ಸುಡಾನ್ ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಾಕಷ್ಟು ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರನ್ನು ಕರೆತರಲು ಭಾರತ ಸರ್ಕಾರ ಅಪರೇಷನ್ ಕಾವೇರಿ ಆರಂಭಿಸಿದ್ದು ಇದರ ಅಡಿಯಲ್ಲಿ ಸುಡಾನ್ ನಿಂದ ಭಾರತೀಯರ ಮೊದಲ ಬ್ಯಾಚ್ ಹೊರಟಿದೆ. ಅಪರೇಷನ್ ಕಾವೇರಿ ಮೊದಲ ಬ್ಯಾಚ್ ನಲ್ಲಿ 278 ಪ್ರಯಾಣಿಕರನ್ನ ಹೊತ್ತ ಐಎನ್‌ಎಸ್ ಸುಮೇಧಾ ಹಡಗು ಸುಡಾನ್ನಿಂದ ಜೆಡ್ಡಾಗೆ ಹೊರಟಿದೆ ಎಂದು ವಿದೇಶಾಂಗ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಐಎನ್‌ಎಸ್ ಸುಮೇಧಾದಲ್ಲಿದ್ದ ಭಾರತೀಯರ ಫೋಟೋಗಳನ್ನ ಟ್ವೀಟ್ ಮಾಡಿದ್ದು, ತಮ್ಮ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಹೇಳಲು ಕೆಲವರು ರಾಷ್ಟ್ರಧ್ವಜವನ್ನ ಹಿಡಿದಿದ್ದರು ಎಂದರು. ಅದ್ರಂತೆ ಬಾಗ್ಚಿ, ‘ಆಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್’ನಿಂದ ಮೊದಲ ಬ್ಯಾಚ್ ಭಾರತೀಯರು ಹೊರಟಿದ್ದಾರೆ. ಐಎನ್‌ಎಸ್ ಸುಮೇಧಾ 278 ಜನರೊಂದಿಗೆ ಸುಡಾನ್ ಏರ್ ಫೋರ್ಟ್ ನಿಂದ ಜೆಡ್ಡಾಗೆ ಹೊರಟಿದೆ’ ಎಂದು ಟ್ವೀಟ್ ಮಾಡಿದ್ದಾರೆ.
Author: Prajatv Kannada
ಪಾಕಿಸ್ತಾನ ಮೂಲದ ಕೆನಡಾದ ಖ್ಯಾತ ಅಂಕಣಕಾರ ಮತ್ತು ಪ್ರಸಿದ್ಧ ಟಿವಿ ನಿರೂಪಕ ತಾರೆಕ್ ಫತಾಹ್ ಇಂದು ನಿಧನರಾಗಿದ್ದಾರೆ. ಫತಾಹ್ ದೀರ್ಘಕಾಲದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದು ಅವರಿಗೆ 73 ವರ್ಷ ವಯಸ್ಸಾಗಿತ್ತು. ಫತಾಹ್ ಸಾವಿನ ಸುದ್ದಿಯನ್ನು ಪುತ್ರಿ ನತಾಶಾ ಫತಾಹ್ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ ಖಚಿತಪಡಿಸಿದ್ದಾರೆ. ಪಂಜಾಬ್‌ನ ಸಿಂಹ, ಹಿಂದುಸ್ತಾನದ ಮಗ, ಕೆನಡಾದ ಪ್ರೇಮಿ, ಸತ್ಯದ ಮಾತುಗಾರ, ನ್ಯಾಯಕ್ಕಾಗಿ ಹೋರಾಟಗಾರ, ದೀನದಲಿತರು, ಹಿಂದುಳಿದವರು ಮತ್ತು ತುಳಿತಕ್ಕೊಳಗಾದವರ ದನಿ ತಾರೆಕ್ ಫತಾಹ್ ನಿಧನರಾಗಿದ್ದಾರೆ. ಅವರ ಕ್ರಾಂತಿಯು ಅವನನ್ನು ತಿಳಿದಿರುವ ಮತ್ತು ಪ್ರೀತಿಸುವ ಎಲ್ಲರೊಂದಿಗೆ ಮುಂದುವರಿಯುತ್ತದೆ. ನೀವು ನಮ್ಮೊಂದಿಗೆ ಸೇರುತ್ತೀರಾ?’ ಎಂದು ನತಾಶಾ ಟ್ವೀಟ್ ಮಾಡಿದ್ದಾರೆ. 1949 ನವೆಂಬರ್ 20ರಂದು ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ತಾರೆಕ್ ಫತಾಹ್ 1980ರ ಆರಂಭದಲ್ಲಿ ದಶಕದಲ್ಲಿ ಕೆನಡಾಗೆ ವಲಸೆ ಹೋಗಿದ್ದರು. ಅಲ್ಲಿ ಅವರು ರಾಜಕೀಯ ಕಾರ್ಯಕರ್ತ, ಪತ್ರಕರ್ತ, ಟಿವಿ ನಿರೂಪಕರಾಗಿ ಕೆಲಸ ಮಾಡಿದ್ದರು. ಅವರು ‘ಚೇಸಿಂಗ್ ಎ ಮಿರಾಜ್: ದಿ ಟ್ರಾಜಿಕ್ ಇಲ್ಯೂಷನ್ ಆಫ್ ಆನ್ ಇಸ್ಲಾಮಿಕ್ ಸ್ಟೇಟ್’ ಮತ್ತು ‘The…
ಇಸ್ಲಾಮಾಬಾದ್: ಪಾಕಿಸ್ತಾನದ ಸ್ವಾತ್‌ನ ಭಯೋತ್ಪಾದನಾ ನಿಗ್ರಹ ಕಚೇರಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ ಕನಿಷ್ಠ 12 ಮಂದಿ ಪೊಲೀಸರು ಮೃತಪಟ್ಟಿದ್ದು. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಖೈಬರ್ ಪುಂಖ್ಯಾ ಪ್ರಾಂತ್ಯದ ಪೊಲೀಸ್ ಮಹಾನಿರೀಕ್ಷಕ ಅಖ್ತರ್ ಹಯಾತ್ ಖಾನ್ ತಿಳಿಸಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಭಯೋತ್ಪಾದನಾ ನಿಗ್ರಹ ಇಲಾಖೆ ಡಿಐಜಿ ಖಾಲಿದ್ ಸೊಹೈಲ್, ಪೊಲೀಸ್ ಠಾಣೆಯ ಮೇಲೆ ಯಾವುದೇ ಬಾಂಬ್ ದಾಳಿ ಅಥವಾ ಗುಂಡಿನ ದಾಳಿ ನಡೆದಿಲ್ಲ. ಇದು ಆತ್ಮಹತ್ಯಾ ದಾಳಿಯೂ ಅಲ್ಲ. ಮದ್ದುಗುಂಡುಗಳು ಮತ್ತು ಶೆಲ್‌ಗಳನ್ನು ಸಂಗ್ರಹಿಸಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆಯೇ ಹೊರತಾಗಿ ಪೊಲೀಸ್ ಠಾಣೆಯ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ಏನೆಂಬುದರ ಕುರಿತು ತನಿಖೆ ನಡೆಯುತ್ತಿದೆ. ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸುತ್ತಿವೆ. ಕುಸಿದ ಕಟ್ಟಡ ಅತ್ಯಂತ ಹಳೆಯದಾಗಿತ್ತು. ಹಾಗಾಗಿ ಸಿಬ್ಬಂದಿಯನ್ನ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಟಿಡಿ ಡಿಐಜಿ ತಿಳಿಸಿದ್ದಾರೆ.
ಸಿಡ್ನಿ: ಭಾರತದ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಆಸ್ಟ್ರೇಲಿಯಾ ಸರ್ಕಾರವು ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಆಸ್ಟ್ರೇಲಿಯಾ ಸರ್ಕಾರವು ಪ್ರಶಸ್ತಿ ನೀಡುತ್ತಿರುವ ಫೋಟೋವನ್ನು ಆಸ್ಟ್ರೇಲಿಯಾದ ರಾಯಭಾರಿ ಬ್ಯಾರಿ ಓ ಫಾರೆಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರತನ್ ಟಾಟಾರನ್ನು ಉದ್ಯಮ, ವ್ಯಾಪಾರ ಹಾಗೂ ಲೋಕೋಪಕಾರದ ದೈತ್ಯ ಎಂದು ಶ್ಲಾಘಿಸಿದರು. ಅವರ ಕೊಡುಗೆಗಳು ಆಸ್ಟ್ರೇಲಿಯಾದಲ್ಲಿ ಮಹತ್ವದ ಪ್ರಭಾವ ಬೀರಿವೆ ಎಂದಿದ್ದಾರೆ. ಟ್ವೀಟ್‍ನಲ್ಲಿ ಏನಿದೆ?: ರತನ್ ಟಾಟಾ ಅವರ ಉದ್ಯಮ ಮತ್ತು ಲೋಕೋಪಕಾರದ ಟೈಟನ್ ಆಗಿದ್ದಾರೆ. ಅವರ ಕೊಡುಗೆಗಳು ಆಸ್ಟ್ರೇಲಿಯಾದಲ್ಲಿಯೂ ಗಮನಾರ್ಹ ರೀತಿಯಲ್ಲಿ ಪ್ರಭಾವ ಬೀರಿವೆ. ಆಸ್ಟ್ರೇಲಿಯಾ-ಭಾರತ ಸಂಬಂಧಕ್ಕೆ ರತನ್ ಟಾಟಾ ಅವರ ದೀರ್ಘಕಾಲದ ಶ್ರಮವನ್ನು ಗುರುತಿಸಿ Order of Australia ಗೌರವವನ್ನು ನೀಡಲು ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ. ಫಾರೆಲ್ ತಮ್ಮ ಟ್ವೀಟ್‍ನಲ್ಲಿ ರತನ್ ಟಾಟಾ ಅವರನ್ನು ಗೌರವಿಸುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಆಸ್ಟ್ರೇಲಿಯನ್ ರಾಯಭಾರಿ ಹಂಚಿಕೊಂಡ ಫೋಟೋಗಳಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಸಹ ಕಾಣಿಸಿಕೊಂಡಿದ್ದಾರೆ.
ತಿರುವನಂತಪುರಂ: 8 ವರ್ಷದ ಬಾಲಕಿಯೊಬ್ಬಳು (Girl) ಮೊಬೈಲ್ (Mobile) ಬಳಸುತ್ತಿದ್ದ ಸಂದರ್ಭ ಅದು ಸ್ಫೋಟಗೊಂಡು (Explode) ಆಕೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕೇರಳದಲ್ಲಿ (Kerala) ಸೋಮವಾರ ತಡರಾತ್ರಿ ನಡೆದಿದೆ. ಕೇರಳದ ತಿರುವಿಲ್ವಾಮಲದಲ್ಲಿ ಘಟನೆ ನಡೆದಿದೆ. ಮೃತ ಬಾಲಕಿಯನ್ನು ಆದಿತ್ಯಶ್ರೀ ಎಂದು ಗುರುತಿಸಲಾಗಿದೆ. ಆಕೆ ಸೋಮವಾರ ರಾತ್ರಿ ಸುಮಾರು 10:30ರ ವೇಳೆಗೆ ಮೊಬೈಲ್ ಫೋನ್ ಅನ್ನು ಬಳಸುತ್ತಿದ್ದಾಗ ಅದು ಸ್ಫೋಟಗೊಂಡಿದೆ. ಬಾಲಕಿ ಮೊಬೈಲಿನಲ್ಲಿ ವೀಡಿಯೋ ವೀಕ್ಷಿಸುತ್ತಿದ್ದಳು ಎನ್ನಲಾಗಿದೆ. ಮೊಬೈಲ್ ಆಕೆಯ ಕೈಯಲ್ಲಿದ್ದಾಗಲೇ ಸ್ಫೋಟಗೊಂಡಿದ್ದರಿಂದ ಆಕೆಗೆ ಗಂಭೀರವಾದ ಗಾಯಗಳಾಗಿತ್ತು. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಆಕೆ ಕೊನೆಯುಸಿರೆಳೆದಿದ್ದಾಳೆ. ಆದಿತ್ಯಶ್ರಿ ಸ್ಥಳೀಯ ಶಾಲೆಯಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತಿರುವನಂತಪುರಂ: ಕೇರಳದಲ್ಲಿ (Kerala)ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ಸರ್ಕಾರ ಕೇಂದ್ರವು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಒತ್ತು ನೀಡುತ್ತದೆ ಎಂದಿದ್ದಾರೆ. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಿರ್ವಹಿಸಿದ ಪ್ರಧಾನಿ ಮೋದಿ ಕೇರಳ ಅಭಿವೃದ್ಧಿ ಆದರೆ ದೇಶ ವೇಗವಾಗಿ ಅಭಿವೃದ್ದಿ ಹೊಂದುತ್ತದೆ ಎಂದು ಹೇಳಿದ್ದಾರೆ. ಮೋದಿ ಇಂದು ತಿರುವನಂತಪುರಂ- ಕಾಸರಗೋಡು ನಡುವಿನ ಕೇರಳದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ. ತಿರುವನಂತಪುರಂನಲ್ಲಿ ಮೋದಿಯವರಿಗೆ ಅದ್ದೂರಿ ಸ್ವಾಗತ ನೀಡಲಾಗಿತ್ತು. ಅವರು 1,500 ಕೋಟಿ ವೆಚ್ಚದ ಡಿಜಿಟಲ್ ಸಯನ್ಸ್ ಪಾರ್ಕ್ ಗೆ ಅಡಿಗಲ್ಲು ಹಾಕಿದ್ದು, ಕೊಚ್ಚಿ ವಾಟರ್ ಮೆಟ್ರೊಗೆ (water metro) ಚಾಲನೆ ನೀಡಿದ್ದಾರೆ.ಕೇರಳವು ಜಾಗೃತ ಮತ್ತು ವಿದ್ಯಾವಂತ ಜನರ ರಾಜ್ಯವಾಗಿದೆ, ಇಲ್ಲಿನ ಜನರ ಕಠಿಣ ಪರಿಶ್ರಮ ಮತ್ತು ನಮ್ರತೆ ಅವರ ಗುರುತಿನ ಭಾಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ತಿರುವನಂತಪುರಂನಲ್ಲಿ ಡಿಜಿಟಲ್ ಸೈನ್ಸ್ ಪಾರ್ಕ್‌ಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.
ನವದೆಹಲಿ: ಕರ್ನಾಟಕದಲ್ಲಿ ಮುಸ್ಲಿಮರ ಮೀಸಲಾತಿ (Karnataka Muslim Reservation) ರದ್ದುಗೊಳಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ತಡೆಯಾಜ್ಞೆ ನೀಡಿದೆ. ಮೇ 9 ರವರೆಗೆ ಈ ಆದೇಶವನ್ನು ಜಾರಿಗೊಳಿಸದಂತೆ ಕರ್ನಾಟಕ ಸರ್ಕಾರಕ್ಕೆ (Karnataka Government) ಸುಪ್ರೀಂ ಕೋರ್ಟ್ ಹೇಳಿದೆ. 2ಬಿ ಅಡಿ ಮುಸ್ಲಿಮರಿಗಿದ್ದ ಶೇ.4 ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿತ್ತು. ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ನ್ಯಾ. ಕೆ.ಎಂ. ಜೋಸೆಫ್ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಮೇ 9 ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯವರೆಗೂ ಮೀಸಲಾತಿ ಜಾರಿಗೆ ನ್ಯಾಯಾಲಯ ತಡೆ ನೀಡಿದೆ. ಅಫಿಡವಿಟ್ ಸಿದ್ಧವಾಗಿದೆ. ಆದರೆ ಸಾಂವಿಧಾನಿಕ ಪೀಠದ ವಿಚಾರಣೆಯಲ್ಲಿದ್ದೇನೆ. ಹೀಗಾಗಿ ವಿಚಾರಣೆ ಮುಂದೂಡಬೇಕು ಎಂದು ರಾಜ್ಯ ಸರ್ಕಾರದ ಪರ ವಕೀಲರು ಮನವಿ ಮಾಡಿದ್ದರು. ಆದರೆ ಇದಕ್ಕೆ ಅರ್ಜಿದಾರ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದರು. ಅರ್ಜಿದಾರ ಪರ ವಕೀಲರಾದ ದುಷ್ಯಂತ್ ದವೆ, ಇದು ಅತ್ಯಂತ ಮಹತ್ವದ ಪ್ರಕರಣ. ವಿಚಾರಣೆ…
ಪಾಟ್ನಾ: ಬಿಜೆಪಿ (BJP) ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಒಂದಾಗುವ ಅಗತ್ಯವಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬಿಹಾರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರು ಸೋಮವಾರ ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದರು. ಈ ವೇಳೆ ಅಭಿವೃದ್ಧಿ ಹಾಗೂ ರಾಜಕೀಯ ವಿಷಯಗಳನ್ನು ಚರ್ಚಿಸಿದರು. ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾನರ್ಜಿ, ವಿರೋಧ ಪಕ್ಷಗಳು ಒಟ್ಟಾಗಿ ಕುಳಿತು ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ. ನಮ್ಮ ಧ್ಯೆಯ ಸ್ಪಷ್ಟವಾಗಿದ್ದರೆ, ಯಾವುದೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಬಿಹಾರದಲ್ಲಿ ನಿತೀಶ್ ಕುಮಾರ್ ಹಾಗೂ ತೇಜಸ್ವಿ ಯಾದವ್ ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಶ್ಲಾಘಿಸಿದರು. ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ನೇತೃತ್ವದ 1970ರ ದಶಕದಲ್ಲಿ ಬಿಹಾರದಿಂದ ಪ್ರಾರಂಭವಾದ ಚಳುವಳಿಯಂತೆ ರಾಜ್ಯದಲ್ಲಿ ಮತ್ತೊಂದು ಸಭೆ ನಡೆಯಬೇಕು ಎಂದು ನಿತೀಶ್ ಕುಮಾರ್…
ಭೋಪಾಲ್: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಹೃದಯ-ಶ್ವಾಸಕೋಶ ವೈಫಲ್ಯದಿಂದ (Cardio Pulmonary Failure) 2ನೇ ಚೀತಾ ಸಾವನ್ನಪ್ಪಿದೆ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ 12 ಚೀತಾಗಳ ಪೈಕಿ ಉದಯ್ ಹೆಸರಿನ ಗಂಡು ಚೀತಾ (Cheetah) ಭಾನುವಾರ ಸಾವನ್ನಪ್ಪಿತ್ತು. ಇದರಿಂದ ಚೀತಾಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯ ಕೇಳಿಬಂದಿತ್ತು. ಈ ಬೆನ್ನಲ್ಲೇ ವೈದ್ಯರು (Doctors) ಚೀತಾ ಸಾವಿಗೆ ಕಾರಣವನ್ನು ತಿಳಿಸಿದ್ದಾರೆ. ಉದಯ್ ಹೆಸರಿನ ಚೀತಾದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಅದು ಹೃದಯ-ಶ್ವಾಸಕೋಶದ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ಜೆ.ಎಸ್ ಚೌಹಾಣ್ ತಿಳಿಸಿದ್ದಾರೆ. ಜಬಲ್‌ಪುರ ಮತ್ತು ಭೋಪಾಲ್‌ನ ತಲಾ ಒಬ್ಬ ವಿಧಿವಿಜ್ಞಾನ ತಜ್ಞರನ್ನೊಳಗೊಂಡ ಐವರು ತಜ್ಞರ ಸಮಿತಿ ಶವ ಪರೀಕ್ಷೆ ನಡೆಸಿತು. ಚೀತಾದ ರಕ್ತ ಮತ್ತು ಇತರ ಪ್ರಮುಖ ಅಂಗಾಂಗಗಳ ಮಾದರಿಯನ್ನ ಜಬಲ್‌ಪುರದ ನಾನಾಜಿ ದೇಶ್‌ಮುಖ್ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ವನ್ಯಜೀವಿ ಫೊರೆನ್ಸಿಕ್ ವಿಭಾಗಕ್ಕೆ ಕಳುಹಿಸಲಾಗಿದೆ. ಸುಧಾರಿತ ಪರೀಕ್ಷೆಗಳ ಫಲಿತಾಂಶಗಳು…
ಮಂಡ್ಯ :- ಕ್ಷೇತ್ರದ ಜನತೆ ಬಳಿ ಮತ ಭಿಕ್ಷೆಗೆ ತೆರಳಿದ್ದ ಶಾಸಕರಿಗೆ ಮತದಾರರು ಹಾಲಿನ ಅಭಿಷೇಕ ಮಾಡಿರುವ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬಾಳೆ ಹೊನ್ನಿಗ ಗ್ರಾಮಕ್ಕೆ ಮಂಗಳವಾರ ಶಾಸಕ ಕೆ.ಅನ್ನದಾನಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಗ್ರಾಮದ ಯುವಕರು ಶಾಸಕರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಹಾಲಿನ ಅಭಿಷೇಕ ಮಾಡಿದ ಮತದಾರರ ಪ್ರೀತಿಗೆ ಶಾಸಕ ಅನ್ನದಾನಿ ಕೃತಜ್ಞರಾಗಿದ್ದಾರೆ. ಪಂಚರತ್ನ ಯೋಜನೆಗಳನ್ನು ಜಾರಿಗೆ ತರಬೇಕೆಂಬ ಉದ್ದೇಶದಿಂದ ಕುಮಾರಸ್ವಾಮಿ ಅವರು ಹಗಲು ರಾತ್ರಿ ಎನ್ನದೆ ರಾಜ್ಯಾದ್ಯಂತ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಈ ಬಾರಿ ಜೆಡಿಎಸ್ 123 ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಅನ್ನದಾನಿ ಪ್ರಚಾರದ ವೇಳೆ ವಿಶ್ವಾಸ ವ್ಯಕ್ತಪಡಿಸಿದರು. ವರದಿ : ಗಿರೀಶ್ ರಾಜ್ ಮಂಡ್ಯ