾಗುತ್ತಿದೆ.…

Read More

ಹಾಸನ: ಮುಖ್ಯಮಂತ್ರಿ ಆಗಬೇಕೆಂದು ಶಾಸಕ ದೇಶಪಾಂಡೆ ಒಬ್ಬರೇ ಅಲ್ಲ ದೊಡ್ಡಪಟ್ಟಿಯೇ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಸಕಲೇಶಪುರ ತಾಲೂಕು ಹೆಬ್ಬನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಕುರ್ಚಿ ಖಾಲಿ ಇದ್ದರೆ ಕೇಳಬೇಕು. ಸಿಎಂ ಕುರ್ಚಿ ಇರೋದು ಒಂದೇ ಅದು ಭರ್ತಿಯಾಗಿದೆ. ಬಹಳಷ್ಟು ಕುರ್ಚಿಗಳಿದ್ದರೆ ಕೇಳಬಹುದಿತ್ತು ಎಂದು ವ್ಯಂಗ್ಯವಾಡಿದರು. ದೇಶಪಾಂಡೆ ಅವರು ಸಿದ್ದರಾಮಯ್ಯ ಒಪ್ಪಿದ್ರೆ ಮುಖ್ಯಮಂತ್ರಿ ಆಗುತ್ತೇನೆ ಎಂದಿದ್ದಾರೆ. ಆದರೆ ಹೈಕಮಾಂಡ್ ಒಪ್ಪಿದ್ರೆ ಮುಖ್ಯಮಂತ್ರಿ ಆಗೋದು. ಇದು ಪಕ್ಷದ ನಿಯಮ ಈ ಬಗ್ಗೆ ಹೆಚ್ಚು ಚರ್ಚೆ ಅನಗತ್ಯ ಎಂದರು. ರಾಜ್ಯದಲ್ಲಿ ಸಿದ್ದರಾಮಯ್ಯ ಹಿಂದುಳಿದ ವರ್ಗದ ಪ್ರಬಲ ನಾಯಕ. ದೇವರಾಜ ಅರಸು, ಬಂಗಾರಪ್ಪ ಅವರ ನಂತರ ಅಹಿಂದ ವರ್ಗದ ಜನಪ್ರಿಯ ಲೀಡರ್. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ 40 ವರ್ಷ ರಾಜಕಾರಣ ಮಾಡಿದ್ದಾರೆ. ಏನಾದರೂ ಮಾಡಿ ಅವರ ಹೆಸರಿಗೆ ಮಸಿ ಬಳಿದು, ಅವರ ಜನಪ್ರಿಯತೆ ಕಡಿಮೆ ಮಾಡಬೇಕು. ಹಾಗಾದರೆ ಕಾಂಗ್ರೆಸ್ ಶಕ್ತಿ ಕುಂದಲಿದೆ. ಆ ದೃಷ್ಟಿಯಿಂದ ಅವರನ್ನು ಟಾರ್ಗೆಟ್ ಮಾಡ್ತಿದ್ದಾರೆ ಅದು…

Read More

ಹಾಸನ: ಇಂದು ಎತ್ತಿನಹೊಳೆ ಯೋಜನೆಯ ಮೊದಲ ಹಂತ ಲೋಕಾರ್ಪಣೆಗೊಳ್ಳಲಿದೆ. ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ದೊಡ್ಡನಗರ ಗ್ರಾಮ ತಲುಪಿದ್ದು, ಯೋಜನೆ ಲೋಕಾರ್ಪಣೆ ಪೂರ್ವಭಾವಿ ಪೂಜೆಯಲ್ಲಿ ಅಧಿಕಾರಿಗಳ ಜತೆ ಭಾಗಿಯಾಗಿದ್ದಾರೆ. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ ಎಂದು ನಾನು ನಂಬಿದ್ದೇನೆ. ಎತ್ತಿನಹೊಳೆ ಯೋಜನೆ ಬಗ್ಗೆ ಟೀಕೆ ಮಾಡಿದವರಿಗೆ ನೀರು ಹರಿಸಿ ಉತ್ತರ ನೀಡುತ್ತವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸಕಲೇಶಪುರದ ದೊಡ್ಡನಗರದ ಡಿ.ಸಿ- 3 ಪಂಪ್ ಹೌಸ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಇತಿಹಾಸದಲ್ಲಿ ಈ ಘಳಿಗೆಯಲ್ಲಿ ಒಂದು ವಿಶಿಷ್ಟ ಮೈಲಿಗಲ್ಲು ಸ್ಥಾಪನೆಯಾಗುತ್ತಿದೆ ಎಂದರು. ಆಲಮಟ್ಟಿ ಯೋಜನೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಶಂಕು ಸ್ಥಾಪನೆ ಮಾಡಿದ್ದರು. 2006ರಲ್ಲಿ ಅಬ್ದುಲ್ ಕಲಾಂ ಅವರು ಯೋಜನೆ ಉದ್ಘಾಟನೆ ಮಾಡಿದ್ದರು. ಆಲಮಟ್ಟಿ ಯೋಜನೆ ಜಾರಿ ನಂತರ ಎತ್ತಿನಹೊಳೆ ಯೋಜನೆಯು ಕರ್ನಾಟಕ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆಯಾಗಿದೆ. 2014 ಮಾರ್ಚ್ 5ರಂದು ಸಿಎಂ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈಗ…

Read More

ತುಮಕೂರು:- ಗೃಹ ಸಚಿವರು ಈ ಸುದ್ದಿ ಮಿಸ್ ಮಾಡ್ದೆ ನೋಡಿ. ನಿಮ್ಮ ಜಿಲ್ಲೆಯಲ್ಲಿ ಇನ್ನೂ ಜೀತಪದ್ದತಿ ಜೀವಂತವಾಗಿದೆ. ಶುಂಠಿ ಕ್ಯಾಂಪ್‌ಗಳಲ್ಲಿ ಜೀತದಾಳುಗಳಂತೆ ದುಡಿಯುತ್ತಿದ್ದ 36 ಬಡ ಕೂಲಿ ಕಾರ್ಮಿಕರನ್ನ ಪೊಲೀಸ್ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಪರಮೇಶ್ವರ್ ಅವರ ತವರು ಜಿಲ್ಲೆಯಾದ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮ, ಮಂಜುನಾಥ ಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ರೈತರಿಂದ ನೂರಾರು ಏಕರೆ ಭೂಮಿಯನ್ನ ಗುತ್ತಿಗೆ ಆಧಾರದಲ್ಲಿ‌ ಬಾಡಿಗೆ ಪಡೆದು ಶುಂಠಿ ಬೆಳೆಯನ್ನ ಬೆಳೆಯುತ್ತಿದ್ದಾರೆ.‌ ಶುಂಠಿ ಹೊಲದಲ್ಲಿ ಕೆಲಸ ಮಾಡಲು ಮೈಸೂರು, ಚಾಮರಾಜನಗರ, ಕೊಳ್ಳೇಗಾಲ, ಬಳ್ಳಾರಿ, ವಿಜಯಪುರ ಸೇರಿದಂತೆ ವಿವಿಧ ಭಾಗಗಳಿಂದ ಬಡ ಕೂಲಿ‌ ಕಾರ್ಮಿಕರಿಗೆ ಹೆಚ್ಚಿನ ಕೂಲಿ ಆಸೆ ತೋರಿಸಿ ಕರೆತಂದು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾರ್ಮಿಕರ ಬಳಿ ಇದ್ದ ಆಧಾರ್ ಕಾರ್ಡ್, ವೋಟರ್ ಐಡಿ, ಮೊಬೈಲ್‌ ಇನ್ನಿತರೆ ವಸ್ತುಗಳನ್ನ ಕಿತ್ತುಕೊಂಡು ಹೆದರಿಸಿ ಬೆದರಿಸಿ ಶುಂಠಿ ಕ್ಯಾಂಪ್ ನಲ್ಲಿರಿಸಿದ್ದಾರೆ. ಕಾರ್ಮಿಕರ ಕಾವಲಿಗೆ ಗೂಂಡಾಗಳನ್ನು ನೇಮಿಸಿ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದರು…

Read More

ಗಾಂಧೀನಗರ: ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾರವರು ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಬರೆದಿದ್ದಾರೆ. ಇದೀಗ ಪತಿ ಬಿಜೆಪಿಗೆ ಸೇರ್ಪಡೆಗೊಂಡ ಫೋಟೋವನ್ನು ಪತ್ನಿ, ಗುಜರಾತ್ ಶಾಸಕಿ ರಿವಾಬಾ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಜೆಪಿ ದೇಶಾದ್ಯಂತ ಸದಸ್ಯತ್ವ ಅಭಿಯಾನ ಆರಂಭಿಸಿದೆ. ಈ ಅಭಿಯಾನದ ಭಾಗವಾಗಿ ಜಡೇಜಾ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ರವೀಂದ್ರ ಜಡೇಜಾ ಎಲ್ಲಿಯೂ ಅಧಿಕೃತವಾಗಿ ತಿಳಿಸಿಲ್ಲ. ರಿವಾಬಾ 2019ರಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದರು. 2022 ರ ವಿಧಾನಸಭಾ ಚುನಾವಣೆಯಲ್ಲಿ ಜಾಮ್‌ನಗರ್ ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿದು ಆಪ್  ಅಭ್ಯರ್ಥಿ ಕರ್ಶನ್‌ಬಾಯ್ ಕಾರ್ಮುರ್ ರವರನ್ನು ಸೋಲಿಸುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ತವರಾದ ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷ 2 ಕೋಟಿ ಪ್ರಾಥಮಿಕ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.

Read More