ಮಂಗನಿಂದ ಮಾನವ ಅಂತೆವಿ. ಮಂಗನಾಟ ನೋಡಿದ್ರೆ ಇದಕ್ಕೆ ಕಣೀಕರನೇ ಇಲ್ವಾ ಅನ್ನೊದು ಸಹಜ. ಆದ್ರೆ ಈ ದೃಶ್ಯ ಮತ್ತು ಸಂಗತಿ ನೋಡಿದ್ರೆ. ಪ್ರತಿಯೊಬ್ಬರ ಕಣ್ಣಿನಲ್ಲೂ ಕಣ್ಣೀರು ಬರುವುದು ಸಹಜ. ಅಷ್ಟಕ್ಕೂ ಅದೇನಪ್ಪ ಸ್ಟೋರಿ ಅಂತಿರಾ ಇಲ್ಲಿದೆ ನೋಡಿ. ಹೌದು, ಒಬ್ಬ ತಾಯಿ ತನ್ನ ಮಗುವನ್ನು ಕಳೆದುಕೊಂಡಾಗ ಅದೆಷ್ಟೋ ಸಂಕಟ ಪಡುತ್ತಾಳೆ. ಅದೇ ರೀತಿ ಇಲ್ಲೊಂದು ಮಂಗ ತನ್ನ ಮಗುವನ್ನು ಕಳೆದುಕೊಂಡು ಅಷ್ಟೇ ರೋಧನೆ ಮಾಡುತ್ತಿದೆ. ಎಸ್ ವಿದ್ಯುತ್ ಸ್ಪರ್ಶದಿಂದ ಮರಿಮಂಗ ಸಾವನ್ನಪ್ಪಿದನ್ನು ಕಂಡು ತಾಯಿ ಮಂಗನ ರೋದನೆ ಮುಗಿಲು ಮುಟ್ಟಿದ್ದು ಒಂದೆಡೆಯಾದರೆ, ಇದನ್ನು ಕಣ್ಣಾರೆ ಕಂಡ ಗ್ರಾಮಸ್ಥರ ಕಣ್ಣಂಚ್ಚಲ್ಲಿ ಕೂಡ ನೀರು ಜಿನುಗಿತು. ಇಂತಹ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಗಿದ್ದು, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ. ದಿನಂಪ್ರತಿ ಗ್ರಾಮದಲ್ಲಿ ಮಂಗಗಳ ಹಿಂಡು ಪರಸ್ಪರ ಚಿನ್ನಾಟ ಆಡುತ್ತಾ , ಗೋಡೆ ಗೋಡೆಯಿಂದ ಜಿಗಿಯುತ್ತಿದ್ದವು. ಈ ವೇಳೆ ಮರಿ ಮಂಗ ಗೋಡೆಯಿಂದ ಗೋಡೆಗೆ ಜಿಗಿಯಲು ಹೋಗಿ ವಿದ್ಯುತ್ ಕಂಬದ ತಂತಿಗೆ ಸರ್ಶವಾಗಿದೆ. ಇದರಿಂದ ಕ್ಷಣಾರ್ಧದಲ್ಲೇ…
Author: Prajatv Kannada
ತುಮಕೂರು: ಕರ್ತವ್ಯ ಸಮಯದಲ್ಲಿ ಲಂಚ (Bribe) ಪಡೆದಿದ್ದ ಮಹಿಳಾಧಿಕಾರಿಗೆ ಮುದ್ರಾಂಕ ಇಲಾಖೆ (Department Of Stamps) ಆಯುಕ್ತರು ಕಡ್ಡಾಯ ನಿವೃತ್ತಿಗೊಳಿಸಿ (Retirement) ಆದೇಶ ಹೊರಡಿಸಿದ್ದಾರೆ. ಗುಬ್ಬಿ (Gubbi) ತಾಲೂಕಿನ ಉಪನೋಂದಣಿ ಕಚೇರಿಯಲ್ಲಿನ ಪ್ರಥಮ ದರ್ಜೆ ಸಹಾಯಕಿ ಯಶೋಧ ವಿರುದ್ಧ ಆದೇಶ ಹೊರಡಿಸಲಾಗಿದೆ. ಈಕೆ ಕರ್ತವ್ಯದ ಸಮಯದಲ್ಲಿ ಲಂಚ ಪಡೆದುಕೊಂಡಿದ್ದರು. ಲಂಚ ಪಡೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವನ್ನು ಆಧರಿಸಿ ತನಿಖೆ ನಡೆಸಲಾಗಿತ್ತು. ತನಿಖೆಯಲ್ಲಿ ಲಂಚ ಪಡೆದದ್ದು ಸಾಬೀತಾದ ಹಿನ್ನೆಲೆ ಕಡ್ಡಾಯ ನಿವೃತ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ರಾಯಚೂರು : ತಂದೆ-ಮಗ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಕೊರ್ತಕುಂದಾ ಗ್ರಾಮದಲ್ಲಿ ನಡೆದಿದೆ. ತಂದೆ ಸಲೀಂ (32) ಮಗ ರಾಜ(12) ಸಾವನ್ನಪ್ಪಿದ್ದು, ಊರಿನ ಕೆರೆ ಹತ್ರ ಉದ್ಯೋಗ ಖಾತ್ರಿ ಕೆಲಸದಲ್ಲಿ ತಂದೆ ಸಲೀಂ ತೊಡಗಿದ್ದರು. ಇದೇ ವೇಳೆ ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದ ಮಗನನ್ನು ಉಳಿಸಲು ಹೋದ ತಂದೆ ಸಲೀಂ ಸಹ ಕೆರೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನೂ ಈ ಘಟನೆ ಸಂಬಂಧ ರಾಯಚೂರು ತಾಲೂಕಿನ ಯಾಪಲ್ದಿನ್ನಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟ ಕೂಡ ಸಂಪೂರ್ಣ ಭರ್ತಿಯಾಗಿದೆ. ಈಗಾಗಲೇ ಎಲ್ಲಾ ಸಚಿವರಿಗೆ ಖಾತೆ ಕೂಡ ಹಂಚಿಕೆ ಮಾಡಲಾಗಿದ್ದು, ಯಾರಿಗೆ ಯಾವ ಜಿಲ್ಲಾ ಉಸ್ತುವಾರಿ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ ಧಾರವಾಡ ಜಿಲ್ಲೆಯ ಉಸ್ತುವಾರಿಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೇ ನೀಡಬೇಕು ಎಂಬ ಒತ್ತಡವನ್ನು ವಿನಯ್ ಕುಲಕರ್ಣಿ ಅವರು ವರಿಷ್ಠರ ಮೇಲೆ ಹೇರುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಈಗಾಗಲೇ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂತೋಷ ಲಾಡ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಸಂತೋಷ ಲಾಡ್ ಅವರಿಗೆ ಕಾರ್ಮಿಕ ಇಲಾಖೆಯ ಜವಾಬ್ದಾರಿ ಸಹ ನೀಡಲಾಗಿದೆ. ಆದರೆ, ಧಾರವಾಡ ಜಿಲ್ಲಾ ಉಸ್ತುವಾರಿಯನ್ನು ಅವರಿಗೆ ಇನ್ನೂ ವಹಿಸಿಲ್ಲ. ಹೀಗಿರುವಾಗ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ವಹಿಸಬೇಕು ಎಂಬ ಒತ್ತಾಯವನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಮಾಡಿದ್ದಾರೆ ಎಂಬ ಮಾತುಗಳು…
9 ವರ್ಷದ ಬಾಲಕ ಏಕಾಏಕಿ ಕಾಣೆಯಾಗಿದ್ದು, ಮಗನಿಗಾಗಿ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿರುವ ಘಟನೆ ಗದಗನಲ್ಲಿ ನಡೆದಿದೆ. ಗದಗ ನಗರದ ಹೊಂಬಳ ನಾಕಾ ಬಳಿ ಜನತಾ ಜಾಲೋನಿಯ ಬಾಲಕ ಅಫ್ಜಲ್ ಮೌಲಾಸಾಬ್ ದಾವಲಖಾನವರ್ ಎಂಬ ಈ ಪುಟ್ಟ ಬಾಲಕ ನಾಪತ್ತೆಯಾಗಿದ್ದಾನೆ. ಮೌಲಾಸಾಬ್ ಹಾಗೂ ಖಾಜಾಬಿ ದಂಪತಿಗೆ ಏಕೈಕ ಗಂಡು ಮಗ. 3ನೇ ತರಗತಿ ಓದುತ್ತಿದ್ದು, ಶಾಲೆ ಮುಗಿಸಿಕೊಂಡು ಸಾಯಂಕಾಲ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಸ್ಕೂಲ್ ಬ್ಯಾಗ್ ಇಟ್ಟು ಮಾವಿನ ಹಣ್ಣು ತೆಗೆದುಕೊಂಡು ಆಟವಾಡಲು ಹೋಗಿದ್ದಾನೆ. ಹೋದ ಮಗ ಮತ್ತೆ ಮನೆಗೆ ಹಿಂತುರುಗಿಲ್ಲ. ಕುಟುಂಬಸ್ಥರು ನಿನ್ನೆ ರಾತ್ರಿಯಿಂದ ಅನೇಕ ಕಡೆಗಳಲ್ಲಿ ಹುಡುಕಾಡಿದ್ರೂ ಎಲ್ಲೂ ಪತ್ತೆಯಾಗ್ತಿಲ್ಲ. ಮಗುವಿನ ಫೋಟೋ ಹಿಡಿದುಕೊಂಡು ಕಣ್ಣೀರಿಡುತ್ತಾ ಬೀದಿ ಬೀದಿ ಅಲೆಯುತ್ತಿದ್ದಾರೆ. ಒಬ್ಬನೇ ಗಂಡು ಮಗು ದಯವಿಟ್ಟು ಹುಡುಕಿಕೊಡಿ ಅಂತ ಅಂಗಲಾಚುತ್ತಾ, ಕಣ್ಣೀರಿಡುತ್ತಾ ಅಲೆಯುತ್ತಿದ್ದಾರೆ. ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಮಗುವಿನ ಫೋಟೋ, ಸ್ಕೂಲ್ ಬ್ಯಾಗ್, ಡ್ರೆಸ್ ಹಿಡಿದುಕೊಂಡು ಗೋಳಾಡುತ್ತಿದ್ದಾರೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲೂ ಮಿಸ್ಸಿಂಗ್ ದೂರು…
ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆಗೆ ಚಾಲನೆಯನ್ನ ಶಾಸಕ ಎಂ ಆರ್ ಪಾಟೀಲ್ ಅವರು ಮಾಡಿದರು. ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯದನದಲ್ಲಿ ಬಂದಿರುವಂತಹ ಬೀಜ ವಿತರಣೆ ಕಾರ್ಯಕ್ರಮಕ್ಕೆ ಕುಂದಗೋಳ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ ಆರ್ ಪಾಟೀಲ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ,ಗ್ರಾಮಸ್ಥರು, ಕೃಷಿ ಅಧಿಕಾರಿಗಳಾದ ರಾಜಶೇಖರ್ ಅನಗೌಡರು ಗೌಡ್ರು, ರೈತರಾದ ದೇವೇಂದ್ರಪ್ಪ ಕಾಗೆನವರ , ಪದ್ಮರಾಜ್ ಕಲಘಟಗಿ, ಬಸವರಾಜ್ ವಡ್ಡರ, ಸಂದೀಪ ಪ್ಯಾಟಿ, ರುದ್ರಪ್ಪ ಅಗಡಿ, ಬಸನಗೌಡ ಶಿವನಗೌಡ, ಫಕೀರಪ್ಪ ಗೌಡನವರ್ ,ನೇಮ ಚಂದ್ರ , ಬಸಾಪುರ ಚಂದ್ರನಾಥ್, ಉಪಾಧ್ಯ ಉಮೇಶ್ ಕುಸುಗಲ ಕಂಟ್ಯಪ್ ಗೌಡ್ರು ಗಿರೀಶ್ ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು
ಈ ರಾಶಿಯವರಿಗೆ ವರ್ಗಾವಣೆ ಜೊತೆಗೆ ಪ್ರಮೋಷನ್ ಭಾಗ್ಯ, ಸೂರ್ಯೋದಯ: 05.52 AM, ಸೂರ್ಯಾಸ್ತ : 06.43 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಉತ್ತರಾಯಣ, ವಸಂತ ಋತು, ತಿಥಿ: ಇವತ್ತು ದ್ವಾದಶಿ 01:39 PM ತನಕ ನಂತರ ತ್ರಯೋದಶಿ ನಕ್ಷತ್ರ: ಇವತ್ತು ಚಿತ್ತ 06:48 AM ತನಕ ನಂತರ ಸ್ವಾತಿ ಯೋಗ: ಇವತ್ತು ವರಿಯಾನ್ 07:00 PM ತನಕ ನಂತರ ಪರಿಘ ಕರಣ: ಇವತ್ತು ಬವ 01:48 AM ತನಕ ನಂತರ ಬಾಲವ 01:39 PM ತನಕ ನಂತರ ಕೌಲವ ರಾಹು ಕಾಲ: 01:30 ನಿಂದ 03:00 ವರೆಗೂ ಯಮಗಂಡ: 06:00 ನಿಂದ 07:30 ವರೆಗೂ ಗುಳಿಕ ಕಾಲ: 09:00 ನಿಂದ 10:30 ವರೆಗೂ ಅಮೃತಕಾಲ: 12.11 AM to 01.51 AM , 10.03 PM to 11.39 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:48 ನಿಂದ ಮ.12:39 ವರೆಗೂ ಮೇಷ ರಾಶಿ: ಪ್ರತಿಕ್ಷಣ…
ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಅಂತ್ಯವಾಗಿದ್ದು ಅವರ ಮನೆಗಳಲ್ಲಿ ಸಿಕ್ಕಿದ್ದನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಯಾರ ಮನೆಯಲ್ಲಿ ಎಷ್ಟೇಷ್ಟೆ ಸಿಕ್ತು ಎಂಬುದ ಫುಲ್ ಡಿಟೇಲ್ಸ್ ಇಲ್ಲಿದೆ. ಭ್ರಷ್ಟ ಅಧಿಕಾರಿಗಳ ಮೇಲೆ ಬುಧವಾರ ನಡೆದ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಜೆ ರಮೇಶ್ರ ಬಸವೇಶ್ವರನಗರದ ಮನೆ ಸೇರಿ ನಾಲ್ಕು ಕಡೆ ದಾಳಿ ನಡೆಸಿದರು. ಮನೆಯಲ್ಲಿ 1.4 ಕೋಟಿ ಮೌಲ್ಯದ ದ್ವಿಚಕ್ರ ವಾಹನ, ಕಾರು, ಗೃಹೋಪಯೋಗಿ ಉಪಕರಣಗಳು, ವಿಸ್ಕಿ ಪತ್ತೆಯಾಗಿದೆ. ಫ್ಯಾಕ್ಟರಿ ಮತ್ತು ಬಾಯ್ಲರ್ ಇಲಾಖೆಯ ಟಿವಿ ನಾರಾಯಣಪ್ಪರ ವಿಜಯನಗರದ ಮನೆ ಸೇರಿ 10 ಕಡೆಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ದಾಳಿ ವೇಳೆ 22.50 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನಗಳು, ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಪತ್ತೆಯಾಗಿದ್ರೆ, ಇನ್ನು ಬೆಸ್ಕಾಂನ ಟೆಕ್ನಿಕಲ್ ಚೀಫ್ ಇಂಜಿನಿಯರ್ ಹೆಚ್.ಜೆ ರಮೇಶ್ರ ಬಸವೇಶ್ವರನಗರದ ಮನೆ ಸೇರಿ ನಾಲ್ಕು ಕಡೆ ದಾಳಿ ನಡೆಸಿ ಅಧಿಕಾರಿಗಳು, ಮನೆಯಲ್ಲಿ 1.4 ಕೋಟಿ ಮೌಲ್ಯದ…
ಬೆಂಗಳೂರು: ಕಾಲೇಜು, ಪಿಜಿಗಳ ಬಳಿ ಡ್ರಗ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಫಯಾಜ್ ಪಾಷಾ ಅಲಿಯಾಸ್ ಪಿಲ್ಲು ಬಂಧಿತ ಡ್ರಗ್ ಪೆಡ್ಲರ್ (Drug Peddler). ಗುಬ್ಬಲಾಳ ಬಳಿಯ ಖಾಲಿ ಜಾಗವೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ತಲಘಟ್ಟಪುರ ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಪಿಲ್ಲುನಿಂದ 10.50 ಲಕ್ಷ ಮೌಲ್ಯದ 15 ಕೆಜಿ ಗಾಂಜಾ, ನಗದು ಮತ್ತು ಬೈಕ್ ಜಪ್ತಿ ಮಾಡಿದ್ದಾರೆ. ಆರೋಪಿ ವಿರುದ್ಧ ಬನಶಂಕರಿ, ಜಯನಗರ, ಕೋರಮಂಗಲ, ಕೆ.ಎಸ್.ಲೇಔಟ್ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಸದ್ಯ ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜಾರಿಗೆ ನಾವು ಬದ್ಧ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವ ಗಾಸಿಪ್ ಕೂಡ ಮಾಡಬೇಡಿ. ಹಂಗಂತೆ, ಹಿಂಗಂತೆ ಅಂತ ಯಾರೂ ಹೇಳುವುದಕ್ಕೆ ಹೋಗಬೇಡಿ. ತೀರ್ಮಾನ ಮಾಡುವುದು ಸರ್ಕಾರ. ನಿಮಗೆ ಅನಿಸಿದ್ದನ್ನೆಲ್ಲ ಹೇಳೋಕಾಗಲ್ಲ. “ಹೇಗೆ ಮಾಡಬೇಕು, ಏನು ಮಾಡಬೇಕು” ಅಂತ ಸರ್ಕಾರ ಹಾಗೂ ನಾವು ಯೋಚನೆ ಮಾಡುತ್ತೇವೆ. ನೀವು ಬಹಳ ಸ್ಪೀಡ್ನಲ್ಲಿದ್ದೀರಿ. ನಾವು ನಿಮ್ಮಷ್ಟು ಸ್ಪೀಡ್ ಇಲ್ಲ ಎಂದರು. ಆರ್ಥಿಕ ಹೊರೆ ಎಷ್ಟಾಗುತ್ತೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಆರ್ಥಿಕ ಇಲಾಖೆ ಅಧಿಕಾರಿಗಳು ಕೂಡ ಸಲಹೆ ನೀಡಿದ್ದಾರೆ. ರೀ ವರ್ಕ್ ಮಾಡಿ ಕ್ಯಾಬಿನೆಟ್ಗೆ ಸಲ್ಲಿಸಲು ತಿಳಿಸಿದ್ದಾರೆ. ರೀ ವರ್ಕ್ ಮಾಡಿ ಆಲೋಚನೆ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳ ಜಾರಿಗೆ ನಾವು ಬದ್ಧರಾಗಿದ್ದೇವೆ. ಅಧಿಕಾರಿಗಳು ತಮ್ಮ ಅಭಿಪ್ರಾಯ, ಸಲಹೆ ತಿಳಿಸಿದ್ದಾರೆ. ಯಾರೂ ಕೂಡ ಊಹಾಪೋಹಗಳಿಗೆ ಅವಕಾಶ ನೀಡಬೇಡಿ. ಆ ಬಗ್ಗೆ ಹೆಚ್ಚಿನ ಗಮನ ನೀಡಬೇಡಿ. ನಾವು ನಮ್ಮ ಪ್ರಣಾಳಿಕೆ, ಕೊಟ್ಟಿರುವ ಮಾತಿನ ಬಗ್ಗೆ ಅರಿವಿದೆ.…