ಕೋಲಾರ : ಜಿಡ್ಡುಗಟ್ಟಿದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡುವೇ, ಜಿಲ್ಲಾಡಳಿತ, ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದರೊಂದಿಗೆ ಕಚೇರಿಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ಶಾಸಕರಾದ ನಂತರ ಮೊದಲ ಬಾರಿಗೆ ನಗರದಲ್ಲಿನ ಕೋಲಾರಮ್ಮ ದೇವಾಲಯ, ಮಸೀದಿ, ಚಚ್‌ರ್‍ಗಳಿಗೆ ಅಭಿಮಾನಿಗಳೊಂದಿಗೆ ಭೇಟಿ ನೀಡಿದ ನಂತರ ನಗರ ಹೊರವಲಯದ ನಂದಿನಿ ಕಲ್ಯಾಣ ಮಂಟಪದಲ್ಲಿ ನಡೆದ ಅಭಿನಂದನಾ ಹಾಗು ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿ, ವಾರದಲ್ಲಿ 6 ದಿನ ಇಲ್ಲೇ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದರು. ಗೆಲುವಿಗೆ ಸ್ರಮಿಸಿದವರಿಗೆ ಧನ್ಯವಾದ: ನಾನು ಯಾರ ಮೇಲೂ ದೂಷಣೆ ಮಾಡುವುದಿಲ್ಲ, ನಾನು ಮುಖಂಡ ಎಂದು ಭಾವಿಸಿಲ್ಲ ನಾನೂ ಒಬ್ಬ ಕಾರ್ಯಕರ್ತನಂತಿದ್ದು, ಜನರ ನಡುವೆ ಇದ್ದು ಕೆಲಸ ಮಾಡುವೆ. ನಾನು ಸೋಲುವೆ ಎಂದು ಹೇಳುತ್ತಿದ್ದರು, ಆದರೆ ಅದನ್ನೇ ನಾನು ಸವಾಲಾಗಿ ಸ್ವೀಕರಿಸಿದೆ, ನನ್ನ ಗೆಲುವಿಗೆ ಸಹಕಾರ ನೀಡಿದ ಸಿದ್ದರಾಮಯ್ಯ, ರಮೇಶ್‌ಕುಮಾರ್, ಶ್ರೀನಿವಾಸಗೌಡ, ಕೃಷ್ಣಬೈರೇಗೌಡ, ಸಿ.ಎಂ.ಮುನಿಯಪ್ಪ, ಅನಿಲ್‌ಕುಮಾರ್, ನಸೀರ್ ಅಹಮದ್ ಎಲ್ಲರಿಗೂ ಧನ್ಯವಾದ ಎಂದರು. ನಾಳೆಯಿಂದ ನಾಲ್ಕು ದಿನಗಳ…
Author: Prajatv Kannada
ಚಿಕ್ಕಬಳ್ಳಾಪುರ : ಕ್ಷೇತ್ರದ ಸರ್ಕಾರಿ ಪೌಢಶಾಲೆಗಳ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಂದು ಸಾವಿರ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರುಪಾಯಿಗಳ ಸಹಾಯ ಧನವನ್ನು ತಮ್ಮ ಸ್ವಂತ ಹಣದಿಂದ ಕೊಡುತ್ತೇನೆ ಎಂದು ನೂತನ ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಪ್ರೌಢಶಾಲೆಯಿಂದ 5 ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ವಿಶೇಷ ತರಬೇತಿ ನೀಡುವ ಮೂಲಕ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅವರನ್ನು ರಾರಯಂಕ್ ಗಳಿಸುವಂತೆ ಮಾಡಲಾಗುವುದು ಎಂದರು. ಪ್ರತಿಭಾವಂತ ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್: ಪ್ರತಿ ಶಾಲೆಯಿಂದ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತ್ಯೇಕ ಹಾಸ್ಟೆಲ್‌ನಲ್ಲಿ ಇರಿಸಲಾಗುವುದು. ಅವರಿಗೆ ಸರ್ಕಾರಿ ಶಾಲೆಯ ಶಿಕ್ಷಕರೇ ಕೋಚಿಂಗ್ ನೀಡುತ್ತಾರೆ. ಅವರಿಗೆ ತಗಲುವ ಎಲ್ಲಾ ಖರ್ಚುಗಳನ್ನು ತಾವೇ ಭರಿಸುತ್ತಿರುವುದಾಗಿ ಹೇಳಿದರು. ಕಾರ್ಪೊರೇಟ್ ಶಾಲೆಗಳ ಮಾದರಿಯಲ್ಲಿ ಎಲ್ಲಾ ಶಾಲೆಗಳಲ್ಲಿ ಪಾಠ ಪ್ರವಚನಗಳು ನಡೆಯುವಂತೆ ಮಾಡಲಾಗುವುದು. ವಿಶೇಷ ರೀತಿಯಲ್ಲಿ ಎಲ್ಲಾ ಶಾಲೆಗಳಿಗೆ…
ಬೇಸಿಗೆಯಲ್ಲಿ ಹೆಚ್ಚಿನ ಉಷ್ಣದಿಂದಾಗಿ ದೇಹವು ನಾನಾ ಬಾಧೆಗೆ ಒಳಗಾಗುತ್ತದೆ. ಬಿಸಿಲಲ್ಲಿ ಕೂಲ್ ಆಗಿರೋಣ ಅಂತ ತಂಪು ಪಾನೀಯಗಳನ್ನ ಸೇವಿಸಿದ್ರೆ ಆರೋಗ್ಯಕ್ಕೆ ಮತ್ತಷ್ಟು ಹಾನಿಯಾಗುತ್ತದೆ. ಹೀಗಾಗಿ ದೇಹಕ್ಕೆ ತಂಪು ನೀಡೋ ರಾಗಿಯಿಂದ ಮಾಡಿದ ಆಹಾರ ಬೇಸಿಗೆಗೆ ಹೇಳಿ ಮಾಡಿಸಿದ್ದು. ಅದರಲ್ಲೂ ಬೇಸಿಗೆಯಲ್ಲಿ ಪ್ರತಿದಿನ ರಾಗಿ ಗಂಜಿ ಅಥವಾ ರಾಗಿ ಅಂಬಲಿ ಮಾಡಿ ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಅದನ್ನ ಹೇಗೆ ಮಾಡೋದಪ್ಪಾ ಅಂತೀರಾ? ಇಲ್ಲಿದೆ ನೋಡಿ ಸಿಂಪಲ್ ವಿಧಾನ ಬೇಕಾಗುವ ಸಾಮಾಗ್ರಿಗಳು: ರಾಗಿ ಹಿಟ್ಟು – 4 ಚಮಚ 2. ಪುಡಿ ಮಾಡಿದ ಜೀರಿಗೆ – 1/2 ಚಮಚ 3. ಮೊಸರು ಅಥವಾ ಮಜ್ಜಿಗೆ – 1 ಕಪ್ 4. ನೀರು – 2 ಲೋಟ 5. ಉಪ್ಪು – ರುಚಿಗೆ ತಕ್ಕಷ್ಟು ಮಾಡುವ ವಿಧಾನ: * ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಹಾಕಿ ಅದಕ್ಕೆ 1/2 ಕಪ್ ನಷ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಳಿಕ ಉಳಿದ ನೀರು ಹಾಕಿ ಕಲಸಿಕೊಳ್ಳಿ. *…
ಬೆಳಗಾವಿ : ಕಾಂಗ್ರೆಸ್ ಸರ್ಕಾರದ ಅಧಿಕಾರವಧಿ ಇನ್ನೂ ಐದು ವರ್ಷಗಳಿವೆ. ಇದೇನೂ ಅಂತ್ಯವಲ್ಲ, ಆರಂಭ. ರಾಜಕಾರಣದಲ್ಲಿ ತಾಳ್ಮೆ ಹಾಗೂ ದೂರದೃಷ್ಟಿ ಇರಬೇಕು ಅವರೆಡೂ ನನಗಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ(Lakshmana Savadi) ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಸೌಜನ್ಯಯುತ ಭೇಟಿ ಅಷ್ಟೇ. ಈ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದಷ್ಟೆ ಹೇಳಿದರು.
ಕೊಪ್ಪಳ: ತಾಲೂಕಿನ ಮಂಗಳಾಪುರ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ, ಡಿವೈಡರ್ಗೆ ಮಿನಿ ಲಾರಿ ಡಿಕ್ಕಿಯಾಗಿ ತಾಯಿ ಮಗ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಕೊಪ್ಪಳದ ತೆಗ್ಗಿನಕೇರಿ ನಿವಾಸಿಗಳಾದ ರೇಣುಕಮ್ಮ(50), ಪ್ರಭು(25) ಮೃತರು. ಇನ್ನುಳಿದ 6 ಜನರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ಅಪಘಾತಗಳನ್ನ ತಡೆಯಲು ಎಷ್ಟೇ ಮುಂಜಾಗೃತ ಕ್ರಮಗಳನ್ನು ಕೈಗೊಂಡರು, ತಡೆಯಲಾಗುತ್ತಿಲ್ಲ. ಅದರಂತೆ ಹುಣಸೂರು (Hunsur) ತಾಲೂಕಿನ ಬಿಳಿಗೆರೆಗಾಯ ಬಳಿ ಬೈಕ್ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಸುಹೇಬ್(24) ಮೃತ ವ್ಯಕ್ತಿ. ಇನ್ನು ಹಿಂಬದಿ ಸವಾರ ಜುನೇದ್‌ಗೆ ಗಾಯಗಳಾಗಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರ: ರಾಜಕೀಯ ವೈಷಮ್ಯ ಹಾಗೂ ಹಳೆ ದ್ವೇಷ ಹಿನ್ನಲೆ ಮೂರುವರೇ ಎಕರೆಯಲ್ಲಿ 165 ಗಿಡಗಳನ್ನು ಕಡಿದ ನಾಶಮಾಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಣೂರು ಹೋಬಳಿಯ ಈಜುಕುಂಟೆ ಗ್ರಾಮದಲ್ಲಿ ನಡೆದಿದೆ. ರೈತ ವೆಂಕಟೇಶ್’ಗೆ ಸೇರಿದ ಜಮೀನಾಗಿದ್ದು, ದರಖಾಸ್ತು ಜಮೀನಲ್ಲಿ ಅರ್ಜಿ ಸಲ್ಲಿಸಿ ಮಾವು ಗಿಡಗಳನ್ನು ನೆಟ್ಟಿದ್ದರು. ಕಿಡಿಗೇಡಿಗಳಿಂದ ಮೂರನೇ ಬಾರೀಗೆ ಮಾವಿನ ಗಿಡಗಳ ನಾಶವಾಗಿದೆ. ಆದ್ದರಿಂದ ರೈತ ವೆಂಕಟೇಶ್ ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಇನ್ನೂ ಈ ಘಟನೆ ಸಂಭಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ 2023-24ರ ಶೈಕ್ಷಣಿಕ ವರ್ಷ ಪ್ರಾರಂಭವನ್ನು ಹಬ್ಬದ ರೀತಿಯಲ್ಲಿ ಸಡಗರದಿಂದ ಆ ಯೋಜನೆ ಮಾಡಿದ ಶಾಸಕರು ಸರ್ಕಾರಿ ಶಾಲೆಯ ಮಕ್ಕಳಿಗೆ ಜ್ಞಾನದ ಅರಿವು ಮೂಡಿಸುವ ರೀತಿಯಲ್ಲಿ ವಿಭಿನ್ನ ರೀತಿ ವಿನ್ಯಾಸಗೊಳಿಸಿ ಸಾಂಪ್ರದಾಯಿಕ ರೀತಿಯಲ್ಲಿ ಮಕ್ಕಳ ಮೇಲೆ ಪುಷ್ಪವೃಷ್ಟಿ ಹೂಗುಚ್ಚ,ಪಠ್ಯಪುಸ್ತಕ ಕೊಟ್ಟು ಸಿಹಿ ತಿನಿಸುವ ಮೂಲಕ ಮಕ್ಕಳನ್ನು ಆಕರ್ಷಿಸುವ ರೀತಿಯಲ್ಲಿ ಶಾಲೆಗೆ ಬರಮಾಡಿಕೊಂಡಿದ್ದು ವಿಶೇಷ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಾದರಿಯಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭ ಹೇಗಿತ್ತು ಎನ್ನುವುದರ ಸ್ಟೋರಿ ಇಲ್ಲಿದೆ ನೋಡಿ. ಹೌದು ವಿಭಿನ್ನ ಅತ್ಯಾಧುನಿಕ ರೀತಿಯಲ್ಲಿ ಖಾಸಗಿ ಶಾಲೆಗಳು ಮಕ್ಕಳನ್ನು ಹಾಗೂ ಪೋಷಕರನ್ನು ತಮ್ಮದೇ ಆದ ಶೈಲಿಯಲ್ಲಿ ಸ್ಪರ್ಧಾತ್ಮಕವಾಗಿ ಆಕರ್ಷಣೆಗೆ ಮುಂದಾಗಿರುವ ಸಂದರ್ಭದಲ್ಲಿ ಅವರಿಗಿಂತ ನಾವೇನು ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ವೈಯಕ್ತಿಕ ಖರ್ಚಿನಿಂದ ಶಾಲೆಯ ಗೋಡೆಗಳ ಮೇಲೆ ಮಕ್ಕಳಿಗೆ ಅರಿವು ಮೂಡಿಸುವ ಮಾದರಿಯಲ್ಲಿ ಶೈಕ್ಷಣಿಕ ಮಾಹಿತಿಯ ಚಿತ್ರಕಲೆಗಳನ್ನು ಬಿಡಿಸುವ ಮೂಲಕ ಮಕ್ಕಳನ್ನು ಹಾಗೂ ಪೋಷಕರನ್ನು ಆಕರ್ಷಿಸಲು ಮುಂದಾಗಿದ್ದಾರೆ…
ಮೈಸೂರು : ಲವರ್ ಗೆ ಮೆಸೇಜ್ ಮಾಡಿದ ರೂಂ ಮೇಟ್ ಗೆ ಚಾಕು ಇರಿದಿರುವ ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ನಡೆದಿದೆ. ಶಿವಕುಮಾರ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಯುವಕ. ಶಿವಕುಮಾರ್ ಹಾಗೂ ಶ್ರೇಯಸ್ ಇಬ್ಬರು ರೂಮ್ ಮೇಟ್ ಗಳಾಗಿದ್ದರು. ಸ್ನೇಹಿತನ ಲವರ್ ಜೊತೆ ಸಂಪರ್ಕ ಬೆಳೆಸಿದ ಶಿವಕುಮಾರ್ ಆಕೆಯ ಜೊತೆ ಚಾಟ್ ಮಾಡುತ್ತಿದ್ದ. ಈ ವಿಚಾರ ಶ್ರೇಯಸ್ ಗೆ ಗೊತ್ತಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಲವರ್ ತಂಟೆಗೆ ಬಾರದಂತೆ ಶಿವಕುಮಾರ್ ಗೆ ಎಚ್ಚರಿಕೆ ನೀಡಿದ್ದನ್ನು. ಹೀಗಿದ್ದೂ ಶಿವಕುಮಾರ್ ಆಗಾಗ ಪ್ರಿಯಾಗೆ ಮೆಸೇಜ್ ಮಾಡುತ್ತಿದ್ದ. ಇದೇ ವಿಚಾರವಾಗಿ ನಂಜನಗೂಡು ರಿಂಗ್ ರಸ್ತೆ ಬಳಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಶಿವಕುಮಾರ್ ಗೆ ಶ್ರೇಯಸ್ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ಡೆಕೋರೇಟರ್ಸ್ ಗೋಡೌನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಲಕ್ಷಾಂತರ ಮೌಲ್ಯದ ಪದಾರ್ಥಗಳು ನಾಶವಾಗಿದೆ.ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಫೈರಿಂಗ್ ರೇಂಜ್ ಸಮೀಪ ಇರುವ ಸಂಗಮ್ ಫರ್ನಿಚರ್ಸ್ ರವರ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಕೆಲವೇ ಸಮಯದಲ್ಲಿ ಇಡೀ ಗೊಡೌನ್ ಗೆ ಬೆಂಕಿ ವ್ಯಾಪಿಸಿದೆ. ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಬೆಂಕಿ ನಂದಿಸಲು ಹರಸಾಹಸ ನಡೆಸುತ್ತಿದ್ದಾರೆ.ಅಜೀಮ್ ಎಂಬುವರು ಸಂಗಮ್ ಡೆಕೊರೇಷನ್ ಅಂಡ್ ಫರ್ನಿಚರ್ ಮಾಲೀಕರಾಗಿದ್ದಾರೆ.