Author: Prajatv Kannada

ವ್ಯಾಟಿಕನ್ ಸಿಟಿಯ ಸೇಂಟ್​ ಪೀಟರ್ಸ್ ಚರ್ಚ್ ನಲ್ಲಿ ವ್ಯಕ್ತಿಯೊಬ್ಬರು ಬೆತ್ತಲಾಗಿ ಕಾಣಿಸಿಕೊಂಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಉಕ್ರೇನ್ ಯುದ್ಧದ ವಿರುದ್ಧ ಪ್ರತಿಭಟಿಸಲು ಆತ ಈ ರೀತಿಯಲ್ಲಿ ವರ್ತಿಸಿದ್ದಾನೆ ಎಂದು ಹೇಳಲಾಗುತ್ತಿದೆ. ವ್ಯಕ್ತಿಯು ಚರ್ಚ್‌ನ ಬಲಿಪೀಠದ ಬಳಿ ತನ್ನ ಬಟ್ಟೆಗಳನ್ನು ತೆಗೆದಿದ್ದಾನೆ. ಬಳಿಕ ಈತನನ್ನು ನೋಡಿದ ಚರ್ಚ್‌ನ ಭದ್ರತಾ ಸಿಬ್ಬಂದಿ ಇಟಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.ವ್ಯಕ್ತಿಯೂ ತನ್ನ ಬೆನ್ನಿನ್ನ ಮೇಲೆ ಉಕ್ರೇನ್‌ನ ಮಕ್ಕಳನ್ನು ಉಳಿಸಬೇಕು ಎಂದು ಬರೆದುಕೊಂಡಿದ್ದಾನೆ. ಘಟನೆಯ ಕುರಿತು ಇಟಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 2016ರ ಹಿಂದೆ ಲೂಯಿಸ್ ಕಾರ್ಲೋಸ್ ಜಿಯಾಂಪೊಲಿ ಎಂಬುವವರು ಸಹ ವ್ಯಾಟಿಕನ್‌ನ ಸೇಂಟ್ ಪೀಟರ್ಸ್ ಚರ್ಚ್ ಅನ್ನು ಬೆತ್ತಲೆಯಾಗಿ ಪ್ರವೇಶಿಸಿದ್ದನು. ಅವರು ಬ್ರೆಜಿಲ್ ನಿವಾಸಿಯಾಗಿದ್ದರು. ತನಿಖೆಯ ವೇಳೆ ಆರೋಪಿಯ ಮಾನಸಿಕ ಸಮತೋಲನ ಸರಿಯಿಲ್ಲ ಎಂದು ತಿಳಿದುಬಂದಿದೆ. ಆ ಬಳಿಕ ನಡೆದ ಮತ್ತೊಂದು ಪ್ರಕರಣ ಇದಾಗಿದೆ.

Read More

ಡೆಹ್ರಾಡೂನ್: ಉತ್ತರಾಖಂಡದ  ಪಿಥೋರಗಢದಲ್ಲಿ (Pithoragarh) ಭೂಕುಸಿತ (Landslide) ಉಂಟಾದ ಪರಿಣಾಮ ರಸ್ತೆ ಕೊಚ್ಚಿಹೋಗಿದ್ದು, 300 ಮಂದಿ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಲಖನ್‌ಪುರ (Lakhanpur) ಬಳಿಯ ಧಾರ್ಚುಲದಿಂದ 45 ಕಿಮೀ ಎತ್ತರದ ಲಿಪುಲೇಖ್ – ತವಾಘಾಟ್ ರಸ್ತೆಗೆ ಬೆಟ್ಟ ಕುಸಿದು ಬಿದ್ದಿದ್ದು, 100 ಮೀಟರ್ ರಸ್ತೆ ಕೊಚ್ಚಿ ಹೋಗಿದೆ. ಭೂಕುಸಿತದ ಪರಿಣಾಮ ಧಾರ್ಚುಲ ಮತ್ತು ಗುಂಜಿಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಪಿಥೋರಗಢದ ಹೊರವಲಯದಲ್ಲಿ, ಧಾರ್ಚುಲಾ ಮೇಲೆ 45 ಕಿ.ಮೀ ದೂರದಲ್ಲಿರುವ ಲಿಪುಲೇಖ್-ತವಾಘಾಟ್ ಮೋಟಾರು ರಸ್ತೆ, ಲಖನ್‌ಪುರ ಬಳಿ ಭೂಕುಸಿತದಿಂದಾಗಿ 100 ಮೀಟರ್ ರಸ್ತೆ ಕೊಚ್ಚಿಹೋಗಿದೆ. ಇದರಿಂದಾಗಿ ಸುಮಾರು 300 ಜನ ಪ್ರಯಾಣಿಕರು ಧಾರ್ಚುಲಾ ಮತ್ತು ಗುಂಜಿಯಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೇ ಇನ್ನೆರಡು ದಿನಗಳಲ್ಲಿ ರಸ್ತೆ ಸಂಚಾರ ಮತ್ತೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ ರಾಜ್ಯದ ಅಲ್ಮೋರಾ, ಬಾಗೇಶ್ವರ್, ಚಮೋಲಿ, ಚಂಪಾವತ್, ಡೆಹ್ರಾಡೂನ್, ಗರ್ವಾಲ್, ಹರ್ದ್ವಾರ್, ನೈನಿತಾಲ್, ಪಿಥೋರಗಢ, ರುದ್ರಪ್ರಯಾಗ, ತೆಹ್ರಿ ಗರ್ವಾಲ್, ಉಧಮ್ ಸಿಂಗ್ ನಗರ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ಧೂಳಿನ ಬಿರುಗಾಳಿ…

Read More

ಮೈಸೂರು: ಸರಗೂರು ತಾಲೂಕಿನ ಹಿರೇಹಳ್ಳಿ ಬಳಿ ಕಾಡಾನೆ ದಾಳಿಗೆ ರೈತ ರವಿ (42) ಸಾವನ್ನಪ್ಪಿದ್ದಾನೆ. ಬೆಳೆ ಕಾಯಲು ಜಮೀನಿಗೆ ಹೋಗಿದ್ದಾಗ ಕಾಡಾನೆ ದಾಳಿ ಮಾಡಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ, ಪರಿಶೀಲನೆ ಮಾಡಿದ್ದಾರೆ ಮೃತ ರೈತನ ಕುಟುಂಬಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More

ಬೆಂಗಳೂರು: ಇಂದಿನಿಂದ ಜೂನ್ 11 ರವರೆಗೆ 9 ದಿನಗಳ ಕಾಲ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಮಾವು ಮೇಳ ನಡೆಯಲಿದೆ. ಪ್ರತಿ ವರ್ಷ ನೂರಕ್ಕೂ ಹೆಚ್ಚು ಮಳೆಗೆಗಳು ಮೇಳದಲ್ಲಿ ಭಾಗಿಯಾಗುತ್ತಿದ್ದವು, ಆದರೆ ಈ ವರ್ಷ ಮಳೆಯಿಂದ ಇಳುವರಿ ಕಡಿಮೆಯಾಗಿದ್ದು,ಈ ಬಾರಿ ಸುಮಾರು 40 ಮಳಿಗೆಗಳು ಮೇಳದಲ್ಲಿ ಭಾಗಿ ಭಾಗಿಯಾಗಲಿವೆ ಕರ್ನಾಟಕ ತೋಟಗಾರಿಕಾ ಇಲಾಖೆಯಿಂದ ಮಾವು ಮೇಳ ಆಯೋಜನೆ ಮಾಡಲಾಗಿದ್ದು, ಎಲ್ಲಾ ಗ್ರಾಹಕರಿಗೆ ಉಚಿತ ಪ್ರವೇಶ ನೀಡಲಾಗಿದೆ. ಮೇಳದಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದ ಬೆಳೆಗಾರರು ಮಳಿಗೆಗಳನ್ನು ತೆರೆಯಲಿದ್ದು ಮಾವು ಮಾರಾಟ ಮಾಡಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಬರುವ ಮಾವು ಬೆಳೆಗಾರರು ಇಲ್ಲಿ ಮಳಿಗೆಗಳನ್ನು ತೆರೆಯುತ್ತಾರೆ. ವಿವಿಧ ತಳಿಗಳ ಹಣ್ಣುಗಳು ಮಾವು ಪ್ರಿಯರನ್ನು ಸೆಳೆಯುತ್ತವೆ. ಮಲ್ಲಿಕಾ, ಮಾಲ್ಗೋವಾ, ಸೆಂಧೂರ, ಸಕ್ಕರೆಗುತ್ತಿ ಮತ್ತು ವಿವಿಧ ತಳಿಗಳ ಮಾವಿನ ಹಣ್ಣುಗಳನ್ನು ಮಾವು ಮೇಳದಲ್ಲಿ ಮಾರಾಟ ಮಾಡಲಾಗುತ್ತದೆ.

Read More

ಬಾಲಿವುಡ್ ನಟಿ, ಅರ್ಜುನ್ ಕಪೂರ್ ಪ್ರೇಯಸಿ ಮಲೈಕಾ ಆರೋರಾ ಗರ್ಭಿಣಿ ಎನ್ನುವ ವಿಚಾರ ಬಿಟೌನ್ ನಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈ ವಿಷಯದ ಕುರಿತಾಗಿಯೇ ಅನೇಕರು ಟ್ರೋಲ್ ಮಾಡಿದ್ದು, ಇದೀಗ ಟ್ರೋಲಿಗರಿಗೆ ಅರ್ಜುನ್ ಕಪೂರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಲೈಕಾ ಹಾಗೂ ಅರ್ಜುನ್ ಕಪೂರ್ ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಎಲ್ಲೇ ಹೋದರು ಬಂದರು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಜೋಡಿ ಹಕ್ಕಿಗಳು ಅಧಿಕೃತವಾಗಿ 2ನೇ ಮದುವೆ ಘೋಷಣೆ ಮಾಡದೇ, ಮಗು ಮಾಡಿಕೊಂಡಿದ್ದಾರೆ ಎಂದು ಹಲವರು ಕಾಮೆಂಟ್ ಕೂಡ ಮಾಡಿದ್ದರು. ಈ ಕುರಿತು ಮಲೈಕಾ ಬಾಯ್ ಫ್ರೆಂಡ್, ನಟ ಅರ್ಜುನ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ಮಲೈಕಾ ಗರ್ಭಿಣಿ ಎಂದು ಸುಳ್ಳು ಹಬ್ಬಿಸುತ್ತಿರುವವರ ಬಗ್ಗೆ ಕಿಡಿಕಾರಿರುವ ಅರ್ಜುನ್, ‘ಈ ರೀತಿ ಸುಳ್ಳು ಹೇಳುವುದು ಸರಿಯಲ್ಲ. ಬೇರೆಯವರ ಜೀವನದಲ್ಲಿ ಯಾರೂ ಆಟವಾಡಬಾರದು. ಬೇರೆಯವರ ನೆಮ್ಮದಿ ಹಾಳು ಮಾಡುವುದು ಸರಿಯಲ್ಲ. ಯಾರ ಮನಸ್ಸಿಗೂ ನೋವು ಆಗದಂತೆ ಇರಬೇಕು’ ಎಂದಿದ್ದಾರೆ.

Read More

ಸೂಪರ್ ಸ್ಟಾರ್ ಗಳಾದ ನಟ ರಜನಿಕಾಂತ್ ಹಾಗೂ ಕಮಲ್ ಹಾಸನ್ ತಮಿಳು ಚಿತ್ರರಂಗದ ಅದ್ಭುತ ಕಲಾವಿದರು. ಇಬ್ಬರ ಕೆಲಸವನ್ನು ಒಟ್ಟಿಗೆ ನೋಡಬೇಕು ಅನ್ನೋದು ಅದೆಷ್ಟೋ ಅಭಿಮಾನಿಗಳ ಭಯಕೆಯಾಗಿದೆ. ಇದೀಗ ಆ ಬಯಕೆ ಈಡೇರಿದ್ದು ನಟ ರಜನಿಕಾಂತ್ ಹಾಗೂ ಕಮಲ್ ಹಾಸನ್ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ನಟ ಕಮಲ್ ಈ ಖುಷಿಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ರಜನಿಕಾಂತ್ ಅವರಿಗಾಗಿ ಸಿನಿಮಾವೊಂದನ್ನು ನಿರ್ಮಾಣ ಮಾಡಬೇಕಿದೆ. ಈ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಾರೆ. ತಲೈವ ಸದ್ಯ ಜೈಲರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ 170ನೇ ಸಿನಿಮಾ ಅನೌನ್ಸ್ ಕೂಡ ಆಗಿದೆ. ಈ ಸಂಭ್ರಮದಲ್ಲಿ ಮತ್ತೊಂದು ಸಿಹಿ ಸುದ್ದಿ ಕಮಲ್ ನೀಡಿದ್ದಾರೆ. ರಜನಿ ಸಿನಿಮಾಗೆ ಕಮಲ್ ಹಾಸನ್ ಬಂಡವಾಳ ಹೂಡುತ್ತಿದ್ದಾರೆ. ಒಂದು ಕಡೆ ಕಮಲ್ ಹಾಸನ್ ಮತ್ತು ರಜನಿಕಾಂತ್ ಒಂದು ಗೂಡುತ್ತಿದ್ದರೆ, ಮತ್ತೊಂದು ಕಡೆ  ಕಾಲಿವುಡ್ ಸೂಪರ್ ಸ್ಟಾರ್ ತಲೈವಾ ಮುಂದೆ ಅಬ್ಬರಿಸಲು ಸ್ಟಾರ್ ನಟನಿಗೆ ಮಣೆ ಹಾಕಿದ ಸುದ್ದಿಯೂ ಬಂದಿದೆ.…

Read More

ದಕ್ಷಿಣ ಭಾರತದ ಖ್ಯಾತ ನಟ, ಸೂಪರ್ ಸ್ಟಾರ್ ಕಮಲ್ ಹಾಸನ್ ಯಾವುದೇ ಪಾತ್ರಕ್ಕೂ ಹೊಂದುವಂತ ಕಲಾವಿದ. ಹಾಸ್ಯ, ಗಂಭೀರ, ನಾಯಕ, ಖಳನಾಯಕ ಹೀಗೆ ಎಲ್ಲಾ ರೀತಿಯ ಪಾತ್ರದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿರುವ ನಟಿ. ಇದೀಗ ನಟ ಕಮಲ್ ಹಾಸನ್ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮುಂದೆ ವಿಲನ್ ಆಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಪ್ರಭಾಸ್ ಹಾಗೂ ದೀಪಿಕಾ ಪಡಕೋಣೆ ನಟನೆಯ ‘ಪ್ರಾಜೆಕ್ಟ್ ಕೆ’ ಚಿತ್ರ ಸಾಕಷ್ಟ ನಿರೀಕ್ಷೆ ಮೂಡಿಸಿದೆ. ಇದೀಗ ಚಿತ್ರತಂಡಕ್ಕೆ ನಟ ಕಮಲ್ ಹಾಸನ್ ಎಂಟ್ರಿಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಪ್ರಭಾಸ್ ಮುಂದೆ ಕಮಲ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಪ್ರಾಜೆಕ್ಟ್ ಕೆ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪ್ರಭಾಸ್, ದೀಪಿಕಾ ಜೊತೆ ಬಾಲಿವುಡ್ ಸ್ಟಾರ್ ನಟ ಅಮಿತಾಭ್ ಬಚ್ಚನ್ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಬಿಗ್ ಬಿ ಬೆನ್ನಲ್ಲೇ ಇದೀಗ ನಟ ಕಮಲ್ ಹಾಸನ್ ಕೂಡ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಪ್ರಾಜೆಕ್ಟ್ ಕೆ’…

Read More

ಸ್ಯಾನ್ ಫ್ರಾನ್ಸಿಸ್ಕೋ: ಭಾರತದಲ್ಲಿ 1980ರ ದಶಕದಲ್ಲಿ ದಲಿತರು ಎದುರಿಸಿದ್ದ ಪರಿಸ್ಥಿತಿಯನ್ನು ಇಂದು ಮುಸ್ಲಿಮರು ಎದುರಿಸುತ್ತಿದ್ದಾರೆ. ಇದರ ವಿರುದ್ಧ ಅಭಿಮಾನದಿಂದ ಹೋರಾಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ‘ಮೊಹಬ್ಬತ್ ಕಿ ದುಕಾನ್’ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೆಲವು ಕ್ರಮಗಳು ಅಲ್ಪಸಂಖ್ಯಾತರು, ದಲಿತ ಮತ್ತು ಬುಡಕಟ್ಟು ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು. “ಕೇಂದ್ರದ ಕ್ರಮಗಳು ಮುಸ್ಲಿಮರ ಮೇಲೆ ನೇರವಾಗಿ ಪರಿಣಾಮ ಬೀರುತ್ತಿವೆ. ಆದರೆ ವಾಸ್ತವವಾಗಿ, ಇದನ್ನು ಎಲ್ಲಾ ಸಮುದಾಯಗಳಿಗೆ ಮಾಡಲಾಗುತ್ತಿದೆ. ನೀವು(ಮುಸ್ಲಿಮರು) ಹೇಗೆ ದಾಳಿಗೆ ಒಳಗಾಗುತ್ತೀರಿ, ಹಾಗೆಯೇ ಸಿಖ್ಖರು, ಕ್ರಿಶ್ಚಿಯನ್ನರು, ದಲಿತರು ಮತ್ತು ಬುಡಕಟ್ಟು ಜನಾಂಗದವರೂ ದಾಳಿ ಒಳಗಾಗುತ್ತಿದದಾರೆ. ಆದರೆ ನೀವು ದ್ವೇಷದಿಂದ ದ್ವೇಷವನ್ನು ಕತ್ತರಿಸಲು ಸಾಧ್ಯವಿಲ್ಲ. ಪ್ರೀತಿ ಮತ್ತು ವಾತ್ಸಲ್ಯದಿಂದ ಮಾತ್ರ ಸಾಧ್ಯ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಇಂದು ಭಾರತದಲ್ಲಿ ಮುಸ್ಲಿಮರಿಗೆ ಏನಾಗುತ್ತಿದೆಯೋ ಅದನ್ನು 1980 ರ ದಶಕದಲ್ಲಿ ದಲಿತರು ಅನುಭವಿಸಿದ್ದಾರೆ.…

Read More

ಸ್ಟ್ಯಾನ್‌ಫೋರ್ಡ್: ರಾಜಕೀಯಕ್ಕೆ ಸೇರಿದಾಗ ನಾನು ಲೋಕಸಭೆಯಿಂದ ಅನರ್ಹಗೊಳ್ಳುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಈ ಅನರ್ಹತೆ ನನಗೆ ಜನರ ಸೇವೆ ಮಾಡಲು ದೊಡ್ಡ ಅವಕಾಶ ನೀಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರವಾಗಿ ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. 2000ನೇ ಇಸವಿಯಲ್ಲಿ ನಾನು ರಾಜಕೀಯಕ್ಕೆ ಬಂದಾಗ ಈ ರೀತಿ ಆಗಬಹುದೆಂದು ಊಹಿಸಿರಲಿಲ್ಲ. ನಾನು ರಾಜಕೀಯ ಪ್ರವೇಶಿಸಿದಾಗ ಅಂದುಕೊಂಡಿದ್ದಕ್ಕೆ ವಿರುದ್ಧವಾಗಿ ಈಗ ನಡೆಯುತ್ತಿದೆ. ನಾನು ಲೋಕಸಭೆಯಿಂದ ಅನರ್ಹಗೊಳ್ಳಬಹುದು ಎಂದು ಯಾವತ್ತೂ ಊಹಿಸಿರಲಿಲ್ಲ. ಆದರೆ ಅದು ನಿಜವಾಗಿ ನನಗೆ ಒಂದು ದೊಡ್ಡ ಅವಕಾಶವನ್ನು ನೀಡಿದೆ ಎಂದು ಭಾವಿಸುತ್ತೇನೆ. ಬಹುಶಃ ನನಗೆ ಸಿಗುವ ಅವಕಾಶಕ್ಕಿಂತ ದೊಡ್ಡದಾಗಿದೆ. ಅದು ರಾಜಕೀಯ ಕೆಲಸ ಮಾಡುವ ವಿಧಾನವಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆರು ತಿಂಗಳ ಹಿಂದೆ ನಿಜವಾದ ನಾಟಕ ಆರಂಭವಾಯಿತು ಎಂದು ನಾನು ಭಾವಿಸುತ್ತೇನೆ. ಇಡೀ ಪ್ರತಿಪಕ್ಷಗಳೇ ಪ್ರಭುತ್ವದ ವಿರುದ್ಧ ಹೋರಾಡಲು…

Read More

ಇಸ್ಲಮಾಬಾದ್: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಜೂನ್ 19ರವರೆಗೆ ಜಾಮೀನು ಮಂಜೂರುಗೊಳಿಸಿ ಆದೇಶ ಹೊರಡಿಸಿದೆ. ಇದಕ್ಕೂ ಮುನ್ನ ಇಮ್ರಾನ್, ಜಾಮೀನು ಅವಧಿ ವಿಸ್ತರಿಸುವಂತೆ ಕೋರಿ ಇಸ್ಲಮಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಕೋರ್ಟ್‌ಗೆ ಹಾಜರಾಗಿದ್ದರು. ಜಾಮೀನು ಅವಧಿ 3 ದಿನ ವಿಸ್ತರಿಸಿದ ನ್ಯಾಯಾಲಯ, ಭ್ರಷ್ಟಾಚಾರ ನಿಗ್ರಹ ದಳದ ಎದುರು ಹಾಜರಾಗಿ ಜಾಮೀನು ಪಡೆಯುವಂತೆ ಸಲಹೆ ನೀಡಿತ್ತು. ಅದರಂತೆ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದಲ್ಲಿ ಇಮ್ರಾನ್ ಹಾಜರಾಗಿದ್ದರು. ಇದೀಗ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಜೂನ್ 19ರವರೆಗೆ ಜಾಮೀನು ಮಂಜೂರು ಮಾಡಿದೆ.

Read More