ಚಿತ್ರದುರ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಕೇಂದ್ರ ಸಚಿವ ಏ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಕಚೇರಿ ಬಳಿ ಅವರು ಮಾತನಾಡಿದ್ದು ಕಾಂಗ್ರೆಸ್ ನವರಿಗೆ ಅವರ ಮಂತ್ರಿ ಮಂಡಲಕ್ಕೆ ಜನರ ಕಷ್ಟ ಕೇಳುವ ಸಮಯ ಇಲ್ಲ. ಗ್ಯಾರಂಟಿ ಕಾರ್ಡ್ ಗಳನ್ನ ಯಾವ ರೀತಿ ಒದಗಿಸಿ ಅದಕ್ಕೆ ಯಾವ ರೀತಿ ಹಣ ಒದಗಿಸಬೇಕು. ಗ್ಯಾರಂಟಿ ಕಾರ್ಡ್ ಗಳಿಗೆ ಮಾತ್ರ ಸರ್ಕಾರ ರಚನೆ ಮಾಡುತ್ತೇವೆ. ಗ್ಯಾರಂಟಿ ಕಾರ್ಡ್ ಗಳಿಗೆ ಮಾತ್ರ 5 ವರ್ಷ ಸರ್ಕಾರ ನಡೆಸುವ ಚಿಂತನೆಯಲ್ಲಿ ಕಾಂಗ್ರೆಸ್ ನವರು ಮುಳುಗಿದ್ದಾರೆ. ಜನರಿಗೆ ಪ್ರಕೃತಿಯಿಂದಾಗುವ ತೊಂದರೆಗಳಿಗೆ ಸಮಯ ಕೊಡುವ ಪರಿಸ್ಥಿತಿ ಕಾಂಗ್ರೆಸ್ ಗೆ ಇಲ್ಲ. ಸಿದ್ದಾರಾಮಯ್ಯ ಅಥವಾ ಡಿಕೆಶಿ ಅವರ ಹೇಳಿಕೆಗೆ ಧಾಖಲೆಗಳು ಇವೆ. ಮೋದಿಯವರು ಅಧಿಕಾರಕ್ಕೆ ಬಂದಾಗ ಪ್ರತಿ ವ್ಯಕ್ತಿಗೆ 15 ಲಕ್ಷ ಅಕೌಂಟ್ ಗೆ ಹಾಕುವುದಾಗಿ ಎಲ್ಲೂ ಹೇಳಿಲ್ಲ. ಅವರು ಆ ರೀತಿ ಹೇಳಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಆಗುವುದಾಗಿ ನಾರಾಯಣ ಸ್ವಾಮಿ ಅವರು ಹೇಳಿದ್ದಾರೆ. ಇನ್ನೂ…
Author: Prajatv Kannada
ಶಿವಮೊಗ್ಗ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪವಿತ್ರ ವಸ್ತ್ರ ಅಭಿಯಾನದಲ್ಲಿ ಸಾಗರ ತಾಲೂಕು ಹೆಗ್ಗೂಡು ಗ್ರಾಮದ ಚರಕ ಸಂಸ್ಥೆಗೆ ಸರ್ಕಾರದಿಂದ ಬರಬೇಕಿದ್ದ ಹಣಕ್ಕೆ ಲಂಚದ ಬೇಡಿಕೆ ವಿರುದ್ದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಚರಕ ಸಂಸ್ಥೆ ಪ್ರತಿಭಟನೆ ನಡೆಸಿದೆ. ಚರಕ ಸಂಸ್ಥೆಯ ಮುಖ್ಯಸ್ಥರು ಹಾಗೂ ಸ್ವದೇಶಿ ಚಳುವಳಿ ಹೋರಾಟಗಾರರಾದ ಪ್ರಸನ್ನ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪವಿತ್ರ ವಸ್ತ್ರ ಯೋಜನೆಯಡಿ ರಾಜ್ಯ ಸರ್ಕಾರ ನಮಗೆ ನೀಡಿದ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸಿದ್ದೆವೆ. ಈ ಯೋಜನೆಯಡಿ ನಮಗೆ ಕಳೆದ 8 ವರ್ಷಗಳಿಂದ ನಮಗೆ ಯಾವುದೇ ಅನುದಾನ ಬಂದಿಲ್ಲ. ಈ ಹಣಕ್ಕಾಗಿ ನಾವು ಕೈ ಮಗ್ಗದ ಕಚೇರಿ ಅಲೆದು , ಮನವಿ ಸಲ್ಲಿಸಿ, ಪ್ರಸ್ತಾಪನೆ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಹಣಕ್ಕೆ ಇಲಾಖೆಯ ಕಚೇರಿ ಅಲೆದು ಅಲೆದು ಸುಸ್ತಾಗಿದೆ. ಆದರೂ ನಮ್ಮ ಹಣ ನಮಗೆ ಸಿಗಲಿಲ್ಲ. ಅಧಿಕಾರಿಗಳಿಗೆ ಶೇ 40 ರಷ್ಟು ಹಣ ನೀಡದ ಕಾರಣ ನಮಗೆ ನಮ್ಮ ಹಣ ಬಿಡುಗಡೆಯಾಗಿಲ್ಲ. ಜಿಲ್ಲಾ ಖಜಾನೆಯಿಂದ ಹಣ ಬಿಡುಗಡೆ…
ಬೆಂಗಳೂರು: ಸಿಎಸ್ ವಂದಿತಾ ಶರ್ಮಾ ಅವರು ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾದರು. ಒಡಿಶಾದ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಸ್ ವಂದಿತಾ ಶರ್ಮಾ ಅವರು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಸಿದ್ದರಾಮಯ್ಯ ಭೇಟಿಯಾಗಿ ಕರ್ನಾಟಕದ ಎಷ್ಟು ಪ್ರಯಾಣಿಕರು ದುರಂತ ನಡೆದ ರೈಲಿನಲ್ಲಿದ್ದರು. ರೈಲು ದುರಂತದಿಂದ ನಮ್ಮ ರಾಜ್ಯದವರಿಗೆ ಏನಾದರು ಆಗಿದೆಯಾ? ಎಂಬ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಇನ್ನು ಈ ಸಂಬಂಧ ವರದಿ ಸಲ್ಲಿಸುವಂತೆ ಸಿಎಸ್ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇನ್ನು ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅವರಿಗೆ ಅಗತ್ಯ ನೆರವನ್ನು ಒದಗಿಸಲು ಸಚಿವ ಸಂತೋಷ್ ಲಾಡ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಯೋಜಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಅಥವಾ ಇತರೆ ಯಾವುದೇ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರ ರಕ್ಷಣೆಗೆ ಸಂಪೂರ್ಣ ನೆರವು ನೀಡಲಾಗುವುದು. ‘ಪ್ರತಿಯೊಬ್ಬ ಕನ್ನಡಿಗನನ್ನು ಸುರಕ್ಷಿತವಾಗಿ ನಾಡಿಗೆ…
ಬೆಂಗಳೂರು: ರಾಮನಗರ ಮತ್ತು ಬಂಡೀಪುರದಲ್ಲಿ ಆನೆ ದಾಳಿಯಿಂದ 2 ಮಂದಿ ಸಾವನ್ನಪ್ಪಿರುವುದಕ್ಕೆ ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ ಕಾಡುಪ್ರಾಣಿಗಳ ದಾಳಿಯಿಂದ ಸಾವಿಗೀಡಾಗಬಾರದು. ಇನ್ನು ಮುಂದೆ ಪ್ರಾಣಿಗಳ ಮತ್ತು ಮಾನವನ ಸಂಘರ್ಷದಿಂದ ಹೆಚ್ಚಿನ ಜೀವ ಹಾನಿ ಆಗದ ರೀತಿಯಲ್ಲಿ ಕ್ರಮ ವಹಿಸಲು ಮತ್ತು ನಾಡಿಗೆ ದಾಳಿ ಇಟ್ಟಿರುವ ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಮೃತರಾದ ವೀರಭದ್ರ ಮತ್ತು ರವಿಯವರ ಕುಟುಂಬಕ್ಕೆ ನಿಯಮಾನುಸಾರ 15 ಲಕ್ಷ ರೂ. ಪರಿಹಾರವನ್ನು ಒದಗಿಸಲಾಗುವುದು. ಯಾವುದೇ ಪರಿಹಾರ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ, ಆದರೆ ಅವರ ಕುಟುಂಬಕ್ಕೆ ಆಸರೆ, ಆಧಾರವಾಗುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ. ಮೃತರಿಬ್ಬರ ಕುಟುಂಬಕ್ಕೆ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.
ಬೆಂಗಳೂರು: ಬಾಡಿಗೆ ಮನೆಯಲ್ಲಿರುವವರಿಗೂ ಗೃಹಜ್ಯೋತಿ ಭಾಗ್ಯ ದೊರೆಯಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಮನೆ ಹಾಗೂ ವಿದ್ಯುತ್ ಸಂಪರ್ಕದ ಮೀಟರ್‍ನ ಸಂಖ್ಯೆ ಯಾರ ಹೆಸರಿನಲ್ಲೇ ಇರಲಿ ವಾಸವಿರುವ ಬಾಡಿಗೆದಾರರು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು. ನಾನು ವಾಸವಿರುವ ಮನೆ ನನ್ನ ಪತ್ನಿಯ ಹೆಸರಿನಲ್ಲಿದೆ. ನಾನು ಬಾಡಿಗೆಯಲ್ಲಿದ್ದೇನೆ ಎಂಬ ಕಾರಣಕ್ಕೆ ಸೌಲಭ್ಯ ದೊರೆಯಬಾರದು ಎಂಬುದು ಸರಿಯಲ್ಲ. 200 ಯೂನಿಟ್‍ವರೆಗೆ ವಿದ್ಯುತ್ ಬಳಕೆ ಮಾಡುವ ಎಲ್ಲರಿಗೂ ಇದರ ಪ್ರಯೋಜನ ತಲುಪಲಿದೆ ಎಂದರು. ಕೆಲವರು ಸ್ವಯಂಪ್ರೇರಿತವಾಗಿ ಗೃಹಜ್ಯೋತಿ ಸೌಲಭ್ಯವನ್ನು ತ್ಯಾಗ ಮಾಡುತ್ತಿದ್ದಾರೆ. ಈಗಾಗಲೇ ಸರ್ಕಾರಿ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು, ಖಾಸಗಿ ಸಂಸ್ಥೆಯವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ತಾವು ಬಳಕೆ ಮಾಡುವ ವಿದ್ಯುತ್‍ನ ಪ್ರಮಾಣ 150 ಯುನಿಟ್ ದಾಟುತ್ತಿಲ್ಲ ಆದರೂ ತಾವು ಗೃಹಜ್ಯೋತಿ ಸೌಲಭ್ಯವನ್ನು ಬಳಸಿಕೊಳ್ಳುವುದಿಲ್ಲ ಎಂದು ಸ್ವಯಂಪ್ರೇರಿತವಾಗಿ ಹೇಳಿದ್ದಾರೆ. ಈ ಹಿಂದೆ ಅಡುಗೆ ಅನಿಲಕ್ಕೆ…
ಬೆಂಗಳೂರು: ಒಡಿಶಾ ಭೀಕರ ರೈಲು ದುರಂತಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸ್ ಡಿಐಜಿ ಪಿ.ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಮಾತನಾಡಿದ ಅವರು,ಅಪಘಾತಕ್ಕೀಡಾದ ಹೌರಾ ರೈಲು ಬೈಯಪ್ಪನಹಳ್ಳಿ ನಿಲ್ದಾಣದಿಂದ ಹೊರಟಿತ್ತು. ಇಲ್ಲಿಂದ ಹೌರಾಗೆ 46 ಘಂಟೆಗಳ ಪ್ರಯಾಣವಾಗಿದೆ. ಈ ವೇಳೆ, ರಾತ್ರಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಮೂರು ಬೋಗಿಗಳು ಸಂಪೂರ್ಣ ಜಖಂ ಆಗಿವೆ. ಮಾಹಿತಿ ತಿಳಿದ ತಕ್ಷಣವೇ ನಿನ್ನೆ ರಾತ್ರಿಯಿಂದ ಅಲ್ಲಿಗೆ ಹೊರಡುವ ರೈಲುಗಳನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದರು. ಗಾಯಾಳು, ಸಾವು – ನೋವುಗಳ ಬಗ್ಗೆ ನಮ್ಮ ನಿಲ್ದಾಣಕ್ಕೆ ಸ್ಪಷ್ಟ ಮಾಹಿತಿ ದೊರೆತಿಲ್ಲ. ಸದ್ಯ ಬೆಂಗಳೂರಲ್ಲಿ ನಾಲ್ಕು ಹೆಲ್ಪ್ಲೈನ್ ಓಪನ್ ಮಾಡಲಾಗಿದೆ. ಈವರೆಗೆ ಹೆಲ್ಪ್ ಲೈನ್ಗೆ ಒಂದೂ ಕರೆ ಬಂದಿಲ್ಲ. ನಿನ್ನೆ ರಾತ್ರಿಯಿಂದಲೂ ಸಿಬ್ಬಂದಿ ಯವುದೇ ಕರೆ ಸ್ವೀಕರಿಸಿಲ್ಲ. ಜನರಲ್ ಬೋಗಿ, ರಿಸರ್ವೇಶನ್ ಬೋಗಿಗಳಿಗೆ ಹೆಚ್ಚು ಹಾನಿಯಾಗಿವೆ ಎನ್ನುವ ಮಾಹಿತಿ ಇದೆ. ಬೋಗಿಗಳಲ್ಲಿ ರಾಜ್ಯಕ್ಕೆ ಕೆಲಸ ಅರಸಿ ಬಂದವರು ಹೆಚ್ಚು ಇದ್ದರು. ಸದ್ಯಕ್ಕೆ ಕರ್ನಾಟಕದವರ ಸಾವಿನ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ ಎಂದು ತಿಳಿಸಿದರು.…
ಬೆಂಗಳೂರು: ತುಟಿಗೆ ತುಪ್ಪ ಸವರುವವರನ್ನು ನೋಡಿದ್ದೆ. ಹಣೆಗೆ ತುಪ್ಪ ಸವರುವವರನ್ನು ನೋಡಿರಲಿಲ್ಲ ಎಂದು ಕಾಂಗ್ರೆಸ್ ಗ್ಯಾರಂಟಿ ಜಾರಿ ಸಂಬಂಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಟೀಕೆ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಹೆಚ್ ಡಿಕೆ, ಗ್ಯಾರಂಟಿಗಳ ಬಗ್ಗೆ ಚರ್ಚೆ ಅಥವಾ ವಿಮರ್ಶೆಗೆ ನನಗೆ ಆತುರವಿಲ್ಲ, ನನಗೆ ತಾಳ್ಮೆ ಇದೆ. ಆದರೆ, ಮತ ಗಳಿಕೆಗೆ ಮುನ್ನ ಕೊಟ್ಟ ಭರವಸೆಗಳು ಅಧಿಕಾರಕ್ಕೆ ಬಂದ ಮೇಲೆ ‘ಷರತ್ತು ಸಹಿತ’ ಎಂದಾಗಿದ್ದರ ಬಗ್ಗೆ ನನಗೆ ನೋವಿದೆ. ಜನರ ಸಹನೆ ಎನ್ನುವುದು ಖಂಡಿತಾ ಕಟ್ಟೆಯೊಡೆಯುತ್ತದೆ, ನಾನು ಕಾಯುತ್ತೇನೆ ಹಾಗೂ ಅವರ ಜತೆ ನಿಲ್ಲುತ್ತೇನೆ ಎಂದಿದ್ದಾರೆ. , ಹಾಲಿ ಮುಖ್ಯಮಂತ್ರಿಗಳು 2013-18ರಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ 2.75 ಲಕ್ಷದಷ್ಟು ಸರ್ಕಾರಿ ಹುದ್ದೆಗಳನ್ನು ಖಾಲಿ ಇಟ್ಟಿದ್ದರು. ಆ ಖಾಲಿ ಹುದ್ದೆಗಳನ್ನು ತುಂಬಲು ಅವರು ಆ ಸಂದರ್ಭದಲ್ಲಿ ಎಳ್ಳಷ್ಟೂ ಪ್ರಯತ್ನ ಮಾಡಲಿಲ್ಲ. ಅಂದು ಕಾಣದ ನಿರುದ್ಯೋಗ ಈ ಚುನಾವಣೆಗೆ ಮುನ್ನ ಕಂಡಿತು, ಮತ ಫಸಲು ತಂದುಕೊಟ್ಟಿತು. ಮುಗ್ಧ ಯುವಜನರಿಗೆ 3,000…
ಬೆಂಗಳೂರು: ಕಾಂಗ್ರೆಸ್ ನ 5 ಗ್ಯಾರಂಟಿಗಳು ನಾಡಿನ ಜನತೆಗೆ ಚೈತನ್ಯ ತುಂಬಲಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಐದು ಗ್ಯಾರಂಟಿಗಳ ಅನುಷ್ಠಾನ ಅಸಾಧ್ಯ ಎಂಬ ಅಭಿಪ್ರಾಯವಿತ್ತು. ಆದರೆ ಎಲ್ಲೂ ಆರ್ಥಿಕ ಶಿಸ್ತಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಿ ಈ ಗ್ಯಾರಂಟಿಗಳ ಅನುಷ್ಠಾನಕ್ಕೆ ಅನುಮೋದನೆ ನೀಡಿರುವುದು ನಮ್ಮ ಸರ್ಕಾರದ ಹೆಚ್ಚುಗಾಕೆ. ಜನರ ತೆರಿಗೆ ಹಣ ಜನರ ಅಭಿವೃದ್ಧಿಗೆ ವ್ಯಯಿಸಬೇಕು ಎನ್ನುವ ಬದ್ಧತೆಯೊಂದಿಗೆ ಈ ಗ್ಯಾರಂಟಿಗಳು ಜನರಿಗೆ ತಲುಪಲಿವೆ’ ಎಂದು ಘೋಷಿಸಿದ್ದಾರೆ. ಬಿಜೆಪಿಯವರು ನಮ್ಮ 5 ಗ್ಯಾರಂಟಿಗಳ ಬಗ್ಗೆ ಬೀದಿ ಬೀದಿಯಲ್ಲಿ ಅಪಪ್ರಚಾರ ನಡೆಸಿದ್ದರು. ಜನರಿಗೆ ಪ್ರಚೋದನೆ ನೀಡಿದ್ದರು. ಮತದಾರರಿಗಿಂತಲೂ ಬಿಜೆಪಿಯವರೇ ಗ್ಯಾರಂಟಿಗಾಗಿ ದುಂಬಾಲು ಬಿದ್ದಿದರು. ಈಗ ಈ 5 ಗ್ಯಾರಂಟಿಗಳು ಬಿಜೆಪಿಯವರಿಗೂ ಸಿಗಲಿವೆ. ಇನ್ನು ಮುಂದೆ ಬಿಜೆಪಿ ನಾಯಕರಿಗೂ ಕರೆಂಟ್ ಫ್ರೀ, ಅವರ ಮನೆಯೊಡತಿಗೆ 2 ಸಾವಿರ ರೂ., ಉಚಿತ ಬಸ್ ಪ್ರಯಾಣ ಸಿಗಲಿದೆ’ ಎಂದು ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ಬೆಂಗಳೂರು: ಶಿವರಾಮಕಾರಂತ ಬಡಾವಣೆಗಾಗಿ ವಕ್ಫ್ ಭೂಮಿ ಸ್ವಾಧೀನ ಪಡಿಸಿಕೊಂಡಿರುವ ಹಿನ್ನೆಲೆ ಭೂ ಪರಿಹಾರ ಅಥವಾ ಪರ್ಯಾಯ ಜಮೀನು ನೀಡಲು ಶಾಫಿ ಸಅದಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡಗೆ ಪತ್ರ ಬರೆದಿರುವ ಅವರು, ಭೂ ಸ್ವಾಧೀನಾಧಿಕಾರಿಗಳು ಸಂಪೂರ್ಣ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ವಕ್ಫ್ ಸಂಸ್ಥೆಯಾದ ನಗರದ ಕಬ್ಬನ್‍ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ಮತ್ತು ಹಝ್ರತ್ ಮುಹೀಬ್ ಷಾ ಖಾದ್ರಿ ದರ್ಗಾ ಮತ್ತು ರಾಜ್ಯ ವಕ್ಫ್ ಮಂಡಳಿಯೊಂದಿಗೆ ಸಮಾಲೋಚಿಸದೆ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ. ಮೇಡಿ ಅಗ್ರಹಾರ ಗ್ರಾಮದ ಸಂಪೂರ್ಣ ವಿಸ್ತೀರ್ಣ 358 ಎಕರೆ 11 ಗುಂಟೆ ಜಮೀನು ಹಝ್ರತ್ ಹಮೀದ್ ಶಾ ದರ್ಗಾಗೆ ಸೇರಿದ ಮುಸ್ಲಿಂ ಮುಜುರಾಯಿ ದೇವಾಲಯದ ಇನಾಂತಿ ಜಮೀನಾಗಿದೆ. 1973ರಲ್ಲಿ ರಾಜ್ಯ ಸರಕಾರದ ಆದೇಶದಂತೆ ಮುಸ್ಲಿಂ ಮುಜುರಾಯಿ ಸ್ವತ್ತುಗಳನ್ನು ರಾಜ್ಯ ವಕ್ಫ್ ಮಂಡಳಿಗೆ ಹಸ್ತಾಂತರಿಸಲು ಸೂಚಿಸಲಾಗಿದೆ ಎಂದು ಶಾಫಿ ಸಅದಿ ಹೇಳಿದ್ದಾರೆ. ಈ ಆದೇಶದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ…
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ. ಇನ್ನೂ ಮುಂದಿನ 24 ಗಂಟೆಯಲ್ಲಿ ಕರಾವಳಿ ಭಾಗದಲ್ಲಿ ಬಿರುಗಾಳಿ ಸಹಿತ 40 ರಿಂದ 55 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಒಳನಾಡಿನಲ್ಲಿ 30 ರಿಂದ 40 ಕಿಲೋಮೀಟರ್ ವೇಗದ ಗಾಳಿ ಬೀಸಲಿದೆ. ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಗುಡುಗು ಸಹಿತ ಮಳೆ ಆಗಲಿದೆ ಎಂದು ಹೇಳಲಾಗಿದೆ.