ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹ ಜ್ಯೋತಿ ಯೋಜನೆಯು ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಲಿದೆ. ಆದರೆ, ಈ ಯೋಜನೆಯು ಮನೆ ಮಾಲೀಕರಿಗೆ ಸುಲಭವಾಗಿ ಸಿಗುತ್ತದೆ. ಆದರೆ, ಮನೆಗಳಲ್ಲಿ ಬಾಡಿಗೆ ಇರುವವರಿಗೆ ಈ ಪ್ರಯೋಜನ ಪಡೆಯುವುದು ತುಸು ತಲೆಬಿಸಿಯ ವಿಚಾರವಾಗಿದೆ. ಏಕೆಂದರೆ, ಮನೆ ಮಾಲೀಕರು ತಾವು ಎಷ್ಟು ಮನೆಗಳನ್ನು ಬಾಡಿಗೆ ಕೊಟ್ಟಿದ್ದೇವೆ ಎಂಬುದನ್ನು ಘೋಷಿಸಿಕೊಳ್ಳಬೇಕಿದೆ ಹಾಗೂ ಆ ಮನೆಗಳಿಗೆ ಸೂಕ್ತವಾದ ಆಸ್ತಿ ತೆರಿಗೆ ಪಾವತಿರಿಸಬೇಕಿರುತ್ತದೆ. ಹಾಗಿದ್ದರೆ ಮಾತ್ರ ಬಾಡಿಗೆದಾರರಿಗೆ ಗೃಹ ಜ್ಯೋತಿ ಸೌಲಭ್ಯ ಸಿಗುತ್ತೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಬಾಡಿಗೆದಾರರು ಗೃಹ ಜ್ಯೋತಿ ಸೌಲಭ್ಯವನ್ನು ಪಡೆಯಲು ಏನೇನು ಮಾಡಬೇಕು ಎಂಬುದನ್ನು ಹೇಳಿದ್ದಾರೆ. ಒಂದು ಕಟ್ಟಡಕ್ಕೆ ಒಂದು ಗೃಹ ಜ್ಯೋತಿ ಯೋಜನೆಯೇ? ಬೆಸ್ಕಾಂ ಅಧಿಕಾರಿಗಳು ಹೇಳೋದೇನು? ಒಂದು ಕಟ್ಟಡಕ್ಕೆ ಒಂದೇ ಗೃಹ ಜ್ಯೋತಿ ಯೋಜನೆ ಎಂಬುದಾಗಿ ರಾಜ್ಯ ವಿದ್ಯುತ್ ನಿಗಮವು ಹೊರಡಿಸಿರುವ ಆದೇಶವು ಹಲವಾರು ಮಂದಿಯಲ್ಲಿ ಗೊಂದಲ ಉಂಟು ಮಾಡಿದೆ. ಈ ಬಗ್ಗೆ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಒಂದು ಮನೆಗೆ ಒಂದು ವಿದ್ಯುತ್ ಸೌಕರ್ಯ…
Author: Prajatv Kannada
ಜೂನ್ 7 ರಿಂದ 11 ರವರೆಗೆ ಇಂಗ್ಲೆಂಡ್‌ನ ದಿ ಓವಲ್ ಅಂಗಣದಲ್ಲಿ ನಡೆಯಲಿರುವ ಐಸಿಸಿ ಆಯೋಜನೆಯ 2 ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಪಾಯಕಾರಿ ಆಗಲಿದ್ದಾರೆ ಎಂದು ಯುವ ಆಲ್ ರೌಂಡರ್ ಕ್ಯಾಮೆರಾನ್ ಗ್ರೀನ್ ಎಚ್ಚರಿಕೆ ನೀಡಿದ್ದಾರೆ. 2021ರಲ್ಲಿ ನಡೆದ ಚೊಚ್ಚಲ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ನಿಂದ ಸೋತ ಟೀಮ್ ಇಂಡಿಯಾ, ಇದೀಗ ಪ್ಯಾಟ್ ಕಮ್ಮಿನ್ಸ್ ಸಾರಥ್ಯದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 2ನೇ ಆವೃತ್ತಿಯ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ಗೆಲ್ಲಬೇಕಾದರೆ ವಿರಾಟ್ ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ. ಅಂದಹಾಗೆ ವಿರಾಟ್ ಕೊಹ್ಲಿ ಇತ್ತೀಚೆಗೆ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ತಮ್ಮ ಶ್ರೇಷ್ಠ ಲಯಕ್ಕೆ ಮರಳಿದ್ದಾರೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅಪ್ರತಿಮ ದಾಖಲೆ ಹೊಂದಿದ್ದು, ಈವರೆಗೆ ಆಡಿದ 24 ಟೆಸ್ಟ್ ಪಂದ್ಯಗಳಿಂದ 48.26ರ ಸರಾಸರಿಯಲ್ಲಿ…
ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಖ್ಯಾತಿ ಕಾರ್ಯಕ್ರಮ ವೀಕೆಂಡ್ ವಿಥ್ ರಮೇಶ್ ಈ ವಾರ ಮುಕ್ತಾಯವಾಗಲಿದೆ. ಈ ಬಾರಿ ಅತೀ ವೇಗದಲ್ಲಿ ಈ ಕಾರ್ಯಕ್ರಮವನ್ನು ಮುಗಿಸಿದೆ ಜೀ ಕನ್ನಡ ವಾಹಿನಿ. ಮೊದಲ ಸೀಸನ್ ನಿಂದ ಈ ಸೀಸನ್ ವರೆಗೂ ಒಟ್ಟು 100 ಸಾಧಕರು ವೀಕೆಂಡ್ ಕುರ್ಚಿ ಮೇಲೆ ಕೂತು ತಮ್ಮ ಸಾಧನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ. ಈ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಪಿಸೋಡ್ ಮೂಲಕ ಈ ಸೀಸನ್ ಮುಗಿಯಲಿದೆ. ಈಗಾಗಲೇ ಡಿಕೆಶಿ ಅವರ ಎಪಿಸೋಡ್ ನ ಪ್ರೊಮೋ ಕೂಡ ರಿಲೀಸ್ ಆಗಿದ್ದು, ಪ್ರೊಮೋನಲ್ಲೇ ‘ಗ್ರ್ಯಾಂಡ್ ಫಿನಾಲೆ’ ಎಂದು ಹಾಕಲಾಗಿದೆ. ಸಾಧಕರ ಸೀಟಿನಲ್ಲಿ ಕುಳಿತಿರುವ ಡಿ.ಕೆ. ಶಿವಕುಮಾರ್ ತಮ್ಮ ಬದುಕನ್ನು ವೀಕೆಂಡ್ ಟೆಂಟ್ ನಲ್ಲಿ ರಿವೈಂಡ್ ಮಾಡಿದ್ದಾರೆ. ಕೇವಲ ಶಿವಕುಮಾರ್ ಮಾತ್ರವಲ್ಲ, ಅವರ ಪತ್ನಿ, ಮಕ್ಕಳು, ಕುಟುಂಬದ ಸದಸ್ಯರು, ಸ್ನೇಹಿತರು, ರಾಜಕಾರಣಿಗಳು ಹೀಗೆ ಅನೇಕರು ಈ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದು, ಅವರೆಲ್ಲರೂ ಡಿಕೆಶಿ ಬದುಕಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.…
ಸೀಬೆಕಾಯಿ ಅಥವಾ ಪೇರಳೆ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಲ್ಲರಿಗೂ ಚಿರಪರಿಚಿತ. ಕಡಿಮೆ ಬೆಲೆಗೆ ಸಿಗುವ ಈ ಹಣ್ಣಿನಲ್ಲಿ ಆರೋಗ್ಯ ಕಾಪಾಡುವ ಅನೇಕ ಅಂಶಗಳಿವೆ. ಸೀಬೆಕಾಯಿ ಜ್ಯೂಸ್ ಕೂಡ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ಇದು ತಂಪಿನ ಜೊತೆ ಪೋಷಕಾಂಶಗಳನ್ನು ದೇಹಕ್ಕೆ ಪೂರೈಕೆ ಮಾಡುತ್ತದೆ. ಸೀಬೆ ಜ್ಯೂಸ್ ನಮ್ಮ ದೇಹದ ವಿಟಮಿನ್ ಸಿ ಕೊರತೆಯನ್ನು ಹೋಗಲಾಡಿಸುತ್ತದೆ. ಹೀಗಾಗಿ ಅಂಗಡಿಗಳಲ್ಲಿ ಜ್ಯೂಸ್ ಕೊಂಡು ಕುಡಿಯುವ ಬದಲಾಗಿ ಮನೆಯಲ್ಲಿಯೇ ಬೇಗನೇ ಜ್ಯೂಸ್ ತಯಾರಿಸಬಹುದು. ಸೀಬೆ ಜ್ಯೂಸ್ ತಯಾರಿಸುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: ತೊಳೆದು ಸಿಪ್ಪೆ ಬಿಡಿಸಿ ಹೆಚ್ಚಿದ ಸೀಬೆ ಹಣ್ಣು – 1 ಕಪ್ ಸಕ್ಕರೆ- 1 ಟೀ ಚಮಚ ತಣ್ಣನೆಯ ನೀರು – 1/2 ಕಪ್ ಪುದಿನ ಎಲೆಗಳು – 3 ಐಸ್ ಕ್ಯೂಬ್ ಮಾಡುವ ವಿಧಾನ: * ಸೀಬೆಹಣ್ಣುಗಳ ಸಿಪ್ಪೆಯನ್ನು ತೆಗೆದು ಸಣ್ಣದಾಗಿ 1 ಕಪ್ ನಷ್ಟು ಕತ್ತರಿಸಿಕೊಳ್ಳಬೇಕು. * ನಂತರ ಸೀಬೆ ಹಣ್ಣನ್ನು ಮಿಕ್ಸರ್‍ನಲ್ಲಿ ಮಿಕ್ಸಿ ಮಾಡಿ ತಣ್ಣನೆಯ ನೀರು ಮತ್ತು ಸಕ್ಕರೆಯನ್ನು ಹಾಕಬೇಕು.…
ಪಾಟ್ನಾ : ಗಂಗಾ ನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ನಂತರ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅದರೊಂದಿಗೆ ಸೇತುವೆ ವಿನ್ಯಾಸವೇ ದೋಷಪೂರಿತವಾಗಿತ್ತು ಎಂದು ಹೇಳಿದ್ದಾರೆ. ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕುಮಾರ್, ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 2022ರಲ್ಲಿಯೂ ಇದೇ ಸೇತುವೆ ಕುಸಿದು ಬಿದ್ದಿತ್ತು ಎನ್ನುವ ಮಾಹಿತಿಯನ್ನೂ ನೀಡಿದ್ದಾರೆ. ಕುಸಿದ ಸೇತುವೆ ಕಳೆದ ವರ್ಷವೂ ಕುಸಿದಿತ್ತು. ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಸೇತುವೆಯ ನಿರ್ಮಾಣ ಕಾರ್ಯ ಸರಿಯಾಗಿ ಆಗದ ಕಾರಣ ಮತ್ತೆ ಮತ್ತೆ ಕುಸಿಯುತ್ತಿದೆ. ಇಲಾಖೆಯು ಈ ಕುರಿತಾಗಿ ಪರಿಶೀಲನೆ ನಡೆಸಲಿದ್ದು, ಆ ಬಳಿಕ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ. ಘಟನೆಯ ನಂತರ ನಿತೀಶ್ ಕುಮಾರ್ ತಕ್ಷಣವೇ ತನಿಖೆಗೆ ಆದೇಶ ನೀಡಿದ್ದಾರೆ. ಇದಕ್ಕೆ ಯಾರು ಕಾರಣ ಅನ್ನೋದನ್ನು ಗುರುತಿಸುವಂತೆಯೂ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ನಿತೀಶ್ ಕುಮಾರ್ ಅವರು 2014ರಲ್ಲಿ ಸೇತುವೆಯನ್ನು ಉದ್ಘಾಟಿಸಿದ್ದರು.
ಮಂಡ್ಯ :- ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಬಾರ್ ಸಪ್ಲೇಯರ್ ಓರ್ವ ಯುವಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ಪಟ್ಟಣದ ನಂಜಪ್ಪ ಕಲ್ಯಾಣ ಮಂಟಪದ ಬಳಿ ಮಂಗಳವಾರ ಬೆಳಿಗ್ಗೆ ಜರುಗಿದೆ. ರಾಮನಗರ ಜಿಲ್ಲೆ ಕನಕಪುರದ ಹತ್ತಲು ಗ್ರಾಮದ ನಾಗೇಶ್ (35) ಆತ್ಮಹತ್ಯೆಗೆ ಶರಣಾಗಿದ್ದಾನೆ. ಮದ್ದೂರು ಪಟ್ಟಣದ ಪೇಟೆ ಬೀದಿಯಲ್ಲಿರುವ ಶಿಂಷಾ ಬಾರ್ ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಶ್ ಮಂಗಳವಾರ ಬೆಳಿಗ್ಗೆ ನಂಜಪ್ಪ ಕಲ್ಯಾಣ ಮಂಟಪದ ಬಳಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವಿಶ್ವ ಮಾನವ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ಸಂಬಂಧ ರೈಲ್ವೆ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಸಾವು. ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದು ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಾಯಗೊಂಡಿರುವ ಘಟನೆ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಹಿಂಭಾಗದಲ್ಲಿ ಸೋಮವಾರ ಸಂಜೆ ಜರುಗಿದೆ. ಗೆಜ್ಜಲಗೆರೆಯ ಲೇಟ್…
ಧಾರವಾಡ: ಕಾರ್ಮಿಕ ಖಾತೆ ಸಚಿವ ಸಂತೋಷ್ ಲಾಡ್ ಅವರು ದೀಪಕ್ ಚಿಂಚೋರೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ವತಿಯಿಂದ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಿಸುವಂತೆ ಮನವಿಯನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಚಿವ ಸಂತೋಷ ಲಾಡ್ ಧನಾತ್ಮಕವಾಗಿ ಸ್ಪಂದಿಸಿ ತಕ್ಷಣವೇ ಸಭೆಯನ್ನು ಕರೆದು ಸಂಪೂರ್ಣವಾಗಿ ಮಾಹಿತಿಯನ್ನು ಪಡೆದು ಸರ್ಕಾರ ಮಟ್ಟದಲ್ಲಿ ಆದಷ್ಟು ಬೇಗ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಈ ವೇಳೆ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ಪದಾಧಿಕಾರಿಗಳಿಗೆ ತಿಳಿಸಿದರು. ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಕ್ಕಾಗಿ ಸತತ ಪ್ರಯತ್ನ ಮಾಡುತ್ತಿರುವ ದೀಪಕ್ ಚಿಂಚೋರೆಯವರು ಮಾತನಾಡಿ ಪ್ರತ್ಯೇಕ ಪಾಲಿಕೆ ಮಾಡಿಸುವುದು ತುಂಬಾ ಮುಖ್ಯವಾಗಿದ್ದು, ಆದಷ್ಟು ಬೇಗ ಎಲ್ಲ ಹಿರಿಯ ಸಚಿವರನ್ನು ಭೇಟಿಯಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು. ನಿಯೋಗದಲ್ಲಿ ವೆಂಕಟೇಶ್ ಮಚಕನೂರ್, ರವಿಕುಮಾರ್ ಮಾಳಿಗೇರ, ಶಂಕರ್ ನೀರಾವರಿ, ವಸಂತ ಅರ್ಕಾಚಾರ, ನಾಗೇಶ ಕಟಕೊಳ, ಸತೀಶ್ ನಾಯ್ಕರ್, ಭಿಮಶೆನ್ ಕಾಗಿ,…
ಬೆಂಗಳೂರು: ದಲಿತ ಮತ್ತು ಹಿಂದುಳಿದ ಜಾತಿ ಸಮುದಾಯಗಳ ಸ್ವಾಮೀಜಿಗಳ ನಿಯೋಗ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರರನ್ನು ಭೇಟಿ ಮಾಡಿದ್ದರು. ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣದಲ್ಲಿ ಭೇಟಿಯಾಗಿ ಸನ್ಮಾನಿಸಿ ಅಭಿನಂದಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿ ಸಿದ್ದರಾಮಯ್ಯನವರು ಮುಖ್ಉಮಂತ್ರಿಯಾದ ಹಿನ್ನೆಲೆಯಲ್ಲಿ ಭೇಟಿಯಾಗಿ ಅಭಿನಂದಿಸಿದರು.
ಬೆಂಗಳೂರು: ಆರಂಭದಲ್ಲಿಯೇ ಅಧಿಕಾರದ ಮದದಿಂದ ಜನ ಕೊಟ್ಟ ಅಧಿಕಾರ ವಿರೋಧಿಗಳ ದಮನಕ್ಕಾಗಿ ಇದೆ ಎಂದು ತಾವು ಭಾವಿಸಿದ್ದರೆ ಖಂಡಿತವಾಗಿಯೂ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಟ್ವೀಟ್ ಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಅವರು, ಕೇಂದ್ರದಲ್ಲಿ ಇಷ್ಟು ದಿನ ಅಪರಾಧಗಳನ್ನು ಮಾಡಿ ರಾಜಕೀಯ ರಕ್ಷಣೆಯನ್ನು ಯುಪಿಎ ಕಾಲದಲ್ಲಿ ಪಡೆಯುತ್ತಿದ್ದರು. ಈಗ ಕೇಂದ್ರ ಸರ್ಕಾರ ಅಪರಾಧ ಮಾಡಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡಿದೆ. ಇವೆಲ್ಲವೂ ಕೂಡ ನ್ಯಾಯಾಂಗದ ಪರಿಶೀಲನೆಯಲ್ಲಿ ನಡೆಯುತ್ತಿದೆ. Jaggesh Tweet: ಸಚಿವರ ಜೈಲಿಗೆ ಹಾಕುತ್ತೇವೆ ಹೇಳಿಕೆಗೆ ನಟ ಜಗ್ಗೇಶ್ ಕಿಡಿ: ಮಾನ್ಯರೇ ಕಾನೂನು ನಿಮ್ಮ ಜೇಬಲ್ಲಿ ಇದೆಯೇ? ಇಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಹದಿನೈದುಬ ದಿನ ಕಳೆದಿಲ್ಲ ಬರಿ ಮಾತನಾಡಿದರೆ ಜೈಲಿಗೆ ಹಾಕುತ್ತೇವೆ ಎಂದು ಮಂತ್ರಿಗಳ ಬಾಯಲ್ಲಿ ಬರುತ್ತಿರುವುದು. ವಿರೋಧಿಗಳನ್ನು ನಿಮ್ಮ ಅಧಿಕಾರ ಬಲದಿಂದ ದಮನ ಮಾಡುವ ತಂತ್ರ 1975 ರ ಎಮರ್ಜನ್ಸಿಯನ್ನು ನೆನಪಿಸುತ್ತದೆ ಎಂದು…
ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಎಂಬಿ ಪಾಟೀಲ್ ಹೇಳಿಕೆಗೆ ನಟ ಜಗ್ಗೇಶ್ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಸೂಲಿಬೆಲಿ ಅವರು ಯಾವ ಅಧಿಕಾರದ ಹಿಂದೆ ಹೋಗದೇ ಸಾಂಸ್ಕೃತಿಕ, ತತ್ವ, ವಿಚಾರ, ಕೆರೆ-ಕಟ್ಟೆ ಪುನರುಜ್ಜೀವನ, ಪ್ರವಚನ ಮಾಡುವ ಸಾತ್ವಿಕ ಚಿಂತಕ ಅವರನ್ನು ಜೈಲಿಗೆ ಹಾಕುವೆ ಎಂದಿದ್ದಾರೆ. ಗೆದ್ದು ತಿಂಗಳಿಗೇ ಈ ಮಾತು!. ಮಾನ್ಯರೇ ಕಾನೂನು ನಿಮ್ಮ ಜೇಬಲ್ಲಿ ಇದೆಯೇ? ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ ಅವರ ಬೆನ್ನಿಗೆ ಎಂದು ಸೂಲಿಬೆಲಿ ಪರ ಬ್ಯಾಟ್ ಬೀಸಿದ್ದಾರೆ. ಇನ್ನೂ ಜಗ್ಗೇಶ್ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಜಾಗ ಮಾಡಿಕೊಟ್ಟಿದೆ. ಕೆಲವರು ಜಗ್ಗೇಶ್ ಪರವಾಗಿ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.