Author: Prajatv Kannada

ಆಸ್ಟ್ರೇಲಿಯಾ ಎದುರು ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯದಲ್ಲಿ ಪೈಪೋಟಿ ನಡೆಸಲು ಟೀಮ್ ಇಂಡಿಯಾ ಸಜ್ಜಾಗಿದ್ದು, ಈ ಹೈ ವೋಲ್ಟೇಜ್ ಪಂದ್ಯ ಜೂನ್ 7ರಿಂದ 11ರವರೆಗೆ ಲಂಡನ್‌ನ ಕೆನಿಂಗ್ಟನ್‌ನಲ್ಲಿರುವ ದಿ ಓವಲ್ ಕ್ರೀಡಾಂಗಣದಲ್ಲಿ ಜರುಗಲಿದೆ. ಅನುಭವಿ ಆರಂಭಿಕ ಬ್ಯಾಟರ್‌ ರೋಹಿತ್‌ ಶರ್ಮಾ, ಈ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಬೇಕಿದೆ. ಆದರೆ, ಎಡಗೈ ಹೆಬ್ಬೆರಳಿನ ಗಾಯದ ಸಮಸ್ಯೆ ಇದೀಗ ಆತಂಕ ತಂದೊಡ್ಡಿದೆ. ನೆಟ್ಸ್‌ ಅಭ್ಯಾಸದ ವೇಳೆ ರೋಹಿತ್‌ ಶರ್ಮಾ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಇದರ ಫೋಟೊಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡಿದೆ. ಅಂದಹಾಗೆ ಪ್ರಮುಖ ಟೆಸ್ಟ್‌ ಸರಣಿಗಳಿಗೂ ಮುನ್ನ ರೋಹಿತ್‌ ಶರ್ಮಾ ಗಾಯಗೊಂಡಿರುವುದು ಇದು ಮೊದಲೇನಲ್ಲ. ಹೀಗಾಗಿ ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೂ ಮುನ್ನ ಹೀಗಾಗದೇ ಇರಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಟ್ರೋಫಿಗೆಳ ಬರ ಎದುರಿಸಿರುವ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಟೂರ್ನಿ ಗೆದ್ದು 10 ವರ್ಷಗಳೇ ಕಳೆದಿದೆ. 2013ರಲ್ಲಿ ಎಂಎಸ್ ಧೋನಿ ಸಾರಥ್ಯದಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದ ಭಾರತ ತಂಡ, ಬಳಿಕ ಹಲವು…

Read More

ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸಮಲತಾ ಪುತ್ರ ಅಭಿಷೇಕ್ ಹಾಗೂ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಆರತಕ್ಷತೆ ಇಂದು ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ಆರತಕ್ಷತೆಗೆ ಅರಮನೆ ಮೈದಾನ ಸಿಂಗಾರಗೊಂಡಿದ್ದು ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿಯಾಗುವ ನಿರೀಕ್ಷೆ ಇದೆ. ಎರಡು ದಿನಗಳ ಹಿಂದೆಯಷ್ಟೇ ಅಭಿಷೇಕ್ ಹಾಗೂ ಅವಿವಾ ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಶುಭ ಸಮಾರಂಭದಲ್ಲಿ ನಟರಾದ ರಜನಿಕಾಂತ್, ಸುದೀಪ್, ಯಶ್,  ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು. ಇಂದು ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ…

Read More

ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಆರಂಭವಾಗಿದ್ದ ಗ್ರಾಮಾಯಣ ಸಿನಿಮಾಗೆ ಮತ್ತೆ ಚಾಲನೆ ಸಿಕ್ಕಿದೆ. ಇದೇ 8ರಂದು ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯದ್ದು, ಸಮಾರಂಭಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅತಿಥಿಯಾಗಿ ಆಗಮಿಸಲಿದ್ದಾರೆ. ಇವರ ಜೊತೆಗೆ ನಟರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ನಟರಾದ ದುನಿಯಾ ವಿಜಯ್, ಧ್ರುವ ಸರ್ಜಾ, ಉಪೇಂದ್ರ, ಡಾಲಿ ಧನಂಜಯ್, ಶ್ರೀಮುರಳಿ, ರಾಘವೇಂದ್ರ ರಾಜ್ ಕುಮಾರ್  ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ‘ಸಿದ್ಧಾರ್ಥ್’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ವಿನಯ್ ರಾಜ್‌ಕುಮಾರ್ ಇತ್ತೀಚಿಗೆ ಹೊಸ ರೀತಿಯ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಗ್ರಾಮಾಯಣ’ ಚಿತ್ರದ ವಿಚಾರವಾಗಿ ನಟ ವಿನಯ್ ಸುದ್ದಿಯಲ್ಲಿದ್ದಾರೆ. ಈ ಹೆಸರು ಕೇಳಿದ ತಕ್ಷಣ ಹಲವರಿಗೆ ಇದು ಈಗಾಗಲೇ ಆರಂಭವಾಗಿರುವ ಸಿನಿಮಾವಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಹೌದು, ‘ಗ್ರಾಮಾಯಣ’ ಸಿನಿಮಾ ಆರಂಭವಾಗಿ ಮೂರ್ನಾಲ್ಕು ವರ್ಷಗಳಾಗಿವೆ. ಆದರೆ ಹಲವು ಕಾರಣಗಳಿಂದ ನಿಂತು ಹೋಗಿದ್ದ ಚಿತ್ರವನ್ನು ಖ್ಯಾತ ನಿರ್ಮಾಪಕ ಕೆ.ಪಿ ಶ್ರಿಕಾಂತ್ ಅವರು…

Read More

ಕನ್ನಡದ ‘ಜಾಕಿ’ ಬ್ಯೂಟಿ ನಟಿ ಭಾವನಾ ಮೆನನ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ. ಸದ್ಯ ಬರ್ತಡೇ ಹಿನ್ನೆಲೆಯಲ್ಲಿ ತಮ್ಮ ಹೊಸ ಸಿನಿಮಾದ ಅಪ್‌ಡೇಟ್ ಹಂಚಿಕೊಂಡಿದ್ದಾರೆ ನಟಿ ಭಾವನಾ. ʻಭಜರಂಗಿ 2ʼ ಸಿನಿಮಾದ ಬಳಿಕ ನಟಿ ಭಾವನಾ ಮೆನನ್ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಈ ಬಗ್ಗೆ ನಟಿ ಮಾಹಿತಿ ಹಂಚಿಕೊಂಡಿದ್ದಾರೆ. ಮಲಯಾಳಂನ ನಮನ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಭಾವನಾ ಮೆನನ್ ಬಳಿಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ಸಾಕಷ್ಟು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿರುವ ನಟಿ ಇಂದಿಗೂ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಸದ್ಯ ನಟಿ ಭಾವನಾ ಮೆನನ್ ‘ದಿ ಡೋರ್’ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾವನಾ ಬರ್ತ್‌ಡೇ ದಿನ ಚಿತ್ರದ ಪೋಸ್ಟರ್‌ ಲುಕ್‌ ರಿವೀಲ್‌ ಮಾಡಿದೆ ಚಿತ್ರತಂಡ. ಇದೇ ಮೊದಲ ಭಾರಿಗೆ ಭಾವನಾ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ…

Read More

ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ  ನಟ ಸಿದ್ಧಾರ್ಥ್ ಸದ್ಯ ‘ಟಕ್ಕರ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಸಿನಿಮಾದ ಕೆಲಸಗಳು ಕಂಪ್ಲೀಟ್ ಆಗಿದ್ದು ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಮಧ್ಯೆ ಕಮಲ್ ಹಾಸನ್ ನೋಡಿದ್ರೆ ನನಗೆ ಹೊಟ್ಟೆ ಕಿಚ್ಚು ಎಂದಿರುವ ನಟ, ಸಿನಿಮಾರಂಗದಲ್ಲಿ ನನ್ನನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ಬಾಯ್ಸ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟ ಸಿದ್ದಾರ್ಥ್ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸ ಸೈ ಎನಿಸಿಕೊಂಡಿದ್ದಾರೆ. ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಸಿದ್ದಾರ್ಥ್ ಇತ್ತೀಚೆಗೆ ಆಫರ್ ಗಳು ಕಮ್ಮಿಯಾಗೋಕೆ ಶುರುವಾಗಿತ್ತು. ಇದೀಗ ಮತ್ತೆ ಟಕ್ಕರ್ ಸಿನಿಮಾದ ಮೂಲಕ ಗ್ರ್ಯಾಂಡ್ ಕಂಬ್ಯಾಕ್ ಗೆ ರೆಡಿಯಾಗಿದ್ದಾರೆ. ಜೂನ್ 9ಕ್ಕೆ ಟಕ್ಕರ್ ಸಿನಿಮಾ ರಿಲೀಸ್ ಆಗುತ್ತಿದ್ದು ಈ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ವಿವಿಧ ಸಂದರ್ಶನಗಳಲ್ಲಿ ಮಾತನಾಡಿರುವ ಸಿದ್ದಾರ್ಥ್, ಚಿತ್ರರಂಗದಲ್ಲಿ ತಮಗೆ ಹಿನ್ನಡೆ ಆಗುತ್ತಿದೆ. ಯಾಕೆ ಅಂತ ಗೊತ್ತಿಲ್ಲ, ನೇರವಾಗಿ ಹೇಳದೇ ಇದ್ದರೂ…

Read More

ಕಿರುತೆರೆ ಖ್ಯಾತ ‘ಶಕ್ತಿಮಾನ್’ ಧಾರಾವಾಹಿ ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಯೋಜನೆ ರೂಪಿಸಲಾಗಿದೆ. ಶಕ್ತಿಮಾನ್ ಧಾರವಾಹಿಯನ್ನು ಸಿನಿಮಾ ಮಾಡುವ ಕುರಿತು ಈ ಹಿಂದೆಯೇ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಆದರೆ ಇದುವರೆಗೂ ಸಿನಿಮಾ ಆರಂಭವಾಗಿಲ್ಲ. ಈ ಬಗ್ಗೆ ಮಾತನಾಡಿರುವ ನಟ ಮುಕೇಶ್ ಖನ್ನಾ ಸಿನಿಮಾ ತಡವಾಗಲು ಅಸಲಿ ಕಾರಣ ಏನೆಂಬುದನ್ನು ತಿಳಿಸಿದ್ದಾರೆ. 1993ರಲ್ಲಿ ಇಂಡಿಯನ್ ಸೂಪರ್ ಹೀರೋ ಆಗಿ ಮುಖೇಶ್ ಖನ್ನಾ ಮಿಂಚಿದ್ದರು. ಮಕ್ಕಳಿಗಂತೂ ‘ಶಕ್ತಿಮಾನ್’ ಎಂದರೆ ಎಲ್ಲಿಲ್ಲದ ಪ್ರೀತಿ. ಆತನ ಸಾಹಸಗಳು ಒಂದೆರಡಲ್ಲ. ಈಗ ಈ ಸೂಪರ್ ಹೀರೋ ಪಾತ್ರವನ್ನೇ ಮುಖ್ಯವಾಗಿ ಇಟ್ಟುಕೊಂಡು ಸಿನಿಮಾ ಸಿದ್ಧವಾಗುತ್ತಿದೆ. ಶಕ್ತಿಮಾನ್ ಸಿನಿಮಾದ ಬಜೆಟ್ 200-300 ಕೋಟಿ ರೂಪಾಯಿ ನಿರ್ಮಾಣವಾಗಲಿದ್ದು, ‘ಸ್ಪೈಡರ್ ಮ್ಯಾನ್’ ಸಿನಿಮಾ ಮಾಡಿದ್ದ ಸೋನಿ ಪಿಕ್ಚರ್ಸ್ ಸಂಸ್ಥೆಯವರು ಶಕ್ತಿಮಾನ್ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ಮೊದಲು ಕೊರೊನಾ ಬಂತು. ಅದರಿಂದ ವಿಳಂಬ ಆಯಿತು ಎಂದು ಮುಕೇಶ್ ಖನ್ನಾ ಹೇಳಿದ್ದಾರೆ. ಇದು ದೊಡ್ಡ ಸಿನಿಮಾ ಆದ್ದರಿಂದ ಸಮಯ ಹಿಡಿಯುತ್ತದೆ. ನಾನು ಶಕ್ತಿಮಾನ್ ಪಾತ್ರದಲ್ಲಿ…

Read More

ಉತ್ತಮ ಆರೋಗ್ಯಕ್ಕೆ ಹಾಲು (Milk) ಸೇವನೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಜ್ಱರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಹಾಲು ಸೇವೆ ಮಾಡುವುದು ಒಳ್ಳೆಯದು. ಅದರಲ್ಲೂ ಆಕಳ ಹಾಲು ಬಹಳ ಒಳ್ಳೇಯದು.  ನೀವು ಲ್ಯಾಕ್ಟೋಸ್ ಅಸಹಿಷ್ಣುತೆಯಂತಹ ವೈದ್ಯಕೀಯ ಸ್ಥಿತಿಯನ್ನು ಹೊಂದಿಲ್ಲದಿದ್ದರೆ, ಹೆಚ್ಚಿನ ಪೌಷ್ಟಿಕತಜ್ಞರು ಹಾಲನ್ನು ತ್ಯಜಿಸಲು ಶಿಫಾರಸು ಮಾಡುವುದಿಲ್ಲ. ಏಕೆ ಎಂದು ಯೋಚಿಸುತ್ತಿದ್ದೀರಾ? ಹಾಲು ಕ್ಯಾಲ್ಸಿಯಂ, ಪ್ರೋಟೀನ್, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಂತೆ ಪ್ರಮುಖ ಪೋಷಕಾಂಶಗಳಿಂದ ತುಂಬಿರುತ್ತದೆ.  ಡೈರಿಯಿಂದ ತಂದು ಸೇವಿಸುವ ಹಾಲನ್ನು ತ್ಯಜಿಸಿ.  ಡೈರಿಯ ಹಾಲುನ್ನು ತ್ಯಜಿಸುವುದರಿಂದ ನಿಮ್ಮ ದೇಹಕ್ಕೆ ನಿಜವಾಗಿಯೂ ಪ್ರಯೋಜನವಾಗಬಹುದು ಎಂದು ಹೇಳಲಾಗುತ್ತದೆ. ಹಾಲನ್ನು ಸಂಪೂರ್ಣವಾಗಿ ತ್ಯಜಿಸುವುದು ನಿಮ್ಮ ಮನಸ್ಸು ಮತ್ತು ದೇಹದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಹಾಲು ಸೇವನೆಯಿಂದ ನಿಮ್ಮ ದೇಹಕ್ಕೆ ಆಗುವ ಲಾಭವನ್ನು ನಾವು ಇಲ್ಲಿ ನಿಮಗೆ ತಿಳಿಸಿದ್ದೇವೆ. ನಿಮ್ಮ ಚರ್ಮವು ಸುಧಾರಿಸುತ್ತದೆ: ಕಾಸ್ಮೋಪಾಲಿಟನ್‌ನಲ್ಲಿನ ವರದಿಯ ಪ್ರಕಾರ, ಡೈರಿಯ ಹಾಲನ್ನು ತ್ಯಜಿಸುವುದರಿಂದ ವ್ಯಕ್ತಿಯ ಚರ್ಮವನ್ನು ಸುಧಾರಿಸುತ್ತದೆ. ಹಸುವಿನ ಹಾಲು ಹಾರ್ಮೋನುಗಳನ್ನು ಹೊಂದಿರುವುದರಿಂದ, ಇದು ಕೆಲವೊಮ್ಮೆ ನಿಮ್ಮ ದೇಹದಲ್ಲಿ ಇರುವ…

Read More

ಕೀವ್ : ದೇಶದ ದಕ್ಷಿಣ ಭಾಗದ ಕೆರ್ಸಾನ್‌ ಬಳಿ ಇರುವ ಅಣೆಕಟ್ಟು ಹಾಗೂ ಜಲವಿದ್ಯುತ್‌ ಉತ್ಪಾದನಾ ಕೇಂದ್ರವನ್ನು ರಷ್ಯಾ ಪಡೆಗಳು ಸ್ಫೋಟಿಸಿವೆ ಎಂದು ಉಕ್ರೇನ್‌ ಆರೋಪಿಸಿದೆ. ‘ಹಾನಿಗೊಳಗಾಗಿರುವ ಅಣೆಕಟ್ಟೆಯಿಂದ ಭಾರಿ ಪ್ರಮಾಣದ ನೀರು ಹೊರ ಬರುತ್ತಿದ್ದು ಇದರಿಂದ ಭಾರಿ ಪ್ರಮಾಣದಲ್ಲಿ ಪ್ರವಾಹ ಉಂಟಾಗುವ ಅಪಾಯ ಇದೆ ಎಂದು ಉಕ್ರೇನ್‌ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅಣೆಕಟ್ಟೆಯ ಕೆಳಗಿನ ಪ್ರದೇಶದಲ್ಲಿರುವವರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎರಡೂ ದೇಶಗಳ ಅಧಿಕಾರಿಗಳು ಜನರಿಗೆ ಸೂಚನೆ ನೀಡಿದ್ದಾರೆ. ಈ ಅಣೆಕಟ್ಟು ಹಾಗೂ ವಿದ್ಯುತ್‌ ಉತ್ಪದನಾ ಕೇಂದ್ರವಿರುವ ಪ್ರದೇಶವು ಸದ್ಯ ರಷ್ಯಾ ನಿಯಂತ್ರಣದಲ್ಲಿದೆ. ಉಕ್ರೇನ್‌ನ ಆರೋಪವನ್ನು ರಷ್ಯಾ ಅಧಿಕಾರಿಗಳು ತಳ್ಳಿ ಹಾಕಿದ್ದು, ‘ಉಕ್ರೇನ್‌ ಸೇನಾಪಡೆಗಳು ನಡೆಸಿದ ದಾಳಿಯಲ್ಲಿ ಡಿನಿಪ್ರೊ ನದಿಗೆ ನಿರ್ಮಿಸಿರುವ ಕಖೋವ್ಕಾ ಅಣೆಕಟ್ಟು ಹಾನಿಗೊಳಲಾಗಿದೆ’ ಎಂದಿದ್ದಾರೆ. ಅಪಾರ ಪ್ರಮಾಣದ ನೀರು ಹರಿದು ಹೋಗುವ ಕಾರಣ, ರಷ್ಯಾ ವಶದಲ್ಲಿರುವ ಕ್ರಿಮಿಯಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಅತಂಕ ನಿರ್ಮಾಣವಾಗಿದೆ. ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕುಸಿಯುವ ಕಾರಣ, ಅಣುವಿದ್ಯುತ್‌ ಸ್ಥಾವರಕ್ಕೆ ನೀರು ಪೂರೈಕೆಯಲ್ಲಿ…

Read More

ಪೋರ್ಟ್-ಯು-ಪ್ರಿನ್ಸ್ : ‘ದಕ್ಷಿಣ ಹೈಟಿಯಲ್ಲಿ ಸಂಭವಿಸಿದ ಭೂಕಂಪನದಲ್ಲಿ, ಮೂವರು ಮೃತಪಟ್ಟಿದ್ದು ಕೆಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು. ‘ಭೂಕಂಪನದಿಂದ ಕುಸಿದುಬಿದ್ದ ಮನೆಗಳ ಅವಶೇಷಗಳಡಿ ಸಿಲುಕಿದ್ದ ಮೂವರ ಶವಗಳನ್ನು ಹೊರತೆಗೆಯಲು ಹಾಗೂ ಬದುಕಿದ್ದವರನ್ನು ರಕ್ಷಿಸಲು ತೀವ್ರ ಹುಡುಕಾಟ ನಡೆಸಿದರು’ ಎಂದು ‘ಅಸೋಸಿಯೇಟೆಡ್ ಪ್ರೆಸ್’ ಸುದ್ದಿ ಸಂಸ್ಥೆಗೆ ಜೆರಿಮಿಯ ಹೈಟಿ ನಾಗರಿಕ ರಕ್ಷಣಾ ಸಮಿತಿಯ ಫ್ರ್ಯಾಂಕೆಲ್ ಮಾಹಿತಿ ನೀಡಿದರು. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ದಕ್ಷಿಣ ಕರಾವಳಿ ನಗರವಾದ ಜೆರಿಮಿಯ ಬಳಿ 10 ಕಿ.ಮೀ ಆಳದಲ್ಲಿ ಭೂಕಂಪನವಾಗಿದ್ದು, ಇದರ ತೀವ್ರತೆ 4.9ರಷ್ಟಿದೆ. 2022ರ ಆಗಸ್ಟ್ನಲ್ಲಿ ದಕ್ಷಿಣ ಹೈಟಿಯಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 2,200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಸಾಕಷ್ಟು ಹಾನಿಯಾಗಿತ್ತು. ಆಗ ತಮ್ಮ ಮನೆಗಳನ್ನು ಕಳೆದುಕೊಂಡ ಹಲವರು ಇಂದಿಗೂ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಇದೀಗ ಮತ್ತೆ ಭೂಕಂಪನ‌ ಸಂಭವಿಸಿದ್ದು ಇದರಿಂದ ಜನ ಕಂಗಾಲಾಗಿದ್ದಾರೆ.

Read More

ಭೋಪಾಲ್: ಎಲ್‌ಪಿಜಿ (LPG) ಸಾಗಿಸಲಾಗುತ್ತಿದ್ದ ಗೂಡ್ಸ್ ರೈಲಿನ (Goods Train) 2 ವ್ಯಾಗನ್‌ಗಳು ಹಳಿ ತಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಜಬಲ್‌ಪುರದ (Jabalpur) ಶಹಪುರದಲ್ಲಿ ನಡೆದಿದೆ ಎಂದು ಬುಧವಾರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಭಾರೀ ದುರಂತ ತಪ್ಪಿದೆ. ಗೂಡ್ಸ್ ರೈಲಿನಿಂದ ಅನ್‌ಲೋಡ್ ಮಾಡಲು ಇರಿಸಿದ್ದಾಗ ಘಟನೆ ನಡೆದಿದೆ ಎಂದು ಪಶ್ಚಿಮ ಸೆಂಟ್ರಲ್ ರೈಲ್ವೆ ಸಿಪಿಆರ್‌ಒ ಮಾಹಿತಿ ನೀಡಿದೆ. ಕಳೆದ ರಾತ್ರಿ ಗೂಡ್ಸ್ ರೈಲಿನ ಎಲ್‌ಪಿಜಿ ರೇಕ್‌ನ ಎರಡು ವ್ಯಾಗನ್‌ಗಳನ್ನು ಇಳಿಸಲು ಮುಂದಾದಾಗ ಹಳಿತಪ್ಪಿದೆ. ಸದ್ಯ ರೈಲುಗಳ ಯಾವುದೇ ಮುಖ್ಯ ಸಂಚಾರಕ್ಕೆ ತೊಂದರೆಯಾಗಿಲ್ಲ. ಮುಖ್ಯ ಮಾರ್ಗದಲ್ಲಿ ರೈಲು ಸಂಚಾರ ಸಾಮಾನ್ಯವಾಗಿದೆ. ಬೆಳಗ್ಗೆ ಸೈಡಿಂಗ್ ಅಧಿಕಾರಿಗಳ ಸಮ್ಮುಖದಲ್ಲಿ ಹಳಿತಪ್ಪಿದ ರೈಲನ್ನು ಮರುಸ್ಥಾಪಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ.  ಕಳೆದ ವಾರ ಒಡಿಶಾದ ಬಾಲಸೋರ್‌ನಲ್ಲಿ 3 ರೈಲುಗಳು ಅಪಘಾತಕ್ಕೀಡಾಗಿದ್ದು, 275 ಜನರು ಸಾವನ್ನಪ್ಪಿದ್ದಾರೆ. 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆ ದೇಶದಲ್ಲೇ ಸಂಭವಿಸಿದ ಅತ್ಯಂತ ಭೀಕರ ರೈಲ್ವೆ ದುರಂತಗಳಲ್ಲಿ ಒಂದು ಎನಿಸಿಕೊಂಡಿದೆ. ಈ ಕಹಿ ಘಟನೆ…

Read More