Author: Prajatv Kannada

ಪ್ರಜಾಪ್ರಭುತ್ವದ ಮತದಾನೋತ್ಸವ ದಿನವಾದ ಮೇ 10 ರಂದು ಎಲ್ಲಾ ಯುವ ಮತದಾರರು ತಪ್ಪದೆ ಮತದಾನ ಮಾಡಲು ಮಾನ್ಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್(Tushar Giri Nath) ರವರು ಎಲ್ಲಾ ವಿದ್ಯಾರ್ಥಿಗಳಲ್ಲಿ ಕೋರಿದರು. ಸಾರ್ವತ್ರಿಕ ವಿಧಾನಸಭೆ ಚುನಾವಣೆಯ(Karnataka Election) ಹಿನ್ನೆಲೆಯಲ್ಲಿ ದಕ್ಷಿಣ ವಲಯದ ಜಯನಗರ 4ನೇ ಬ್ಲಾಕ್ ನಲ್ಲಿರುವ ವಿಜಯ ಕಾಲೇಜಿನಲ್ಲಿ ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮೊದಲನೇ ಬಾರಿ ಮತ ಚಲಾಯಿಸುವವರಲ್ಲಿ ಮತದಾನ ಮಾಡಬೇಕೆಂಬ ಉತ್ಸಾಹ ಸಾಕಷ್ಟಿರಲಿದ್ದು, ತಾವು ಮತದಾನ‌ ಮಾಡುವ ಜೊತೆಗೆ ಬೇರೆಯವರಿಂದಲೂ ಮತದಾನ‌ ಮಾಡಿಸಬೇಕೆಂದು ತಿಳಿಸಿದರು. ಯಾರ‍್ಯಾರು ಮೊದಲನೇ ಬಾರಿ ಮತದಾನ ಮಾಡುತ್ತಿದ್ದೀರಾ ಅವರೆಲ್ಲರೂ ರಾಯಭಾರಿಗಳಾಗಿ ತಮ್ಮ ಮನೆಯವರಿಗೆ ಮಾತ್ರವಲ್ಲದೆ ಅಕ್ಕ-ಪಕ್ಕದ ಮನೆಯವರಿಗೆ ತಪ್ಪದೆ ಮತದಾನದ‌ ಮಾಡಲು ಅರಿವು ಮೂಡಿಸಲು ವಿದ್ಯಾರ್ಥಿಗಳಲ್ಲಿ ಕೋರಿದರು. ಬೆಂಗಳೂರು ನಗರದಲ್ಲಿ ಶೇ. 52 ರಷ್ಟು ಮಾತ್ರ ಮತದಾನವಾಗುತ್ತಿದ್ದು, ಅದನ್ನು ಶೇ. 75ಕ್ಕೆ ಹೆಚ್ಚಿಸಲು ಭಾರತ ಚುನಾವಣಾ…

Read More

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದ (Bannerghatta Biological Park) ಮೃಗಾಲಯ ಕುಟುಂಬಕ್ಕೆ ಇಂದು ಹೊಸ ಅಥಿತಿ ಆಗಮನವಾಗಿದೆ. ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ 21 ಏಪ್ರಿಲ್ 2023 ರಂದು ಅರಿಗ್ನಾರ್ ಅಣ್ಣಾ ಜಿಯೋಲಾಜಿಕಲ್ ಪಾರ್ಕ್‌, ವಂಡಲೂರ್‌, ಚೆನ್ನೈ ಇಂದ ರಾಯಲ್ ಬಂಗಾಳ ಬಿಳಿಯ ಗಂಡು ಹುಲಿಯನ್ನು ತರಲಾಗಿದೆ. Video Player 00:00 00:05 ಬನ್ನೇರುಘಟ್ಟ ಪಾರ್ಕ್ ನಲ್ಲಿ(Bannerghatta Biological Park) 2020 ರಲ್ಲಿ ಸನಾ ಮತ್ತು ಶಂಕರ್ ಸಿಂಹಗಳಿಗೆ ಜನಿಸಿದ ಗಂಡು ಸಿಂಹ ಶೇರ್-ಯಾರ್ ಅನ್ನು ತಮಿಳುನಾಡಿನ ವಂಡಲೂರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು.ಈಗ ವಂಡಲೂರು ಮೃಗಾಲಯದ ಭೀಷ್ಮಾ ಮತ್ತು ಮೀನಾಗೆ ಜನಿಸಿರುವ ಸುಮಾರು 3 ವರ್ಷ ವಯಸ್ಸಿನ ಈ ಬಿಳಿ ಹುಲಿಯನ್ನು ಬನ್ನೇರುಘಟ್ಟ ನ್ಯಾಷನಲ್ ಪಾರ್ಕಿಗೆ ತರಲಾಗಿದೆ.ಹುಲಿಯು ಬೆಂಗಳೂರಿನ ಹವಾಮಾನಕ್ಕೆ ಹೊಂದಿಕೊಳ್ಳಲು ಕೆಲವು ದಿನಗಳವರೆಗೆ ಕ್ವಾರಂಟೈನ್ ಪ್ರದೇಶದಲ್ಲಿ ಇರಿಸಲಾಗಿದೆ. ಜೊತಗೆ ಹೂಸ‌ ಸದಸ್ಯ ನನ್ನು ಡಾಕ್ಟರ್ ಗಳ ತಂಡ ನಿರಂತರ ವೀಕ್ಷಣೆಯಲ್ಲಿರಿಸಿದ್ದಾರೆ.

Read More

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಲಿಂಗಾಯತ ಸಿಎಂಗಳ ಬಗ್ಗೆ ನೀಡಿದ ಹೇಳಿಕೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,ಸಿದ್ದರಾಮಯ್ಯ ಅವರು ಬಹಳ ಸ್ಪಷ್ಟವಾಗಿ ತಮ್ಮ ಹೇಳಿಕೆ ನೀಡಿದ್ದು, ಲಿಂಗಾಯತ ಸಮುದಾಯದಿಂದ ಬಂದು ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಉತ್ತಮ ಕೊಡುಗೆಗಳನ್ನು ನೀಡಿರುವವರ ಬಗ್ಗೆ ನನಗೆ ಬಹಳ ಗೌರವವಿದೆ. ವೀರೇಂದ್ರ ಪಾಟೀಲ್, ಜೆ.ಹೆಚ್ ಪಟೇಲ್, ನಿಜಲಿಂಗಪ್ಪ ಅವರು ಲಿಂಗಾಯತ ಸಮುದಾಯದಿಂದ ಬಂದು ರಾಜ್ಯದ ಮುಖ್ಯಮಂತ್ರಿಗಳಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಆದರೆ ದುರಾದೃಷ್ಟವಶಾತ್, ಬಸವರಾಜ ಬೊಮ್ಮಾಯಿ ಅವರು ಅವರದೇ ಪಕ್ಷ ಶಾಸಕ ನೆಹರೂ ಓಲೇಕರ್ ಅವರ ಪ್ರಕಾರ 40% ಕಮಿಷನ್ ಏಜೆಂಟ್ ಆಗಿದ್ದಾರೆ. ಈ ಆರೋಪ ನಾವು ಮಾಡಿಲ್ಲ. ನೆಹರೂ ಓಲೇಕರ್ ಹೇಳಿರುವುದನ್ನು ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ, ಅದರಲ್ಲಿ ತಪ್ಪೇನಿದೆ? ಎಂದು ಸುರ್ಜೇವಾಲ ಅವರಿ ಸಿದ್ದರಾಮಯ್ಯರಿಗೆ ಬೆಂಬಲ ಸೂಚಿಸಿದ್ದಾರೆ.  ಬೊಮ್ಮಾಯಿ ಅವರು ತಾವೊಬ್ಬರೆ ಇಡೀ ಲಿಂಗಾಯತ ಸಮಾಜದ ಪ್ರತೀಕ ಎಂಬ…

Read More

ದೊಡ್ಡಬಳ್ಳಾಪುರ : ರಾಜ್ಯ ಬಿಜೆಪಿ ಪಕ್ಷ ಒಳ ಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ತಿಳಿಸಿದರು. ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂವಿಧಾನ ಬದ್ದವಾದ ಮೀಸಲಾತಿ 15 % ಮಾತ್ರ, ಈ ಮೀಸಲಾಯನ್ನು 17 % ಕ್ಕೆ ಏರಿಸುವ ಯಾವುದೇ ಪ್ರಸ್ಥಾಪ ಕ್ಯಾಬಿನೆಟ್ ಅಥವ ಅಸೆಂಬ್ಲಿಯಲ್ಲಾಗಲಿ ಚರ್ಚೆಯಾಗಿಲ್ಲ, ಇದೆಲ್ಲ ಕೇಲವ ಬಿಜೆಪಿಯವರ ರಾಜಕೀಯ ಗಿಮಿಕ್, ಚುನಾವಣೆಯಲ್ಲಿ ಜನರ ಕಣ್ಣೊರೆಸುವ ತಂತ್ರವನ್ನು ಅನುಸರಿಸುತ್ತಿದೆ, ಪಾರ್ಪಿಮೆಂಟ್ ನಲ್ಲಿ ಈ ಕುರಿತು ಪ್ರಸ್ತಾಪ ಮಾಡಿ ಜಾರಿ ಮಾಡಬಹುದಾಗಿತ್ತೂ ಆದರೆ ಮಾಡಿಲ್ಲ, ಮಾಡುವ ಮನಸ್ಥಿತಿಯೂ ಅವರಿಗಿಲ್ಲ ಎಂದು ಕಿಡಿಕಾರಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೂಲಂಕುಷವಾಗಿ ಯಾರಿಗೆ ಎಷ್ಟು ಮೀಸಲು ಸಿಗಬೇಕು ಎಂಬುದನ್ನು ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು. ಇಡೀ ರಾಜ್ಯವನ್ನು ನಾವು ಈಗಾಗಲೇ ಸುತ್ತಿ‌ಬಂದಿದ್ದೇವೆ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು…

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಮಂಗಳವಾರ ಪೇಟೆಯ ಮಧ್ಯಭಾಗದಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಆವರಣವು ಕಳತನವಾದ ಘಟನೆ ನಡೆದಿದೆ. ಕಳತನ ಮಾಡಿದ ಆರೋಪಿ ಆಸಂಗಿ ಮೂಲದ ಜ್ಯೋತಿಬಾ ಕಲ್ಲಪ್ಪ ಸಾಲ್ಗಡೆ ಇದು ಶುಭ ಸೋಮವಾರ ಭಕ್ತರು ವಿಶೇಷ ಪೂಜೆ ಮಾಡಿರುವುದರಿಂದ ಕಂಡು ಸುಮಾರು 12 ಗಂಟೆಗೆ ದೇವಸ್ಥಾನದಲ್ಲಿ ಯಾರು ಇಲ್ಲದನ್ನು ಕಂಡು ದೇವಸ್ಥಾನದ ಒಳಗೆ ಹೋಗಿ. ದೇವಿಯ ನಮಸ್ಕಾರ ಮಾಡುವ ನೆಪದಲ್ಲಿ ದೇವಿಯ ಮೇಲಿರುವ ಬೋರಮಾಳ ಸರಾ ಆವರಣವನ್ನು ಕಳತನ ಮಾಡಿ ಗಾಬರಿಗೊಂಡು ಒಡಿಹೋಗುವುದನ್ನು ಕಂಡು ಅರ್ಚಕನಿಗೆ ಅನುಮಾನ ಬಂದು ದೇವಸ್ಥಾನದ ಒಳಗೆ ದೇವಿಯ ಮೇಲಿನ ಆಭರಣ ಇಲ್ಲದನ್ನು ಕಂಡ ಅರ್ಚಕ ಕೋಗಾಡಿ ಜನರು ಸೇರಿಸಿದರು. ಕಳನನ್ನ ಹಿಡಿಯಲು ಹೋದ ಆದರೆ ಆತನ್ನು (ಸರಾಯಿ ಅಂಗಡಿ) ಬಾರನಲ್ಲಿ ಕುತ್ತಿದ ಕಳ್ಳನನ್ನ ಹಿಡಿದು ತಂದು ಆವರಣವನ್ನು ಅರ್ಚಕ ಮರಳಿ ಪಡೆದದ್ದು ದೇವಸ್ಥಾನದ ಮುಂಭಾಗದಲ್ಲಿ  ವಿದ್ಯುತ್ ಕಂಬಕ್ಕೆ ಕಟ್ಟಿ ಭಕ್ತರು ಕಳನಿಗೆ ಹಿಗ್ಗಾ- ಮುಗ್ಗಾ ತಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕಾಶ…

Read More

ತುಮಕೂರು: ಸಂಸತ್ತಿನಲ್ಲಿ ಕಣ್ಣೀರು ಹಾಕಿಸಿದ ನಾಯಕನಿಗೆ ಕಣ್ಣೀರು ತರಿಸಿದರಷ್ಟೇ ತನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ (HD Deve Gowda) ಹೇಳಿದರು. ಜಿಲ್ಲೆಯ ಮಧುಗಿರಿಯಲ್ಲಿ ಮಾತನಾಡಿದ ಅವರು, ನಾನಿ ಹಿಂದೆಯದ್ದನ್ನ ಮೆಲುಕು ಹಾಕಿ ನೋಡಲೂ ಹೋಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದುಕೊಂಡಿರಲಿಲ್ಲ. ಚುನಾವಣಾ ರಾಜಕೀಯ ಸಾಕಾಗಿದೆ ಅಂತಾ ಹಿಂದೆಯೇ ಹೇಳಿದ್ದೆ. ತುಮಕೂರಿನ ಕೆಲವು ಮುಖಂಡರು ನನ್ನನ್ನು ಬಲಿಪಶು ಮಾಡಿದ್ರು ಅಂತಾ ಹೇಳಲ್ಲ. ಅವರ ಹೆಸರು ಕೂಡ ಹೇಳೋಕೆ ಹೋಗಲ್ಲ. ಆದರೆ ಸಂಸತ್ತಿನಲ್ಲಿ ನಿಂತು ಕಣ್ಣೀರು ಹಾಕುವ ಕೆಟ್ಟ ಸಂದರ್ಭ ತಂದರು. ಆ ನಾಯಕನ ಕಣ್ಣಲ್ಲಿ ನೀರು ತರಿಸಬೇಕು, ಆಗ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು. ನನ್ನನ್ನು ಮುಖ್ಯಮಂತ್ರಿ ಮಾಡಲು 11 ಸ್ಥಾನಗಳನ್ನು ತುಮಕೂರು ಕೊಟ್ಟಿತ್ತು. ಈಗ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ಯಾವ ದೇವೇಗೌಡ ಪಾರ್ಲಿಮೆಂಟ್ನಲ್ಲಿ ನಿಂತು ಕಣ್ಣೀರು ಹಾಕುವ ಕೆಟ್ಟ ಸಂದರ್ಭ ತಂದರೋ ಆ ನಾಯಕನ ಕಣ್ಣಲಿ ನೀರು ಬರಿಸಬೇಕು. ಅವತ್ತು ನನ್ನ…

Read More

ದಾವಣಗೆರೆ: ಚುನಾವಣೆ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಪೂಜೆ ಮಾಡಲಿ, ನಾವೂ ಪೂಜೆ ಮಾಡುತ್ತೇವೆ. ಕೊನೆಗೆ ದೇವರು ಯಾರಿಗೆ ಆಶೀರ್ವಾದ ಮಾಡುತ್ತಾನೆ ನೋಡೋಣ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ದಾವಣಗೆರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಡಿ ಕೆ ಶಿವಕುಮಾರ್ ಅವರ ಪೂಜೆ ಅವರು ಮಾಡಲಿ, ದೇವರು ಯಾರಿಗೆ ಆಶೀರ್ವಾದ ಮಾಡುತ್ತಾನೆ ಎಂಬುದು ಮೇ.13 ರಂದು ಗೊತ್ತಾಗಲಿದೆ. ಡಿ ಕೆ ಶಿವಕುಮಾರ್ ಅವರೇ ಭಾವನೆಗಳ ಜೊತೆಗೆ ಆಟವಾಡುತ್ತಾರೆ. ಲಿಂಗಾಯತ ಡ್ಯಾಂ ಹಾಗೂ ಲಿಂಗಾಯತ ಸರೋವರ ಇವೆಲ್ಲ ಭಾವನೆಗಳು. ಹೀಗಾಗಿ, ಡಿ ಕೆ ಹೇಳುವುದೊಂದು ಮಾಡುವುದು ಇನ್ನೊಂದು. ಅವರ ಮಾತನ್ನ ಸಿರಿಯಸ್ಸಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು. ಇನ್ನು, ಎಐಸಿಸಿ ನಾಯಕ ರಾಹುಲ್ ಗಾಂಧಿ ಲಿಂಗಾಯತ ಮಠಕ್ಕೆ ಹೋಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ, ಅವರು ತೋರಿಕೆಗಾಗಿ ಲಿಂಗಾಯತ ಮಠಕ್ಕೆ ಹೋಗುತ್ತಿದ್ದಾರಲ್ಲ ಅದಕ್ಕೆ ಧನ್ಯವಾದಗಳು ಎಂದಿದ್ದಾರೆ. ಹಿಂದೆ ಸಿಎಂ ಆಗಬೇಕು ಎಂದು ನಾನು ಅಂದುಕೊಂಡರಲಿಲ್ಲ‌. ಹೈಕಮಾಂಡ್ ತೀರ್ಮಾನ…

Read More

ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ಸಿದ್ಧಾಂತ ಬಿಟ್ಟು ಮದ್ದೂರು, ಚಿತ್ರದುರ್ಗದಲ್ಲಿ ಕ್ಯಾಸಿನೊ, ಇಸ್ಟೀಟ್ ಆಡಿಸುವವರಿಗೆ ಟಿಕೆಟ್ ನೀಡಿದ್ದು, ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರೆಂದ್ರ ಪಪ್ಪಿ ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಹೇಳಿದ್ದಾರೆ. ನಗರದಲ್ಲಿನ ತಮ್ಮ ನಿವಾಸದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಉತ್ತಮ ವಿದ್ಯಾಭ್ಯಾಸ ಬೇಕಿದೆ. ಆದರೆ ನಗರದ ಮಲ್ಲಾಪುರ ಕೆರೆಯಲ್ಲಿ ಕ್ಯಾಸಿನೊ ಪ್ರಾರಂಭಿಸುತ್ತೆವೆ ಎಂದು ಹೇಳಲಾಗುತ್ತಿದ್ದು, 17ವರ್ಷದ ಯುವಕರು ಕ್ಯಾಸಿನೊಗೆ ಹೋದರೆ ಗತಿಯೇನು ? ಕ್ಷೇತ್ರದ ಮತದಾರರು ಇಸ್ಪೀಟ್ ಕ್ಲಬ್ ಬೇಕೋ, ಎಜುಕೇಶನ್ ಬೇಕೋ ಎಂಬುದನ್ನು ತೀರ್ಮಾನಿಸುತ್ತಾರೆ ಎಂದು ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವಿರೇಂದ್ರ ಪಪ್ಪಿಗೆ ಟಾಂಗ್ ನೀಡಿದರು. ನಿನ್ನೆ ದಿನ ಕಾರು ಅಡ್ಡಗಟ್ಟಿ ಗಲಾಟೆ ಪ್ರಕರಣ ಸಂಬಂಧ ಮಾತನಾಡಿದ ರಘು ಆಚಾರ್, ನಾಲ್ಕು ಜನ ಪುಂಡ ಹೈಕಳು ಕಟ್ಟಿಕೊಂಡು ಗಲಾಟೆ ಮಾಡಿದರೆ ನಾನು ಹೆದರುವವನು ಅಲ್ಲ. ನಾವು ಗಲಾಟೆ ಶುರು ಮಾಡಿದರೆ ನೀವು ಹಳ್ಳಿಗೆ ಹೋಗಲು ಸಾಧ್ಯವಾಗಲ್ಲ. ಗಲಾಟೆನೇ ಮಾಡ್ತೀವಿ ಅಂದರೆ ನಾನು ಗಲಾಟೆ…

Read More

ರಾಮನಗರ: ರಾಜ್ಯದ ಸುಸಜ್ಜಿತ ಹೆದ್ದಾರಿ ಎಂದು ಹೇಳುವ ಬೆಂಗಳೂರು-ಮ್ಯಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಕನಿಷ್ಠ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ. ಪರಿಣಾಮ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಾಗಿದೆ. ನೂತನ ಬೆಂಗಳೂರು-ಮೈಸೂರು ಹೆದ್ದಾರಿ ಪ್ರಯಾಣಕ್ಕೆ ಮುಕ್ತವಾದ ಬಳಿಕ ಅಪಘಾತಗಳು ಹೆಚ್ಚಾಗಿವೆ. ಮೊದಲ ಹಂತದ ಹೆದ್ದಾರಿ ಉದ್ಘಾಟನೆಗೊಂಡು ಟೋಲ್‌ ಶುಲ್ಕ ಸಂಗ್ರಹಿಸಲು ಆರಂಭಿಸಿದೆಯಾದರೂ, ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಪ್ರಯಾಣಿಕರಿಗೆ ದೊರೆಯ ಬೇಕಾದ ಕನಿಷ್ಠ ಸುರಕ್ಷತಾ ಸೌಲಭ್ಯಗಳು ಇಲ್ಲ ಎಂಬ ಸಂಗತಿ ಏಪ್ರಿಲ್‌ 22 ರಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಸಮಯದಲ್ಲಿ ನಡೆದ ಪ್ರಸಂಗಗಳಿಂದ ಅನಾವರಣ ಗೊಂಡಿದೆ. ಆಂಬ್ಯುಲೆನ್ಸ್‌ ವ್ಯವಸ್ಥೆ ಇಲ್ಲ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿದ ಸಮಯದಲ್ಲಿ ಗಾಯಾಳುಗಳಿಗೆ ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ದೊರೆಯಬೇಕಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ತುರ್ತು ಆಂಬ್ಯುಲೆನ್ಸ್‌ ಸೇವೆ ಅತ್ಯಗತ್ಯ. ಆದರೆ, ಮೊದಲ ಹಂತದ 60 ಕಿಮೀ ನಷ್ಟು ರಸ್ತೆಯಲ್ಲಿ ಬಿಡದಿ ಟೋಲ್‌ ಬಳಿ ಮಾತ್ರ ಒಂದು ಆಂಬ್ಯುಲೆನ್ಸ್‌ ಇದ್ದು, ಹೈವೇನಲ್ಲಿ ಎಲ್ಲೇ ಅಪಘಾತ ಸಂಭವಿಸಿದರೂ ಅಲ್ಲಿಂದಲೇ ವಾಹನ ಬರಬೇಕಿದೆ. ಹೆದ್ದಾರಿ ಮಧ್ಯದಲ್ಲಿ…

Read More

ಹುಬ್ಬಳ್ಳಿ: ಬಿ.ಎಲ್ ಸಂತೋಷ್‌ (BL Santhosh) ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅವರು ತಮ್ಮ ಕುಟುಂಬ, ಸಂಸಾರ ತ್ಯಾಗ ಮಾಡಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಈಗಾಗಲೇ ಕಿತ್ತೂರು ಭಾಗದಲ್ಲಿ ಒಂದು ಮೋದಿ ಕಾರ್ಯಕ್ರಮ ನಿಗದಿಯಾಗಿದೆ. ಮೋದಿ ಕಾರ್ಯಕ್ರಮ ಇನ್ನೂ ಎರಡು, ಮೂರು ಜಾಸ್ತಿ ಮಾಡುವಂತೆ ಮನವಿ ಮಾಡಿದ್ದೇವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವ ರಾಜನಾಥ್ ಸಿಂಗ್ ಸಹ ಬರಲಿದ್ದಾರೆ ಎಂದರು. ಅಮಿತ್ ಶಾ ಇಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಗೆ ಬರಲಿದ್ದಾರೆ. ನಮ್ಮ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಮತ್ತು ಇತರೆ ಪ್ರಮುಖ ನಾಯಕರ ಜೊತೆಗೆ ಸಭೆಯಿದೆ. ಗದಗ, ಧಾರವಾಡ, ಹಾವೇರಿ ಜಿಲ್ಲೆಯ ಪ್ರಮುಖರ ಸಭೆ ನಡೆಯಲಿದೆ. ಸದ್ಯದ ಚುನಾವಣಾ ಮಾಹಿತಿಯನ್ನು ಶಾ ಪಡೆಯಲಿದ್ದಾರೆ. ಬಳಿಕ ಸುದ್ದಿಗೊಷ್ಠಿ ನಡೆಸಲಿದ್ದಾರೆ ಎಂದು ತಿಳಿಸಿದರು

Read More