ಆಂದ್ರಪ್ರದೇಶ: ಭಾರಿ ಮಳೆಯಿಂದ ನಲುಗಿದ ತೆಲುಗು ರಾಜ್ಯಗಳ ವಿವಿಧ ಪ್ರದೇದ ಜನರ ನೆರವಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂದಿದ್ದು, ಎರಡೂ ರಾಜ್ಯಗಳ ನೆರೆ ಪೀಡಿತರಿಗಾಗಿ 1 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಜನ ಸಂಕಷ್ಟದಲ್ಲಿದ್ದಾಗ ಈ ಹಿಂದೆಯೂ ಅಲ್ಲು ಅರ್ಜುನ್ ಜನರ ಸಹಾಯಕ್ಕೆ ನಿಂತಿದ್ದರು. ಈಗ ಅದು ಮತ್ತೆ ಮುಂದುವರೆದಿದೆ. ತಾನು ಜನರನ್ನು ರಂಜಿಸುವುದು ಮಾತ್ರವಲ್ಲ ಜನರ ಸಂಕಷ್ಟಕ್ಕೂ ಮಿಡಿಯುತ್ತಾರೆ ಎಂಬುದನ್ನು ಮತ್ತೊಮ್ಮೆ ಈ ಮೂಲಕ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ʼಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿನ ಕೆಲ ಪ್ರದೇಶದ ಜನ ಜನ ಮಳೆಯಿಂದಾಗಿ ಮನೆ, ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವುದು ನನ್ನ ಮನಸ್ಸಿಗೆ ತೀರ್ವ ನೋವುಂಟು ಮಾಡಿದೆ. ಅವರ ಕಷ್ಟಕ್ಕೆ ನನ್ನ ಕಡೆಯಿಂದ ತಲಾ 1 ಕೋಟಿ ರೂಪಾಯಿಗಳನ್ನು ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೆ. ಆದಷ್ಟು ಬೇಗ ಎಲ್ಲರೂ ಸಂಕಷ್ಟದಿಂದ ಪಾರಾಗುವಂತಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆʼಎಂದು ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
Author: Prajatv Kannada
2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ ಅಳವಡಿಕೆ ಮಾಡುವುದನ್ನು ಕರ್ನಾಟಕ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಈಗಾಗಲೇ ಈ ನಂಬರ್ ಪ್ಲೇಟ್ ಅಳವಡಿಸೋಕೆ ಸಾಕಷ್ಟು ಭಾರಿ ಗಡುವು ಸಹ ನೀಡಲಾಗಿತ್ತು. ಇನ್ನೂ ಸಹ ವಾಹನ ಮಾಲೀಕರು ನಂಬರ್ ಪ್ಲೇಟ್ ಹಾಕಿಸದೇ ಇರುವ ಕಾರಣದಿಂದ ಸೆ.15 ರವರೆಗೂ ಅವಧಿ ನೀಡಿತ್ತು. ಇದೀಗ ಸಾರಿಗೆ ಇಲಾಖೆ ಕೊನೆಯದಾಗಿ ಮತ್ತೊಮ್ಮೆ ಎಚ್ಚರಿಕೆ ನೀಡಿದೆ ಎಂದು ಹೇಳಲಾಗಿದೆ. HSRP ನಂಬರ್ ಪ್ಲೇಟ್ ಅಳವಡಿಕೆಗೆ ಸೆಪ್ಟೆಂಬರ್ 15ರ ವರೆಗೆ ಅವಕಾಶ ನೀಡಲಾಗಿದೆ. ಆದರೆ ಸೆಪ್ಟೆಂಬರ್ 16ರಿಂದ ದುಬಾರಿ ದಂಡ ವಿಧಿಸಲಾಗುತ್ತದೆ. ಈಗಾಗಲೇ ಹಲವು ಬಾರಿ ಗಡುವು ವಿಸ್ತರಣೆ ಮಾಡಲಾಗಿತ್ತು. ಇದು ಕೊನೆಯ ದಿನಾಂಕವಾಗಿದ್ದು, ಆದಷ್ಟು ಶೀಘ್ರವಾಗಿ ವಾಹನ ಸವಾರರು ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಇನ್ನೂ ಕೇವಲ 9 ದಿನಗಳು ಮಾತ್ರ ಕಾಲಾವಕಾಶವಿದ್ದು, ಸೆ.15 ರೊಳಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೇ ಇದ್ದರೇ ದಂಡ ಬೀಳುವ ಸಾದ್ಯತೆಯಿದೆ. ಮೂಲಗಳ ಪ್ರಕಾರ ಈಗಾಗಲೇ…
ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲಾಗುತ್ತಿರುವ ದೌರ್ಜನ್ಯದ ಅಧ್ಯಯನಕ್ಕೆ ಕೇರಳ ಸರ್ಕಾರ ರಚಿಸಿದ್ದ ಹೇಮಾ ಸಮಿತಿ ವರದಿ ಇತ್ತೀಚೆಗೆ ಬಹಿರಂಗಗೊಂಡಿದ್ದು, ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬಿರುಗಾಳೀ ಎಬ್ಬಿಸಿದೆ. ದೊಡ್ಡ ದೊಡ್ಡ ನಿರ್ದೇಶಕ, ನಟ, ನಿರ್ಮಾಪಕರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಮಾಡಲಾಗಿದ್ದು, ಕೆಲವರ ವಿರುದ್ಧ ಎಫ್ಐಆರ್ ಸಹ ದಾಖಲಾಗಿದೆ. ಇದೀಗ ಪರಭಾಷೆ ಚಿತ್ರರಂಗಳಲ್ಲಿಯೂ ಸಹ ಇಂಥಹುದೇ ಒಂದು ಸಮಿತಿಯ ಸ್ಥಾಪನೆ ಆಗಬೇಕೆಂದು ನಟ-ನಟಿಯರು ಒತ್ತಾಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಹ ಕೇರಳ ಮಾದರಿಯಲ್ಲಿ ಸಮಿತಿಯೊಂದರ ರಚನೆ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ನಟ ಚೇತನ್ ಅಹಿಂಸಾ, ಶ್ರುತಿ ಹರಿಹರನ್, ನೀತು ಶೆಟ್ಟಿ, ಇನ್ನೂ ಹಲವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಸಿದ್ದರಾಮಯ್ಯ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ. ಕನ್ನಡದ ಬಳಿಕ ಇದೀಗ ತೆಲುಗು ಚಿತ್ರರಂಗದಲ್ಲಿ ಸಹ ಇಂಥಹುದೇ ಬೇಡಿಕೆಗೆ ಒತ್ತಾಯ ಕೇಳಿ ಬಂದಿದೆ. ತೆಲುಗು ಚಿತ್ರರಂಗದ ಪವರ್ಫುಲ್ ಕಲಾವಿದರ ಸಂಘ ‘ಮಾ’ ಅಧ್ಯಕ್ಷ ಮಂಚು ವಿಷ್ಣು ಹೀಗೊಂದು ಬೇಡಿಕೆಯನ್ನು…
ಶಾಲಿವಾಹನ ಶಕೆ :1946, ಸಂವತ್ತ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಪಕ್ಷ :ಶುಕ್ಲ,ಭಾದ್ರಪದಮಾಸ, ತಿಥಿ: ತೃತೀಯ, ನಕ್ಷತ್ರ: ಹಸ್ತ ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ:03:00 ನಿಂದ 04:30 ತನಕ ಗುಳಿಕ ಕಾಲ:07:30 ನಿಂದ 09:00 ತನಕ ಅಮೃತಕಾಲ: ಇಲ್ಲ ಅಭಿಜಿತ್ ಮುಹುರ್ತ: ಬೆ.11:49 ನಿಂದ ಮ.12:38 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಮುಖ್ಯ ಕಾಗದ ಪತ್ರಗಳು ಕಳ್ಳತನ ಸಂಭವ, ನಿಮ್ಮ ವೃತ್ತಿಗೆ ಕಳಂಕ ಮಾಡಲಿದ್ದಾರೆ, ಪರ್ಯಾಯ ದಾರಿ ಹುಡುಕಿ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ ವಹಿಸಿ, ಸಂಗಾತಿಯ ಅಗಲಿಕೆಯ ಸ್ಮರಣೀಯ ನೆನಪುಗಳು ಕಾಡುವವು,ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಧನಲಾಭವಿದೆ, ಕೆಲವರು ಅಲ್ಲಿಯೇ ನಿವೇಶನ ಖರೀದಿಸುವ ಸಾಧ್ಯತೆ, ಕಳೆದ…
ಗದಗ ನಗರದ ದಾಸರ ಓಣಿಯ ಜನನಿಬಿಡ ಪ್ರದೇಶದಲ್ಲಿ ಅಕ್ರಮ ಪಟಾಕಿ ಸಂಗ್ರಹ ಅಡ್ಡೆ ಮೇಲೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಪಟಾಕಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಗದಗ ಶಹರ ಪೊಲೀಸ್ ಠಾಣೆ ಸಿಪಿಐ ಡಿ ಬಿ ಪಾಟೀಲ್ ನೇತೃತ್ವದಲ್ಲಿ ರಾಮಚಂದ್ರಸಾ ಸಿದ್ಲಿಂಗ್ ಎಂಬುವರ ಮನೆ ಮೇಲೆ ದಾಳಿ ಮಾಡಿದ್ದು, ಅಕ್ರಮವಾಗಿ ದಾಸ್ತಾನು ಮಾಡಿದ್ದ ಲಕ್ಷಾಂತರ ಮೌಲ್ಯದ ಪಟಾಕಿ ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿ ದಾಳಿ ಮಾಡಿ ವಶಪಡಿಸಿಕೊಂಡ ಪೊಲೀಸರು, ಈ ಮನೆಯಲ್ಲಿ ಕಳೆದ ಹತ್ತು ಹದಿನೈದು ವರ್ಷಗಳಿಂದ ಸಂಗ್ರಹದ ಆರೋಪ ಮಾಡಿದ್ದಾರೆ. ಪ್ರತಿವರ್ಷ ಗಣೇಶೋತ್ಸವ ಹಾಗೂ ದೀಪಾವಳಿ ಸಂದರ್ಭದಲ್ಲಿ ಆಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಮನಗರ: ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರ ಸಾವನ್ನಪ್ಪಿ, ಓರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಬಳಿಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆಯ ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಗುರುಮೂರ್ತಿ (39), ಶೇಕ್ ಅಫೀಸ್ (45), ವೆಂಕಟೇಶ್ (50) ಮೃತ ದುರ್ಧೈವಿಗಳಾಗಿದ್ದು, ರಾಮನಗರದಿಂದ ಬಿಡದಿ ಕಡೆಗೆ ಗಾರೆ ಕೆಲಸಕ್ಕೆ ಒಂದೇ ಬೈಕ್ ನಲ್ಲಿ ನಾಲ್ವರು ಪ್ರಯಾಣ ಮಾಡ್ತಿದ್ರು. ಈ ವೇಳೆ ಲಾರಿ ಅಡ್ಡ ಬಂದ ಹಿನ್ನಲೆ ಬೈಕ್ ಡಿಕ್ಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಯುವಕನಿಗೆ ಗಂಭೀರಗಾಯ, ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಎಎಸ್ಪಿ ಸುರೇಶ್ ಭೇಟಿ, ಪರಿಶೀಲನೆ ನಡೆಸಿ ರಾಮನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ
ಇಂದು ಎತ್ತಿನಹೊಳೆ ಯೋಜನೆಯ ಮೊದಲ ಹಂತ ಲೋಕಾರ್ಪಣೆ ಯೋಜನೆಯ ಮೊದಲ ಹಂತ ಲೋಕಾರ್ಪಣೆ ಮಾಡಲಿರುವ ಸಿಎಂ ಸಿದ್ದರಾಮಯ್ಯ https://youtu.be/-o4i6jRk038?si=OoeyKeuIe4oaxM6S ದೊಡ್ಡನಗರದ ವಿತರಣಾ ತೊಟ್ಟಿ 3ರಲ್ಲಿ ಚಾಲನೆ ನೀಡುವ ಸಿಎಂ ಈ ವೇಳೆ ಸಿಎಂ ಸಿದ್ದರಾಮಯ್ಯಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಾಥ್ ಮಧ್ಯಾಹ್ನ 12 ಗಂಟೆಗೆ ದೊಡ್ಡನಗರಕ್ಕೆ ಆಗಮಿಸಲಿರುವ ಸಿದ್ದರಾಮಯ್ಯ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡನಗರ ಗ್ರಾಮ ನೀರೆತ್ತುವ ಪಂಪ್ ಹಾಗೂ ಮೋಟಾರುಗಳಿಗೆ ಚಾಲನೆ ನೀಡುವ ಸಿಎಂ ದೊಡ್ಡನಗರದಲ್ಲೇ ನೀರನ್ನೆತ್ತುವ ಏಳು ವಿಯರ್‌ಗಳಿಗೂ ಚಾಲನೆ ಎಳು ಸಚಿವರಿಂದ ಏಳು ವಿಯರ್‌ಗಳಿಗೆ ಚಾಲನೆ ನೀಡಲು ಸಿದ್ಧತೆ ಇಂದು ಬೆಳಗ್ಗೆ 8.30ರಿಂದ ಉದ್ಘಾಟನಾ ಸ್ಥಳದಲ್ಲಿ ಹೋಮ-ಹವನ ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ಉಪಮುಖ್ಯಮಂತ್ರಿ ಡಿಕೆಶಿ ಜಲಸಂಪನ್ಮೂಲ ಇಲಾಖೆ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಸಕಲೇಶಪುರದಲ್ಲೇ ವಾಸ್ತವ್ಯ ಹೂಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ದೊಡ್ಡನಗರ ಕಾರ್ಯಕ್ರಮ ಬಳಿಕ ಹೆಬ್ಬನಹಳ್ಳಿಗೆ ಸಿಎಂ, ಡಿಸಿಎಂ ಭೇಟಿ ಹೆಬ್ಬನಹಳ್ಳಿಯಲ್ಲಿ ಗಂಗಪೂಜೆ ಮಾಡಿ ಬಾಗಿನ ಅರ್ಪಿಸುವ ಸಿಎಂ, ಡಿಸಿಎಂ 7 ವಿಯರ್‌ಗಳ ಮೂಲಕ ಪಂಪ್ ಮಾಡಿದ್ದ ನೀರಿಗೆ…
ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆಯಲ್ಲಿರುವ ಶೆಡ್ಗೆ ಕರೆದುಕೊಂಡು ಹೋಗಲಾಗಿತ್ತು. ಇದೆಲ್ಲ ಪ್ಲ್ಯಾನ್ ಮಾಡಿದ್ದು ದರ್ಶನ್ ಎನ್ನುವ ಆರೋಪ ಇದೆ. ಹಾಗೆ ಮೈಸೂರಿದಾಸಲ್ಲಿ ನಟ ದರ್ಶನ್ ಬಂಧಿಸಿದೇ ರೋಚಕ ಸಂಗತಿ ಹೇಗೆಲ್ಲಾ ಸಿದ್ಧತೆ ಆಗಿತ್ತು ಗೊತ್ತಾ ಇಲ್ಲಿದೆ ನೋಡಿ. ಮೊದಲಿಗೆ ಪೊಲೀಸರಿಗೆ ದಾರಿತಪ್ಪಿಸಿದ್ದ ಹೊಟೇಲ್ ಸಿಬ್ಬಂದಿ ದರ್ಶನ್ ಇದ್ದ ರೂಮ್ ನಂಬರ್ ಹೇಳದೇ ಸತಾಯಿಸಿದ್ದ ಸಿಬ್ಬಂದಿ ನಂತರ ಹೊಟೇಲ್ ನಲ್ಲಿ ಕೆಲಕಾಲ ಕಾದಿದ್ದ ಪೊಲೀಸರು. ಆಗ ದಿಢೀರನೆ ಬಂದಿದ್ದ ಮೂವರು ಬಾಡಿ ಗಾರ್ಡ್ಸ್ಪೊಲೀಸರನ್ನ ಕಂಡು ತರಾತುರಿಯಲ್ಲಿ ಹೋಗುತ್ತಿದ್ದ ಬಾಡಿ ಗಾರ್ಡ್ಸ್ ದರ್ಶನ್ ಕಾರಿನಲ್ಲಿ ಹೊರ ಹೋಗ್ತಿದ್ದ ಬಾಡಿ ಗಾರ್ಡ್ ಗಳು ಅವರನ್ನ ಅಡ್ಡ ಹಾಕಿ ಮೊಬೈಲ್ ಕಿತ್ಕೊಂಡಿದ್ದ ಪೊಲೀಸರು. ದರ್ಶನ್ ರೂಂ ತೋರಿಸುವಂತೆ ಬಾಡಿ ಗಾರ್ಡ್ಸ್ ಗೆ ಗದರಿದ್ದ ಪೊಲೀಸರು ಬಳಿಕ ರೂಮ್ ತೋರಿಸಲು ಕರೆದುಕೊಂಡು ಹೋಗಿದ್ದ ಬಾಡಿ ಗಾರ್ಡ್ಸ್ ಮತ್ತೊಂದು ಕೀ ಬಳಸಿ ದರ್ಶನ್ ಇದ್ದ ರೂಮ್ ಓಪನ್ ಮಾಡಿದ್ದ ಪೊಲೀಸರು. ಈ ವೇಳೆ ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ ನಟ…
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಆಗಿದೆ. ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆಗೂ ಮೊದಲು ಪವಿತ್ರಾ ಗೌಡ ಹಾಗೂ ಇತರರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಜಾಮೀನು ಅರ್ಜಿ ರಿಜೆಕ್ಟ್ ಮಾಡಲಾಗಿತ್ತು. ಇದೀಗ ದೋಷಾರೋಪ ಪಟ್ಟಿ ಸಲ್ಲಿಕೆ ಬೆನ್ನಲ್ಲೇ ದರ್ಶನ್ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಲು ರೆಡಿ ಆಗಿದ್ದಾರೆ. ವಿಜಯಲಕ್ಷ್ಮೀ ಸೆಪ್ಟೆಂಬರ್ 5ರಂದು ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿ ಮಾಡಿದ್ದು ಈ ವೇಳೆ ಅವರು ಬೇಲ್ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ನಿನ್ನೆ (ಸೆಪ್ಟೆಂಬರ್ 5) ವಿಜಯಲಕ್ಷ್ಮೀ ಹಾಗೂ ದರ್ಶನ್ ಸಹೋದರ ದಿನಕರ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಭೇಟಿ ಮಾಡಿದ್ದರು. ಈ ವೇಳೆ ಮಹತ್ವದ ಚರ್ಚೆ ನಡೆಸಿದ್ದಾರೆ. ಮಾತುಕತೆ ವೇಳೆ ಜಾರ್ಜ್ ಶೀಟ್ನಲ್ಲಿರುವ ಅಂಶಗಳ ಬಗ್ಗೆ ದರ್ಶನ್ಗೆ ಮಾಹಿತಿ ನೀಡಿದ್ದು ಇದಕ್ಕೂ ಮೊದಲು ದರ್ಶನ್ ಅವರು ದೂರವಾಣಿ ಮೂಲಕ ವಕೀಲರ ಜೊತೆ ಮಾತನಾಡಿದ್ದರು. ಈ ವೇಳೆ ಜಾಮೀನಿನ…
ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ನನ್ನು ನೋಡಲು ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಈ ವೇಳೆ ಸಹೋದರನ ಜೊತೆ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಇಷ್ಟರ ಮಟ್ಟಿಗೆ ಬರ್ಬರ ಆಗುತ್ತೆ ಎಂದು ಸ್ವಲ್ಪನೂ ಅರ್ಥ ಆಗಲಿಲ್ಲ. ಏನೋ ಮಾಡೋಕೆ ಹೋಗಿ ಏನೋ ಆಯ್ತು. ಏನ್ ಸ್ಟಾರ್ ಗಿರಿ ಇದ್ದರೆ ಏನಾಯ್ತು, ಇದೀಗ ನೋಡು ಎಂದು ದುಃಖ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಇದೇ ವೇಳೆ ಪತ್ನಿ ಹಾಗೂ ಸಹೋದರನ ಬಳಿ ಚಾರ್ಜ್‌ಶೀಟ್ ಹಾಗೂ ಬೇಲ್ ಅರ್ಜಿ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಕೃತ್ಯದ ಪೋಟೋಗಳು ವೈರಲ್ ಆಗಿರುವ ವಿಚಾರಗಳನ್ನೂ ದಿನಕರ್ ತಿಳಿಸಿದ್ದಾರೆ. ಬೇಲ್ ಸಿಗುತ್ತೆ ಧೈರ್ಯವಾಗಿರಿ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಬಳ್ಳಾರಿ ಜೈಲಿನಲ್ಲಿ ದರ್ಶನ್ ಒಂದೇ ವಾರದಲ್ಲಿ ಸೊರಗಿದ್ದಾರೆ. ಮಂಕಾಗಿರುವ ದರ್ಶನ್ ಗಡ್ಡ ಬಿಟ್ಟು ಬಾಡಿದ ಮುಖದೊಂದಿಗೆ ಕಾಣಿಸಿಕೊಂಡಿದ್ದಾರೆ.