Author: Prajatv Kannada

ಬೆಂಗಳೂರು: ಬನ್ನೇರುಘಟ್ಟದಲ್ಲಿ ಮಹಿಳೆಯೊಬ್ಬರನ್ನು ಭೀಕರವಾಗಿ ಹತ್ಯೆಗೈಯ್ಯಲಾದ ಘಟನೆ ಬೆಳಕಿಗೆ ಬಂದಿದೆ. 53 ವರ್ಷದ ಗೀತಮ್ಮ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮನೆಯ ಸಮೀಪವೇ ಕೈ ಕಾಲು ರುಂಡ ಕತ್ತರಿಸಿ ಎಸೆಯಲ್ಪಟ್ಟು ನಗ್ನ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆಯಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ ಮಹಿಳೆಯ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. ಉತ್ತರ ಭಾರತ ಮೂಲದ ಮೂರ್ನಾಲ್ಕು ಮಂದಿ ಗೀತಮ್ಮಳ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ಮೂರ್ನಾಲ್ಕು ದಿನಗಳಿಂದ ಬಾಡಿಗೆಗೆ ಇದ್ದ ಯುವಕರು ನಾಪತ್ತೆಯಾಗಿದ್ದು ಇವರೊಂದಿಗೆ ಗೀತಮ್ಮ ಕೂಡಾ ಕಾಣೆಯಾಗಿದ್ದಳು. ಮೇಲ್ನೋಟಕ್ಕೆ ಅವರಿಂದಲೇ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಧಾವಿಸಿ ಪರಿಶೀಲಿಸಿದ್ದಾರೆ.

Read More

ಬೆಂಗಳೂರು: ಹೊಸ ಸಂಸತ್’ನ ವೈಭೋಗ ನೋಡಿ ಕಾಂಗ್ರೆಸ್ ಹೊಟ್ಟೆ ಉರಿದು ಕೊಳ್ಳುತ್ತಿದೆ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ನೂತನ ಸಂಸತ್ತು ಕಟ್ಟಿರುವುದು ಕಾಂಗ್ರೆಸ್ ಗೆ ಸಹಿಸೋಕೆ ಆಗ್ತಾ ಇಲ್ಲ. ಬಿಜೆಪಿಗರು ಕಟ್ಟಿದರು, ಮೋದಿ ಕಟ್ಟಿದ್ರು ಎಂಬ ನೋವು ಕಾಂಗ್ರೆಸ್ ಇದೆ. ಪಾಂಡವರ ಇಂದ್ರಪ್ರಸ್ತಕ್ಕೆ ಹೋಗಿದ್ದ ದುರ್ಯೋಧನಾದಿ ಕೌರವರು ಅದನ್ನು ನೋಡಿ ಹೊಟ್ಟೆ ಉರಿದುಕೊಂಡಿದ್ರು. ಈಗ ಅದೇ ರೀತಿ ಹೊಸ ಸಂಸತ್’ನ ವೈಭೋಗ ನೋಡಿ ಕಾಂಗ್ರೆಸ್ ಹೊಟ್ಟೆ ಉರಿದು ಕೊಳ್ಳುತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಕೌರವರಿಗೆ ಹೋಲಿಸಿದರು. ಇದು ಭಾರತದ ಪ್ರಜಾಪ್ರಭುತ್ವದ ದೇಗುಲ ಅಂತಾ ದೇವೇಗೌಡರು ಚೆನ್ನಾಗಿ ಹೇಳಿದ್ದಾರೆ. ಗುಂಡು-ತುಂಡು, ಸಿಗರೆಟ್ ಕೈಯಲ್ಲಿ ಇದ್ದರೆ ಮಾತ್ರ ಬುದ್ದಿ ಓಡುವ ಜನ ಅವರು. ಅವರು ಮಾತ್ರ ಬುದ್ದಿಜೀವಿಗಳಾ? ಬುದ್ದಿಜೀವಿಗಳ ಬಗ್ಗೆ ಸಿಟಿ ರವಿ ತೀವ್ರ ವಾಗ್ದಾಳಿ ನಡೆಸಿದರು. ಈ ಬುದ್ದಿಜೀವಿಗಳು ಯಾರು? ಮೆಕಾಲೆ ಗರಡಿಯಲ್ಲಿ ಪಳಗಿದವರು. ಮೆಕಾಲೆ ಸದಾ ಭಾರತದ ಬಗ್ಗೆ…

Read More

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ತುಮಕೂರು, ವಿಜಯನಗರ, ಕೋಲಾರ, ಮಂಡ್ಯ, ಮೈಸೂರಿನಲ್ಲಿ ಮಳೆ ಆಗಲಿದೆ. ಮಾಗಡಿ, ವಿರಾಜಪೇಟೆ, ಚಿಂತಾಮಣಿ, ದೇವನಹಳ್ಳಿ, ಶಿಡ್ಲಘಟ್ಟ, ಚಂದೂರಾಯನಹಳ್ಳಿ, ಬೆಂಗಳೂರು ಎಚ್​ಎಎಲ್​, ಗೋಪಾಲ್​ನಗರ, ಮಧುಗಿರಿ, ಗೋಣಿಕೊಪ್ಪಲ್, ಹರದನಹಳ್ಳಿ, ತೊಂಡೆಭಾವಿ, ಬೈಲಹೊಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ, ಕುಣಿಗಲ್, ಚಾಮರಾಜನಗರ, ಹೆಸರಘಟ್ಟ, ಬುಕ್ಕಾಪಟ್ಟಣ, ಮಲವಳ್ಳಿ, ಶ್ರವಣಬೆಳಗೊಳ, ಹಾರಂಗಿ, ಗೌರಿಬಿದನೂರಿನಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನೂ ಎಚ್​ಎಎಲ್​ನಲ್ಲಿ 31.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 31.3 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 32.1 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.1 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Read More

ಬೆಂಗಳೂರು: ಅತ್ತೆ, ಸೊಸೆ ನಡುವೆ ಜಗಳ ಹಚ್ಚಲು ಗ್ಯಾರಂಟಿ ಘೋಷಿಸಿದ್ದಾರೆ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಸಂಸದ ದೇವೇಂದ್ರಪ್ಪ ವಾಗ್ದಾಳಿ ನಡೆಸಿದ್ದಾರೆ. ಅತ್ತೆ ನನಗೆ ಬೇಕು ಅಂತಾರೆ, ಸೊಸೆ ನನಗೆ ಹಣ ಹಾಕಿ ಅಂತಾರೆ. ಗ್ಯಾರಂಟಿ ಹೊಡೆತಕ್ಕೆ ಮೋದಿ ಪ್ರಚಾರ ಮಾಡಿದರೂ ಸೋತೆವು. ಫ್ರೀ ಸಿಗುತ್ತೆ ಎಂದು ಎಲ್ಲರೂ ಕಾಂಗ್ರೆಸ್​​ ಪಕ್ಷಕ್ಕೆ ಮತ ಹಾಕಿದ್ದಾರೆ. ಸೋಮಾರಿತನ, ಬೆಂಕಿ ಹಚ್ಚುವುದಕ್ಕೆ ಈ ಗ್ಯಾರಂಟಿ ಯೋಜನೆ ಮಾಡಲಾಗುತ್ತಿದೆ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಸಂಸದ ದೇವೇಂದ್ರಪ್ಪ ವಾಗ್ದಾಳಿ ನಡೆಸಿದರು.

Read More

ಬೆಂಗಳೂರು: ಕಾಂಗ್ರೆಸ್ ಸುಳ್ಳುಗಾರರು, ಮೋಸಗಾರರ ಪಾರ್ಟಿ ಎಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ವಾಗ್ದಾಳಿ ನಡೆಸಿದರು. ಚುನಾವಣೆ ವೇಳೆ ಕಾಂಗ್ರೆಸ್​​ನವರು ಗ್ಯಾರಂಟಿ ಘೋಷನೆ ಮಾಡಿದ್ದರು. ಅಧಿಕಾರಕ್ಕೆ ಬಂದು 20 ದಿನಗಳಾದರೂ ಗ್ಯಾರಂಟಿ ಜಾರಿ ಮಾಡಿಲ್ಲ. ಕಾಂಗ್ರೆಸ್ ಜನರನ್ನು ಮೂರ್ಖರನ್ನಾಗಿ ಮಾಡಿದೆ, ಕ್ಷಮೆ ಕೇಳಲಿ. ಜನ ಕರೆಂಟ್ ಬಿಲ್ ಕಟ್ಟುತ್ತಿಲ್ಲ, ಬಸ್​​ಗಳಲ್ಲಿ ಟಿಕೆಟ್ ಪಡೆಯುತ್ತಿಲ್ಲ. ಅಡ್ಡ ದಾರಿಯಲ್ಲಿ ಕಾಂಗ್ರೆಸ್ ಅಧಿಕಾರ ಬಂದಿದೆ. ಮೋದಿ ಎಲ್ಲೂ $15 ಲಕ್ಷ ಕೊಡುವ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ. ಕಪ್ಪು ಹಣ ತಂದರೆ 15 ಲಕ್ಷ ರೂ. ಕೊಡ್ತೇವೆ ಅಂತಷ್ಟೇ ಹೇಳಿದ್ದಾರೆ. ಗ್ಯಾರಂಟಿ ಜಾರಿ ಮಾಡದಿದ್ರೆ BJP ಹೋರಾಟ ಮಾಡಲಿದೆ ಎಂದರು.

Read More

ಬೆಂಗಳೂರು: ಐದು ಗ್ಯಾರಂಟಿ ಜಾರಿ ಮಾಡಲು ಷರತ್ತು ಹಾಕಿದರೆ ನಾವು ಒಪ್ಪಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್​ಸಿ ಎನ್​​.ರವಿಕುಮಾರ್​​ ವಾಗ್ದಾಳಿ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆಯಲಿ. 10 ಕೆಜಿ ಅಕ್ಕಿ ಕೊಡಲು ಆಗದಿದ್ರೆ ಕೇಂದ್ರದ ಬಳಿ ಕೇಳ್ತೀವಿ ಎಂದಿದ್ದಾರೆ. ನಮ್ಮಲ್ಲಿ ಆಗಲ್ಲ ಕೇಂದ್ರದ ಬಳಿ ಕೇಳ್ತೀವಿ ಅಂತಾ ಮೊದಲೇ ಹೇಳಿದ್ರಾ? 60 ಕಿ.ಮೀ.ಗೆ ಮಾತ್ರ ಉಚಿತ ಪ್ರಯಾಣ ಅಂತಾ ಷರತ್ತು ಹಾಕ್ತಿದ್ದೀರಿ. ಈಗಾಗಲೇ ಕೆಎಸ್​​ಆರ್​ಟಿಸಿ ನಷ್ಟದಲ್ಲಿದೆ ಎಂದು ಎನ್​​.ರವಿಕುಮಾರ್​ ಹೇಳಿದರು. ಕೆಎಸ್​​ಆರ್​ಟಿಸಿ ಬಸ್​​ ಪಂಕ್ಚರ್, ಡೀಸಲ್ ಹಾಕಿಸಲು ಕಾಸು ಇಲ್ಲ. ನಾಳೆ ಕ್ಯಾಬಿನೆಟ್ ಸಭೆಯ ನಿರ್ಧಾರದ ಬಳಿಕ ನಾವು ಮಾತನಾಡ್ತೇವೆ. ನೀವು ನಡೆದಂತೆ ನಡೆಯದಿದ್ರೆ ವಚನ ಭ್ರಷ್ಟರು ಅಂತಾ ಕರೆಯುತ್ತೇವೆ ಎಂದರು.

Read More

ಬೆಂಗಳೂರು: ಎಲ್ಲಾ ಕಚೇರಿ, ಅಂಗಡಿ ಕನ್ನಡ ನಾಮಫಲಕ ಕಡ್ಡಾಯ ಅನುಷ್ಠಾನಕ್ಕೆ ರಾಮನಗರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಮನವಿ ಮಾಡಲಾಗಿದೆ. ರಾಮನಗರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಗಡಿ ನಾಡು ಹಾಗು ಹಿಂದುಳಿದ ಜಿಲ್ಲೆಗಳಲ್ಲಿ ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಿಬೇಕು. ಕನ್ನಡ ನಾಡು ನುಡಿ ರಕ್ಷಣೆಗೆ ಸರ್ಕಾರ ಬದ್ದವಾಗಿರುವಂತೆ ಮನವಿ ಮಾಡಿದ್ದಾರೆ.

Read More

ಬೆಂಗಳೂರು: ಸಮಾನ ಮನಸ್ಕರ ಒಕ್ಕೂಟದಿಂದ ಮುಖ್ಯಮಂತ್ರಿ ಭೇಟಿ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.‌ರವಿ ವಾಗ್ದಾಳಿ ನಡೆಸಿದ್ದಾರೆ. ಗುಂಡು, ತುಂಡು, ಸಿಗರೇಟ್ ಕೈಯಲ್ಲಿದ್ರೆ ಮಾತ್ರ ಬುದ್ಧಿ ಓಡುವ ಜನ. ಇಂತಹ ಬುದ್ಧಿಜೀವಿಗಳು ಮೆಕಾಲೆ ಗರಡಿಯಲ್ಲಿ ಪಳಗಿದವರು. ಮೆಕಾಲೆ ಸದಾ ಭಾರತವನ್ನು ದಾಸ್ಯದ ಚಿಂತನೆಯಲ್ಲೇ ಯೋಚಿಸ್ತಿದ್ದ. ಮೆಕಾಲೆ ಭಾರತೀಯರ ಸಂಸ್ಕೃತಿಯ ವಿರುದ್ಧ ಇದ್ದವನು. ರಾಜ್ಯ ಇರಬಾರದು ಎನ್ನುವ ಚಿಂತನೆ ಕಾರ್ಲ್ ಮಾರ್ಕ್ಸ್​​ದಾಗಿತ್ತು. ಮಾರ್ಕ್ಸ್​​ ಚಿಂತನೆಯ ಜನ ಭಾರತ ಶ್ರೇಷ್ಠ ಎಂದು ಹೇಳಿದ್ದಾರಾ? ಅಲೆಗ್ಸಾಂಡರ್ ದಿ ಗ್ರೇಟ್, ಅಕ್ಬರ್ ದಿ ಗ್ರೇಟ್ ಅನ್ನೋರು ಇವರು? ದಾಳಿಕೋರರು, ನಮ್ಮ ಸಂಸ್ಕೃತಿ ನಾಶ ಮಾಡಿದವರು‌ ಇವರೆಲ್ಲಾ. ಆರ್ಯಭಟ, ಚಾಣಕ್ಯ, ಅಶೋಕ ಚಕ್ರವರ್ತಿ ಬಗ್ಗೆ ಎಲ್ಲೂ ಹೇಳಿಲ್ಲ. ರಾಜರಾಜಚೋಳ, ರಾಜೇಂದ್ರ ಚೋಳ, ಕರಿಕಾಳ ಚೋಳ ಅರಸರು, ಇಂಡೋನೇಷ್ಯಾ, ಕಾಂಬೋಡಿಯಾವರೆಗೆ ಭಾರತವನ್ನು ವಿಸ್ತರಿಸಿದ್ದರು. ಇಂತಹ ಸಾಧನೆಯನ್ನು ನಮಗೆ ಇತಿಹಾಸದಲ್ಲಿ ಹೇಳಿ ಕೊಡಲಿಲ್ಲ. ಅಶೋಕ್ ಚಕ್ರವರ್ತಿ ಸಾಮ್ರಾಜ್ಯ ಪರ್ಷಿಯಾ ದಾಟಿ ಹೋಗಿತ್ತು. ನಾವು ಹೇಳಿಕೊಟ್ಟಿದ್ದು ಅಕ್ಬರ್ ಗ್ರೇಟ್, ಅಲೆಗ್ಸಾಂಡರ್ ಗ್ರೇಟ್,…

Read More

ಬೆಂಗಳೂರು: ಕೃಷ್ಣಾ-ಭೀಮೆಗೆ ನೀರು ಬಿಡಿ ಎಂದು ಮಹಾರಾಷ್ಟ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರಿಗೆ ಬುಧವಾರ ಪತ್ರ ಬರೆದಿರುವ ಮುಖ್ಯಮಂತ್ರಿ ಅವರು, ಉತ್ತರ ಕರ್ನಾಟಕದ ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಿರು ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ. ಆ ಜಿಲ್ಲೆಗಳ ಜನ ಮತ್ತು ಜಾನುವಾರುಗಳಿಗೆ ಅಗತ್ಯ ಕುಡಿಯುವ ನೀರು ಪೂರೈಸಲು ಕೊಯ್ನಾ ಜಯಲಾಯದಿಂದ ಕೃಷ್ಣಾ ನದಿಗೆ 3 ಟಿಎಂಸಿ ಮತ್ತು ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 3 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರವು ಮೇ 15ಕ್ಕೂ ಮುನ್ನ ಕೃಷ್ಣಾ ನದಿಗೆ 1 ಟಿಎಂಸಿ ನೀರು ಹರಿಸಿರುವುದಕ್ಕೆ ಮುಖ್ಯಮಂತ್ರಿ ಅವರು ಧನ್ಯವಾದ ತಿಳಿಸಿದ್ದು, ಕೂಡಲೇ ಕೃಷ್ಣಾ ನದಿಗೆ ಇನ್ನು ಎರಡು ಟಿಎಂಸಿ ಮತ್ತು ಭೀಮಾ ನದಿಗೆ 3 ಟಿಎಂಸಿ ನೀರು ಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ತಮ್ಮ ಪತ್ರದಲ್ಲಿ…

Read More

ಬೆಂಗಳೂರು: ಕಾಂಗ್ರೆಸ್(Congress) ಬಹುಮತ ಪಡೆದು ಸರ್ಕಾರ ರಚಿಸಿದ್ದಾಯ್ತು. ಸಚಿವರ ಆಯ್ಕೆ ಕೂಡ ಮುಗಿದು ಖಾತೆ ಹಂಚಿಕೆಯಾಗಿದೆ. ನಮಗೂ ಫ್ರೀ ಕರೆಂಟ್‌ ಸಿಗುತ್ತಾ ಎಂದು ಮನೆ ಒಡೆಯ ಚಿಂತಿಸುತ್ತಿದ್ದಾನೆ. ನನ್ನ ಅಕೌಂಟ್‌ಗೆ 2 ಸಾವಿರ ಹಣ ಬರುತ್ತಾ ಅನ್ನೋ ಕಾತರ ಮನೆ ಒಡತಿಯದ್ದಾಗಿದೆ. ನನ್ನ ಬಸ್‌ ಚಾರ್ಜ್‌ ಫ್ರೀ ಆಗುತ್ತಾ ಅಂತಾ ಮನೆಯ ಹೆಣ್ಣು ಮಕ್ಕಳೆಲ್ಲಾ ಕಾಯುತ್ತಿದ್ದಾರೆ. ಉಚಿತ ವಿದ್ಯುತ್ ಬಗ್ಗೆ ಕೆ.ಜೆ.ಜಾರ್ಜ್​ ಜೊತೆ ಸಿಎಂ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದಾರೆ. ಕುಮಾರಕೃಪಾ ರಸ್ತೆಯಲ್ಲಿರುವ ಸಿಎಂ ಸರ್ಕಾರಿ ನಿವಾಸದಲ್ಲಿ ಇಂಧನ ಖಾತೆ ಸಚಿವ ಜಾರ್ಜ್​ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ.

Read More