ಬೆಂಗಳೂರು: ಅನಾಥಶ್ರಮದಲ್ಲಿ ಬೆಳೆದವಳ ಮೆಚ್ಚಿ ಮದುವೆಯಾಗಿದ್ದ.ಸುಖವಾಗಿ ಸಂಸಾರ ನಡೆಸಲು ಶುರುಮಾಡಿದ್ದ ಇಬ್ಬರು ಬಡತನದ ನಡುವೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರೊದ್ರಲ್ಲಿ ಖುಷಿಕಂಡ ಬದುಕು ಕಟ್ಟಿಕೊಂಡಿದ್ರು.. ಮದುವೆಯಾಗಿ 12 ವರ್ಷ ಇಬ್ಬರು ಮಕ್ಕಳ ದ ಮೇಲೆ ಪತಿಗೆ ಪತ್ನಿ ನಡತೇ ಮೇಲೆ ಅನುಮಾನ ಮೂಡಿದ ಅನೈತಿಕ ಸಂಬಂಧದ ಭೂತ ಹೊಕ್ಕಿತ್ತು.ಆ ಸಂಶಯಕ್ಕೆ ಪುಷ್ಟಿ ಕೊಡುವಂತೆ ಆಕೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ಲು.ಕೋಪದ ಕೈಗೆ ಬುದ್ದಿ ಕೊಟ್ಟ ಗಂಡ ಮಾಡಿದ್ದಾದ್ರೂ ಏನು ಅನ್ನೋದನ್ನ ತೋರಿಸ್ತಿವಿ ನೋಡಿ.. ಈಕೆ ನಾಗರತ್ನ ಹಾಗೂ ಈತ ಅಯ್ಯಪ್ಪ.. ಮೂಲತಃ ಮೈಸೂರು ಮೂಲದ ಈ ಜೊಡಿ ಹಲವು ವರ್ಷಗಳಿಂದ ಬೆಂಗಳೂರಿನ ಬಸವೇಶ್ವರನಗರದ ಮಂಜುನಾಥ ನಗರದ ಮನೆಯೊಂದಕ್ಕೆ ಬಾಡಿಗೆಗೆ ಬಂದ ದಂಪತಿ ನಡುವೆ ಜಗಳ ನಡೆಯುತಿತ್ತು.. ಏರಿಯಾದ ಜನ ಇವರದ್ದು ಮಾಮೂಲಿ ಅನ್ನೊ ಮಟ್ಟಿಗೆ ಕಿತ್ತಾಡುತಿದ್ರು.. ಆದ್ರೆ ಮೊನ್ನೆ ನಡೆದ ಆ ಜಗಳ ಇಡಿ ಏರಿಯಾವನ್ನೇ ಈಗ ಬೆಚ್ಚಿ ಬೀಳಿಸಿದೆ.. ಕಾರಣ ಪತಿಯ ಕೋಪಕ್ಕೆ ಸಿಕ್ಕಿಬಿದ್ದ ನಾಗರತ್ನ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಹೌದು, ಹೀಗೆ 12…
Author: Prajatv Kannada
ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಬೇಕಾದ ಸರ್ವ ಪಕ್ಷಗಳ ಸಭೆಗೆ ಬಿಜೆಪಿ ಶಾಸಕರು ಬಹಿಷ್ಕಾರ ಹಾಕಿದ್ದಾರೆ. ಆದರೆ 11 ಗಂಟೆಗೆ ಶುರುವಾಗಬೇಕಾದ ಸಭೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಒಂದು ಗಂಟೆ ತಡವಾಗಿ ಆಗಮಿಸಿದರು. ಇದರಿಂದ ಅಸಮಾಧಾನಗೊಂಡ ಮಾಜಿ ಸಚಿವರು ಹಾಗೂ ಶಾಸಕರು ಡಿಸಿಎಂ ನಡವಳಿಕೆ ಸಿಟ್ಟಾಗಿ ಸಭೆ ಆರಂಭಕ್ಕೂ ಮೊದಲೇ ಹೊರನಡೆದರು. ಸಭೆ ವಿಳಂಬ ಕಾರಣಕ್ಕಾಗಿ ಸಭೆ ಆರಂಭಕ್ಕೂ ಮೊದಲು ಹೊರ ನಡೆದ ಬಿಜೆಪಿ ಶಾಸಕರ ಮನವೊಲಿಕೆ ಮಾಡಲು ಸಚಿವ ಜಮೀರ್ ಅಹ್ಮದ್ ಖಾನ್ ಯತ್ನಿಸಿದರು. ವಿಧಾನಸೌಧ ಕಾರಿಡಾರ್‌ನಲ್ಲಿ ಏ ಸೋಮಣ್ಣ, ಏ ಮುನಿ ಬಾ, ಬಾ ಎಂದು ಕರೆದುಕೊಂಡು ಅವರ ಹಿಂದೆಯೇ ಹೋಗಿ ನಿಂತುಕೊಳ್ಳುವಂತೆ ಕರೆದರು. ಆದರೆ ಶಾಸಕರು ಹೊರ ನಡೆದರು. ಸಭೆಯಿಂದ ಹೊರ ನಡೆಯುತ್ತಿದ್ದ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಭೆಗೆ ಆಗಮಿಸಿದರು. ಬೆಂಗಳೂರು ಸಮಗ್ರ ಅಭಿವೃದ್ಧಿ ಸಂಬಂಧ ಸಮಾಲೋಚನೆ ನಡೆಸಲು ಡಿಸಿಎಂ ಡಿ ಕೆ ಶಿವಕುಮಾರ್…
ಬೆಂಗಳೂರು: ಕಾಂಗ್ರೆಸ್ ನವರು ಮೊದಲು ಏನು ಹೇಳುತ್ತಾರೋ ನಂತರ ಅದರ ವಿರುದ್ಧವಾಗಿ ಮಾಡ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್ ರವರು, ಕಳ್ಳರಿಗೆ ಕಳ್ಳ, ಅಲ್ಲೇ ಕದಿಯೋದು ಇನ್ನೊಬ್ರಿಗೆ ಕೊಡೋದು ಕಾಂಗ್ರೆಸ್ ಕೆಲಸ. ಎಲ್ಲೆಲ್ಲಿ ಬೆಲೆ ಏರಿಕೆ ಮಾಡಬಹುದೋ ಅಲ್ಲಲ್ಲಿ ಏರಿಕೆ ಮಾಡ್ತಾರೆ ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಮೋಸಗಾರ ಪಕ್ಷ. ಉಚಿತ ವಿದ್ಯುತ್ ಎಂದು ಈಗ ಸರಾಸರಿ ಬಳಕೆಯಷ್ಟೇ ಫ್ರೀ ಅಂತಿದ್ದಾರೆ. ದೇಶದ ಮಟ್ಟದಲ್ಲಿ ರಾಜ್ಯ ಯಾವ ಮಟ್ಟಕ್ಕೆ ಹೋಗುತ್ತೆ ನೋಡಿ ಎಂದು ಗುಡುಗಿದರು.
ಬೆಂಗಳೂರು: ಬಿಜೆಪಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರದ್ದು ಒಡೆದು ಆಳುವ ಸಂಸ್ಕೃತಿ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಬೆಂಗಳೂರಿನಲ್ಲಿ ತಿರುಗೇಟು ನೀಡಿರುವ ಡಿ.ಕೆ.ಸುರೇಶ್, ಪ್ರತಾಪ್ ಸಿಂಹ ಒಡೆದು ಆಳುವ ಸಂಸ್ಕೃತಿ ಇಟ್ಟುಕೊಂಡು ಮನೆಹಾಳು ಮಾಡುತ್ತಿದ್ದಾರೆ. ಬಿಜೆಪಿ ನಾಯಕರದ್ದು ಒಡೆದು ಆಳುವ ಸಂಸ್ಕೃತಿ ಎಂದು ಕಿಡಿಕಾರಿದ್ದಾರೆ. ಪ್ರತಾಪ್ ಸಿಂಹ ಮುಸ್ಲಿಂ ರನ್ನು ವಿರೋಧಿಸುತ್ತಿ ದ್ದರು. ಈಗ ಯಾಕೆ ಮುಸ್ಲಿಂ ರ ಮೇಲೆ ಅವರಿಗೆ ಪ್ರೀತಿ? ಅವರ ತತ್ವ ಸಿದ್ಧಾಂತದಿಂದ ಅವರು ಆಚೆ ಬರುವುದು ಬೇಡ. ಕಾಂಗ್ರೆಸ್ ಪಕ್ಷ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷ. ನಾವು ಏನು ಗ್ಯಾರಂಟಿ ಕೊಟ್ಟಿದ್ದೇವೆ ಅದನ್ನು ಅನುಷ್ಠಾನಕ್ಕೆ ತರುತ್ತೇವೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು: ಪ್ರಭಾವಿ ಅಪಾರ್ಟ್ ಮೆಂಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ, ಅನುಷ್ಠಾನಕ್ಕೆ ತಂದ ಎಲ್ಲ ಅಧಿಕಾರಿಗಳು, ಇಂಜಿನಿಯರ್ ಗಳನ್ನು ಇವತ್ತು ಸಂಜೆ ಒಳಗೆ ಸೇವೆಯಿಂದ ಅಮಾನತು ಮಾಡುವಂತೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದರು. ಈ ಕೆರೆ ಮಧ್ಯೆ ರಸ್ತೆ ನಿರ್ಮಾಣ ಮಾಡುವ ಐಡಿಯಾ ಕೊಟ್ಟವರು ಯಾರು? ಯೋಜನೆ ರೂಪಿಸಿದವರು ಯಾರು? ಅನುಷ್ಠಾನಕ್ಕೆ ತಂದವರು ಯಾರು? ಯಾಕಾಗಿ ಇದನ್ನು ಮಾಡಿದಿರಿ? ಯಾರಿಗೆ ಅನುಕೂಲ ಮಾಡಿಕೊಡಲು ಮಾಡಿದಿರಿ? ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದೀರಿ ಎಂದು ಶಿವಕುಮಾರ್ ಅವರು ಸಭೆಯಲ್ಲಿ ಪ್ರಶ್ನಿಸಿದರು. ಅಧಿಕಾರಿಗಳು ಇದಕ್ಕೆ ಉತ್ತರಿಸಲು ತಡಬಡಾಯಿಸಿದರು. ತಕ್ಷಣವೇ ಉಪಮುಖ್ಯಮಂತ್ರಿಗಳು ಹೊಸಕೆರೆಹಳ್ಳಿ ಕೆರೆ ಭಾಗ ಮಾಡಿ ರಸ್ತೆ ನಿರ್ಮಾಣ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚನೆ ನೀಡಿದರು.
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಹೇಳಿದ್ದ ಗ್ಯಾರಂಟಿ ಒಂದು ಈಗ ಜನರಿಗೆ ಹೇಳುವುದೊಂದು ಆಗಿದೆ. ಅದೇನೆಂದರೆ ವಿದ್ಯುತ್ ದರ ಏರಿಕೆ ಬಗ್ಗೆ ಆಕ್ರೋಶ ಹೊರಹಾಕಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಈ ಹಿಂದೆಯೂ ಕಾಂಗ್ರೆಸ್ನವರು ಬೆಸ್ಕಾಂ ಮೇಲೆ ದೊಡ್ಡ ಹೊರೆ ಹಾಕಿದ್ದರು. ಒಟ್ಟು ಬಿಲ್ನಲ್ಲಿ 50 ಪರ್ಸೆಮಟ್ ಬಿಲ್ ಸರ್ಕಾರದಿಂದ ಬರುತ್ತದೆ. ಹಳೇ ಬಾಕಿ ಅಂತಾ ಪುಕ್ಕಟೆ ಹೊರೆಯನ್ನು ಜನರ ಮೇಲೆ ಹಾಕಿದ್ದರು ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದರು.
ಬೆಂಗಳೂರು: ಎಷ್ಟು ವಿದ್ಯುತ್ ಬಳಸುತ್ತಿದ್ದಿರೋ ಅಷ್ಟೇ ಬಳಸಬೇಕು. ಹೆಚ್ಚು ವಿದ್ಯುತ್ ಬಳಸಿದರೆ ದುಂದು ವೆಚ್ಚ ಆಗುತ್ತೆ. ನಾವೂ ಬದುಕಬೇಕು, ಸಮಾಜದಲ್ಲಿರೋರೂ ಬದುಕಬೇಕು. ಹಾಗಾಗಿ ಕೆಲವು ಮಿತಿ, ನಿಬಂಧಗಳನ್ನು ಹಾಕಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ಮಾತನಾಡುತ್ತಾ ಫ್ರೀ ವಿದ್ಯುತ್ ವಾರ್ಷಿಕ ಸರಾಸರಿ ಲೆಕ್ಕಕ್ಕೆ ಬಿಜೆಪಿ ಟೀಕೆ ಸಂಬಂಧ ಪ್ರತಿಕ್ರಿಯಿಸಿ ವಾರ್ಷಿಕ ಸರಾಸರಿ ಲೆಕ್ಕ ಸಮರ್ಥಿಸಿಕೊಂಡರು. ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ವರ್ಷದಲ್ಲಿ ಬಳಸಿದ ವಿದ್ಯುತ್ ನ ಸರಾಸರಿ ಮೇಲೆ ನಾವು ಚಾರ್ಜ್ ಹಾಕ್ತೇವೆ. ಇಲ್ಲ 200 ಯೂನಿಟ್ ಹೇಳಿದ್ದೀರಿ ಅಷ್ಟೇ ಕೊಡಿ ಅಂತಿದ್ದಾರೆ ಎಂದರು. ಎಷ್ಟು ವಿದ್ಯುತ್ ಬಳಸ್ತಿದಾರೋ ಅಷ್ಟೇ ಬಳಸಬೇಕು. ಹೆಚ್ಚು ಬಳಸಿದರೆ ದುಂದು ವೆಚ್ಚ ಆಗುತ್ತೆ. ಮನುಷ್ಯನಿಗೆ ವಿವೇಕ ಇರಬೇಕು. ನಾವೂ ಬದುಕಬೇಕು, ಸಮಾಜದಲ್ಲಿರೋರೂ ಬದುಕಬೇಕು. ಹಾಗಾಗಿ ಕೆಲವು ಮಿತಿಗಳನ್ನು ಹಾಕಬೇಕಾಗುತ್ತದೆ ಎಂದು ಸರಾಸರಿ ವಿದ್ಯುತ್ ಮೇಲಿನ ಉಚಿತ ವಿದ್ಯುತ್ ಸಮರ್ಥಿಸಿಕೊಳ್ಳುವ ಮೂಲಕ ಬಿಜೆಪಿ ನಾಯಕರಿಗೆ ಕೌಂಟರ್ ಕೊಟ್ಟರು.
ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ ಅವರನ್ನು ಜೈಲಿಗೆ ಕಳುಹಿಸುವುದಾಗಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದರು. ಈ ಹೇಳಿಕೆಗೆ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು ಹಿಟ್ಲರ್ ಸರ್ಕಾರ. ಇಂತಹ ಬೆದರಿಕೆಗಳು ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಮಾನ್ಯ. ಆದ್ರೆ ನಾವು ನ್ಯಾಯಾಲಯದ ಒಳಗೆ ಹೋರಾಡುತ್ತೇವೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಅಧಿಕಾರ ಸ್ವೀಕರಿಸಿದ ಹದಿನೈದು ದಿನಗಳೊಳಗೆ, ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಈ ಬಹಿರಂಗ ಬೆದರಿಕೆಗಳು ಸಿದ್ದರಾಮಯ್ಯ ಸರ್ಕಾರದ ಸಾಮಾನ್ಯ ಲಕ್ಷಣವಾಗಿದೆ ಎಂದು ರಾಷ್ಟ್ರೀಯ ಬಿಜೆಪಿ ಯುವ ಘಟಕದ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ ಎಂಬಿ ಪಾಟೀಲರ ಹೇಳಿಕೆಗೆ ಕಿಡಿಕಾರಿದ್ದಾರೆ.
ಬೆಂಗಳೂರು: ಬೆಂಗಳೂರು ಶಾಸಕರು, ಸಂಸದರು, ಪರಿಷತ್ ಸದಸ್ಯರ ಜೊತೆ ಡಿಸಿಎಂ ಡಿ.ಕೆ.ಶಿವಕಲುಮಾರ್ ಸಭೆ ನಡೆಸುತ್ತಿದ್ದು ಈ ವೇಳೆ ‘ಶಾಂತಿಯುತ ಕರ್ನಾಟಕ’ ಹೆಲ್ಪ್ಲೈನ್ ಆರಂಭಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಎಂ.ಬಿ.ಪಾಟೀಲ್ ಸಲಹೆ ನೀಡಿದ್ದಾರೆ. ಯಾವುದೇ ದ್ವೇಷ ಹರಡುವುದನ್ನು ತಡೆಯಲು ಹೆಲ್ಪ್ಲೈನ್ ಆರಂಭಿಸಿ, ಅಭಿವೃದ್ಧಿ, ಬ್ರ್ಯಾಂಡ್ ಕರ್ನಾಟಕ ಕಾಪಾಡಲು ಸಹಾಯವಾಣಿ ಆರಂಭಿಸಿ ಎಂದು ಸಚಿವರಾದ ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಡಿಕೆ ಶಿವಕುಮಾರ್ಗೆ ಮನವಿ ಮಾಡಿದರು.
ಭುವನೇಶ್ವರ: ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿಕೊಂಡ ಬಾಲಸೋರ್‌ನಲ್ಲಿ ನಡೆದ ರೈಲುಗಳ ಅಪಘಾತವಾಗಿ (Odisha Train Tragedy) ಇದೀಗ ಹಳಿಗಳನ್ನು ದುರಸ್ತಿ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ. ಅಪಘಾತವಾಗಿ 51 ಗಂಟೆಗಳಲ್ಲಿ ಮೊದಲ ರೈಲು ಹಳಿಯಲ್ಲಿ ಸಂಚರಿಸಿದ್ದು, ಇದೀಗ ಕಾರ್ಯಾಚರಣೆ ಪುನರಾರಂಭವಾಗಿದೆ. ಒಡಿಶಾದ (Odisha) ಬಾಲಸೋರ್‌ನಲ್ಲಿ (Balasore) ನಡೆದ ತ್ರಿವಳಿ ರೈಲು ಅಪಘಾತದಲ್ಲಿ (Train Accident) 275 ಜನರು ಸಾವನ್ನಪ್ಪಿದ್ದರು ಹಾಗೂ 1,100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಘಟನೆ ಬಳಿಕ ದುರಸ್ತಿ ಮಾಡಲಾದ ಹಳಿಗಳ ಮೂಲಕ ಮೊದಲ ರೈಲು ಸಂಚರಿಸಿದ ಸಂದರ್ಭ ರೈಲ್ವೆ ಸಚಿವರು ಖುದ್ದಾಗಿ ಸ್ಥಳದಲ್ಲಿ ಹಾಜರಿದ್ದರು. ಎರಡೂ ಹಳಿಗಳನ್ನು ದುರಸ್ತಿ ಮಾಡಲಾಗಿದೆ. 51 ಗಂಟೆಗಳಲ್ಲಿ ರೈಲುಗಳ ಸಂಚಾರವನ್ನು ಸಾಮಾನ್ಯಗೊಳಿಸಲಾಗಿದೆ. ಈಗಿನಿಂದ ರೈಲುಗಳ ಸಂಚಾರ ಮತ್ತೆ ಪ್ರಾರಂಭವಾಗುತ್ತದೆ. ಟ್ರ್ಯಾಕ್ ಲೈನ್ ಈಗ ರೈಲಿಗೆ ಸರಿಹೊಂದಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಘಟನೆಯೇನು? 3 ರೈಲುಗಳಾದ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಹಾಗೂ…