Author: Prajatv Kannada

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ 6 ಜಿಲ್ಲೆಗಳಲ್ಲಿ ಇಂದು ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಭಾರಿ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿಯಲ್ಲಿ ಸಾಧಾರಣ ಮಳೆಯಾಗಲಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ತುಮಕೂರು, ವಿಜಯನಗರ, ಕೋಲಾರ, ಮಂಡ್ಯ, ಮೈಸೂರಿನಲ್ಲಿ ಕೂಡ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾಗಡಿ, ವಿರಾಜಪೇಟೆ, ಚಿಂತಾಮಣಿ, ದೇವನಹಳ್ಳಿ, ಶಿಡ್ಲಘಟ್ಟ, ಚಂದೂರಾಯನಹಳ್ಳಿ, ಬೆಂಗಳೂರು ಎಚ್​ಎಎಲ್​, ಗೋಪಾಲ್​ನಗರ, ಮಧುಗಿರಿ, ಗೋಣಿಕೊಪ್ಪಲ್, ಹರದನಹಳ್ಳಿ, ತೊಂಡೆಭಾವಿ, ಬೈಲಹೊಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ, ಕುಣಿಗಲ್, ಚಾಮರಾಜನಗರ, ಹೆಸರಘಟ್ಟ, ಬುಕ್ಕಾಪಟ್ಟಣ, ಮಲವಳ್ಳಿ, ಶ್ರವಣಬೆಳಗೊಳ, ಹಾರಂಗಿ, ಗೌರಿಬಿದನೂರಿನಲ್ಲಿ ಮಳೆಯಾಗಲಿದೆ. ಕಲಬುರಗಿಯಲ್ಲಿ 39.2 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ವೇಳೆಗೆ…

Read More

ಬೆಂಗಳೂರು: ಕಾಂಗ್ರೆಸ್‌ನ (Congress0 ಚುನಾವಣಾ ಚಾಣಾಕ್ಷ, ಬಳ್ಳಾರಿ ಮೂಲದ ಸುನೀಲ್ ಕನಗೋಲು (Sunil Kanugolu) ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ. ಕಾಂಗ್ರೆಸ್‌ನ ಗೆಲುವಿನಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದ ಕನುಗೋಲು ಚುನಾವಣಾ ತಂತ್ರಗಾರಿಕೆ ಹೆಣೆದಿದ್ದರು. ಜತೆಗೆ ಪೇಸಿಎಂನಂತಹ ಅಭಿಯಾನಗಳ ಮೂಲಕ ಹಿಂದಿನ ಸರ್ಕಾರ ಭ್ರಷ್ಟ ಸರ್ಕಾರ ಎಂದು ಜನರ ಮುಂದೆ ಬಿಂಬಿಸುವಲ್ಲಿ ಯಶಸ್ವಿಯಾಗಿದ್ದರು. ತನ್ಮೂಲಕ ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟಿದ್ದರು. ಇದೀಗ ಸಿದ್ದರಾಮಯ್ಯ ಅವರು, ಕನುಗೋಲು ಅವರನ್ನೇ ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ.

Read More

ಬೆಂಗಳೂರು: ಕರ್ನಾಟಕ ತೋಟಗಾರಿಕೆ ಇಲಾಖೆ (Horticulture department) ವತಿಯಿಂದ ಲಾಲ್‌ಬಾಗ್‌ನಲ್ಲಿ (Lalbagh) ಆಯೋಜಿಸಲಾಗುವ ವಾರ್ಷಿಕ ಮಾವು ಮೇಳವು ಈ ವರ್ಷ ಜೂನ್ 2 ರಂದು ಆರಂಭವಾಗಲಿದೆ. ಬೆಂಗಳೂರಿನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ (Lalbagh Botanical Garden) ಆವರಣದಲ್ಲಿ ಮಾವು ಮೇಳ ನಡೆಯಲಿದೆ. ಮಾವಿನ ಮೇಳವು ಜೂನ್ 11 ರವರೆಗೆ 9 ದಿನಗಳ ಕಾಲ ನಡೆಯಲಿದೆ ಮತ್ತು ಎಲ್ಲಾ ಗ್ರಾಹಕರಿಗೆ ಉಚಿತ ಪ್ರವೇಶ ನೀಡಲಾಗಿದೆ. ಮೇಳದಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದ ಬೆಳೆಗಾರರು ಮಳಿಗೆಗಳನ್ನು ತೆರೆಯಲಿದ್ದು ಮಾವು ಮಾರಾಟ ಮಾಡಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. ಪ್ರತಿ ವರ್ಷ ಸುಮಾರು 100 ರಿಂದ 120 ರಷ್ಟು ಮಳಿಗೆಗಳು ಮಾವು ಮೇಳದಲ್ಲಿರುತ್ತವೆ. ಆದರೆ, ಈ ವರ್ಷ ಇಳುವರಿ ಕಡಿಮೆಯಾಗಿರುವುದರಿಂದಾಗಿ ಮಳಿಗೆಗಳ ಸಂಖ್ಯೆಯನ್ನು 40 ಕ್ಕೆ ಇಳಿಸಲಾಗುತ್ತದೆ ಎಂದು ವರದಿಯೊಂದು ತಿಳಿಸಿದೆ. ಈ ವರ್ಷ ಆಲಿಕಲ್ಲು ಮಳೆಯಿಂದಾಗಿ ಮಾವಿನ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಕಡಿಮೆ ಮಳಿಗೆಗಳನ್ನು ತೆರೆಯಲಾಗುತ್ತಿದೆ.

Read More

ಬೆಂಗಳೂರು: ಬೇಸಿಗೆ ಹಿನ್ನೆಲೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೀರು ಅಗತ್ಯವಿದೆ. ಹಾಗಾಗಿ 6 ಟಿಎಂಸಿ ನೀರು ಬಿಡುಗಡೆ ಕೋರಿ ಮಹಾರಾಷ್ಟ್ರ ಸರ್ಕಾರಕ್ಕೆ ಸಿಎಂ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ.

Read More

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಎರಡೆರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿ, ಬಿಜೆಪಿ ಮುಖಂಡರ ಬಾಯಿಗೆ ಸಿಕ್ಕು, ಕೊನೆಗೆ ಇದಾ ಆದಾ ಎಂಬ ಚಿಂತೆಯಲ್ಲಿ ತಲೆ ಮೇಲೆ ಕೈ ಹಿಡಿದು ಕುಂತಿದ್ದ ಸಿದ್ದರಾಮಯ್ಯ(Siddaramaiah) ಗೆಲುವನ್ನು ತಮ್ಮದಾಗಿಸಿಕೊಂಡು ರಾಜ್ಯದ ಸಿಎಂ ಪಟ್ಟ ಅಲಂಕರಿಸಿದ್ದಾರೆ. ಸದ್ಯ ತಮಗೆ ಈ ಸ್ಥಾನ ಸಿಗುವಂತೆ ಮಾಡಿದ ಮತದಾರ ಪ್ರಭುಗಳಿಗೆ ತಮ್ಮನ್ನು ಭೇಟಿ ಮಾಡಲು ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಇನ್ನು ಮುಂದೆ ವರುಣಾ ಕ್ಷೇತ್ರದ(Varuna Constituency) ಜನ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡುವುದು ತುಂಬಾ ಸುಲಭ. ಸಿಎಂ ಸಿದ್ದರಾಮಯ್ಯ ಭೇಟಿ ಮಾಡಲು ಬರುವ ವರುಣಾ ಕ್ಷೇತ್ರದ ಮತದಾರರಿಗೆ ಸಿಎಂ ಸುಲಭ ಭೇಟಿಗೆ ಅವಕಾಶ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬರುವ ವರುಣಾ ಕ್ಷೇತ್ರದ ಮತದಾರರಿಗೆ ತಮ್ಮ ಸರ್ಕಾರಿ ನಿವಾಸಕ್ಕೆ ಬರಲು ಮುಕ್ತ ಅವಕಾಶ ಕಲ್ಪಿಸಿದ್ದಾರೆ. ವರುಣಾದಿಂದ ಬಂದ ಮತದಾರರು ತಮ್ಮ ಅಡ್ರೆಸ್ ತೋರಿಸಿ ಒಳಗೆ ಹೋಗಲು ಅವಕಾಶ ನೀಡಲಾಗಿದೆ. ಆಧಾರ್, ಐಡಿ ಚೆಕ್ ಮಾಡಿ ವರುಣಾ…

Read More

ಮಂಗಳೂರು: ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯ ನಿರಂಜನ್ ಅವರ ಮಂಗಳೂರಿನ ಅಪಾರ್ಟ್ಮೆಂಟ್ ಮತ್ತು ಲ್ಯಾಬ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಡಿಡಿ ಆಗಿದ್ದ ನಿರಂಜನ್, ಇತ್ತೀಚಿಗೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು.

Read More

ಗಂಗಾವತಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿದ್ದು, ಎಲ್ಲ ಕೂಲಿಕಾರರು ಆರೋಗ್ಯದ ಕಡೆಯೂ ಗಮನಹರಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಹೇಳಿದರು. ತಾಲೂಕಿನ ಸಂಗಾಪುರ ಗ್ರಾಮದ ಶ್ರೀ ಲಕ್ಷ್ಮೀ ನಾರಾಯಣ ಕೆರೆ ಹೂಳೆತ್ತುವ ಕಾಮಗಾರಿಸ್ಥಳದಲ್ಲಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಬುಧವಾರ ಆಯೋಜಿಸಿದ್ದ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೂಲಿಕಾರರಿಗೆ ಅನುಕೂಲ ಆಗಲೆಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಕಾಮಗಾರಿ ಸ್ಥಳದಲ್ಲೇ ಆರೋಗ್ಯ ಶಿಬಿರ ಆಯೋಜಿಸುತ್ತಿದೆ. ಸ್ವಯಂ ಪ್ರೇರಿತರಾಗಿ ಪಾಳ್ಗೊಂಡು ಶಿಬಿರದ ಲಾಭ ಪಡೆದುಕೊಳ್ಳಬೇಕು. ಯಾರೂ ಕೂಡ ತಪಾಸಣೆ ಮಾಡಿಕೊಳ್ಳಲು ಹಿಂದೇಟು ಹಾಕಬಾರದು ಎಂದರು. ಶಿಬಿರದಲ್ಲಿ ಬಿ.ಪಿ., ಶುಗರ್, ಕ್ಷಯ ಸೇರಿ ಇತರೆ ರೋಗಗಳ ಉಚಿತ ತಪಾಸಣೆ ಮಾಡಲಾಗುತ್ತಿದೆ. ಎಲ್ಲ ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಗುರುತರ ರೋಗಗಳು ಇದ್ದರೆ ವೈದ್ಯರ ಸಲಹೆಗಳನ್ನು ಪಾಲನೆ ಮಾಡಬೇಕು ಎಂದರು. ನರೇಗಾ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಆಸ್ತಿಗಳ ಸೃಜನೆಯಾಗುತ್ತಿವೆ. ಶಾಲಾ ಕಾಮಗಾರಿಗಳು, ಫಲಾನುಭವಿಗಳಿಗೆ ಜಾನುವಾರು, ಕುರಿ, ಕೋಳಿ ಶೆಡ್…

Read More

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಕಾಫಿನಾಡು ಚಿಕ್ಕಮಗಳೂರಿನ ಬಯಲು ಸೀಮೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಮಳೆಗಾಗಿ ಕಾದಿದ್ದ ರೈತರು ಉತ್ತಮ ಬಿತ್ತನೆ ಬೀಜ ತಂದು ಬಿತ್ತನೆ ಕಾರ್ಯ ಆರಂಭ ಮಾಡಿದ್ದಾರೆ. ತಾಲೂಕಿನ ಬಯಲುಸೀಮೆ ಪ್ರದೇಶದಲ್ಲಿ ಹೆಚ್ಚಾಗಿ ಆಲೂಗಡ್ಡೆ ಬೆಳೆಯುವ ಅಂಬಳೆ, ಸಿರಗಾಪುರ, ಮಳಲೂರು ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ನೂರಾರು ರೈತರು ಹಾಸನ ನಗರದ ಆಲೂಗಡ್ಡೆ ಬಿತ್ತನೆ ಬೀಜ ವ್ಯಾಪಾರಿಗಳಿಂದ 4 ಲಾರಿ ಲೋಡ್ ಬಿತ್ತನೆಗಾಗಿ ಆಲೂಗಡ್ಡೆ ತರಿಸಿ, ಉತ್ತಮ ಲಾಭದ ಆಸೆ ತೋರಿಸಿ ರೈತರಿಗೆ ಆಲೂಗಡ್ಡೆ ಬೀಜವನ್ನು ನೀಡಿದ್ರು. ಹಾಸನದ ಆಲೂಗಡ್ಡೆ ವ್ಯಾಪಾರಿಗಳ ಮಾತು ನಂಬಿದ ನೂರಾರು ರೈತರು, ಎಕರೆಗೆ 60 ಸಾವಿರಕ್ಕೂ ಅಧಿಕ ಹಣವನ್ನ ಖರ್ಚು ಮಾಡಿ ಜಮೀನಿನಲ್ಲಿ ಬಿತ್ತನೆ ಕಾರ್ಯವನ್ನು ಮಾಡಿದ್ದರು. ಇದೀಗ ಬಿತ್ತನೆ ಮಾಡಿ ಮೂರೇ ದಿನಕ್ಕೆ ಆಲೂಗಡ್ಡೆ ಬೀಜ ಕೊಳೆಯಲಾರಂಭಿಸಿದೆ. ಹಾಸನ ಆಲೂಗಡ್ಡೆ ಬಿತ್ತನೆ ಬೀಜ ವ್ಯಾಪಾರಿಗಳಿಂದ ತಂದ ಆಲೂಗಡ್ಡೆಯನ್ನೇ ಸಿರಗಾಪುರ, ಅಂಬಳೆ ,ಮಳಲೂರು ಸುತ್ತಮುತ್ತಲಿನ ನೂರಾರು ರೈತರು 250 ಎಕರೆಗೂ ಅಧಿಕ ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ.…

Read More

ತುಮಕೂರು: ಪೊಲೀಸರು ಠಾಣೆಗೆ ದೇವರುಗಳನ್ನು ಕರೆಸಿ ವಿಶೇಷ ಪೂಜೆ ಮಾಡಿರುವ ಘಟನೆ ಜಿಲ್ಲೆಯ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪೊಲೀಸರು ಸಮವಸ್ತ್ರದಲ್ಲಿಯೇ ಠಾಣೆಯ ಎದುರಿನ‌ ಹಳ್ಳಿಕಟ್ಟೆಯಿಂದ ಕೆಂಪಮ್ಮ ದೇವಿ, ಚಿಕ್ಕಮ್ಮ ದೇವಿ, ಶ್ರೀ ಭೂತರಾಯ ದೇವರುಗಳನ್ನು ಹೊತ್ತು ತಂದು ಪೊಲೀಸ್ ಠಾಣೆಯಲ್ಲಿ ಕೂರಿಸಿದ್ದಾರೆ. ಬಳಿಕ ಇಡೀ ದಿನ ವಿಶೇಷ ಅಲಂಕಾರ, ಪೂಜೆ ಪುನಸ್ಕಾರ ಮಾಡಿ ಆರತಿ ಎಡೆ ಸೇವೆ ನೇರವೇರಿಸಿದ್ದಾರೆ. ಪೂಜೆ ನಂತರ ಸಾರ್ವಜನಿಕರಿಗೆ ಪಾನಕ ಫಲಹಾರ ನೀಡಿದ್ದಾರೆ. ಇಡೀ ದಿನ ಪೊಲೀಸ್ ಠಾಣೆ ಯಲ್ಲಿ ವಿಶೇಷ ಅಲಂಕಾರ, ಪೂಜೆ ಪೂನಸ್ಕಾರ.ಕೆಂಪಮ್ಮ ದೇವಿ, ಚಿಕ್ಕಮ್ಮ ದೇವಿ, ಶ್ರೀ ಭೂತರಾಯ ದೇವರನ್ನ ಕರೆಸಿ ಪೂಜೆ.ಪೊಲೀಸ್ ಠಾಣೆಯಲ್ಲೆ ದೇವರನ್ನ ಕೂರಿಸಿ ಆರತಿ ಎಡೆ ಸೇವೆ ನೆರವೇರಿಸಿದ ಪೊಲೀಸರು.ದೇವರನ್ನ ಹೊತ್ತು ತಂದ ಪೊಲೀಸರು.ಸಮವಸ್ತ್ರ ದಲ್ಲಿಯೇ ದೇವರನ್ನ ಹೊತ್ತು ತಂದು ಪೊಲೀಸರಿಂದ ವಿಶೇಷ ಪೂಜೆ.ಪೊಲೀಸ್ ಠಾಣೆ ಎದುರಿನ‌ ಹಳ್ಳಿಕಟ್ಟೆಯಿಂದ ದೇವರುಗಳನ್ನ ಹೊತ್ತು ತಂದ ಪೊಲೀಸ್ ಸಿಬ್ಬಂದಿ.ಸಾರ್ವಜನಿಕರಿಗೆ ಪಾನಕ ಫಲಹಾರ ವ್ಯವಸ್ಥೆ ಮಾಡಲಾಗಿತ್ತು.

Read More

ಬೆಂಗಳೂರು: ಬೆಳ್ಳಂದೂರು ಕೆರೆಗೆ ಸಚಿವ ಈಶ್ವರ್ ಖಂಡ್ರೆ ಇಂದು ಭೇಟಿ ನೀಡಿ, ಕೆರೆ ಮಾಲಿನ್ಯದ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಸಚಿವರಿಗೆ ಬಿಬಿಎಂಪಿ ಅಧಿಕಾರಿಗಳು ಸಾಥ್ ನೀಡಿದರು. ಬಳಿಕ ಮಾತನಾಡಿದ ಸಚಿವರು, ಕೆರೆ ಮಾಲಿನ್ಯದಿಂದ ಸುದ್ದಿಯಾಗಿದೆ. ಅದು ಬದಲಾಗಬೇಕು. ಕೆರೆಯನ್ನು ಸ್ವಚ್ಛಗೊಳಿಸಲು ಮತ್ತು ಹೂಳು ತೆಗೆಯಲು ಎನ್ಜಿಟಿ ಸ್ಪಷ್ಟ ಆದೇಶ ಹೊರಡಿಸಿದೆ ಆದರೆ ಅರ್ಧದಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ. ಇದು ಕೊಳಚೆನೀರಿನಿಂದ ತುಂಬಿ ಹೋಗಿದೆ. ಈ ಕೆರೆಗೆ ತ್ಯಾಜ್ಯ ನೀರು ಒಳಹರಿವು ತಡೆಯಲು ಅಗತ್ಯವಿರುವ ಶುದ್ಧೀಕರಣ ಘಟಕಗಳು 2024 ರಲ್ಲಿ ಪೂರ್ಣಗೊಳ್ಳಲಿದೆ. ಕೆರೆಯ ಮರುಸ್ಥಾಪನೆಯಲ್ಲಿ ಯಾವುದೇ ವಿಳಂಬವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಈಶ್ವರ್ ಖಂಡ್ರೆ ತಿಳಿಸಿದರು. ನೀರಿನ ಗುಣಮಟ್ಟದ ಕುರಿತು ದಿನದ ವರದಿ ನೀಡಲು ಅಧಿಕಾರಿಗಳು ವಿಫಲರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಖಂಡ್ರೆ, ಈ ಬಗ್ಗೆ ವಿವರವಾದ ವರದಿಯನ್ನು ಕೇಳಿದರು. ಬೆಳ್ಳಂದೂರು ಕೆರೆಯ ಸುತ್ತಲಿನ ಪ್ರದೇಶದಲ್ಲಿರುವ 490 ಕೈಗಾರಿಕೆಗಳ ಪೈಕಿ ಹಲವೆಡೆ ಶುದ್ಧೀಕರಣ ಘಟಕಗಳನ್ನು ಅಳವಡಿಸಿಲ್ಲ, ಅಧಿಕಾರಿಗಳು ಕೋಟ್ಯಂತರ ರೂಪಾಯಿ ದಂಡ…

Read More