ನವದೆಹಲಿ: ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಷರತ್ತು ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಂಚನೆ ಮಾಡ್ತಿದೆ ಎಂದು ನವದೆಹಲಿಯಲ್ಲಿ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದ್ದಾರೆ. ಯುದ್ಧಕ್ಕೂ ಸಿದ್ಧ, ಸ್ನೇಹಕ್ಕೂ ಸಿದ್ಧ ಎಂದು ಡಿಕೆಶಿ ಹೇಳಿದ್ದಾರೆ. ಭಾರತ ಜನತಾ ಪಾರ್ಟಿ ಯುದ್ಧಕ್ಕೆ ಸಿದ್ಧವಿದೆ. ಕಾಂಗ್ರೆಸ್ ಸರ್ಕಾರದ ವಂಚನೆ ವಿರುದ್ಧ ಹೋರಾಟ ಮಾಡುತ್ತೇವೆ. ಘೋಷಣೆ ಮಾಡುವಾಗ ಸಿದ್ದರಾಮಯ್ಯ ಟ್ಯಾಕ್ಸ್ ಕಟ್ಟುತ್ತಿರಲಿಲ್ವೇ? ಉಚಿತ ಎಂದು ಹೇಳುವಾಗ ನಿಮಗೆ ಗೊತ್ತಾಗಲಿಲ್ವಾ. ಕಾಂಗ್ರೆಸ್ನ ಕೇಂದ್ರ ನಾಯಕರನ್ನು ಸುಳ್ಳುಗಾರರನ್ನಾಗಿ ಮಾಡಲಾಗಿದೆ. ಕಾಂಗ್ರೆಸ್ ವಂಚಕರ ಪಾರ್ಟಿ, ಸಿದ್ದರಾಮಯ್ಯ ವಂಚಕರ ನಾಯಕ ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದರು.
Author: Prajatv Kannada
ಗಾಂಧೀನಗರ: ಕ್ರಿಕೆಟ್ (Cricket) ಆಡುತ್ತಿದ್ದ ಸಂದರ್ಭ ದಲಿತ ಬಾಲಕನೊಬ್ಬ (Dalit Boy) ಚೆಂಡನ್ನು (Ball) ಮುಟ್ಟಿದ್ದಕ್ಕೆ ಗಲಾಟೆ ನಡೆದು, ಇದನ್ನು ಪ್ರಶ್ನಿಸಿದ ದಲಿತ ವ್ಯಕ್ತಿಯ (Dalit Man) ಹೆಬ್ಬೆರಳನ್ನೇ ( ಕತ್ತರಿಸಿರುವ ವಿಕೃತ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಗುಜರಾತ್‌ನ ಪಟಾನ್ ಜಿಲ್ಲೆಯ ಗ್ರಾಮಸ್ಥರು ಭಾನುವಾರ ಶಾಲೆಯೊಂದರ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ದಲಿತ ಬಾಲಕನೊಬ್ಬ ಚೆಂಡನ್ನು ಮುಟ್ಟಿದ್ದ. ಇದರಿಂದ ಕೋಪಗೊಂಡ ಗ್ರಾಮಸ್ಥರು ಬಾಲಕನಿಗೆ ಜಾತಿ ನಿಂದನೆ ಮಾಡಿದ್ದಲ್ಲದೇ ಬೆದರಿಕೆ ಹಾಕಿದ್ದಾರೆ. ಈ ವಿಚಾರ ತಿಳಿದ ಬಾಲಕನ ಸಂಬಂಧಿ ಧೀರಜ್ ಪರ್ಮಾರ್ ಗ್ರಾಮಸ್ಥರಲ್ಲಿ ಬಾಲಕನಿಗೆ ನಿಂದಿಸಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಕ್ಷಣಕ್ಕೆ ಗಲಾಟೆಯನ್ನು ಇತ್ಯರ್ಥಗೊಳಿಸಲಾಯಿತಾದರೂ ಬಳಿಕ ಸಂಜೆ 7 ಜನರ ಗುಂಪು ಹರಿತವಾದ ಆಯುಧಗಳೊಂದಿಗೆ ಬಂದು ಧೀರಜ್ ಹಾಗೂ ಆತನ ಸಹೋದರ ಕೀರ್ತಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳಲ್ಲಿ ಒಬ್ಬ ಕೀರ್ತಿ ಅವರ ಹೆಬ್ಬೆರಳನ್ನೇ ಕತ್ತರಿಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಇದೀಗ ಘಟನೆ ಬಗ್ಗೆ ಪೊಲೀಸರು ಭಾರತೀಯ…
ಧಾರವಾಡ: ಚುನಾವಣಾ ಸಮಯದಲ್ಲಿ ನಾವು ಏನು ಭರವಸೆಗಳನ್ನು ಕೊಟ್ಟಿದ್ದೆವೋ ಅವುಗಳನ್ನು ಈಡೇರಿಸುವುದೇ ನಮ್ಮ ಗುರಿ. ಕೊಟ್ಟ ಮಾತುಗಳನ್ನು ನಾವು ಕಾರ್ಯರೂಪಕ್ಕೆ ತರುತ್ತೇವೆ ಎಂದು ಸಚಿವ ಸಂತೋಷ ಲಾಡ್ (Santhosh Lad) ಹೇಳಿಕೆ ನೀಡಿದ್ದಾರೆ. ಧಾರವಾಡದ ಮುರುಘಾಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ (Congress) ಅಧಿಕಾರದ ಅಮಲು ಏರಿದೆ ಎಂಬ ಬಿಜೆಪಿ (BJP) ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಮೊನ್ನೆಯಷ್ಟೇ ನಾವು ಅಧಿಕಾರಕ್ಕೆ ಬಂದಿದ್ದೇವೆ. ಒಟ್ಟಾರೆ ನಮ್ಮ ಉದ್ದೇಶ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವುದಾಗಿದೆ. ವಿಶೇಷವಾಗಿ ನಮ್ಮ ಗಮನ ಆ ಕಡೆ ಇರುತ್ತದೆ ಎಂದರು. ಕರ್ನಾಟಕದಲ್ಲಿ ಅತೀ ಶೀಘ್ರದಲ್ಲೇ ತುರ್ತು ಪರಿಸ್ಥಿತಿ ಬರುತ್ತದೆ ಬರುತ್ತದೆ ಎಂಬ ಮಾಜಿ ಸಿಎಂ ಬೊಮ್ಮಾಯಿ (Basavaraj Bommai) ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಯಾವ ದೃಷ್ಟಿಯಿಂದ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಮುಂಬರುವ ದಿನಗಳಲ್ಲಿ ಅದಕ್ಕೆ ಉತ್ತರ ಸಿಗುತ್ತದೆ. ಸುಮ್ಮನೆ ಅವರೊಂದು ಹೇಳುವುದು ನಾವೊಂದು ಹೇಳುವುದು ಬೇಡ. ಬೊಮ್ಮಾಯಿ ಅವರು ಬಡತನ ಹಾಗೂ ಅಭಿವೃದ್ಧಿ ಬಗ್ಗೆ ಮಾತನಾಡುವುದು ಒಳ್ಳೆಯದು ಎಂದು…
ದಾವಣಗೆರೆ: ನನ್ನ ಕುಟುಂಬಕ್ಕೆ ಉಚಿತ ಯೋಜನೆ ಬೇಡ, ಬಡವರಿಗೆ ಸಿಗಲಿ ಎಂದು ಹೊನ್ನಾಳಿಯ ಬಿಜೆಪಿ (BJP) ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (M.P.Renukacharya) ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಂಡೀಷನ್ ಹಾಕದೇ ಗ್ಯಾರಂಟಿ ಯೋಜನೆ (Guarantee Scheme) ಜಾರಿ ಮಾಡಿ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಜನರ ಕಿವಿಗೆ ಹೂವು ಇಡುವುದು ಸರಿಯಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಗ್ಯಾರಂಟಿ ಯೋಜನೆಗಳನ್ನು ಭರವಸೆಯನ್ನಾಗಿ ನೀಡಿ ಜನರನ್ನು ಮರಳು ಮಾಡಿದ್ದಾರೆ. ಈಗ ಎಲ್ಲದಕ್ಕೂ ಷರತ್ತು ವಿಧಿಸುವುದು ಸರಿಯಲ್ಲ. ಚುನಾವಣೆಗೆ ಮುಂಚೆ ಷರತ್ತು ಹೇಳದೇ ಗ್ಯಾರಂಟಿ ಘೋಷಣೆ ಮಾಡಿದ್ದೀರಿ. ಈಗಲೂ ಕೂಡ ಯಾವುದೇ ಶರತ್ತು ಹಾಕದೇ ಯೋಜನೆ ಜಾರಿ ಮಾಡಿ ಎಂದು ಆಗ್ರಹಿಸಿದರು. ಕರೆಂಟ್ ಬಿಲ್, ಅನ್ನಭಾಗ್ಯ, ಬಸ್ ಪ್ರಯಾಣ ಎಲ್ಲದಕ್ಕೂ ಷರತ್ತು ಹಾಕುತ್ತಿದ್ದೀರಿ. ಕೊಟ್ಟು ಮಾತು ಉಳಿಸಿಕೊಳ್ಳಿ. ವಚನ ಭ್ರಷ್ಟರಾಗಬೇಡಿ. ಕೇಂದ್ರ ಸರ್ಕಾರ ಈಗ 5 ಕೆಜಿ ಅಕ್ಕಿ ಕೊಡುತ್ತಿದೆ. ಅದನ್ನ ಬಿಟ್ಟು ನೀವು 10…
ಮಂಗಳೂರು: ನೈತಿಕ ಪೊಲೀಸ್ ಗಿರಿ (Moral Policing) ತಡೆಯಲು ಮಂಗಳೂರು (Mangaluru) ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸದಾಗಿ ಕೋಮು ದ್ವೇಷ ನಿಗ್ರಹ (Anti Communal Wing) ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G.Parameshwara) ಭರವಸೆ ನೀಡಿದ್ದಾರೆ. ಮಂಗಳೂರಿನಲ್ಲಿ ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಒಳ್ಳೆಯ ಜನರಿದ್ದಾರೆ ಎಂದು ಇಡೀ ದೇಶವೇ ನಂಬಿದೆ. ಆದರೆ ಅದರ ಜೊತೆಗೆ ಇಲ್ಲಿ ಶಾಂತಿ ಇಲ್ಲ, ಕೋಮು ಸಾಮರಸ್ಯ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ನಾನು ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿದ್ದಾಗ ಇಪ್ಪತ್ತು ಸಂಸ್ಥೆಗಳ ಮುಖ್ಯಸ್ಥರ ಜೊತೆ ಮಾತನಾಡಿದ್ದೇನೆ. ಆಗ ಅವರೂ ಇಲ್ಲಿ ಶಾಂತಿ ಕೊಡಿ ಎಂಬ ಮಾತನ್ನಾಡಿದ್ದಾರೆ ಎಂದು ಹೇಳಿದರು. ಕರಾವಳಿಯಲ್ಲಿ ಇಂದು ಭಯದ ವಾತಾವರಣ ಇದೆ ಎಂದು ಜನ ಮಾತಾನಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನಾವು ತಡೆಯುತ್ತೇವೆ. ನೈತಿಕ ಪೊಲೀಸ್‌ಗಿರಿ ಇಲ್ಲಿ ಜಾಸ್ತಿಯಾಗಿದೆ. ಇದೆಲ್ಲವನ್ನೂ ನಾವು ತಡೆಯದೇ ಇದ್ದರೆ ಇಲಾಖೆ ಹಾಗೂ ರಾಜ್ಯಕ್ಕೆ…
ಕರ್ನಾಟಕದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಬೆಳಗಾವಿ ಜಿಲ್ಲೆಯ ವಿಭಜನೆ ಸನಿಹವಾದಂತೆ ಕಾಣುತ್ತಿದೆ. ಭೌಗೋಳಿಕ ಗಾತ್ರ ಹಾಗೂ ರಾಜಕೀಯ ವಿಚಾರದಲ್ಲೂ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ವಿಭಜನೆಯಾಗುವ ಸಮಯ ಹತ್ತಿರ ಬಂದಿದ್ದು, ಮೂರು ಜಿಲ್ಲೆಗಳಾಗುವ ಸಾಧ್ಯತೆ ಇದೆ. 1997ರಲ್ಲಿಯೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಬೇಕೆಂಬ ಬೇಡಿಕೆಯನ್ನು ಮೊದಲ ಬಾರಿಗೆ ಇಡಲಾಗಿತ್ತು. ಆದರೆ, 26 ವರ್ಷಗಳು ಕಳೆದರೂ ಬೇಡಿಕೆ ಮಾತ್ರ ಈಡೇರಿಲ್ಲ. ಆದರೆ, ಈಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ವಿಭಜನೆಯ ಸುಳಿವು ನೀಡಿದ್ದಾರೆ. ಈ ಬಗ್ಗೆ ಶೀಘ್ರವೇ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಳ್ಳಾರಿ ವಿಭಜಿಸಿ ವಿಜಯನಗರವನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಿದಾಗ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯನ್ನು ವಿಭಜಿಸಿ ಎಂದು ಅಭಿಯಾನ ಆರಂಭಿಸಿದ್ದರು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆ ವಿಭಜನೆ ಸಾಧ್ಯವಾಗಿರಲಿಲ್ಲ. ಈಗ ಅವರದ್ದೇ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಗುವ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲೆ…
ಹಾವೇರಿ: ವಿವಾಹಕ್ಕೆ ಪೋಷಕರ ವಿರೋಧ ಹಿನ್ನೆಲೆ ಪ್ರೇಮಿಗಳು ಸ್ಲೀಪರ್ ಕೋಚ್ ಬಸ್ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾರೆ. ಹಾವೇರಿಯಲ್ಲಿ (Haveri) ನಡೆದ ಈ ಘಟನೆಯಲ್ಲಿ ಯುವತಿ ಸಾವನ್ನಪ್ಪಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೇಮಾ ರಾಮಕೃಷ್ಣಪ್ಪ (20) ಮೃತ ಯುವತಿ. ಬಾಗಲಕೋಟೆ ಮೂಲದ ಅಖಿಲ್ ಮತ್ತು ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ಬೆಂಗಳೂರು ಮೂಲದ ಹೇಮಾ ರಾಮಕೃಷ್ಣಪ್ಪ ಪರಸ್ಪರ ಪ್ರೀತಿಸುತ್ತಿದ್ದು, ಬಾಳುವುದಾದರೆ ಇಬ್ಬರೂ ಜೊತೆಗೆ ಬಾಳುವ ನಿರ್ಣಯ ಮಾಡಿಕೊಂಡು ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ನೊಂದ ಅಖಿಲ್ ಮತ್ತು ಹೇಮಾ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ತಮ್ಮ ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ನೊಂದ ಪ್ರೇಮಿಗಳು ಸ್ಲೀಪರ್ ಕೋಚ್ ಬಸ್ ಹತ್ತಿದ್ದಾರೆ. ನಂತರ ವಿಷ ಸೇವಿಸಿಕೊಂಡ ಅಖಿಲ್ ಮತ್ತು ಹೇಮಾ ನಿದ್ರಿಸಿದ್ದಾರೆ. ಊಟಕ್ಕೆಂದು ಮಾರ್ಗಮಧ್ಯೆ ಹೋಟೆಲ್ ಬಳಿ ಬಸ್ ನಿಲ್ಲಿಸಿದ್ದಾಗ ವಿಷದ ವಾಸನೆ ಬರುವುದನ್ನು ಗಮನಿಸಿದ ಪ್ರಯಾಣಿಕರು ಪರಿಶೀಲನೆ ನಡೆಸಿದಾಗ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಕೂಡಲೇ…
ಬೆಂಗಳೂರು: ಸಿಲಿಕಾನ್ ಸಿಟಿಯ ಅಂಡರ್ ಪಾಸ್‍ನಲ್ಲಿ ಲಾರಿ (Lorry Stuck In Underpassa) ಯೊಂದು ಸಿಲುಕಿಕೊಂಡಿರುವ ಘಟನೆ ನಡೆದಿದೆ. ಮಹಾರಾಣಿ ಕಾಲೇಜ್ ಬಳಿ ಇರುವ ಅಂಡರ್ ಪಾಸ್ (Maharani College Underpass) ನಲ್ಲಿ ಲಾರಿ ಸಿಕ್ಕಿಹಾಕಿಕೊಂಡಿದ್ದು, ಪೊಲೀಸರು ಅಂಡರ್ ಪಾಸ್ ಬಂದ್ ಮಾಡಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಚಾಲುಕ್ಯ ಸರ್ಕಲ್ (Chalukya Circle) ಸಂಪರ್ಕಿಸೋ ರಸ್ತೆ ಅಂಡರ್ ಪಾಸ್ ಬಳಿ ಬಂದ್ ಆಗಿದೆ. ಲಾರಿಯು ಮೈಸೂರು ಬ್ಯಾಂಕ್ (Mysuru Bank) ಕಡೆಯಿಂದ ಬಂದು ಮುಂದೆ ಚಲಿಸಲಾಗದೆ ಅಂಡರ್‍ಪಾಸ್‍ನಲ್ಲಿ ಸಿಲುಕಿದೆ. ಈ ಲಾರಿ (Lorry) ಯನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಉಪ್ಪಾರಪೇಟೆ ಸಂಚಾರಿ ಪೊಲೀಸರು ಲಾರಿ ತೆಗೆಯಲು ಜೆಸಿಬಿ ತರಿಸಿದ್ದಾರೆ. ಅಂಡರ್ ಪಾಸ್‍ನಲ್ಲಿ ಲಾರಿ ತೆರಳಲು ಸಾಧ್ಯವಿಲ್ಲ. ಆದರೂ ಚಾಲಕ ಅಂಡರ್‍ಪಾಸ್‍ನಲ್ಲಿ ನುಗ್ಗಿಸಲು ಪ್ರಯತ್ನಿಸಿದ್ದರಿಂದ ಸಿಲುಕಿಕೊಂಡಿದೆ. ಲಾರಿ ಸಿಲುಕಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ. ಚಾಲುಕ್ಯ ಸರ್ಕಲ್ ಬರಲು ಫ್ರೀಡಂ ಪಾರ್ಕ್ ಕಡೆಯಿಂದ ಬರಲು ಸಂಚಾರಿ ಪೊಲೀಸರ ಸೂಚನೆ…
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ದಳಪತಿಗಳು ಪುಟಿದೇಳುವ ಆತ್ಮವಿಶ್ವಾಸದಲ್ಲಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯ ಜೊತೆ ಬಿಬಿಎಂಪಿ, ಲೋಕಸಭೆಗೆ ಸಜ್ಜಾಗ್ತಿದ್ದು ಪಕ್ಷ ಸಂಘಟನೆಗೆ ಮೇಜರ್ ಸರ್ಜರಿಗೆ ಮುಂದಾಗಿದ್ದಾರೆ. ಯಾರ ಜೊತೆಯೂ ಮೈತ್ರಿ ಇಲ್ಲ ಎಂದಿರುವ ದೊಡ್ಡಗೌಡ್ರು ಸಮುದಾಯವಾರು ನಾಯಕರನ್ನು ಬೆಳಸಲು ಪ್ಲಾನ್ ಮಾಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳನ್ನೇ ಅಸ್ತ್ರವಾಗಿಸಿ ಕೊಂಡಿರುವ HDK ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಸಮರ ಸಾರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹೀನಾಯವಾಗಿ ಸೋತು ನೆಲಕಚ್ಚಿದೆ, ಹಾಲಿ ಪ್ರಭಾವಿ ಶಾಸಕರೆಲ್ಲಾ ಸೋತು ಸುಣ್ಣವಾಗೋದ್ರು. ಸೋಲಿನ ಆತ್ಮಾವಲೋಕನ ನಡೆಸಿದ ದಳಪತಿಗಳು ಸೋಲಿಗೆ ಕಾರಣಗಳೇನು ಎಂಬ ವಿಮರ್ಶೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪುಟಿದೇಳುವ ಆತ್ಮವಿಶ್ವಾಸದಲ್ಲಿದ್ದು ಪಕ್ಷಕ್ಕೆ ಮೇಜರ್ ಸರ್ಜರಿ ಮಾಡಿ ಸಂಘಟನೆಗೆ ಮುಂದಾಗಿದ್ದಾರೆ. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಬಿಬಿಎಂಪಿ, ಲೋಕಸಭಾ ಚುನಾವಣೆಗೆ ಜೆಡಿಎಸ್ ತಯಾರಾಗ್ತಿದೆ. ಪಕ್ಷ ಸಂಘಟನೆ ತಮ್ಮ ಪಕ್ಷದ ಮುಂದಿನ ಯೋಜನೆಗಳ ಬಗ್ಗೆ ಮಾಜಿ ಪ್ರಧಾನಿ ದೇವೆಗೌಡ್ರು, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜಂಟಿ ಸುದ್ದಿ ಗೋಷ್ಠಿ ನಡೆಸಿ ವಿಪಕ್ಷಗಳ…
ಬೆಂಗಳೂರು: ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸಬಾರದು ಎಂದು ಕೆಎಂಎಫ್’ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರವನ್ನು ಕಡಿತ ಮಾಡದಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. ಏಕಾಏಕಿ ದರ ಕಡಿತ ಮಾಡುವಂತಿಲ್ಲ. ಬೇಸಿಗೆ ಸಮಯದಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾದ್ದರಿಂದ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ಏಪ್ರಿಲ್ 1ರಿಂದ ಮೇ 31ರವರೆಗೆ ಪ್ರತಿ ಲೀಟರ್ ಹಾಲಿಗೆ ರೂ.2.85 ವಿಶೇಷ ಪ್ರೋತ್ಸಾಹ ಧನ ಘೋಷಿಸಿತ್ತು. ಇದೀಗ ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ಹಸಿರು ಮೇವು ಲಭ್ಯವಾಗಿದ್ದು, ಹಾಲಿ ಉತ್ಪಾದನೆ ಹೆಚ್ಚಳವಾಗಿದೆ. ಈ ಕಾರಣಕ್ಕೆ ಪ್ರೋತ್ಸಾಹಧನದಲ್ಲಿ ರೂ.1.50 ಕಡಿತಗೊಳಿಸಿ ಆದೇಶ ಹೊರಡಿಸಲಾಗಿತ್ತು. ಬೆಲೆಯೇರಿಕೆ ಬಿಸಿ ಜನರನ್ನು ನಿರಂತರವಾಗಿ ಸುಡುತ್ತಿದೆ. ಇದರ ಮಧ್ಯೆ ಈಗ ಹಾಲಿನ ದರ (Milk Price) ಏರಿಕೆಯ ಭೀತಿ ಜನರಿಗೆ ಕಾಡುತ್ತಿದೆ. ಯಾಕೆಂದ್ರೆ ಹಾಲು ಒಕ್ಕೂಟಗಳು ನಷ್ಟದ ಕಾರಣಕ್ಕೆ ಎರಡು ತಿಂಗಳಿಂದ ರೈತರಿಗೆ ನೀಡುತ್ತಿದ್ದ ಸಹಾಯಧನವನ್ನು…