Author: Prajatv Kannada
ಬೆಳಗಾವಿ: ಪತ್ನಿ ಹಾಗೂ ಅತ್ತೆ ಸೇರಿಕೊಂಡು ಸಾಲಗಾರ ಪತಿಯನ್ನು ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಪೀರವನಾಡಿ ನಿವಾಸಿ ವಿನಾಯಕ್ ಜಾಧವ್ (48) ಕೊಲೆಯಾದ ಪತಿ. ಜುಲೈ 29ರಂದು ರಾತ್ರಿ ಅಮ್ಮ-ಮಗಳು ಸೇರಿಕೊಂಡು ಸಾಲಗಾರ ಪತಿಯನ್ನು ಹತ್ಯೆ ಮಾಡಿದ್ದಾರೆ. ವಿನಾಯಕ್ ಜಾಧವ್ ಉದ್ಯಮಬಾಗದಲ್ಲಿ ಸ್ವಂತ ಉದ್ಯಮ ಹೊಂದಿದ್ದ. https://youtu.be/wKhO3ifNqsw?si=JY3kauKQvvrDhcKP ಉದ್ಯಮದಲ್ಲಿ ನಷ್ಟವಾದ ಹಿನ್ನೆಲೆ ವಿಪರೀತ ಸಾಲ ಮಾಡಿಕೊಂಡಿದ್ದ. ಬಳಿಕ ಸಾಲಗಾರರ ಕಾಟಕ್ಕೆ ಬೇಸತ್ತು ಮನೆಯನ್ನು ಸಾಲಕ್ಕೆ ಅಡಮಾನವಾಗಿ ಇಟ್ಟು ಜನರ ಕಿರುಕುಳಕ್ಕೆ ನೊಂದು ಬೆಳಗಾವಿ ಬಿಟ್ಟು ಮೂರು ವರ್ಷಗಳಿಂದ ಪರಾರಿಯಾಗಿದ್ದ. ಜುಲೈ 29ರಂದು ವಿನಾಯಕ್ ಜಾಧವ್ ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ. ಮನೆಯಲ್ಲಿ ಪತ್ನಿ ರೇಣುಕಾ ಜೊತೆಗೆ ವಿಪರೀತ ಜಗಳ ಮಾಡಿದ್ದ. ಬಳಿಕ ಪತಿಯನ್ನು ಹಗ್ಗದಿಂದ ಕುತ್ತಿಗೆ ಕಟ್ಟಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಹತ್ಯೆಗೆ ಪತ್ನಿ ರೇಣುಕಾಗೆ ಆಕೆಯ ತಾಯಿ ಶೋಭಾ ಸಾಥ್ ನೀಡಿದ್ದರು. ಹತ್ಯೆ ಬಳಿಕ ಶವವನ್ನು ಮನೆಯ ಮುಂಭಾಗದಲ್ಲಿ ಬಿಸಾಡಿದ್ದರು.…
ಬೆಂಗಳೂರು: ಬುಧವಾರ ಶಿಕ್ಷಕ ಸಂಘದ ಜೊತೆ ಚರ್ಚೆ ಮಾಡಿದ್ದೇವೆ. ಹಲವು ಸಮಸ್ಯೆ ಹೇಳಿದ್ದಾರೆ. ಸರ್ಕಾರಕ್ಕೆ ಸಮಸ್ಯೆಗಳ ಅರಿವಾಗಿದೆ. ಆದಷ್ಟು ಶೀಘ್ರವೇ ಶಿಕ್ಷಕರ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ https://youtu.be/xzFSEVlT8VU?si=nfo3TOfkWfMJvYyX ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ವೇಳೆ ತಮ್ಮ ಬಾಲ್ಯದ ನೆನಪು ಮಾಡಿಕೊಂಡ ಸಿಎಂ, ನನಗೆ ಶಿಕ್ಷಕರು ಕಂಡರೆ ಅಪಾರಗೌರವ ಇದೆ. ನನಗೆ ರಾಜಪ್ಪ ಮೇಷ್ಟ್ರು ಕಂಡರೆ ಇಷ್ಟ. ನಾನು 1 ರಿಂದ 4ನೇ ತರಗತಿ ಓದಿರಲಿಲ್ಲ. ರಾಜಪ್ಪ ಮೇಷ್ಟ್ರು ನನ್ನನ್ನು ನೇರವಾಗಿ 5ನೇ ತರಗತಿಗೆ ಸೇರಿಸಿದ್ರು. ಅಂತಹ ಶಿಕ್ಷಕರು ಇರಬೇಕು ಎಂದರು. ದೇಶದ ಎರಡನೇ ರಾಷ್ಟ್ರಾಧ್ಯಕ್ಷರಾಗಿದ್ದ ಡಾ ರಾಧಾಕೃಷ್ಣನ್ ಅವರು ಶ್ರೇಷ್ಠ ಶಿಕ್ಷಕರಾಗಲು ಸಾಧ್ಯವಾಗಿದೆ ಅಂದರೆ, ಇದೇ ಸಾಧ್ಯತೆ ಎಲ್ಲಾ ಶಿಕ್ಷಕರಿಗೂ ಇದ್ದೇ ಇರುತ್ತದೆ. ಹೀಗಾಗಿ ಪ್ರತಿಯೊಬ್ಬ ಶಿಕ್ಷಕರೂ ರಾಧಾಕೃಷ್ಣನ್ ಅವರ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುವ ಮೂಲಕ ದೇಶದ ವ್ಯಕ್ತಿತ್ವವನ್ನು…
ಪ್ರೇಯಸಿಗಾಗಿ ಮನೆಗಳ್ಳತನ ಮಾಡುತ್ತಿದ್ದ ಅಸಾಮಿ ಅರೆಸ್ಟ್ ಆಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ. https://youtu.be/tui9OWWAST8?si=bwn4hx0CV74YsrOU ಹೌದು.. ಜಿಗಣಿ ಪೊಲೀಸರಿಂದ ಖತರ್ನಾಕ್ ಮನೆಗಳ್ಳ ಅರೆಸ್ಟ್ ಮಾಡಿದ್ದು ಸರ್ಜಾಪುರದ ಚಿಕ್ಕದಾಸರಹಳ್ಳಿ ವಾಸಿ ಲಕ್ಷ್ಮಣ್@ಗುನ್ನಿ ಅರೆಸ್ಟ್ ಮಾಡಿದ್ದು ಆರೋಪಿಯಿಂದ 8 ಲಕ್ಷ ಮೌಲ್ಯದ 101 ಗ್ರಾಂ ಚಿನ್ನಾಭರಣ ಜಫ್ತಿ ಕೈಯಲ್ಲಿ ಕೆಲಸವಿಲ್ಲದಿದ್ದರು ಶೋಕಿ ಜೀವನ ರೂಡಿಸಿಕೊಂಡಿದ್ದ ಪ್ರೇಯಸಿಯನ್ನು ಪ್ರವಾಸಿ ತಾಣಗಳಿಗೆ ಸುತ್ತಾಡಿಸಲು ಮನೆಗಳಿಗೆ ಕನ್ನ ಜಿಗಣಿಯ ಗೋಪಾಲಸ್ವಾಮಿ ಎಂಬುವವರ ಮನೆಗೆ ಬೆಳ್ಳಂಬೆಳಗ್ಗೆ ಕನ್ನ ಬಾಗಿಲು ಮುರಿದು ನಗನಾಣ್ಯ ದೋಚಿ ಪರಾರಿಯಾಗಿದ್ದ ಆರೋಪಿ ಜಿಗಣಿ, ಬನ್ನೇರುಘಟ್ಟ, ಅತ್ತಿಬೆಲೆ, ಸೂರ್ಯನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕೇಸ್ 23 ಮನೆಗಳವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಹಲವು ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಿದ್ದ ಅಸಾಮಿ ಇದೀಗ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ ಪೊಲೀಸರು
ಹೊಟ್ಟೆ ತುಂಬಾ ಬೊಜ್ಜು ತುಂಬಿಕೊಂಡಿದ್ದರೆ ಅದನ್ನು ಕರಗಿಸುವುದು ಹೇಗೆ ಎನ್ನುವ ಚಿಂತೆ ಕಾಡುವುದು ಸಹಜ. ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹೆಚ್ಚಿನವರಲ್ಲಿ ಬೊಜ್ಜು ಕಾಣಿಸಿ ಕೊಳ್ಳುವುದು. ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದು ಕಠಿಣ ಕೆಲಸ. ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ತುಂಬಾ ಹಾನಿಕರ. ಇದರಿಂದಾಗಿ ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು. ಹೊಟ್ಟೆಯ ಬೊಜ್ಜು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ ಕುಗ್ಗಿಸುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾವುದೇ ದೈಹಿಕ ಶ್ರಮಗಳನ್ನು ನಡೆಸದೇ, ಹೊಟ್ಟೆಯ ಬೊಜ್ಜನ್ನು ಕರಗಿಸುವ ಸುಲಭದ ಉಪಾಯಗಳನ್ನು ಇಲ್ಲಿ ನೀಡಲಾಗಿದೆ. ಮಿತ ಪ್ರಮಾಣದಲ್ಲಿ ಆಹಾರ ಸೇವಿಸಿ ಹೊಟ್ಟೆಯ ಬೊಜ್ಜು ಹೆಚ್ಚಲು ಮುಖ್ಯವಾಗಿ ಕಾರಣವಾಗಬಹುದಾದ ಅಂಶವೆಂದರೆ, ಅತಿಯಾಗಿ ತಿನ್ನುವುದು. ಆದ್ದರಿಂದಲೇ ಮಿತವಾಗಿ ತಿನ್ನುವುದರಿಂದ ಅನಾವಶ್ಯಕ ಕ್ಯಾಲೋರಿ ಹೆಚ್ಚಳ ಹಾಗೂ ತೂಕ ಏರಿಕೆಯನ್ನು ತಡೆಗಟ್ಟಬಹುದು. ಇದು ದೀರ್ಘಾವಧಿಯಲ್ಲಿ ಪರಿಣಾಮ ನೀಡುವಂತಹ ಅಂಶವಾಗಿದ್ದು, ಆಹಾರ ತಿನ್ನುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಿಧಾನವಾಗಿ ತಿನ್ನಿ, ಜಗಿದು…
ಖರ್ಜೂರದಷ್ಟು ಪೌಷ್ಠಿಕಾಂಶಗಳು ಇರುವ ಹಣ್ಣು ಮತ್ತೊಂದು ಇಲ್ಲವೆಂದೇ ಹೇಳಬಹುದು. ಇದು ತುಂಬಾ ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ಹಲವಾರು ಲಾಭ ಗಳನ್ನು ಒದಗಿಸುವುದು. ಇದನ್ನು ನಿತ್ಯವೂ ಸೇವನೆ ಮಾಡಿದರೆ ಅದರಿಂದ ನೀವು ಊಹಿಸದೆ ಇರುವ ಲಾಭಗಳು ದೇಹಕ್ಕೆ ಸಿಗುವುದು. ಆದರೆ ನಾವೆಲ್ಲರೂ ಯಾವಾ ಗಲೊಮ್ಮೆ ಇದನ್ನು ತಂದು ಒಂದರೆಡು ತಿಂದು ಮತ್ತೆ ಮರೆತೇ ಬಿಡುತ್ತೇವೆ. ಆದರೆ ದಿನನಿತ್ಯವೂ ಒಂದು ಖರ್ಜೂರ ತಿಂದರೆ ಅದರಿಂದ ಹಲವಾರು ಬಗೆಯ ಆರೋಗ್ಯ ಲಾಭಗಳು ಸಿಗುವುದು. ನಾವು ಮನೆಯಲ್ಲಿ ವಿಶೇಷ ಸಂದರ್ಭಗಳು ಬಂದಂತಹ ಸಮಯದಲ್ಲಿ ಸಿಹಿ ಅಡುಗೆಗಳನ್ನು ಮಾಡುತ್ತೇವೆ. ಆ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್ ಗಳನ್ನು ಹೆಚ್ಚಾಗಿ ಬಳಸುತ್ತೇವೆ. ಇದರಲ್ಲಿ ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ, ಖರ್ಜೂರ, ಪಿಸ್ತಾ ಇತ್ಯಾದಿಗಳು ಸೇರಿರುತ್ತವೆ. ಯಾವ ಸಿಹಿ ಅಡುಗೆಗೆ ಖರ್ಜೂರ ಹಾಕುತ್ತೇವೆ, ಅಂತಹ ಅಡುಗೆಯ ಸ್ವಾದ ಬೇರೆಯೇ ಇರುತ್ತದೆ. ಆದರೆ ಖರ್ಜೂರವನ್ನು ಕೇವಲ ಇಂತಹ ಸಂದರ್ಭಗಳಲ್ಲಿ ಮಾತ್ರ ತಿನ್ನುವುದಲ್ಲ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಹಲವು…
ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬಿಸ್ಕೆಟ್ ಕಾರ್ಖಾನೆಯೊಂದರಲ್ಲಿ ಯಂತ್ರದ ಬೆಲ್ಟ್‌ಗೆ ಸಿಲುಕಿ ಮೂರು ವರ್ಷದ ಗಂಡು ಮಗು ಸಾವನ್ನಪ್ಪಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ. ಥಾಣೆ ಜಿಲ್ಲೆಯ ಅಂಬರನಾಥದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಯುಷ್ ಚೌಹಾಣ್ ಮೃತಪಟ್ಟ ಮಗು. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಮಗು ಆಯುಷ್ ಚೌಹಾಣ್ ತನ್ನ ತಾಯಿಯೊಂದಿಗೆ ಬಿಸ್ಕೆಟ್ ಫ್ಯಾಕ್ಟರಿಗೆ ಹೋಗಿದ್ದನು. ಈ ವೇಳೆ ಮಗುವನ್ನು ಒಂದು ಕಡೆ ಕೂರಿಸಿ, ಮಗುವಿನ ತಾಯಿ ತನ್ನ ಪತಿಗೆ ಉಪಾಹಾರ ಕೊಟ್ಟುಬರಲು ತೆರಳಿದ್ದರು. ಈ ವೇಳೆ ಯಂತ್ರದಲ್ಲಿದ್ದ ರಾಶಿ ರಾಶಿ ಬಿಸ್ಕೆಟ್ ನೋಡಿದೆ. ಒಂದೇ ಒಂದು ಬಿಸ್ಕೆಟ್ ತೆಗೆದುಕೊಳ್ಳಲು ಕೈಹಾಕಿದೆ. ಆದ್ರೆ ಬೆಲ್ಟ್‌ಗೆ ಕೈ ಸಿಕ್ಕಿಕೊಂಡಿದೆ. ಕೂಡಲೇ ಕಾರ್ಖಾನೆ ಸಿಬ್ಬಂದಿ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತು. ಎಂದು ಅಂಬರನಾಥ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹೈದ್ರಾಬಾದ್: ಆಂಧ್ರಪ್ರದೇಶ, ತೆಲಂಗಾಣದಲ್ಲಿ ವರುಣನ ಆರ್ಭಟ ಮುಗಿಲು ಮುಟ್ಟಿದ್ದು, ರಣಭೀಕರ ಮಳೆಗೆ ಎರಡು ರಾಜ್ಯಗಳಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹದ ಪರಿಸ್ಥಿತಿಗೆ ಜನಜೀವನ ಅಸ್ತವ್ಯಸ್ತವಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿರುವ ಜನರಿಗೆ ಡ್ರೋನ್‌ಗಳಲ್ಲಿ ಆಹಾರ ಸಾಮಾಗ್ರಿಗಳನ್ನು ಪೂರೈಸಲಾಗುತ್ತಿದೆ.ಇನ್ನೂ ತೆಲುಗು ಚಿತ್ರರಂಗ ಸಹ ಎರಡೂ ರಾಜ್ಯಗಳ ಸರ್ಕಾರಗಳ ನೆರವಿಗೆ ನಿಂತಿದೆ. ಅದರಲ್ಲೂ ಕೆಲ ಸ್ಟಾರ್ ನಟರುಗಳು ದೊಡ್ಡ ಮೊತ್ತವನ್ನು ಪರಿಹಾರ ಕಾರ್ಯಗಳಿಗಾಗಿ ನೀಡಿದ್ದಾರೆ. ಇದೀಗ ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್ ಎಂದೇ ಕರೆಸಿಕೊಳ್ಳುವ ಪ್ರಭಾಸ್ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಬರೋಬ್ಬರಿ 5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ತೆಲಂಗಾಣ ಸಿಎಂ ಪರಿಹಾರ ನಿಧಿಗೆ 2.50 ಕೋಟಿ ಹಾಗೂ ಆಂಧ್ರ ಪ್ರದೇಶ ಸಿಎಂ ರಿಲೀಫ್ ಫಂಡ್ಗೆ 2.50 ಕೋಟಿ ರೂಪಾಯಿಗಳಂತೆ ಬರೋಬ್ಬರಿ 5 ಕೋಟಿ ರೂಪಾಯಿಗಳನ್ನು ಪ್ರಭಾಸ್ ದೇಣಿಗೆಯಾಗಿ ನೀಡಿದ್ದಾರೆ. ಈ ಹಿಂದೆ ಕೇರಳದಲ್ಲಿ ಭಾರಿ ಪ್ರವಾಹ ಉಂಟಾದಾಗ ನಟ ಪ್ರಭಾಸ್ ಒಂದು ಕೋಟಿ ರೂಪಾಯಿ ಹಣವನ್ನು ದೇಣಿಗೆ ನೀಡಿದ್ದರು. ಈಗ ತಮ್ಮ…
ಮುಂಬೈ: ಸಂಗಾತಿ ತನ್ನ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧನದಿಂದ ಪಾರಾಗಲು ವ್ಯಕ್ತಿಯೊಬ್ಬ ಲಿವ್-ಇನ್ ರಿಲೇಷನ್‌ಶಿಪ್ ಒಪ್ಪಂದ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಘಟನೆ ನಡೆದಿದೆ. ಮುಂಬೈನಲ್ಲಿ 46 ವಯಸ್ಸಿನ ವ್ಯಕ್ತಿ ವಿರುದ್ಧ 29ರ ಆತನ ಸಂಗಾತಿ ಅತ್ಯಾಚಾರ ಆರೋಪ ಮಾಡಿ ದೂರು ನೀಡಿದ್ದಳು. ಪ್ರಕರಣದಲ್ಲಿ ಬಂಧನದಿಂದ ಪಾರಾಗಲು ಆರೋಪಿ, ತಮ್ಮಿಬ್ಬರ ನಡುವಿನ ಲಿವ್-ಇನ್ ಸಂಬಂಧದ ಒಪ್ಪಂದ ಪತ್ರವನ್ನು ಕೋರ್ಟ್‌ಗೆ ಸಲ್ಲಿಸಿದ್ದ. ಇದನ್ನು ಪರಿಗಣಿಸಿದ ನ್ಯಾಯಾಲಯ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದೆ. ಆದರೆ ಈ ದಾಖಲೆಯಲ್ಲಿರುವ ಸಹಿ ನನ್ನದಲ್ಲ ಎಂದು ಮಹಿಳೆ ಕೋರ್ಟ್‌ಗೆ ತಿಳಿಸಿದ್ದಾಳೆ. ಮಹಿಳೆ ವಯಸ್ಸಾದವರ ಆರೈಕೆ ಮಾಡುವವರಾಗಿ ಕೆಲಸ ಮಾಡುತ್ತಿದ್ದಳು. ಆರೋಪಿ ಸರ್ಕಾರಿ ನೌಕರ. ಇದೀಗ, ಇವರಿಬ್ಬರ ಲಿವ್-ಇನ್ ಸಂಬಂಧದ ಒಪ್ಪಂದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನನ್ನ ಸಂಗಾತಿ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಒಟ್ಟಿಗೆ ವಾಸಿಸುತ್ತಿದ್ದ ಸಮಯದಲ್ಲಿ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಆರೋಪಿ ಪರ ವಾದ ಮಂಡಿಸಿದ ವಕೀಲರು ಇದನ್ನು…
ಶಿವಮೊಗ್ಗ : ಮಕ್ಕಳಿಗೆ ಆಟವಾಡಲು ವಸ್ತುಗಳನ್ನು ಕೊಡುವಾಗ ಪೋಷಕರು ಎಷ್ಟೇ ಜಾಗೃತೆ ವಹಿಸಿದರೂ ಕಡಿಮೆಯೇ. ಯಾಕಂದ್ರೆ ಮಕ್ಕಳಿಗೆ ಇನ್ನೂ ತಿಳಿಯುವ ವಯಸ್ಸು ಆಗಿರುವುದಿಲ್ಲ. ಅದೇ ರೀತಿ. ಒಂದೂವರೆ ವರ್ಷದ ಮಗುವೊಂದು ಬಾಟೆಲ್ ಮುಚ್ಚಳ ನುಂಗಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಘಟನೆ ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದಲ್ಲಿ ನಡೆದಿದೆ. ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಪುತ್ರ ನಂದೀಶ್(1.5) ಮೃತಪಟ್ಟ ಮಗುವಾಗಿದ್ದು,ಮನೆಯಲ್ಲಿ ಆಟವಾಡುವ ವೇಳೆ ಬಾಟಲಿಯ ಮುಚ್ಚಳ ನುಂಗಿ ಮಗು ಸಾವನ್ನಪ್ಪಿದೆ. ಮನೆಯಲ್ಲಿ ಜ್ಯೂಸ್ ಬಾಟಲಿ ಹಿಡಿದುಕೊಂಡು ನಂದೀಶ್ ಆಟವಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ನುಂಗಿದ ಮುಚ್ಚಳ ಗಂಟಲಲ್ಲಿ ಸಿಲುಕಿದೆ. ನಂತರ ಮುಗುವಿನ ಉಸಿರಾಟದಲ್ಲಿ ಏರುಪೇರಾಗಿದೆ. ತಕ್ಷಣವೇ ಕುಟುಂಬದವರು ವಾಹನವೊಂದರಲ್ಲಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗದೆ ಮಗು ಸಾವನ್ನಪ್ಪಿದೆ.