ನಟ ಜೂನಿಯರ್ ಎನ್ಟಿಆರ್ ಸದ್ಯ ವಾರ್ 2 ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ವಾರ್ ಸಿನಿಮಾದ ಯಶಸ್ಸಿನ ಬಳಿಕ ಯಶ್ ರಾಜ್ ಫಿಲಂಸ್ ನಿರ್ಮಾಣ ಸಂಸ್ಥೆ ‘ವಾರ್ 2’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ವಾರ್ 2 ಸಿನಿಮಾದಲ್ಲಿ ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಇದೀಗ ಚಿತ್ರತಂಡದಿಂದ ಮತ್ತೊಂದು ಇಂಟ್ರೆಸ್ಟಿಂಗ್ ಮಾಹಿತಿ ಹೊರ ಬಿದ್ದಿದೆ. ಅಯನ್ ಮುಖರ್ಜಿ ನಿರ್ದೇಶನದ ವಾರ್ 2 ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಸೀನ್ ಗಳು ಇರಲಿದೆ. ಸದ್ಯ ಈ ಚಿತ್ರದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದ್ದು, ಹೃತಿಕ್, ಜೂನಿಯರ್ ಎನ್ಟಿಆರ್ ಸಿನಿಮಾದಲ್ಲಿ ಶಾರುಖ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಈ ಚಿತ್ರಕ್ಕಾಗಿ ಯಶ್ ರಾಜ್ ಫಿಲಂಸ್ ಭಾರೀ ಬಂಡವಾಳ ಹೂಡುತ್ತಿದೆ. ಮುಂಬೈನಲ್ಲಿ ಸಿನಿಮಾದ ಆ್ಯಕ್ಷನ್ ಸೀನ್ ಗಳ ಶೂಟಿಂಗ್ ಕೂಡ ನಡೆಯುತ್ತಿದೆ. ಜೂನಿಯರ್ ಎನ್ ಟಿಆರ್ 40ಕ್ಕೂ ಹೆಚ್ಚು ಜನರೊಂದಿಗೆ ಫೈಟ್ ಮಾಡುವ ದೃಶ್ಯ ಈ ಚಿತ್ರದಲ್ಲಿ ಇರಲಿದೆ…
Author: Prajatv Kannada
ಬಿಗ್ ಬಾಸ್ ಮೂಲಕ ಖ್ಯಾತಿ ಘಳಿಸಿದ ನಟಿ ದಿವ್ಯಾ ಉರುಡುಗ ಕಿಶನ್ ಬೆಳಗಲಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಮಧ್ಯೆ ಪ್ರೀತಿ ಹುಟ್ಟಿಕೊಂಡಿದೆ. ಬಿಗ್ ಬಾಸ್ನಲ್ಲಿ ಇವರ ಮಧ್ಯೆ ಪ್ರೀತಿ ಹುಟ್ಟಿತು. ಈಗ ದಿವ್ಯಾ ಉರುಡುಗ ನಟ ಹಾಗೂ ಡ್ಯಾನ್ಸರ್ ಕಿಶನ್ ಬೆಳಗಲಿ ಜೊತೆ ಮದುವೆಯಾಗೆ ಸಜ್ಜಾಗಿದ್ದಾರೆ. ಅಷ್ಟಕ್ಕೂ ಇದು ರಿಯಲ್ ಮ್ಯಾರೇಜ್ ಅಲ್ಲ. ಬದಲಾಗಿ ದಿವ್ಯಾ ಹಾಗೂ ಕಿಶನ್ ನಿನಗಾಗಿ ಧಾರವಾಹಿಯಲ್ಲಿ ಮದುವೆಯಾಗುತ್ತಿದ್ದಾರೆ. ಈ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದಿವ್ಯಾ ಉರುಡುಗ ಅವರು ‘ನಿನಗಾಗಿ’ ಧಾರಾವಾಹಿಯಲ್ಲಿ ರಚನಾ ಹೆಸರಿನ ಪಾತ್ರ ಮಾಡಿದ್ದಾರೆ. ರುತ್ವಿಕ್ ಅವರು ಜೀವ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಇನ್ನು ಕಿಶನ್ ಬೆಳಗಲಿ ಅಶ್ವಿನ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ರಚನಾ ಹಾಗೂ ಅಶ್ವಿನ್ ಮಧ್ಯೆ ಕುಟುಂಬದವರು ಮದುವೆ ಫಿಕ್ಸ್ ಮಾಡಿದ್ದಾರೆ. ಆದರೆ, ಮದುವೆ ನಡೆಯುವಾಗ ಕಂಕಣ ಅಗ್ನಿಯಲ್ಲಿ ಬಿದಿದ್ದು ಇದರಿಂದ ಮದುವೆ ಅರ್ಧಕ್ಕೆ ನಿಂತಿದೆ. ಇದು ರಚನಾಗೆ…
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಬಳಿಕ ನಟಿ ರುಕ್ಮಿಣಿ ವಸಂತ್ ಗೆ ಬೇಡಿಕೆ ಹೆಚ್ಚುತ್ತಿದೆ. ಪರಭಾಷೆಯಲ್ಲೂ ಬ್ಯುಸಿಯಾಗಿರು ರುಕ್ಮಿಣಿಗೆ ಅಭಿಮಾನಿಗಳ ಬಳಗ ಕೂಡ ದೊಡ್ಡದಾಗಿದೆ. ಇದೀಗ ‘ಬಘೀರ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಆದರೆ ಈ ಚಿತ್ರದ ಒಂದು ದೃಶ್ಯದ ಬಗ್ಗೆ ಅಭಿಮಾನಿಗಳು ಅಪಸ್ವರ ಎತ್ತಿದ್ದಾರೆ. ‘ಬಘೀರ’ ಚಿತ್ರದ ಟ್ರೇಲರ್ ಅಕ್ಟೋಬರ್ 21ರಂದು ರಿಲೀಸ್ ಆಗಿದೆ. ಈ ಟ್ರೇಲರ್ನಲ್ಲಿ ಶ್ರೀಮುರಳಿ ಅವರು ರುಕ್ಮಿಣಿ ವಸಂತ್ ಕೆನ್ನೆಗೆ ಹೊಡೆಯೋ ದೃಶ್ಯ ಇದೆ. ಇದು ತಪ್ಪು ಎಂದು ಅನೇಕರು ಖಂಡಿಸಿದ್ದಾರೆ. ಈ ರೀತಿಯ ದೃಶ್ಯ ಇರಬಾರದಿತ್ತು ಎಂದು ಅವರ ಫ್ಯಾನ್ಸ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟ್ವಿಟರ್ನಲ್ಲಿ ಈ ವಿಚಾರವಾಗಿ ವಿಡಿಯೋ ಹಾಗೂ ಪೋಸ್ಟ್ಗಳು ಹರಿದಾಡುತ್ತಿವೆ. ಟೌನ್ ಹಾಲ್ ಎದುರು ನಿಂತು ಪ್ರತಿಭಟನೆ ಮಾಡುತ್ತಿರುವ ಫೋಟೋನ ಎಡಿಟ್ ಮಾಡಲಾಗಿದೆ. ಇದರಲ್ಲಿ ‘ರುಕ್ಮಣಿ ವಸಂತ್ಗೆ ನ್ಯಾಯ ಬೇಕು’ ಎಂದು ಬರೆಯಲಾಗಿದೆ. ‘ಆಫೀಸರ್ ಬಘೀರ ರುಕ್ಮಿಣಿ ವಸಂತ್ ಮೇಲೆ ಕೈ ಮಾಡಿದ್ದಾರೆ. ಟೌನ್ ಹಾಲ್ ಎದುರು ಪ್ರತಿಭಟನೆ ಮಾಡಲಾಗಿದೆ’ ಎಂದು…
ಬಾಲಿವುಡ್ ನ ಖ್ಯಾತ ನಿರ್ಮಾಣ ಸಂಸ್ಥೆಗಳಲ್ಲಿ ಧರ್ಮ ಪ್ರೊಡಕ್ಷನ್ ಹೌಸ್ ಕೂಡ ಒಂದು. ಯಶ್ ಜೋಹರ್ ಸಹ ಸ್ಥಾಪಿಸಿದ್ದ ಧರ್ಮ ಪ್ರೊಡಕ್ಷನ್ಸ್ ಹೌಸ್ ಜವಬ್ದಾರಿಯನ್ನು ಕರಣ್ ಜೋಹರ್ ಹೊತ್ತಿಕಂಡಿದ್ದರು. ಈ ನಿರ್ಮಾಣ ಸಂಸ್ಥೆ ಮೂಲಕ ಹಲವು ಸಿನಿಮಾಗಳು ತೆರೆಕಂಡಿವೆ. ಅಲ್ಲದೆ ಹಲವು ಸ್ಟಾರ್ ನಟರನ್ನು ಈ ನಿರ್ಮಾಣ ಸಂಸ್ಥೆ ನೀಡಿದೆ. ಸುಮಾರು 45 ವರ್ಷಗಳ ಇತಿಹಾಸ ಇರುವ ಧರ್ಮ ಪ್ರೊಡಕ್ಷನ್ ಹೌಸ್ ಅನ್ನು ಇದೀಗ ಕರಣ್ ಜೋಹರ್ ಮಾರಾಟಕ್ಕಿದ್ದಾರೆ. ಭಾರತದ ಶ್ರೀಮಂತ ಉದ್ಯಮಿಯೊಬ್ಬರು ಖರೀದಿಗೆ ಮುಂದಾಗಿದ್ದಾರೆ. ಧರ್ಮಾ ಪ್ರೊಡಕ್ಷನ್ ಅನ್ನು ಕರಣ್ ಜೊಹರ್ ಮಾರಾಟ ಮಾಡುತ್ತಿದ್ದು, ನಿರ್ಮಾಣ ಸಂಸ್ಥೆಯ 50% ಅಂದರೆ ಬರೋಬ್ಬರಿ ಅರ್ಧ ಭಾಗವನ್ನು ಸೀರಮ್ ಇನ್ಸ್ಟಿಟ್ಯೂಪ್ ಆಫ್ ಇಂಡಿಯಾದ ಸಿಇಓ ಆಗಿರುವ ಆಧಾರ್ ಪೂನಾವಾಲಾ ಖರೀದಿ ಮಾಡಲಿದ್ದಾರೆ. ಧರ್ಮಾ ಪ್ರೊಡಕ್ಷನ್ನ ಒಟ್ಟು ಮೌಲ್ಯ 2000 ಕೋಟಿ ಎಂದು ಅಂದಾಜಿಸಲಾಗಿದ್ದು, ಅದರಲ್ಲಿ ಅರ್ಧ ಭಾಗವನ್ನು 1000 ಕೋಟಿ ರೂಪಾಯಿ ಹಣ ನೀಡಿ ಖರೀದಿ ಮಾಡುತ್ತಿದ್ದಾರೆ ಆಧಾರ್ ಪೂನಾವಾಲ. ಕೋವಿಡ್ ಸಮಯದಲ್ಲಿ…
ಕಳೆದ ಕೆಲ ದಿನಗಳಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸಾಕಷ್ಟು ಜೀವ ಬೆದರಿಕೆ ಕರೆ ಬರುತ್ತಿದೆ. ಇದಕ್ಕೆಲ್ಲ ಕಾರಣ ಆಗಿರೋದು ಲಾರೆನ್ಸ್ ಬಿಷ್ಣೋಯ್. ಈತ ಸಲ್ಮಾನ್ ಖಾನ್ನ ಕೊಲೆ ಮಾಡೋದಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಲೇ ಇದ್ದ. ಈ ಪ್ರಕರಣವನ್ನು ಸೆಟಲ್ಮೆಂಟ್ ಮಾಡಿಸೋದಾಗಿ ವ್ಯಕ್ತಿಯೋರ್ವ ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿದ್ದ. ಇದಕ್ಕಾಗಿ ಆತ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಈಗ ಈ ವ್ಯಕ್ತಿ ಕ್ಷಮೆ ಕೇಳಿದ್ದಾನೆ. ‘ಮಿಸ್ ಆಗಿ ಮೆಸೇಜ್ ಹೋಯ್ತು’ ಎಂದಿದ್ದಾನೆ. ‘ಸಲ್ಮಾನ್ ಖಾನ್ ಹತ್ಯೆ ಬಾಬಾ ಸಿದ್ಧಿಕಿ ಹತ್ಯೆಗಿಂತಲೂ ಭೀಕರವಾಗಿರುತ್ತದೆ’ ಎನ್ನುವ ಸಂದೇಶ ಬಂದಿತ್ತು. ಇದನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರೇ ಮಾಡಿರಬಹುದು ಎಂದು ಊಹಿಸಲಾಗಿತ್ತು. ಇದಾದ ಬಳಿಕ ಪ್ರಕರಣ ಸೆಟಲ್ ಮಾಡಲು ಐದು ಕೋಟಿ ರೂಪಾಯಿ ಕೇಳಿದ್ದ. ಈಗ ಇದೇ ವ್ಯಕ್ತಿ ಕ್ಷಮೆ ಕೇಳಿದ್ದಾನೆ. ‘ನನ್ನ ಸಂದೇಶ ಮಿಸ್ ಆಗಿ ಹೋಗಿದೆ. ಈ ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ’ ಎಂದು ಆತ ಈಗ ಸಂದೇಶ ಕಳುಹಿಸಿದ್ದಾನೆ.…
ಬಳ್ಳಾರಿ:- ಬೆನ್ನು ನೋವಿನಿಂದ ಬಳಲುತ್ತಿರುವ ಕೊಲೆ ಆರೋಪಿ ದರ್ಶನ್ ನೋಡಲು ಬಳ್ಳಾರಿ ಜೈಲಿಗೆ i ಇಂದು ಕುಟುಂಬಸ್ಥರು ಆಗಮಿಸಲಿದ್ದಾರೆ. https://youtu.be/iPZT5SOBOJ4?si=DlzTBIoLgdx9UE-_ ಇಂದು ಸಂಜೆ 4 ಗಂಟೆಗೆ ಬಳ್ಳಾರಿ ಸೆಂಟ್ರಲ್ ಜೈಲ್ ಗೆ ಕುಟುಂಬಸ್ಥರು ಬರಲಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ವಿಜಿಟರ್ಸ್ ಸಮಯಕ್ಕೆ ಕುಟುಂಬಸ್ಥರು ಬರಲಿದ್ದಾರೆ. ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್, ಸುಶಾಂತ್ ನಾಯ್ಡು ಇಂದು ಸಂಜೆಗೆ ಆಗಮಿಸಲಿದ್ದಾರೆ. ಸಂಜೆ ವಿಜಿಟರ್ಸ್ ಸಮಯದಲ್ಲಿ ಕುಟುಂಬಸ್ಥರು ಭೇಟಿ ನೀಡಲಿದ್ದಾರೆ
ಹಾಸನ:- ಡಿಸಿಆರ್‌ಬಿ ಪೊಲೀಸರ ಕಾರ್ಯಚರಣೆ ನಡೆಸಿ ನಕಲಿ ಆಧಾರ್ ಕಾರ್ಡ್ ಹೊಂದಿದ್ದ ಮೂವರು ವಿದೇಶಿ ಪ್ರಜೆಗಳನ್ನು ಅರೆಸ್ಟ್ ಮಾಡಿದ್ದಾರೆ. https://youtu.be/1qmxeifuzQk?si=XBnu_ep3nlxhwJ2z = ಬಂಧಿತರನ್ನು ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಮಲ್ ಹೊಕ್ಕು ಎಂದು ಗುರುತಿಸಲಾಗಿದೆ. ಹಾಸನ ನಗರದ 80 ಅಡಿ ರಸ್ತೆಯ, ಗದ್ದೆಹಳ್ಳದ, ನಾಲ್ಕನೇ ಅಡ್ಡ ರಸ್ತೆಯ ಜುಬೇರ್ ಎಂಬವನ ಮನೆಯಲ್ಲಿ ಈ ಮೂವರು ವಾಸವಿದ್ದರು. ಜುಬೇರ್ ಮನೆಯ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದರು. ಈ ಮೂವರು ಪಶ್ಚಿಮಬಂಗಾಳದ ವಿಳಾಸವಿರುವ ನಕಲಿ ಆಧಾರ್‌ಕಾರ್ಡ್ ಹೊಂದಿದ್ದರು. ನುಸುಳುಕೋರರನ್ನು ಡಿಸಿಆರ್‌ಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಯಲಹಂಕ:-ಬೆಂಗಳೂರು ನಗರದ ಯಲಹಂಕ ಸುತ್ತಾಮುತ್ತಾ ಭಾರಿ ಮಳೆ ಆಗುತ್ತಿದ್ದು, ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಯಲಹಂಕ ತಗ್ಗುಪ್ರದೇಶ ಜಲಾವೃತ ಆಗಿದೆ. https://youtu.be/1qR5SkJJC28?si=cJtStGWdJPImdey_ ಯಲಹಂಕ ಕೆರೆಕೋಡಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜಲದಿಗ್ಭಂಧನ ಆಗಿದ್ದು, ಯಲಹಂಕ ರೈತರ ಸಂತೆ ಸುತ್ತಮುತ್ತಲ ಪ್ರದೇಶಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸುವಂತಾಗಿದೆ. ಮುಖ್ಯವಾಗಿ ಜಕ್ಕೂರು ರಸ್ತೆ ಕೆರೆಯಂತಾಗಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಬೈಕ್, ಕಾರು, ಟ್ಯಾಕ್ಸಿ ಕೆಟ್ಟು ನಿಂತು ಸಮಸ್ಯೆ ಎದುರಿಸುವಂತಾಗಿದೆ. ಕೆಟ್ಟುನಿಂತ ಬೈಕ್ಗಳನ್ನ ಕೆರೆಯಂತಾದ ರಸ್ತೆಯಲ್ಲೆ ವಾಹನ ಸವಾರರು ತಳ್ಳಿದ್ದಾರೆ. ಇನ್ನೂ ಭಾರಿ ಮಳೆಯಿಂದ ಸಂಭವಿಸಿದ ಅವಾಂತರದಿಂದ ಜನರ ಪರದಾಟ ಕೇಳುವವರಿಲ್ಲ ಎಂಬಂತಾಗಿದೆ. ಒಂದು ಗಂಟೆಕಾಲ ಯಲಹಂಕ ಜಕ್ಕೂರು ರಸ್ತೆಯಲ್ಲೇ ನೀರು ನಿಂತಿದೆ. ಜೋರು ಮಳೆ ನೀರಿಂದ ರಾಜಕಾಲುವೆಯಲ್ಲಿ ಕಸ ತುಂಬಿಕೊಂಡು ಸಮಸ್ಯೆ ಎದುರಾಗಿದೆ. ಜಕ್ಕೂರು ರಸ್ತೆಯ ಸೆಂಚುರಿ ಅಪಾರ್ಟ್ಮೆಂಟ್ ಬಳಿ ರಾಜಕಾಲುವೆ ಉಕ್ಕಿಹರಿದು ತೀವ್ರ ಸಮಸ್ಯೆ ಎದುರಾಗಿದೆ. ಯಲಹಂಕದ ಜಕ್ಕೂರು ರಸ್ತೆ ಸುರಭಿ ಲೇಔಟ್ ಗೆ ನೀರು ನುಗ್ಗಿ ತೊಂದರೆ ಆಗಿದೆ. ಸುರಭಿ…
ದಾಸರಹಳ್ಳಿ: ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಅಬ್ಬಿಗೆರೆ ಕೆರೆ ಕೋಡಿ ರಸ್ತೆಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಆಗಿದೆ. https://youtu.be/iF4LCe_BgII?si=UbAphNEHo9mhXZs4 ಭಾರೀ ಮಳೆ ಹಿನ್ನೆಲೆ, ಎರಡು ಲೇಔಟ್ ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಆಗಿದ್ದು, ಅಬ್ಬಿಗೆರೆ ರಸ್ತೆ ಹಾಗೂ ನಿಸರ್ಗ ಲೇಔಟ್ ನಡುವೆ ರಸ್ತೆ ಸಂಪರ್ಕ ಕಡಿತ ಮಾಡಲಾಗಿದೆ. ಕೆರೆ ಕೊಡಿ ಬಿದ್ದ ಹಿನಲ್ಲೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಆಗಿದೆ. ಸ್ಥಳಕ್ಕೆ ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಿಬಿಎಂಪಿ ವಲಯ ಆಯುಕ್ತ ಗೀರೀಶ್ ಭೇಟಿ ನೀಡಿದ್ದು, ಕೂಡಲೇ ರಸ್ತೆ ಸರಿ ಪಡಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ
ಧಾರವಾಡ: ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ಅಧ್ಯಕ್ಷತೆಯಲ್ಲಿ ಧಾರವಾಡ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಸೋಮವಾರ ಜನತಾ ದರ್ಶನ ಕಾರ್ಯಕ್ರಮ ನಡೆಯಿತು. ಈ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾ ಹಂತದ ಎಲ್ಲಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. https://youtu.be/qhet4slNmJQ?si=q7tRTdGz_eZo7ZlT ಜಿಲ್ಲಾ ಪಂಚಾಯತಿ ಮೊದಲ ಮಹಡಿಯಲ್ಲಿ ಸಮಸ್ಯೆಗಳ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಎರಡನೇ ಮಹಡಿಯಲ್ಲಿರುವ ಸಭಾಭವನದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವರು ಸಮಸ್ಯೆಗಳಿರುವ ಅರ್ಜಿ ಸಲ್ಲಿಸಿದವರನ್ನು ಕರೆಯಿಸಿ ಅವರ ಅಹವಾಲು ಆಲಿಸಿ ಸ್ಥಳದಲ್ಲೇ ಕೆಲವೊಂದಿಷ್ಟು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿದರು. ತಮ್ಮೂರಿನಲ್ಲಿ ರಸ್ತೆ, ಬೀದಿ ದೀಪ, ಶಾಲೆಗೆ ಬೇಕಾದ ಮೂಲ ಸೌಕರ್ಯ, ಅನುಕಂಪದ ಆಧಾರದ ಮೇಲೆ ಕೆಲಸ, ವರ್ಗಾವಣೆ, ಪಾಲಿಕೆಯಿಂದ ಆಗಬೇಕಾದ ಕೆಲಸ ಸೇರಿದಂತೆ ಇತ್ಯಾದಿ ಸಾರ್ವಜನಿಕ ಹಾಗೂ ವೈಯಕ್ತಿಕ ಸಮಸ್ಯೆಗಳ ಸರಮಾಲೆಯೇ ಸಚಿವರಿಗೆ ದರ್ಶನವಾಯಿತು. ಈ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಪಂಚಾಯ್ತಿ ಸಿಇಓ ಸ್ವರೂಪಾ…